Tag: Bangladeshis

  • ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 10 ದಿನಗಳಷ್ಟೇ ಬಾಕಿಯಿದೆ. ಈ ಹಿನ್ನೆಲೆ ದೆಹಲಿಯಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಿದ್ದೂ ಕೆಂಪು ಕೋಟೆ (Red Fort) ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಬಾಂಗ್ಲಾದೇಶದ ಐವರು ಅಕ್ರಮ ವಲಸಿಗರನ್ನ ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಹೌದು. ಕೆಂಪು ಕೋಟೆಯ ಪ್ರವೇಶ ನಿಯಂತ್ರಣ ಬಿಂದುವಿನ ಬಳಿ ಆ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ತಂಡವು ಆರೋಪಿಗಳನ್ನು ವಿಚಾರಿಸಿ ಬಂಧಿಸಿದೆ. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ

    20 ರಿಂದ 25 ವರ್ಷ ವಯಸ್ಸಿನ ಇಬ್ಬರು ಆರೋಪಿಗಳು ನಿಯಮಿತ ತಪಾಸಣೆಯ ಸಮಯದಲ್ಲಿ ಸರಿಯಾದ ದಾಖಲೆಗಳನ್ನ ತೋರಿಸುವಲ್ಲಿ ವಿಫಲರಾಗಿದ್ದಾರೆ. ಹೆಚ್ಚಿನ ತಪಾಸಣೆ ನಡೆಸಿದಾಗ ಅವರು ಅಕ್ರಮವಾಗಿ ನೆಲೆಸಿರುವುದು ಕಂಡು ಬಂದಿದೆ. ಇದನ್ನೂ ಓದಿ: ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ಆಯುಕ್ತ (ಉತ್ತರ ಜಿಲ್ಲೆ) ರಾಜ ಬಂಥಿಯಾ, ಇವರೆಲ್ಲರೂ ಅಕ್ರಮ ವಲಸಿಗರಾಗಿದ್ದು, ಅಕ್ರಮವಾಗಿ ಕೆಂಪು ಕೋಟೆ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಹೀಗಾಗಿ ಐವರು ಬಾಂಗ್ಲಾದೇಶದ ಪ್ರಜೆಗಳನ್ನ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅವರು ಸುಮಾರು 3-4 ತಿಂಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೆಹಲಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಇದು ಪಾಪರ್‌ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್‌ ವಾಗ್ದಾಳಿ

  • ಗುಜರಾತ್‌ನಲ್ಲಿ ನೆಲೆಸಿದ್ದ 1,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಬಂಧನ

    ಗುಜರಾತ್‌ನಲ್ಲಿ ನೆಲೆಸಿದ್ದ 1,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಬಂಧನ

    ಅಹಮದಾಬಾದ್: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಇಡೀ ದೇಶಾದ್ಯಂತ ನೆಲೆಸಿರುವ ಪಾಕಿಸ್ತಾನಿಯರನ್ನ ವಾಪಸ್‌ ಕಳುಹಿಸುವ ಕಾರ್ಯಾಚರಣೆಯನ್ನು ಸರ್ಕಾರಗಳು ಚುರುಕುಗೊಳಿಸಿವೆ. ಈ ನಡುವೆ ವಿವಿಧ ದೇಶಗಳಿಂದ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು (Illegal Immigrants) ಪತ್ತೆಹಚ್ಚುವ ಕೆಲಸಕ್ಕೆ ಪೊಲೀಸ್‌ ಇಲಾಖೆ ಮುಂದಾಗಿದೆ.

    ಅದರಂತೆ ಅಹಮದಾಬಾದ್ (Ahmedabad) ಮತ್ತು ಸೂರತ್‌ನಲ್ಲಿ ನಡೆದ ಶೋಧ ಕಾರ್ಯಾಚರಣೆಯ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗರನ್ನು (Bangladeshis) ಬಂಧಿಸಲಾಗಿದೆ. ಗುಜರಾತ್ ಪೊಲೀಸರು (Gujarat Police) ಇಲ್ಲಿಯವರೆಗೆ ನಡೆಸಿದ ಅತಿದೊಡ್ಡ ಕಾರ್ಯಾಚರಣೆ ಇದಾಗಿದ್ದು, ಬಂಧಿತರನ್ನ ಶೀಘ್ರವೇ ಗಡೀಪಾರು ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘ್ವಿ ತಿಳಿಸಿದ್ದಾರೆ.

    ಅಹಮದಾಬಾದ್‌ನಲ್ಲಿ ಕನಿಷ್ಠ 890 ಮತ್ತು ಸೂರತ್‌ನಲ್ಲಿ 134 ಬಾಂಗ್ಲಾದೇಶಿಗರನ್ನ ಬಂಧಿಸಲಾಗಿದೆ. ಬಂಧಿತರು ಗುಜರಾತ್‌ಗೆ ಬರುವ ಮುನ್ನ ಭಾರತದ ವಿವಿಧ ಭಾಗಗಳಲ್ಲಿ ಉಳಿಯಲು ಪಶ್ಚಿಮ ಬಂಗಾಳದಿಂದ ಪಡೆದ ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಸಹ ಸಚಿವರು ಮಾಹಿತಿ ನೀಡಿದ್ದಾರೆ.

    ಗುಜರಾತ್‌ನಲ್ಲಿ ವಾಸಿಸುವ ಅಕ್ರಮ ವಲಸಿಗರು ಸ್ವಯಂಪ್ರೇರಿತವಾಗಿ ಪೊಲೀಸರ ಮುಂದೆ ಶರಣಾಗಬೇಕು, ಇಲ್ಲದಿದ್ದರೆ ಅವರನ್ನು ಬಂಧಿಸಿ ಗಡೀಪಾರು ಮಾಡಲಾಗುವುದು ಎಚ್ಚರಿಕೆ ಸಹ ನೀಡಿದ್ದಾರೆ.

  • ಬಿಬಿಎಂಪಿ ಅಧಿಕಾರಿಗಳ ಎಡವಟ್ಟು – ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‌ಗಳು ತೆರವು

    ಬಿಬಿಎಂಪಿ ಅಧಿಕಾರಿಗಳ ಎಡವಟ್ಟು – ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‌ಗಳು ತೆರವು

    ಬೆಂಗಳೂರು: ಪೌರತ್ವ ಕಾಯ್ದೆ ಜಾರಿಗೆ ಬಂದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶಿಯರನ್ನು ಹುಡುಕುವ ಕೆಲಸಕ್ಕೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಮುಂದಾಗಿದ್ದಾರೆ. ಬಾಂಗ್ಲಾದೇಶಿಯರು ನೆಲೆಸುರುವ ಗುಡಿಸಲುಗಳನ್ನು ಬಿಬಿಎಂಪಿ ತೆರವುಗೊಳಿಸುತ್ತಿದೆ. ಈ ತೆರವು ಕಾರ್ಯಾಚರಣೆಯ ಭರಾಟೆಯಲ್ಲಿ ದೇಶದ ನಾಗರಿಕರು ಹಾಗೂ ಉತ್ತರ ಕರ್ನಾಟಕದ ಜನರು ವಾಸವಿರುವ ಶೆಡ್‌ಗಳನ್ನು ಕೂಡ ತೆರವುಗೊಳಿಸಿ ಬಿಬಿಎಂಪಿ ಸಿಬ್ಬಂದಿ ಮಾಹಾ ಎಡವಟ್ಟು ಮಾಡಿದ್ದಾರೆ.

    ಬೆಂಗಳೂರಿನ ಮಹದೇವಪುರ ವ್ಯಾಪ್ತಿಯ ದೇವರಬೀಸನಹಳ್ಳಿ ಹಾಗೂ ಕರಿಯಮ್ಮನ ಅಗ್ರಹಾರದಲ್ಲಿನ ಮಂತ್ರಿ ಇಂಸ್ಟಂಟ್ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡಿರೋ ಕೃಷಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಹಲವಾರು ವರ್ಷಗಳಿಂದ ಇಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಶೆಡ್‌ಗಳಲ್ಲಿ ಉತ್ತರ ಭಾರತೀಯರು ಹಾಗೂ ಉತ್ತರ ಕರ್ನಾಟಕದ ಜನ ಕೂಲಿ ಮಾಡಿಕೊಂಡು ವಾಸವಿದ್ದಾರೆ. ಆದರೆ ಭಾನುವಾರ ಏಕಾಏಕಿ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ನೀವೆಲ್ಲಾ ಬಾಂಗ್ಲಾದೇಶಿಯರೆಂದು ಆರೋಪಿಸಿ, ಸುಮಾರು 80ಕ್ಕೂ ಹೆಚ್ಚು ಶೆಡ್‌ಗಳನ್ನ ತೆರವು ಮಾಡಿದ್ದಾರೆ. ತೆರವಿನ ವೇಳೆ ನಿವಾಸಿಗಳು ತಾವು ಭಾರತೀಯರು ಎಂದು ದಾಖಲೆಗಳನ್ನು ತೋರಿಸಿದರೂ ಅದನ್ನು ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು ಪರಿಶೀಲಿಸದೆ ಏಕಾಏಕಿ ಶೆಡ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.

    ಇಲ್ಲಿ ಮೊದಲು ಬಾಂಗ್ಲಾದೇಶಿಯರು ವಾಸಿಸುತ್ತಿದ್ದರು. ಆದರೆ ಹಲವು ದಿನಗಳ ಹಿಂದೆಯೇ ಅವರೆಲ್ಲಾ ಶೆಡ್‌ಗಳನ್ನು ಬಿಟ್ಟು ಹೊರಟು ಹೋಗಿದ್ದಾರೆ. ಇನ್ನು ಇಲ್ಲಿ ವಾಸಿಸುತ್ತಿರುವ ಬಹುತೇಕರು ಸ್ಥಳೀಯ ಅಪಾರ್ಟ್‌ಮೆಂಟ್‍ನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದು, ಒಂದು ಶೆಡ್‌ಗಳಗೆ ಜಮೀನಿನ ಮಾಲೀಕನಿಗೆ 3 ಸಾವಿರ ರೂ. ಬಾಡಿಗೆ ಕೊಟ್ಟು ವಾಸಿಸುತ್ತಿದ್ದರು.

    ಇದೀಗ ಏಕಾಏಕಿ ಶೆಡ್‌ಗಳನ್ನು ತೆರವುಗೊಳಿಸಲಾಗಿದ್ದು, ಬರುವ ಸಂಬಳದಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಸಿಗುತ್ತಿದ್ದ ಕಾರಣ ಬಹುತೇಕ ಉತ್ತರ ಭಾರತೀಯರು ಹಾಗೂ ರಾಜ್ಯದ ಕೊಪ್ಪಳ, ಬಿಜಾಪುರ ಸೇರಿದಂತೆ ಅನೇಕ ಉತ್ತರ ಕರ್ನಾಟಕದ ಜನ ಇಲ್ಲಿ ವಾಸವಾಗಿದ್ದರು. ಆದರೆ ಬಿಬಿಎಂಪಿ ಎಡವಟ್ಟಿನಿಂದ ಸುರು ಕಳೆದುಕೊಂಡು ಮುಂದೇನು ಜನರು ಕಂಗಾಲಾಗಿದ್ದಾರೆ.

    ಬಾಂಗ್ಲಾದೇಶಿಯರ ಶೆಡ್‌ಗಳ ತೆರವಿಗೆ ಬಂದ ಬಿಬಿಎಂಪಿ ಅಧಿಕಾರಿಗಳು ಭಾರತೀಯರ ಶೆಡ್‌ಗಳನ್ನು ತೆರವು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶೆಡ್‌ಗಳ ಪಕ್ಕದಲ್ಲೇ ಇರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‍ ಬಿಲ್ಡರ್ ಒತ್ತಡಕ್ಕೆ ಬಿಬಿಎಂಪಿ ಮಣಿದಿದ್ದಾರಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಉದ್ಭವವಾಗಿದೆ.

  • ಎನ್‌ಆರ್‌ಸಿ ಎಫೆಕ್ಟ್ – 2 ತಿಂಗ್ಳಲ್ಲಿ 445 ಬಾಂಗ್ಲಾದೇಶೀಯರು ಭಾರತದಿಂದ ಹೊರಕ್ಕೆ

    ಎನ್‌ಆರ್‌ಸಿ ಎಫೆಕ್ಟ್ – 2 ತಿಂಗ್ಳಲ್ಲಿ 445 ಬಾಂಗ್ಲಾದೇಶೀಯರು ಭಾರತದಿಂದ ಹೊರಕ್ಕೆ

    ಢಾಕಾ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಭಾರತದಲ್ಲಿ ಜಾರಿಯಾದ ಹಿನ್ನೆಲೆ ಕಳೆದ 2 ತಿಂಗಳಲ್ಲಿ ಸುಮಾರು 445 ಬಾಂಗ್ಲಾದೇಶೀಯರು ಭಾರತದಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ಬಾಂಗ್ಲಾದೇಶ್ ಪ್ಯಾರಾಮಿಲಿಟರಿ ಫೋರ್ಸ್ ಮುಖ್ಯಸ್ಥರು ತಿಳಿಸಿದ್ದಾರೆ.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ(ಬಿಜಿಬಿ) ನಿರ್ದೇಶಕ ಜನರಲ್ ಮೊಹಮದ್ ಶಫೀನುಲ್ ಇಸ್ಲಾಮ್ ಅವರು ಮಾತನಾಡಿ, ಕಳೆದ 2 ತಿಂಗಳಲ್ಲಿ ಭಾರತದಿಂದ ಸುಮಾರು 445 ಬಾಂಗ್ಲಾದೇಶೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಅಲ್ಲದೆ 2019ರಲ್ಲಿ ಭಾರತದಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ನುಸುಳಿದ ಆರೋಪದ ಮೇರೆಗೆ ಸುಮಾರು 1,000 ಮಂದಿ ನಿರಾಶ್ರಿತರನ್ನು ಬಂಧಿಸಲಾಗಿದೆ. ಅವರ ದಾಖಲೆಗಳನ್ನು ಪರಿಶೀಲಿಸಿದಾಗ 445 ಮಂದಿ ಬಾಂಗ್ಲಾದೇಶಿಯರು ಭಾರತದಿಂದ ವಾಪಸ್ ಬಂದಿದ್ದಾರೆ ಎನ್ನುವುದು ತಿಳಿದು ಬಂದಿದೆ. ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳಲ್ಲಿ 445 ಮಂದಿ ಬಾಂಗ್ಲಾದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ಹೇಳಿದರು.

    ಬಾಂಗ್ಲಾದೇಶಿಯರು ಸ್ವದೇಶಕ್ಕೆ ವಾಪಸ್ಸಾದ ಬಗ್ಗೆ ಮಾಹಿತಿ ನೀಡಿದ ಬಳಿಕ ಎನ್‌ಆರ್‌ಸಿ ಬಗ್ಗೆ ಮಾತನಾಡಿದ ಅವರು,ಎನ್‌ಆರ್‌ಸಿ ಭಾರತದ ಆಂತರಿಕ ವಿಚಾರ. ಭಾರತ ಹಾಗೂ ಬಾಂಗ್ಲಾದೇಶ ಎರಡು ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವಿದೆ. ಗಡಿಯಲ್ಲಿ ಬಿಜಿಬಿ ಸ್ಮಗ್ಲಿಂಗ್ ಮತ್ತು ಇತರೆ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಿದೆ ಎಂದರು.

    ಈ ಹಿಂದೆ ನಾನು ಭಾರತಕ್ಕೆ ಭೇಟಿ ಕೊಟ್ಟಾಗ ಭಾರತೀಯ ಗಡಿ ಭದ್ರತಾ ಪಡೆ ಮುಖ್ಯಸ್ಥರ ಜೊತೆ ಮಾತುಕತೆ ನಡೆದಿತ್ತು. ಈ ವೇಳೆ ಗಡಿಯಲ್ಲಿ ನಡೆಯುವ ಸ್ಮಗ್ಲಿಂಗ್ ಮತ್ತು ಇತರೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಚರ್ಚೆ ನಡೆದಿತ್ತು. ಅದನ್ನು ಬಿಟ್ಟು ಎನ್‌ಆರ್‌ಸಿ ಬಗ್ಗೆ ನಾವು ಚರ್ಚೆ ನಡೆಸಿರಲಿಲ್ಲ ಎಂದು ಇಸ್ಲಾಮ್ ಅವರು ತಿಳಿಸಿದರು.