Tag: Bangladeshi immigrants

  • ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 20ಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳ ಬಂಧನ

    ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 20ಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳ ಬಂಧನ

    ನವದೆಹಲಿ: ಅಕ್ರಮವಾಗಿ ನೆಲೆಸಿದ್ದ 20ಕ್ಕೂ ಹೆಚ್ಚು ಬಾಂಗ್ಲಾದೇಶಿ (Bangladesh) ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆಗ್ನೇಯ ಮತ್ತು ದಕ್ಷಿಣ ದೆಹಲಿ (Delhi)  ಜಿಲ್ಲೆಗಳಲ್ಲಿ ನಡೆಸಿದ ಸಂಘಟಿತ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.ಇದನ್ನೂ ಓದಿ: ಇರಾಕ್, ಬಾಂಗ್ಲಾದೇಶ ಸೈಕ್ಲೋನ್ ಎಫೆಕ್ಟ್ – ಭಾರತದ 18 ರಾಜ್ಯಗಳಿಗೆ ಮಳೆ ಅಲರ್ಟ್

    ಈ ಕುರಿತು ಉಪಪೊಲೀಸ್ ಆಯುಕ್ತ ಸಚಿನ್ ಶರ್ಮಾ ಮಾಹಿತಿ ನೀಡಿದ್ದು, ಬಂಧಿತ ವ್ಯಕ್ತಿಗಳು ಮಾನ್ಯ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ್ದರು ಮತ್ತು ಕಾನೂನುಬಾಹಿರವಾಗಿ ವಾಸಿಸುತ್ತಿದ್ದರು. ಕಾರ್ಯಾಚರಣೆಯ ಸಮಯದಲ್ಲಿ, ಅವರ ಬಳಿಯಿಂದ ಹಲವಾರು ಅನುಮಾನಾಸ್ಪದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ (ಮಾ.11) ಪೊಲೀಸರು ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ವಾಸಿಸುತ್ತಿದ್ದ ಮೂವರು ಅನಧಿಕೃತ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಗಡಿಪಾರು ಮಾಡಿದ ನಂತರ ಭಾರತಕ್ಕೆ ಅಕ್ರಮವಾಗಿ ಮತ್ತೆ ಪ್ರವೇಶಿಸಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದೆ ಎಂದು ಹೇಳಿದರು.

    ಅನಧಿಕೃತ ವಲಸೆಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಮತ್ತು ಭದ್ರತೆಯನ್ನು ಬಲಪಡಿಸಲು ಮಾ.10 ರಂದು ಪಿವಿಸಿ ಮಾರುಕಟ್ಟೆ ಮುಂಡ್ಕಾ, ಬಾಬಾ ಹರಿದಾಸ್ ಕಾಲೋನಿ, ಸುಲ್ತಾನ್ ಪುರಿ, ಬೆನಿವಾಲ್ ಲೋಹಾ ಮಂಡಿ, ಇಂದ್ರ ಜೀಲ್ ಮತ್ತು ಹನುಮಾನ್ ಮಂದಿರ ಕಮರುದ್ದೀನ್ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪೊಲೀಸ್ ತಂಡಗಳು ದಾಳಿ ನಡೆಸಿದವು ಎಂದು ಡಿಸಿಪಿ ತಿಳಿಸಿದ್ದಾರೆ.ಇದನ್ನೂ ಓದಿ: ದರ್ಶನ್‌, ಮದರ್‌ ಇಂಡಿಯಾ ನಡುವೆ ಬಿರುಕು?- ನಿಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆಯಿರಿ ಎಂದ ನಟಿ

     

  • ಅಕ್ರಮವಾಗಿ ವಲಸೆ ಬಂದ ಬಾಂಗ್ಲಾ ಪ್ರಜೆಗಳಿಗೂ ಸಿಗುತ್ತೆ ಆಧಾರ್ ಕಾರ್ಡ್, 2200 ರೂ. ಕೊಟ್ರೆ ಪಾಸ್‍ಪೋರ್ಟ್

    ಅಕ್ರಮವಾಗಿ ವಲಸೆ ಬಂದ ಬಾಂಗ್ಲಾ ಪ್ರಜೆಗಳಿಗೂ ಸಿಗುತ್ತೆ ಆಧಾರ್ ಕಾರ್ಡ್, 2200 ರೂ. ಕೊಟ್ರೆ ಪಾಸ್‍ಪೋರ್ಟ್

    ಬೆಳಗಾವಿ: ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಇವೆಲ್ಲ ನಮ್ಮ ಅಧಿಕೃತ ಗುರುತಿನ ದಾಖಲೆಗಳು. ನಾವು ಭಾರತೀಯರು ಅನ್ನೋದನ್ನು ಖಾತ್ರಿಪಡಿಸುವುದಕ್ಕೆ ಇರೋ ದಾಖಲೆಗಳು. ಆದ್ರೆ ಗಡಿ ನಾಡು ಬೆಳಗಾವಿಯಲ್ಲಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದಿರುವ ಮಂದಿಗೆಲ್ಲಾ ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಮಾಡಿಸಿಕೊಡುವ ದಂಧೆ ನಡೆಯುತ್ತಿದೆ.

    ಅದ್ರಲ್ಲೂ ಪಾಸ್‍ಪೋರ್ಟ್ ಪಡೆಯುವುದು ಇನ್ನೂ ಸುಲಭ. ಕೇವಲ 2200 ರೂಪಾಯಿ ಖರ್ಚು ಮಾಡಿದ್ರೆ ಸಾಕು ವಿದೇಶಿಯರಿಗೆ ನಮ್ಮ ದೇಶದ ಪಾಸ್ ಪೋರ್ಟ್ ಸಿಗುತ್ತೆ. ಇಂತಹದ್ದೊಂದು ದೊಡ್ಡ ದಂದೆ ಬೆಳಗಾವಿಯಲ್ಲಿ ತಲೆ ಎತ್ತಿದೆ. ಸ್ವತಃ ಪಾಸ್‍ಪೋರ್ಟ್ ಪಡೆದ ಬಾಂಗ್ಲಾದೇಶದ ಪ್ರಜೆಯೇ ಈ ಭಯಾನಕ ಸತ್ಯವನ್ನ ಬಾಯಿಬಿಟ್ಟಿದ್ದಾನೆ.

    ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರು ನಕಲಿ ಪಾಸ್‍ಪೋರ್ಟ್ ಮೂಲಕ ಪುಣೆಯ ಮಾರ್ಗವಾಗಿ ದುಬೈಗೆ ಹಾರಲು ಯತ್ನಿಸಿದ್ದ 11 ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದರು. ಅಂಜುಬೇಗಂ (37), ಹಫೀಜುಲ್ಲಾ ಇಸ್ಲಾಂ(20), ಅಕೀಬ (20), ಅನ್ನನ್ ಸದ್ದಾರ್ (21), ರೋಹನ್ ಸೆಕ್ (21), ಅಬ್ದುಲ್ ಹಾಯ್ ನಿಹಾರ ಅಲಿ ಗಾಜಿ (60), ಮೊಹಮ್ಮದ್ ಅಲಮಿನ್ ಶೌಪಿ ಉದ್ದಿನ್ ಬೇಪಾರಿ (26) ಸೇರಿದಂತೆ 11 ಆರೋಪಿಗಳನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ಮಾಹಿತಿ ಜಾಡು ಹಿಡಿದ ಬೆಳಗಾವಿ ಪೊಲೀಸರು, ನಗರದಲ್ಲಿ ನಡೆಯುತ್ತಿರುವ ನಕಲಿ ದಾಖಲಾತಿಯ ಮಾಫಿಯ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

    ಸ್ವತಃ ಹಬಿಬುಲ್ ಶೇಖ್ ಅನ್ನೋ ಬಾಂಗ್ಲಾದೇಶಿ ಪ್ರಜೆ ಅಕ್ರಮವಾಗಿ ಪಾಸ್‍ಪೋರ್ಟ್ ಪಡೆದು ಆರೇಳು ವರ್ಷಗಳಿಂದ ಬೆಳಗಾವಿಯಲ್ಲಿ ವಾಸಿಸುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣ ಸಂಪೂರ್ಣ ತನಿಖೆಯಾದರೆ ಇನ್ನಷ್ಟು ಜನ ಬಾಂಗ್ಲಾದೇಶದ ನುಸುಳುಕೊರರು ಬಂಧಿತರಾಗಲಿದ್ದಾರೆ.

    https://www.youtube.com/watch?v=x_uURstQ6uk