Tag: bangladesh

  • ಟೀಂ ಇಂಡಿಯಾವನ್ನು ನಾಯಿಗೆ ಹೋಲಿಸಿ ಕೆಣಕಿದ ಬಾಂಗ್ಲಾದ ಹುಚ್ಚು ಅಭಿಮಾನಿ

    ಟೀಂ ಇಂಡಿಯಾವನ್ನು ನಾಯಿಗೆ ಹೋಲಿಸಿ ಕೆಣಕಿದ ಬಾಂಗ್ಲಾದ ಹುಚ್ಚು ಅಭಿಮಾನಿ

    ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾವನ್ನು ಕೆಣಕಿದ್ದಾರೆ.

    ಗುರುವಾರ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ಬಾಂಗ್ಲಾವನ್ನು ಹುಲಿಗೆ, ಭಾರತವನ್ನು ನಾಯಿಗೆ ಹೋಲಿಸಿ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಹುಲಿಗೆ ಬಾಂಗ್ಲಾದ ಧ್ವಜ ಹೊದಿಸಿದ್ದರೆ, ನಾಯಿಗೆ ಭಾರತದ ರಾಷ್ಟ್ರಧ್ವಜ ಹೊದಿಸಿ ಫೇಸ್‍ಬುಕ್‍ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾನೆ.

    ಈ ಸುದ್ದಿ ಪ್ರಕಟವಾಗಿದ್ದೆ ತಡ ಭಾರತೀಯ ಅಭಿಮಾನಿಗಳು, ನಾವು ಯವಾಗಲೂ ಹುಲಿಗಳು, ನೀವು ಫೋಟೋ ಶಾಪ್ ಎಕ್ಸ್ ಪರ್ಟ್ ಗಳು ಎಂದು ಟೀಕಿಸಿ ಕಮೆಂಟ್ ಮಾಡುತ್ತಿದ್ದಾರೆ.

    ಭಾರತ ತಂಡಕ್ಕೆ ಬಾಂಗ್ಲಾದೇಶದಲ್ಲಿ ಈ ರೀತಿಯಾಗಿ ಅವಮಾನ ಮಾಡುವುದು ಇದು ಹೊಸದೆನಲ್ಲ. 2015ರಲ್ಲಿ ಬಾಂಗ್ಲಾ ವಿರುದ್ಧ 1-2 ಅಂತರಿಂದ ಭಾರತ ಏಕದಿನ ಸರಣಿ ಸೋತಿತ್ತು. ಈ ಸಂದರ್ಭದಲ್ಲಿ ಬಾಂಗ್ಲಾ ಸುದ್ದಿಪತ್ರಿಕೆ ಪ್ರೊತೋಮ್ ಅಲೊ ಟೀಂ ಇಂಡಿಯಾ ಆಟಗಾರರ ಅರ್ಧಬೋಳಿಸಿದ ತಲೆಯ ಜಾಹೀರಾತನ್ನು ಪ್ರಕಟಿಸಿತ್ತು.

    3 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ ಮುಸ್ತಫಿಜುರ್ ಜಾಹೀರಾತಿನಲ್ಲಿ ಕಟರ್ ಹಿಡಿದುಕೊಂಡಿದ್ದು, ಅವರ ಕೆಳಗೆ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಧೋನಿ, ಶಿಖರ್ ಧವನ್ ಬ್ಯಾನರ್ ಹಿಡಿದು, ನಾವು ಅದನ್ನು ಬಳಸಿದ್ದೇವೆ, ನೀವೂ ಬಳಸಬಹುದು ಎಂಬ ಉಪಶೀರ್ಷಿಕೆ ಹೊಂದಿತ್ತು. ಮುಸ್ತಫಿಜುರ್ ಚಿತ್ರದ ಪಕ್ಕದಲ್ಲಿ, ಟೈಗರ್ ಸ್ಟೇಷನರಿ, ಮೇಡ್ ಇನ್ ಬಾಂಗ್ಲಾದೇಶ್, ಮುರ್ತಫಿಜ್ ಕಟ್ಟರ್ ಮಿರ್‍ಪುರದ ಸ್ಟೇಡಿಯಂ ಮಾರ್ಕೆಟ್‍ನಲ್ಲಿ ಲಭ್ಯವಿದೆ ಎನ್ನುವ ಶೀರ್ಷಿಕೆ ಜಾಹೀರಾತಿನಲ್ಲಿತ್ತು.

    ಕಳೆದ ವರ್ಷ ಬೌಲರ್ ಟಸ್ಕಿನ್ ಧೋನಿ ತಲೆಯನ್ನು ಹಿಡಿದುಕೊಂಡಿದ್ದ ಫೋಟೋ ಒಂದನ್ನು ಅಭಿಮಾನಿಯೊಬ್ಬ ಪ್ರಕಟಿಸಿ ಟೀಂ ಇಂಡಿಯಾವನ್ನು ಕೆಣಕಿದ್ದ.

  • ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 240 ರನ್ ಗೆಲುವು

    ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 240 ರನ್ ಗೆಲುವು

    ಲಂಡನ್: ಚಾಂಪಿಯನ್ಸ್ ಟ್ರೋಫಿಯ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಟೀಂ ಇಂಡಿಯಾ ಈ ಪಂದ್ಯವನ್ನು 240 ರನ್ ಗಳ ಅಂತರದಿಂದ ಗೆದ್ದಿದೆ.

    ಜೂನ್ 4ರಂದು ಚಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.

    325 ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ 3ನೇ ಓವರ್ ನಲ್ಲೇ ಉಮೇಶ್ ಯಾದವ್ ಮೊದಲ ಆಘಾತ ನೀಡಿದರು. ಮೊದಲ ವಿಕೆಟ್ ಪತನವಾದಾಗ ಬಾಂಗ್ಲಾ ಮೊತ್ತ 11 ರನ್ ಆಗಿತ್ತು. ಇದೇ ಮೊತ್ತಕ್ಕೆ ಮತ್ತೆ 2 ವಿಕೆಟ್ ಪತನವಾದವು. ಬಾಂಗ್ಲಾದ 4 ಆಟಗಾರರು ಸೊನ್ನೆ ಸುತ್ತಿದರು. ಕೇವಲ ಮೂವರು ಆಟಗಾರರು ಮಾತ್ರ ಎರಡಂಕಿಗಳ ರನ್ ಗಳಿಸಿದರು.

    ಕೊನೆಗೆ ಬಾಂಗ್ಲಾದೇಶ 23.5 ಓವರ್ ಗಳಲ್ಲಿ 84 ರನ್ ಗಳಿಸಿ ಆಲೌಟಾಯಿತು. ಟೀಂ ಇಂಡಿಯಾ ಪರವಾಗಿ ಭುವನೇಶ್ವರ್ ಕುಮಾರ್ 3, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ, ಅಶ್ವಿನ್, ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಗಳಿಸಿದರು.

    ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡಿದರೆ, ಮಹೇಂದ್ರ ಸಿಂಗ್ ಧೋನಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು.

    ಲಂಡನ್ ನ ಓವಲ್ ಕ್ರೀಡಾಂಗಣದಲ್ಲಿ ನಡೆದ ಟೀಂ ಇಂಡಿಯಾದ 2ನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಬ್ಯಾಟಿಂಗ್ ಮಾಡಲು ಇಳಿದ ಭಾರತದ ಮೊದಲ ವಿಕೆಟ್ 2ನೇ ಓವರ್ ನಲ್ಲೇ ಪತನವಾಯಿತು. 3 ಎಸೆತಗಳಲ್ಲಿ 1 ರನ್ ಗಳಿಸಿದ್ದ ರೋಹಿತ್ ಶರ್ಮಾ ರುಬೆಲ್ ಹೊಸೈನ್ ಎಸೆತಕ್ಕೆ ಬೌಲ್ಡ್. ನಂತರ ಬ್ಯಾಟ್ ಮಾಡಲು ಆಗಮಿಸಿದ ಅಜಿಂಕ್ಯಾ ರಹಾನೆ 21 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಔಟಾದರು. ಆದರೆ 3ನೇ ವಿಕೆಟ್ ಗೆ ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಉತ್ತಮ ಜೊತೆಯಾಟ ನೀಡಿದರು. ಈ ನಡುವೆ ಶಿಖರ್ ಧವನ್ 67 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ ಧವನ್ 60 ರನ್ ಗಳಿಸಿದರು.

    ಎಚ್ಚರಿಕೆಯ ಆಟವಾಡಿದ ದಿನೇಶ್ ಕಾರ್ತಿಕ್ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 77 ಎಸೆತಗಳಲ್ಲಿ 94 ರನ್ ಗಳಿಸಿ ರಿಟೈರ್ಡ್ ಔಟಾದರು. ಬಳಿಕ ಆಗಮಿಸಿದ ಕೇದಾರ್ ಜಾಧವ್ 31 ರನ್ ಗಳಿಸಿದರೆ, ನಂತರ ಬ್ಯಾಟಿಂಗ್ ಮಾಡಲು ಇಳಿದ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಇಳಿದರು. ಕೇವಲ 54 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 80 ರನ್ ಮಾಡಿ ಅಜೇಯರಾಗಿ ಉಳಿದರು. ಪಾಂಡ್ಯಾಗೆ ಉತ್ತಮ ಜೊತೆಯಾಟ ನೀಡಿದ ರವೀಂದ್ರ ಜಡೇಜಾ 36 ಎಸೆತಗಳಲ್ಲಿ 31 ರನ್ ಗಳಿಸಿದರು. ನಿಗದಿತ 50 ಓವರ್ ಮುಗಿದಾಗ ಭಾರತ 7 ವಿಕೆಟ್ ಕಳೆದುಕೊಂಡು 324 ರನ್ ಗಳಿಸಿತ್ತು.

    ಬಾಂಗ್ಲಾದೇಶ ತಂಡದ ಪರವಾಗಿ ರುಬೆಲ್ ಹೊಸೈನ್ 3, ಸುನ್ಸಮುಲ್ ಇಸ್ಲಾಂ 2, ಮುಸ್ತಫಿಜುರ್ ರಹಮಾನ್ 1 ವಿಕೆಟ್ ಗಳಿಸಿದರು.

     

     

  • 4 ಬಾಲ್‍ಗಳಿಗೆ ಬರೋಬ್ಬರಿ 92 ರನ್ ನೀಡಿದ ಬೌಲರ್‍ಗೆ 10 ವರ್ಷ ನಿಷೇಧ

    4 ಬಾಲ್‍ಗಳಿಗೆ ಬರೋಬ್ಬರಿ 92 ರನ್ ನೀಡಿದ ಬೌಲರ್‍ಗೆ 10 ವರ್ಷ ನಿಷೇಧ

    ಢಾಕಾ: 4 ಬಾಲ್‍ಗಳಿಗೆ 92 ರನ್‍ಗಳನ್ನು ನೀಡಿದ ಬೌಲರ್ ಸುಜೊನ್ ಮಹಮ್ಮದ್ ಅವರ ಮೇಲೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ 10 ವರ್ಷಗಳ ಕಾಲ ನಿಷೇಧ ಹೇರಿ ಆದೇಶ ಹೊರಡಿಸಿದೆ.

    ಮಹಮ್ಮದ್ ಬೇಕೆಂತಲೇ ಪಂದ್ಯ ಸೋಲಬೇಕು ಎಂಬ ಉದ್ದೇಶದಿಂದ 4 ಬಾಲ್ ಗಳಿಗೆ ಬರೋಬ್ಬರಿ 92 ರನ್ ನೀಡಿದ್ದರು. ಈ ಸಂಬಂಧ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಅವರು 10 ವರ್ಷಗಳ ಕಾಲ ಕ್ರಿಕೆಟ್ ಆಡದಂತೆ ನಿಷೇಧಿಸಿ ಆದೇಶ ಪ್ರಕಟಿಸಿದೆ.

    ಅಂದು ನಡೆದ ಮ್ಯಾಚ್‍ನ ಕ್ಯಾಪ್ಟನ್, ತಂಡದ ನಾಯಕ ಮತ್ತು ಮ್ಯಾನೇಜರ್ ಅವರನ್ನು 5 ವರ್ಷಗಳ ಕಾಲ ಢಾಕಾ ಡಿವಿಜನ್ ಲೀಗ್ ನಿಂದ ನಿಷೇಧಿಸಲಾಗಿದೆ.

    ಅಂದು ನಡೆದಿದ್ದೇನು?: ಢಾಕಾ ಸೆಕೆಂಡ್ ಡಿವಿಶನ್ ಲೀಗ್ ನಲ್ಲಿ ನಡೆದ 50 ಓವರ್ ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಾಲ್ಮಾಟಿಯಾ ಕ್ಲಬ್ 14 ಓವರ್ ಗಳಲ್ಲಿ ಕೇವಲ 88 ರನ್ ಗಳಿಸಿ ಆಲೌಟಾಯ್ತು. 89 ರನ್ ಗಳ ಗೆಲುವಿನ ಗುರಿ ಪಡೆದ ಎದುರಾಳಿ ತಂಡ ಅಕ್ಸಿಯೋಮ್ ಕ್ರಿಕೆಟರ್ಸ್ ಕೇವಲ 4 ಬಾಲ್ ಗಳಲ್ಲಿ 92 ರನ್ ಬಾರಿಸಿತ್ತು. ಲಾಲ್ಮಾಟಿಯಾ ತಂಡದ ಬೌಲರ್ ಸುಜೊನ್ ಮಹಮ್ಮದ್ 13 ವೈಡ್ ಮತ್ತು 3 ನೋಬಾಲ್ ಎಸೆಯುವ ಮೂಲಕ ವಿರೋಧಿ ತಂಡದ ಗೆಲುವಿಗೆ ಕಾರಣರಾಗಿದ್ದರು.

    ಮೊದಲ ಓವರ್ ನಲ್ಲಿ ಬೌಲರ್ ಎಸೆದ 13 ವೈಡ್ ಗಳನ್ನು ಕೀಪರ್ ಹಿಡಿಯುವ ಪ್ರಯತ್ನವನ್ನೇ ಮಾಡದೇ ಅವೆಲ್ಲವೂ ಬೌಂಡರಿ ಗೆರೆ ದಾಟಿತ್ತು. ಪರಿಣಾಮ ವೈಡ್ ಗಳಿಂದ 65 ರನ್‍ಗಳು ಹರಿದು ಬಂದರೆ, ಅದೇ ಓವರ್ ನಲ್ಲಿ ಬಂದ 3 ನೋಬಾಲ್ ಕೂಡ ಬೌಂಡರಿ ಗೆರೆ ದಾಟಿತ್ತು. ಇದರಿಂದಲೂ 15 ರನ್ ಗಳು ಖಾತೆಗೆ ಸೇರಿತ್ತು. ಈ ರನ್ ಗಳ ತಂಡ ಆರಂಭಿಕ ಬ್ಯಾಟ್ಸ್‍ಮನ್ ಮೂರು ಎಸೆತಗಳಲ್ಲಿ ಸತತ ಮೂರು ಬೌಂಡರಿ ಹೊಡೆದ್ದರು. ಇದರಿಂದ ತಂಡಕ್ಕೆ 12 ರನ್ ಬಂದಿತ್ತು. ಅಂತಿಮವಾಗಿ ಆಕ್ಸಿಯಮ್ ಕ್ರಿಕೆಟರ್ಸ್ ತಂಡ ಕೇವಲ 4 ಎಸೆತಗಳಲ್ಲಿ 92 ಪೇರಿಸಿ 10 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು.

    ಲಾಲ್ಮಾಟಿಯಾ ತಂಡದ ಆರೋಪ ಏನು?
    ಎಂಥ ಬೌಲರ್’ನೇ ಆದರೂ ಇಷ್ಟೊಂದು ಪ್ರಮಾಣದಲ್ಲಿ ವೈಡ್ ಮತ್ತು ನೋಬಾಲ್’ಗಳನ್ನು ಎಸೆಯಲು ಸಾಧ್ಯವಿಲ್ಲ. ಆಕ್ಸಿಯಾಮ್ ಮತ್ತು ಲಾಲ್ಮಾಟಿಯಾ ನಡುವಿನ ಈ ಪಂದ್ಯ ಹಲವು ವಿವಾದಗಳಿಂದ ಕೂಡಿತ್ತು. ಪಂದ್ಯ ಅಂಪೈರ್’ಗಳು ಆರಂಭದಿಂದಲೂ ಪಕ್ಷಪಾತಿ ಧೋರಣೆ ಹೊಂದಿದ್ದರು ಎಂಬುದು ಲಾಲ್ಮಾಟಿಯಾ ತಂಡದ ಆರೋಪಿಸಿತ್ತು.

    ಟಾಸ್ ವೇಳೆ ತಮ್ಮ ತಂಡದ ಕ್ಯಾಪ್ಟನ್’ಗೆ ಕಾಯಿನ್ ನೋಡಲೂ ಅವಕಾಶ ಕೊಡದೇ ಮೊದಲು ಬ್ಯಾಟಿಂಗ್ ಕಳುಹಿಸಲಾಯಿತು. 14 ಓವರ್’ಗಳ ಇನ್ನಿಂಗ್ಸಲ್ಲಿ ಅಂಪೈರ್’ಗಳು ತಮ್ಮ ತಂಡದ ವಿರುದ್ಧ ಅನೇಕ ತೀರ್ಪುಗಳನ್ನು ಕೊಟ್ಟು ಎಂದು ಲಾಲ್ಮಾಟಿಯಾ ಆಟಗಾರರ ಆರೋಪ ಮಾಡಿದ್ದರು.

    ಇಡೀ ಸರಣಿಯಲ್ಲಿ ಲಾಲ್ಮಾಟಿಯಾ ತಂಡದ ವಿರುದ್ಧ ಅಂಪೈರ್ ಗಳು ತಪ್ಪು ನಿರ್ಣಯ ನೀಡಿದ್ದಾರೆ ಎಂದು ಆರೋಪಗಳು ಎಲ್ಲಡೆಯಿಂದ ಕೇಳಿ ಬಂದಿದ್ದವು. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನಿಖೆಗೆ ಮುಂದಾಗಿತ್ತು.

     

  • ದ್ವಿಶತಕ ಸಿಡಿಸಿ ಕೊಹ್ಲಿಯಿಂದ ಮತ್ತೊಂದು ದಾಖಲೆ ನಿರ್ಮಾಣ

    ದ್ವಿಶತಕ ಸಿಡಿಸಿ ಕೊಹ್ಲಿಯಿಂದ ಮತ್ತೊಂದು ದಾಖಲೆ ನಿರ್ಮಾಣ

    ಹೈದರಾಬಾದ್: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‍ನ ಸತತ ನಾಲ್ಕು ಸರಣಿಯಲ್ಲಿ 4 ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ಹೌದು. ಜೂನ್ ತಿಂಗಳಿನಲ್ಲಿ ದ್ವಿಶತಕ ಬಾರಿಸಲು ಆರಂಭಿಸಿದ ಬಳಿಕ ಕೊಹ್ಲಿ ತಾನು ಆಡಿದ ಎಲ್ಲ ಸರಣಿಯಲ್ಲಿ ಒಂದೊಂದು ದ್ವಿಶತಕ ಹೊಡೆದಿರುವುದು ವಿಶೇಷ. ಈ ಪಂದ್ಯದಲ್ಲಿ ಕೊಹ್ಲ್ಲಿ 204 ರನ್(246 ಎಸೆತ, 24 ಬೌಂಡರಿ) ಹೊಡೆದು ತಂಡದ ಮೊತ್ತ 495 ಆಗಿದ್ದಾಗ ಐದನೇಯವರಾಗಿ ಔಟಾದರು. ಕೊಹ್ಲಿ ದ್ವಿಶತಕ ಹೊಡೆದ ಎಲ್ಲ ಪಂದ್ಯಗಳನ್ನು ಭಾರತ ಗೆದ್ದಿರುವುದು ವಿಶೇಷ.

    ಆ 3 ದ್ವಿಶತಕಗಳು
    1. ವೆಸ್ಟ್ ಇಂಡಿಸ್ ವಿರುದ್ಧ ಅಂಟಿಗುವಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೊಹ್ಲಿ 200 ರನ್(283 ಎಸೆತ, 24 ಬೌಂಡರಿ) ಹೊಡೆದಿದ್ದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 92 ರನ್‍ಗಳಿಂದ ಗೆದ್ದುಕೊಂಡಿತ್ತು.

    2. ಇಂದೋರ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ನಲ್ಲಿ  ಕೊಹ್ಲಿ 211 ರನ್( 366 ಎಸೆತ, 20 ಬೌಂಡರಿ) ಹೊಡೆದಿದ್ದರು. ಈ ಪಂದ್ಯವನ್ನು ಭಾರತ 321 ರನ್‍ಗಳಿಂದ ಗೆದ್ದುಕೊಂಡಿತ್ತು.

    3. ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ನಡೆದ ನಾಲ್ಕನೇಯ ಟೆಸ್ಟ್ ನಲ್ಲಿ 235 ರನ್(340 ಎಸೆತ, 25 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 36 ರನ್‍ಗಳಿಂದ ಗೆದ್ದುಕೊಂಡಿತ್ತು.

    ಸೆಹ್ವಾಗ್ ದಾಖಲೆ ಮುರಿಯಿತು:
    ಇಲ್ಲಿಯವರೆಗೆ ಸ್ವದೇಶದಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿತ್ತು. 2004/05ರ ಅವಧಿಯಲ್ಲಿ ಸೆಹ್ವಾಗ್ 9 ಪಂದ್ಯಗಳ 17 ಇನ್ನಿಂಗ್ಸ್ ಗಳಿಂದ 1105 ರನ್ ಬಾರಿಸಿದ್ದರು. ಈಗ ಕೊಹ್ಲಿ 9 ಪಂದ್ಯಗಳ 15 ಇನ್ನಿಂಗ್ಸ್ ಗಳಿಂದ 1168 ರನ್ ಹೊಡೆಯುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. ಸೆಹ್ವಾಹ್ ಈ ಅವಧಿಯಲ್ಲಿ 4 ಶತಕ, 3 ಅರ್ಧಶತಕ ಹೊಡೆದಿದ್ದರೆ, ಕೊಹ್ಲಿ 4 ಶತಕ, 2 ಅರ್ಧಶತಕ ಹೊಡೆದಿದ್ದಾರೆ.

    ಕೊಹ್ಲಿ 200 ರನ್ ಹೊಡೆದಿದ್ದು ಹೀಗೆ:
    50 ರನ್ – 70 ಎಸೆತ, 5 ಬೌಂಡರಿ
    100 ರನ್ -130 ಎಸೆತ, 10 ಬೌಂಡರಿ
    150 ರನ್ – 170 ಎಸೆತ, 19 ಬೌಂಡರಿ
    200 ರನ್ – 239 ಎಸೆತ, 24 ಬೌಂಡರಿ
    204 ರನ್ – 246 ಎಸೆತ, 24 ಬೌಂಡರಿ

  • 31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು 31 ರನ್ ಗಳಿಸಿದರೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲಿದ್ದಾರೆ.

    ಇದೂವರೆಗೆ ವೀರೇಂದ್ರ ಸೆಹ್ವಾಗ್ 2004-05ರ ಅವಧಿಯಲ್ಲಿ 9 ಪಂದ್ಯಗಳಿಂದ 1105 ರನ್‍ಗಳಿಸಿದ್ದರು. ಈಗ ಕೊಹ್ಲಿ ಅಷ್ಟೇ ಪಂದ್ಯಗಳಿಂದ 1075 ರನ್‍ಗಳಿಸಿದ್ದಾರೆ.

    ಸೆಹ್ವಾಗ್ 4 ಶತಕ, ಮೂರು ಅರ್ಧ ಶತಕ ಹೊಡೆಯುವ ಮೂಲಕ ಈ ಸಾಧನೆ ಮಾಡಿದರೆ ಕೊಹ್ಲಿ 4 ಶತಕ 2 ಅರ್ಧಶತಕ ಹೊಡೆದಿದ್ದಾರೆ. 2016ರಲ್ಲಿ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳಿಂದ 309 ರನ್ ಬಾರಿಸಿದ್ದರೆ, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳಿಂದ 655 ರನ್ ಹೊಡೆದಿದ್ದರು.

    ಈಗ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಅಜೇಯ 111 ರನ್(141 ಎಸೆತ, 12ಬೌಂಡರಿ) ಗಳಿಸಿದ್ದಾರೆ.

    ಉತ್ತಮ ಸ್ಥಿತಿಯಲ್ಲಿ ಭಾರತ:
    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡರೂ ಮೊದಲ ದಿನದ ಅಂತ್ಯಕ್ಕೆ 90 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 356 ರನ್‍ಗಳಿಸಿದೆ.

    ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಎರಡನೇ ವಿಕೆಟಿಗೆ 178 ರನ್‍ಗಳ ಜೊತೆಯಾಟವಾಡಿದರು. ಪೂಜಾರ 83 ರನ್( 177 ಎಸೆತ, 9 ಬೌಂಡರಿ) ಬಾರಿಸಿದರೆ ಮುರಳಿ ವಿಜಯ್ 108 ರನ್(160 ಎಸೆತ 12 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.

    130 ಎಸೆತದಲ್ಲಿ 16ನೇ ಶತಕ ಹೊಡೆದ ಕೊಹಿಗ್ಲೆ ರಹಾನೆ 45 ರನ್( 60 ಎಸೆತ, 7 ಬೌಂಡರಿ) ಹೊಡೆದು ಸಾಥ್ ನೀಡಿದ್ದಾರೆ.