Tag: bangladesh

  • ಬಾಂಗ್ಲಾ ವಿಚಾರ ಮೋದಿಗೆ ಬಿಡುತ್ತೇನೆ:  ಟ್ರಂಪ್‌

    ಬಾಂಗ್ಲಾ ವಿಚಾರ ಮೋದಿಗೆ ಬಿಡುತ್ತೇನೆ: ಟ್ರಂಪ್‌

    ವಾಷಿಂಗ್ಟನ್‌: ಬಾಂಗ್ಲಾದೇಶದ (Bangldesh) ವಿಚಾರವನ್ನು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಬಿಡುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

    ಶ್ವೇತಭವನದಲ್ಲಿ (White House) ಟ್ರಂಪ್ ಅವರನ್ನು ಮೋದಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.

     

    ನಂತರ ಮಾಧ್ಯಮಗಳ ಜೊತೆ ಡೊನಾಲ್ಡ್‌ ಟ್ರಂಪ್‌ ಮತ್ತು ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಡೀಪ್‌ ಸ್ಟೇಟ್‌ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಟ್ರಂಪ್‌, ಇದರಲ್ಲಿ ಡೀಪ್‌ ಸ್ಟೇಟ್‌ ಪಾತ್ರವಿಲ್ಲ. ಈ ವಿಚಾರದಲ್ಲಿ ಮೋದಿಯವರು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಮೋದಿ ಅವರಿಗೆ ಬಿಡುತ್ತೇನೆ ಎಂದು ತಿಳಿಸಿದರು.

    ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತವು ಆ ದೇಶದ ಪರಿಸ್ಥಿತಿಯನ್ನು ಹೇಗೆ ನೋಡುತ್ತದೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಇದನ್ನೂ ಓದಿ: 2008ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ – ಮೋದಿ ಎದುರೇ ಟ್ರಂಪ್‌ ಘೋಷಣೆ

    ಭಾರೀ ಪ್ರತಿಭಟನೆಯ ನಂತರ ಪ್ರಧಾನಿ ಶೇಖ್ ಹಸೀನಾ ಬೃಹತ್ ಢಾಕಾದಿಂದ ಭಾರತಕ್ಕೆ ಪಲಾಯನ ಮಾಡಿದ ನಂತರ ಭಾರತ-ಬಾಂಗ್ಲಾದೇಶ ಸಂಬಂಧ ಹಳಸಿದೆ.

  • ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ

    ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ

    ಢಾಕಾ: ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರದ ಕಿಡಿ ಧಗಧಗಿಸುತ್ತಿದೆ. ಭಾರತಕ್ಕೆ ಪಲಾಯನ ಮಾಡಿರುವ ಶೇಖ್ ಹಸೀನಾ (Sheikh Hasina) ಮಾಡಿದ ಭಾಷಣದಿಂದ ಆಕ್ರೋಶಗೊಂಡ ವಿರೋಧಿ ಬಣ ರಾಜಧಾನಿ ಢಾಕಾದಲ್ಲಿ (Dhaka) ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

    ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ (Sheikh Mujibur Rahma) ಸ್ಮಾರಕ ಮತ್ತು ಅವರ ನಿವಾಸವನ್ನ ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಕ್ರೇನ್ ಮೂಲಕ ಮನೆ ಧ್ವಂಸಗೊಳಿಸಿದ್ದಾರೆ. ಇದನ್ನೂ ಓದಿ: ಬಾವಿಯಲ್ಲಿ ಪತ್ತೆಯಾದ ಬುಲೆಟ್ ಬೈಕ್ ಸುತ್ತ ಅನುಮಾನದ ಹುತ್ತ!

    ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲವೆಂದು ಶೇಖ್ ಹಸೀನಾ ಭಾರತದಿಂದ ಆನ್‌ಲೈನ್ ಮೂಲಕ ಮಾಡಿದ ಭಾಷಣಕ್ಕೆ ಕೆರಳಿದ ಪ್ರತಿಭಟನಾಕಾರರು ಅವಾಮಿ ಲೀಗ್ ಪಕ್ಷ ನಿಷೇಧಕ್ಕೆ ಆಗ್ರಹಿಸಿ ದಂಗೆ ಎಬ್ಬಿಸಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಅಶಾಂತಿ ಹರಡುವ ಸಾಧ್ಯತೆ ಇದೆ.

    ಶೇಖ್‌ ಹಸೀನಾ ಭಾಷಣದಲ್ಲಿ ಹೇಳಿದ್ದೇನು?
    ಶೇಖ್‌ ಹಸೀನಾ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆನ್‌ಲೈನ್‌ ಮೂಲಕ ಭಾಷಣ ಮಾಡಿದರು. ಪ್ರಸ್ತುತ ದುರಾಡಳಿತದ ವಿರುದ್ಧ ಪ್ರತಿರೋಧ ಸಂಘಟಿಸಲು ದೇಶವಾಸಿಗಳಿಗೆ ಕರೆ ನೀಡಿದರು. ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೊಹಮ್ಮದ್‌ ಯೂನಸ್‌ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

    ನನ್ನ ತಂದೆ ನಾವು ನಿರ್ಮಾಣ ಕಟ್ಟಡಗಳನ್ನು ಕೆಡವಬಹುದು, ಆದ್ರೆ ಇತಿಹಾಸವನ್ನು ಕೆಡವಲು ಸಾಧ್ಯವಿಲ್ಲ. ಇಂದಲ್ಲ ನಾಳೆ ಅದು ತನ್ನ ಸೇಡು ತೀರಿಸಿಕೊಳ್ಳುತ್ತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು. ಇದನ್ನೂ ಓದಿ: ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

    ಈ ಹಿಂದೆ 1972ರಲ್ಲಿ‌ ನಡೆದ ವಿದ್ಯಾರ್ಥಿ ಆಂದೋಲನವು ದೇಶದ ಸಂವಿಧಾನವನ್ನೇ ನಾಶಪಡಿಸುವ ಎಚ್ಚರಿಕೆ ನೀಡಿತ್ತು. ಕೆಲ ಬಲಪಂಥೀಯ ಗುಂಪುಗಳು ಶೇಖ್ ಮುಜಿಬ್ ನೇತೃತ್ವದ ಸ್ವಾತಂತ್ರ್ಯೋತ್ತರ ಸರ್ಕಾರವು ಅಳವಡಿಸಿಕೊಂಡ ರಾಷ್ಟ್ರಗೀತೆಯನ್ನು ಬದಲಾಯಿಸುವಂತೆ ಸೂಚಿಸಿದ್ದವು. ಇದ್ಯಾವುದನ್ನೂ ಇತಿಹಾಸ ಮರೆತಿಲ್ಲ ಎಂದು ಕಹಿ ಘಟನೆಗಳನ್ನು ನೆನಪಿಸಿಕೊಂಡರು.

    ಧ್ವಂಸಗೊಂಡ ಮನೆಗೊಂಡು ಇತಿಹಾಸವಿದೆ:
    ಅಲ್ಲದೇ ಈಗ ಧ್ವಂಸಗೊಳಿಸಿದ ಮನೆ ಬಾಂಗ್ಲಾದೇಶದ ಇತಿಹಾಸದಲ್ಲಿ ಒಂದು ಅಪ್ರತಿಮ ಸಂಕೇತವಾಗಿತ್ತು. ಏಕೆಂದರೆ ಶೇಖ್ ಮುಜೀಬ್ ಸ್ವಾತಂತ್ರ್ಯಪೂರ್ವದ ಸ್ವಾಯತ್ತತೆಯ ಚಳುವಳಿಯನ್ನು ದಶಕಗಳ ಕಾಲ ಈ ಮನೆಯಿಂದಲೇ ಮುನ್ನಡೆಸಿದ್ದರು. ಬಳಿಕ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಬದಲಾಯಿಸಲಾಗಿತ್ತು.

  • ಅಕ್ರಮವಾಗಿ ಸೆಕ್ಸ್‌ ಮೂವಿ ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

    ಅಕ್ರಮವಾಗಿ ಸೆಕ್ಸ್‌ ಮೂವಿ ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

    ದಿಸ್ಪುರ್‌: ಅಸ್ಸಾಂನ (Assam) ಗುವಾಹಟಿಯ ಹೋಟೆಲ್‌ ಒಂದರಲ್ಲಿ ಸೆಕ್ಸ್‌ ಮೂವಿ ಶೂಟಿಂಗ್‌ ಮಾಡುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶಿ (Bangladesh) ಮಹಿಳೆ ಸೇರಿದಂತೆ ಮೂವರನ್ನು ದಿಸ್ಪುರ್ (Dispur) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಅಸ್ಸಾಂ ಮೂಲದ ಶಫಿಕುಲ್, ಜಹಾಂಗೀರ್ ಮತ್ತು ಬಾಂಗ್ಲಾದೇಶದ ನಿವಾಸಿ ಮೀನ್ ಅಖ್ತರ್ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಗುವಾಹಟಿಯ ಸೂಪರ್ ಮಾರ್ಕೆಟ್ ಪ್ರದೇಶದ ಹೋಟೆಲ್‌ ಒಂದರಲ್ಲಿ ಕೊಠಡಿಗಳನ್ನು ಬುಕ್ ಮಾಡಿದ್ದರು. ಅಲ್ಲಿ ಅವರು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿ ದಾಳಿ ನಡೆಸಿದ್ದರು.

    ಮೀನ್ ಅಖ್ತರ್ ಬಾಂಗ್ಲಾದೇಶ ಗಡಿಗೆ ಏಕಾಂಗಿಯಾಗಿ ಪ್ರಯಾಣಿಸಿ ಉದ್ಯೋಗದ ಸುಳ್ಳು ನೆಪದಲ್ಲಿ ಭಾರತವನ್ನು ಪ್ರವೇಶಿಸಿದ್ದಾಳೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆಕೆ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೇ ಅಸ್ಸಾಂಗೆ ಪ್ರವೇಶಿಸಿದ್ದಾಳೆ ಎಂದು ಆರೋಪಿಸಲಾಗಿದೆ.

    ಇದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜಾಲಗಳ ಸಂಪರ್ಕದ ಬಗ್ಗೆ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಅಕ್ರಮ ವಲಸಿಗರಿಂದ ದೆಹಲಿಯ ಸಾಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶ ಬದಲಾಗಿದೆ: ಜೆಎನ್‌ಯು ವರದಿ

    ಅಕ್ರಮ ವಲಸಿಗರಿಂದ ದೆಹಲಿಯ ಸಾಮಾಜಿಕ, ರಾಜಕೀಯ, ಆರ್ಥಿಕ ಸನ್ನಿವೇಶ ಬದಲಾಗಿದೆ: ಜೆಎನ್‌ಯು ವರದಿ

    ನವದೆಹಲಿ: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಬಂದಿರುವ ಅಕ್ರಮ ವಲಸಿಗರಿಂದ (Illegal Immigrants) ದೆಹಲಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸನ್ನಿವೇಶ ಬದಲಾಗಿದೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವರದಿಯೊಂದು ಹೇಳಿದೆ. ದೆಹಲಿ ಚುನಾವಣೆ ಹೊತ್ತಲ್ಲಿ ಈ ವರದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ದೆಹಲಿಗೆ ಅಕ್ರಮ ವಲಸಿಗರು: ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳನ್ನು ವಿಶ್ಲೇಷಿಸುವ ಹೆಸರಿನಲ್ಲಿ ಅಧ್ಯಯನ ಮಾಡಿದ್ದು, ಈ ಸಂಬಂಧ 114 ಪುಟಗಳ ವರದಿಯನ್ನು ಬಿಡುಗಡೆ ಮಾಡಿದೆ. ವಲಸೆಯನ್ನು ಸಕ್ರಿಯಗೊಳಿಸುವಲ್ಲಿ ರಾಜಕೀಯ ಪ್ರೋತ್ಸಾಹದ ಪಾತ್ರ ಮತ್ತು ನಗರದ ಮೂಲಸೌಕರ್ಯ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವವನ್ನು ವರದಿಯಲ್ಲಿ ವಿವರಿಸಿದೆ. ಇದನ್ನೂ ಓದಿ: ಇನ್ಮುಂದೆ ಗೋಹತ್ಯೆ ಏನಾದ್ರೂ ನಡೆದರೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕ್ತೀವಿ: ಮಂಕಾಳು ವೈದ್ಯ

    ರಾಜಕೀಯ ಪಕ್ಷಗಳು ಮತ್ತು ಅವರ ಸಹವರ್ತಿಗಳು ವಲಸಿಗರಿಗೆ ಮತದಾರರ ನೋಂದಣಿಗೆ ಅನುಕೂಲ ಮಾಡಿಕೊಡುತ್ತಾರೆ. ನಕಲಿ ಗುರುತಿನ ದಾಖಲೆಗಳ ರಚನೆಯು ಕಾನೂನು ವ್ಯವಸ್ಥೆಗಳು ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ದುರ್ಬಲಗೊಳಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಬೆಂಗಳೂರು ವಿವಿಯ ಜ್ಞಾನಭಾರತಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

    ವಲಸೆಯಿಂದ ಉಂಟಾದ ಜನಸಂಖ್ಯಾ ಬದಲಾವಣೆಗಳು ದೆಹಲಿಯ ಧಾರ್ಮಿಕ ಸಂಯೋಜನೆಯನ್ನು ಬದಲಾಯಿಸಿವೆ. ಬಾಂಗ್ಲಾದೇಶದಿಂದ ವಲಸೆ ಬಂದ ಕಾರಣ ಮುಸ್ಲಿಂ ಜನಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಇದು ನಗರದ ಸಾಮಾಜಿಕ-ರಾಜಕೀಯ ಡೈನಾಮಿಕ್ಸ್ ಮೇಲೆ ಪ್ರಭಾವ ಬೀರಿದೆ ಎಂದು ವರದಿ ಹೇಳುತ್ತದೆ. ಇದನ್ನೂ ಓದಿ: ಮಂಡ್ಯ | ವಿಸಿ ನಾಲೆಗೆ ಕಾರು ಪಲ್ಟಿ – ಓರ್ವ ಸಾವು, ಇಬ್ಬರು ನಾಪತ್ತೆ

    ವಲಸಿಗರು ನಿರ್ಮಾಣ ಮತ್ತು ಗೃಹ ಕಾರ್ಮಿಕರಲ್ಲಿ ಕೆಲಸವನ್ನು ಕಂಡುಕೊಳ್ಳುತ್ತಾರೆ, ಸ್ಪರ್ಧೆಯನ್ನು ಹೆಚ್ಚಿಸುತ್ತಾರೆ ಇದು ವೇತನ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಅನಧಿಕೃತ ವಸಾಹತುಗಳು ಜನದಟ್ಟಣೆ, ಯೋಜಿತವಲ್ಲದ ನಗರ ವಿಸ್ತರಣೆ ಮತ್ತು ಸಾರ್ವಜನಿಕ ಸೇವೆಗಳಾದ ನೀರು, ವಿದ್ಯುತ್, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಒತ್ತಡಕ್ಕೆ ಕಾರಣವಾಗಿವೆ. ಇದನ್ನೂ ಓದಿ: ಜನರು ಅವರನ್ನು ಘೋಷಣೆ ಕೂಗಲು ಕಳುಹಿಸಿದ್ದರೆ ಕೂಗಲು ಬಿಡಿ – ವಿಪಕ್ಷಗಳ ವಿರುದ್ಧ ಸ್ಪೀಕರ್ ಗರಂ

    ವರದಿಯ ಪ್ರಕಾರ ವಲಸಿಗರು ಪ್ರಾಥಮಿಕವಾಗಿ ಸೀಲಂಪುರ್, ಜಾಮಿಯಾ ನಗರ, ಜಾಕಿರ್ ನಗರ, ಸುಲ್ತಾನಪುರಿ, ಮುಸ್ತಫಾಬಾದ್, ಜಫ್ರಾಬಾದ್, ದ್ವಾರಕಾ, ಗೋವಿಂದಪುರಿ ಮತ್ತು ಇತರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ದಿಲ್ಲಿಗೆ ಅಕ್ರಮ ವಲಸೆಯು ನಗರದ ಜನಸಂಖ್ಯಾ ಭೂದೃಶ್ಯವನ್ನು ಗಣನೀಯವಾಗಿ ಬದಲಾಯಿಸಿದೆ. ವರದಿಯು ವಲಸೆಯ ಪ್ರವೃತ್ತಿಯನ್ನು 2017ರ ರೋಹಿಂಗ್ಯಾ ಬಿಕ್ಕಟ್ಟಿಗೆ ಜೋಡಿಸಿದೆ. ಇದನ್ನೂ ಓದಿ: ರೈಲು ನಿಲ್ಲೋದಕ್ಕೂ ಮುನ್ನ ಇಳಿಯಲು ಹೋಗಿ ಅವಘಡ – ಹಳಿಗೆ ಸಿಲುಕಿ 2 ಕಾಲು ಕಟ್, ಯುವಕ ಸಾವು

    ವಲಸಿಗರು ಸಾಮಾನ್ಯವಾಗಿ ವಸತಿ ಮತ್ತು ಉದ್ಯೋಗಗಳಿಗಾಗಿ ಬ್ರೋಕರ್‌ಗಳು, ಏಜೆಂಟ್‌ಗಳು ಮತ್ತು ಧಾರ್ಮಿಕ ಬೋಧಕರನ್ನು ಅವಲಂಬಿಸಿರುತ್ತಾರೆ, ಹೆಚ್ಚು ಅಕ್ರಮ ವಲಸಿಗರು ದೆಹಲಿ ಸೇರುವುದು ಅಪಾಯ ಎಂದು ವರದಿಯಲ್ಲಿ ಎಚ್ಚರಿಕೆ ನೀಡಿದೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಂಶೋಧಕರು ಅಧ್ಯಯನಕ್ಕೆ ಕೊಡುಗೆ ನೀಡಿದ್ದಾರೆ. ಇದು ಮುಂಬೈನಲ್ಲಿ ಇದೇ ರೀತಿಯ ವಲಸೆ ಮಾದರಿಗಳಿಗೆ ಸಮಾನಾಂತರವಾಗಿದೆ. ಇದನ್ನೂ ಓದಿ: ಅರ್ಧ ಎಂಜಿನ್‌ ಆಪ್‌ ಸರ್ಕಾರದಿಂದ ದೆಹಲಿ ಹಾಳಾಗಿದೆ: ಚಂದ್ರಬಾಬು ನಾಯ್ಡು



    ಜೆಎನ್‌ಯು ವರದಿಯ ಕುರಿತು ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಂಬಿತ್ ಪಾತ್ರಾ, ದಾಖಲೆಯಿಲ್ಲದ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳ ನಿರಂತರ ಒಳಹರಿವು ಸಕ್ರಿಯಗೊಳಿಸುವಲ್ಲಿ ರಾಜಕೀಯ ಪ್ರೋತ್ಸಾಹವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ವರದಿ ಹೇಳುತ್ತದೆ. ಜೊತೆಗೆ ಎಎಪಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ರಾಜಕೀಯ ಪಕ್ಷಗಳು ವಲಸಿಗರಿಗೆ ನಕಲಿ ಮತದಾರರ ನೋಂದಣಿಯನ್ನು ಹೇಗೆ ಸುಗಮಗೊಳಿಸುತ್ತಿವೆ ಎಂದು ವರದಿ ವಿವರಿಸಿದೆ ಎಂದರು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ- 253 ಪ್ರಬೇಧ ಪತ್ತೆ

  • Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?

    Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?

    ನವದೆಹಲಿ: ತನ್ನ ಜೊತೆ ಕಿತ್ತಾಟ ನಡೆಸಿದರೂ ಬಾಂಗ್ಲಾದೇಶ (Bangladesh), ಮಾಲ್ಡೀವ್ಸ್‌ಗೆ (Maldives) ಭಾರತ ಅನುದಾನ ನೀಡುವುದನ್ನು ಮುಂದುವರಿಸಿದೆ.

    ನೆರೆಹೊರೆಯವರಿಗೆ ಮೊದಲ ಆದ್ಯತೆ ಎಂಬ ನೀತಿಯನ್ನು ಅಳವಡಿಸಿರುವ ಭಾರತ ತನ್ನ ಬಜೆಟ್‌ನಲ್ಲಿ (Union Budget)  ನೆರೆಯ ದೇಶಗಳಿಗೆ ಪ್ರತಿ ವರ್ಷ ಅನುದಾನವನ್ನು ನೀಡುತ್ತಾ ಬಂದಿದೆ.

    ಪಟ್ಟಿಯಲ್ಲಿ ಭೂತನ್‌ ಮೊದಲ ಸ್ಥಾನದಲ್ಲಿದ್ದು 2025-26ರ ಬಜೆಟ್‌ನಲ್ಲಿ 2,150 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷದ ಅನುದಾನಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕಳೆದ ಬಾರಿ 2,543 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇದನ್ನೂ ಓದಿ: Union Budget 2025: ಯಾವುದು ಅಗ್ಗ, ಯಾವುದು ದುಬಾರಿ?

    ಚೀನಾದ ಪರ ವಾಲಿರುವ ಮಾಲ್ಡೀವ್ಸ್‌ಗೆ ಅನುದಾನ ಏರಿಕೆಯಾಗಿದೆ. ಕಳೆದ ಬಾರಿ 470 ಕೋಟಿ ರೂ. ನೀಡಿದ್ದರೆ ಈ ಬಾರಿ 600 ಕೋಟಿ ರೂ. ನೀಡಲಾಗಿದೆ.

    ಅಫ್ಘಾನಿಸ್ತಾನಕ್ಕೆ ನೀಡುವ ಅನುದಾನ ಡಬಲ್‌ ಆಗಿದೆ. ಕಳೆದ ಬಾರಿ 50 ಕೋಟಿ ರೂ. ನೀಡಿದ್ದರೆ ಈ ಬಾರಿ 100 ಕೋಟಿ ರೂ.ಗೆ ಏರಿಕೆಯಾಗಿದೆ. 2 ವರ್ಷದ ಹಿಂದೆ 207 ಕೋಟಿ ರೂ. ಅನುದಾನ ನೀಡಲಾಗಿತ್ತು.

    ಮ್ಯಾನ್ಮರ್‌ಗೆ ಕಳೆದ ಬಾರಿ 400 ಕೋಟಿ ರೂ. ನೀಡಲಾಗಿತ್ತು. ಈ ಬಾರಿ 350 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.  ಇದನ್ನೂ ಓದಿ: Union Budget 2025 | ಯಾವ ವರ್ಷ ಎಷ್ಟು ಲಕ್ಷ ತೆರಿಗೆ ವಿನಾಯಿತಿ ಸಿಕ್ಕಿತ್ತು? – ಇಲ್ಲಿದೆ ಪೂರ್ಣ ವಿವರ

    ಬಾಂಗ್ಲಾ ಸರ್ಕಾರದ ಜೊತೆ ಭಿನ್ನಮತ ಇದ್ದರೂ ಬಜೆಟ್‌ನಲ್ಲಿ ಅನುದಾನ ನಿಲ್ಲಿಸಿಲ್ಲ. ಬಾಂಗ್ಲಾದೇಶಕ್ಕೆ 120 ಕೋಟಿ ರೂ. ನೇಪಾಳ 700 ಕೋಟಿ ರೂ., ಶ್ರೀಲಂಕಾಗೆ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಇಷ್ಟೇ ಪ್ರಮಾಣದ ಹಣವನ್ನು ಹಂಚಿಕೆ ಮಾಡಲಾಗಿತ್ತು.

    ಇರಾನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಬಹಾರ್‌  ಬಂದರು ಕಾಮಗಾರಿಗೆ ಕಳೆದ ವರ್ಷದಂತೆ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

    ಆಫ್ರಿಕಾದ ದೇಶಗಳಿಗೆ ಕಳೆದ ವರ್ಷ 200 ಕೋಟಿ ರೂ. ನೀಡಲಾಗಿತ್ತು. ಈ ಬಜೆಟ್‌ನಲ್ಲಿ 225 ಕೋಟಿ ರೂ.ಗೆ ಏರಿಕೆಯಾಗಿದೆ. 2023 ರಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಆಫ್ರಿಕನ್‌ ಒಕ್ಕೂಟ ಜಿ20 ಗ್ರೂಪಿಗೆ ಸೇರ್ಪಡೆಯಾಗಿತ್ತು.

  • ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ಸೈಫ್‌ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್‌ ಕಸ್ಟಡಿಗೆ

    ಮುಂಬೈ: ಸೈಫ್‌ ಅಲಿಖಾನ್‌ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಆರೋಪಿಯನ್ನು ಮುಂಬೈ ಕೋರ್ಟ್‌ 5 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

    ವಿಚಾರಣೆ ಸಂದರ್ಭದಲ್ಲಿ ಈ ಕೃತ್ಯದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

    ಸೈಫ್‌ ಅಲಿಖಾನ್‌ ಮನೆಯಲ್ಲಿ ನಡೆದ ಕಳ್ಳತನ (Theft) ಯತ್ನಕ್ಕೆ ಸಂಬಂಧಿಸಿದಂತೆ  ಆರೋಪಿ  ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್‌ನನ್ನು (Mohammad Sariful Islam Shehzad)  ಥಾಣೆಯಲ್ಲಿ ಬಂಧಿಸಲಾಗಿತ್ತು.

    ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಅವನು ಬಾಂಗ್ಲಾದೇಶದವನೆಂದು ನಾವು ಶಂಕಿಸಿದ್ದೇವೆ, ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನ ವಿರುದ್ಧದ ಪ್ರಕರಣಕ್ಕೆ ಪಾಸ್‌ಪೋರ್ಟ್ ಕಾಯ್ದೆಯ ಆರೋಪಗಳನ್ನು ಸೇರಿಸಿದ್ದೇವೆ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

    ಆರೋಪಿ ಬಾಂಗ್ಲಾದೇಶದವನೆಂದು ಸೂಚಿಸುವ ಕೆಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಂತರ ಮನೆಗೆಲಸದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಬಾರಿಗೆ ಸೈಫ್‌ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದರು.

    ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಳನ್ನು ಇಟ್ಟುಕೊಂಡು ಓಡಾಡುತ್ತಿದ್ದ.

  • ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ:  ಮುಂಬೈ ಪೊಲೀಸ್‌

    ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್‌

    ಮುಂಬೈ: ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮುಂಬೈ ಮನೆಗೆ ನುಗ್ಗಿ ನಟನಿಗೆ ಆರು ಬಾರಿ ಇರಿದ ಹಲ್ಲೆಕೋರನನ್ನು ಬಂಧಿಸಲಾಗಿದ್ದು, ಆತ 5-6 ತಿಂಗಳ ಹಿಂದೆ ಬಾಂಗ್ಲಾದೇಶದಿಂದ (Bangladesh) ಅಕ್ರಮವಾಗಿ ಭಾರತಕ್ಕೆ ಬಂದಿದ್ದಾನೆ ಎಂದು ಮುಂಬೈ ಪೊಲೀಸರು (Mumbai Police) ಹೇಳಿದ್ದಾರೆ.

    ಇಂದು ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ದೀಕ್ಷಿತ್ ಗೆಡಮ್, ಸೈಫ್‌ ಅಲಿಖಾನ್‌ ಮನೆಯಲ್ಲಿ ನಡೆದ ಕಳ್ಳತನ (Theft) ಯತ್ನಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಥಾಣೆಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ (Mohammad Sariful Islam Shehzad) ಎಂದು ಗುರುತಿಸಲಾಗಿದೆ ಎಂದರು.

    ಈ ಆರೋಪಿ ಬಾಂಗ್ಲಾದೇಶದವನಾಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಬಳಿ ಯಾವುದೇ ಭಾರತೀಯ ದಾಖಲೆಗಳಿಲ್ಲ. ಅವನು ಬಾಂಗ್ಲಾದೇಶದವನೆಂದು ನಾವು ಶಂಕಿಸಿದ್ದೇವೆ, ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನ ವಿರುದ್ಧದ ಪ್ರಕರಣಕ್ಕೆ ಪಾಸ್‌ಪೋರ್ಟ್ ಕಾಯ್ದೆಯ ಆರೋಪಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

    ಆರೋಪಿ ಬಾಂಗ್ಲಾದೇಶದವನೆಂದು ಸೂಚಿಸುವ ಕೆಲವು ವಸ್ತುಗಳನ್ನು ಆತನಿಂದ ವಶಪಡಿಸಿಕೊಂಡಿದ್ದೇವೆ. ಅವನು ಭಾರತಕ್ಕೆ ಅಕ್ರಮವಾಗಿ ಬಂದು ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ. ಸುಮಾರು ನಾಲ್ಕು ತಿಂಗಳಿನಿಂದ ಮುಂಬೈ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಂತರ ಮನೆಗೆಲಸದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಬಾರಿಗೆ ಸೈಫ್‌ ನಿವಾಸ ಪ್ರವೇಶಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದಲೇ ಆತ ಮನೆಗೆ ಪ್ರವೇಶಿಸಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆಯಲಾಗುವುದು. ನಂತರ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೇಳಿದರು.

    ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಳನ್ನು ಇಟ್ಟುಕೊಂಡು ಓಡಾಡುತ್ತಿದ್ದ.

  • ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅರೆಸ್ಟ್ – ಕೋಟಿ ಮೌಲ್ಯದ ಸಿಗರೇಟ್ ಸೀಜ್

    ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅರೆಸ್ಟ್ – ಕೋಟಿ ಮೌಲ್ಯದ ಸಿಗರೇಟ್ ಸೀಜ್

    ಬೆಂಗಳೂರು: ನಕಲಿ ಸಿಗರೇಟ್ (Fake Cigarettes) ಸರಬರಾಜು ಮಾಡುತ್ತಿದ್ದ ಕೇರಳ ಗ್ಯಾಂಗ್‌ವೊಂದನ್ನು (Kerala Gang) ಪೊಲೀಸರು ಬಂಧಿಸಿದ್ದು, ಕೋಟಿ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ.

    ಪ್ರತಿಷ್ಟಿತ ಲೈಟ್ಸ್ ಬ್ರ್ಯಾಂಡ್ ನಕಲು ಮಾಡಿ ಮಾರಾಟ ಮಾಡುತ್ತಿದ್ದ ಮೂರು ಲಕ್ಷ ಸಿಗರೇಟ್‌ಗಳನ್ನು ಸೀಜ್ ಮಾಡಲಾಗಿದೆ. ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    ನಿಶಾಂತ್, ಶಕೀಲ್, ಶಬ್ಬೀರ್ ಬಂಧಿತ ಆರೋಪಿಗಳು. ಕೇರಳ ಮೂಲದ ಬಂಧಿತ ಆರೋಪಿ ಶಕೀಲ್ ನಕಲಿ ಸಿಗರೇಟ್ ಜಾಲದ ಕಿಂಗ್ ಪಿನ್ ಆಗಿದ್ದ. ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಲೇಔಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.‌ ಇದನ್ನೂ ಓದಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಐಶ್ವರ್ಯಗೌಡ ಉಡುಗೊರೆಯಾಗಿ ಕೊಟ್ಟಿದ್ದ ಕಾರು ಸೀಜ್

  • ಬಾಂಗ್ಲಾ ಭಯೋತ್ಪಾದಕರು ಒಳನುಸುಳಲು BSF ಸಹಕಾರ: ದೀದಿ ಆರೋಪ

    ಬಾಂಗ್ಲಾ ಭಯೋತ್ಪಾದಕರು ಒಳನುಸುಳಲು BSF ಸಹಕಾರ: ದೀದಿ ಆರೋಪ

    – ಪ.ಬಂಗಾಳ ಅಸ್ಥಿರಗೊಳಿಸಲು ಕೇಂದ್ರದಿಂದ ತಂತ್ರ

    ಕೊಲ್ಕತ್ತಾ: ಪಶ್ಚಿಮ ಬಂಗಾಳ (West Bengal) ರಾಜ್ಯವನ್ನು ಅಸ್ಥಿರಗೊಳಿಸಲು ಕೇಂದ್ರ ಭದ್ರತಾ ಪಡೆಗಳು (BSF) ಬಾಂಗ್ಲಾದೇಶದ (Bangladesh) ಭಯೋತ್ಪಾದಕರನ್ನು ಒಳ ನುಸುಳಲು ಅವಕಾಶ ಮಾಡಿಕೊಡುತ್ತಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗಂಭೀರ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದ ಒಳನುಸುಳುವಿಕೆಯಿಂದ ಪಶ್ಚಿಮ ಬಂಗಾಳದಲ್ಲಿ ಶಾಂತಿ ಹಾಳಾಗುತ್ತಿದೆ ಎನ್ನುವ ಅಮಿತ್ ಶಾ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.

    ಆಡಳಿತಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶ ಭಯೋತ್ಪಾದಕರನ್ನು ಪಶ್ಚಿಮ ಬಂಗಾಳದೊಳಗೆ ನುಸುಳಲು ಅವಕಾಶ ನೀಡುವುದು ಕೇಂದ್ರ ಸರ್ಕಾರದ ಯೋಚಿತ ಪ್ರಯತ್ನವಾಗಿದೆ. ಇದರ ಭಾಗವಾಗಿ ಬಾಂಗ್ಲಾದೇಶದ ಗಡಿಯನ್ನು ಕಾಪಾಡುವ ಬಿಎಸ್‌ಎಫ್ ಬಂಗಾಳದೊಳಗೆ ಭಯೋತ್ಪಾದಕರು ನುಸುಳಲು ಅವಕಾಶ ನೀಡುತ್ತಿದೆ ಮತ್ತು ಮಹಿಳೆಯರನ್ನು ಹಿಂಸಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿರುವ ಎಲ್ಲಾ ಡಿಸಿಪಿಗಳಿಗೆ ಮೊಬೈಲ್‌ ಗಿಫ್ಟ್‌

    ಬಿಎಸ್‌ಎಫ್ ವಿವಿಧ ಪ್ರದೇಶಗಳಿಂದ ಬಂಗಾಳಕ್ಕೆ ಭಯೋತ್ಪಾದಕರು ನುಸುಳಲು ಅವಕಾಶ ನೀಡುತ್ತಿದೆ ಮತ್ತು ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿದೆ. ಟಿಎಂಸಿ ಗಡಿಯನ್ನು ಕಾಪಾಡುತ್ತಿಲ್ಲ, ಗಡಿ ನಮ್ಮ ಕೈಯಲ್ಲಿಲ್ಲ, ಆದ್ದರಿಂದ ಯಾರಾದರೂ ಟಿಎಂಸಿ ಒಳನುಸುಳುವಿಕೆಗೆ ಅನುಮತಿ ನೀಡಿದೆ ಎಂದು ಆರೋಪಿಸಿದರೆ, ಅದು ಬಿಎಸ್‌ಎಫ್‌ನದು ಎಂದು ನಾನು ಎತ್ತಿ ತೋರಿಸುತ್ತೇನೆ, ಅದು ನನ್ನ ಜವಾಬ್ದಾರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್‌

    ಬಿಎಸ್‌ಎಫ್ ಒಳನುಸುಳುವಿಕೆಗೆ ಅವಕಾಶ ನೀಡುವ ಸ್ಥಳಗಳನ್ನು ತನಿಖೆ ಮಾಡಲು ಮತ್ತು ಗುರುತಿಸಲು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚನೆ ನೀಡುತ್ತೇನೆ. ಪೊಲೀಸರ ಬಳಿ ಎಲ್ಲಾ ಮಾಹಿತಿ ಇದೆ. ಕೇಂದ್ರದ ಬಳಿಯೂ ಇದೆ. ರಾಜೀವ್ ಕುಮಾರ್ (ಡಿಜಿಪಿ) ಮತ್ತು ಸ್ಥಳೀಯ ಮೂಲಗಳಿಂದ ನನಗೆ ಈ ಮಾಹಿತಿ ಬಂದಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದರು. ಇದನ್ನೂ ಓದಿ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಅಂದಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ!

    ಬಂಗಾಳ ಮತ್ತು ನೆರೆಯ ಬಾಂಗ್ಲಾದೇಶದ ನಡುವೆ ಯಾವುದೇ ದ್ವೇಷವಿಲ್ಲ. ನಾವು ಶಾಂತಿ ಬಯಸುತ್ತೇವೆ. ಆದರೆ ಗೂಂಡಾಗಳನ್ನು ಇಲ್ಲಿ ಅನುಮತಿಸಲಾಗುತ್ತಿದೆ. ಅವರು ಅಪರಾಧಗಳನ್ನು ಮಾಡುತ್ತಾರೆ. ಬಳಿಕ ಗಡಿಗೆ ಹಿಂತಿರುಗುತ್ತಾರೆ. ಬಿಎಸ್‌ಎಫ್ ಇದನ್ನು ಸಕ್ರಿಯಗೊಳಿಸುತ್ತಿದೆ. ಇದರಲ್ಲಿ ಕೇಂದ್ರದ ಪಾತ್ರವಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಕೇಸ್ ರಾಜಕೀಯಗೊಳಿಸಲಾಗುತ್ತಿದೆ: ಮದ್ರಾಸ್ ಹೈಕೋರ್ಟ್

    ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಾಂಗ್ಲಾದೇಶದ ಒಳನುಸುಳುವಿಕೆಗೆ ಬಂಗಾಳ ನರ್ಸರಿಯಾಗಿದೆ ಎಂದು ಹೇಳಿದರು. ಅಪರಾಧ ಚಟುವಟಿಕೆಯಲ್ಲಿ ಯಾರು ಸಿಕ್ಕಿಬೀಳುತ್ತಾರೋ ಅವರು ಬಾಂಗ್ಲಾದೇಶೀಯರು ಮತ್ತು ಅವರ ಹೆಚ್ಚಿನ ವಿಳಾಸಗಳು ಬಂಗಾಳದವು. ಮಮತಾ ದೀದಿ ಮತದ ದುರಾಸೆಯಿಂದ ಇದೆಲ್ಲವನ್ನೂ ಮಾಡುತ್ತಿದ್ದಾರೆ ಮತ್ತು ಬಂಗಾಳವನ್ನು ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾಗಳ ಹೆಬ್ಬಾಗಿಲು ಮಾಡುತ್ತಿದ್ದಾರೆ. ಈ ನಡುವೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ ಮತ್ತು ಇಡೀ ಜಗತ್ತು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ಕಾನೂನು ರದ್ದಾಗೋವರೆಗೂ ಹೋರಾಟ: ಯತ್ನಾಳ್

  • ಬಾಂಗ್ಲಾ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ವಜಾ

    ಬಾಂಗ್ಲಾ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ವಜಾ

    ನವದೆಹಲಿ: ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿ ಢಾಕಾ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿಯವರ  (Chinmoy Das) ಜಾಮೀನು ಅರ್ಜಿಯನ್ನು ನ್ಯಾಯಾಲಯ (Court) ತಿರಸ್ಕರಿಸಿದೆ.

    ಜಾಮೀನು ಕೋರಿ ಚಟ್ಟೋಗ್ರಾಮ್‌ ನ್ಯಾಯಾಲಯಕ್ಕೆ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅರ್ಜಿ ಸಲ್ಲಿಸಿದ್ದರು. ಢಾಕಾದಿಂದ ಬಂದಿದ್ದ ಸುಪ್ರೀಂಕೋರ್ಟ್‌ನ 11 ವಕೀಲರ ತಂಡವು ಅರ್ಧಗಂಟೆಗೂ ಹೆಚ್ಚು ಕಾಲ‌ ವಾದ ಮಂಡಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯಾಧೀಶ ಎಂ.ಡಿ ಸೈಫುಲ್ ಇಸ್ಲಾಂ ಅವರಿದ್ದ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

    ನಾವು ನ್ಯಾಯಾಲಯದ ಮುಂದೆ ನಮ್ಮ ವಾದವನ್ನು ಮಂಡಿಸಿದ್ದೇವೆ. ಆದರೆ ಪ್ರಾಸಿಕ್ಯೂಷನ್ ಜಾಮೀನನ್ನು ವಿರೋಧಿಸಿತು. ಈ ಹಿನ್ನಲೆ ನ್ಯಾಯಾಲಯವು ಜಾಮೀನು ತಿರಸ್ಕರಿಸಿದೆ. ನಾವು ಉನ್ನತ ನ್ಯಾಯಾಲಯಕ್ಕೆ ತೆರಳಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಬಾಂಗ್ಲಾದೇಶದ ಮಾಜಿ ಡೆಪ್ಯುಟಿ ಅಟಾರ್ನಿ ಜನರಲ್ ಅಪುರ್ಬಾ ಕುಮಾರ್ ಭಟ್ಟಾಚಾರ್ಯ ತಿಳಿಸಿದ್ದಾರೆ.

    ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ಸರ್ಕಾರ ಪತನದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿ ನಡೆಯುತ್ತಿದೆ. ಇದರ ವಿರುದ್ಧ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಹಿಂದೂಗಳ ಪರ ಧ್ವನಿ ಎತ್ತಿದ್ದರು.

    ದಾಸ್ ಅವರನ್ನು ಢಾಕಾ ಪೊಲೀಸ್ ಡಿಟೆಕ್ಟಿವ್ ಬ್ರಾಂಚ್ ನ.25 ರಂದು ದೇಶದ್ರೋಹದ ಆರೋಪದಡಿ ಬಂಧಿಸಿತ್ತು. ದಾಸ್ ಬಂಧನದ ನಂತರ ಅವರ ಜಾಮೀನು ಅರ್ಜಿಯನ್ನು ಚಿತ್ತಗಾಂಗ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನ.26 ರಂದು ತಿರಸ್ಕರಿಸಿತ್ತು. ನ.29 ರಂದು ದಾಸ್ ಅವರನ್ನು ಜೈಲಿನಲ್ಲಿ ಭೇಟಿಯಾಗಲು ಹೋದ ಇಬ್ಬರು ಸನ್ಯಾಸಿಗಳನ್ನು ಸಹ ಜೈಲಿಗೆ ಹಾಕಲಾಗಿದೆ.