Tag: Bangla Migrants

  • ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಕ್ಕೆ ಬಾಂಗ್ಲಾ ವಲಸಿಗರ ಅಸಮಾಧಾನ

    ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಕ್ಕೆ ಬಾಂಗ್ಲಾ ವಲಸಿಗರ ಅಸಮಾಧಾನ

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ ಗಳ ಸುಮಾರು 7 ಸಾವಿರ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭಾರತ ಬಾಂಗ್ಲಾ ವಿಭಜನೆ ಬಳಿಕ ಹಿಂಸೆಗೊಳಗಾದ ಬಾಂಗ್ಲಾ ದೇಶದ ಹಿಂದೂಗಳು 1970ರಲ್ಲಿ ಭಾರತಕ್ಕೆ ವಲಸೆ ಬಂದರು. ಆಗಿನ ಸರ್ಕಾರ ನಿರಾಶ್ರಿತರ ಯೋಜನೆಯಡಿ ಪೌರತ್ವ ನೀಡಿ ದೇಶದಲ್ಲಿ ಆಶ್ರಯ ನೀಡಿತ್ತು. ಆದ್ರೆ ಬಾಂಗ್ಲಾದೇಶದಲ್ಲಿದ್ದ ಆಸ್ತಿ ಆಸೆ ಹಾಗೂ ಇನ್ನಿತರ ಕಾರಣಗಳಿಗೆ ಅಲ್ಲೆ ಉಳಿದು 1971ರ ಬಳಿಕ ಭಾರತಕ್ಕೆ ವಲಸೆ ಬಂದವರಿಗೆ ಇದುವರೆಗೂ ಪೌರತ್ವ ನೀಡಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಈಗ ಅವರೆಲ್ಲಾ ಭಾರತೀಯರಾಗುತ್ತಿದ್ದಾರೆ.

    ಇನ್ನೂ ಪೌರತ್ವ ಹೊಂದಿದ ಸೆಟ್ಲರ್ ಹಾಗೂ ಪೌರತ್ವಯಿಲ್ಲದ ಅನ್ ಸೆಟ್ಲರ್ ಕುಟುಂಬಗಳ ನಡುವೆ ಮದುವೆ ಸಂಬಂಧ ಬೆಳೆದಿದ್ದು ಇಲ್ಲಿ ಹುಟ್ಟುವ ಮಕ್ಕಳು ಪೌರತ್ವ ಪಡೆಯಲು ಅನರ್ಹರಾಗಿದ್ದರು. ತಾಯಿ ಭಾರತೀಯಳಾದರು ಮಕ್ಕಳು ಅಕ್ರಮ ವಲಸಿಗರಾಗಿ ಯಾವುದೇ ಸೌಲಭ್ಯ ಇಲ್ಲದೆ ಬದುಕುತ್ತಿದ್ದರು. ಸುಮಾರು 40 ವರ್ಷಗಳಿಂದ ಪೌರತ್ವವೇ ಇಲ್ಲದೆ ವಾಸಿಸುತ್ತಿದ್ದ ಈ ಜನ ಎನ್‍ಆರ್ ಸಿ ಕಾಯ್ದೆ ಜಾರಿಯಾದ್ರೆ ನಮ್ಮನ್ನು ದೇಶದಿಂದ ಹೊರ ಹಾಕುತ್ತಾರೆ ಅನ್ನೋ ಭೀತಿಯಲ್ಲಿ ಕಾಲಕಳೆಯುತ್ತಿದ್ದರು ಈಗ ನಿರುಮ್ಮಳರಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ಅನ್ಯಾಯವಾಗಲ್ಲ ಅದ್ರೆ ಕೆಲವರು ಅನಾವಶ್ಯಕವಾಗಿ ಪ್ರತಿಭಟನೆ ನಡೆಸಿದ್ದಾರೆ ಅಂತ ಬಾಂಗ್ಲಾ ವಲಸಿಗ ಆರ್ ಎಚ್ ಕ್ಯಾಂಪ್ -2 ರ ನಿವಾಸಿ ಸುಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.

    1970-71 ರಲ್ಲಿ 721 ಕುಟುಂಬಗಳ 4000 ಸಾವಿರ ಜನ ವಲಸೆ ಬಂದಿದ್ರು ಅವರೆಲ್ಲರಿಗೂ ಪೌರತ್ವ ಸಿಕ್ಕಿತ್ತು. ಅಲ್ಲದೆ ಬಾಂಗ್ಲಾ ನಿರಾಶ್ರಿತರಿಗಾಗಿ 5,518 ಎಕರೆ ಜಮೀನು ಮೀಸಲಿಟ್ಟು ಪ್ರತಿ ಕುಟುಂಬಕ್ಕೆ ಐದು ಎಕರೆ ಜಮೀನು, ನಿವೇಶನ, ಗುಡಿಸಲು ಸೇರಿ ಇತರೆ ಸೌಲಭ್ಯ ಒದಗಿಸಲಾಗಿತ್ತು. ಈಗ ಇಲ್ಲಿ ವಾಸ ಮಾಡುವ ಸುಮಾರು 12 ಸಾವಿರ ಜನರಿಗೆ ಪೌರತ್ವಯಿದೆ. ಆದ್ರೆ 1971ರ ಬಳಿಕ 1990 ರವರೆಗೆ ವಲಸೆ ಬಂದ ಸುಮಾರು 250 ಕುಟುಂಬಗಳ 3 ಸಾವಿರ ಜನ ಅಕ್ರಮವಾಗಿ ವಾಸಿಸುತ್ತಿದ್ದರು. ಈಗ ಅವರ ಸಂಖ್ಯೆ 7 ಸಾವಿರ ದಾಟಿದೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಿರ್ಧಾರದಿಂದ ನೆಲೆ ಕಂಡ ಖುಷಿಯಲ್ಲಿದ್ದಾರೆ.

  • ಪೌರತ್ವ ವಿಧೇಯಕ ತಿದ್ದುಪಡಿ- ಖುಷಿಯಾದ ರಾಯಚೂರಿನ ಬಾಂಗ್ಲಾ ವಲಸಿಗರು

    ಪೌರತ್ವ ವಿಧೇಯಕ ತಿದ್ದುಪಡಿ- ಖುಷಿಯಾದ ರಾಯಚೂರಿನ ಬಾಂಗ್ಲಾ ವಲಸಿಗರು

    ರಾಯಚೂರು: ಇಡೀ ದೇಶದಲ್ಲಿ ಪೌರತ್ವ ವಿಧೇಯಕ ತಿದ್ದುಪಡಿ ಬಗ್ಗೆ ಚರ್ಚೆ ನಡೆಯುತ್ತಿದೆ. ಪರ-ವಿರೋಧಗಳೇನೆ ಇದ್ರೂ ಮಸೂದೆಯ ಲಾಭ ಪಡೆಯುತ್ತಿರುವ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿರುವ ಬಾಂಗ್ಲಾ ವಲಸಿಗರು ಪ್ರತಿನಿತ್ಯ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಪೌರತ್ವಯಿಲ್ಲದೆ ಸೌಲಭ್ಯ ವಂಚಿರಾಗಿದ್ದ ಸಾವಿರಾರು ಜನ ಈಗ ಖುಷಿಯಾಗಿದ್ದಾರೆ.

    ಇಲ್ಲಿನ ಐದು ನಿರಾಶ್ರಿತ ಕ್ಯಾಂಪ್ ಗಳಲ್ಲಿರುವ 15 ಸಾವಿರಕ್ಕೂ ಹೆಚ್ಚು ಜನ ಬಾಂಗ್ಲಾದೇಶದಿಂದ ವಲಸೆ ಬಂದವರು. ಕೇಂದ್ರ ಸರ್ಕಾರದ ಪೌರತ್ವ ವಿಧೇಯಕ ತಿದ್ದುಪಡಿ ಅಂಗೀಕಾರವಾಗಿರುವುದರಿಂದ ಇವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಭಾರತ ಬಾಂಗ್ಲಾ ದೇಶ ವಿಭಜನೆ ಬಳಿಕ 1971 ರಲ್ಲಿ ಭಾರತಕ್ಕೆ ಬಂದ ವಲಸಿಗರಿಗೆ ಅಂದಿನ ಸರ್ಕಾರ ಭಾರತ ಪೌರತ್ವವನ್ನ ನೀಡಿ ಸಿಂಧನೂರು ತಾಲೂಕಿನಲ್ಲಿ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ ಪುನರ್ವಸತಿ ಯೋಜನೆ ಮುಗಿದ ಮೇಲೆ ಬಂದ ಸಾವಿರಾರು ಜನ ವಲಸಿಗರಿಗೆ ಇದುವರೆಗೆ ದೇಶದ ಪೌರತ್ವ ಕೊಟ್ಟಿಲ್ಲ. ಹೀಗಾಗಿ ಇಲ್ಲಿನ ಸುಮಾರು 5 ಸಾವಿರ ಜನ ದೇಶದ ಸೌಲಭ್ಯಗಳಿಗಾಗಿ ಹೋರಾಟ ನಡೆಸಿದ್ದರು. ಆದ್ರೆ ಈಗ ವಲಸಿಗರಿಗೆ ಭಾರತ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಸಂತೋಷಗೊಂಡಿದ್ದಾರೆ.

    ಭಾರತ ವಿಭಜನೆಯಾದಾಗ ಬಾಂಗ್ಲಾದಲ್ಲಿದ್ದ ಹಿಂದೂಗಳನ್ನು ಬಾಂಗ್ಲಾದೇಶದಿಂದ ಹೊರ ಹಾಕಲಾಯಿತು. ಈ ವೇಳೆ ಅಂದಿನ ಪ್ರಧಾನ ಮಂತ್ರಿಗಳು ಸಿಂಧನೂರು ತಾಲೂಕಿನಲ್ಲಿ ವಲಸಿಗರಿಗೆ 3 ಎಕರೆ ಭೂಮಿ ಹಾಗು ನಿವೇಶನ, ಅವರು ಸೆಟ್ಲ್ ಆಗುವವರಿಗೂ ಊಟ ನೀಡಿತ್ತು. ನಂತರದಲ್ಲಿ ಬಂದವರು ಅನ್ ಸೆಟ್ಲರ್ ಗಳಾಗಿ ಉಳಿದಿದ್ದರು. ಸುಮಾರು 40 ವರ್ಷಗಳಿಂದ ಪೌರತ್ವವೇ ಇಲ್ಲದೆ ವಾಸಿಸುತ್ತಿದ್ದ ಈ ಜನ ಎನ್‍ಆರ್ ಸಿ ಕಾಯ್ದೆ ಜಾರಿಯಾದ್ರೆ ನಮ್ಮನ್ನು ದೇಶದಿಂದ ಹೊರ ಹಾಕುತ್ತಾರೆ ಅನ್ನೋ ಭೀತಿಯಲ್ಲಿ ಬದುಕುತ್ತಿದ್ದರು. ಈಗ ಕೇಂದ್ರ ಸರ್ಕಾರದ ನಿರ್ಧಾರದಿಂದ ನೆಲೆ ಕಂಡಂತಾಗಿದೆ ಅಂತ ಬಾಂಗ್ಲಾ ವಲಸಿಗ ಕಲ್ಯಾಣಕುಮಾರ್ ಖುಷಿ ವ್ಯಕ್ತಪಡಿಸಿದ್ದಾರೆ.

    ಭಾರತದಲ್ಲಿದ್ದರೂ ಭಾರತೀಯರಾಗದೆ ಕಳ್ಳರಂತೆ ಬದುಕುತ್ತಿದ್ದವರು ಈಗ ಭಾರತೀಯ ಪ್ರಜೆಗಳಾಗುತ್ತಿದ್ದಾರೆ. ಏನೇ ಗೊಂದಲಗಳು, ಸಮಸ್ಯೆಗಳಿದ್ದರು ಸರಿಪಡಿಸಿ ಭಾರತೀಯ ಪೌರತ್ವ ಪ್ರಮಾಣ ಪತ್ರ ಶೀಘ್ರದಲ್ಲಿ ನೀಡಬೇಕು ಅಂತ ಬಾಂಗ್ಲಾ ವಲಸಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಎನ್ಆರ್‌ಸಿ ರಾಷ್ಟ್ರಾದ್ಯಂತ ವಿಸ್ತರಣೆ- ಸಂಸತ್‍ನಲ್ಲಿ ಅಮಿತ್ ಶಾ ಘೋಷಣೆ

    ಎನ್ಆರ್‌ಸಿ ರಾಷ್ಟ್ರಾದ್ಯಂತ ವಿಸ್ತರಣೆ- ಸಂಸತ್‍ನಲ್ಲಿ ಅಮಿತ್ ಶಾ ಘೋಷಣೆ

    ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

    ರಾಜ್ಯಸಭೆಯಲ್ಲಿ ಬುಧವಾರ ಎನ್ಆರ್‌ಸಿ ಕುರಿತ ಚರ್ಚೆಯ ಸಂದರ್ಭದಲ್ಲಿ ಇದನ್ನು ಘೋಷಿಸಿದ್ದು, ಎನ್ಆರ್‌ಸಿಯನ್ನು ರಾಷ್ಟ್ರವ್ಯಾಪಿ ನಡೆಸಲಾಗುವುದು. ಯಾವುದೇ ಧರ್ಮವನ್ನು ಲೆಕ್ಕಿಸದೆ ಎಲ್ಲ ನಾಗರಿಕರು ಈ ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಗಿಂತ ಇದು ಭಿನ್ನವಾಗಿದೆ. ಹೀಗಾಗಿ ರಾಷ್ಟ್ರಾದ್ಯಂತ ಎನ್ಆರ್‌ಸಿಯನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

    ಎನ್ಆರ್‌ಸಿಗೆ ಯಾವುದೇ ನಿಬಂಧನೆಗಳಿಲ್ಲ, ಎನ್ಆರ್‌ಸಿ ಅಡಿಯಲ್ಲಿ ಯಾವುದೇ ಧರ್ಮಗಳು ಬರುವುದಿಲ್ಲ. ಭಾರತದ ಎಲ್ಲ ನಾಗರಿಕರು, ಧರ್ಮವನ್ನು ಲೆಕ್ಕಿಸದೆ ಎನ್ಆರ್‌ಸಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಪೌರತ್ವ ತಿದ್ದುಪಡಿ ಮಸೂದೆಗಿಂತ ಇದು ಭಿನ್ನವಾಗಿದೆ ಎಂದು ಅಮಿತ್ ಶಾ ಸಂಸತ್‍ನಲ್ಲಿ ಸ್ಪಷ್ಟಪಡಿಸಿದರು.

    ಕರಡು ಪಟ್ಟಿಯಲ್ಲಿ ಯಾರ ಹೆಸರು ಕಾಣಿಸಿಕೊಂಡಿಲ್ಲವೋ ಅವರು ನ್ಯಾಯಮಂಡಳಿಗೆ ಹೋಗುವ ಹಕ್ಕನ್ನು ಹೊಂದಿದ್ದಾರೆ ಎಂದು ಇದೇ ವೇಳೆ ಶಾ ಮನವರಿಕೆ ಮಾಡಿದರು.

    ಎನ್ಆರ್‌ಸಿ ಪಟ್ಟಿಯಿಂದ ಹೆಸರು ಕಾಣೆಯಾಗಿರುವವರು ಅಸ್ಸಾಂನಾದ್ಯಂತ ತಹಶೀಲ್ದಾರ್ ಮಟ್ಟದಲ್ಲಿ ರಚಿಸಲಾಗಿರುವ ನ್ಯಾಯ ಮಂಡಳಿಗಳನ್ನು ಸಂಪರ್ಕಿಸಬಹುದು. ನ್ಯಾಯಮಂಡಳಿಯನ್ನು ಸಂಪರ್ಕಿಸಲು ಹಣವಿಲ್ಲದಿದ್ದರೆ, ವಕೀಲರನ್ನು ನೇಮಿಸಿಕೊಳ್ಳುವ ವೆಚ್ಚವನ್ನು ಅಸ್ಸಾಂ ಸರ್ಕಾರ ಭರಿಸಲಿದೆ ಎಂದು ಇದೇ ವೇಳೆ ತಿಳಿಸಿದರು. ಈ ಮೂಲಕ ಅಸ್ಸಾಂನಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆದರು.

    ಅಸ್ಸಾಂನಲ್ಲಿ ಎನ್ಆರ್‌ಸಿ ಕುರಿತು ಗೊಂದಲ ಉಂಟಾಗಿದ್ದು, ನವೀಕರಿಸಿದ ಅಂತಿಮ ಎನ್ಆರ್‌ಸಿ ಪಟ್ಟಿಯಲ್ಲಿ 19 ಲಕ್ಷಕ್ಕೂ ಅಧಿಕ ಅರ್ಜಿದಾರರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಲಾಗಿದೆ.

    ಅಕ್ರಮವಾಗಿ ವಲಸೆ ಬಂದವರನ್ನು ಪ್ರಮುಖವಾಗಿ ಮಾರ್ಚ್ 25, 1971ರಂದು ಬಾಂಗ್ಲಾದೇಶದಿಂದ ಅಸ್ಸಾಂಗೆ ಪ್ರವೇಶಿಸಿ, ಇಲ್ಲಿಯೇ ನೆಲೆಸಿದ್ದಾರೆ. ಅಂತಹವರನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಉದ್ದೇಶವನ್ನು ಎನ್‍ಆರ್‍ಸಿ ಹೊಂದಿದೆ.