Tag: bangkok

  • ಥಾಯ್ಲೆಂಡ್ ಓಪನ್ ಸೀರಿಸ್ ಫೈನಲ್‍ನಲ್ಲಿ ಎಡವಿದ ಪಿವಿ ಸಿಂಧು

    ಥಾಯ್ಲೆಂಡ್ ಓಪನ್ ಸೀರಿಸ್ ಫೈನಲ್‍ನಲ್ಲಿ ಎಡವಿದ ಪಿವಿ ಸಿಂಧು

    ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಜಪಾನ್‍ನ ನೊಝೊಮಿ ಓಕುಹಾರ ವಿರುದ್ಧ ಸೋಲುಂಡಿದ್ದು, ಈ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿರಾದರು.

    ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‍ನಲ್ಲಿ ಜಪಾನ್‍ನ ನೊಝೊಮಿ ಓಕುಹಾರ ಮುಂದೆ 15-21, 18-21ರ ಅಂತರದಲ್ಲಿ ಸಿಂಧು ಸೋಲುಂಡರು. ಅಲ್ಲದೇ ವಿಶ್ವ 29ನೇ ಶ್ರೇಯಾಂಕ ಪಡೆದಿರುವ ನೊಝೊಮಿ ವಿರುದ್ಧ ವಿಶ್ವ 3ನೇ ಶ್ರೇಯಾಂಕ ಹೊಂದಿರುವ ಸಿಂಧೂ ಹಿನ್ನಡೆ ಅನುಭವಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

    ಪಂದ್ಯದ ಆರಂಭದಿಂದಲೂ ತಮ್ಮದೇ ತಪ್ಪುಗಳನ್ನು ಪುನರಾವರ್ತಿಸಿದ ಸಿಂಧು ಎರಡನೇ ಸೆಟ್ ನಲ್ಲಿ ಅಲ್ಪ ಮುನ್ನಡೆ ಪಡೆದರೂ, ಅಂತಿಮವಾಗಿ ಸೋಲುವ ಮೂಲಕ ಎದುರಾಳಿಗೆ ಮಣಿದರು. ಅಂದಹಾಗೇ 2017ರ ವಿಶ್ವ ಚಾಂಪಿಯನ್ ಶಿಪ್‍ನಲ್ಲೂ ಸಿಂಧೂ, ಓಕುಹಾರ ಎದುರು ಸೋಲುಂಡಿದ್ದರು.

    ಥಾಯ್ಲೆಂಡ್ ಓಪನ್ ಸಿಥಾಯ್ಲೆಂಡ್ ಓಪನ್ ಸೀರಿಸ್ ಕ್ವಾಟರ್ ಫೈನಲ್ ನಲ್ಲಿ ಮಲೇಷಿಯಾದ ಸೊನಿಯಾ ಚೆಹಾ ವಿರುದ್ಧ ಹಿಂದಿಕ್ಕಿ ಫೈನಲ್ ಪ್ರವೇಶಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಸಿಂಧು ಕಾಮನ್‍ವೆಲ್ತ್ ಗೇಮ್ಸ್ ಸೇರಿದಂತೆ ಇಂಡಿಯಾ ಓಪನ್ ಫೈನಲ್ ನಲ್ಲಿ ಸೋಲುಂಡಿದ್ದರು.

  • ಆನೆಯನ್ನ ಟಚ್ ಮಾಡಲು ಹೋದ್ರೆ, ಸೊಂಡಿಲೂನಿಂದ ಹೊಡೆದು ಬೀಳಸ್ತು- ವಿಡಿಯೋ ವೈರಲ್

    ಆನೆಯನ್ನ ಟಚ್ ಮಾಡಲು ಹೋದ್ರೆ, ಸೊಂಡಿಲೂನಿಂದ ಹೊಡೆದು ಬೀಳಸ್ತು- ವಿಡಿಯೋ ವೈರಲ್

    ಬ್ಯಾಂಕಾಕ್: ವ್ಯಕ್ತಿಯೊಬ್ಬ ಆನೆಯನ್ನು ಮುಟ್ಟಲು ಹೋಗಿ ಅದರ ಸೊಂಡಿಲೂನಿಂದ ಹೊಡಿಸಿಕೊಂಡ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ.

    ಕೋಡಿ ಸ್ಟಿನರ್ ಆನೆ ದಾಳಿಗೊಳಗಾದ ವ್ಯಕ್ತಿ. ಕೋಡಿ ಆನೆಗೆ ಆಹಾರವಾಗಿ ಅಲ್ಲಿದ ಎಲೆಗಳನ್ನು ನೀಡುತ್ತಿದ್ದನು. ಆಗ ಆನೆ ಕೆಲವೇ ಕ್ಷಣಗಳಲ್ಲಿ ತನ್ನ ಸೊಂಡಿಲೂನಿಂದ ಕೋಡಿಯನ್ನು ಕೆಳಗೆ ಬೀಳಿಸಿದೆ. ಆನೆ ದಾಳಿಯಿಂದ ಕೋಡಿ ಬಚಾವ್‍ಯಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂಬುದು ತಿಳಿದು ಬಂದಿದೆ.

    ಆನೆ ತನ್ನ ಮೇಲೆ ಎಲ್ಲಿ ಕಾಲು ಇಟ್ಟು ಕೊಲ್ಲುತ್ತದೋ ಎಂದು ಕೋಡಿ ಭಯಬೀತನಾಗಿ ಅಲ್ಲಿಂದ ಓಡಿ ಹೋಗಿದ್ದಾನೆ. ಸದ್ಯ ಆನೆ ಕೋಡಿ ಮೇಲೆ ದಾಳಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ನ್ಯಾಷನಲ್ ಜಿಯೋಗ್ರಾಫಿ ಚಾನಲ್ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 500 ಮಂದಿ ಆನೆ ದಾಳಿಯಿಂದ ಸಾವನ್ನಪ್ಪುತ್ತಿದ್ದಾರೆ.

  • ಕಾರ್ ಎಂಜಿನ್ ನಿಂದ ಹೊರ ಬಂದ 12 ಅಡಿ ಉದ್ದದ ಹೆಬ್ಬಾವು – ವಿಡಿಯೋ ವೈರಲ್

    ಕಾರ್ ಎಂಜಿನ್ ನಿಂದ ಹೊರ ಬಂದ 12 ಅಡಿ ಉದ್ದದ ಹೆಬ್ಬಾವು – ವಿಡಿಯೋ ವೈರಲ್

    ಬ್ಯಾಂಕಾಕ್: ಕಾರ್ ಎಂಜಿನ್ ನಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.

    ಕಾರಿನ ಚಾಲಕ ಟೀ ನಟ್ವಿಜಿತ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಕಾರು ನಿಂತು ಹೋಗಿದೆ. ಆಗ ಕಾರಿಗೆ ಏನು ಸಮಸ್ಯೆಯಾಗಿರಬಹುದು ಎಂದು ಯೋಚಿಸುತ್ತಿದ್ದರು. ಆಗ ಕಾರಿನ ಬಾನೆಟ್ ನಲ್ಲಿ ಬೃಹತ್ ಆಕಾರದ ಹೆಬ್ಬಾವಿನ ಬಾಲ ಕಂಡು ಬಂದಿದ್ದು, ಅದನ್ನು ಜನ ನೋಡಿದ್ದಾರೆ.

    ನಟ್ವಿಜಿತ್ ತನ್ನ ಕಾರಿನ ಮುಂಭಾಗದ ಬಾನೆಟ್ ತೆರೆದು ನೋಡಿದಾಗ ಅದರಲ್ಲಿ ಹೆಬ್ಬಾವು ಮಲಗಿದ್ದನ್ನು ನೋಡಿದ್ದಾರೆ. ನಂತರ ಕೂಡಲೇ ಸ್ಥಳೀಯ ಪ್ರಾಣಿ ನಿರ್ವಹಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಪ್ರಾಣಿ ನಿರ್ವಹಣಾಧಿಕಾರಿ ಸ್ಥಳಕ್ಕೆ ಬಂದು ಬಾನೆಟ್ ತೆಗೆದು ನೋಡಿದಾಗ 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದೆ. ಬಳಿಕ ಪ್ರಾಣಿ ನಿರ್ವಹಣಾಕಾರರು ಅದನ್ನು ಒಂದು ಹ್ಯಾಂಡ್ಲಿಂಗ್ ಸ್ಟಿಕ್ ಹಾಕಿ ಎಂಜಿನ್  ನಿಂದ ಹೊರಗೆ ತೆಗೆದಿದ್ದಾರೆ ಈ ಎಲ್ಲಾ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

    ಎಂಜಿನ್ ನಲ್ಲಿ ಅವಿತು ಮಲಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಬಳಿಕ ಅದನ್ನು ಒಂದು ಚೀಲದಲ್ಲಿ ತುಂಬಿ ಕಾಡಿಗೆ ಬಿಡಲಾಗಿದೆ ಎಂದು ಪ್ರಾಣಿ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

    ನಮ್ಮ ಮನೆಯಲ್ಲಿ ಇತ್ತೀಚಿಗೆ ಸಾಕಷ್ಟು ಕೋಳಿಗಳು ಒಂದೊಂದರಂತೆ ಕಾಣೆಯಾಗುತ್ತಿತ್ತು. ಬಹುಶಃ ಈ ಹಾವು ತಿಂದಿರಬಹುದು ಎಂದು ಕಾರ್ ಮಾಲೀಕರು ಆರೋಪಿಸಿದ್ದಾರೆ. ಆದರೆ ನಾನು ಹೆಬ್ಬಾವು ಇಲ್ಲಿರುತ್ತದೆ ಎಂದು ಭಾವಿಸಿರಲಿಲ್ಲ ಎಂದು ಮಾಲೀಕ ಟೀ ಹೇಳಿದ್ದಾರೆ.

    ಭಾರೀ ಮಳೆಯಾದಾಗ ಮತ್ತು ಹವಾಮಾನವು ತಂಪಾಗಿರುವಾಗ ಹಾವುಗಳು ಬೆಚ್ಚಗಿನ ಸ್ಥಳಗಳನ್ನು ಹುಡುಕುತ್ತವೆ. ಅದೇ ರೀತಿ ಕಾರ್ ಎಂಜಿನ್ ನಲ್ಲಿ ಬಂದು ಮಲಗಿದೆ. ಆದರೆ ಜನರು ಕಾರನ್ನು ಚಲಾಯಿಸುವ ಮೊದಲು ಪರೀಕ್ಷಿಸಬೇಕು ಎಂದು ಪ್ರಾಣಿ ನಿರ್ವಹಣಾಧಿಕಾರಿ ಹೇಳಿದ್ದಾರೆ.

  • ಗರ್ಭಿಣಿ ಕೋತಿಗೆ ಕಾರು ಡಿಕ್ಕಿ – ಸಿಸೇರಿಯನ್ ಮಾಡಿ ಮರಿಕೋತಿ ಹೊರತೆಗೆದ ಮಹಿಳೆ!

    ಗರ್ಭಿಣಿ ಕೋತಿಗೆ ಕಾರು ಡಿಕ್ಕಿ – ಸಿಸೇರಿಯನ್ ಮಾಡಿ ಮರಿಕೋತಿ ಹೊರತೆಗೆದ ಮಹಿಳೆ!

    ಬ್ಯಾಂಕಾಕ್: ಕಾರ್ ಅಪಘಾತವಾಗಿ ಕೋತಿಯೊಂದು ಸಾವನ್ನಪ್ಪಿದ್ದು, ಅದರ ಹೊಟ್ಟೆಯಲ್ಲಿ ಇದ್ದ ಮರಿಕೋತಿಯನ್ನು ಮಹಿಳೆಯೊಬ್ಬರು ಸಿಸೇರಿಯನ್ ಮಾಡಿ ಹೊರತೆಗೆದ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದಿದೆ.

    ಪದತಾಮ ಕೆದಕುರಿಯಾನನ್(36) ಕೋತಿಮರಿಯನ್ನು ರಕ್ಷಿಸಿದ ಮಹಿಳೆ. ಘಟನೆ ಹೇಗಾಯ್ತು ಎಂದು ವಿವರಿಸಿದ ಅವರು, ನಾಕೌನ್ ಸಾವನ್ ಪ್ರದೇಶದಲ್ಲಿರುವ ದೇವಾಲಯದ ಬಳಿ ಗರ್ಭಿಣಿ ಕೋತಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಆಗ ನಾನು ಓಡಿಬಂದು ನೋಡಿದ್ದಾಗ ತಾಯಿ ಸಾವನ್ನಪ್ಪಿತ್ತು. ಆ ಕ್ಷಣ ಮರಿಯನ್ನು ಕಾಪಾಡಬೇಕು ಇಲ್ಲವೆಂದರೆ ಮರಿ ಕೂಡ ತನ್ನ ತಾಯಿಯ ಹೊಟ್ಟೆಯಲ್ಲೇ ಸಾವನ್ನಪ್ಪುತ್ತದೆ ಎಂದು ತಿಳಿದು ಮರಿಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.

    ನಾನು ಸಿಸೇರಿಯನ್ ಮಾಡುವಾಗ ಸಂಬಂಧಿಯೊಬ್ಬರು ತನ್ನ ಮೊಬೈಲಿನಲ್ಲಿ ಅದನ್ನು ವಿಡಿಯೋ ಮಾಡುತ್ತಿದ್ದರು. ಕೋತಿಮರಿಯ ತಲೆ ಹೊರಬರುತ್ತಿದ್ದಂತೆ ನಮಗೆ ಖುಷಿಯಾಯಿತ್ತು. ನಾನು ಕೋತಿಯ ಹೊಟ್ಟೆ ಭಾಗ ಮಾಡಿ ಮರಿಯನ್ನು ಹೊರತೆಗೆದೆ. ಆದರೆ ಅದು ಉಸಿರಾಡುತ್ತಿರಲಿಲ್ಲ. ತಕ್ಷಣ ಮರಿಯ ಎದೆ ಮೇಲೆ ಹೊಡೆದೆ ಹಾಗೂ ಅದರ ಬಾಯಿಗೆ ಗಾಳಿಯನ್ನು ಊದಿದೆ ಎಂದು ಪದತಾಮ ಹೇಳಿದ್ದಾರೆ.

    ಸದ್ಯ ಆ ಕೋತಿಮರಿ ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲಿಯೇ ಮಲಗುತ್ತದೆ. ಮರಿ ಬೆಳೆದು ದೊಡ್ಡದಾಗುವವರೆಗೂ ನಾನು ಅದನ್ನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಸಿಸೇರಿಯನ್ ಮಾಡಲು ಧೈರ್ಯ ಹೇಗೆ ಬಂತು ಎಂದು ಕೇಳಿದ್ದಕ್ಕೆ, ನನ್ನ ಹೊಟ್ಟೆಯಿಂದ ಮಗುವನ್ನು ವೈದ್ಯರು ಸಿಸೇರಿಯನ್ ಮಾಡಿ ತೆಗೆದಿದ್ದರು. ಈ ವಿಚಾರ ನೆನಪಾಗಿ ನಾನು ಯಾಕೆ ಮಾಡಬಾರದು ಎಂದು ಪ್ರಯತ್ನಿಸಿದೆ. ಅದೃಷ್ಟಕ್ಕೆ ಮರಿ ಕೋತಿ ಜೀವಂತವಾಗಿ ಹೊರ ಬಂತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

  • ಪ್ರವಾಸಿಗರ ಬಳಿ ಕಿತ್ತುಕೊಂಡ ಕಾಫಿ ಕುಡಿದು 10 ಗಂಟೆ ಕಾಲ ಪ್ರಜ್ಞೆತಪ್ಪಿತು 6 ತಿಂಗಳ ಕೋತಿಮರಿ

    ಪ್ರವಾಸಿಗರ ಬಳಿ ಕಿತ್ತುಕೊಂಡ ಕಾಫಿ ಕುಡಿದು 10 ಗಂಟೆ ಕಾಲ ಪ್ರಜ್ಞೆತಪ್ಪಿತು 6 ತಿಂಗಳ ಕೋತಿಮರಿ

    ಬ್ಯಾಂಕಾಕ್: ಕೆಲವು ಜನರಿಗೆ ಬೆಳಗ್ಗೆ ಹೊತ್ತು ಕಾಫಿ ಕುಡಿಯದಿದ್ದರೆ ಅವರ ದಿನ ಶುರು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೋತಿ ಮರಿಯೊಂದು ಕಾಫಿ ಕುಡಿದು 10 ಗಂಟೆಗಳ ಕಾಲ ಪ್ರಜ್ಷೆ ತಪ್ಪಿದ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.

    ಲಾಂಗ್ ಟೇಲ್ ಮಕಾವ್ ಕೋತಿ ಮರಿಯೊಂದು ಪ್ರವಾಸಿಗರೊಬ್ಬರ ಗಾಡಿ ಮೇಲೆ ಎಗರಿ, ಗಾಡಿಯ ಹ್ಯಾಂಡಲ್‍ ಗೆ ನೇತುಹಾಕಿದ್ದ ಬ್ಯಾಗ್ ಕಸಿದುಕೊಂಡಿತ್ತು. ಅದರಲ್ಲಿದ್ದ ಐಸ್ ಕಾಫಿಯನ್ನು ಕುಡಿದಿತ್ತು. ದೇಹದಲ್ಲಿ ಕಾಫೀನ್ ಅಂಶ ಹೆಚ್ಚಾಗಿ ಕೆಲವೇ ನಿಮಿಷಗಳಲ್ಲಿ ಕೋತಿ ಕುಸಿದು ಬಿದ್ದಿದೆ.

    6 ತಿಂಗಳ ಕೋತಿ ಮರಿ ಸ್ವಲ್ಪ ಸಮಯದ ಹಿಂದೆ ಪ್ರವಾಸಿಗರು ಕಾಫಿ ಕುಡಿಯೋದನ್ನ ನೋಡಿ ಅವರಂತಯೇ ಕಾಫಿ ಕುಡಿಯಲು ಪ್ರಯತ್ನಿಸಿತ್ತು ಎಂದು ಇಲ್ಲಿನ ಫೇಸ್‍ಬುಕ್ ಗುಂಪೊಂದು ಪೋಸ್ಟ್ ಮಾಡಿದೆ.

    ಕೋತಿ ಮರಿಯನ್ನು ನೋಡುತ್ತಿದ್ದ ಜನರು ಅದು ಪ್ರಜ್ಞೆ ತಪ್ಪುತ್ತಿದ್ದಂತೆ ಪಶುವೈದ್ಯರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪಶುವೈದ್ಯರು ಕೋತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು. ಇದಾದ 10 ಗಂಟೆಗಳ ನಂತರ ಕೋತಿಗೆ ಪ್ರಜ್ಞೆ ಬಂದಿದೆ.

    ಕೋತಿ ಮರಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಮೇಲೆ ಅದನ್ನು ಅದರ ಗುಂಪಿನ ಜೊತೆ ಬಿಡಲಾಗಿದೆ. ಮಕಾವ್ ಕೋತಿಮರಿಯ ಚೇತರಿಕೆ ಮತ್ತು ಅದರ ಕುಟುಂಬದೊಂದಿಗೆ ಮರಳಿ ಸೇರಿಸಿದ ಫೋಟೋಗಳನ್ನು ಫೇಸ್‍ ಬುಕ್ ಗುಂಪು ಹಂಚಿಕೊಂಡಿದೆ.

  • ಚಾಕು ಹಿಡಿದು ಬಂದವನ ಮನವೊಲಿಸಿದ ಪೊಲೀಸ್-ಮನ ಮಿಡಿಯುವ ವಿಡಿಯೋ ನೋಡಿ

    ಚಾಕು ಹಿಡಿದು ಬಂದವನ ಮನವೊಲಿಸಿದ ಪೊಲೀಸ್-ಮನ ಮಿಡಿಯುವ ವಿಡಿಯೋ ನೋಡಿ

    ಬ್ಯಾಂಕಾಕ್: ಚಾಕು ಹಿಡಿದು ಠಾಣೆಯೊಳಗೆ ನುಗ್ಗಿದ್ದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಮೃದು ಮಾತುಗಳಿಂದ ಮನವೊಲಿಸುವ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದಾರೆ.

    ಬ್ಯಾಂಕಾಕ್‍ನ ಹೂಯೆ ಕ್ವಾಂಗ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಅನಿರತ್ ಮಾಲೀ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಹಿಡಿದು ಠಾಣೆಗೆ ನುಗ್ಗಿದ್ದಾನೆ. ಸ್ಥಳದಲ್ಲಿದ್ದ ಅನಿರತ್ ವ್ಯಕ್ತಿಯನ್ನು ಅತ್ಯಂತ ತಾಳ್ಮೆಯಿಂದ ಮೃದು ಮಾತುಗಳಿಂದ ಮಾತನಾಡಿಸಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ವಿಡಿಯೋದಿಂದ ತಿಳಿಯದಿದ್ದರೂ ಕೊನೆಗೆ ವ್ಯಕ್ತಿ ಚಾಕುವನ್ನ ಪೊಲೀಸರ ಕೈಗೆ ನೀಡೋದನ್ನ ಕಾಣಬಹುದು. ಪೊಲೀಸ್ ಅಧಿಕಾರಿಯೂ ಕೂಡ ಆ ವ್ಯಕ್ತಿಯನ್ನು ಬಂಧನಕ್ಕೊಳಪಡಿಸದೆ, ಚಾಕುವನ್ನ ಪಕ್ಕಕ್ಕೆಸೆದು ಆತನನ್ನ ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ನಂತರ ಅಲ್ಲೇ ಇದ್ದ ಚೇರ್ ಮೇಲೆ ಕೂರಿಸಿದ್ದಾರೆ.

    ಠಾಣೆಗೆ ನುಗ್ಗಿದ ವ್ಯಕ್ತಿ ಓರ್ವ ಸಂಗೀತಗಾರನಾಗಿದ್ದು, ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಕಳೆದ ಮೂರು ದಿನಗಳಿಂದ ಆತನಿಗೆ ಸಂಬಳವಾಗಿರಲಿಲ್ಲ. ಜೊತೆಗೆ ತನ್ನ ಗಿಟಾರ್ ಕೂಡ ಕಳೆದುಕೊಂಡು ಆತಂಕದಲ್ಲಿದ್ದ ಎನ್ನಲಾಗಿದೆ.

    ಅನಿರತ್ ಆ ವ್ಯಕ್ತಿಗೆ ತಮ್ಮಲ್ಲಿರುವ ಗಿಟಾರ್ ಕೊಡುವುದಾಗಿ ಹೇಳಿ, ಇಬ್ಬರೂ ಒಟ್ಟಿಗೆ ಹೊರಗಡೆ ಊಟಕ್ಕೆ ಹೋಗೋಣವೆಂದು ಹೇಳಿದ್ದಾಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಸಮಾಧಾನಗೊಂಡ ವ್ಯಕ್ತಿಯನ್ನು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

     

    https://www.youtube.com/watch?v=SdTDKRTkXuM