Tag: bangkok

  • ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    – 200ಕ್ಕೂ ಅಧಿಕ ಮಂದಿ ಬಲಿ

    ನೇಪಿಟಾವ್/ಬ್ಯಾಂಕಾಕ್‌: ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಒಂದೇ ದಿನ ಮೂರು ಬಾರಿ ಭೂಕಂಪ (Earthquake) ಸಂಭವಿಸಿದ್ದು, ಭೂಕಂಪನದ ತೀವ್ರತೆ ಥ್ಯಾಯ್ಲೆಂಡ್ ನ ಬ್ಯಾಂಕಾಂಕ್ ಮತ್ತು ಬಾಂಗ್ಲಾದೇಶದ ವರಗೂ ವ್ಯಾಪಿಸಿದೆ. ಭೂ ಕಂಪನದ ಕೇಂದ್ರ ಬಿಂದು ಇದ್ದ ಮಯನ್ಮಾರ್‌ನಲ್ಲಿ (Myanmar) ಭಾರೀ ಹಾನಿಯಾಗಿದ್ದು ಈವರೆಗೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

    ಅಲ್ಲದೇ ಶುಕ್ರವಾರ ರಾತ್ರಿಯೂ ಮತ್ತೆ ಭೂಕಂಪನವಾಗಿದ್ದು, ಸಾವು ನೋವಿನ ಪ್ರಮಾಣವನ್ನು ಮತ್ತಷ್ಟು ಏರಿಕೆ ಮಾಡಿದೆ. ಶುಕ್ರವಾರ ರಾತ್ರಿ 11:56ರ ವೇಳೆ ಮ್ಯಾನ್ಮಾರ್‌ನಲ್ಲಿ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ.

    ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ:
    ಮ್ಯಾನ್ಮಾರ್‌, ಥಾಯ್ಲೆಂಡ್‌ನಲ್ಲಿ ಭೂಂಕಪದ ಬೆನ್ನಲ್ಲೇ ಶನಿವಾರ ಮುಂಜಾನೆ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಮುಂಜಾನೆ 5:16ಕ್ಕೆ ಭೂಮಿ ಕಂಪಿಸಿದ್ದು, ಭೂಮಿಯಿಂದ 180 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದೆ. ರಿಕ್ಟರ್‌ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಫ್ಘಾನಿಸ್ತಾನದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

    ರಸ್ತೆಗಳಲ್ಲೇ ಚಿಕಿತ್ಸೆ:
    ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಇದರಿಂದ ಮ್ಯಾನ್ಮಾರ್‌ನ ನೈಪಿತಾವು ಸೇರಿ 6 ಪ್ರದೇಶ ಹಾಗೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

  • ಮೊದಲು ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದ್ದೆ – ಥೈಲ್ಯಾಂಡ್‌ ಭೂಕಂಪದ ಭಯಾನಕ ಚಿತ್ರಣ ಬಿಚ್ಚಿಟ್ಟ ಕನ್ನಡಿಗ

    ಮೊದಲು ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದ್ದೆ – ಥೈಲ್ಯಾಂಡ್‌ ಭೂಕಂಪದ ಭಯಾನಕ ಚಿತ್ರಣ ಬಿಚ್ಚಿಟ್ಟ ಕನ್ನಡಿಗ

    ಬ್ಯಾಂಕಾಕ್: ಭೂಕಂಪದ (Earthquake) ಬಳಿಕ ಥೈಲ್ಯಾಂಡ್‌ನ (Thailand) ಬ್ಯಾಂಕಾಕ್‌ನಲ್ಲಿ (Bangkok) ಸಿಲುಕಿರುವ ಕನ್ನಡಿಗ ಯೋಗೇಶ್‌ ʻಪಬ್ಲಿಕ್‌ ಟಿವಿʼ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ಭೂಕಂಪದ ತೀವ್ರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    1:15ರ ಸಮಯದಲ್ಲಿ ಭೂಕಂಪದ ಅನುಭವ ಆಯ್ತು. ಭೂಕಂಪದ ಅನುಭವವಾದಾಗ ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದೆ. ಬಳಿಕ ಅಲ್ಲಿಂದ ಹೊರಗೆ ಓಡಿ ಬಂದು ಪಾರಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ – 40ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ, ಗಗನಚುಂಬಿ ಕಟ್ಟಡಗಳು ನೆಲಸಮ!

    ನಾವೆಲ್ಲ 10ನೇ ಮಹಡಿಯಲ್ಲಿ ಇದ್ವಿ, ಭಾರತದ ಸುಮಾರು 500 ಜನ ಇದ್ದಾರೆ ಇಲ್ಲಿ. ಎಲ್ಲರೂ ಕ್ಷೇಮವಾಗಿದ್ದಾರೆ. ಹೋಟೆಲ್‌ನವರು ಮೊದಲು ಅಲ್ಲಿಂದ ಓಡಿಹೋದರು. ಆಮೇಲೆ ನಾವೆಲ್ಲ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಬಂದಿದ್ದೇವೆ ಎಂದಿದ್ದಾರೆ.

    ನಾವಿದ್ದ ಹೋಟೆಲ್‌ನ ಮಹಡಿ ಮೇಲಿನ ಸ್ವಿಮ್ಮಿಂಗ್‌ ಫೂಲ್‌ನಿಂದ ನೀರು ಕೆಳಗೆ ಚೆಲ್ಲಿದೆ. ಕಟ್ಟಡಗಳು ಬಿರುಕು ಬಿಟ್ಟಿವೆ. ಮಾ.31ರ ತನಕ ಇಲ್ಲಿರುವ ಪ್ಲ್ಯಾನ್‌ ಮಾಡಿದ್ವಿ. ಮುಂದೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: 46 ವರ್ಷದ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ವಾಷರ್ – ಅಗ್ನಿಶಾಮಕ ಸಿಬ್ಬಂದಿ ನೆರವು ಕೋರಿದ ವೈದ್ಯರು

  • ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ – 40ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ, ಗಗನಚುಂಬಿ ಕಟ್ಟಡಗಳು ನೆಲಸಮ!

    ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ – 40ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ, ಗಗನಚುಂಬಿ ಕಟ್ಟಡಗಳು ನೆಲಸಮ!

    ನೈಪಿಡಾವ್/ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿಂದು ಸಂಭವಿಸಿದ ಭೀಕರ ಭೂಕಂಪಕ್ಕೆ (Myanmar Earthquake) ಹಲವೆಡೆ ಗಗನಚುಂಬಿ ಕಟ್ಟಡಗಳು ನೆಲಸಮವಾಗಿದೆ. ಅಲ್ಲದೇ ಕನಿಷ್ಠ 43 ಕಾರ್ಮಿಕರು ನಾಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಇಂದು ಬೆಳಗ್ಗೆ 11:50ರ ಸುಮಾರಿಗೆ 7.7 ತೀವ್ರಯ ಭೂಕಂಪ ಸಂಭವಿಸಿದೆ, ಮಧ್ಯಾಹ್ನ 12:50ರ ಸುಮಾರಿಗೆ 6.8 ತೀವ್ರತೆಯಲ್ಲಿ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಇದರಿಂದ ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸಾಗಯಿಂಗ್ ನಗರದ ವಾಯುವ್ಯಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ತಕ್ಷಣಕ್ಕೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ.

    ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದ ಎಫೆಕ್ಟ್ ಬ್ಯಾಂಕಾಕ್‌ಗೂ ತಟ್ಟಿದೆ. ಬ್ಯಾಂಕಾಕ್ ಹಾಗೂ ಥೈಲ್ಯಾಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಕಟ್ಟಡಗಳು ಅಲುಗಾಡಿವೆ, ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ (Building Collapses) ದೃಶ್ಯಗಳು ಸೆರೆಯಾಗಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಸಾಮಾಜಿಕ ಜಾಲತಾಣದಲ್ಲಿ ಭೂಕಂಪದ ತೀವ್ರತೆ ಬಗ್ಗೆ ಮಾಹಿತಿ ನೀಡಿದೆ.

    ಬ್ಯಾಂಕಾಕ್‌ನಲ್ಲಿ ಭೂಕಂಪದ ಅನುಭವವಾದ ನಂತರ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಟ್ಯಾಂಕ್‌ನಿಂದ ನೀರು ಕೆಳಗೆ ಬೀಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಜೊತೆಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿರುವ (Swimming Pool) ನೀರು ಚಿಮ್ಮಿ ಹೊರ ಚೆಲ್ಲುತ್ತಿದೆ. ಹೋಟೆಲ್‌ನಲ್ಲಿ ವಸ್ತುಗಳೆಲ್ಲ ಅಲುಗಾಡುತ್ತಿರುವ ದೃಶ್ಯಗಳನ್ನು ಅಲ್ಲಿನ ಜನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • Earthquake | ಮ್ಯಾನ್ಮಾರ್‌ನಲ್ಲಿ ಎರಡೆರಡು ಬಾರಿ ಪ್ರಬಲ ಭೂಕಂಪ – ಬ್ಯಾಂಕಾಕ್‌ನಲ್ಲೂ ನಡುಕ

    Earthquake | ಮ್ಯಾನ್ಮಾರ್‌ನಲ್ಲಿ ಎರಡೆರಡು ಬಾರಿ ಪ್ರಬಲ ಭೂಕಂಪ – ಬ್ಯಾಂಕಾಕ್‌ನಲ್ಲೂ ನಡುಕ

    ನೈಪಿಡಾವ್/ಬ್ಯಾಂಕಾಕ್:‌ ಮ್ಯಾನ್ಮಾರ್‌ನಲ್ಲಿಂದು ಎರಡೆರಡು ಬಾರಿ ಪ್ರಬಲ ಭೂಕಂಪ (Myanmar Earthquake) ಸಂಭವಿಸಿದೆ. ಮೊದಲ ಭೂಕಂಪ ಸಂಭವಿಸಿದ 15 ನಿಮಿಷಗಳಲ್ಲೇ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ.

    ರಿಕ್ಷರ್‌ ಮಾಪಕದಲ್ಲಿ ಮೊದಲ ಬಾರಿ ಭೂಕಂಪದ ತೀವ್ರತೆ 7.7, 2ನೇ ಬಾರಿಗೆ 6.4 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ. ಇದರಿಂದ ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.

    ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50ರ ಸುಮಾರಿಗೆ ಭೂಮಿಯ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ತಕ್ಷಣಕ್ಕೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಅತ್ತ ಬ್ಯಾಂಕಾಕ್‌ನಲ್ಲೂ (Bangkok) ಭೂಕಂಪದ ಎಫೆಕ್ಟ್‌ ತಟ್ಟಿದೆ.

    ಮ್ಯಾನ್ಮಾರ್‌ನಲ್ಲಿ ಭೂಕಂಪ ಸಂಭವಿಸಿದ ಎಫೆಕ್ಟ್‌ ಬ್ಯಾಂಕಾಕ್‌ಗೂ ತಟ್ಟಿದೆ. ಬ್ಯಾಂಕಾಕ್ ಹಾಗೂ ಥೈಲ್ಯಾಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಕಟ್ಟಡಗಳು ಅಲುಗಾಡಿವೆ, ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ ದೃಶ್ಯಗಳು ಸೆರೆಯಾಗಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಸಾಮಾಜಿಕ ಜಾಲತಾಣದಲ್ಲಿ ಭೂಕಂಪದ ತೀವ್ರತೆ ಬಗ್ಗೆ ಮಾಹಿತಿ ನೀಡಿದೆ.

    ಬ್ಯಾಂಕಾಕ್‌ನಲ್ಲಿ ಭೂಕಂಪದ ಅನುಭವವಾದ ನಂತರ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಟ್ಯಾಂಕ್‌ನಿಂದ ನೀರು ಕೆಳಗೆ ಬೀಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಜೊತೆಗೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರು ಚಿಮ್ಮಿ ಹೊರ ಚೆಲ್ಲುತ್ತಿದೆ. ಹೋಟೆಲ್‌ನಲ್ಲಿ ವಸ್ತುಗಳೆಲ್ಲ ಅಲುಗಾಡುತ್ತಿರುವ ದೃಶ್ಯಗಳನ್ನು ಅಲ್ಲಿನ ಜನ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು

    ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು

    ಮಡಿಕೇರಿ: ಬ್ಯಾಂಕಾಕ್‌ನಿಂದ ದುಬೈಗೆ ಕೊಡಗಿನ (Kodagu) ಮೂಲಕ ದುಬಾರಿ ಬೆಲೆಯ ಮಾದಕವಸ್ತು ಹೈಡ್ರೋ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಕೊಡಗು ಜಿಲ್ಲಾ ಪೊಲೀಸರು (Kodagu Police) ಬೇಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇರಳ ರಾಜ್ಯದವರೂ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಸುಮಾರು 3 ಕೋಟಿ ರೂ. ಬೆಲೆ ಬಾಳುವ 3.31 ಕೆಜಿ ಹೈಡ್ರೋ ಗಾಂಜಾವನ್ನು (hydro Ganja) ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಪತ್ನಿ ಸೈಟ್‌ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ:  ತಿಮ್ಮಾಪುರ್‌ ಪ್ರಶ್ನೆ

    ಆರೋಪಿಗಳಾದ ಮೆಹರೂಫ್ (37), ರವೂಫ್ (28), ನಾಸೀರ್ (26), ಹೆಚ್‌. ಯಾಹ್ಯಾಸಿ (28), ಅಕನಾಸ್ವ (26), ವಾಜೀಧ್ (26), ರಿಯಾಜ್ (44) ರನ್ನ ಮಾಲ್ ಸಮೇತ ಬಂಧನ ಮಾಡಲಾಗಿದೆ. ಆರೋಪಿಗಳು ಮಾದಕವಸ್ತುವನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೊಡಗಿಗೆ ತರುತ್ತಿದ್ದರು. ನಂತರ, ದುಬೈಗೆ ವಿಮಾನದ ಮೂಲಕ ಸಾಗಾಣಿಕೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ‌. ಇದನ್ನೂ ಓದಿ: ವಿಮಾನ ನಿಯಮ ಕಾಯ್ದೆ ಉಲ್ಲಂಘನೆ- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ

    ಏನಿದು ಹೈಡ್ರೋಪೋನಿಕ್ ಗಾಂಜಾ?
    ಕೃತಕ ಬೆಳಕನ್ನು ಬಳಸಿ, ಹವಾನಿಯಂತ್ರಿಕ ಕೊಠಡಿಯಲ್ಲಿ ಬೆಳೆಯುವ ಹೈಡ್ರೋ ಗಾಂಜಾ ಬ್ಯಾಂಕಾಕ್‌ನಲ್ಲಿ ಸುಲಭವಾಗಿ ಸಿಗುತ್ತಿದೆ. ಇದನ್ನು ಶ್ರೀಮಂತರು ಮಾತ್ರವೇ ದುಬಾರಿ ಬೆಲೆ ನೀಡಿ ಬಳಸುತ್ತಾರೆ. ಸದ್ಯ, ಆರೋಪಿಗಳು ಸ್ಥಳೀಯರಿಗೆ ಮಾರಾಟ ಮಾಡುವ ವಿಷಯ ಗೊತ್ತಾಗಿಲ್ಲ. ಇವರೆಲ್ಲರೂ ಬ್ಯಾಂಕಾಕ್‌ನಿಂದ ತಂದ ಮಾದಕವಸ್ತುವನ್ನು ಇಂಡಿಯಾ ಏಪೋರ್ಟ್‌ಗಳ ಮೂಲಕ ಪ್ರವಾಸಿಗರ ಸೋಗಿನಲ್ಲಿ ದುಬೈಗೆ ಸಾಗಾಣಿಕೆ ಮಾಡುವ ಸಲುವಾಗಿ ಕೊಡಗಿನ ಗೋಣಿಕೊಪ್ಪಲಿನ ಮನೆಯೊಂದರಲ್ಲಿ ಇಟ್ಟಿದ್ದರು. ಬಳಿಕ ಗೋಣಿಕೋಪ್ಪದಿಂದ ಮಡಿಕೇರಿಗೆ ತರುವಾಗ ಮಡಿಕೇರಿ ನಗರದ ಪೋಲಿಸರು 5 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

    ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನಲ್ಲಿ ಹಾಗೂ ಪರಾರಿಯಾಗಲು ಯತ್ನಿಸುತ್ತಿದ್ದ ಪ್ರಮುಖ ಆರೋಪಿ ಕೇರಳದ ಮೆಹರೂಫ್ ಎಂಬಾತನನ್ನು ಕೊಚ್ಚಿನ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.

    ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕವೇ ಆರೋಪಿಗಳು ಈ ಮಾದಕ ವಸ್ತುವನ್ನು ತರುತ್ತಿದ್ದ ವಿಷಯ ತನಿಖೆಯಲ್ಲಿ ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿರುವ ಕೆಲವೊಂದು ತಾಂತ್ರಿಕ ದೋಷಗಳಿಂದ ಇವರು ಅಲ್ಲಿ ಸಿಕ್ಕಿ ಬೀಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈ ದಂಧೆಯಲ್ಲಿ ಕೊಡಗು ಜಿಲ್ಲೆಯ ಮಂದಿಗಳು ಭಾಗಿಯಾಗಿದ್ದು ಕೊಡಗು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲವರು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆ ಎಂಬ ಸಂದೇಹಗಳು ಮೂಡಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಇದೀಗ ಈ ಪ್ರಕರಣ ಆತಂಕ ಮೂಡಲು ಕಾರಣವಾಗಿದೆ. ಇದನ್ನೂ ಓದಿ: ಆರ್‌.ಅಶೋಕ್‌ ವಿರುದ್ಧ ಸಚಿವ ಪರಮೇಶ್ವರ್‌ ನೂರಾರು ಕೋಟಿ ಭೂ ಹಗರಣ ಬಾಂಬ್‌

  • ಮೃತ್ಯು ದರ್ಶನ ಮಾಡಿಸಿದ ʻಏರ್‌ ಟರ್ಬ್ಯೂಲೆನ್ಸ್‌ʼ – ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆಗಿದ್ದೇನು?

    ಮೃತ್ಯು ದರ್ಶನ ಮಾಡಿಸಿದ ʻಏರ್‌ ಟರ್ಬ್ಯೂಲೆನ್ಸ್‌ʼ – ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆಗಿದ್ದೇನು?

    ಇತ್ತೀಚೆಗಷ್ಟೇ ಲಂಡನ್ನಿನಿಂದ ಸಿಂಗಾಪುರಕ್ಕೆ ಹೊರಟಿದ್ದ ಸಿಂಗಾಪುರ ಏರ್‌ಲೈನ್ಸ್‌ (Singapore Airlines) ಬೋಯಿಂಗ್‌ ವಿಮಾನವೊಂದು ತೀವ್ರ ಪ್ರಕ್ಷುಬ್ಧತೆಗೆ ಸಿಲುಕಿ ಅಲ್ಲಿದ್ದ ಪ್ರಯಾಣಿಕರಿಗೆ ಮೃತ್ಯು ದರ್ಶನ ಮಾಡಿಸಿತ್ತು. 211 ಪ್ರಯಾಣಿಕರು ಮತ್ತು 18 ಸಿಬ್ಬಂದಿಯಿದ್ದ ಬೋಯಿಂಗ್ 777-300 ಇಆರ್ ವಿಮಾನದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದರು, 30 ಮಂದಿ ಗಾಯಗೊಂಡಿದ್ದರು. ಈ ಸಮಯದಲ್ಲಿ ʻಹವಾಯಿʼ ವಿಮಾನದ ಸೇಫ್‌ ಲ್ಯಾಂಡಿಂಗ್‌ ಅನ್ನೂ ನಾವು ನೆನಪಿಸಿಕೊಳ್ಳಬಹುದಾಗಿದೆ.

    ಹೌದು. 1988ರ ಏಪ್ರಿಲ್‌ 28ರ ಮಧ್ಯಾಹ್ನ 1.30ರ ಸುಮಾರಿಗೆ ಹೀಲೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೋಯಿಂಗ್‌ ಸರಣಿಯ ʻಅಲೋಹಾ ಏರ್‌ಲೈನ್ಸ್‌ʼ (Aloha Airlines) ವಿಮಾನವೂ ಹವಾಯಿ ರಾಜಧಾನಿಗೆ ಹೊರಟಿತ್ತು. 12 ಸಾವಿರ ಗಂಟೆಗಳ ಹಾರಾಟದ ಸಾಮರ್ಥ್ಯ ಹೊಂದಿದ್ದ ಈ ವಿಮಾನವೂ 95 ಪ್ರಯಾಣಕರನ್ನು ಹೊತ್ತು ಸಾಗಿತ್ತು. ವಿಮಾನವು ಸುಮಾರು 28,000 ಅಡಿಗಳ ಎತ್ತರಕ್ಕೆ ತಲುಪಿದ್ದಾಗ ಮಧ್ಯಾಹ್ನ 1.48ರ ವೇಳೆಗೆ ವಿಮಾನದ ಫ್ಲ್ಯೂಸೇಜ್‌ ಭಾಗವು ಮುರಿದು ಗಾಳಿಯಲ್ಲಿ ಹಾರಿಹೋಗಿತ್ತು. ಪ್ರಯಾಣಿಕರು ಅಷ್ಟು ಎತ್ತರದಿಂದ ಒಂದು ಇಣುಕು ನೋಡುವಷ್ಟರಲ್ಲೇ ಪೆಸಿಫಿಕ್‌ ಒಡಲು ಸೇರಿತ್ತು. ಅಂದಿನ ಆ ಭಯಾನಕ ಸ್ಥಿತಿಯಲ್ಲಿ ವಿಮಾನದಲ್ಲಿದ್ದ 95 ಪ್ರಯಾಣಿಕರ ಪೈಕಿ 94 ಮಂದಿ ಬದುಕುಳಿದಿದ್ದರು. ಕಾಕ್‌ ಪಿಟ್‌ ಬಾಗಿಲ ಬಳಿ ನಿಂತಿದ್ದ ಫ್ಲೇಟ್‌ ಅಡೆಂಡರ್‌ ಮಾತ್ರವೇ ಗಾಳಿಯ ರಭಸಕ್ಕೆ ಸಿಕ್ಕಿ ಪೆಸಿಫಿಕ್‌ ಸಾಗರದ ಒಡಲಿಗೆ ಬಿದ್ದು ಜೀವ ಬಿಟ್ಟಿದ್ದರು. ಉಳಿದ 94 ಪ್ರಯಾಣಿಕರು ಸೇಫ್‌ ಆಗಿ ಲ್ಯಾಂಡಿಂಗ್‌ ಆಗಿದ್ದರು. ವಿಮಾನ ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ಪರಸ್ಪರ ಅಪ್ಪಿಕೊಂಡು ಪುನರ್ಜನ್ಮವೇ ಸಿಕ್ಕಿತೆಂದು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇದೀಗ ಸಿಂಗಾಪುರ ಏರ್‌ಲೈನ್ಸ್‌ ಸಹ ಆ ಹವಾಯಿ ಅದೃಷ್ಟದ ವಿಮಾನ ಲ್ಯಾಂಡಿಂಗ್‌ ಅನ್ನು ನೆನಪಿಸಿದೆ.

    ಈ ದುರ್ಘಟನೆ ಸಂಭವಿಸಿದ್ದು ಹೇಗೆ, ಟರ್ಬ್ಯೂಲೆನ್ಸ್‌ (Air Turbulence) ಹೇಗೆ ಸಂಭವಿಸುತ್ತದೆ? ಗಾಳಿಯ ಪ್ರಕ್ಷುಬ್ಧತೆಯಿಂದ ವಿಮಾನ ಕೆಳಗೆ ಬೀಳುತ್ತಾ? ಹಿಂದೆ ಇಂತಹ ಘಟನೆಗಳು ಸಂಭವಿಸಿದೆಯಾ? ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆಗಿದ್ದೇನು ಎಂಬುನ್ನು ತಿಳಿಯುವ ಮುನ್ನ ಘಟನೆ ನಂತರ ಏರ್‌ಲೈನ್ಸ್‌ ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸೋಣ…

    ಏರ್‌ಲೈನ್ಸ್‌ ಕೈಗೊಂಡ ಸುರಕ್ಷತಾ ಕ್ರಮಗಳೇನು?
    ಸಿಂಗಾಪುರ ಏರ್‌ಲೈನ್ಸ್‌ ಘಟನೆ ಬಳಿಕ ವಿಮಾನಯಾನ ಸಂಸ್ಥೆಯು ಪ್ರಕ್ಷುಬ್ಧತೆಯ ವಾತಾವರಣ ಎದುರಿಸಲು ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಟೇಕ್-ಆಫ್ ಆದ ನಂತರ ಸೀಟ್‌ಬೆಲ್ಟ್ (Flight Seat Belt) ಅನ್ನು ಸ್ವಿಚ್ ಆಫ್ ಮಾಡಲಾಗುತ್ತದೆ. ಲ್ಯಾಂಡಿಂಗ್‌ ಮಾಡುವ ಕೆಲವೇ ಕ್ಷಣಗಳಿಗೂ ಮುನ್ನ ಮತ್ತೆ ಆನ್ ಮಾಡಲಾಗುತ್ತದೆ. ಈ ನಿಯಮವನ್ನು ಪಾಲನೆ ಮಾಡುತ್ತಿದ್ದಾರೆಯೇ ಎನ್ನುವ ಬಗ್ಗೆ ಗಗನ ಸಖಿಯರು ಪರಿಶೀಲಿಸಬೇಕು. ಅಲ್ಲದೇ ಸೀಟ್‌ಬೆಲ್ಟ್‌ ಚಿಹ್ನೆಯು ಚಾಲನೆಯಲ್ಲಿರುವಾಗ, ಬಿಸಿ ಪಾನೀಯ ಸೇವಿಸುವುದನ್ನ ನಿಷೇಧಿಸಲಾಗಿದೆ. ಜೊತೆಗೆ ಆ ಸಂದರ್ಭದಲ್ಲಿ ಊಟ ಸೇವನೆ ಮಾಡುವುದನ್ನೂ ನಿಷೇಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಪಾಕ್‌ ಪರಿಸ್ಥಿತಿ ಕೆಟ್ಟದ್ದಾಗಿದೆ, ಮೊದಲು ನಿಮ್ಮದನ್ನು ನೋಡಿಕೊಳ್ಳಿ – ಪಾಕ್‌ ಮಾಜಿ ಸಚಿವರ ಟ್ವೀಟ್‌ಗೆ ಕೇಜ್ರಿವಾಲ್‌ ತಿರುಗೇಟು

    ಏರ್‌ ಟರ್ಬ್ಯೂಲೆನ್ಸ್‌ ಅಂದ್ರ ಏನು?
    ಆಗಸದಲ್ಲಿ ವಿಮಾನವು ಸರಾಗವಾಗಿ ಹಾರಾಡಲು ಮಾರುತದ ಹರಿವು ಅಡ್ಡಿಪಡಿಸಿದರೆ, ಅದನ್ನೇ ʻಗಾಳಿಯ ಪ್ರಕ್ಷುಬ್ಧತೆʼ (Air Turbulence) ಅಥವಾ ʻಏರ್ ಟರ್ಬ್ಯೂಲೆನ್ಸ್ʼ ಎಂದು ಕರೆಯುತ್ತಾರೆ. ಇಂತಹ ಸಮಯದಲ್ಲಿ ವಿಮಾನ ಅಲುಗಾಡಲು ಆರಂಭಿಸುತ್ತದೆ. ತನ್ನ ನಿಯಮಿತ ಮಾರ್ಗದಿಂದ ಪಥ ಬದಲಿಸುತ್ತದೆ. ಇದ್ದಕ್ಕಿದ್ದಂತೆ ಕೆಲ ಅಡಿಗಳಷ್ಟು ಕೆಳಕ್ಕೆ ಕುಸಿಯುತ್ತದೆ. ಈ ವೇಳೆ ಜೀವಹಾನಿ ಸಂಭವಿಸುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಇದನ್ನೂ ಓದಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಏರ್‌ ಟರ್ಬ್ಯೂಲೆನ್ಸ್‌ ವಿಧಾನಗಳು ಯಾವುವು:
    ಮಾರುತದ ಪರಿಣಾಮದ ತೀವ್ರತೆ ಆಧರಿಸಿ 3 ರೀತಿಯ ಪ್ರಕ್ಷುಬ್ಧತೆಗಳನ್ನು ತಜ್ಞರು ಗುರುತಿಸುತ್ತಾರೆ. ಲಘು, ಮಧ್ಯಮ ಹಾಗೂ ತೀವ್ರ ಪ್ರಕ್ಷುಬ್ಧತೆಯನ್ನು ಗುರುತಿಸಲಾಗಿದೆ.
    ಲಘು ಪ್ರಕ್ಷುಬ್ಧತೆ: ವಿಮಾನವು 1 ಮೀಟರ್‌ವರೆಗೆ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಪ್ರಯಾಣಿಕರಿಗೆ ಇದು ಅನುಭವಕ್ಕೆ ಬರುವುದಿಲ್ಲ.
    ಮಧ್ಯಮ ಪ್ರಕ್ಷುಬ್ಧತೆ: ಈ ಸಂದರ್ಭದಲ್ಲಿ ವಿಮಾನಗಳು 3-6 ಮೀಟರ್‌ಗಳಷ್ಟು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತವೆ. ಇದು ಪ್ರಯಾಣಿಕರ ಅನುಭವಕ್ಕೆ ಬರುತ್ತದೆ. ವಿಮಾನ ಕೊಂಚ ಅಲುಗಾಡುವ ಅನುಭವವಾಗುತ್ತದೆ ಆಗ ಪ್ರಯಾಣಿಕರು ಸೀಟಿನ ಕೈಗಳನ್ನು ಗಟ್ಟಿಯಾಗಿ ಹಿಡಿದು ತಮ್ಮನ್ನು ನಿಯಂತ್ರಿಸಿಕೊಳ್ಳಲು ಸಾಧ್ಯ.
    ತೀವ್ರ ಪ್ರಕ್ಷುಬ್ಧತೆ: ಈ ವೇಳೆ ವಿಮಾನಗಳು 30 ಮೀಟರ್‌ವರೆಗೆ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತವೆ. ಸೀಟ್‌ ಬೆಲ್ಟ್‌ ಧರಿಸದಿದ್ದರೆ, ಪ್ರಯಾಣಿಕರು ಮೇಲಕ್ಕೆ ಜಿಗಿದು ತಲೆಯನ್ನು ಚಾವಣಿಗೆ ಬಡಿಸಿಕೊಳ್ಳುತ್ತಾರೆ, ಒಂದು ವೇಳೆ ವಿಮಾನದ ಮೇಲ್ಚಾವಣಿ ಹಾರಿ ಹೋದ್ರೆ, ಗಾಳಿ ರಭಸಕ್ಕೆ ಸಿಕ್ಕಿ ಜೀವ ಬಿಡುವ ಸಾಧ್ಯತೆಗಳೂ ಇರುತ್ತವೆ. ಸಿಂಗಾಪುರ ಏರ್‌ಲೈಸ್ಸ್‌ನಲ್ಲಿ ಆಗಿದ್ದು ಇದೇ ತೀವ್ರ ಪ್ರಕ್ಷುಬ್ಧತೆ.

    ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಆಗಿದ್ದೇನು?
    ಇದೇ ಮೇ 21ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2.45ರ ವೇಳೆಗೆ ಸಿಂಗಾಪುರ್‌ ಏರ್‌ಲೈನ್ಸ್‌ನ ಬೋಯಿಂಗ್‌ 777-300ಇಆರ್‌ ವಿಮಾನವು ಲಂಡನ್‌ನಿಂದ ಹೊರಟಿತ್ತು. ಟೇಕ್‌ ಆಫ್‌ ಆಗಿ 10 ಗಂಟೆಗಳ ನಂತರ ಮ್ಯಾನ್ಮಾರ್‌ನ ವಾಯುಪ್ರದೇಶ ಪ್ರವೇಶಿಸಿತ್ತು. 37 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಪ್ರಕ್ಷುಬ್ಧತೆಗೆ (ಏರ್‌ ಟಬ್ರ್ಯೂಲೆಸ್ಸ್‌) ಸಿಲುಕಿದ ವಿಮಾನ ಇದ್ದಕ್ಕಿದ್ದಂತೆ ಅಲುಗಾಡತೊಡಗಿತು. ಪೈಲಟ್‌ನ ನಿಯಂತ್ರಣ ತಪ್ಪಿದ ವಿಮಾನ ಕೇವಲ 3 ನಿಮಿಷದೊಳಗೆ 37 ಸಾವಿರ ಅಡಿ ಎತ್ತರದಿಂದ 31 ಸಾವಿರ ಅಡಿಗಳಿಗೆ ಇಳಿದಿತ್ತು. ಆದರೆ, ಈ ಅವಧಿಯಲ್ಲಿ ಪ್ರಯಾಣಿಕರ ಜೀವವೇ ತಲ್ಲಣಿಸಿಹೋಗಿತ್ತು. ಸಾಮಾನ್ಯವಾಗಿ ಟೇಕ್‌ ಆಫ್‌ ಆದ 4-5 ನಿಮಿಷಗಳ ಬಳಿಕ ಸೀಟ್‌ ಬೆಲ್ಟ, ಹಾಕಿಕೊಳ್ಳುವುದು ಕಡ್ಡಾಯವಾಗಿರುವುದಿಲ್ಲ (ನಂತರ ಧರಿಸಬೇಕು). ಹೀಗಾಗಿ ಯಾವ ಪ್ರಯಾಣಿಕರೂ ಸೀಟ್‌ ಬೆಲ್ಟ್ ಧರಿಸಲಿಲ್ಲ, ಧರಿಸಲು ಸೂಚನೆಯನ್ನೂ ಗಗನಸಖಿಯರು ನೀಡಿರಲಿಲ್ಲ. ವಿಮಾನ ಜೋರು ತೋಯ್ದಾಡುತ್ತಿದ್ದಂತೆ ಆಸನಗಳಲ್ಲಿ ಆರಾಮವಾಗಿ ಕುಳಿತಿದ್ದ ಪ್ರಯಾಣಿಕರೆಲ್ಲ ಮೇಲಕ್ಕೆ ಹಾರಿದರು. ಕೆಲವರ ತಲೆ ಲಗ್ಗೇಜ್‌ ಕಂಟೈನರ್‌ಗೆ ಬಡಿಯಿತು, ಹಲವರು ಗಾಯಗೊಂಡರು. ಒಬ್ಬ ಪ್ರಯಾಣಿಕರು ಜೀವವನ್ನೇ ಬಿಟ್ಟರು. ಪರಿಸ್ಥಿತಿ ಕೈಮೀರಿದಾಗ ಪೈಲಟ್‌ ವಿಮಾನವನ್ನು ವಿಧಿಯಿಲ್ಲದೇ ಬ್ಯಾಂಕಾಕ್‌ನತ್ತ ತಿರುಗಿಸಿದ. ಸಿಂಗಾಪುರದಲ್ಲಿ ಇಳಿಯಬೇಕಿದ್ದ ವಿಮಾನವು ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಕಂಡಿತು. ವಿಮಾನದಲ್ಲಿ 3 ಭಾರತೀಯರು ಸೇರಿ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು. ಪ್ರಯಾಣಿಕರಲ್ಲಿ ಗರಿಷ್ಠ 56 ಮಂದಿ ಆಸ್ಪ್ರೇಲಿಯನ್ನರೇ ಇದ್ದರು.

    ಗಾಳಿಯ ಪ್ರಕ್ಷುಬ್ಧತೆಯಿಂದ ವಿಮಾನ ಬೀಳುತ್ತಾ?
    ಆಧುನಿಕ ವಿಮಾನಗಳನ್ನು ಎಲ್ಲಾ ರೀತಿಯ ಪ್ರಕ್ಷುಬ್ಧತೆ ತಡೆದುಕೊಳ್ಳುವ ರೀತಿಯಲ್ಲಿ ತಯಾರಿಸಲಾಗುತ್ತಿದೆ. ಇಂಥ ತುರ್ತು ಪರಿಸ್ಥಿತಿ ಎದುರಿಸಲು ಪೈಲಟ್‌ಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಇದನ್ನೂ ಓದಿ: ತೀವ್ರ ಪ್ರಕ್ಷುಬ್ಧತೆಯಿಂದ ಕುಸಿದ ಸಿಂಗಾಪುರ್ ಏರ್‌ಲೈನ್ಸ್‌ನಲ್ಲಿದ್ದ 22 ಮಂದಿಯ ಬೆನ್ನುಮೂಳೆಗೆ ಗಾಯ!

    ಹಿಂದೆಯೂ ಇಂತಹ ದುರಂತಗಳು ಸಂಭವಿಸಿವೆಯೇ?
    * 1994 ರಲ್ಲಿ ಅಮೆರಿಕದ ಏರ್‌ಫ್ಲೈಟ್‌-1016 ಚಂಡಮಾರುತದಿಂದ ಉಂಟಾದ ಪ್ರಕ್ಷುಬ್ಧತೆಯಿಂದಾಗಿ ಲ್ಯಾಂಡಿಂಗ್‌ ಸಮಯದಲ್ಲಿ ಅಪಘಾತಕ್ಕೀಡಾಗಿತ್ತು. 37 ಪ್ರಯಾಣಿಕರು ಸಾವನ್ನಪ್ಪಿದ್ದರು.
    * ಸೈಕ್ಲೋನ್‌ ಸೃಷ್ಟಿಸಿದ ಪ್ರಕ್ಷುಬ್ಧತೆಯಿಂದಾಗಿ 1999ರಲ್ಲಿ ಅಮೆರಿಕದ ಏರ್‌ಲೈನ್ಸ್‌ ಫ್ಲೈಟ್‌-1420 ವಿಮಾನವು ಲ್ಯಾಂಡಿಂಗ್‌ ಸಮಯದಲ್ಲಿ ಅಪಘಾತಕ್ಕೀಡಾಯಿತು. 145 ಪ್ರಯಾಣಿಕರ ಪೈಕಿ 11 ಮಂದಿ ಸಾವನ್ನಪ್ಪಿದ್ದರು.
    * 2001ರಲ್ಲಿ ಅಮೆರಿಕದ ಏರ್‌ಲೈನ್ಸ್‌ ಫ್ಲೈಟ್‌- 587 ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪ್ರಕ್ಷುಬ್ಧತೆಗೆ ಗುರಿಯಾಯಿತು. ವಿಮಾನದಲ್ಲಿದ್ದ ಎಲ್ಲಾ 260 ಪ್ರಯಾಣಿಕರೂ ಸಾವನ್ನಪ್ಪಿದರು.

  • 13 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ ರಾಮಮಂದಿರದ ಬ್ಯಾನರ್

    13 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದ ರಾಮಮಂದಿರದ ಬ್ಯಾನರ್

    – ಸ್ಕೈ ಡೈವಿಂಗ್‍ನಲ್ಲಿ ಮೊಳಗಿತು ಜೈ ಶ್ರೀರಾಮ್

    ವಿಜಯಪುರ: ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ (Prana Pratishtha) ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕೋಟ್ಯಂತರ ಶ್ರೀರಾಮನ ಭಕ್ತರು ದೇಶ ವಿದೇಶಗಳ ನೆಲದಲ್ಲಿ ನಾನಾ ರೀತಿಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಬ್ಯಾಂಕಾಕ್‍ನ (Bangkok) ಖೋಯಾಯ್ ಎಂಬಲ್ಲಿ ನಗರದ ವ್ಯಕ್ತಿಯೊಬ್ಬರು ಸೇರಿದಂತೆ ನಾಲ್ವರ ತಂಡ, 13 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ (Skydiving) ಮಾಡುವಾಗ ರಾಮಮಂದಿರ, ಜೈ ಶ್ರೀರಾಮ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬ್ಯಾನರ್ ಹಿಡಿದು, ಜೈಶ್ರೀರಾಮ್ ಘೋಷಣೆ ಕೂಗಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

    ನಮೋ ಸ್ಕೈಡೈವರ್ಸ್ ಎಂಬ ಈ ನಾಲ್ವರ ತಂಡ ಈ ಸಾಹಸ ಮಾಡಿದ್ದಾರೆ. ನಗರದ ರಾಮನ ಪರಮ ಭಕ್ತರಾದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಈ ಸಾಹಸ ಮೆರೆದಿದ್ದು, ಇವರ ಜೊತೆ ಇವರ ಸ್ನೇಹಿತರಾದ ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ ದಿನ ಶಾಸಕ ಅಭಯ ಪಾಟೀಲ್‌ ಕಡೆಯಿಂದ 5 ಲಕ್ಷ ಲಾಡು ವಿತರಣೆ

    ರಾಮ ಭಕ್ತರ 500 ವರ್ಷಗಳ ಕನಸು ನನಸಾಗುತ್ತಿರುವ ಈ ಸಮಯದಲ್ಲಿ, ದೇಶದೆಲ್ಲೆಡೆ ರಾಮನ ಭಕ್ತರು ನಾನಾ ರೀತಿಯಲ್ಲಿ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರಿನ ಮಾಲ್‍ಗಳಲ್ಲಿ ರಾಮನ ರಂಗೋಲಿ ಬಿಡಿಸಿದ್ದು ಸುದ್ದಿಯಾಗಿತ್ತು. ಅದೇ ರೀತಿ ನಮೋ ಸ್ಕೈಡೈವರ್ಸ್ ತಂಡ ಕೂಡ ವಿಶೇಷ ಸಾಧನೆ ಮಾಡಿ ರಾಮನ ಭಕ್ತರ ಮನಸ್ಸನ್ನು ಗೆದ್ದಿದ್ದಾರೆ.

    ರಾಮನಿಗೆ, ರಾಮ ಭಕ್ತಿಗೆ ವ್ಯಾಪ್ತಿಯ ಮಿತಿಯಿಲ್ಲ. ಹಾಗಾಗಿ ಆಗಸದಲ್ಲೂ ಶ್ರೀ ರಾಮನ ಹೆಸರು ಹಾರಬೇಕು ಎಂದು ವಿಭಿನ್ನ ಪ್ರಯತ್ನವನ್ನು ನಮೋ ಸ್ಕೈ ಡೈವರ್ಸ್ ತಂಡ ಮಾಡಿದೆ. ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್‌ ಸಸ್ಯಹಾರಿ ಹೋಟೆಲ್‌

  • ಹಾರಾಟದಲ್ಲಿದ್ದ ವಿಮಾನದಲ್ಲೇ ಗಂಡ, ಹೆಂಡತಿ ಗಲಾಟೆ – ಬ್ಯಾಂಕಾಕ್‍ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್

    ಹಾರಾಟದಲ್ಲಿದ್ದ ವಿಮಾನದಲ್ಲೇ ಗಂಡ, ಹೆಂಡತಿ ಗಲಾಟೆ – ಬ್ಯಾಂಕಾಕ್‍ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್

    ನವದೆಹಲಿ: ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನದಲ್ಲೇ (Flight) ಗಂಡ (Husband) ಹೆಂಡತಿ (Wife) ಗಲಾಟೆ ಆರಂಭಿಸಿ ಬೇರೆ ಪ್ರಯಾಣಿಕರಿಗೆ ತೊಂದರೆ ಕೊಟ್ಟ ಪರಿಣಾಮ ಸ್ವಿಟ್ಜರ್ಲೆಂಡ್‍ನ ಮ್ಯೂನಿಚ್‍ಯಿಂದ ಬ್ಯಾಂಕಾಕ್‍ಗೆ (Bangkok) ತೆರಳುತ್ತಿದ್ದ ವಿಮಾನವನ್ನು ದೆಹಲಿಯಲ್ಲಿ (Delhi) ಇಳಿಸಿದ ಘಟನೆ ನಡೆದಿದೆ.

    ಪತಿ-ಪತ್ನಿಯ ನಡುವಿನ ಜಗಳಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಅವರಿಬ್ಬರ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ವಿಮಾನದ ಸಿಬ್ಬಂದಿ ಆರಂಭದಲ್ಲಿ ಪಾಕಿಸ್ತಾನದಲ್ಲಿ ಇಳಿಯಲು ವಿನಂತಿಸಿದ್ದಾರೆ. ಪಾಕ್‍ನಲ್ಲಿ ವಿಮಾನ ಇಳಿಸಲು ಅನುಮತಿ ಸಿಗದ ಕಾರಣ ವಿಮಾನವನ್ನು ದೆಹಲಿಯಲ್ಲಿ ಇಳಿಸಲಾಯಿತು ಎಂದು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ

    ಗಲಾಟೆಯ ನಂತರ ಮಹಿಳೆ ತನ್ನ ಗಂಡನಿಂದ ತನಗೆ ಬೆದರಿಕೆ ಇದೆ ಎಂದು ಪೈಲಟ್ ಬಳಿ ಹೇಳಿಕೊಂಡಿದ್ದು, ಸಹಾಯಕ್ಕಾಗಿ ಕೇಳಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಗಲಾಟೆ ಮಾಡಿದ ಇಬ್ಬರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ಅಕ್ಟೋಬರ್‍ನಲ್ಲಿ ಪ್ರಯಾಣಿಕನೊಬ್ಬ ದೆಹಲಿಗೆ ಹೋಗುವ ಈಜಿಪ್ಟ್ ಏರ್ ವಿಮಾನದಲ್ಲಿ ಕೆಲವು ಸೀಟುಗಳನ್ನು ಹಾನಿಗೊಳಿಸಿದ್ದ. ಅಲ್ಲದೇ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ್ದ. ಬಳಿಕ ಆತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇದನ್ನೂ ಓದಿ: 25 ದಿನಗಳಿಗೆ ಸಾಕಾಗುವಷ್ಟು ಆಹಾರ ಸುರಂಗದಲ್ಲೇ ಉಳಿದಿದೆ: ಕಾರ್ಮಿಕ ಅಖಿಲೇಶ್‌

  • ಅಂತಾರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಲಬುರಗಿ ಬಾಲಕನ ಚಿನ್ನದ ಸಾಧನೆ

    ಅಂತಾರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಲಬುರಗಿ ಬಾಲಕನ ಚಿನ್ನದ ಸಾಧನೆ

    ಕಲಬುರಗಿ (ಅಫಜಲಪುರ): ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನ ಮನುಡ್ಟಿಡ್ಲೋರ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್ (International Skating Competition) ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಕಲಬುರಗಿ ಜಿಲ್ಲೆಯ ಬಾಲಕ ಚಂದ್ರಕಾಂತ ಬಡದಾಳ ಚಿನ್ನದ ಪದಕ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದಾರೆ.

    ಕಲಬುರಗಿ (Kalabiragi) ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಾಣಹಟ್ಟಿ ಗ್ರಾಮದ ಬಾಲಕ ಇದೀಗ ದೇಶಕ್ಕೆ ಕೀರ್ತಿ ತಂದಿದ್ದಾರೆ. ಬಾಲಕನ ತಂದೆ ರಾಜು ಬಡದಾಳ ಮಹಾರಾಷ್ಟ್ರದ ಪುಣೆ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸವಾಗಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ಮಗನಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಹಂಬಲದಿಂದ ಪೋಷಕರು ಸ್ಥಳೀಯ ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದರು. ಅಲ್ಲಿ ಚಂದ್ರಕಾಂತನ ಕ್ರೀಡಾಪ್ರತಿಭೆ ಗುರುತಿಸಿದ ಶಿಕ್ಷಕರು ಸ್ಕೇಟಿಂಗ್‌ ತರಬೇತುದಾರ ಅಬ್ದುಲ್ ಶೇಖ್‌ ಬಳಿ ತರಬೇತಿ ಕೊಡಿಸಿದ್ದಾರೆ.

    ಕಳೆದ 2023ರ ಮೇ 23 ರಿಂದ 31ರ ವರೆಗೆ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಂದ್ರಕಾಂತ ಕೇವಲ 11.21 ಸೆಕೆಂಡುಗಳಲ್ಲೇ 100 ಮೀಟರ್ ಕ್ರಮಿಸಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದರು. ಇದರಿಂದ ಬ್ಯಾಂಕಾಕ್‌ನ ಅಂತಾರಾಷ್ಟ್ರೀಯ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಇದನ್ನೂ ಓದಿ: World Cup 2023: 102 ರನ್‌ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ

    ಸಮಯಕ್ಕೆ ಸರಿಯಾಗಿ ಬಸ್‌ ವ್ಯವಸ್ಥೆಯೂ ಇಲ್ಲದ ಪುಟ್ಟ ಗ್ರಾಮದಿಂದ ಬಂದ 5ನೇ ತರಗತಿ ಬಾಲಕ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಅಕ್ಟೋಬರ್ 1ರಂದು ಬ್ಯಾಂಕಾಕ್ ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತ, ಹಾಂಕಾಂಗ್, ಮಲೇಷ್ಯಾ, ಥೈಲ್ಯಾಂಡ್ ಸೇರಿದಂತೆ ಅನೇಕ ದೇಶಗಳಿಂದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಿದ ಚಂದ್ರಕಾಂತ ಬಡದಾಳ 1,000 ಮೀಟರ್ ಸ್ಪೀಡ್ ರಿಂಗ್‌ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ, 500 ಮೀಟರ್ ಸ್ಪೀಡ್ ರಿಂಗ್‌ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ, 300 ಮೀಟರ್ ಸ್ಪೀಡ್ ರಿಂಗ್‌ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ, ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕೀರ್ತಿ ತಂದಿದ್ದಾರೆ. ಬಾಲಕನ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಚಂದ್ರಕಾಂತ ಬಡದಾಳ ಅವರ ಕ್ರೀಡಾ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: Asian Games 2023: ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಸಾತ್ವಿಕ್‌ಸಾಯಿರಾಜ್, ಚಿರಾಗ್‌ ಜೋಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾಂಕಾಕ್‌ನಿಂದ ಬೆಂಗ್ಳೂರಿಗೆ ಸಾಗಿಸ್ತಿದ್ದ ಹೆಬ್ಬಾವು, ಉಡ, ಮೊಸಳೆ ಇನ್ನಿತರ ಪ್ರಾಣಿಗಳು ವಶ

    ಬ್ಯಾಂಕಾಕ್‌ನಿಂದ ಬೆಂಗ್ಳೂರಿಗೆ ಸಾಗಿಸ್ತಿದ್ದ ಹೆಬ್ಬಾವು, ಉಡ, ಮೊಸಳೆ ಇನ್ನಿತರ ಪ್ರಾಣಿಗಳು ವಶ

    ಚಿಕ್ಕಬಳ್ಳಾಪುರ: ಬ್ಯಾಂಕಾಕ್ ‌ನಿಂದ (Bangkok) ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಹೆಬ್ಬಾವು, ಉಡ, ಮೊಸಳೆ, ಆಮೆ, ಗೋಸುಂಬೆ ಕಾಂಗರೂ ಮರಿ ಸೇರಿದಂತೆ ಅನೇಕ ಪ್ರಾಣಿ ಹಾಗೂ ಸರಿಸೃಪಗಳನ್ನ ವಶಕ್ಕೆ‌ ಪಡೆಯಲಾಗಿದೆ.

    ಬೆಂಗಳೂರಿನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ತಪಾಸಣೆ ವೇಳೆ 234 ವನ್ಯ ಜೀವಿಗಳು ಪತ್ತೆಯಾಗಿವೆ. ಇದನ್ನೂ ಓದಿ: 146 ಪ್ರಯತ್ನಗಳ ಪೈಕಿ 69 ಚಂದ್ರಯಾನಗಳು ಯಶಸ್ವಿ – ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯ ಪ್ರಮುಖ ಉದ್ದೇಶವೇನು?

    ಪ್ರಯಾಣಿಕನೊರ್ವ ಲಗೇಜ್ ಬ್ಯಾಗ್‌ನಲ್ಲಿ ಬಾಕ್ಸ್‌ಗಳ ಮೂಲಕ ಉಡ, ಮೊಸಳೆ ಮರಿ, ಅಮೆ, ಹೆಬ್ಬಾವು ಮರಿ, ಗೋಸುಂಬೆ ಸೇರಿದಂತೆ ಒಂದು ಕಾಂಗರೂ ಮರಿಯನ್ನೂ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಪ್ರಯಾಣಿಕನೊಬ್ಬನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]