ಭೂಮಿ ಕುಸಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಡಿಯೋದಲ್ಲಿ ನಿಧಾನಗತಿಯಲ್ಲಿ ಭೂಮಿ ಕುಸಿಯುತ್ತಿರುವ ದೃಶ್ಯ ಕಂಡುಬಂದಿದೆ. ಅದರೊಂದಿಗೆ ಸುತ್ತಮುತ್ತಲಿನ ವಿದ್ಯುತ್ ಕಂಬ ಹಾಗೂ ನೀರಿನ ಪೈಪ್‌ಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ. ಈ ಕುಸಿತದಿಂದಾಗಿ ನಾಲ್ಕು ಪಥದ ರಸ್ತೆಯ ಮಾರ್ಗ ಸಂಪೂರ್ಣವಾಗಿ ಕಡಿತಗೊಂಡಿದೆ.
WATCH: Massive sinkhole opens up in Bangkok, swallowing parts of a busy street pic.twitter.com/401tq7fB5f
ಬಂದೂಕುಧಾರಿಗೂ ಮಾರ್ಕೆಟ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಗುಂಡಿನ ದಾಳಿಯ ನಿಖರ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಈ ರೀತಿಯ ಗುಂಡಿನ ದಾಳಿಗಳು ಸಾಮಾನ್ಯವಾಗಿವೆ. 2020ರಲ್ಲಿ ಕಿರಿಯ ಸೇನಾಧಿಕಾರಿ ಗುಂಡಿನ ದಾಳಿ ನಡೆಸಿ, 29 ಜನರ ಸಾವಿಗೆ ಕಾರಣನಾಗಿದ್ದ. ಈ ಘಟನೆಯಲ್ಲಿ 58 ಜನ ಗಾಯಗೊಂಡಿದ್ದರು.
ನಟ ದರ್ಶನ್ (Darshan) ಥಾಯ್ಲೆಂಡ್‌ಗೆ ತೆರಳಿ 6 ದಿನಗಳು ಕಳೆದಿದೆ. ಮೂಲಗಳ ಪ್ರಕಾರ.. ಸಿನಿಮಾದ ಹಾಡಿನ ಚಿತ್ರೀಕರಣ ಮುಕ್ತಾಯವಾಗಿದ್ದು ಸೋಮವಾರದಿಂದ (ಜು.21) ಒಂದಷ್ಟು ದಿನ ದರ್ಶನ್ ಅಲ್ಲಿಯೇ ಇದ್ದು ವಿಶ್ರಾಂತಿ ಪಡೆಯಲಿದ್ದಾರೆ ಅಂತ ಹೇಳಲಾಗ್ತಿದೆ.
ಥಾಯ್ಲೆಂಡ್‌ನ ಫುಕೆಟ್, ಬ್ಯಾಂಕಾಕ್‌ನಲ್ಲಿ ʻಡೆವಿಲ್ʼ ಚಿತ್ರದ ಹಾಡಿನ ಚಿತ್ರೀಕರಣ ನಡೆದಿದೆ. 10 ದಿನಕ್ಕಾಗಿ ದರ್ಶನ್ ವಿದೇಶಕ್ಕೆ ತೆರಳಿದ್ದರು. ಇದೇ ಮಂಗಳವಾರ ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ಸಲ್ಲಿಸಲಾಗಿದ್ದ ಅರ್ಜಿ ವಿಚಾರವಾಗಿ ಆದೇಶ ಹೊರಬೀಳಲಿದ್ದು ದರ್ಶನ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ ದರ್ಶನ್ ಥಾಯ್ಲೆಂಡ್‌ನಲ್ಲಿ (Thailand) ಸ್ನೇಹಿತರ ಜೊತೆ ಆರಾಮಾಗಿ ಇರುವ ಒಂದಷ್ಟು ಫೋಟೋಗಳು ವೈರಲ್ ಆಗಿದೆ. ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್ – ಸಮಾಧಿಯೊಳಗಿನ `ಸತ್ಯ’ ಹೇಳುತ್ತಾ ಅಸ್ಥಿಪಂಜರ?
`ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಕ್ಕಾಗಿ ಹೋಗಿದ್ದ ದರ್ಶನ್ ಆ ವೇಳೆ ಪತ್ನಿ ಹಾಗೂ ಪುತ್ರನನ್ನೂ ಕರೆದುಕೊಂಡು ಹೋಗಿದ್ದರು. ಸುದೀರ್ಘ ಗ್ಯಾಪ್ ಬಳಿಕ ದರ್ಶನ್ ವಿದೇಶಕ್ಕೆ ತೆರಳಿದ್ದಾರೆ. ಒಂದು ವೇಳೆ ಮತ್ತೆ ಹೋಗಬೇಕಂದ್ರೂ ಕೋರ್ಟ್ ಅನುಮತಿ ಪಡೆಯಲೇಬೇಕಾಗುತ್ತೆ. ಅದೇನೇ ಇದ್ರೂ ದರ್ಶನ್ ಬೇಲ್ ಭವಿಷ್ಯ ಮಂಗಳವಾರ ನಿರ್ಧಾರವಾಗುತ್ತೆ. ಅಲ್ಲಿಯವರೆಗೂ ದರ್ಶನ್‌ಗೂ ಕೂಡ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಸಿಎಂ ಮೊದಲು ಆಡಳಿತ ಪಕ್ಷದ ಶಾಸಕರ ಪ್ರಶ್ನೆಗೆ ಉತ್ತರ ನೀಡಲಿ: ವಿಜಯೇಂದ್ರ ಸವಾಲು
– ಬಾಂಗ್ಲಾ ಮುಖ್ಯ ಸಲಹೆಗಾರ ಯೂನುಸ್ ಜೊತೆ ದ್ವಿಪಕ್ಷೀಯ ಮಾತುಕತೆ
ಬ್ಯಾಂಕಾಕ್: ಬಿಮ್‌ಸ್ಟೆಕ್ (BIMSTEC) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಅಲ್ಲಿರುವ ವಾಟ್ ಫ್ರಾ (Wat Phra) ಬೌದ್ಧ ದೇವಾಲಯಕ್ಕೆ ಭೇಟಿ ನೀಡಿದರು. ಭೇಟಿ ವೇಳೆ ಪ್ರಧಾನಿಯವರು ಅಲ್ಲಿ ಬೌದ್ಧ ಸನ್ಯಾಸಿಗಳೊಂದಿಗೆ ಸಂವಾದ ನಡೆಸಿದರು.
ಬ್ಯಾಂಕಾಕ್‌ಗೆ ಭೇಟಿ ನೀಡಿದ ಮೋದಿ, ಥಾಯ್ ರಾಮಾಯಣ ಹಾಗೂ ಗರ್ಭಾ ನೃತ್ಯವನ್ನು ವೀಕ್ಷಿಸಿದರು. ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ `ರಾಮಕಿಯೆನ್’ ಅನ್ನು ವೀಕ್ಷಿಸಿದರು.
ಬ್ಯಾಂಕಾಕ್: ಕಳೆದ ವಾರ ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನಲ್ಲಿ (Bangkok) ಸಂಭವಿಸಿದ್ದ ಭೂಕಂಪದ ವೇಳೆ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ ದಾಖಲೆಗಳನ್ನು ಕದ್ದುಕೊಂಡು ಹೋಗಲು ಯತ್ನಿಸಿದ್ದ ನಾಲ್ವರು ಚೀನಿ ಪ್ರಜೆಗಳನ್ನು ಥೈಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಥೈಲ್ಯಾಂಡ್ ಪೊಲೀಸರು ಮಾತನಾಡಿ, ಮಾ.28 ರಂದು ಮಯನ್ಮಾರ್‌ನಲ್ಲಿ ಸಂಭವಿಸಿದ್ದ ಪ್ರಬಲವಾದ ಭೂಕಂಪದ ಪರಿಣಾಮ ಬ್ಯಾಕಾಂಕ್‌ನ ಕೆಲವು ಕಡೆಗಳಲ್ಲಿ ಕಟ್ಟಡಗಳು ಕುಸಿದಿದ್ದವು. ಈ ವೇಳೆ ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದಿತ್ತು. ಈ ವೇಳೆ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿ ದಾಖಲೆಗಳನ್ನು ಅಲ್ಲಿಂದ ಕೊಂಡೊಯ್ಯಲು ಪ್ರಯತ್ನಿಸಿದ್ದರು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಗುಜರಾತ್‌ನಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ – ಮಹಿಳಾ ಪೈಲಟ್‌ಗೆ ಗಾಯ
ಮ್ಯಾನ್ಮಾರ್‌ನ ಮಧ್ಯಭಾಗದಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಸಂದರ್ಭದಲ್ಲಿ 30 ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿದಿದೆ. ಭೂಕಂಪದ ಬಳಿಕ ಬ್ಯಾಂಕಾಕ್ ಗವರ್ನರ್ ಕುಸಿತದ ಪ್ರದೇಶವನ್ನು ವಿಪತ್ತು ವಲಯವೆಂದು ಘೋಷಿಸಿದ್ದು, ಈ ಮೂಲಕ ಅದನ್ನು ನಿರ್ಬಂಧಿತ ಪ್ರದೇಶವೆಂದು ತಿಳಿಸಲಾಗಿತ್ತು. ಆ ಪ್ರದೇಶಕ್ಕೆ ಅನುಮತಿಯಿಲ್ಲದೆ ಯಾರಿಗೂ ಪ್ರವೇಶಿಸಲು ಅವಕಾಶವಿಲ್ಲ ಎಂದು ಸೂಚಿಸಲಾಗಿತ್ತು. ಆದರೆ ಮಾ.29 ರಂದು ನಾಲ್ವರು ಚೀನೀ ಪ್ರಜೆಗಳು ಸ್ಥಳದಿಂದ 32 ದಾಖಲೆಗಳ ಫೈಲ್‌ಗಳನ್ನು ಕೊಂಡೊಯ್ಯತ್ತಿರುವ ಮಾಹಿತಿ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾನುವಾರದ ವೇಳೆಗೆ 17 ಜನರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ. 76 ಜನರು ಇನ್ನೂ ಪತ್ತೆಯಾಗಿಲ್ಲ. ಆ ಪೈಕಿ ಹೆಚ್ಚಿನವರು ಕುಸಿದ ಕಟ್ಟಡದಲ್ಲಿ ನಿರ್ಮಾಣ ಕಾರ್ಮಿಕರಾಗಿದ್ದವರು. ಬದುಕುಳಿದವರನ್ನು ಪತ್ತೆಹಚ್ಚಲು ಶೋಧ ಕಾರ್ಯಗಳು ತೀವ್ರವಾಗಿ ನಡೆಯುತ್ತಿವೆ.
ಬೆಂಗಳೂರು: ಪ್ರಕೃತಿಯ ಮುಂದೆ ಮನುಷ್ಯ ಏನೂ ಇಲ್ಲ ಅನ್ನೋದಕ್ಕೆ ಮ್ಯಾನ್ಮಾರ್ (Myanmar) ಮತ್ತು ಥೈಲ್ಯಾಂಡ್‌ನಲ್ಲಿ (Thailand) ನಡೆದ ಭೂಕಂಪವೇ (Earthquake) ಸಾಕ್ಷಿ. ನೋಡ ನೋಡ್ತಿದ್ದಂತೆ ಭೂಮಿ ಪ್ರಬಲವಾಗಿ ಕಂಪಿಸಿ ಕ್ಷಣಮಾತ್ರದಲ್ಲೇ ಕೋಟ್ಯಂತರ ಜನರಿಗೆ ಇಷ್ಟೇ ಜೀವನ ಅನ್ನೋದನ್ನ ತೋರಿಸಿಬಿಟ್ಟಿತ್ತು. ಇತಂಹ ಘನಘೋರ ಭೂಕಂಪನದಿಂದ ಪಾರಾದ ಕನ್ನಡದ ದಂಪತಿ ತಾಯ್ನಾಡಿಗೆ ಮರಳಿದ್ದಾರೆ.
ಹೌದು, ಹೀಗೆ ಆರಾಮಾಗಿ ಮಗುವಿನೊಂದಿಗೆ ಕಾಲ ಕಳೆಯುತ್ತಿರುವ ದಂಪತಿ ಹೆಸರು ಅಕ್ಷಯ್ ಮತ್ತು ಜಾಗೃತಿ. ಕಳೆದ ವಾರ ತಮ್ಮ 2 ವರ್ಷದ ಮಗನೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರು. 4 ದಿನ ಥೈಲ್ಯಾಂಡ್‌ನ ವಿವಿಧ ಪ್ರವಾಸಿ ತಾಣಗಳನ್ನ ನೋಡಿ ಎಂಜಾಯ್ ಮಾಡಿ, ಶುಕ್ರವಾರ ಬ್ಯಾಂಕಾಕ್‌ಗೆ (Bangkok) ತಲುಪಿದ್ದರು. ಇನ್ನೂ 3 ದಿನ ಬ್ಯಾಂಕಾಕ್‌ನಲ್ಲೇ ಟೂರ್ ಮಾಡಿ ಬರಬೇಕಿದ್ದ ದಂಪತಿ ಶನಿವಾರವೇ ಬೆಂಗಳೂರಿಗೆ ವಾಪಸಾಗಿದ್ದಾರೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ
ಶುಕ್ರವಾರ ಮಧ್ಯಾಹ್ನ ಹೋಟೆಲ್‌ನಲ್ಲಿ ಚೆಕ್‌ಇನ್ ಆಗಿ ಮಗನಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಭೂಮಿ ಕಂಪಿಸಿದೆ. ತಾವಿದ್ದ ಹೋಟೆಲ್ ಕೂಡ ಕಂಪಿಸಿದೆ. ಮೊದಲು ಏನೋ ಹೋಟೆಲ್‌ನದ್ದೇ ಸಮಸ್ಯೆ ಇರಬೇಕು ಅಂದುಕೊಂಡಿದ್ದೆವು. ಆದರೆ ಯಾವಾಗ ಇನ್ನಷ್ಟು ಕಂಪನ ಜೋರಾದಾಗ ಮೊದಲು ಜೀವ ಉಳಿಸಿಕೊಳ್ಳೋಣ ಎಂದು ಕಂಕುಳಲ್ಲಿ ಮಗುವನ್ನ ಹಾಕಿಕೊಂಡು 10ನೇ ಫ್ಲೋರ್‌ನಿಂದ ಇಳಿದು ಬಂದಿದ್ದೇವೆ ಎಂದು ಜಾಗೃತಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮೆಗಾ ಡೈರಿ ಸ್ಥಾಪನೆಗೆ ಕಿತ್ತಾಟ – ರೈತರಿಂದ ಕೆಎಂಎಫ್ ಅಧ್ಯಕ್ಷರ ತರಾಟೆ
ಇನ್ನೂ ಜಾಗೃತಿ ಅವರ ಪತಿ ಅಕ್ಷಯ್ ಮಾತನಾಡಿ, ಬದುಕುಳಿದರೆ ನಮ್ಮ ದೇಶಕ್ಕೆ ಹೋಗೋಣ ಎಂದು ಪಾಸ್‌ಪೋರ್ಟ್ ತೆಗದುಕೊಂಡು ಮಗು ಪತ್ನಿಯನ್ನ ಕರೆದುಕೊಂಡು ಆ ಹೋಟೆಲ್‌ನಿಂದ ಹೇಗೆ ಕೆಳಕ್ಕೆ ಬಂದೆವು ಎನ್ನುವುದೇ ಗೊತ್ತಾಗಲಿಲ್ಲ. ಭಯ, ರಸ್ತೆ ತುಂಬ ಜನ, ಎಲ್ಲಿ ಏನಾಗ್ತಿದೆ ಅನ್ನೋದೆ ತಿಳಿಯುತ್ತಿಲ್ಲ. ಭೂಮಿ ಕಂಪಿಸಿದ ರೀತಿ, ಹೋಟೆಲ್ ಕೂಡ ಶೇಕ್ ಆಗಿ ಏನು ಮಾಡುವುದು ಎಂದು ತಿಳಿಯದಂತಾಗಿತ್ತು. ದೇವರ ಧಯೆಯಿಂದ ಬದುಕಿ ಬಂದಿದ್ದೇವೆ ಎಂದು ಭೂಕಂಪನ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಂಬ್ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್ – ದೈತ್ಯ ಮಿಸೈಲ್ ಸಿದ್ಧಪಡಿಸಿದ ಇರಾನ್
ಒಟ್ಟಿನಲ್ಲಿ ಬ್ಯಾಂಕಾಕ್ ಪ್ರವಾಸಕ್ಕೆ ಹೋದ ಬೆಂಗಳೂರಿನ (Bengaluru) ದಂಪತಿ ಭೂಕಂಪನದ ಅನುಭವವನ್ನ ಏಳೆಏಳೆಯಾಗಿ ಹೇಳಿದ್ದು, ಅಬ್ಬಾ ಹೇಗೋ ಸೇಫ್ ಆಗಿ ಬಂದಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ನೇಪಿಟಾವ್: ಮ್ಯಾನ್ಮಾರ್ (Myanmar Earthquake) ಮತ್ತು ಥಾಯ್ಲೆಂಡ್‌ನ (Thailand) ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಎರಡು ದೇಶಗಳನ್ನು ತೀವ್ರವಾಗಿ ಕಾಡಿದೆ. ಒಂದು ಕಡೆ ಅವಶೇಷಗಳ ಅಡಿಗಳಲ್ಲಿ ಸಿಲುಕಿರುವ ರಕ್ಷಣೆ ಮುಂದುವರಿದಿದ್ದು, ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮತ್ತೊಂದು ಕಡೆ ಭೂಕಂಪನ ಬಗ್ಗೆ ಅಧ್ಯಯನಗಳು ನಡೆಯುತ್ತಿದ್ದು, ಮ್ಯಾನ್ಮಾರ್‌ನಲ್ಲಿ ಆದ ಕಂಪನದ ಬಗ್ಗೆ ವಿಜ್ಞಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಈ ಕಂಪನದ ಶಕ್ತಿಯನ್ನು 334 ಅಣುಬಾಂಬ್‌ಗಳಿಗೆ ಹೋಲಿಸಿದ್ದಾರೆ.
ಮೊನ್ನೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪವು ದೇಶದ ಮಧ್ಯಭಾಗವನ್ನು ನಾಶ ಮಾಡಿದೆ. ಕಟ್ಟಡಗಳು, ದೇವಸ್ಥಾನಗಳು ಸೇರಿ ಐತಿಹಾಸಿಕ ರಚನೆಗಳು ನೆಲಸಮವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಸಾವಿನ ಸಂಖ್ಯೆ 1,644ಕ್ಕೆ ಏರಿದ್ದು, 3,408ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಸೇನಾ ಸರ್ಕಾರ ದೃಢಪಡಿಸಿದೆ. ರಕ್ಷಣಾ ಕಾರ್ಯಚರಣೆ ಇನ್ನೂ ಮುಂದುವರಿದಿದ್ದು, ಈ ವಿನಾಶದ ಹೊಡೆತದಿಂದ ಹೊರ ತರಲು ಇನ್ನೂ ಸಾಕಷ್ಟು ಸಮಯ ಬೇಕಿದೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ
ಒಂದು ಕಡೆ ಸಾವುಗಳು ಹೆಚ್ಚುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದರೆ, ಮತ್ತೊಂದು ಕಡೆ ಈ ಪ್ರಬಲ ಭೂಕಂಪನದ ಬಗ್ಗೆ ಭೂಗರ್ಭಶಾಸ್ತ್ರದ ವಿಜ್ಞಾನಿಗಳು ಅಧ್ಯಯನ ಆರಂಭಿಸಿದ್ದಾರೆ. ಈ ನಡುವೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು 334 ಅಣುಬಾಂಬ್‌ಗಳ ಶಕ್ತಿಗೆ ಸಮಾನವಾಗಿದೆ ಎಂದು ಅಮೆರಿಕದ ಭೂವಿಜ್ಞಾನಿ ಜೆಸ್ ಫೀನಿಕ್ಸ್ ತಿಳಿಸಿದ್ದಾರೆ.
ಇದೇ ರೀತಿ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಸಹ ಒಂದು ನಿರ್ಮಾಣ ಹಂತದ ಗಗನಚುಂಬಿ ಕಟ್ಟಡ ಕುಸಿದು 20 ಕ್ಕೂ ಅಧಿಕ ಮಂದಿ ಜನರು ಮೃತಪಟ್ಟಿದ್ದಾರೆ. ಭೂಕಂಪದ ನಂತರ 6.4 ತೀವ್ರತೆಯ ಪ್ರಬಲ ಆಫ್ಟರ್‌ಶಾಕ್ ಸೇರಿದಂತೆ ಹಲವಾರು ಸಣ್ಣ ಕಂಪನಗಳು ದಾಖಲಾಗಿವೆ. ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ, ಶುಕ್ರವಾರದಂದು 10 ಗಂಟೆಗಳ ಅವಧಿಯಲ್ಲಿ ಒಟ್ಟು 15 ಭೂಕಂಪಗಳು ಸಂಭವಿಸಿವೆ. ಈ ಆಫ್ಟರ್‌ಶಾಕ್‌ಗಳು ಮುಂದಿನ ಕೆಲವು ತಿಂಗಳ ವರೆಗೆ ಮುಂದುವರಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು
ಮ್ಯಾನ್ಮಾರ್‌ನ ಸೇನಾ ಸರ್ಕಾರವು ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ. ಇದು ಸಾಮಾನ್ಯವಾಗಿ ವಿದೇಶಿ ಸಹಾಯವನ್ನು ತಿರಸ್ಕರಿಸುವ ಮ್ಯಾನ್ಮಾರ್‌ನಿಂದ ಅಪರೂಪದ ಕ್ರಮವಾಗಿದೆ. ಭಾರತವು ತನ್ನ ನೆರೆಯ ರಾಷ್ಟ್ರಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದು, ‘ಆಪರೇಷನ್ ಬ್ರಹ್ಮ’ದಡಿ 15 ಟನ್‌ಗಳ ಸಹಾಯ ಸಾಮಗ್ರಿಗಳನ್ನು ಭಾರತೀಯ ವಾಯುಪಡೆಯ C-130J ವಿಮಾನದ ಮೂಲಕ ಮ್ಯಾನ್ಮಾರ್‌ಗೆ ರವಾನಿಸಿದೆ. ಇದರಲ್ಲಿ ಟೆಂಟ್‌ಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಕಂಬಳಿಗಳು, ಆಹಾರ ಪೊಟ್ಟಣಗಳು, ವಾಟರ್ ಪ್ಯೂರಿಫೈಯರ್‌ಗಳು, ಸೌರ ದೀಪಗಳು ಮತ್ತು ವೈದ್ಯಕೀಯ ಸಾಮಗ್ರಿಗಳು ಸೇರಿವೆ. ಜೊತೆಗೆ, ಭಾರತೀಯ ನೌಕಾಪಡೆಯ ಎರಡು ಯುದ್ಧನೌಕೆಗಳಾದ INS ಸತ್ಪುರ ಮತ್ತು INS ಸಾವಿತ್ರಿ 40 ಟನ್‌ಗಳ ಸಹಾಯ ಸಾಮಗ್ರಿಗಳೊಂದಿಗೆ ಯಾಂಗೊನ್ ಬಂದರಿಗೆ ತೆರಳಿವೆ.
ಚೀನಾವು ತನ್ನ 37 ಸದಸ್ಯರ ರಕ್ಷಣಾ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಿದ್ದು, ಇದು ಅಂತಾರಾಷ್ಟ್ರೀಯ ರಕ್ಷಣಾ ಗುಂಪಾಗಿ ಮೊದಲಿಗೆ ಆಗಮಿಸಿದೆ. ಜೊತೆಗೆ, 100 ಮಿಲಿಯನ್ ಯುವಾನ್ (13 ಮಿಲಿಯನ್ ಡಾಲರ್) ಮೌಲ್ಯದ ಮಾನವೀಯ ಸಹಾಯವನ್ನು ಒದಗಿಸುವ ಭರವಸೆ ನೀಡಿದೆ. ರಷ್ಯಾ ಕೂಡಾ ರಕ್ಷಣಾ ತಂಡ ಕಳುಹಿಸಿದೆ. ಅಮೆರಿಕ ಕೂಡಾ ನೆರವಿನ ಭರವಸೆ ನೀಡಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ
USGS ಪ್ರಕಾರ, ಈ ಭೂಕಂಪದಿಂದ ಸಾವಿನ ಸಂಖ್ಯೆ 10,000 ದಾಟುವ ಸಂಭವನೀಯತೆ ಇದೆ ಎಂದು ಎಚ್ಚರಿಸಲಾಗಿದೆ. ಮ್ಯಾನ್ಮಾರ್‌ನ ಆಂತರಿಕ ಸಂಘರ್ಷ ಮತ್ತು ಸಂಪರ್ಕದ ಕೊರತೆಯಿಂದಾಗಿ ನಿಖರ ಮಾಹಿತಿ ಸಂಗ್ರಹಿಸುವುದು ಸವಾಲಾಗಿದೆ. ಇದೇ ವೇಳೆ, ವಿರೋಧಿ ಗುಂಪುಗಳಾದ ಪೀಪಲ್ಸ್ ಡಿಫೆನ್ಸ್ ಫೋರ್ಸ್ ರಕ್ಷಣಾ ಕಾರ್ಯಗಳಿಗೆ ಸಹಕಾರ ನೀಡಲು ಎರಡು ವಾರಗಳ ಕದನ ವಿರಾಮ ಘೋಷಿಸಿದೆ. ಈ ಭೂಕಂಪವು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ಗೆ ದೊಡ್ಡ ಆಘಾತವನ್ನುಂಟು ಮಾಡಿದ್ದು, ಅಂತಾರಾಷ್ಟ್ರೀಯ ಸಮುದಾಯವು ತುರ್ತು ಸಹಾಯಕ್ಕಾಗಿ ಒಗ್ಗಟ್ಟಾಗಿ ಪ್ರಯತ್ನಿಸುತ್ತಿದೆ.
ನೇಪಿಟಾವ್/ಬ್ಯಾಂಕಾಕ್: ಮಯನ್ಮಾರ್ (Myanmar) ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಶುಕ್ರವಾರ ಬೆಳಗ್ಗೆ 11:50ರ ವೇಳೆಗೆ ಸಂಭವಿಸಿದ ಭೂಕಂಪ ಶನಿವಾರದ ಹೊತ್ತಿಗೆ ಸುಮಾರು 1600ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಅಲ್ಲದೇ 3,400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಮೊದಲ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸಾಗಯಿಂಗ್‌ನ ವಾಯುವ್ಯಕ್ಕೆ ಭೂಮಿಯಿಂದ 10 ಕಿಮೀ ಆಳದಲ್ಲೇ ಕೇಂದ್ರ ಬಿಂದು ಪತ್ತೆಯಾಗಿತ್ತು. ಇದಾದ ಕೆಲವು ಗಂಟೆಗಳಲ್ಲಿ ಇನ್ನೂ ಮೂರ್ನಾಲ್ಕು ಭಾರಿ ಭೂಕಂಪ ಸಂಭವಿಸಿತ್ತು. ಸರಣಿ ಭೂಕಂಪದ ಹಿನ್ನೆಲೆ ಗಗನ ಚುಂಬಿ ಕಟ್ಟಡಗಳು ನೆಲಕ್ಕಪ್ಪಳಿಸಿದವು. ಇದರಿಂದ ಭಾರತದ ಕೆಲ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದನ್ನೂ ಓದಿ: ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಈ ನಡುವೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದಾಗಿ ತುರ್ತುಸೇವೆಗಳು ದುರ್ಬಲವಾಗಿವೆ. ಅಲ್ಲದೇ ಅಲ್ಲಿನ ಸರ್ಕಾರವೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥವಾಗಿದೆ ಎಂದು ಹೇಳಲಾಗಿದೆ. ಸದ್ಯ ಮ್ಯಾನ್ಮಾರ್ ಒಂದರಲ್ಲೇ 1,640 ಮಂದಿ ಸಾವನ್ನಪ್ಪಿದ್ದು, ಬ್ಯಾಂಕಾಂಕ್‌ನಲ್ಲಿ ಈವರೆಗೆ 10 ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕುಸಿದ ಕಟ್ಟಡಗಳ ಅವಶೇಷಗಳ ಅಡಿ ನೂರಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ
100 ವರ್ಷಗಳ ಹಳೆಯ ಸೇತುವೆ ಕುಸಿತ
ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಅಲ್ಲದೇ ಸಾಗಯಿಂಗ್‌ನಿಂದ ಐರಾವಡ್ಡಿ ನದಿ ವರೆಗೆ ವ್ಯಾಪಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಆವಾ ಸೇತುವೆಯು ನೀರಿನಲ್ಲಿ ಕುಸಿದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪತಿ, ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟ ಬಳಿಕ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡ ಮಹಿಳೆ
ಬ್ಯಾಂಕಾಕ್: ಶುಕ್ರವಾರ ಸಂಭವಿಸಿದ ಭಾರೀ ಭೂಕಂಪನದಿಂದಾಗಿ (Earthquake) ಆಸ್ಪತ್ರೆ ಕಟ್ಟಡ ಧ್ವಂಸಗೊಂಡಿದ್ದರ ಪರಿಣಾಮ ಬ್ಯಾಂಕಾಕ್‌ನ (Bangkok) ರಸ್ತೆಯಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಪ್ರಸಂಗ ಕಂಡುಬಂದಿದೆ.
ಮ್ಯಾನ್ಮಾರ್‌ನಲ್ಲಿ (Myanmar) ಸಂಭವಿಸಿದ ಭಾರೀ ಭೂಕಂಪನದ ಪರಿಣಾಮ ಬ್ಯಾಂಕಾಕ್‌ನ ಆಸ್ಪತ್ರೆಗಳು ತೆರವುಗೊಂಡಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಈ ವೇಳೆ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಕರೆತರುವಾಗ ಹೆರಿಗೆ ನೋವು ಶುರುವಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಸಹಾಯದಿಂದ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಸದ್ಯ ಭೂಕಂಪನದ ನಡುವೆ ತಾಯಿ ಮಗುವಿಗೆ ಜನ್ಮ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ
ಬ್ಯಾಂಕಾಕ್‌ನ ಬಿಎನ್‌ಎಚ್ ಆಸ್ಪತ್ರೆ ಮತ್ತು ಕಿಂಗ್ ಚುಲಲಾಂಗ್‌ಕಾರ್ನ್ ಸ್ಮಾರಕ ಆಸ್ಪತ್ರೆಯ ರೋಗಿಗಳನ್ನು ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಕೆಲವು ರೋಗಿಗಳನ್ನು ಸ್ಟ್ರೆಚರ್ ಹಾಗೂ ವೀಲ್‌ಚೇರ್‌ಗಳಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು, ಬೀದಿಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
😱A woman in Bangkok was forced to give birth on the street during the earthquake, local newspaper Matichon reported.
All hospital patients were taken out into the street because of the emergency.
ನೇಪಿಟಾವ್/ಬ್ಯಾಂಕಾಕ್: ಮಯನ್ಮಾರ್ (Myanmar) ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಶನಿವಾರದ ಹೊತ್ತಿಗೆ ಸಾವಿನ ಸಂಖ್ಯೆ 1,000ಕ್ಕೆ ಏರಿಕೆಯಾಗಿದ್ದು, 2,376 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಗಳು ವರದಿ ಮಾಡಿವೆ.
India sends 15 tonnes of humanitarian aid to Myanmar after devastating #earthquake
IAF C-130J aircraft departed from AFS Hindon with relief including tents, blankets, hygiene kits, solar lamps & medical supplies like antibiotics, syringes & bandages
ಮ್ಯಾನ್ಮಾರ್‌ನಲ್ಲಿ ಶುಕ್ರವಾರ 11:50ರ ಹೊತ್ತಿಗೆ ಮೊದಲ ಬಾರಿಗೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದಾದಗ 15 ನಿಮಿಷಗಳಲ್ಲೇ ಮತ್ತೊಮ್ಮೆ 6.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಲ್ಲದೇ ಶುಕ್ರವಾರ ರಾತ್ರಿ 11:56ರ ವೇಳೆ ಮ್ಯಾನ್ಮಾರ್‌ನಲ್ಲಿ 6ನೇ ಬಾರಿಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿತ್ತು. ಹೀಗಾಗಿ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಎರಡೂ ಕಡೆ ಸೇರಿ ಒಟ್ಟು ಸಾವಿನ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ಅಲ್ಲದೇ ಅವಶೇಷಗಳ ಅಡಿ ಇನ್ನೂ ನೂರಾರು ಮಂದಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ರಸ್ತೆಗಳಲ್ಲೇ ಚಿಕಿತ್ಸೆ:
ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಇದರಿಂದ ಮ್ಯಾನ್ಮಾರ್‌ನ ನೈಪಿತಾವು ಸೇರಿ 6 ಪ್ರದೇಶ ಹಾಗೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಆಪರೇಷನ್ ಭ್ರಹ್ಮ ಸಕ್ಸಸ್
ಸಂತ್ರಸ್ತವಾಗಿರುವ ಮ್ಯಾನ್ಮಾರ್‌ಗೆ ಭಾರತ ನೆರವಿನ ಹಸ್ತ ಚಾಚಿದೆ. ಸುಮಾರು 15 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಪರಿಹಾರ ಸಾಮಗ್ರಿ ಹೊತ್ತ C-130-A ಐಎಎಫ್ (IAF) ವಿಮಾನ ಯಶಸ್ವಿಯಾಗಿ ಮ್ಯಾನ್ಮಾರ್ ತಲುಪಿದ್ದು, ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಮಾಡುತ್ತಿದೆ. ತಾತ್ಕಾಲಿಕ ಟೆಂಟ್‌ಗಳು, ಮಲಗುವ ಹಾಸಿಗೆ, ಹೊದಿಕೆಗಳು, ಆಹಾರ, ನೀರು, ನೈರ್ಮಲ್ಯ ಕಿಟ್, ಸೋಲಾರ್ ಲೈಟ್, ಜನರೇಟರ್ ಸೆಟ್ ಹಾಗೂ ಔಷಧಗಳ ನೆರವನ್ನು ಭಾರತ ನೀಡಿದೆ.
ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ:
ಮ್ಯಾನ್ಮಾರ್, ಥಾಯ್ಲೆಂಡ್‌ನಲ್ಲಿ ಭೂಂಕಪದ ಬೆನ್ನಲ್ಲೇ ಶನಿವಾರ ಮುಂಜಾನೆ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಮುಂಜಾನೆ 5:16ಕ್ಕೆ ಭೂಮಿ ಕಂಪಿಸಿದ್ದು, ಭೂಮಿಯಿಂದ 180 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದೆ. ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಫ್ಘಾನಿಸ್ತಾನದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.