Tag: Bangaru Hanumanthu

  • ಬಿಜೆಪಿ ಕೋರ್‌ ಕಮಿಟಿ ಸಭೆ – ರಾಮುಲುಗೆ ರಾಧಾಮೋಹನ್‌ ದಾಸ್‌ ಕ್ಲಾಸ್‌!

    ಬಿಜೆಪಿ ಕೋರ್‌ ಕಮಿಟಿ ಸಭೆ – ರಾಮುಲುಗೆ ರಾಧಾಮೋಹನ್‌ ದಾಸ್‌ ಕ್ಲಾಸ್‌!

    ಬೆಂಗಳೂರು: ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಸಂಸದ ಶ್ರೀರಾಮುಲುಗೆ (Sriramulu) ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ (Radha Mohan Das Agarwal) ಕ್ಲಾಸ್ ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಸಭೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯಲ್ಲಿ (Sandur By Election) ಬಂಗಾರು ಹನುಮಂತು (Bangaru Hanumanthu) ಸೋಲಿನ ಬಗ್ಗೆ ಚರ್ಚೆ ನಡೆಯಿತು. ಚುನಾವಣೆಯ ಫಲಿತಾಂಶದ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ನಾಯಕರಿಗೆ ಬಂಗಾರು ಹನುಮಂತು ದೂರು ನೀಡಿದ್ದರು.

     

    ಬಂಗಾರು ಹನುಮಂತು ದೂರನ್ನು ಆಧರಿಸಿ, ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ್ ದಾಸ್ ಅಗರ್‌ವಾಲ್ ರಾಮುಲು ಅವರ ಕಾರ್ಯವೈಖರಿ ಪ್ರಶ್ನಿಸಿದ್ದಾರೆ. ನೀವು ಉಪ-ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸರಿಯಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂಬ ದೂರು ಬಂದಿದೆ. ಇದಕ್ಕೆ ಉತ್ತರಿಸಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ದೇಹದ ಮೇಲೆ ತರಕಾರಿ ಬಿದ್ದಿತ್ತು, 1 ಗಂಟೆ ನಂತ್ರ ಜನ ಇರೋದು ಗೊತ್ತಾಯ್ತು- 9 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ರು: ಎಸ್‌ಪಿ

    ಅಗರ್‌ವಾಲ್ ಅವರ ಶಾಕಿಂಗ್‌ ಪ್ರಶ್ನೆಗೆ ಗಲಬಿಲಿಗೊಂಡ ಶ್ರೀರಾಮುಲು ನಾನು ಕಷ್ಟಪಟ್ಟು ಶ್ರಮವಹಿಸಿ, ಉಪ-ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಸುಖಾಸುಮ್ಮನೆ ದೂರು ನೀಡಲಾಗಿದೆ, ಇದು ಸರಿಯಲ್ಲ. ಇಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡುವವರಿಗೆ ಬೆಲೆಯೇ ಸಿಗುವುದಿಲ್ಲ ರಾಮುಲು ಅಸಮಾಧಾನ ಹೊರಹಾಕಿದ್ದಾರೆ. ರಾಮುಲು ಮಾತಿಗೆ ಏನೂ ಪ್ರತಿಕ್ರಿಯೆ ನೀಡದೇ ರಾಧಾಮೋಹನ್ ದಾಸ್ ಅಗರ್‌ವಾಲ್ ಸುಮ್ಮನಾಗಿದ್ದರು. ಈ ಮೂಲಕ ಬಳ್ಳಾರಿ ಬಿಜೆಪಿ ಘಟಕದ ಒಳ‌ ಕಚ್ಚಾಟ ಕೋರ್ ಕಮಿಟಿ ಸಭೆಯಲ್ಲೂ ಬಹಿರಂಗವಾಯಿತು.

    ಕೋರ್ ಕಮಿಟಿ ಸಭೆ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ಶ್ರೀರಾಮುಲು ನಿಂತಿದ್ದರು. ಈ ವೇಳೆ ರಾಮುಲು ಅವರನ್ನು ಸಿ.ಟಿ. ರವಿ ಹಾಗೂ ವಿಜಯೇಂದ್ರ ತಡೆದರು. ರವಿ ಹೇಳಿಕೆಯ ಬಳಿಕ ರಾಮುಲು ಅವರನ್ನು ಸಮಾಧಾನಪಡಿಸಲು ವಿಜಯೇಂದ್ರ, ಸಿ.ಟಿ.ರವಿ ಪಕ್ಕಕ್ಕೆ ಕರೆದುಕೊಂಡು ಹೋದರು.

    ಸದ್ಯ ಮಾಧ್ಯಮಗಳ ಮುಂದೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದೇ ಹೊರಡುವಂತೆ ರಾಮುಲುಗೆ ವಿಜಯೇಂದ್ರ ಸೂಚಿಸಿದ್ದಾರೆ. ನಂತರ ಬೇಸರದಿಂದಲೇ ಬಿಜೆಪಿ ಕಚೇರಿಯಿಂದ ರಾಮುಲು ಹೊರಟರು.

  • ಕಾಂಗ್ರೆಸ್ ಹಣ ಹಂಚಿಕೆ ಮಾಡದಿದ್ರೆ ನನ್ನ ಗೆಲುವು ಆಗುತ್ತಿತ್ತು: ಬಂಗಾರು ಹನುಮಂತು

    ಕಾಂಗ್ರೆಸ್ ಹಣ ಹಂಚಿಕೆ ಮಾಡದಿದ್ರೆ ನನ್ನ ಗೆಲುವು ಆಗುತ್ತಿತ್ತು: ಬಂಗಾರು ಹನುಮಂತು

    – ಧರ್ಮದ ಮುಂದೆ ಅಧರ್ಮ ಗೆದ್ದಿದೆ

    ಬಳ್ಳಾರಿ: ಕಾಂಗ್ರೆಸ್ (Congress) ಹಣ ಹಂಚಿಕೆ ಮಾಡದೆ ಇದರೆ ನನ್ನ ಗೆಲುವು ಆಗುತ್ತಿತ್ತು. ಧರ್ಮದ ಮುಂದೆ ಅಧರ್ಮ ಗೆದ್ದಿದೆ. ಈ ಸೋಲನ್ನ ಸವಾಲಾಗಿ ಸ್ವೀಕರಿಸುತ್ತೇವೆ ಎಂದು ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು (Bangaru Hanumanthu) ಸೋಲು ಒಪ್ಪಿಕೊಂಡಿದ್ದಾರೆ.

    ಕಾಂಗ್ರೆಸ್ ಹಣಬಲದಿಂದ ಗೆದ್ದಿದೆ. ಮುಸ್ಲಿಂ ಹಾಗೂ ಕುರುಬ ಸಮುದಾಯ ಹೆಚ್ಚಿರುವ ಕಡೆ ಮತ ಬರಲಿಲ್ಲ. ಚುನಾವಣೆ ಸಮಯದಲ್ಲಿ ಭಾಗ್ಯಲಕ್ಷ್ಮೀ ಹಣ ಹಾಕಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಸೋಲಿನ ಹೊಣೆ ನಾನೇ ಹೊರುವೆ ಎಂದರು. ಇದನ್ನೂ ಓದಿ: ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣಗೆ ಗೆಲುವು

    ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಸಚಿವ ಶಿವರಾಜ್ ತಂಗಡಗಿ ಬಂದು ಹಣ ಹಂಚಿದ್ದಾರೆ. ಸಿಎಂ (CM Siddaramaiah) ಬಂದಿರೋದು ಹಣ ಹಂಚಿರೋದು ನನ್ನ ಸೋಲಿಗೆ ಮುಳುವಾಯಿತು ಎಂದು ತಿಳಿಸಿದರು. ಇದನ್ನೂ ಓದಿ: 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ಜನರು ಇದೀಗ ಉತ್ತರ ಕೊಟ್ಟಿದ್ದಾರೆ – ಎಂ.ಬಿ ಪಾಟೀಲ್

    ಈ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುವೆ. ಮುಂದಿನ ದಿನ ನನಗೆ ಅಥವಾ ದಿವಾಕರ್ ಯಾರಿಗೆ ಟಿಕೆಟ್ ನೀಡಲಿ. ಬಿಜೆಪಿ (BJP) ಗೆಲವು ನಿಶ್ಚಿತ ಎಂದು ಹೇಳಿದರು. ಇದನ್ನೂ ಓದಿ: ನಾವು ಓಲೈಕೆ ಮಾಡಲ್ಲ, ಮುಸ್ಲಿಮರು ನಮ್ಗೆ ಮತ ಹಾಕಲ್ಲ: ಸಿ.ಟಿ ರವಿ

  • ಸಂಡೂರು ಉಪಚುನಾವಣೆ; ರಾಮುಲು-ಜನಾರ್ದನ ರೆಡ್ಡಿ ಜಂಟಿ ಪ್ರಚಾರ, ದೂರ ಉಳಿದ ಕಾಂಗ್ರೆಸ್ ಶಾಸಕರು

    ಸಂಡೂರು ಉಪಚುನಾವಣೆ; ರಾಮುಲು-ಜನಾರ್ದನ ರೆಡ್ಡಿ ಜಂಟಿ ಪ್ರಚಾರ, ದೂರ ಉಳಿದ ಕಾಂಗ್ರೆಸ್ ಶಾಸಕರು

    ಬಳ್ಳಾರಿ: ಸಂಡೂರು ಉಪಚುನಾವಣೆ (Sandur By Election) ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು (Bangaru Hanumanthu) ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದುವರೆಗೂ ಪ್ರಚಾರದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಶ್ರೀರಾಮುಲು ಕೊನೆಗೂ ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದು, ಜನಾರ್ದನ ರೆಡ್ಡಿ ಜೊತೆ ಜಂಟಿ ಪ್ರಚಾರ ಆರಂಭಿಸಿದ್ದಾರೆ.

    2023ರ ಚುನಾವಣೆ ವೇಳೆ ಶ್ರೀರಾಮುಲು (Sriramulu) ಹಾಗೂ ಜನಾರ್ದನ ರೆಡ್ಡಿ (Janardhan Reddy) ಆಂತರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ಸಂಡೂರು ಚುನಾವಣೆ ವೇಳೆ ಶ್ರೀರಾಮುಲುಗಿಂತ ಮುಂಚೆನೇ ಜನಾರ್ದನ ರೆಡ್ಡಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದರು. ಆಂತರಿಕ ಸಮಸ್ಯೆಯಿಂದ ಹಿಂದೆ ಸರಿದಿದ್ದ ರಾಮುಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವೊಲಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ರಾಮುಲು ಇದೀಗ ಪ್ರಚಾರಕ್ಕೆ ಬಂದಿದ್ದಾರೆ. ಆದರೆ ರಾಮುಲು- ಜನಾರ್ದನ ರೆಡ್ಡಿ ಜಂಟಿ ಪ್ರಚಾರದ ನಡುವೆಯೂ ಬಿಜೆಪಿ ನಾಯಕರಿಗೆ ಒಳೇಟಿನ ಆತಂಕ ಕಾಡುತ್ತಿದೆ. ಇದನ್ನೂ ಓದಿ: ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ, ಯೋಗೇಶ್ಬರ್ ಗೆಲ್ಲಿಸಿದ್ರೆ ಶಕ್ತಿ ಬರುತ್ತೆ: ಎಂಎಲ್‌ಸಿ ಪುಟ್ಟಣ್ಣ

    ಇತ್ತ ಕಾಂಗ್ರೆಸ್‌ನಲ್ಲೂ ಎಲ್ಲವೂ ಸರಿ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಯಾರೊಬ್ಬರೂ ಇದುವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲ. ಸಂಸದ ತುಕಾರಾಂ ಹಾಗೂ ಪತ್ನಿ ಅನ್ನಪೂರ್ಣ ತುಕಾರಾಂ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ

  • ಸಂಡೂರು ಉಪ ಚುನಾವಣೆ| 2.5 ಕೆ.ಜಿ ಚಿನ್ನ, 25 ಕೆಜಿ ಬೆಳ್ಳಿ – ಬಂಗಾರು ಬಳಿ ಆಸ್ತಿ ಎಷ್ಟಿದೆ?

    ಸಂಡೂರು ಉಪ ಚುನಾವಣೆ| 2.5 ಕೆ.ಜಿ ಚಿನ್ನ, 25 ಕೆಜಿ ಬೆಳ್ಳಿ – ಬಂಗಾರು ಬಳಿ ಆಸ್ತಿ ಎಷ್ಟಿದೆ?

    ಬಳ್ಳಾರಿ: ಸಂಡೂರು ಉಪಚುನಾವಣೆಯ (Sandur By Election) ಬಿಜೆಪಿ (BJP) ಅಭ್ಯರ್ಥಿ ಬಂಗಾರು ಹನುಮಂತು (Bangaru Hanumanthu) ಅವರು ತನ್ನ ಬಳಿ ಒಟ್ಟು ಮೌಲ್ಯ 2 ಕೋಟಿ ರೂ.ಮೌಲ್ಯದ 2.5 ಕೆ.ಜಿ ಚಿನ್ನಾಭರಣ ಮತ್ತು 20 ಲಕ್ಷ ರೂ. ಮೌಲ್ಯದ 25 ಕೆಜಿ ಬೆಳ್ಳಿ ವಸ್ತುಗಳಿಗೆ ಇವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

    ಹನುಮಂತ ಪತ್ನಿ ಬಂಗಾರು ರೂಪಶ್ರೀ ಬಳಿ 500 ಗ್ರಾಂ ಚಿನ್ನಾಭರಣವಿದ್ದು ಅದರ ಬೆಲೆ 40 ಲಕ್ಷ ರೂ. ಎಂದು ಉಲ್ಲೇಖಿಸಲಾಗಿದೆ. ಅವರು 15 ಕೆ.ಜಿ ಬೆಳ್ಳಿಯ ವಸ್ತುಗಳನ್ನೂ ಹೊಂದಿದ್ದು ಅದರ ಬೆಲೆ 12 ಲಕ್ಷ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್‌ ಪಡೆದ ಬಂಗಾರು ಹನುಮಂತು ಯಾರು?

    ಬಿಎ, ಬಿಎಡ್‌ ಓದಿರುವ ಹನುಮಂತು ಅವರಿಗೆ ಈಗ 42 ವರ್ಷ. ಒಟ್ಟು 7,58,64,019 ರೂ. ಮೌಲ್ಯದ ಚರಾಸ್ತಿ, 11,00,00,000 ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ರೂಪಶ್ರೀ 1,69,82,571 ರೂ. ಮೌಲ್ಯದ ಚರಾಸ್ತಿ, 25,600,000 ರೂ. ಮೌಲ್ಯದ ರಾಸ್ತಿಯನ್ನು ಹೊಂದಿದ್ದಾರೆ.

    ಸ್ಟೋನ್‌ ಕ್ರಷರ್‌, ಪೌಲ್ಟ್ರಿ ಫಾರಂ ಜೊತೆ ಮಂಗಳೂರಿನಲ್ಲಿ 1,07,38,000 ರೂ. ಮೌಲ್ಯದ ರೆಸಾರ್ಟ್‌ ಹೊಂದಿದ್ದಾರೆ. ತನ್ನ ಬಳಿ ಫಾರ್ಚುನಾರ್‌ ಕಾರು, ಬುಲೆಟ್‌ ಬೈಕ್‌, ಟ್ರ್ಯಾಕ್ಟರ್‌ ಟ್ರೈಲರ್‌, ಒಂದು ಜೆಸಿಬಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ

    ಇನ್ನು ಬಂಗಾರು ಹನುಮಂtu ಅವರಿಗೆ 28 ಕಡೆಗಳಲ್ಲಿ ಒಟ್ಟು 54.11 ಎಕರೆ ಕೃಷಿ ಭೂಮಿ ಇದೆ. ಇದೆಲ್ಲವೂ ಸ್ವಯಾರ್ಜಿತ ಎಂದು ಉಲ್ಲೇಖಿಸಿದ್ದಾರೆ.

    ಪತ್ನಿಯ ಬಳಿ ಒಟ್ಟು 27.27 ಎಕರೆ ಜಮೀನಿದ್ದು, ಇದೆಲ್ಲವೂ ದಾನವಾಗಿ ಬಂದಿದೆ ಎಂದು ತಿಳಿಸಿದ್ದಾರೆ. ಬಂಗಾರು ಹನುಮಂತು ಅವರು ತನ್ನ ಬಳಿ ಪ್ರಸ್ತುತ ಒಟ್ಟು 4 ಕೋಟಿ ರೂ. ಮೌಲ್ಯದ ಭೂಮಿ ಇದೆ ಹೇಳಿದ್ದಾರೆ.

    ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಒಟ್ಟು 34 ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇವೆಲ್ಲವುಗಳ ಮೇಲಿನ ಹೂಡಿಕೆ ಸೇರಿದಂತೆ ಒಟ್ಟು ಮೌಲ್ಯ 11 ಕೋಟಿ ರೂ. ಆಗಿದೆ.

    ಬಂಗಾರು ಹನುಮಂತ ಅವರಿಗೆ 2,54,83,569 ರೂ. ಸಾಲ ಮತ್ತು ಹೊಣೆಗಾರಿಕೆ ಇದ್ದರೆ ಪತಿಯದ್ದು 1,35,04,660 ಆಗಿದೆ.

  • ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್‌ ಪಡೆದ ಬಂಗಾರು ಹನುಮಂತು ಯಾರು?

    ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್‌ ಪಡೆದ ಬಂಗಾರು ಹನುಮಂತು ಯಾರು?

    ಬಳ್ಳಾರಿ: ಸಂಡೂರು ಉಪಚುನಾವಣೆಗೆ (Sandur By Election) ಟಿಕೆಟ್ ಘೋಷಣೆ ಘೋಷಣೆಯಾಗಿದ್ದು ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತುಗೆ (Bangaru Hanumanthu) ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

    ಮೂಲತಃ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯವರಾದ ಬಂಗಾರು ಹನುಮಂತು ತಂದೆ ಬಂಗಾರು ಸೋಮಣ್ಣ ಕೆಎಸ್‌ಆರ್‌ಟಿಸಿ ಚಾಲಕರಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಸೋಮಣ್ಣ ಕೊನೆಯದಾಗಿ ಕೂಡ್ಲಿಗಿಯಲ್ಲಿ ಸೇವೆ ಮಾಡಿದ ಹಿನ್ನೆಲೆಯಲ್ಲಿ ಕೂಡ್ಲಿಗಿಯಲ್ಲಿ ಕುಟುಂಬ ನೆಲೆ ನಿಂತಿದೆ.

    ತಾಯಿ ಹುಲಿಗೆಮ್ಮ ಸದ್ಯ ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯರಾಗಿದ್ದಾರೆ. ಬಂಗಾರು ಹನುಮಂತು ವಿದ್ಯಾರ್ಥಿ ಜೀವನ ಕೂಡ್ಲಿಗಿಯಲ್ಲಿ ಕಳೆದಿದ್ದಾರೆ. ಬಿಎ, ಬಿಎಡ್ ಓದಿರುವ ಬಂಗಾರು ವಿದ್ಯಾರ್ಥಿ ಜೀವನದಿಂದ ಹೋರಾಟದಲ್ಲಿ ಭಾಗಿಯಾಗುತ್ತಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಶಿಗ್ಗಾವಿ ಉಪಚುನಾವಣೆ| ಭರತ್‌ ಬೊಮ್ಮಾಯಿಗೆ ಬಿಜೆಪಿ ಟಿಕೆಟ್‌ ನೀಡಿದ್ದು ಯಾಕೆ?

    2018ರಲ್ಲಿ ಸಂಡೂರು ಕ್ಷೇತ್ರದಲ್ಲಿ ಬಂಡಾಯ ಬಿಜೆಪಿ (BJP) ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿ ಸೋತಿದ್ದರು. 2023ರ ವಿಧಾನಸಭಾ ಚುನಾವಣೆ ವೇಳೆ ಕೂಡ್ಲಿಗಿ ಕ್ಷೇತ್ರಕ್ಕೆ ಪ್ರಯತ್ನ ಮಾಡಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ.

    ಕಲ್ಲಿನ ಕ್ರಷರ್, ಗಣಿಗಾರಿಕೆ ವ್ಯವಹಾರ ಮಾಡುತ್ತಿದ್ದು, ಕೃಷಿ ಜಮೀನು ಹೊಂದಿದ್ದಾರೆ. ಪ್ರಹ್ಲಾದ್‌ ಜೋಷಿ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಬಂಗಾರು ಹನುಮಂತು ವಿಜಯೇಂದ್ರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

    2006 ರಿಂದ 2009 ರವರೆಗೆ ಕೂಡ್ಲಿಗಿ ಮಂಡಲ ಯುವ ಮೋರ್ಚಾ ಅಧ್ಯಕ್ಷ, 2017 ರಿಂದ 2019 ರವರೆಗೆ ಜಿಲ್ಲಾ ಕಾರ್ಯಕಾರಿ ಸದಸ್ಯ, 2020 ರಿಂದ 2022 ರವರೆಗೆ ಬಳ್ಳಾರಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ.

    ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್‌ ರೇಸ್‌ನಲ್ಲಿ ಬಂಗಾರು ಹನುಮಂತು ಮತ್ತು ಕೆ ಎಸ್ ದಿವಾಕರ್ ಅವರ ಹೆಸರಿತ್ತು. ಕಳೆದ ಚುನಾವಣೆಯಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ದಿವಾಕರ್‌ ಪರಾಭವಗೊಂಡಿದ್ದರು.

     

  • ಶಿಗ್ಗಾವಿಯಲ್ಲಿ ಭರತ್‌ ಬೊಮ್ಮಾಯಿ, ಸಂಡೂರಿನಲ್ಲಿ ಹನುಮಂತುಗೆ ಬಿಜೆಪಿ ಟಿಕೆಟ್‌

    ಶಿಗ್ಗಾವಿಯಲ್ಲಿ ಭರತ್‌ ಬೊಮ್ಮಾಯಿ, ಸಂಡೂರಿನಲ್ಲಿ ಹನುಮಂತುಗೆ ಬಿಜೆಪಿ ಟಿಕೆಟ್‌

    ನವದೆಹಲಿ: ಉಪಚುನಾವಣೆ (By Election) ಟಿಕೆಟ್ ಘೋಷಣೆ ವಿಚಾರದಲ್ಲಿ ಬಿಜೆಪಿ (BJP) ಮುಂದಿದೆ. ಮೂರು ಕ್ಷೇತ್ರಗಳ ಪೈಕಿ ಇಂದು ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಶಿಗ್ಗಾಂವಿಯಲ್ಲಿ ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ (Bharat Bommai), ಬಳ್ಳಾರಿಯ ಸಂಡೂರಿಗೆ ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು  (Bangaru Hanumanthu) ಅವರಿಗೆ ಟಿಕೆಟ್‌ ನೀಡಿದೆ.

    ಚನ್ನಪಟ್ಟಣದಲ್ಲಿ ಎನ್‌ಡಿಎ (NDA) ಅಭ್ಯರ್ಥಿ ಇನ್ನೂ ಘೋಷಣೆಯಾಗದ ಕಾರಣ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಬಿಜೆಪಿ ರಾಜ್ಯ ಘಟಕದ ಪಟ್ಟಿ ಬರುವ ಮುನ್ನವೇ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಬೆಲ್ಲದ್‌ ಸೇರಿದಂತೆ ಕೆಲ ಬಿಜೆಪಿ ನಾಯಕರು ಬೊಮ್ಮಾಯಿ ಪುತ್ರನ ಪರ ಬ್ಯಾಟಿಂಗ್‌ ಮಾಡಿದ್ದರು.

    ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಆಪ್ತರಾಗಿದ್ದಾರೆ. ಟಿಕೆಟ್‌ ರೇಸ್‌ನಲ್ಲಿ ಬಂಗಾರು ಹನುಮಂತು ಮತ್ತು ಕೆ ಎಸ್ ದಿವಾಕರ್ ಅವರ ಹೆಸರಿತ್ತು. ಕಳೆದ ಚುನಾವಣೆಯಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ದಿವಾಕರ್‌ ಪರಾಭವಗೊಂಡಿದ್ದರು.

    ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿಗೆಗೆ ನ.13 ರಂದು ಉಪಚುನಾವಣೆ ನಡೆಯಲಿದ್ದರೆ ನ.23 ರಂದು ಫಲಿತಾಂಶ ಪ್ರಕಟವಾಗಲಿದೆ.

    ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. 2008, 2013, 2018 ಹಾಗೂ 2023ರ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ ತುಕಾರಾಂ ಅವರು ಬಳ್ಳಾರಿಯಿಂದ ಗೆದ್ದಿದ್ದರಿಂದ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

    ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಗೆದ್ದು ಕೇಂದ್ರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ.

  • ಸಿಎಂ, ತುಕಾರಾಂ ರಾಜೀನಾಮೆಗೆ ಒತ್ತಾಯಿಸಿ ಎಸ್ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ- ಬಂಗಾರು ಹನುಮಂತು

    ಸಿಎಂ, ತುಕಾರಾಂ ರಾಜೀನಾಮೆಗೆ ಒತ್ತಾಯಿಸಿ ಎಸ್ಟಿ ಮೋರ್ಚಾ ರಾಜ್ಯಾದ್ಯಂತ ಹೋರಾಟ- ಬಂಗಾರು ಹನುಮಂತು

    ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ (Valmiki Scam) ಸಿಎಂ ಸಿದ್ದರಾಮಯ್ಯ (CM Siddaramaih) ಮತ್ತು ಸಂಸದ ತುಕಾರಾಂ ರಾಜೀನಾಮೆಗೆ ಒತ್ತಾಯಿಸಿ ನಾಳೆಯಿಂದ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ (BJP ST Morcha) ಹೋರಾಟ ಹಮ್ಮಿಕೊಂಡಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು (Bangaru Hanumanthu) ತಿಳಿಸಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಅಕ್ರಮವಾಗಿದೆ ಎಂದು ಇಡಿ ಚಾರ್ಜ್ಶೀಟ್ ಹಾಕಿದೆ. ತುಕಾರಾಂ ಅವರ ಚುನಾವಣೆಗೆ ನಿಗಮದ ಹಣ ಬಳಕೆ ಆಗಿದೆ ಎಂದು ಇಡಿ ಹೇಳಿದೆ. ತುಕಾರಾಂ ಅವರಿಗೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಚುನಾವಣೆ ಸಮಯದಲ್ಲಿ ಪ್ರತಿ ಮತಕ್ಕೆ 200 ರೂ. ಕೊಟ್ಟಿದ್ದಾರೆ. ಪ್ರತಿ ಬೂತ್‌ಗೆ 25 ಸಾವಿರ ರೂ. ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಬರಲಿದೆ ವಿಜಯ್ ಸೇತುಪತಿ, ತ್ರಿಷಾ ನಟನೆಯ ’96’ ಚಿತ್ರದ ಸೀಕ್ವೆಲ್

    ನಾಗೇಂದ್ರ ಅವರ ಮೇಲೆ ಒತ್ತಡ ಹಾಕಿ ನಿಗಮದ ಹಣವನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ ಚುನಾವಣೆಗೆ ಬಳಕೆ ಮಾಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೂಡಾ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

    ನಾಳೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಎಸ್‌ಟಿ ಮೋರ್ಚಾದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ತುಕಾರಾಂ ಅವರ ಸಂಸತ್ ಸದಸ್ಯ ಸ್ಥಾನ ರದ್ದು ಮಾಡಲು ಚುನಾವಣೆ ಆಯೋಗಕ್ಕೆ ಮನವಿ ಮಾಡುತ್ತೇವೆ. ಮುಂದಿನ ಮಂಗಳವಾರ ತುಕಾರಾಂ ವಿರುದ್ಧ ಸಂಡೂರಿನಲ್ಲಿ ಪ್ರತಿಭಟನೆ ಮಾಡುತ್ತೇವೆ. ಕೂಡಲೇ ಸಂಸತ್ ಸ್ಥಾನಕ್ಕೆ ತುಕಾರಾಂ ರಾಜೀನಾಮೆ ಕೊಡಬೇಕು ಎಂದರು.ಇದನ್ನೂ ಓದಿ: ಮಮತಾ ಬ್ಯಾನರ್ಜಿ ಡ್ರಾಮಾ ಬಿಟ್ಟು ರಾಜೀನಾಮೆ ನೀಡೋದೆ ಒಳ್ಳೇದು – ಜೋಶಿ ಟೀಕೆ