ಕೋಲಾರ: ಮತದಾನದ (Voting) ವೇಳೆ ಹೃದಯಾಘಾತಕ್ಕೊಳಗಾಗಿ (Heart Attack) ವೃದ್ಧ ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಬಂಗಾರಪೇಟೆ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ವೇಳೆ ಘಟನೆ ನಡೆದಿದೆ. ಬಂಗಾರಪೇಟೆ ತಾಲೂಕಿನ ಕಣಿಂಬೆಲೆ ಹೂಗಳ ಸೀನಪ್ಪ (86) ಹೃದಯಾಘಾತದಿಂದ ಮೃತಪಟ್ಟ ವೃದ್ಧ. ಬಿ ವರ್ಗದ 8ರ ಪೈಕಿ ಎರಡು ಮತದಾನ ಮಾಡಿದ್ದ ಸೀನಪ್ಪ, ಇನ್ನೂ 6 ಮತ ಮಾಡಲು ಪಕ್ಕದ ಮತಗಟ್ಟೆಗೆ ತೆರಳಿದ್ದ ವೇಳೆ ಮತಗಟ್ಟೆ ಬಳಿಯೇ ಹೃದಯಾಘಾತವಾಗಿದೆ. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಎಲ್ಲಾ ಚಟುವಟಿಕೆ ಬ್ಯಾನ್?
ಕೋಲಾರ: ಶಾಲೆಯ ಆವರಣದ ಪಕ್ಕದಲ್ಲಿದ್ದ ನೇರಳೆ ಹಣ್ಣು (Jamun Fruit) ತಿಂದು 7 ಮಂದಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಪುತ್ರಸೊನ್ನೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಮಧ್ಯಾಹ್ನ ಊಟಕ್ಕೆ ಬಿಟ್ಟಿದ್ದ ವೇಳೆ ಊಟದ ಬಳಿಕ ಶಾಲೆಯ ಆವರಣದಲ್ಲಿದ್ದ ನೇರಳೆ ತಿನ್ನುತ್ತಿದ್ದಂತೆ 7 ಜನ ವಿದ್ಯಾರ್ಥಿಗಳಿಗೆ ವಾಂತಿ, ಭೇದಿಯಾಗಿದೆ. ಕೂಡಲೆ ಎಚ್ಚೆತ್ತ ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಚಿಕಿತ್ಸೆ ಕೊಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಬೌಂಡರಿಯಿಂದಲೇ 196 ರನ್ – ವೇಗದ ತ್ರಿಶತಕ ಸಿಡಿಸಿ ದಾಖಲೆ ಬರೆದ ಮುಲ್ಡರ್
ಅದರಂತೆ ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ 6 ಜನ ವಿದ್ಯಾರ್ಥಿಗಳನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಒರ್ವ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದು, ಮಕ್ಕಳನ್ನ ವೈದ್ಯರು ಪರಿವೀಕ್ಷಣೆಯಲ್ಲಿರಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಿಇಓ ಗುರುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ
ಶಾಲೆಯ ಪಕ್ಕದಲ್ಲಿರುವ ರೈತರು ಅದನ್ನು ಕಡಿದು ಅಲ್ಲಿ ಹಾಕಿದ್ದಾರೆ. ಹಾಗಾಗಿ ಕೆಂಪಾಗಿದ್ದ ನೇರಳೆ ತಿಂದು ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಕ್ಕಳಿಗೆ ಯಾವುದೆ ತೊಂದರೆ ಇಲ್ಲ. ನಾಲ್ಕು ಗಂಟೆ ಮಕ್ಕಳ ಮೇಲೆ ನಿಗಾ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್
ಕೋಲಾರ: ವಾಯು ವಿಹಾರಕ್ಕೆಂದು (Promenade) ತೆರಳಿದ್ದ ನಿವೃತ್ತ ಉಪನ್ಯಾಸಕರಿಗೆ ಬೈಕ್ (Bike) ಡಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆ ಫಲಿಸದೇ ಇಬ್ಬರು ಉಪನ್ಯಾಸಕರು ಮೃತಪಟ್ಟ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ಪಟ್ಟಣದ ಜೂನಿಯರ್ ಕಾಲೇಜು ಬಳಿ ನಡೆದಿದೆ.
ನಿವೃತ್ತ ಕನ್ನಡ ಉಪನ್ಯಾಸಕ ಕೆ.ಬಿ.ಮೋಹನ್ (64), ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀ ನಾರಾಯಣ (62) ಮೃತ ದುರ್ದೈವಿಗಳು. ಭಾನುವಾರ ಸಂಜೆ ವಾಯು ವಿಹಾರ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ನಿವೃತ್ತ ಉಪನ್ಯಾಸಕರು ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ: ಬಸವರಾಜ್ ಹೊರಟ್ಟಿ
ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಉಪನ್ಯಾಸಕರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಡಿಕ್ಕಿ ಹೊಡೆದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಕ್ಕಿ ಹೊಡೆದು ಬೈಕ್ ಸವಾರ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್ಐಆರ್
ಕೋಲಾರ: ಕುಡಿಯಲು (Drinks) ಹಣ ನೀಡದ ಹಿನ್ನೆಲೆ ಯುವಕ ತನ್ನ ಚಿಕ್ಕಮ್ಮನಿಗೆ (Aunt) ಬಿಯರ್ ಬಾಟಲಿಯಿಂದ ತಿವಿದು ಹತ್ಯೆ ಮಾಡಲು ಯತ್ನಿಸಿದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ದಾಸೇಗೌಡನೂರು ಬಳಿ ನಡೆದಿದೆ.
ಗರುಡ ಕೆಂಪನಹಳ್ಳಿ ಗ್ರಾಮದ ಅನಸೂಯ (35) ಹಲ್ಲೆಗೊಳಗಾದ ಮಹಿಳೆ. ಇದೆ ಗ್ರಾಮದ ಆನಂದ್ (26) ಕೊಲೆಗೆ ಯತ್ನಿಸಿದ ಯುವಕ. ಕೆಲಸಕ್ಕೆ ತೆರಳಿದ್ದ ವೇಳೆ ಕುಡಿತಕ್ಕೆ ಹಣ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಾಗ ಬಿಯರ್ ಬಾಟಲಿಯಿಂದ ಚುಚ್ವಿ ಕೊಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಖಾತೆ ಮಾಡಿಸಲು ಲಂಚ ಕೇಳ್ತಾರೆ – ಯತೀಂದ್ರ ಆರೋಪ
ಗಾಯಾಳು ಮಹಿಳೆ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಆನಂದನನ್ನು ಕಾಮಸಮುದ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಅವರೇ ತುಘಲಕ್ ದರ್ಬಾರಿಗೆ ಇತಿಮಿತಿ ಇರಲಿ: ವಿಜಯೇಂದ್ರ
ಘಟನೆಯಿಂದ ಸಾಕರಸನಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳ ರೈತರಲ್ಲಿ ಆತಂಕ ಮನೆಮಾಡಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಒಂಟಿ ಸಲಗ ದಾಳಿಯ ಭೀತಿಯಲ್ಲಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ: ಐಆರ್ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ
ಕೋಲಾರ: ಕೆಜಿಎಫ್ನಿಂದ ಬೆಂಗಳೂರಿಗೆ ತೆರಳುವ ರೈಲುಗಳಿಗೆ ಕೋಚ್ ಕಡಿಮೆ ಮಾಡಿದ ಹಿನ್ನೆಲೆ ಪ್ಯಾಸೆಂಜರ್ ರೈಲು (Passenger Train) ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ ಘಟನೆ ಕೋಲಾರದ (Kolar) ಬಂಗಾರಪೇಟೆ (Bangarpet) ರೈಲು ನಿಲ್ದಾಣದಲ್ಲಿ ನಡೆದಿದೆ.
ನಿತ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ನಿತ್ಯ ಉದ್ಯೋಗ, ವಿದ್ಯಾಭ್ಯಾಸ, ಎಂದು ಸಾವಿರಾರು ಜನರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಇದೀಗ ರೈಲು ಪ್ರಯಾಣಕ್ಕೆ ತೊಂದರೆಯಾಗುವಂತೆ ರೈಲ್ವೆ ಇಲಾಖೆ ಕೋಚ್ಗಳನ್ನು ಕಡಿಮೆ ಮಾಡಿದೆ. ಈ ಹಿನ್ನೆಲೆ ರೈಲ್ವೆ ಇಲಾಖೆ ಕ್ರಮವನ್ನು ಖಂಡಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ವದಂತಿ ನಂಬಬೇಡಿ: ಯೋಗಿ ಅದಿತ್ಯನಾಥ್
ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಮಾರಿಕುಪ್ಪಂನಿಂದ ಬೆಂಗಳೂರಿನ ಸಂಗೋಳ್ಳಿರಾಯಣ್ಣ ನಿಲ್ದಾಣಕ್ಕೆ ತಲುಪುವ ಪ್ಯಾಸೆಂಜರ್ ರೈಲನ್ನು 45 ನಿಮಿಷಗಳ ಕಾಲ ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೋಚ್ ಹೆಚ್ವಿಸುವ ಭರವಸೆ ಕೊಟ್ಟಿದ್ದಾರೆ. ನಂತರ ರೈಲು ಮುಂದಕ್ಕೆ ಚಲಿಸಿದೆ. ಇದನ್ನೂ ಓದಿ: GSLV ರಾಕೆಟ್ ಹಾರಿಸಿ ಶತಕ ಹೊಡೆದ ಇಸ್ರೋ! – ಏನಿದು ನಾವಿಕ್? ಲಾಭ ಏನು?
ಕೋಲಾರ: ಜಿಲ್ಲೆಯ ಗಡಿಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಕಾಡಾನೆ (Wild Elephant) ಹಿಂಡು ದಾಳಿಯಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ.
ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಸದ್ಯ ಆತಂಕದ ವಾತಾವರಣ ಇದ್ದು, ಭಯದಲ್ಲೆ ಜೀವನ ನಡೆಸುವ ಸ್ಥಿತಿ ಬಂದಿದೆ. ಕಳೆದೊಂದು ವಾರದಿಂದ ಕಾಡಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು ರೈತರು ಬೆಳೆದ ಅಪಾರ ಪ್ರಮಾಣದ ಟೊಮ್ಯಾಟೊ, ರಾಗಿ, ಭತ್ತ, ಬಾಳೆ ಎಲ್ಲವನ್ನು ನಾಶ ಮಾಡಿವೆ. ಇದರಿಂದ ರೈತರು ಕಂಗೆಟ್ಟಿದ್ದಾರೆ. ಇದನ್ನೂ ಓದಿ: Tumakuru| ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾವು
ತಾಲೂಕಿನ ಕಾಡಂಚಿನ ಗ್ರಾಮಗಳಾದ ಭತ್ತಲಹಳ್ಳಿ, ತಳೂರು ಮತ್ತು ಸಾಕರಸನಹಳ್ಳಿ ಗ್ರಾಮಗಳಲ್ಲಿ ಬೆಳೆ (Crop Loss) ನಾಶವಾಗಿದೆ. ಭತ್ತಲಹಳ್ಳಿ ಗ್ರಾಮದ ಸುಬ್ರಮಣಿ, ತಳೂರು ಗ್ರಾಮದ ವೆಂಕಟೇಶ್, ಸಾಕರಸನಹಳ್ಳಿ ಗ್ರಾಮದ ಮಂಜುನಾಥ್ ಎಂಬವರ ರೈತರ ಬೆಳೆಗಳು ನಾಶವಾಗಿವೆ. ಇನ್ನೂ ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡು ಪದೇಪದೆ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಲೇ ಇವೆ. ಇದನ್ನೂ ಓದಿ: ಮುಂಬೈ | 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್ – 8 ಪಾಕ್ ಪ್ರಜೆಗಳಿಗೆ 20 ವರ್ಷ ಜೈಲು
ಕೋಲಾರ: ಸಾಲು ಸಾಲು ಹಬ್ಬಗಳು ಮುಗಿದ ಬಳಿಕ ಚೆಂಡು ಹೂವಿನ (Marigold Flower) ಬೆಲೆ ತೀವ್ರ ಕುಸಿತವಾಗಿದೆ. ಈ ಹಿನ್ನೆಲೆ ರೈತರೊಬ್ಬರು ತಾವು ಬೆಳೆದ ಹೂವನ್ನು ರಸ್ತೆಬದಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ನೆರ್ನಹಳ್ಳಿಯ ನಾರಾಯಣಪ್ಪ ಎಂಬ ರೈತ ದೇವರ ಪಾದದ ಬಳಿ ಇರಬೇಕಾದ ಹೂವನ್ನು ರಸ್ತೆಯಲ್ಲಿ ಚೆಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ಕೆಜಿಗೆ 10 ರೂ.ನಂತೆ ಕೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಇಲ್ಲದೆ ಹೂವಿನ ಬೆಳೆಗಾರರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ| ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಸಾವು – ಬಿಮ್ಸ್ ಮುಂದೆ ಸಂಬಂಧಿಕರ ಪ್ರತಿಭಟನೆ
ನಾರಾಯಣಪ್ಪ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಎಕರೆಗೆ 50 ಸಾವಿರದಂತೆ ಖರ್ಚು ಮಾಡಿ ಚೆಂಡು ಹೂವು ಬೆಳೆದಿದ್ದರು. ಆದರೆ ಚೆಂಡು ಹೂವು ಬೆಲೆ ಕುಸಿತ ಕಂಡ ಹಿನ್ನೆಲೆ ಕೋಲಾರ ಮುಖ್ಯರಸ್ತೆ ಬದಿಯಲ್ಲಿ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್ಕೌಂಟರ್ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್
ಕೋಲಾರ: ನಾನು ಜಿಲ್ಲೆಯ ಮಟ್ಟಿಗೆ ಹಿರಿಯ ಶಾಸಕನಾದರು ನನ್ನನ್ನು ಪರಿಗಣಿಸುವುದಿಲ್ಲ. ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ಪಕ್ಷ ಸಂಘಟನೆ ವಿಚಾರದಲ್ಲಿ ನನ್ನನ್ನು ಉದಾಸೀನ ಮನೋಭಾವದಿಂದ ನೋಡುತ್ತಿದ್ದಾರೆ ಎಂದು ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ (Byrathi Suresh) ವಿರುದ್ಧ ಶಾಸಕ ಹಾಗೂ ಕೆಯುಐಡಿಎಫ್ ಮಂಡಳಿ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ (SN Narayanaswamy) ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲಾರ (Kolar) ಜಿಲ್ಲೆ ಬಂಗಾರಪೇಟೆಯ (Bangarpet) ಪುರಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ವಿಚಾರದಲ್ಲಿ ನನ್ನ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಜಿಲ್ಲೆಯಲ್ಲಿರುವ ಗುಂಪುಗಳಲ್ಲಿ ಗುರುತಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಕೋಲಾರ ಕಾಂಗ್ರೆಸ್ ಹೊಲಸಾಗಿದೆ. ಇಲ್ಲಿ ಯರ್ಯಾರೋ ನಾಯಕರಾಗಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸಭೆಯಲ್ಲಿ ನಡೆದ ಗಲಾಟೆಯಿಂದ, ತಲೆ ತಗ್ಗಿಸುವಂತಾಗಿದೆ. ಹಿರಿಯ, ಕಿರಿಯ ಶಾಸಕರು ಯಾರೆಂದು ತಿಳಿದು ಆದ್ಯತೆ ನೀಡಬೇಕೆಂದು ಉಸ್ತುವಾರಿ ಸಚಿವ ಬೈರತಿ ಸುರೇಶ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಅಪ್ರಾಪ್ತರಿಂದ ಫೈರಿಂಗ್ – ಓರ್ವ ಸಾವು, ಇಬ್ಬರು ಗಂಭೀರ
ಸದ್ಯಕ್ಕೆ ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಎರಡೂವರೆ ವರ್ಷದ ನಂತರ ನಂಗೆ ಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ವಕ್ಪ್ ಬೋರ್ಡ್ ವಿವಾದ ವಿಚಾರದಲ್ಲಿ ನಾವು ರೈತರ ಪರ ನಿಲ್ಲುತ್ತೇವೆ. ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ಗೆ ರೈತರ ಆಸ್ತಿ ನೀಡಬಾರದು. ಈಗಾಗಲೇ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕ ತೀಟೆ ರವಿ ಏನೇನೋ ಹೇಳಿಕೆ ನೀಡುತ್ತಿದ್ದು, ಕೇವಲ ರಾಜಕೀಯ ಮಾಡಲು, ಬಿಜೆಪಿ, ಜೆಡಿಎಸ್ ಹೋರಾಟ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೆ ತೆಲಂಗಾಣ, ಕರ್ನಾಟಕದಲ್ಲಿ ವಸೂಲಿ ಡಬಲ್ ಆಗಿದೆ: ಮೋದಿ ವಾಗ್ದಾಳಿ
ಇನ್ನು ರಾಜ್ಯ ಕಾಂಗ್ರೆಸ್ನಲ್ಲಿ 5 ವರ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರ ಕುರಿತು ಮಾತನಾಡಿದ ಅವರು, ಅಂತಹ ಯಾವುದೇ ಹಂಚಿಕೆ ಒಪ್ಪಂದವೂ ಆಗಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದರು. 5 ವರ್ಷ ಸಿಎಂ ಆಗಿರ್ತೀನಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅದು ಸಹಜ ಹೇಳಿಕೆ. ಆದರೆ ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: 20 ಮಾರ್ಗಗಳಲ್ಲಿ 2025ರಲ್ಲಿ ಸೀಪ್ಲೇನ್ ಕಾರ್ಯಾಚರಣೆ ಪ್ರಾರಂಭ: ಸ್ಪೈಸ್ಜೆಟ್
ಕೋಲಾರ: ಆಡಿ ಕಾರೊಂದು (Audi Car) ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಉಂಟಾದ ಪರಿಣಾಮ ಮೂವರು ವಿದ್ಯಾರ್ಥಿಗಳು (Students) ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಬಚಾವಾದ ಘಟನೆ ಕೋಲಾರ (Kolar) ಹೊರವಲಯದಲ್ಲಿ ನಡೆದಿದೆ.
ಬಂಗಾರಪೇಟೆ (Bangarpet) ಮುಖ್ಯರಸ್ತೆ ಸಹಕಾರ ನಗರದಲ್ಲಿ ಘಟನೆ ನಡೆದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್ ಹಾಗೂ ಬಂಗಾರಪೇಟೆಯ ನಿಶ್ಚಲ್ ಎಂದು ಗುರುತಿಸಲಾಗಿದೆ. ಮೃತರು ಪ್ರಸಿದ್ಧ ಯೂನಿವರ್ಸಿಟಿವೊಂದರ ವಿದ್ಯಾರ್ಥಿಗಳು. ಬಂಗಾರಪೇಟೆಯ ಸಾಯಿ ಗಗನ್ ಘಟನೆಯಲ್ಲಿ ಪಾರಾಗಿದ್ದಾನೆ. ವಿದ್ಯಾರ್ಥಿಗಳು ಸಾಯಿ ಗಗನ್ ಮನೆಗೆ ಬಂದಿದ್ದರು. ಅಲ್ಲಿಂದ ವಾಪಸ್ ಕೋಲಾರಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.