Tag: Bangarapet

  • ಅಕ್ರಮವಾಗಿ ನಾಡಬಂದೂಕು ತಯಾರಿಸಿ ಮಾರಾಟ – ಮೂವರು ಅರೆಸ್ಟ್

    ಅಕ್ರಮವಾಗಿ ನಾಡಬಂದೂಕು ತಯಾರಿಸಿ ಮಾರಾಟ – ಮೂವರು ಅರೆಸ್ಟ್

    -8 ನಾಡಬಂದೂಕು, 80 ಸಾವಿರ ರೂ. ನಗದು ವಶ

    ಕೋಲಾರ: ಅಕ್ರಮವಾಗಿ ನಾಡಬಂದೂಕು (Gun) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೋಲಾರದ ಬೂದಿಕೋಟೆ ಪೊಲೀಸರು (Budikote police) ಪತ್ತೆಹಚ್ಚಿದ್ದು, ಮೂವರನ್ನು ಬಂಧಿಸಿದ್ದಾರೆ.

    ಬಂಧಿತರನ್ನು ಬಂಗಾರಪೇಟೆ (Bangarapet) ತಾಲ್ಲೂಕಿನ ಪಲಮಡಗು ಗ್ರಾಮದ ಮಾರಪ್ಪ, ರಾಮಪ್ಪ ಹಾಗೂ ಧರ್ಮನ್ ಎಂದು ಗುರುತಿಸಲಾಗಿದೆ. ಕೆಜಿಎಫ್ (KGF) ಎಸ್‍ಪಿ ಶಾಂತರಾಜು ನೇತೃತ್ವದಲ್ಲಿ ಬೂದಿಕೋಟೆ ಪೊಲೀಸರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ನಾಡ ಬಂದೂಕುಗಳು ಹಾಗೂ 80 ಸಾವಿರ ರೂ. ನಗದು ಪತ್ತೆಯಾಗಿದೆ. ಪೊಲೀಸರು ಹಣ ಹಾಗೂ ನಾಡಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹಾಸನ ಸಂಸದರು ವಿದೇಶದಿಂದ ವಾಪಸ್ ಬಂದು SIT ತನಿಖೆ ಎದುರಿಸಬೇಕು – ನಿಖಿಲ್ ಕುಮಾರಸ್ವಾಮಿ

    ಆರೋಪಿಗಳು ನಾಡ ಬಂದೂಕಗಳನ್ನು ತಯಾರಿಸಿ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದರೆ. ಇದನ್ನೂ ಓದಿ: ಸರ್ಕಾರದ ವಿರುದ್ದ ಆರೋಪ ಮಾಡುವ ವಿಪಕ್ಷಗಳ ವಿರುದ್ದ ಅಗ್ರೆಸಿವ್ ಅಟ್ಯಾಕ್ ಮಾಡಲು ಸಿಎಂ ಸೂಚನೆ

  • ಡಾನ್ಸ್‌ ಕ್ಲಾಸ್‌ಗೆ ಹೋಗಬೇಡ ಎಂದ ಪೋಷಕರು – ಮನನೊಂದು ಯುವತಿ ಆತ್ಮಹತ್ಯೆ

    ಡಾನ್ಸ್‌ ಕ್ಲಾಸ್‌ಗೆ ಹೋಗಬೇಡ ಎಂದ ಪೋಷಕರು – ಮನನೊಂದು ಯುವತಿ ಆತ್ಮಹತ್ಯೆ

    ಕೋಲಾರ: ಪೋಷಕರು ಡಾನ್ಸ್‌ ಕ್ಲಾಸ್‌ಗೆ (Dance Class) ಹೋಗಬೇಡ ಎಂದಿದ್ದಕ್ಕೆ ಮನನೊಂದು ಯುವತಿಯೊಬ್ಬಳು (Young Woman) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarapet) ತಾಲೂಕಿನ ಚಿನ್ನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿನ್ನಕೋಟೆ ಗ್ರಾಮದ ಕೀರ್ತನಾ (18) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಇತ್ತೀಚೆಗೆ ಡಾನ್ಸ್‌ಗೆ ಹೋಗಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಾರೆ. ಈ ಹಿನ್ನೆಲೆ ಕೀರ್ತನಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ – ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು

    ಡಾನ್ಸ್ ಎಂದರೆ ತುಂಬಾ ಇಷ್ಟಪಡುತ್ತಿದ್ದ ಕೀರ್ತನಾ‌ ಡಾನ್ಸ್‌ ಕ್ಲಾಸ್‌ಗೆ ಹೋಗಬೇಡ ಎಂದು ಹೇಳಿದ ಪೋಷಕರ ಮಾತಿನಿಂದ ಮನನೊಂದು ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಟುಂಬಸ್ಥರನ್ನು ಕಟ್ಟಿ ಹಾಕಿ ಮೂವರು ಮಹಿಳೆಯರ ಮೇಲೆ ಗ್ಯಾಂಗ್‍ರೇಪ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗನಿಗೆ ಹೃದಯಾಘಾತ, ಆರೈಕೆ ಮಾಡೋರಿಲ್ಲದೆ ತಂದೆಯೂ ಸಾವು – ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಇಬ್ಬರ ಶವ

    ಮಗನಿಗೆ ಹೃದಯಾಘಾತ, ಆರೈಕೆ ಮಾಡೋರಿಲ್ಲದೆ ತಂದೆಯೂ ಸಾವು – ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಇಬ್ಬರ ಶವ

    ಕೋಲಾರ: ತಾಯಿ ತೀರಿಕೊಂಡ ಹಿನ್ನೆಲೆ ಮಗ ಮಾನಸಿಕವಾಗಿ ಕೊರಗಿದ್ದಲ್ಲದೆ ಹೃದಯಾಘಾತದಿಂದ ಪ್ರಾಣ ಬಿಟ್ಟರೆ ಅತ್ತ ವಯಸ್ಸಾದ ತಂದೆಗೆ ಆರೈಕೆ ಮಾಡುವವರಿಲ್ಲದೆ ನರಳಾಡಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ವರದಿಯಾಗಿದೆ.

    ಕೊಳೆತ ಸ್ಥಿತಿಯಲ್ಲಿ ತಂದೆ ಹಾಗೂ ಮಗನ ಶವ ಪತ್ತೆಯಾಗಿದೆ. 12 ದಿನಗಳ ಹಿಂದೆಯೇ ಮಗನಿಗೆ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದು, ತಂದೆಗೆ ಪೋಷಣೆ ಮಾಡುವವರಿಲ್ಲದೆ ಅವರೂ ಮನೆಯಲ್ಲೇ ಉಸಿರು ಚೆಲ್ಲಿದ್ದಾರೆ. ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarapet) ತಾಲೂಕಿನ ಎಂವಿ ನಗರದಲ್ಲಿ ಕಳೆದ 12 ದಿನಗಳ ಹಿಂದೆಯೇ ಇಬ್ಬರೂ ಮೃತಪಟ್ಟಿರುವ ಶಂಕೆ ಮೂಡಿದೆ. ಅಕ್ಕ ಪಕ್ಕದ ಮನೆಯವರಿಗೆ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

    ಕಳೆದ 6 ತಿಂಗಳ ಹಿಂದೆಯಷ್ಟೇ ತಾಯಿ ತೀರಿಕೊಂಡಿದ್ದು, ತಂದೆ ಮಗ ಇಬ್ಬರು ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದರು. ಎಂವಿ ನಗರದ ವಸಂತರಾಜುಲು (84) ಹಾಗೂ ಸೂರ್ಯ ಪ್ರಕಾಶ್ (40) ಮೃತಪಟ್ಟಿರುವ ತಂದೆ-ಮಗ. ಕಳೆದ 12 ದಿನಗಳ ಹಿಂದೆಯೇ ಇಬ್ಬರು ಮೃತಪಟ್ಟಿರುವ ಶಂಕೆ ಮೂಡಿದೆ. ವಯಸ್ಸಾಗಿದ್ದ ತಂದೆಯನ್ನು ಪೋಷಣೆ ಮಾಡುತ್ತಿದ್ದ ಮಗ ಇಬ್ಬರು ಉಸಿರು ಚೆಲ್ಲಿದ್ದಾರೆ. ಇದನ್ನೂ ಓದಿ: ನಿಫಾ ವೈರಸ್ ಭೀತಿ – ರಾಜ್ಯದ ಗಡಿಯಲ್ಲಿ ಹೈ ಅಲರ್ಟ್, ಕಟ್ಟುನಿಟ್ಟಿನ ತಪಾಸಣೆಗೆ ಸರ್ಕಾರ ಸೂಚನೆ

    ಮೊದಲಿಗೆ ಮಗ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಔಷಧ ಸಿಗದೇ ತಂದೆಯೂ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಶ್ವಾನ ದಳ ಸಿಬ್ಬಂದಿ, ಬೆರಳಚ್ಚು ತಜ್ಞರ ತಂಡ ಹಾಗೂ ಕೆಜಿಎಫ್ ಎಸ್‌ಪಿ ಶಾಂತಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತ ವಸಂತರಾಜುಲುಗೆ ಒರ್ವ ಮಗಳಿದ್ದು, ಆಕೆ ಆಮೆರಿಕದಲ್ಲಿದ್ದಾಳೆ. ಹೀಗಾಗಿ ಪಕ್ಕದ ಮನೆಯವರು ನೀಡಿದ ದೂರಿನ ಅನ್ವಯ ಬಂಗಾರಪೇಟೆ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರನ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ಯಾಸ್ ಕಟರ್ ಬಳಸಿ ATMನಲ್ಲಿದ್ದ 15 ಲಕ್ಷ ದರೋಡೆ

    ಗ್ಯಾಸ್ ಕಟರ್ ಬಳಸಿ ATMನಲ್ಲಿದ್ದ 15 ಲಕ್ಷ ದರೋಡೆ

    ಕೋಲಾರ: ಗ್ಯಾಸ್ ಕಟರ್ (Gas Cutter) ಬಳಸಿ ಎಟಿಎಂನಲ್ಲಿದ್ದ (ATM) ಲಕ್ಷಾಂತರ ರೂ. ದರೋಡೆ (Robbery) ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿ ಕೆನರಾ ಬ್ಯಾಂಕ್ ಎಟಿಎಂನ ಮಿಷನ್ ಅನ್ನು ಗ್ಯಾಸ್ ಕಟರ್‌ನಿಂದ ತೆರೆದು ಹಣ ಕಳ್ಳತನ ಮಾಡಲಾಗಿದೆ. ಎಟಿಎಂನಲ್ಲಿದ್ದ ಸುಮಾರು 15 ಲಕ್ಷ ರೂ. ಹಣ ಎಗರಿಸಿರುವ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿ ನೀಡಿದ್ದು, ಸ್ಥಳಕ್ಕೆ ಕೆಜಿಎಫ್ ಡಿವೈಎಸ್‌ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವಾಣಿಜ್ಯ ಮಳಿಗೆ ಕಟ್ಟಡದಲ್ಲಿ ಸಿಸಿಟಿವಿ ಇಲ್ಲದ್ದನ್ನು ಕಂಡು ಮಾಲೀಕರಿಗೆ ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿ ನೋಟಿಸ್ ನೀಡುವಂತೆ ಬಂಗಾರಪೇಟೆ ಪೊಲೀಸರಿಗೆ ಡಿವೈಎಸ್‌ಪಿ ರಮೇಶ್ ಸೂಚನೆ ನೀಡಿದ್ದಾರೆ. ಈ ಹಿಂದೆ ಇದೆ ಜಾಗದಲ್ಲಿ ಕಿಡಿಗೇಡಿಗಳು ರಾತ್ರಿ 11 ಗಂಟೆ ಸಮಯದಲ್ಲಿ ಎಟಿಎಂ ಹಣ ಡ್ರಾ ಮಾಡಿ ಈಚೆ ಬರುತ್ತಿದ್ದ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ 5 ಸಾವಿರ ರೂ. ದೋಚಿದ್ದ ಘಟನೆ ಕೂಡ ವರದಿಯಾಗಿತ್ತು. ಇದನ್ನೂ ಓದಿ: ಆನ್‍ಲೈನ್ ಗೇಮ್‍ನಲ್ಲಿ 5 ಕೋಟಿ ಗೆದ್ದು, 58 ಕೋಟಿ ಕಳೆದುಕೊಂಡ ಉದ್ಯಮಿ!

    ಇತ್ತೀಚೆಗೆ ಚಿಂತಾಮಣಿ ಹಾಗೂ ಕೋಲಾರದಲ್ಲಿ ಎಟಿಎಂಗಳಿಗೆ ಕನ್ನ ಹಾಕಿದ್ದ ಕಿಡಿಗೇಡಿಗಳು ಲಕ್ಷಾಂತರ ರೂ. ಹಣ ದೋಚಿ ಪರಾರಿಯಾಗಿದ್ರು. ಇನ್ನೂ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೆಚ್ಚು ಜನ ಪ್ರಯಾಣಿಸುವ ಬಿಎಂಟಿಸಿ ರೂಟ್ ಮಾರ್ಕ್ ಮಾಡಿಕೊಂಡಿದ್ದ ಶಂಕಿತರು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೌಟುಂಬಿಕ ಕಲಹ- ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಮಗ

    ಕೌಟುಂಬಿಕ ಕಲಹ- ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಮಗ

    ಕೋಲಾರ: ಕೌಟುಂಬಿಕ ಕಲಹದಿಂದಾಗಿ ಮಗನೊಬ್ಬ ತನ್ನ ತಾಯಿಯನ್ನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

    ಬಂಗಾರಪೇಟೆಯ ಮುದಲಿಯಾರ್ ಲೇಔಟ್‍ನ ನಿವಾಸಿ ಸತ್ಯಲಕ್ಷ್ಮಿ (70) ಕೊಲೆಯಾದ ತಾಯಿ. ಮಂಜುನಾಥ್ (45) ಕೊಲೆಗೈದ ಆರೋಪಿ. ಕೃತ್ಯ ಎಸಗಿದ ಬಳಿಕ ಮಂಜುನಾಥ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಮಂಜುನಾಥ್ ಬಂಗಾರಪೇಟೆಯ ಮುದಲಿಯಾರ್ ಲೇಔಟ್ ವಿಬಿಅರ್ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮನೆಯಲ್ಲಿ ವಾಸವಿದ್ದ. ದಸರಾ ಹಬ್ಬಕ್ಕೆಂದು ಆತನ ಪತ್ನಿ ಹಾಗೂ ಮಕ್ಕಳು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ತಾಯಿ ಸತ್ಯಲಕ್ಷ್ಮಿ ಹಾಗೂ ಮಗ ಮಾತ್ರ ಇದ್ದರು. ಮಂಜುನಾಥ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ವೃದ್ಧ ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿ ರಾತ್ರಿ 8 ಗಂಟೆ ಸುಮಾರಿಗೆ ದೂರು ಸಮೇತ ಬಂಗಾರಪೇಟೆ ಪೊಲೀಸ್ ಠಾಣೆಗೆ ತೆರಳಿದ್ದಾನೆ.

    ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾಗಿ ಹೇಳುತ್ತಿದ್ದ ಮಂಜುನಾಥ್ ಮಾನಸಿಕ ಅಸ್ವಸ್ಥನಿರಬಹುದು ಎಂದು ಪೊಲೀಸರು ತಿಳಿದು ಸುಮ್ಮನಾಗಿದ್ದರು. ಬಳಿಕ ಆತನನ್ನು ವಿಚಾರಣೆ ಮಾಡಿದಾಗ ಕೃತ್ಯ ಖಚಿತವಾಯಿತು. ಅಷ್ಟೇ ಅಲ್ಲದೆ ಆರೋಪಿಯು, ತಾನು ಇನ್ನು ಕೆಲವರನ್ನು ಕೊಲೆ ಮಾಡುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಜೊತೆಗೆ ಪತ್ನಿ ಹಾಗೂ ಮಕ್ಕಳು ಬೆಂಗಳೂರಿನಿಂದ ಬರಲಿದ್ದು, ಸ್ವಯಂ ವಿಳಾಸ ಸಮೇತ ಪೊಲೀಸರಿಗೆ ಮಂಜುನಾಥ್ ದೂರು ಸಲ್ಲಿಸಿದ್ದಾನೆ.

    ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್‍ಪಿ ಮಹಮ್ಮದ್ ಸುಜೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಮದ್ಯದ ಮತ್ತಿನಲ್ಲಿ 50 ವರ್ಷದ ಮಹಿಳೆಯ ರೇಪ್‍ಗೆ ಯತ್ನಿಸಿದ ಯುವಕ

    ಮದ್ಯದ ಮತ್ತಿನಲ್ಲಿ 50 ವರ್ಷದ ಮಹಿಳೆಯ ರೇಪ್‍ಗೆ ಯತ್ನಿಸಿದ ಯುವಕ

    ಕೋಲಾರ: ಮದ್ಯದ ಮತ್ತಿನಲ್ಲಿ ಯುವಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.

    ಬೂದಿಕೋಟೆ ಗ್ರಾಮದ ಮುನಿರಾಜು (25) ಅತ್ಯಾಚಾರಕ್ಕೆ ಯತ್ನಿಸಿದ್ದ ಯುವಕ. ಅದೇ ಗ್ರಾಮದ ರುಕ್ಮಿಣಿಯಮ್ಮ (50) ಮುನಿರಾಜುನಿಂದ ಹಲ್ಲೆಗೊಳಗಾದ ಮಹಿಳೆ. ಭಾನುವಾರ ಸಂಜೆ ಗ್ರಾಮದ ಬಳಿಯ ಜಮೀನಿನಲ್ಲಿ ಘಟನೆ ನಡೆದಿದೆ.

    ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಮುನಿರಾಜು ಭಾನುವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಮದ್ಯ ಸೇವಿಸಿ ಗ್ರಾಮದಿಂದ ಸ್ವಲ್ಪ ದೂರ ಬಂದಿದ್ದ. ಈ ವೇಳೆ ಕುರಿ ಮೇಯಿಸುತ್ತಿದ್ದ ರುಕ್ಮಿಣಿಯಮ್ಮ ಅವರನ್ನು ನೋಡಿದ್ದಾನೆ. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿ, ರುಕ್ಮಿಣಿಯಮ್ಮ ಅವರ ಮುಖಕ್ಕೆ ಹೊಡೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಮುನಿರಾಜುನಿಂದ ತಪ್ಪಿಸಿಕೊಂಡ ರುಕ್ಮಿಣಿಯಮ್ಮ ಗ್ರಾಮಕ್ಕೆ ಹೋಗಿ ಸಂಬಂಧಿಕರಿಗೆ ಘಟನೆಯನ್ನು ತಿಳಿಸಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ರುಕ್ಮಿಣಿಯಮ್ಮ ಅವರ ಸಂಬಂಧಿಕರು ಹಾಗೂ ಗ್ರಾಮಸ್ಥರು ಮುನಿರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ, ಆರೋಪಿಯನ್ನು ಒಪ್ಪಿಸಿದ್ದಾರೆ.

    ಈ ಸಂಬಂಧ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುನಿರಾಜುನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ರುಕ್ಮಿಣಿಯಮ್ಮ ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.