Tag: Bangaluru

  • ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗಳೂರು: ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ, ಭಾರೀ ಪ್ರಾಮಾಣದ ದಂಡ ಕಟ್ಟಿ ಸುತ್ತಾಗಿದ್ದಾರೆ.

    ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿಕೊಂಡು ಪೊಲೀಸರು ವಾಹನ ಸವಾರರ ಬೆವರಿಳಿಸಿದ್ದಾರೆ.

    ಇದರ ನಡುವೆ, ದುಬಾರಿ ದಂಡ ತಪ್ಪಿಸಿಕೊಳ್ಳಲು ದೇಸೀ ಉಪಾಯಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ. ಗುರುಗ್ರಾಮದಲ್ಲಿ ಬೈಕ್ ಸವಾರರು ಪೊಲೀಸರ ಪರಿಶೀಲನೆ ಕಂಡು ಬೈಕ್‍ಗಳನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಈ ಕುರಿತ ಹಾಸ್ಯಾತ್ಮಕ ವಿಡಿಯೋವೊಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಶೇರ್ ಮಾಡಿಕೊಂಡಿದ್ದಾರೆ.

  • ಉತ್ತರ ಕರ್ನಾಟಕ ಪ್ರವಾಹಕ್ಕೆ ಮಿಡಿದ ಮಕ್ಕಳ ಹೃದಯ

    ಉತ್ತರ ಕರ್ನಾಟಕ ಪ್ರವಾಹಕ್ಕೆ ಮಿಡಿದ ಮಕ್ಕಳ ಹೃದಯ

    – ಕಣ್ಣೀರಾಕಿ ಚಂದಾ ಎತ್ತಿದ ಮಕ್ಕಳು

    ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಿಂದ ತತ್ತರಿಸಿದ ಜನರಿಗಾಗಿ ಶಾಲಾ ವಿದ್ಯಾರ್ಥಿಗಳು ಕಣ್ಣೀರು ಹಾಕಿ ಚಂದಾ ಸಂಗ್ರಹ ಮಾಡಿದ್ದಾರೆ.

    ಪಬ್ಲಿಕ್ ಟಿವಿಯ ‘ಬುಲೆಟ್ ರಿಪೋರ್ಟರ್’ನಲ್ಲಿ ರಾಮದುರ್ಗದ ಪ್ರವಾಹ ಪೀಡಿತ ಪ್ರದೇಶದ ಕುರಿತು ಪ್ರಸಾರವಾಗಿತ್ತು, ಅದರಲ್ಲಿ ರಾಮದುರ್ಗ ಶಾಲೆಯ ಮಕ್ಕಳಿಗೆ ಸಹಾಯ ಮಾಡುವಂತೆ ಅಲ್ಲಿನ ಮುಖ್ಯೋಪಾಧ್ಯಾಯರು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಬನಶಂಕರಿಯಲ್ಲಿರುವ ಸೆಂಟ್ ಪೀಟರ್ಸ್ ಶಾಲೆಯ ಮಕ್ಕಳ ಮನ ಮಿಡಿದಿದ್ದು, ಪ್ರವಾಹ ಪೀಡಿತರಿಗಾಗಿ ಚಂದಾ ಸಂಗ್ರಹ ಮಾಡಿದ್ದಾರೆ.

    ಪ್ರವಾಹದಿಂದ ಹಾನಿಯಾಗಿರುವ ದೃಶ್ಯಗಳನ್ನು ಮಾಧ್ಯಮದಲ್ಲಿ ನೋಡಿ ಸೆಂಟ್ ಪೀಟರ್ಸ್ ಶಾಲೆಯ ವಿದ್ಯಾರ್ಥಿಗಳು ಬೇಸರಗೊಂಡು ತಮ್ಮ ಮುಖ್ಯೋಪಾಧ್ಯಾಯರ ಬಳಿ ಹೋಗಿ, ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಬಯಸುತ್ತೇವೆ ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೆ ಅವರಿಗಾಗಿ ಹಣ ಸಂಗ್ರಹಿಸಿ ನೀಡುತ್ತೇವೆ ಎಂದು ಹೇಳಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಲು ಬಯಸಿದ ಮಕ್ಕಳ ನಿರ್ಧಾರಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಅನುಮತಿ ನೀಡುವ ಮೂಲಕ ಮಕ್ಕಳ ಸಹಾಯ ಕಾರ್ಯಕ್ಕೆ ಕೈಜೊಡಿಸಿದ್ದಾರೆ.

    ಈವರೆಗೆ ವಿದ್ಯಾರ್ಥಿಗಳೆಲ್ಲಾ ಸೇರಿ ಸುಮಾರು 25 ಸಾವಿರ ರೂಪಾಯಿ ಹಣ ಸಂಗ್ರಹ ಮಾಡಿದ್ದಾರೆ. ಈ ಹಣವನ್ನು ಪ್ರವಾಹ ಪೀಡಿತ ಜನರಿಗೆ ನೀಡಲು ಮಕ್ಕಳು ನಿರ್ಧರಿಸಿದ್ದಾರೆ.

  • ಬೆಂಗ್ಳೂರಿನಿಂದ ಕನಕಪುರಕ್ಕೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತ

    ಬೆಂಗ್ಳೂರಿನಿಂದ ಕನಕಪುರಕ್ಕೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತ

    ಬೆಂಗಳೂರು: ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆಗಳು ಗಲಾಟೆಗಳು ಜೋರಾಗುತ್ತಿರುವ ಹಿನ್ನೆಲೆ ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಹೋಗುವ ಕೆಎಸ್ಆರ್‌ಟಿಸಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಬೆಳಗಿನ ಜಾವ ಸುಮಾರು 6 ಗಂಟೆಯಿಂದಲೂ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ ಗಳಿಗೆ ಕಾಯುತ್ತಿದ್ದಾರೆ. ಬೆಂಗಳೂರಿನಿಂದ ಹಾರೋಹಳ್ಳಿ, ಕನಕಪುರ, ರಾಮನಗರದ ಇತರೆ ಭಾಗಗಳಿಗೆ ಹೋಗಬೇಕಾಗಿರುವ ಪ್ರವಾಣಿಕರು ಬಸ್ ಸೇವೆಯಿಲ್ಲದೆ ಪರದಾಡುತ್ತಿದ್ದಾರೆ. ಈಗಾಗಲೇ ಡಿಪೋ ಅಧಿಕಾರಿಗಳ ಸೂಚನೆ ಮೇರೆಗೆ ಯಾವುದೇ ಬಸ್ ಬೆಂಗಳೂರಿಂದ ಕನಕಪುರಕ್ಕೆ ತೆರಳುವ ಸಾಧ್ಯತೆ ಇಲ್ಲ. ಆದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರಯಾಣಿಕರಿಗೆ ಕಲಾಸಿಪಾಳ್ಯದಲ್ಲಿ ಕೆಎಸ್ಆರ್‌ಟಿಸಿ ಅಧಿಕಾರಿಗಳು ಮನವೊಲಿಕೆ ಮಾಡುತ್ತಿದ್ದಾರೆ.

    ಕನಕಪುರದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಎಸ್ಆರ್‌ಟಿಸಿ ಬಸ್ ಡಿಪೋ ಬಳಿ ಸಿಬ್ಬಂದಿ ಹಾಜರ್ ಆಗಿ ಬಸ್ಸುಗಳನ್ನು ಹೊರಗೆ ತೆಗೆಯದಿರಲು ನಿರ್ಧರಿಸಿದ್ದಾರೆ. ಮಂಗಳವಾರ ರಾತ್ರಿ ಡಿಕೆಶಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನ ಬಂಧನ ಖಂಡಿಸಿ, 1 ಬಸ್ಸಿಗೆ ಬೆಂಕಿ ಹಚ್ಚಿ, ಸುಮಾರು 4 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.

    ಸಮಯ ಕಳೆಯುತ್ತಿದ್ದಂತೆ ಪ್ರತಿಭಟನೆಯ ಕಾವು ಜೋರಾಗುತ್ತಿದೆ. ಡಿಕೆಶಿ ಬೆಂಬಲಿಗರು ರಸ್ತೆ ಬಂದ್ ಮಾಡಿ, ನಡುರಸ್ತೆಗಳಲ್ಲಿ ಡಯರ್ ಸುಟ್ಟು, ಬಿಜೆಪಿ ನಾಯಕರ ಅಣಕು ಶವಗಳನ್ನು ಮೆರವಣಿಗೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • 46ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್

    46ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 46 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ, ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧರಿಸಿದ್ದಾರೆ.

    ನೆಚ್ಚಿನ ನಟನ ಹುಟ್ಟುಹಬ್ಬದ ಕ್ಷಣ ನೋಡಲು ಜೆ.ಪಿ.ನಗರದ ಮನೆ ಬಳಿ ಸಾವಿರಾರು ಜನ ಸಾಕ್ಷಿಯಾಗಿದ್ದರು. ಮಧ್ಯರಾತ್ರಿ 12.15 ಕ್ಕೆ ಖುದ್ದು ಸುದೀಪ್ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿದರು. ಈ ಕ್ಷಣಕ್ಕೆ ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತ್ತು. “ಕಿಚ್ಚ ಸುದೀಪ್‍ಗೆ ಜೈ, ಕರ್ನಾಟಕದ ಪೈಲ್ವಾನ್‍ಗೆ ಜೈ, ಪರಭಾಷೆಗಳ ವಿಲನ್‍ಗೆ ಜೈ” ಎಂದು ಅಭಿನಯ ಚಕ್ರವರ್ತಿಗೆ ಜೈಕಾರದ ಹಾಕುತ್ತಾ ಅಭಿಮಾನಿಗಳ ನೃತ್ಯ ಸಂಭ್ರಮ ಸಖತ್ತಾಗಿತ್ತು.

    ಇದೇ ವೇಳೆ ಪೈಲ್ವಾನ್ ಚಿತ್ರತಂಡ ಒಂದು ಹಾಡನ್ನು ರಿಲೀಸ್ ಮಾಡಿ ಸುದೀಪ್‍ಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದೆ. ಪೈಲ್ವಾನ್ ಚಿತ್ರ ಸೆಪ್ಟೆಂಬರ್ 12ಕ್ಕೆ ದೇಶಾದ್ಯಂತ ರಿಲೀಸ್ ಆಗಲಿದ್ದು, ದೇಶದೆಲ್ಲೆಡೆ ಪೈಲ್ವಾನ್ 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸುದೀಪ್ ಪಾಲಿಗೆ ಪೈಲ್ವಾನ್ ಚಿತ್ರ ರಿಲೀಸ್ ಆಗಿ ಗೆದ್ದು, ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ.

  • ವಾಹನ ಸವಾರರೇ ಎಚ್ಚರ- ಇಂದಿನಿಂದ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ

    ವಾಹನ ಸವಾರರೇ ಎಚ್ಚರ- ಇಂದಿನಿಂದ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ

    ಬೆಂಗಳೂರು: ಇವತ್ತಿನಿಂದ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದ್ದು, ವಾಹನ ಸವಾರರು ಎಚ್ಚರ ವಹಿಸಬೇಕಿದೆ. ಒಂದು ವೇಳೆ ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ ಎಂದರೆ ಭಾರೀ ದಂಡ ಕಟ್ಟಲು ಸವಾರರು ಸಿದ್ಧವಾಗಿರಬೇಕು.

    ಹೌದು. 2019 ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಇಂದಿನಿಂದ ಜಾರಿ ಬರುತ್ತಿವೆ. ಇಂದು ಮತ್ತು ನಾಳೆ ಗಣೇಶ ಹಬ್ಬದ ಕಾರಣ ಕೋರ್ಟಿಗೆ ರಜೆ ಇದೆ. ಆದ್ದರಿಂದ ಮೈ ಮರೆತರೆ ದಂಡ ಕಟ್ಟಲು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಬೇಕಾದೀತು ಜೋಕೆ. ಟ್ರಾಫಿಕ್ ಪೊಲೀಸರು ರಾತ್ರಿಯಿಂದಲೇ ಅಲರ್ಟ್ ಆಗಿದ್ದಾರೆ. ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಹಾಕಲು ಕಾದು ಕುಳಿತ್ತಿದ್ದಾರೆ.

    ಯಾವ ರೂಲ್ಸ್ ವೈಲೇಷನ್‍ಗೆ ಎಷ್ಟೆಷ್ಟು ದಂಡ:

  • ನನ್ನ ಪ್ರಾಣ ಹೋದ್ರೂ ಪರ್ವಾಗಿಲ್ಲ ರಾಜ್ಯ, ಕನಕಪುರದ ಜನರ ಜೊತೆ ಇರ್ತೇನೆ: ಡಿಕೆಶಿ

    ನನ್ನ ಪ್ರಾಣ ಹೋದ್ರೂ ಪರ್ವಾಗಿಲ್ಲ ರಾಜ್ಯ, ಕನಕಪುರದ ಜನರ ಜೊತೆ ಇರ್ತೇನೆ: ಡಿಕೆಶಿ

    ಬೆಂಗಳೂರು: ನನ್ನ ಕ್ಷೇತ್ರಕ್ಕೆ ಮಂಜೂರಾದ ಮೆಡಿಕಲ್ ಕಾಲೇಜು ರದ್ದು ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ ರಾಜ್ಯ ಹಾಗೂ ಕನಕಪುರದ ಜನರ ಜೊತೆ ಇರುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಆಗಿರುವ ನಮ್ಮ ಸ್ನೇಹಿತ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಬಿಎಸ್‍ವೈ ದ್ವೇಷದ ರಾಜಕೀಯ ಮಾಡಲ್ಲ ಎಂದಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲಿ ಬಿಎಸ್‍ವೈ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮಾಡಿದ ಯೋಜನೆಗಳನ್ನು ರದ್ದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಯಾವುದಕ್ಕೂ ಹೆದರಲ್ಲ, ಎಲ್ಲವನ್ನೂ ಎದುರಿಸುತ್ತೇನೆ: ಡಿಕೆಶಿ

    ನಾನು ವೈದ್ಯಕೀಯ ಹಾಗೂ ನೀರಾವರಿ ಸಚಿವನಾಗಿ ಕೆಲಸ ಮಾಡಿದಕ್ಕೆ ಖುಷಿಯಿದೆ. ನನಗೆ ನನ್ನ ಕ್ಷೇತ್ರ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವ ಆಸೆಯಿತ್ತು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಮಾತು ಕೊಟ್ಟಿದ್ದರು ಆದರೆ ಆಗ ಕಾಲೇಜು ಸ್ಥಾಪನೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅವಕಾಶ ಕೊಟ್ಟರು. ಬಜೆಟ್ ಹಾಗೂ ಕ್ಯಾಬಿನೆಟ್‍ನಲ್ಲಿ ಇದಕ್ಕೆ ಒಪ್ಪಿಗೆ ದೊರಕಿತ್ತು. ಆದರೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಿಎಸ್‍ವೈ ತಡೆ ಹಿಡಿದಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ವರ್ಗಾವಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ವಿಚಾರವಾಗಿ ಶನಿವಾರದ ಒಳಗೆ ರೀ ಆರ್ಡರ್ ಮಾಡಬೇಕು. ನನ್ನ ಕ್ಷೇತ್ರಕ್ಕೆ ಮಂಜೂರಾದ ಮೆಡಿಕಲ್ ಕಾಲೇಜು ರದ್ದು ಮಾಡಿರುವ ನಿರ್ಧಾರ ಕೈಬಿಡಬೇಕು. ಇಲ್ಲವಾದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ, ಸಿಎಂ ಆಫೀಸ್ ಬಳಿ ಪ್ರತಿಭಟನೆ ಮಾಡುತ್ತೇನೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಕನಕಪುರದ ಜನ ಹಾಗೂ ರಾಜ್ಯದ ಜನರ ಜೊತೆ ನಾನು ಇರುತ್ತೇನೆ. ಹಾಗೆಯೇ ಮೆಡಿಕಲ್ ಕಾಲೇಜು ರದ್ದು ಮಾಡಿದರೆ ಉಗ್ರ ರೂಪದ ಪ್ರತಿಭಟನೆ ಮಾಡೋದಾಗಿ ಡಿಕೆಶಿ ಎಚ್ಚರಿಸಿದ್ದಾರೆ.

  • ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡೋದಾಗಿ ಬೆದರಿಸಿದ ಸೈಕೋಪಾತ್ ಪತಿ

    ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡೋದಾಗಿ ಬೆದರಿಸಿದ ಸೈಕೋಪಾತ್ ಪತಿ

    ಬೆಂಗಳೂರು: ಪ್ರೀತಿಸಿ ಮದುವೆ ಮಾಡಿಕೊಂಡ ಪತಿಯೇ ಈಗ ಪತ್ನಿಯ ಬದುಕಿನಲ್ಲಿ ವಿಲನ್ ಆಗಿದ್ದಾನೆ. ನಿನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತೇನೆ ಎಂದು ಸೈಕೋಪಾತ್ ಪತಿ ಪತ್ನಿಗೆ ಬೆದರಿಕೆ ಒಡ್ಡಿದ್ದಾನೆ.

    ಬೆಂಗಳೂರು ನಿವಾಸಿ ಅನಿಶ್ ಡ್ಯಾನಿಯಲ್ ಡಿಸೋಜ ಪತ್ನಿಗೆ ಬೆದರಿಕೆ ಒಡ್ಡಿರುವ ಸೈಕೋ ಪತಿರಾಯ. ಯುವತಿಯೊಬ್ಬಳನ್ನು ಅನೀಶ್ ಪ್ರೀತಿಸಿ ಮದುವೆಯಾಗಿದ್ದನು. ಆಕೆಯ ಜೊತೆ ಚೆನ್ನಾಗಿ ಸಂಸಾರ ಕೂಡ ನಡೆಸುತ್ತಿದ್ದನು. ಪತ್ನಿಯ 10 ಸಾವಿರಕ್ಕೂ ಅಧಿಕ ಖಾಸಗಿ ಫೋಟೋಗಳನ್ನು ಆತ ಕ್ಲಿಕ್ಕಿಸಿ ಇಟ್ಟುಕೊಂಡಿದ್ದನು. ಆದರೆ ಈ ವಿಚಾರ ಪತ್ನಿಗೆ ತಿಳಿದಿರಲಿಲ್ಲ. ಈಗ ಸ್ವತಃ ಆರೋಪಿಯೇ ಫೋಟೋಗಳ ಬಗ್ಗೆ ಪತ್ನಿಗೆ ಹೇಳಿದ್ದಾನೆ. ಅಲ್ಲದೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದಾನೆ.

    ಜೊತೆಗೆ ನಿನ್ನ ತಂಗಿ ಹಾಗೂ ತಾಯಿಯ ಖಾಸಗಿ ಫೋಟೋಗಳು ಕೂಡ ನನ್ನ ಬಳಿ ಇದೆ. ಅದನ್ನು ಕೂಡ ಶೇರ್ ಮಾಡುತ್ತೇನೆ ಎಂದು ಅನಿಶ್ ಪತ್ನಿಗೆ ಹೆದರಿಸಿದ್ದಾನೆ. ಯಾವ ಕಾರಣಕ್ಕೆ ಹೀಗೆ ಆರೋಪಿ ಪತ್ನಿಗೆ ಹೆದರಿಸುತ್ತಿದ್ದನೋ ತಿಳಿದಿಲ್ಲ. ಆದರೆ ಪತಿಯ ಹುಚ್ಚುತನಕ್ಕೆ ಬೇಸತ್ತ ಪತ್ನಿ ಪೊಲೀಸರ ಮೊರೆ ಹೋಗಿದ್ದಾಳೆ.

    ಸದ್ಯ ಅನಿಶ್ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸೇಫ್ ಗೇಮ್‍ನತ್ತ ಅನರ್ಹ ಶಾಸಕರು

    ಸೇಫ್ ಗೇಮ್‍ನತ್ತ ಅನರ್ಹ ಶಾಸಕರು

    ಬೆಂಗಳೂರು: ರಾಜಕೀಯ ಭವಿಷ್ಯದ ಬಗ್ಗೆ ಆತಂಕಗೊಂಡ ಅನರ್ಹ ಶಾಸಕರು ಸೇಫ್ ಗೇಮ್ ಪ್ಲಾನ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿಗು ಮುನ್ನ ಅನರ್ಹರು ಚುನಾವಣೆ ಆಯೋಗದ ಮೊರೆ ಹೋಗಿದ್ದಾರೆ.

    ಅನರ್ಹಗೊಂಡ 17 ಶಾಸಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬರೋತನಕ ಉಪ ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೆ ಅನರ್ಹರು ಮನವಿ ಮಾಡಿದ್ದಾರೆ. ಈ ಮೂಲಕ ಅತೃಪ್ತ ನಾಯಕರು ಸೇಫ್ ಗೇಮ್‍ಗಿಳಿದಿದ್ದಾರೆ.

    ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸುವಂತೆ ಅನರ್ಹ ಶಾಸಕರು ನ್ಯಾ. ಎನ್.ವಿ.ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮನವಿ ಮಾಡಿಕೊಂಡಿದ್ದರು. ತುರ್ತು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿತ್ತು.

    ಈ ಹಿಂದೆ ಅನರ್ಹ ಶಾಸಕರು ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠದ ಮುಂದೆ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ನ್ಯಾ.ಅರುಣ್ ಮಿಶ್ರಾ ದ್ವಿಸದಸ್ಯ ಪೀಠ ತುರ್ತು ವಿಚಾರಣೆಗೆ ಒಪ್ಪಿರಲಿಲ್ಲ. ಮತ್ತೊಮ್ಮೆ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು. ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಅನರ್ಹ ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಮಂಗಳವಾರ ತ್ರಿಸದಸ್ಯ ಪೀಠ ಅನರ್ಹರ ತುರ್ತು ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.

    ಆದ್ದರಿಂದ ಅನರ್ಹ ಶಾಸಕರಾದ ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ್ ಪಾಟೀಲ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್. ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಅವರು ಸೇಫ್ ಗೇಮ್‍ನತ್ತ ತಮ್ಮ ಚಿತ್ತ ಹರಿಸಿದ್ದಾರೆ.

  • ಕದಂಬ ನೌಕಾ ನೆಲೆಯಲ್ಲಿ ಹೈ ಅಲರ್ಟ್- ನಿಷೇಧ ಉಲ್ಲಂಘಿಸಿದ ಎರಡು ಮೀನುಗಾರಿಕಾ ದೋಣಿ ವಶ

    ಕದಂಬ ನೌಕಾ ನೆಲೆಯಲ್ಲಿ ಹೈ ಅಲರ್ಟ್- ನಿಷೇಧ ಉಲ್ಲಂಘಿಸಿದ ಎರಡು ಮೀನುಗಾರಿಕಾ ದೋಣಿ ವಶ

    -ಬೆಂಗಳೂರಿನಲ್ಲೂ ಶುರುವಾಗಿದೆ ಉಗ್ರರ ದಾಳಿ ಆತಂಕ

    ಕಾರವಾರ: ಮಂಗಳೂರಿನಲ್ಲಿ ಶಂಕಿತ ವ್ಯಕ್ತಿಗಳ ಬಂಧನ ಹಿನ್ನೆಲೆಯಲ್ಲಿ ಜಲಮಾರ್ಗದಲ್ಲಿ ತಪಾಸಣೆ, ಭದ್ರತೆ ತೀವ್ರಗೊಂಡಿದೆ. ಈ ಹಿನ್ನೆಲೆ ಉತ್ತರಕನ್ನಡದ ಅರಗಾದಲ್ಲಿರುವ ಕದಂಬ ನೌಕಾ ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಮುಂಜಾಗೃತ ಕ್ರಮವಾಗಿ ಕದಂಬ ನೌಕಾನೆಲೆಯ ಅರಬ್ಬಿ ಸಮುದ್ರದ ಮೂರು ನಾಟಿಕಲ್ ಮೈಲು ದೂರದವರೆಗೆ ಮೀನುಗಾರಿಕಾ ದೋಣಿಗಳಿಗೆ ನಿಷೇಧ ಹೇರಲಾಗಿದೆ. ಅಲ್ಲದೆ ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಆದರೂ ಕೂಡ ನಿಷೇಧಾಜ್ಞೆ ಉಲ್ಲಂಘಿಸಿ ನೌಕಾನೆಲೆಯ ಭಾಗದಲ್ಲಿ ಸ್ಥಳೀಯ ಎರಡು ಮೀನುಗಾರಿಕಾ ದೋಣಿ ಹಾದುಹೋಗಿದೆ. ಹೀಗಾಗಿ ಆ ಎರಡು ಸ್ಥಳೀಯ ಮೀನುಗಾರಿಕಾ ದೋಣಿಗಳನ್ನು ನೌಕಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

    ಭಟ್ಕಳ-ಉಡುಪಿ ಭಾಗ ಹಾಗೂ ಉಡುಪಿ-ಕಾರವಾರ ಮಾರ್ಗದ ಅರಬ್ಬಿ ಸಮುದ್ರದಲ್ಲಿ ನೌಕಾದಳದಿಂದ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಅಧಿಕಾರಿಗಳು ಜಾಗೃತಿ ವಹಿಸಿದ್ದಾರೆ.

    ಇತ್ತ ಬೆಂಗಳೂರಿನಲ್ಲೂ ಉಗ್ರರ ಆತಂಕ ಶುರುವಾಗಿದೆ. ಬೆಂಗಳೂರಿನ ವಿವಿಧೆಡೆ ಇಬ್ಬರು ಶಂಕಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಚಾಮರಾಜಪೇಟೆ, ಪೀಣ್ಯದ ಕೆಲವು ಭಾಗಗಳಲ್ಲಿ ಶಂಕಿತರು ಅಡಗಿಕೊಂಡಿರುವ ಮಾಹಿತಿ ಆಧಾರದ ಮೇಲೆ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

    ಪಾಕಿಸ್ತಾನದಿಂದ ನಕಲಿ ಪಾಸ್‍ಪೋರ್ಟ್ ಮೂಲಕ ಕರ್ನಾಟಕಕ್ಕೆ 4 ಶಂಕಿತರು ಎಂಟ್ರಿಕೊಟ್ಟಿದ್ದಾರೆ ಎನ್ನಲಾಗಿದ್ದು, ಶನಿವಾರದಂದು ಇಬ್ಬರು ಕಾಶ್ಮೀರ ಮೂಲದ ಶಂಕಿತ ವ್ಯಕ್ತಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಇನ್ನೂ ಉಳಿದ ಇಬ್ಬರು ಬೆಂಗಳೂರಿನಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಾರಿ ಕೇವಲ ಟಿಫ್‍ನ್ ಬಾಕ್ಸ್ ಬಾಂಬ್ ಅಲ್ಲ, ಆತ್ಮಾಹುತಿ ದಾಳಿಗಾಗಿ ಮಹಾ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ. ಸದ್ಯ ಆತ್ಮಾಹುತಿ ದಾಳಿಕೋರರು ಬೆಂಗಳೂರಿನ ಪೀಣ್ಯದಲ್ಲಿ ಇರೋ ಬಗ್ಗೆ ಮಾಹಿತಿ ದೊರಕಿದ್ದು, ಪೀಣ್ಯದ ನೆಲಗದರನಹಳ್ಳಿಯ ಆಸುಪಾಸಿನಲ್ಲಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

  • ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    ಸಾಲಕ್ಕೆ ಸಿಗರೇಟ್ ನೀಡದ್ದಕ್ಕೆ ಅಂಗವಿಕಲನ ಪೆಟ್ಟಿಗೆ ಅಂಗಡಿ ಸುಟ್ಟ ಪುಡಾರಿಗಳು

    -ಅಂಗಡಿ ಕಳೆದುಕೊಂಡು ಕಣ್ಣೀರಿಟ್ಟ ಅಂಗವಿಕಲ

    ಬೆಂಗಳೂರು: ಅಂಗವೈಫಲ್ಯದ ಕಾರಣಕ್ಕೆ ಎಷ್ಟೋ ಮಂದಿ ಭಿಕ್ಷೆಬೇಡಿ ಜೀವನ ನಡೆಸುತ್ತಾರೆ. ಅಂತಹ ಜನರ ನಡುವೆ ತಮ್ಮ ಅಂಗವಿಕಲತೆಯನ್ನು ಲೆಕ್ಕಿಸದೆ ಸ್ವಾಭಿಮಾನದಿಂದ ದುಡಿದು ಬದುಕುವ ಮಂದಿ ಕೂಡ ಇದ್ದಾರೆ. ಹೀಗೆ ಸ್ವಾಭಿಮಾನದಿಂದ ಅಂಗಡಿ ನಡೆಸುತ್ತಿದ್ದ ಅಂಗವಿಕಲ ವ್ಯಕ್ತಿಯೊಬ್ಬರು ಸಾಲ ನೀಡಲು ನಿರಾಕರಿಸಿದ್ದಕ್ಕೆ ಅವರ ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟು ಸುಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

    ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಚಿನ್ನಸ್ವಾಮಿ ಅವರು ಚಾಮರಾಜಪೇಟೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ತಂದೆ-ತಾಯಿಯನ್ನು ಕೂಡ ನೋಡಿಕೊಳ್ಳುತ್ತಿದ್ದರು. ಆದರೆ ಇವರ ಅಂಗಡಿಗೆ ಬರುತ್ತಿದ್ದ ಕೆಲ ಸ್ಥಳೀಯ ಪುಡಾರಿಗಳು ಹಣ ನೀಡದೆ ಸಾಲದಲ್ಲಿ ಟೀ-ಸಿಗರೇಟು ಖರೀದಿಸುತ್ತಿದ್ದರು. ಹೀಗೆ ಸಾಲದ ಪಟ್ಟಿ ಹೆಚ್ಚಾಗಿದಕ್ಕೆ ಚಿನ್ನಸ್ವಾಮಿ ಅವರ ವ್ಯಾಪಾರದಲ್ಲಿ ನಷ್ಟವಾಗುತ್ತಿತ್ತು. ಆದ್ದರಿಂದ ಅವರು ಸಾಲ ಕೊಡಲ್ಲ, ಹಣ ಕೊಟ್ಟು ವ್ಯಪಾರ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಮಾನವೀಯತೆ ಮರೆತು ಚಿನ್ನಸ್ವಾಮಿಯವರ ಅಂಗಡಿಗೆ ಬೆಂಕಿ ಇಟ್ಟು ಸುಟ್ಟಿದ್ದಾರೆ.

    ಕಿಡಿಗೇಡಿಗಳು ರಾತ್ರೋರಾತ್ರಿ ಚಿನ್ನಸ್ವಾಮಿ ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟು ಸೇಡು ತೀರಿಸಿಕೊಂಡಿದ್ದಾರೆ. ಇದರಿಂದ ಜೀವನಕ್ಕೆ ಆಧಾರವಾಗಿದ್ದ ಒಂದು ಅಂಗಡಿಯನ್ನು ಕಳೆದುಕೊಂಡು ಚಿನ್ನಸ್ವಾಮಿ ಹಾಗೂ ಅವರ ವೃದ್ಧ ತಂದೆ-ತಾಯಿ ಕಣ್ಣೀರಿಡುತ್ತಿದ್ದಾರೆ.

    ದುರುಳರ ವಿಕೃತತನಕ್ಕೆ ಚಿನ್ನಸ್ವಾಮಿ ಅವರ ಪೆಟ್ಟಿಗೆ ಅಂಗಡಿ ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿಯುರಿದಿದೆ. ಕಿಡಿಗೇಡಿಗಳು ಪೆಟ್ಟಿಗೆ ಅಂಗಡಿಗೆ ಬೆಂಕಿಯಿಟ್ಟಿದಷ್ಟೇ ಅಲ್ಲದೆ, ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಲಾಂಗು-ಮಚ್ಚುಗಳಿಂದ ಹಾನಿ ಮಾಡಿ ದುಷ್ಟತನ ಮೆರೆದಿದ್ದಾರೆ.

    ಅಂಗಡಿಗೆ ಬೆಂಕಿ ಹಂಚಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಸುಟ್ಟುಹೋಗುತ್ತಿದ್ದ ಅಂಗಡಿಯ ಬೆಂಕಿಯನ್ನು ಪೊಲೀಸರು ಸ್ಥಳೀಯರ ಸಹಾಯ ಪಡೆದು ನಂದಿಸಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.