Tag: Bangaluru

  • ಆನ್‍ಲೈನ್‍ಲ್ಲಿ ಸಿಗ್ತಿದೆ ಗಾಂಜಾ- ಕಾಲೇಜುಗಳೇ ಅಡ್ಡ, ವಿದ್ಯಾರ್ಥಿಗಳಿಗೆ ಕೆಡ್ಡ

    ಆನ್‍ಲೈನ್‍ಲ್ಲಿ ಸಿಗ್ತಿದೆ ಗಾಂಜಾ- ಕಾಲೇಜುಗಳೇ ಅಡ್ಡ, ವಿದ್ಯಾರ್ಥಿಗಳಿಗೆ ಕೆಡ್ಡ

    -ಸಿಂಗಂ ರವಿಚೆನ್ನಣ್ಣನವರ್ ಏರಿಯಾದಲ್ಲೇ ಗಾಂಜಾ ದಂಧೆ

    ಬೆಂಗಳೂರು: ಇತ್ತೀಚೆಗೆ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ದಂಧೆ ಮೇಲೆ ಪೊಲೀಸರು ಹೆಚ್ಚು ನಿಗಾ ವಹಿಸಿದ್ದರೂ ಗಾಂಜಾ ಮಾರಾಟ ಗ್ಯಾಂಗ್ ಮಾತ್ರ ಯಾವುದೇ ತಲೆ ಕೆಡಿಸಿಕೊಂಡಿಲ್ಲ. ಏನಾದರೂ ಮಾಡಿಕೊಳ್ಳಿ ಕ್ಯಾರೆ ಮಾಡಲ್ಲ ಎನ್ನುತ್ತ ಸಾಮಾಜಿಕ ಜಾಲತಾಣವನ್ನು ಬಳಸಿ ಗಾಂಜಾ ದಂಧೆಯನ್ನು ಎಗ್ಗಿಲ್ಲದಂತೆ ನಡೆಸುತ್ತಿದ್ದಾರೆ.

    ಸಾಮಾನ್ಯವಾಗಿ ನಾವೆಲ್ಲಾ ಆನ್‍ಲೈನ್‍ನಲ್ಲಿ ಊಟ, ಇಲ್ಲ ಬಟ್ಟೆ, ಎಲೆಕ್ಟ್ರಾನಿಕ್ ಐಟಮ್ಸ್ ಹೀಗೆ ವಸ್ತುಗಳನ್ನ ಆರ್ಡರ್ ಮಾಡಿ ತರಿಸಿಕೊಳ್ಳುತ್ತೇವೆ. ಆದರೆ ಆನ್‍ಲೈನ್‍ನಲ್ಲಿ ಗಾಂಜಾ ಸಿಗುತ್ತೆ ಎಂದರೆ ನಿಜಕ್ಕೂ ಶಾಕ್ ಆಗುತ್ತೆ. ಈ ದಂಧೆ ನಡೆಯುತ್ತಿರೋದು ಬೇರೆಲ್ಲೂ ಅಲ್ಲ, ನಮ್ಮ ಸಿಲಿಕಾನ್ ಸಿಟಿಯಲ್ಲಿ. ಹೌದು ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದಂತೆ ಆನ್‍ಲೈನ್ ಗಾಂಜಾ ಗಂಧೆ ನಡೆಯುತ್ತಿದೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ನಾವು ಸುಮ್ನೆ ಇದ್ದರೆ ಹೇಗೆ ಅಂತ ಗಾಂಜಾ ಮಾರಾಟ ಗ್ಯಾಂಗ್ ರಂಗೋಲಿ ಕೆಳಗೆ ನುಗ್ಗಿ ಮಾಸ್ಟರ್ ಪ್ಲಾನ್ ಮಾಡಿದೆ. ಗಾಂಜಾ ದಂಧೆಕೋರರು ಆನ್‍ಲೈನ್‍ಗೂ ಲಗ್ಗೆ ಇಟ್ಟು ಪ್ರತಿಷ್ಠಿತ ಕಾಲೇಜು ಯುವಕ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಗಾಂಜಾ ಮಾರಟ ಮಾಡುತ್ತಿದ್ದಾರೆ. ಈಗಿನ ಯುವಕ, ಯುವತಿಯರಿಗೆ ಅಗತ್ಯತೆಗೆ ಅನುಗುಣವಾಗಿ ಆನ್‍ಲೈನ್‍ನಲ್ಲಿ ಗಾಂಜಾ ಮಾರಾಟ ಮಾಡುವುದನ್ನ ಶುರುವಿಟ್ಟುಕೊಂಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಜಾಲಾ ಹರಡಿಬಿಟ್ಟಿದೆ. ಇತ್ತೀಚೆಗೆ ಆನೇಕಲ್ ತಾಲೂಕಿನಲ್ಲಿ ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್‌, ಅಲಯನ್ಸ್ ಕಾಲೇಜು ಸೇರಿದಂತೆ ಹಲವೆಡೆ ಗಾಂಜಾ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಅಂತರಾಜ್ಯ ದಂಧೆಕೋರ ಡೇವಿಡ್‍ನನ್ನು ಬಂಧಿಸಿದ್ದರು. ಆತನ ಬಳಿ ಇದ್ದ ಬರೋಬ್ಬರಿ 800 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಆದರೂ ಭಯಬೀಳದ ದಂಧೆಕೋರರು ಹೊರ ರಾಜ್ಯಗಳಿಂದ ಬಂದು ವಿಬಿಎಚ್‍ಎಸ್ ಅಪಾಟ್‌ರ್ಮೆಂಟ್‌ ನ ಪ್ಲಾಟ್‍ಗಳನ್ನು ಬಾಡಿಗೆಗೆ ಪಡೆದು, ಆನ್‍ಲೈನ್ ಮೂಲಕ ಗಾಂಜಾ ವ್ಯಾಪಾರ ಶುರುವಿಟ್ಟುಕೊಂಡಿದ್ದಾರೆ. ಗಾಂಜಾ ಬುಕ್ ಮಾಡಿದ ಯುವಕ ಯುವತಿಯರ ಪೇಪರ್ ಮೇಲೆ ಹೆಸರು ಬರೆದು ಯಾರ ಭಯವು ಇಲ್ಲದೆ, ಎಗ್ಗಿಲ್ಲದೆ ಗಾಂಜಾ ಸಪ್ಲೈ ಮಾಡ್ತಿದ್ದಾರೆ.

    ಇಷ್ಟೇ ಅಲ್ಲ ಅವರ ಅಡ್ಡಾಕ್ಕೆ ಸ್ಥಳೀಯರು ಯಾರಾದರೂ ಕಾಲಿಟ್ಟರೆ ಗೇಟ್ ಬಳಿ ಬೌನ್ಸರ್ ಗಳನ್ನು ಇಟ್ಟು, ಯಾರು ಒಳ ಹೋಗದಂತೆ ತಡೆಯುತ್ತಿದ್ದಾರೆ. ಗಾಂಜಾ ಪಡೆದು ಸೇವನೆ ಮಾಡುವ ಪ್ರತಿಷ್ಠಿತ ಕಾಲೇಜಿನ ಯುವಕ ಯುವತಿಯರು ನಡುರಸ್ತೆಯಲ್ಲಿ ನಿಂತು ತೂರಾಡುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=gVymkMfbH8A

  • ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲಾ: ಸೋಮಶೇಖರ್ ಕಿಡಿ

    ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲಾ: ಸೋಮಶೇಖರ್ ಕಿಡಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಯೋಗ್ಯ, ಅವನು ಸರಿಯಿದ್ದಿದ್ದರೆ ನಾವೇಕೆ ಪಕ್ಷ ಬಿಡುತ್ತಿದ್ದೇವು? ಅವನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚೇಲಾ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ಸೋಮಶೇಖರ್ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವನು ನಮ್ಮ ಬಗ್ಗೆ ಏನ್ ಮಾತಾಡೋದು? ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷಾದ್‍ದು. ಇದು ಸಿದ್ದರಾಮಯ್ಯನ ಕಾಂಗ್ರೆಸ್ಸಾ? ಓರಿಜನಲ್ ಕಾಂಗ್ರೆಸ್ಸಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.

    ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ಅವನು ಸರಿಯಿದ್ದಿದ್ದರೆ ನಾವೇಕೆ ರಾಜೀನಾಮೆ ಕೊಡುತ್ತಿದ್ದೇವು? ಅವನು ನನ್ನ ಜೊತೆಯಲ್ಲಿ ಸದಸ್ಯ ಆಗಿದ್ದವನು. ರಮೇಶ್ ಕುಮಾರ್ ಮುನಿಯಪ್ಪನ ಸೋಲಿಸಿದರು. ಕೆ.ಎಚ್.ಮುನಿಯಪ್ಪಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಏನು ಕ್ರಮ ಕೈಗೊಂಡರು? ಹರಿಪ್ರಸಾದ್, ಮುನಿಯಪ್ಪ ಹೇಳಿದ್ದು ಸರಿ ಇದೆ. ದಿನೇಶ್ ಗುಂಡೂರಾವ್ ನನ್ನ ಜೊತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಿದ್ದವನು, ಅವರ ಅಪ್ಪ ಮುಖ್ಯಮಂತ್ರಿ ಆಗಿದ್ದರು ಎಂದು ಅವನು ಇಷ್ಟು ಮೇಲೆ ಬಂದ ಎಂದು ಹರಿಹಾಯ್ದರು.

    ಅವನೇನು ನಮ್ಮ ಬಗ್ಗೆ ಮಾತಾಡೋದು? ಪದೇ ಪದೇ ನಮ್ಮ ಬಗ್ಗೆ ಮಾತಾಡ್ತಾನೆ. ನಮ್ಮ ತಂಟೆಗೆ ಬರೋದು ಬೇಡ. ನಿನಗೆ ಕೆಲಸ ಮಾಡಲು ಬಿಡುವಿಲ್ಲ, ಆ ಯೋಗ್ಯತೆಯಿಲ್ಲ. ನೀನೇನು ಅನರ್ಹರ ಬಗ್ಗೆ ಮಾತನಾಡುತ್ತೀಯಾ ಎಂದು ಏಕವಚನದಲ್ಲಿ ಬೈದು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿ ಜೊತೆ ಕರೆಯಲ್ಲಿ ಮಾತನಾಡಿದ ಸೋಮಶೇಖರ್ ಅವರು, ಅವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಯಾವ ಪದವನ್ನು ಬಳಕೆ ಮಾಡಬೇಕು ಎಂಬ ಕಾಮನ್ ಸೆನ್ಸ್ ಇಲ್ಲ. ಒಬ್ಬ ಫುಟ್‍ಪಾತ್‍ನಲ್ಲಿ ಮಾತನಾಡುವ ಹಾಗೆ ಮಾತನಾಡುತ್ತಾನೆ. ನಮ್ಮ ಅನರ್ಹತೆಯ ವಿಚಾರ ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದೆ. ಅದನ್ನ ನಾವು ನೋಡಿಕೊಳ್ಳುತ್ತೇವೆ. ಆದೆರೆ ಇವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಮಾಡಲು ಸಾಕಷ್ಟು ಕೆಲಸಗಳಿವೆ. ಅದನ್ನ ಬಿಟ್ಟು ಪದೇ ಪದೇ ರಾಜಕೀಯ ವ್ಯಭಿಚಾರಿ, ದೇಶದ್ರೋಹಿಗಳು ಎಂದು ನಮ್ಮ ಬಗ್ಗೆ ಮಾತನಾಡೋದು ಸರಿಯಲ್ಲ. ಅವನ ಯೋಗ್ಯತೆಗೆ ಕಚೇರಿಯಲ್ಲಿ ಒಬ್ಬ ಅಟೆಂಡರ್ ಕೂಡ ಇವನ ಮಾತು ಕೇಳೋದಿಲ್ಲ. ಇಂಥವನು ನಮ್ಮ ಬಗ್ಗೆ ಮಾತನಾಡುತ್ತಾನೆ. ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಕೇವಲ ನಮ್ಮ ಶಾಸಕ ಸ್ಥಾನಕ್ಕೆ ನಾವು ರಾಜೀನಾಮೆ ನೀಡಿದ್ದೇವು. ಆದ್ರೆ ಇವರು ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • ಫೋನ್ ಟ್ಯಾಪಿಂಗ್ ಪ್ರಕರಣ- ಅಲೋಕ್ ಕುಮಾರ್‌ಗೆ ಸಿಬಿಐ ಡ್ರಿಲ್

    ಫೋನ್ ಟ್ಯಾಪಿಂಗ್ ಪ್ರಕರಣ- ಅಲೋಕ್ ಕುಮಾರ್‌ಗೆ ಸಿಬಿಐ ಡ್ರಿಲ್

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಎಡಿಜಿಪಿ ಕೆಎಸ್‌ಆರ್‌ಪಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಸತತ 1 ಗಂಟೆಯಿಂದ ವಿಚಾರಣೆ ನಡೆಸುತ್ತಿದ್ದಾರೆ.

    ಅಲೋಕ್ ಕುಮಾರ್ ನಿವಾಸದಲ್ಲೇ ಸತತ 1 ಗಂಟೆಯಿಂದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗೆ ಭೇಟಿ ಕೊಟ್ಟು ಅಲೋಕ್ ಕುಮಾರ್ ಅವರಿಗೆ ಸಿಬಿಐ ಶಾಕ್ ಕೊಟ್ಟಿದ್ದಾರೆ. ಅಲೋಕ್ ಅವರು ಬೆಂಗಳೂರು ಕಮೀಷನರ್ ಆಗಿದ್ದಾಗ ಫೋನ್ ಕದ್ದಾಲಿಕೆ ಪ್ರಕರಣ ನಡೆದಿದ್ದು, ಅಲೋಕ್ ಅವರ ಮನೆಯಲ್ಲೇ ಕದ್ದಾಲಿಕೆ ನಡೆದಿದೆ. ಎಲ್ಲಾ ಮಾಹಿತಿಯನ್ನು ಅವರು ಪೆನ್‍ಡ್ರೈವ್‍ನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಅವರಿಗೆ ಈ ಬಗ್ಗೆ ಮೊದಲೇ ಗೊತ್ತಿತ್ತು ಎಂಬ ಆರೋಪವಿದೆ. ಆದ್ದರಿಂದ ಈ ಬಗ್ಗೆ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು ಅಲೋಕ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಈ ರೀತಿ ಫೋನ್ ಕದ್ದಾಲಿಕೆ ನಡೆದಿದೆ. ಇದರಲ್ಲಿ ಅನೇಕ ಐಎಎಸ್, ಐಪಿಎಸ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ಹೆಸರು ಕೂಡ ಕೇಳಿಬಂದಿತ್ತು. ಅಲ್ಲದೆ ಅಲೋಕ್ ಕುಮಾರ್ ಅವರು ಕಮೀಷನರ್ ಹುದ್ದೆಯಿಂದ ಕೆಳಗಿಳಿದ ಬಳಿಕ ಕಚೇರಿಯಿಂದ ಸುಮಾರು 30 ಜಿಬಿಯಷ್ಟು ಆಡಿಯೋ ಕ್ಲಿಪ್ಪಿಂಗ್ಸ್ ಇದ್ದ ಆಡಿಯೋವನ್ನು ಅವರು ತೆಗೆದುಕೊಂಡು ಹೋಗಿದ್ದರು ಎಂಬ ಆರೋಪ ಕೂಡ ಇದೆ.

    ಈ ಸಂಬಂಧ ಸ್ವಯಂ ಪೇರಿತವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 72 ಐಟಿ ಆ್ಯಕ್ಟ್, ಸೆಕ್ಷನ್ 26 ಇಂಡಿಯನ್ ಟೆಲಿಗ್ರಾಂ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರರಕಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿತ್ತು. ಈ ಬಗ್ಗೆ ಸಿಬಿಐ ಈಗ ತನಿಖೆ ಕೈಗೊಂಡಿದೆ.

  • ಒಂದೇ ದಿನಕ್ಕೆ 21.52 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ ಬೆಂಗ್ಳೂರು ಟ್ರಾಫಿಕ್ ಪೊಲೀಸರು

    ಒಂದೇ ದಿನಕ್ಕೆ 21.52 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ ಬೆಂಗ್ಳೂರು ಟ್ರಾಫಿಕ್ ಪೊಲೀಸರು

    ಬೆಂಗಳೂರು: ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಇಳಿಸಿದ್ದರೂ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಒಂದೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 21.52 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದ್ದಾರೆ.

    ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಕೇಂದ್ರ ಸರ್ಕಾರ ದುಬಾರಿ ದಂಡ ವಿಧಿಸಿತ್ತು. ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದುಬಾರಿ ದಂಡಕ್ಕೆ ಬ್ರೇಕ್ ಹಾಕಿ, ದಂಡದ ಮೊತ್ತವನ್ನ ಇಳಿಸಿತ್ತು. ಈ ಬೆನ್ನಲ್ಲೇ ವಾಹನ ಸವಾರರು ತಮ್ಮ ಹಳೇ ಚಾಳಿಯನ್ನ ಮುಂದುವರಿಸಿದ್ದಾರೆ. 24 ಗಂಟೆಯಲ್ಲಿ ಅಂದರೆ ಮಂಗಳವಾರ ಒಂದೇ ದಿನಕ್ಕೆ 6,782 ಟ್ರಾಫಿಕ್ ನಿಯಮ ಉಲ್ಲಂಘನೆಯ ಪ್ರಕರಣಗಳು ಸಿಲಿಕಾನ್ ಸಿಟಿ ವಾಹನ ಸವಾರರಿಂದ ದಾಖಲಾಗಿವೆ.

    ಈ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆಯ ಕೇಸ್‍ಗಳೇ ಹೆಚ್ಚು ದಾಖಲಾಗಿವೆ. ಬರೋಬ್ಬರಿ 1,546 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಇದರಿಂದ ಸುಮಾರು 2,87,500 ರೂ. ದಂಡ ಸಂಗ್ರಹವಾಗಿದೆ. ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಪ್ರಕರಣಗಳು 1,046 ದಾಖಲಾಗಿದ್ದು, ಇದರಿಂದ 2,22,000 ರೂ. ದಂಡ ವಸೂಲಾಗಿದೆ.

    806 ವಾಹನಗಳನ್ನು ತಪ್ಪಾಗಿ ಪಾರ್ಕಿಂಗ್ ಮಾಡಿದ ಪ್ರಕರಣಗಳು ದಾಖಲಾಗಿದ್ದು 1,66,100 ರೂ. ದಂಡವನ್ನು ವಾಹನ ಸವಾರರಿಂದ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಗ್ನಲ್ ಜಂಪ್ 818 ಪ್ರಕರಣದಿಂದ 1,41,800 ರೂ., ನೋ ಎಂಟ್ರಿ ಪ್ರಕರಣಗಳು 355, ಅದರಿಂದ 1,03,800 ರೂ., ಅಲ್ಲದೆ ವಾಹನದಲ್ಲಿ ಉದ್ದದ ಸಾಮಾಗ್ರಿಗಳನ್ನು ಸಾಗಿಸಿದ 318 ಪ್ರಕರಣಗಳಿಂದ 3,18,100 ರೂ. ದಂಡ ಸಂಗ್ರಹಿಸಲಾಗಿದೆ.

    ಸುಮಾರು 65 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 6,782 ಪ್ರಕರಣಗಳಿಂದ ಸಂಚಾರಿ ಪೊಲೀಸರು ಒಂದೇ ದಿನಕ್ಕೆ ಬರೋಬ್ಬರಿ 21,52,100 ರೂಪಾಯಿಯನ್ನು ದಂಡ ವಸೂಲಿ ಮಾಡಿದ್ದಾರೆ.

  • ರಾಕೇಶ್ ನನ್ನ ತಮ್ಮನಿದ್ದಂತೆ ಆತನ ಸಾವಿಗೆ ನಾನೇಕೆ ಕಾರಣವಾಗ್ಲಿ: ಎಂಟಿಬಿಗೆ ಭೈರತಿ ತಿರುಗೇಟು

    ರಾಕೇಶ್ ನನ್ನ ತಮ್ಮನಿದ್ದಂತೆ ಆತನ ಸಾವಿಗೆ ನಾನೇಕೆ ಕಾರಣವಾಗ್ಲಿ: ಎಂಟಿಬಿಗೆ ಭೈರತಿ ತಿರುಗೇಟು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಆರೋಪಿಸಿದ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್‍ಗೆ ಶಾಸಕ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಕೇಶ್ ನನ್ನ ತಮ್ಮನಿಂದ್ದಂತೆ ಅವರ ಸಾವಿಗೆ ನಾನೇಕೆ ಕಾರಣವಾಗಲಿ? ಒಂದು ಸಾವನ್ನ ರಾಜಕೀಯವಾಗಿ ಬಳಸಿಕೊಂಡು ಎಂಟಿಬಿ ನಾಗರಾಜ್ ಹತಾಶೆ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಯಾರನ್ನಾದರೂ ಕುಡಿಸಿ ಸಾಯಿಸೋಕೆ ಆಗುತ್ತಾ? ರಾಕೇಶ್ ಕುಡಿದು ಸಾವನ್ನಪ್ಪಿದ್ದು ಎಂದು ಅವರಿಗೆ ಯಾರು ಹೇಳಿದ್ದು? ರಾಕೇಶ್ ಸಾವಿನ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು. ಮೂರನೇ ವ್ಯಕ್ತಿ ಎಂಟಿಬಿ ನಾಗರಾಜ್‍ಗೆ ಯಾವ ಹಕ್ಕಿದೆ ಎಂದು ಕಿಡಿಕಾರಿದ್ದಾರೆ.

    ನಾನು ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾಗ ಎಂಟಿಬಿ ಎಲ್ಲಿದ್ದರು ಎನ್ನುವುದನ್ನು ತಿಳಿದುಕೊಳ್ಳಲಿ. ಗ್ರಾ. ಪಂ ಸದಸ್ಯನಿಂದ ಹಿಡಿದು ಈಗ ಶಾಸಕನಾಗಿದ್ದೇನೆ. ನಾನೇನು ಬಚ್ಚಾ ಅಲ್ಲ, ಬೇರೆ ಮನೆಯಿಂದ ಬಂದು ಕಾಂಗ್ರೆಸ್ಸಿನಲ್ಲಿ ವಾಸ ಮಾಡಿಲ್ಲ. ನೀವು ಮಾಡುತ್ತಿರುವುದು ಏನು? ಹೊಸಕೋಟೆಯಲ್ಲಿ ಬಚ್ಚೇಗೌಡ ಅವರು ಕಟ್ಟಿ ಬೆಳೆಸಿದ ಮನೆಯಲ್ಲಿ ನೀವು ವಾಸ ಮಾಡಲು ಹೋಗುತ್ತಿರುವುದು ಎಷ್ಟು ಸರಿ? ಸಿದ್ದರಾಮಯ್ಯ ಅವರನ್ನು ಟೀಕಿಸಲು ನಿಮಗೆ ಯಾವುದೇ ನೈತಿಕತೆ ಇಲ್ಲ. ನಿಮ್ಮ ಬಂಡವಾಳ ನೀವು ನಡೆಸಿರುವ ಹಗರಣಗಳ ಬಗ್ಗೆ ನಮಗೂ ಗೊತ್ತಿದೆ ಎಂದು ಎಂಟಿಬಿಗೆ ವಿರುದ್ಧ ಹರಿಹಾಯ್ದಿದ್ದಾರೆ.

    ಎಂಟಿಬಿ ಹೇಳಿದ್ದೇನು?
    ಭೈರತಿ ಸುರೇಶ್ ಬಡ್ಡಿ ವಸೂಲಿ ಆರೋಪಕ್ಕೆ ಎಂಟಿಬಿ ತಿರುಗೇಟು ನೀಡಿ, ರಾಜಕೀಯದಲ್ಲಿ ಅವನು ಬಚ್ಚಾ, ಆತನ ಬಂಡವಾಳ ನನಗೆ ಗೊತ್ತು. ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದವನನ್ನು ಸಾಯಿಸಿದ್ದು ನನಗೆ ಗೊತ್ತಿದೆ ಎಂದು ಆರೋಪಿಸಿದ್ದರು.

  • ಸಿದ್ದರಾಮಯ್ಯ ಮಾಡದ ತಪ್ಪಿಗೆ ನೋವು ಅನುಭವಿಸಿದ್ದಾರೆ: ರಮೇಶ್ ಕುಮಾರ್

    ಸಿದ್ದರಾಮಯ್ಯ ಮಾಡದ ತಪ್ಪಿಗೆ ನೋವು ಅನುಭವಿಸಿದ್ದಾರೆ: ರಮೇಶ್ ಕುಮಾರ್

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಗನನ್ನು ಕಳೆದುಕೊಂಡ ನೋವಿಗಿಂತ, ತಾವು ಮಾಡದೇ ಇರುವ ತಪ್ಪಿಗೆ ಹೆಚ್ಚು ನೋವು ಅನುಭವಿಸಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರ ಆಡಳಿತ ಅಂತರಂಗ ಬಹಿರಂಗ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗೆ ಬಂದ ಮಗ ಕಣ್ಮುಂದೆ ಸಾವು, ಜನರಿಗೆ ಇನ್ನಷ್ಟು ಉತ್ತಮ ಕೆಲಸ ಮಾಡಬೇಕು ಅಂದುಕೊಂಡಾಗ ಸೋಲು. ಈ ಸೋಲಿನಿಂದ ಆ ಜೀವ ಎಷ್ಟು ಪರಿತಪಿಸಿರಬಹುದು. ಅವಿಭಕ್ತ ಕುಟುಂಬದಲ್ಲಿ ಆದ ಸಣ್ಣ ಗಲಾಟೆ ಕುಟುಂಬ ಒಡೆಯಿತು. ಅದೇ ರೀತಿ ಕಾಂಗ್ರೆಸ್‍ನಲ್ಲಿ ಆದ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿಗೆ ಬರಬೇಕಾಯಿತು. ಮಾಡದ ತಪ್ಪಿಗೆ ಅವರು ನೋವು ಅನುಭವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರ ಪರಿಸ್ಥಿತಿ ತಿಳಿಸಿ ದುಃಖಿಸಿದರು.

    2018ರಲ್ಲಿ ಕಾಂಗ್ರೆಸ್ ಸೋಲುವುದಕ್ಕೆ ಕಾಂಗ್ರೆಸ್ ಒಳಜಗಳವೇ ಕಾರಣ. ದೇವರಾಜು ಅರಸು ಬಂದ ಬಳಿಕ ಭ್ರಷ್ಟಾಚಾರ ಜಾಸ್ತಿ ಆಯ್ತು ಎಂದು ಹೇಳಿದರು. ಯಾಕೆಂದರೆ ಅವರನ್ನ ಸಮರ್ಥಿಸಿಕೊಳ್ಳುವವರು ಯಾರು ಇರಲಿಲ್ಲ. ಹಾಗೆಯೇ ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಆಗಿದೆ. ಇವರಿಬ್ಬರಿಗಿಂತ ಮೊದಲು ಬಂದವರು ಬಹಳ ಹಣ ತಿಂದರು. ಅವರಿಗೆ ಸಮರ್ಥಿಸಿಕೊಳ್ಳಲು ಜನರಿದ್ದರು ಎಂದರು.

    ನೀವು ನೋಡಿರುವುದು ಬಹಿರಂಗ ಆದರೆ ಒಳಗೆ ಕೈ, ಕಾಲು ಹಿಡಿದುಕೊಂಡು ನಮ್ಮನ್ನ ಬದುಕಿಸಿ ಎಂದು ಸಹಿ ಹಾಕಿಸಿರುತ್ತಾರೆ, ಅದು ಅಂತರಂಗ. ಇದರ ಬಗ್ಗೆ ಪುಸ್ತಕದಲ್ಲಿ ಬರೆದಿಲ್ಲ, ಇದು ಸಿದ್ದರಾಮಯ್ಯ ಅವರೇ ಬರೆಯಲು ಸಾಧ್ಯ. ಹೀಗಾಗಿ ಟೈಟಲ್ ಕೊಟ್ಟಿರುವುದು ಸರಿಯಲ್ಲ ಎಂದು ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿದರು.

    ಕೋಲಾರಕ್ಕೆ ಬನ್ನಿ ಎಂದು ನಾನು, ನಜೀರ್ ಅಹಮದ್ ಸಿದ್ದರಾಮಯ್ಯ ಅವರನ್ನು ಬೇಡಿಕೊಂಡಿದ್ದೆವು. ತನ್ನ ಕ್ಷೇತ್ರ ಬಿಟ್ಟು ಬರಬಾರದು ಎಂದು ಅವರು ಬರಲಿಲ್ಲ. ಕೆಲವರು ಬಿಟ್ಟಿಲ್ಲವಾ ಕ್ಷೇತ್ರವನ್ನ? ಅವರಿಗಿಲ್ಲದು ನಿಮಗೆ ಬೇಕಾ? ಚಾಮುಂಡೇಶ್ವರಿ ಸೋಲಿನಿಂದ ಹೊರಬನ್ನಿ. ನೀವೇ ಸಾಕಿದ ಗಿಣಿ ನಿಮಗೆ ಕುಕ್ಕಿದೆ ಎಂದು ಹಾಡು ಹೇಳಿ, ಅನರ್ಹ ಶಾಸಕರು ಕೇಳಿದ್ದೆಲ್ಲ ಕೊಟ್ಟಿರಿ, ಆದರೆ ಅವರು ನಿಮಗೆ ಕುಕ್ಕಿ ಹೋಗಿದ್ದಾರೆ. ಆದ್ದರಿಂದ ನಿಮ್ಮ ಮುಖದ ಮೇಲೆ ಗಾಯ ಆಗಿದೆ. ಅದನ್ನ ಹೊಗಲಾಡಿಸಬೇಕಿದೆ ಎಂದು ಅನರ್ಹ ಶಾಸಕರ ವಿರುದ್ಧ ರಮೇಶ್ ಕುಮಾರ್ ಕಿಡಿಕಾರಿದರು.

  • ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಕನ್ನಡಿಗನ ಸಾಧನೆ

    ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಕನ್ನಡಿಗನ ಸಾಧನೆ

    – 2 ಚಿನ್ನದ ಪದಕ ಗೆದ್ದ ಋತ್ವಿಕ್

    ಬೆಂಗಳೂರು: ಕಾಮನ್ ವೆಲ್ತ್ ಗೇಮ್‍ನಲ್ಲಿ ಕನ್ನಡಿಗ ಋತ್ವಿಕ್ ಅಲೆವೂರಾಯ ಎರಡು ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದಾರೆ.

    ಕೆನಡಾದ ಸೈಂಟ್ ಜಾನ್ಸ್‌ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್‍ಶಿಪ್‍ನಲ್ಲಿ ಋತ್ವಿಕ್ ಸ್ಪರ್ಧಿಸಿದ್ದರು. ಈ ಚಾಂಪಿಯನ್‍ಶಿಪ್‍ನಲ್ಲಿ ಋತ್ವಿಕ್ ಎರಡು ಚಿನ್ನದ ಪದಕವನ್ನು ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಋತ್ವಿಕ್ ಭಾರತದಿಂದ ಪ್ರತಿನಿಧಿಸಿ ಎರಡು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕ್ಲಾಸಿಕ್ ಹಾಗೂ ಎಕ್ವಿಡ್ ವಿಭಾಗದಲ್ಲಿ ಭಾರ ಎತ್ತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಪ್ರಶಂಸೆಗೆ ಭಾಜನರಾಗಿದ್ದಾರೆ. ಮೂಲತಃ ಮಂಗಳೂರಿನವರಾದ ಋತ್ವಿಕ್, ವಾಸುದೇವ ಭಟ್ ಹಾಗೂ ದೀಪಾ ದಂಪತಿ ಪುತ್ರ. ಋತ್ವಿಕ್ ಅವರು ತರಬೇತಿಗಾರ ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

  • ವಿಡಿಯೋ: ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಸಖತ್ ಹೆಜ್ಜೆ ಹಾಕಿದ ಎಂಟಿಬಿ

    ವಿಡಿಯೋ: ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಸಖತ್ ಹೆಜ್ಜೆ ಹಾಕಿದ ಎಂಟಿಬಿ

    ಬೆಂಗಳೂರು: ಈ ಹಿಂದೆ ನಾಗಿಣಿ ಡ್ಯಾನ್ಸ್, ಕತ್ತಿ ವರಸೆ ಮಾಡಿ ಸಖತ್ ಸುದ್ದಿಯಾಗಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಇದೀಗ ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಕುಣಿದು ಮತ್ತೆ ಸುದ್ದಿಯಾಗಿದ್ದಾರೆ.

    ತಮಟೆ ಸದ್ದಿಗೆ ಎಂಟಿಬಿ ಭರ್ಜರಿಯಾಗಿ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಕಾಲೋನಿಯಲ್ಲಿ ನಡೆದ ಗಣಪತಿ ಉತ್ಸವದಲ್ಲಿ ನಿಂಬೆಹಣ್ಣನ್ನು ಬಾಯಲ್ಲಿಟ್ಟುಗೊಂದು ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಅಭಿಮಾನಿಗಳು ಎಂಟಿಬಿ ಅವರನ್ನು ಆಹ್ವಾನಿಸಿದ್ದರು. ಈ ವೇಳೆ ಗಣಪನ ಮೂರ್ತಿ ಎದುರು ಎಂಟಿಬಿ ಅಭಿಮಾನಿಗಳೊಂದಿಗೆ ಫುಲ್ ಜೋಶ್‍ನಿಂದ ಕುಣಿದು ಕುಪ್ಪಳಿಸಿದ್ದಾರೆ.

    ಹಾಗೆಯೇ ನಂದಗುಡಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಕೂಡ ಎಂಬಿಟಿ ತಮಟೆ ಸದ್ದಿಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ನಿಂಬೆಹಣ್ಣನ್ನು ಬಾಯಲ್ಲಿ ಕಚ್ಚಿಕೊಂಡು ಅಭಿಮಾನಿಗಳೊಂದಿಗೆ ನೃತ್ಯ ಮಾಡಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

    ಈ ಹಿಂದೆ ಎಂಟಿಬಿ ಅವರು ವಸತಿ ಸಚಿವರಾಗಿದ್ದಾಗ ನಾಗಿಣಿ ಡ್ಯಾನ್ಸ್ ಮಾಡಿದ್ದರು. ಅಷ್ಟೇ ಅಲ್ಲದೆ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ತಮಟೆ ಸದ್ದಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಡ್ಯಾನ್ಸ್ ಮಾಡುತ್ತಿದ್ದಾಗ ತಮ್ಮ ಫೇವರಿಟ್ 2 ಎಟಿನ ತಾಳ ಹಾಕುವಂತೆ ತಮಟೆ ಬಾರಿಸುವವರಿಗೆ ಹೇಳಿದ್ದರು. ಬಳಿಕ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಯುವಕರನ್ನು ನಾಚಿಸುವಂತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.

    ಅಷ್ಟೇ ಅಲ್ಲದೆ ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ಕುರುಬ ಸಮುದಾಯ ದೊಡ್ಡ ದ್ಯಾವರು ಉತ್ಸವವನ್ನು ಆಯೋಜಿಸಿತ್ತು. ಆ ಉತ್ಸವದಲ್ಲಿಯೂ ಎಂಟಿಬಿ ನಾಗರಾಜ್ ಕತ್ತಿ ಹಿಡಿದು ನೃತ್ಯ ಮಾಡಿ, ಎಲ್ಲರನ್ನೂ ರಂಜಿಸಿ ಹುಬ್ಬೇರುವಂತೆ ಮಾಡಿದ್ದರು.

    ದೊಡ್ಡ ದ್ಯಾವರ ಉತ್ಸವವು 5 ವರ್ಷಕ್ಕೊಮ್ಮೆ ನಡೆಯುತ್ತದೆ. ಸಚಿವರ ಡ್ಯಾನ್ಸ್ ನೋಡಿದ ಜನರ ಕೂಡ ಫುಲ್ ಜೋಶ್‍ನಲ್ಲಿ ಕುಣಿದಿದ್ದರು. ಎಂಟಿಬಿ ನಾಗರಾಜ್ ಅವರು ಕತ್ತಿ ಹಿಡಿದು ಕಲಾತಂಡದ ಜೊತೆಗೆ ಹೆಜ್ಜೆ ಹಾಕುವ ಮೂಲಕ ಸಮುದಾಯದ ಜನರಿಗೆ ಸ್ಫೂರ್ತಿ ತುಂಬಿದ್ದರು.

  • ಕ್ಯಾಂಪಸ್‍ನಲ್ಲಿ ಕಾಫಿ, ಟೀ ಬ್ಯಾನ್‍ಗೆ ಮುಂದಾದ ಬೆಂಗ್ಳೂರು ವಿವಿ

    ಕ್ಯಾಂಪಸ್‍ನಲ್ಲಿ ಕಾಫಿ, ಟೀ ಬ್ಯಾನ್‍ಗೆ ಮುಂದಾದ ಬೆಂಗ್ಳೂರು ವಿವಿ

    ಬೆಂಗಳೂರು: ಕಾಲೇಜು, ವಿಶ್ವವಿದ್ಯಾನಿಲಯದಲ್ಲಿ ಮೊಬೈಲ್, ಸಿಗರೇಟ್, ಡ್ರಗ್ಸ್‌ಗಳಿಗೆ ನಿಷೇಧ ಹೇರಿರುವುದನ್ನ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಬೆಂಗಳೂರು ವಿವಿ ಕಾಫಿ, ಟೀಯನ್ನೇ ಬ್ಯಾನ್ ಮಾಡಲು ಮುಂದಾಗಿದೆ.

    ಹೌದು, ಇದೇನಪ್ಪ ಕಾಫಿ-ಟೀ ಯಾಕೆ ಬೆಂಗಳೂರು ವಿವಿ ಬ್ಯಾನ್ ಮಾಡಲು ಯೋಚಿಸುತ್ತಿದೆ ಎಂಬ ಪ್ರಶ್ನೆ ಹುಟ್ಟೋದು ಸಾಮಾನ್ಯ. ಹಲವರು ಬೆಳಗಾದರೆ ಸಾಕು, ದೊಡ್ಡ ದೊಡ್ಡ ಗ್ಲಾಸ್‍ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ಕೆಲವೊಮ್ಮೆ ಟೀ,ಕಾಫಿ ಕುಡಿಲಿಲ್ಲ ಅಂದರೆ ಈ ದಿನವೇ ವೇಸ್ಟ್ ಅಂತನೂ ಅನಿಸುತ್ತೆ. ಅಷ್ಟೇ ಏಕೆ ಕಾಲೇಜುಗಳಲ್ಲಿ ಕ್ಲಾಸ್ ಬಂಕ್ ಮಾಡಿ ಅಥವಾ ಬ್ರೇಕ್ ಟೈಮ್‍ನಲ್ಲಿ ಸ್ಟ್ರಾಂಗ್ ಟೀ ಕುಡಿದರೆ ಫ್ರೆಶ್ ಆಗುತ್ತೇವೆ. ಅಷ್ಟರಮಟ್ಟಿಗೆ ಟೀ, ಕಾಫಿಗೆ ಅಡಿಕ್ಟ್ ಆಗಿರುತ್ತಾರೆ. ಆದರೆ ಅದೇ ಟೀ, ಕಾಫಿಯನ್ನ ಬೆಂಗಳೂರು ವಿವಿ ಕ್ಯಾಂಪಸ್‍ನಲ್ಲಿ ಮಾರಾಟ ಮಾಡೋದನ್ನ ಬ್ಯಾನ್ ಮಾಡಲು ಚಿಂತನೆ ನಡೆಸಲಾಗಿದೆ.

    ಟೀ ಮತ್ತು ಕಾಫಿಯಿಂದ ಅಸಿಡಿಟಿ ಬರುತ್ತೆ. ಆರೋಗ್ಯದ ದೃಷ್ಟಿಯಿಂದ ಕ್ರಮೇಣವಾಗಿ ನಿಷೇಧಿಸಲಾಗುವುದು. ಜೊತೆಗೆ ಕೆಎಂಎಫ್ ನಂದಿನಿ ಹಾಲನ್ನು ಮಾರಾಟ ಮಾಡಲಾಗುವುದೆಂದು ಬೆಂಗಳೂರು ವಿವಿ ಉಪಕುಲಪತಿ ವೇಣು ಗೋಪಾಲ್ ತಿಳಿಸಿದ್ದಾರೆ.

    ಉಪಕುಲಪತಿಗಳ ಹೊಸ ಪ್ಲಾನ್‍ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಹಾಸ್ಯಾಸ್ಪದ ನಿರ್ಧಾರ. ಅವರಿಗೆ ಅಸಿಡಿಟಿ ಬಂದರೆ ನಾವೇನು ಮಾಡಬೇಕು? ಇದು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ನಮಗೆ ಮೈಂಡ್ ಫ್ರೆಶ್ ಆಗೋಕೆ ಟೀ, ಕಾಫಿ ಬೇಕೇ ಬೇಕು ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

    ಸದಾ ವಿವಾದಗಳಿಂದಲೇ ಸುದ್ದಿ ಆಗೋ ಬೆಂಗಳೂರು ವಿವಿ ಈಗ ಟೀ, ಕಾಫಿ ವಿಷಯದಲ್ಲೂ ಸುದ್ದಿ ಆಗ್ತಿರೋದು ವಿಪರ್ಯಾಸವಾಗಿದೆ.

  • ಡಿಎಲ್ ಕ್ಯಾಂಪ್‍ಗೆ 10 ಸಾವಿರ ಮಂದಿ – ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

    ಡಿಎಲ್ ಕ್ಯಾಂಪ್‍ಗೆ 10 ಸಾವಿರ ಮಂದಿ – ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

    ಬೆಂಗಳೂರು: ಪೊಲೀಸರು ಹೊಸಕೋಟೆ ನಗರದ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚಾಲನಾ ಪರವಾನಿಗೆ(ಡಿಎಲ್) ಕ್ಯಾಂಪ್‍ಗೆ ನಿರೀಕ್ಷೆಗೂ ಮೀರಿದ ಜನ ಬಂದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್‍ಪಿ ರವಿ ಡಿ ಚೆನ್ನಣ್ಣನವರ್ ನೇತೃತ್ವದಲ್ಲಿ ಆಯೋಜನೆ ಮಾಡಿರುವ ಈ ಕ್ಯಾಂಪಿಗೆ 10 ಸಾವಿರ ಜನರು ಅರ್ಜಿ ಹಾಕಿದ್ದಾರೆ. ಡಿಎಲ್‍ಗೆ ನೂತನವಾಗಿ ಅರ್ಜಿ ಹಾಕಲು ನೂಕು ನುಗ್ಗಲು ಉಂಟಾಗಿದ್ದು, ನಾ ಮುಂದು ತಾ ಮುಂದು ಎಂದು ಜನ ಅಪ್ಲೀಕೇಶನ್ ಹಾಕುತ್ತಿದ್ದಾರೆ.

    ಕ್ಯಾಂಪ್‍ಗೆ ನಿರೀಕ್ಷೆಗೂ ಮೀರಿದ ಜನ ಆಗಮಿಸಿದ ಹಿನ್ನೆಲೆ ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಆರ್.ಟಿ.ಒ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಡಿಎಲ್‍ಗಾಗಿ ಸಾವಿರಾರು ಜನರು ಕಿಲೋ ಮೀಟರ್‍ ಗಟ್ಟಲೇ ಸಾಲುಗಟ್ಟಿ ನಿಂತಿದ್ದು, ಕೇವಲ ನಾಲ್ಕು ಕಂಪ್ಯೂಟರ್ ಮತ್ತು ಬೆರಳಿಕೆಯಷ್ಟು ಜನ ಸಿಬ್ಬಂದಿ ನಿಯೋಜನೆ ಮಾಡಿರುವುದು ಎಷ್ಟು ಸರಿ ಎಂದು ಅರ್ಜಿದಾರರು ಪ್ರಶ್ನೆ ಮಾಡಿದ್ದಾರೆ.

    ಈ ಡಿಎಲ್ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದು, ಮೊದಲೇ ದಿನವಾದ ಇಂದು ಹೊಸಕೋಟೆ ನಗರದಲ್ಲಿ ಪ್ರಾರಂಭ ಮಾಡಲಾಗಿದೆ. ಈ ಕ್ಯಾಂಪ್‍ನ ಬಗ್ಗೆ ಸ್ಥಳೀಯ ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಹೀಗಾಗಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಜಾಸ್ತಿ ಪ್ರಮಾಣದಲ್ಲಿ ಬಂದಿದ್ದಾರೆ.

    ಮೊದಲೇ ದಿನವಾದ ಇಂದು ಕೇವಲ 500 ರಿಂದ ಸಾವಿರ ಜನ ಬರಬಹುದು ಎಂದು ಅಂದಾಜು ಮಾಡಿದ್ದ ಪೊಲೀಸ್ ಮತ್ತು ಆರ್.ಟಿ.ಒ ಇಲಾಖೆ ಕೇವಲ 4 ಡೆಸ್ಕ್ ಗಳನ್ನು ಮಾತ್ರ ನಿಯೋಜನೆ ಮಾಡಿತ್ತು. ಆದರೆ ದಲ್ಲಾಳಿ ಕಡೆಯಿಂದ ಹೋದರೆ ದುಡ್ಡು ಜಾಸ್ತಿಯಾಗುತ್ತದೆ. ಇಲ್ಲಿ ಮಾಡಿಸಿದರೆ ಸರ್ಕಾರ ನಿಗದಿ ಮಾಡಿದ ಶುಲ್ಕ ಪಾವತಿಸಿದರೆ ಡಿಎಲ್ ಸಿಗುತ್ತೆ ಎಂಬ ಕಾರಣಕ್ಕೆ ಬಹಳಷ್ಟು ಜನ ಆಗಮಿಸಿದ್ದಾರೆ.