Tag: Bangaluru

  • ಮೈಸೂರು-ಬೆಂಗ್ಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಿ

    ಮೈಸೂರು-ಬೆಂಗ್ಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಿ

    ರಾಮನಗದ: ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಕೆರೆಕಟ್ಟೆಗಳು ತುಂಬಿ ರಸ್ತೆಗೆ ಕೋಡಿ ಹರಿದಿದ್ದು, ಮೈಸೂರು-ಬೆಂಗಳೂರಿಗೆ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆ ಮಾರ್ಗಗಳನ್ನು ಸೂಚಿಸಲಾಗಿದೆ.

    ಕೆರೆ ಕೋಡಿ ಹರಿದು ಹಲವು ರಸ್ತೆಗಳು ಜಲಾವೃತಗೊಂಡಿವೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಲವೆಡೆ ದುಸ್ಥಿತಿಯಾಗಿದೆ. ಈ ಹಿನ್ನೆಲೆಯಲ್ಲಿ ಬದಲಿ ಮಾರ್ಗಗಳನ್ನು ಬಳಸುವಂತೆ ರಾಮನಗರ ಜಿಲ್ಲಾಡಳಿತ ಮನವಿ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್‍ನಿಂದ ಬಿದ್ದು ನರಳಾಡಿದ ಯುವತಿ!

    ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರು – ಮೈಸೂರು ಮಾರ್ಗವಾಗಿ ಪ್ರಯಾಣಿಸುವ ಬಸ್ ಹಾಗೂ ಇತರೇ ಪ್ರಯಾಣಿಕರು ಬೆಂಗಳೂರು-ಕನಕಪುರ-ಮೈಸೂರು ಮಾರ್ಗವಾಗಿ ಅಥವಾ ಬೆಂಗಳೂರು- ಕುಣಿಗಲ್- ಮೈಸೂರು ಮಾರ್ಗವಾಗಿ ಪ್ರಯಾಣಿಸುವಂತೆ ರಾಮನಗರ ಜಿಲ್ಲಾ ಪೊಲೀಸರು ಸೂಚಿಸಿದ್ದಾರೆ. ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗಗಳನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶದ್ರೋಹದ ಪಾಠ ಮಾಡಿದ್ರೆ ನಾವೇ ಮದರಸಾ ಬ್ಯಾನ್ ಮಾಡ್ತೀವಿ – ವಕ್ಫ್ ಅಧ್ಯಕ್ಷ

    ದೇಶದ್ರೋಹದ ಪಾಠ ಮಾಡಿದ್ರೆ ನಾವೇ ಮದರಸಾ ಬ್ಯಾನ್ ಮಾಡ್ತೀವಿ – ವಕ್ಫ್ ಅಧ್ಯಕ್ಷ

    ಬೆಂಗಳೂರು: ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡೋದು ಗೊತ್ತಾದರೆ ನಾವೇ ಅದನ್ನ ಬ್ಯಾನ್ ಮಾಡ್ತೀವಿ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫೀ ಸ ಅದಿ ಹೇಳಿದ್ದಾರೆ.

    ಮದರಸಾಗಳಿಗೆ ಮೂಗುದಾರ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಮದರಸಾಗೆ ಮಂಡಳಿ ರಚನೆ ಮಾಡುವ ಬಗ್ಗೆ ಸಿದ್ಧತೆಯನ್ನೂ ನಡೆಸಿದೆ. ಅದಕ್ಕಾಗಿ ಇನ್ನು 15 ದಿನಗಳಲ್ಲಿ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಿದೆ.

    ಸಾಂದರ್ಭಿಕ ಚಿತ್ರ

    ಸರ್ಕಾರದ ಈ ನಿರ್ಧಾರದ ಬಗ್ಗೆ ವಕ್ಫ್ಬೋರ್ಡ್ ಅಧ್ಯಕ್ಷ ಶಾಫೀ ಸಅದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮ್ಮನ ಮಗಳು, ಸ್ವಂತ ಅಜ್ಜಿಯ ಮೇಲೆಯೇ ಅತ್ಯಾಚಾರ – ಇಬ್ಬರು ಸಹೋದರರು ಅರೆಸ್ಟ್

    ಮದರಸಾಗಳು ಇರೋದು ವಕ್ಫ್ ಬೋರ್ಡ್ ಅಧೀನದಲ್ಲಿ. ಸರ್ಕಾರದ ಸಭೆ ಮಾಡಿರುವುದು, ನಿರ್ಧಾರ ಕೈಗೊಂಡಿರುವುದು ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

    MADRASA
    ಸಾಂದರ್ಭಿಕ ಚಿತ್ರ

    ಯಾವುದೇ ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡಲ್ಲ. ನಾನು ಸಹ ಮದರಸಾದ ವಿದ್ಯಾರ್ಥಿಯೇ. ಅಲ್ಲಿ ದೇಶಪ್ರೇಮ, ಭಾವೈಕ್ಯತೆ ಹಾಗೂ ಸಹಭಾಳ್ವೆಯ ಪಾಠ ಮಾಡಲಾಗುತ್ತದೆಯೇ ಹೊರತು ದೇಶದ್ರೋಹದ ಪಾಠ ಮಾಡುವುದಿಲ್ಲ. ಒಂದು ವೇಳೆ ದೇಶದ್ರೋಹದ ಪಾಠ ಮಾಡೋದು ಗೊತ್ತಾದರೆ ನಾವೇ ಅದನ್ನ ಬ್ಯಾನ್ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗೆ 15 ಬಾರಿ ಕರೆ ಮಾಡಿ ಟೆಕ್ಕಿ ಸುಂದರಿ ಆತ್ಮಹತ್ಯೆ

    ಮದರಸಾದಲ್ಲಿ ದೇಶಪ್ರೇಮದ ಪಠ್ಯ ಇದ್ದು, ಅದಕ್ಕಾಗಿಯೇ ಪ್ರತ್ಯೇಕ ತರಗತಿಯನ್ನ ಮಾಡ್ತೀವಿ. ದೇಶಪ್ರೇಮದ ಪಾಠ ಹೇಳುವ ಜಾಗದಲ್ಲಿ ವಿದ್ಯಾರ್ಥಿ ಉಗ್ರವಾದಿ ಹೇಗಾಗುತ್ತಾನೆ? ಮದರಸಾಗಳಲ್ಲಿ ಕದ್ದುಮುಚ್ಚಿ ಯಾವ ವ್ಯವಹಾರವೂ ನಡೆಯಲ್ಲ. ಬೇಕಿದ್ರೆ ಪ್ರತಿ ಮದರಸಾದ ಸಮಿತಿಗಳ ಬ್ಯಾಕ್ ಗ್ರೌಂಡ್ ಪರಿಶೀಲನೆ ಮಾಡ್ತೇವೆ. ಇಲ್ಲಿ ಎಲ್ಲವೂ ಪಾರದರ್ಶಕವಾಗಿಯೇ ಇದೆ ಎಂದು ವಕ್ಫ್ ಬೋರ್ಡ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ವಿಕ್ರಾಂತ್ ರೋಣ’ ಸಿನಿಮಾ ವೇಳೆ ಮಚ್ಚಿನಿಂದ ಕೊಚ್ಚಿ ಹೋಗಿದ್ದವರ ಬಂಧನ

    `ವಿಕ್ರಾಂತ್ ರೋಣ’ ಸಿನಿಮಾ ವೇಳೆ ಮಚ್ಚಿನಿಂದ ಕೊಚ್ಚಿ ಹೋಗಿದ್ದವರ ಬಂಧನ

    ಚಿಕ್ಕಮಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆ ನಗರದ ಮಿಲನ ಚಿತ್ರಮಂದಿರದಲ್ಲಿ ಹಾಡಹಗಲೇ ಲಾಂಗು, ಮಚ್ಚುಗಳಿಂದ ನಡೆದಿದ್ದ ಯುವಕರ ಹೊಡೆದಾಟ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಘಟನೆಗೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ನಾಲ್ಕೇ ದಿನಗಳಲ್ಲಿ 6 ಆರೋಪಿಗಳನ್ನ ಬಂಧಿಸಿರೋ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನ 11 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಬರ್ತ್ ಡೇ ಆಚರಣೆ – ಸರಿಯಾಗಿ 12 ಗಂಟೆಗೆ ಕೇಕ್ ಕಟ್

    ಜುಲೈ 28 ರಂದು ನಗರದ ಮಿಲನ ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದು ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಘಟನೆ?
    ಸಿನಿಮಾ ವೀಕ್ಷಣೆ ವೇಳೆ ಯುವಕನೋರ್ವ ಪದೇ-ಪದೇ ಹೊರಗೆ ಹೋಗಿ ಬರುತ್ತಿದ್ದನು. ಇದೇ ವಿಷಯವಾಗಿ ಚಿತ್ರ ಮಂದಿರದ ಒಳಗೆ ಎರಡು ಗುಂಪುಗಳ ಮಧ್ಯೆ ಸಣ್ಣ ಗಲಾಟೆಯಾಗಿತ್ತು. ಹೊರಗೆ ಬಂದವರು ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಾರಿನಲ್ಲಿಟ್ಟಿದ್ದ ಮಚ್ಚು, ಲಾಂಗು, ಡ್ರಾಗರ್‌ಗಳಿಂದ ಹೊಡೆದಾಡಿದ್ದರು. ಗಲಾಟೆಯಲ್ಲಿ ಭರತ್ ಹಾಗೂ ಜೀವನ್ ಎಂಬ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಇಬ್ಬರಿಗೂ ಹಾಸನದಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಂಧಿತ ಆರೋಪಿಗಳು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: ತಿರುಪತಿಗೆ ಒಂದೇ ತಿಂಗಳಲ್ಲಿ 140 ಕೋಟಿ ದಾಖಲೆ ಕಾಣಿಕೆ ಸಂಗ್ರಹ

    ಆರೋಪಿಗಳ ಪತ್ತೆಗಾಗಿ ಚಿಕ್ಕಮಗಳೂರು ಡಿವೈಎಸ್‌ಪಿ ಪುರುಷೋತ್ತಮ್ ನೇತೃತ್ವದಲ್ಲಿ 4 ತನಿಖಾ ತಂಡಗಳನ್ನು ರಚಿಸಿದ್ದರು. 8 ಜನರಲ್ಲಿ 6 ಮಂದಿ ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಇನ್ನಿಬ್ಬರು ಪರೋಕ್ಷವಾಗಿ ಸಹಕಾರ ನೀಡಿದ ಆರೋಪಿಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನೂ ಮೂರ್ನಾಲ್ಕು ಜನ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅವರನ್ನೂ ಬಂಧಿಸುವುದಾಗಿ ಎಸ್‌ಪಿ ಅಕ್ಷಯ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐಗಳಾದ ಗುರುಪ್ರಸಾದ್, ಜಯರಾಮ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಸಹಕಾರ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ 11 ಜೀವಗಳು ಬಲಿ – ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

    ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ 11 ಜೀವಗಳು ಬಲಿ – ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್

    ಬೆಂಗಳೂರು: ಹಲವು ದಿನಗಳಿಂದ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ವಿವಿಧ ಜಿಲ್ಲೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇಷ್ಟಕ್ಕೇ ನಿಲ್ಲದೇ ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಭರ್ಜರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 6ರ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ ಆಗ್ತಿದ್ದು, ಮಡಿಕೇರಿ ತಾಲೂಕಿನ ಕೊಯಿನಾಡು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೇಲೆ ಬೃಹತ್ ಗುಡ್ಡ ಕುಸಿದಿದೆ. ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪಯಸ್ವಿನಿ ನದಿ ನೀರು ಬಂದಿದ್ದು ರಸ್ತೆ ಬದಿಯ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆ ಮುಂಭಾಗದಲ್ಲಿ ನಿಲ್ಲಿಸಿದ ಕಾರುಗಳು ನೀರಿನ ರಭಸಕ್ಕೆ ತೇಲಾಡಿವೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಬರ್ತ್ ಡೇ ಆಚರಣೆ – ಸರಿಯಾಗಿ 12 ಗಂಟೆಗೆ ಕೇಕ್ ಕಟ್

    ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕೊಯನಾಡಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮ ಬಳಿ ವೇದಾವತಿ ನದಿ ಉಕ್ಕಿ ಹರಿಯುತ್ತಿದೆ. ಸೇತುವೆ ದಾಟಲು ಹೋಗಿ ನದಿಗೆ ಲಾರಿ ಬಿದ್ದು ಕ್ಲೀನರ್ ಮತ್ತು ಚಾಲಕ ರಕ್ಷಣೆಗಾಗಿ ಪರದಾಡಿದ್ದಾರೆ. ಉಡುಪಿಯಲ್ಲಿ ಮಳೆಯಿಂದಾಗಿ ಬೈಂದೂರು ತಾಲೂಕಿನ ಶಿರೂರಿನಲ್ಲಿ ನೆರೆಗೆ ಇಪ್ಪತ್ತಕ್ಕಿಂತ ಹೆಚ್ಚು ನಾಡದೋಣಿ ಕೊಚ್ಚಿಹೋಗಿದ್ದು, 50 ಲಕ್ಷ ಮೌಲ್ಯದ ದೋಣಿ ಸಮುದ್ರ ಪಾಲಾಗಿದೆ. ಶಿರೂರಿನಲ್ಲಿ ನಾಗಮ್ಮ ಶೆಟ್ಟಿ ಎಂಬವರ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ದವಸಧಾನ್ಯಗಳೆಲ್ಲ ನೀರು ಪಾಲಾಗಿದೆ. ಇದನ್ನೂ ಓದಿ: ತಿರುಪತಿಗೆ ಒಂದೇ ತಿಂಗಳಲ್ಲಿ 140 ಕೋಟಿ ದಾಖಲೆ ಕಾಣಿಕೆ ಸಂಗ್ರಹ

    ಹಾಸನದಲ್ಲಿ ನ್ಯಾಷನಲ್ ಹೈವೇಯಲ್ಲಿ ಕೆಲಸ ಮಾಡುವ ಕಾರ್ಮಿಕರ ಕಾರು, ಎರಡು ಬೈಕ್ ಕೊಚ್ಚಿ ಹೋಗಿದೆ. ಅರಸೀಕೆರೆ ತಾಲೂಕಿನ ಗಿಜಿಹಳ್ಳಿ, ಅಂಚೇಕೊಪ್ಪಲು ಗ್ರಾಮದ ಕೆರೆ ಏರಿ ಕುಸಿತವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರ ಸಮೀಪದ ಸಂತಡ್ಕ ಎಂಬಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ. ಸೇತುವೆ ಮುರಿದ ಪರಿಣಾಮ 200ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿವೆ.

    ಸುಳ್ಯ, ಕಡಬ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಚೆಕ್ ಡ್ಯಾಮ್ ನಿರ್ಮಾಣಕ್ಕಾಗಿ ಬಂದಿದ್ದ ಕೂಲಿ ಕಾರ್ಮಿಕ ನಾಗರಾಜು, ಶಿರಾ ತಾಲೂಕಿನಲ್ಲಿ ಹಳ್ಳ ದಾಟುವಾಗ ಬೈಕ್ ಸಮೇತ ಶಿಕ್ಷಕ ಆರಿಫ್ ಉಲ್ಲಾ ಕೊಚ್ಚಿ ಹೋಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಕೆರೆ ಏರಿ ಒಡೆದು ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿದೆ.

    ಬೆಂಗಳೂರಿನಲ್ಲಿ ರಾತ್ರಿ ಆಗುತ್ತಿದ್ದಂತೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಯಶವಂತಪುರ, ಪೀಣ್ಯ, ಮಹಾಲಕ್ಷ್ಮೀ ಲೇಔಟ್, ಗೊರಗುಂಟೆಪಾಳ್ಯ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಮೇಖ್ರಿ ಸರ್ಕಲ್, ಜಯಮಹಲ್, ಹೆಬ್ಬಾಳ, ಏರ್ಪೋರ್ಟ್ ರೋಡ್, ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿ ವಾಹನ ಸವಾರರು ಪರದಾಡಿದ್ದಾರೆ. ಸಾಯಿ ಲೇಔಟ್ ಮತ್ತೆ ಮಳೆಯಿಂದಾಗಿ ಜಲಾವೃತವಾಗಿದೆ. ಮಾನ್ಯತಾ ಟೆಕ್ ಪಾರ್ಕ್ನಾ ಸರ್ವಿಸ್ ರಸ್ತೆ ಮುಳುಗಡೆಯಾಗಿದೆ. ಅರ್ಧ ಅಡಿಯಷ್ಟು ನೀರು ನಿಂತ ಕಾರಣ ವೆಹಿಕಲ್ ಓಡಾಟಕ್ಕೆ ಕಷ್ಟವಾಯ್ತು. ನಾಗರಭಾವಿ ಕಡೆಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಕಡೆಗೆ ಹೋಗುವ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಇನ್ನುಳಿದಂತೆ ಬೆಂಗಳೂರಿನ ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದ ದೃಶ್ಯ ಕಂಡುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಡಾ.ಶರಣು ಹುಲ್ಲೂರುಗೆ `ಯುವ ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

    ಡಾ.ಶರಣು ಹುಲ್ಲೂರುಗೆ `ಯುವ ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

    ಬೆಂಗಳೂರು: ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಲೇಖಕ ಹಾಗೂ ಪತ್ರಕರ್ತ ಡಾ.ಶರಣು ಹುಲ್ಲೂರು ಅವರಿಗೆ 2021ನೇ ಸಾಲಿನ `ಯುವ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂದಿ ಶಾಂತಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಕುಮಾರಪಾರ್ಕ್ನ ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣು ಹುಲ್ಲೂರು ಅವರ `ಅನಂತವಾಗಿರು’ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗಜಾನನ ಶರ್ಮಾ ಅವರಿಗೆ `ಸಾಹಿತ್ಯ ರತ್ನ’, ಜಮೀಲ್ ಸಾವಣ್ಣ ಅವರಿಗೆ `ಪುಸ್ತಕ ರತ್ನ’ ಹಾಗೂ ಡಾ.ವಿಜಯಮ್ಮ ಅವರಿಗೆ `ಮುದ್ರಣ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಪ್ರಶಸ್ತಿಗಳು ತಲಾ 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದವು. ಇದನ್ನೂ ಓದಿ: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್‍ಒ

    ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು, ರಾಜ್ಯ ಸರ್ಕಾರ ಲೇಖಕರು, ಪ್ರಕಾಶಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ನಮ್ಮ ಬೇಡಿಕೆಗಳಿಗೆ ಸ್ಪಂಧಿಸುತ್ತಿಲ್ಲ. ಪ್ರತಿ ವರ್ಷ ನೀಡುವ 15 ಕೋಟಿ ರೂ.ಗಳ ಅನುದಾನದಲ್ಲಿ ಇನ್ನೂ 10 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಿಂದ ಪ್ರಕಟಣೆಗೆ ಸಜ್ಜಾಗಿರುವ ಎಷ್ಟೋ ಪುಸ್ತಕಗಳು ಮೂಲೆ ಸೇರುತ್ತಿವೆ. ಪೇಪರ್ ಬೆಲೆ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಪುಸ್ತಕ ಪ್ರಕಟಣೆಗೂ ಕಷ್ಟವಾಗಲಿದೆ ಎಂದು ಆತಂಕಪಟ್ಟರು.

    ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಬೇಕು. ಪ್ರತಿವರ್ಷ 15 ಕೋಟಿ ರೂ.ಗಳ ಅನುದಾನ ಮೀಸಲಿಡುವ ಜೊತೆಗೆ 500 ಪುಸ್ತಕಗಳನ್ನು ಸರ್ಕಾರದಿಂದಲೇ ಖರೀದಿಸುವಂತೆ ಒತ್ತಾಯಿಸಬೇಕು ಎಂದು ಕರೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಮೊದಲೆಲ್ಲಾ ಪ್ರಸಿದ್ಧ ಲೇಖಕರ ಪುಸ್ತಕಗಳು ಮಾತ್ರವೇ ಹೊರಬರುತ್ತಿದ್ದವು. ಕನ್ನಡ ಪುಸ್ತಕ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರವೇ ಉದಯೋನ್ಮುಖ ಲೇಖಕರೂ ಬೆಳಕಿಗೆ ಬರುವಂತಾಯಿತು. ಇಂದು ತಂತ್ರಜ್ಞಾನಗಳು ಬೆಳೆದಂತೆ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಯಾವುದೇ ಲೇಖಕರು, ಪ್ರಕಾಶಕರಿಗೆ ತೊಂದರೆ ಆದಾಗ ಮತ್ತೊಬ್ಬರು ಜೊತೆಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

    ಡಿ.ಕೆ.ಮಂಜುಳಾ ಅವರ `ಮುಕ್ತೆ’, ಕಂವೀ ಅವರ `ರಾಯಲ ಸೀಮಾ ಕಥೆಗಳು’, ಬಿ.ಓಬಯ್ಯ ಅವರ `ಬಯಕೆಯ ಬೆನ್ನೇರಿ’, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರ `ತೌಲನಿಕ ಸಾಹಿತ್ಯ ಮೀಮಾಂಸೆ’, ಕೇಶವ ರೆಡ್ಡಿ ಹಂದ್ರಾಳರ `ಬೆರಕೆ ಸೊಪ್ಪು’ ಹಾಗೂ ಹೃದಯಶಿವ ಅವರ `ಕ್ಲ್ಯಾಪ್‌ಬೋರ್ಡ್‌’ ಕೃತಿಗಳನ್ನು ಹಿರಿಯ ಪತ್ರಕರ್ತ ರವೀಂದ್ರ ಭಟ್ ಲೋಕಾರ್ಪಣೆಗೊಳಿಸಿದರು. ಇದನ್ನೂ ಓದಿ: ಶಾಸಕರು ತುಲಾಭಾರ ಮಾಡುವಷ್ಟು ಹಣ ಮಾಡ್ಕೊಂಡಿದ್ದಾರೆ, ಆದರೆ ಅವರಿಗೆ ಆಸ್ಪತ್ರೆ ಬೇಡ: ಚಕ್ರವರ್ತಿ ಸೂಲಿಬೆಲೆ

    ವೇದಿಕೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೊಡೇ ಪಿ.ಕೃಷ್ಣ, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕಾರ್ಯದರ್ಶಿ ಆರ್.ದೊಡ್ಡೆಗೌಡ ಮೊದಲಾದವರು ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • 1,800 ಕೋಟಿಗೆ ಅಡಮಾನವಿಟ್ಟಿದ್ದ 11 ಕಟ್ಟಡಗಳನ್ನು ವಾಪಸ್ ಪಡೆದ BBMP

    1,800 ಕೋಟಿಗೆ ಅಡಮಾನವಿಟ್ಟಿದ್ದ 11 ಕಟ್ಟಡಗಳನ್ನು ವಾಪಸ್ ಪಡೆದ BBMP

    ಬೆಂಗಳೂರು: ಸತತ ಛೀಮಾರಿಯಿಂದಲೇ ಸುದ್ದಿಯಲ್ಲಿರುವ ಬಿಬಿಎಂಪಿ ಕೊನೆಗೂ ತನ್ನ ಅಡಮಾನವಿಟ್ಟಿದ್ದ ಕಟ್ಟಡಗಳನ್ನು ಮರಳಿ ಪಡೆದಿದೆ.

    ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ಬಿಬಿಎಂಪಿ ಕಟ್ಟಡ ಅಡಮಾನ ವಿಚಾರ ದೊಡ್ಡ ಅಸ್ತ್ರವಾಗಿತ್ತು. 2015-16ರ ಅವಧಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಬಿಬಿಎಂಪಿ ತನ್ನ ಅಧೀನದ 11 ಕಟ್ಟಡಗಳನ್ನು ಹುಡ್ಕೋ ಸಂಸ್ಥೆಗೆ 1,796 ಕೋಟಿ ರೂ.ಗಳಿಗೆ ಅಡಮಾನಕ್ಕೆ ಇಟ್ಟಿತ್ತು. ಇದೀಗ ಸಂಪೂರ್ಣ ಸಾಲ ಮುಕ್ತಗೊಂಡಿರುವ ಪಾಲಿಕೆ 11 ಕಟ್ಟಡಗಳನ್ನು ಬಿಡಿಸಿಕೊಂಡಿದೆ.

    ಯಾವುದೆಲ್ಲ ಅಡಮಾನ?
    ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಬಿಬಿಎಂಪಿ ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್, ಜಾನ್ಸನ್ ಮಾರುಕಟ್ಟೆ, ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್, ಮಲ್ಲೇಶ್ವರ ಮಾರುಕಟ್ಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ದಾಸಪ್ಪ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಪೂರ್ವ ಕಚೇರಿ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳನ್ನು 2015-16ರಲ್ಲಿ ಅಡಮಾನವಿಟ್ಟಿತ್ತು. ಇದನ್ನೂ ಓದಿ: ಮೈಸೂರು ದಸರಾ ಅದ್ಧೂರಿ ಆಚರಣೆಗೆ ಸರ್ಕಾರದ ಸಿದ್ಧತೆ – ಸೆಪ್ಟೆಂಬರ್ 26ರಿಂದ ನಾಡಹಬ್ಬ

    ಯಾವುದೆಲ್ಲ ವಾಪಸ್?
    ನಂತರದ ವರ್ಷಗಳಲ್ಲಿ ಆರ್ಥಿಕ ಚೇತರಿಕೆ ಕಂಡಿದ್ದ ಬಿಬಿಎಂಪಿ 11 ಕಟ್ಟಡಗಳನ್ನು ಹಂತ-ಹಂತವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್, ಜಾನ್ಸನ್ ಮಾರುಕಟ್ಟೆಯನ್ನು 362.03 ಕೋಟಿ ರೂ., ಬಡ್ಡಿ 163.61 ಕೋಟಿ ರೂ. ಪಾವತಿಸಿ ಹುಡ್ಕೊದಿಂದ ಪಾಲಿಕೆಗೆ 2016-17ರಲ್ಲಿ ವಾಪಸ್ ಪಡೆದುಕೊಂಡಿತು. ಇದನ್ನೂ ಓದಿ: ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ ನೂತನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ

    ಹಾಗೆಯೇ 2017-18ರಲ್ಲಿ ಮಲ್ಲೇಶ್ವರಂ ಮಾರುಕಟ್ಟೆ, 2018-19ರಲ್ಲಿ ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್ ವಾಪಸ್ ಮತ್ತು 2017-18ರಲ್ಲಿ ಕಡಿಮೆ ಬಡ್ಡಿದರಕ್ಕೆ ಎಸ್‌ಬಿಐನಲ್ಲಿ ಅಡಮಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದೀಗ 11 ಕಟ್ಟಡಗಳನ್ನೂ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

    BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

    ಬೆಂಗಳೂರು: ರಾಜ್ಯ ಗೆಜೆಟ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಿರುವ ಸರ್ಕಾರ ಬಿಬಿಎಂಪಿಯ 243 ವಾರ್ಡ್ ವಿಂಗಡಣೆ ಪೂರ್ಣಗೊಳಿಸಿ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ 40ಕ್ಕೂ ಹೆಚ್ಚು ವಾರ್ಡ್‌ಗಳು ಸೇರ್ಪಡೆಯಾಗಿವೆ.

    243 ವಾರ್ಡ್‌ಗಳ ಹೆಸರು, ವ್ಯಾಪ್ತಿ, ಗಡಿ ನಿಗದಿಗೊಳಿಸಿದ್ದು, ಸಾರ್ವಜನಿಕ ಆಕ್ಷೇಪಣೆಗೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿದೆ. ಇದನ್ನೂ ಓದಿ: ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಜೂನ್ 9ರಂದು ಬಿಬಿಎಂಪಿ ಸಲ್ಲಿಸಿದ್ದ ಡಿ ಲಿಮಿಟೇಷನ್ ವರದಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಹೊಸ ರಚನಾ ವರದಿಯ ಕರಡನ್ನು ಪ್ರಕಟಿಸಿದೆ. ಇದರಿಂದ 198 ಇದ್ದ ವಾರ್ಡ್ 243ಕ್ಕೆ ಅಧಿಕೃತವಾಗಿ ಏರಿಕೆಯಾಗಿದೆ. ಹೊಸ ವಾರ್ಡ್ ರಚನೆ ಕುರಿತು ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

    BBMP

    ಈಗಾಗಲೇ 243 ವಾರ್ಡ್‌ಗಳ ನಕ್ಷೆ, ಚೆಕ್ ಬಂದಿ ಸಹಿತ ವಾರ್ಡ್ ವಿವರವನ್ನು ಬಿಡುಗಡೆ ಮಾಡಿದೆ. ಆಕ್ಷೇಪಣೆ ಪರಿಶೀಲನೆ, ಬದಲಾವಣೆಗಳ ನಂತರ ಅಂತಿಮ ವರದಿ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ವಾರ್ಡ್ ವಿಂಗಡಣೆಯಿಂದಾಗಿ ಪಾಲಿಕೆ ಚುನಾವಣೆಗೆ ತೊಡಕಾಗಿದ್ದ ಡಿ ಲಿಮಿಟೇಷನ್ ವಿಘ್ನವೂ ನಿವಾರಣೆಯಾದಂತಾಗಿದೆ.

    Live Tv

  • ರಾಧಿಕಾ ಬಂದ ಮೇಲೆ ಯಶ್ ಅದೃಷ್ಟ ಇನ್ನೂ ಹೆಚ್ಚಾಯಿತು: ಶಿವಣ್ಣ

    ರಾಧಿಕಾ ಬಂದ ಮೇಲೆ ಯಶ್ ಅದೃಷ್ಟ ಇನ್ನೂ ಹೆಚ್ಚಾಯಿತು: ಶಿವಣ್ಣ

    ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಭಾರತದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದರು. ಈ ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗ, ಅಭಿಮಾನಿ ಬಳಗ ಕಾಯುತ್ತಿದೆ. ಅದರಲ್ಲಿ ನಾನೂ ಒಬ್ಬ ಎಂದರು.

    ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ಕೆಜಿಎಫ್-2 ಟ್ರೈಲರ್ ಲಾಂಚ್ ಇವೆಂಟ್ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ತಾರಾ ಬಳಗವೇ ಬಂದಿತ್ತು. ಈ ಕಾರ್ಯಕ್ರಮದ ಕೇಂದ್ರಬಿಂದು ರಾಕಿಬಾಯ್ ಯಶ್, ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಎಲ್ಲರಲ್ಲಿಯೂ ಹೆಚ್ಚು ಉತ್ಸಾಹ ಮೂಡಿಸಿತ್ತು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟ್ರೈಲರ್‌ನಲ್ಲಿದ್ದ ಯಶ್ ವೈಲನ್ಸ್… ವೈಲನ್ಸ್.. ಡೈಲಾಗ್ ಹೇಳಿ ಯಶ್, ಪ್ರಶಾಂತ್ ಸರ್, ಸಂಜಯ್ ದತ್ತ್ ಸರ್ ಸೂಪರ್ ಆಗಿ ಟ್ರೈಲರ್‌ ಬಂದಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

    ನಂತರ ಮಾತನ್ನು ಮುಂದುವರಿಸಿದ ಅವರು, ನಿಜವಾಗಿ ಟ್ರೈಲರ್ ಸೂಪರ್ ಆಗಿತ್ತು. ಮೊದಲಿನಿಂದಲೂ ನನಗೆ ಯಶ್ ಕಂಡ್ರೆ ತುಂಬಾ ಇಷ್ಟ. ಅವರು ನೋಡಲು ತುಂಬಾ ಹ್ಯಾಂಡ್‍ಸಮ್ ಆಗಿ ಇದ್ದಾರೆ. ಯಶ್ ಸಿನಿಮಾ ನೋಡಲು ನಿಜಕ್ಕೂ ತುಂಬಾ ಖುಷಿಯಾಗುತ್ತೆ. ನಾವಿಬ್ಬರು ‘ತಮಸ್ಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಅಲ್ಲಿಂದ ಕೆಜಿಎಫ್ ಮೂಲಕ ಬೇರೆ ಲೆವೆಲ್‌ಗೆ ಬೆಳೆದಿದ್ದಾರೆ. ಅದರಲ್ಲಿಯೂ ಯಶ್, ರಾಧಿಕಾ ಅವರನ್ನು ಮದುವೆಯಾದ ಮೇಲೆ ಅದೃಷ್ಟ ಹೆಚ್ಚಾಗಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

    ಇವರಿಬ್ಬರ ಜೋಡಿ ಕೂಡ ತುಂಬಾ ಚೆನ್ನಾಗಿದೆ. ನಾವು ಕುಟುಂಬದ ರೀತಿ ಇದ್ದೇವೆ. ಯಶ್ ನನ್ನ ತಮ್ಮನ ರೀತಿ. ರಾಧಿಕಾ ಸಹ ನಮ್ಮ ಫ್ಯಾಮಿಲಿಗೆ ತುಂಬಾ ಹತ್ತಿರ. ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ನಿಜವಾಗಿಯೂ ನಾನು ಎಪ್ರಿಲ್ 14ಕ್ಕೆ ಕಾಯುತ್ತೇನೆ. ಮೊದಲ ಶೋ ನೋಡುವೆ. ಅದು ಫ್ಯಾನ್ಸ್ ಜೊತೆ ನೋಡುತ್ತೇನೆ. ಅವನ ಸಿನಿಮಾ ನೋಡಲು ನಾನು ತುಂಬಾ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾ

  • ನಾಗರಹಾವಿನ ಜೊತೆ ಉರಗ ರಕ್ಷಕನ ಚೆಲ್ಲಾಟ

    ನಾಗರಹಾವಿನ ಜೊತೆ ಉರಗ ರಕ್ಷಕನ ಚೆಲ್ಲಾಟ

    ಬೆಂಗಳೂರು/ನೆಲಮಂಗಲ: ನಾಗರಹಾವು ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಉರಗದ ಜೊತೆಗೆ ಜನರನ್ನು ಮೆಚ್ಚಿಸಲು ಹೋಗಿ ಉರಗ ರಕ್ಷಕ ಚೆಲ್ಲಾಟವಾಡಿರುವ ವೀಡಿಯೋ ವ್ಯಾಪಕ ಖಂಡನೆಗೆ ಕಾರಣವಾಗಿದೆ.

    Snake Catcher

    ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಉರಗ ರಕ್ಷಕರೊಬ್ಬರು ವಿಷಪೂರಿತ ನಾಗರಹಾವಿನ ಜೊತೆಗೆ ಚೆಲ್ಲಾಟ ಆಡಿರುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶುಕ್ರವಾರ ಗಣೇಶನ ಹಬ್ಬದ ವೇಳೆ ನೆಲಮಂಗಲ ನಗರದ ವಿಜಯನಗರದ ಪರಮಣ್ಣನವರ ಮನೆಯ ಬಳಿ ನಾಗರಹಾವು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಸ್ನೇಕ್ ಅರುಣ್ ರಾಜ್‍ಗೆ ವಿಚಾರ ಮುಟ್ಟಿಸಿ ರಕ್ಷಣೆ ಮಾಡುವಂತೆ ಕರೆ ಮಾಡಿದ್ದಾರೆ. ಇದನ್ನೂ ಓದಿ:  ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ

    Snake Catcher

    ಸ್ಥಳಕ್ಕೆ ಬಂದ ಸ್ನೇಕ್ ಅರುಣ್ ರಾಜ್ ಆ ನಾಗರಹಾವನ್ನು ರಕ್ಷಣೆ ಮಾಡಿ, ಹಾವಿನ್ನು ಕೈಯಲ್ಲಿ ಹಿಡಿದುಕೊಂಡು ಬೈಕ್ ಮೇಲೆ ಕುಳಿತು ಜನರಿಗೆ ಜಾಗೃತಿ ಮೂಡಿಸುವ ಬರದಲ್ಲಿ ಚೆಲ್ಲಾಟವಾಡಿರುವ ಬಂಗಿ ಆತಂಕಕ್ಕೆ ಕಾರಣವಾಗಿದೆ. ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಹಾವುಗಳ ಜೊತೆಗೆ ಇಂತಹ ವರ್ತನೆ ಅಪಾಯಕಾರಿ, ಸಲ್ಪ ಯಾಮಾರಿದರೂ, ತಮ್ಮ ಪ್ರಾಣವನ್ನು ಪಣಕ್ಕೆ ಇಡಬೇಕಾಗುತ್ತೆ, ಹಾಗಾಗಿ ಇನ್ನಾದರೂ ಜಾಗೃತಿ ವಹಿಸಿ ಹಾವುಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆ

  • ಅಭಿಮಾನಿಯೊಂದಿಗೆ ಬೈಕ್ ಏರಿದ ಶಿವರಾಜ್‍ಕುಮಾರ್ – ವೀಡಿಯೋ ವೈರಲ್

    ಅಭಿಮಾನಿಯೊಂದಿಗೆ ಬೈಕ್ ಏರಿದ ಶಿವರಾಜ್‍ಕುಮಾರ್ – ವೀಡಿಯೋ ವೈರಲ್

    -ಅಭಿಮಾನಿ ಆಸೆ ಈಡೇರಿಸಿದ ಕರುನಾಡ ಚಕ್ರವರ್ತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕರುನಾಡ ಚಕ್ರವರ್ತಿ ಡಾ.ಶಿವರಾಜ್‍ಕುಮಾರ್ ಅಭಿಮಾನಿ ತಂದಿದ್ದ ಬೈಕ್ ಹತ್ತಿ ಸವಾರಿ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: BB ಗೆದ್ದು ಬನ್ನಿ ಮಂಜು, ಲವ್ ಯೂ: ಶಿವರಾಜ್‍ಕುಮಾರ್

    shivraj kumar

    ವಯಸ್ಸು 60 ಆದರೂ ಸಖತ್ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಇಂದಿನ ಯುವಕರು ಕೂಡ ನಾಚಿಸುವಂತೆ ಫಿಟ್‍ನೆಸ್ ಕಾಪಾಡಿರುವ ಶಿವರಾಜ್ ಕುಮಾರ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಡ್ಯಾನ್ಸ್, ಆ್ಯಕ್ಟಿಂಗ್ ಹಾಗೂ ಸ್ಟೈಲಿಶ್ ಆಗಿ ಲಾಂಗ್ ಹಿಡಿಯುವ ಶಿವರಾಜ್ ಕುಮಾರ್ ಕ್ಲಾಸ್‍ಗೂ ಸೈ ಹಾಗೂ ಮಾಸ್‍ಗೂ ಸೈ ಎಂಬುವಂತೆ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಈ ಮಧ್ಯೆ ಅಭಿಮಾನಿಯೊಂದಿಗೆ ಬೈಕ್ ಏರಿ ಸವಾರಿ ಮಾಡಿ ಈ ಮೂಲಕ ಅಭಿಮಾನಿಯ ಆಸೆ ಈಡೇರಿಸಿದ್ದಾರೆ.ಇದನ್ನೂ ಓದಿ: ಶಿವರಾಜ್‍ಕುಮಾರ್ ಬಳಿ ಸಹಾಯಕ್ಕೆ ಅಂಗಲಾಚಿದ ನಟಿ ವಿಜಯಲಕ್ಷ್ಮಿ

    ಹೌದು ಅಭಿಮಾನಿಯೊಬ್ಬರು ಹೊಸ ಬೈಕ್‍ನನ್ನು ಖರೀದಿಸಿ ಅದನ್ನು ತಮ್ಮ ನಿಚ್ಚಿನ ನಟ ಶಿವರಾಜ್‌ಕುಮಾರ್‌ರವರಿಗೆ ತೋರಿಸಲು ಮನೆಯ ಬಳಿ ಹೋಗಿದ್ದಾರೆ. ಈ ವೇಳೆ ಹೊಸ ಬೈಕ್ ನೋಡಿ ಶಿವಣ್ಣ ಅಭಿಮಾನಿಗೆ ಶುಭಾಶಯ ತಿಳಿಸಿ ಬೈಕ್ ಮೇಲೆ ಆಟೋಗ್ರಾಫ್ ಹಾಕಿದ್ದಾರೆ. ಜೊತೆಗೆ ಅಭಿಮಾನಿಯನ್ನು ಹಿಂದೆ ಕೂರಿಸಿಕೊಂಡು ಅದೇ ಬೈಕ್‍ನನ್ನು ಓಡಿಸಿದ್ದಾರೆ. ಅಲ್ಲದೇ ಬೈಕ್ ಓಡಿಸುವಾಗ ಸುರಕ್ಷಿತವಾಗಿರುವಂತೆ ಅಭಿಮಾನಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್​​​ಗೆ ಮಂಜು ಸಂದೇಶ

     

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಯ ಆಸೆ ಈಡೇರಿಸಿದ ಶಿವಣ್ಣನ ಸರಳತೆ ಹಾಗೂ ದೊಡ್ಡ ಗುಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.