Tag: Bangalore

  • BIFFES 2023- ‘ಕಾಂತಾರ’ ಚಿತ್ರಕ್ಕೆ ಗೌರವ : ಚಿತ್ರೋತ್ಸವದ ಉದ್ಘಾಟನಾ ಸಿನಿಮಾವಾಗಿ ಆಯ್ಕೆ

    BIFFES 2023- ‘ಕಾಂತಾರ’ ಚಿತ್ರಕ್ಕೆ ಗೌರವ : ಚಿತ್ರೋತ್ಸವದ ಉದ್ಘಾಟನಾ ಸಿನಿಮಾವಾಗಿ ಆಯ್ಕೆ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ (Kantara) ಸಿನಿಮಾಗೆ ಮತ್ತೊಂದು ಗೌರವ ದೊರೆತಿದೆ. ವಿಶ್ವಸಂಸ್ಥೆಯು ಜಿನಿವಾದಲ್ಲಿ ಸಿನಿಮಾ ಪ್ರದರ್ಶನ ಆಯೋಜನೆ ಮಾಡಿದ್ದ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ಚಿತ್ರೋತ್ಸವದ ಉದ್ಘಾಟನಾ ಸಿನಿಮಾವಾಗಿ ಆಯ್ಕೆ ಮಾಡಿಕೊಂಡಿದೆ. ನಾಳೆ 14ನೇ ಬೆಂಗಳೂರು (Bangalore) ಅಂತಾರಾಷ್ಟ್ರೀತ ಚಿತ್ರೋತ್ಸವ ಆರಂಭವಾಗಲಿದ್ದು, ಉದ್ಘಾಟನಾ ಸಿನಿಮಾವಾಗಿ ಕಾಂತರ ಆಯ್ಕೆಯಾಗಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿಷಯ ಹಂಚಿಕೊಂಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ‘ವಿಶ್ವಮಟ್ಟದಲ್ಲಿ ಕಾಂತಾರ ಚಿತ್ರಕ್ಕೆ ಮನ್ನಣೆ ಸಿಕ್ಕಿದೆ. ಅದನ್ನು ಗೌರವಿಸುವ ಉದ್ದೇಶದಿಂದ ಉದ್ಘಾಟನಾ ಸಿನಿಮಾವಾಗಿ ಕಾಂತಾರವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಸಿನಿಮಾವನ್ನು ಈಗಾಗಲೇ ಬಹುತೇಕರು ನೋಡಿರಬಹುದು. ಆದರೆ, ಗೌರವ ನೀಡುವ ದೃಷ್ಟಿಯಿಂದ ಪ್ರದರ್ಶನ ಮಾಡಲಾಗುತ್ತಿದೆ’ ಎಂದರು. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ

    ನಾಳೆಯಿಂದ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆರ್.ಆರ್.ಆರ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ ಬರಲಿದ್ದಾರೆ. ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ಅವರು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ನಾಳೆಯಿಂದ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಚಿತ್ರೋತ್ಸವವನ್ನು  ಉದ್ಘಾಟಿಸಲಿದ್ದಾರೆ.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23 ರಿಂದ ಆರಂಭವಾಗಿ 30ನೇ ತಾರೀಖಿನವರೆಗೂ ನಡೆಯಲಿದೆ. ನೂರಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

    ನಾಳೆ ವಿಧಾನಸೌಧದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದು, ಹರ್ಷಿಕಾ ಪೂಣಚ್ಚ ದೀಪ ಕಾರ್ಯಕ್ರಮಕ್ಕೆ ನೆರವು ನೀಡಲಿದ್ದಾರೆ. ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

    ಮಾರ್ಚ್ 24 ರಿಂದ ಬೆಂಗಳೂರಿನ ಒರಯನ್ ಮಾಲ್, ಕಲಾವಿದರ ಸಂಘ ಹಾಗೂ ಸುಚಿತ್ರಾ ಫಿಲ್ಮ್ಸ್ ನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರ ಪ್ರದರ್ಶನ, ಗೋಷ್ಠಿಗಳು, ಸಂದರ್ಶನ, ಸಿನಿಮಾ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚಿತ್ರೋತ್ಸವದ ಭಾಗವಾಗಿ ಆಯೋಜನೆ ಮಾಡಿದ್ದಾರೆ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಅಶೋಕ್ ಕಶ್ಯಪ್.

  • ಬೆಂಗಳೂರು ಚಿತ್ರೋತ್ಸವಕ್ಕೆ ಬರಲಿದ್ದಾರೆ ‘ಆರ್.ಆರ್.ಆರ್’ ಸಿನಿಮಾದ ಕಥೆಗಾರ

    ಬೆಂಗಳೂರು ಚಿತ್ರೋತ್ಸವಕ್ಕೆ ಬರಲಿದ್ದಾರೆ ‘ಆರ್.ಆರ್.ಆರ್’ ಸಿನಿಮಾದ ಕಥೆಗಾರ

    ನಾಳೆಯಿಂದ ಬೆಂಗಳೂರಿನಲ್ಲಿ (Bangalore) ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (Chirotsava) ಆರ್.ಆರ್.ಆರ್ (RRR) ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ (Vijayendra Prasad) ಬರಲಿದ್ದಾರೆ. ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ಅವರು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ನಾಳೆಯಿಂದ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಚಿತ್ರೋತ್ಸವವನ್ನು  ಉದ್ಘಾಟಿಸಲಿದ್ದಾರೆ.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23 ರಿಂದ ಆರಂಭವಾಗಿ 30ನೇ ತಾರೀಖಿನವರೆಗೂ ನಡೆಯಲಿದೆ. ನೂರಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಇದನ್ನೂ ಓದಿ: ಸ್ಯಾಮ್ ಈಸ್ ಬ್ಯಾಕ್, ಹೊಸ ಫೋಟೋಶೂಟ್‌ನಲ್ಲಿ ಸಮಂತಾ ಮಿಂಚಿಂಗ್

    ನಾಳೆ ವಿಧಾನಸೌಧದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದು, ಹರ್ಷಿಕಾ ಪೂಣಚ್ಚ ದೀಪ ಕಾರ್ಯಕ್ರಮಕ್ಕೆ ನೆರವು ನೀಡಲಿದ್ದಾರೆ. ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

    ಮಾರ್ಚ್ 24 ರಿಂದ ಬೆಂಗಳೂರಿನ ಒರಯನ್ ಮಾಲ್ ನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರ ಪ್ರದರ್ಶನ, ಗೋಷ್ಠಿಗಳು, ಸಂದರ್ಶನ, ಸಿನಿಮಾ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚಿತ್ರೋತ್ಸವದ ಭಾಗವಾಗಿ ಆಯೋಜನೆ ಮಾಡಿದ್ದಾರೆ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಅಶೋಕ್ ಕಶ್ಯಪ್.

  • ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ಸಿನಿಮಾ ರಂಗದಿಂದ ದೂರವಿದ್ದು, ಸದ್ಯ ಮಗುವಿನ ಪಾಲನೆ ಪೋಷನೆಯಲ್ಲಿ ಬ್ಯುಸಿಯಾಗಿರುವ ನಟಿ ಸಂಜನಾ ಗಲ್ರಾನಿ (Sanjana Galrani) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಜನಾಗೆ ಕೊಲೆ ಬೆದರಿಕೆ (Death threat) ಹಾಕಲಾಗಿದೆ ಎಂದು ಆರೋಪ ಮಾಡಿರುವ ಅವರು, ಬೆದರಿಕೆ ಹಾಕಿದವರು ವಿರುದ್ಧ ದೂರು ದಾಖಲಿಸಿದ್ದಾರೆ.

    ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳ ಜೊತೆ ಗಲಾಟೆ ನಡೆದಿದ್ದು, ಕೊಲೆ ಮಾಡ್ತಿನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದ (Indiranagar) ಧೂಪನಹಳ್ಳಿಯಲ್ಲಿ ವಾಸವಾಗಿರುವ ಸಂಜನಾ ಗಲ್ರಾನಿ ಮನೆ ಬಳಿ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದೆ. ಇವರ ಮೇಲೆಯೇ ಸಂಜನಾ ದೂರು ನೀಡಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ಯಶೋಧಮ್ಮ ಹಾಗೂ ರಾಜಣ್ಣ ಎನ್ನುವವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನ ನಿಲ್ಲಿಸ್ತಾರಂತೆ. ಇದನ್ನ ಪ್ರಶ್ನೆ ಮಾಡಿದ್ರೆ ಕೊಲೆ ಮಾಡ್ತಿನಿ, ನಾವು ನಲವತ್ತು ವರ್ಷದಿಂದ ವಾಸ ಇದ್ದೀವಿ ಅಂತ ಆವಾಜ್ ಹಾಕಿದ್ದಲ್ಲದೆ, ವೇಶ್ಯೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಸಂಜನಾ ಗಲ್ರಾನಿ. ಸದ್ಯ ನ್ಯಾಯಲಯದ ಅನುಮತಿ ಮೇರೆಗೆ ಎಫ್ಐಆರ್‌ (FIR) ದಾಖಲಾಗಿದೆ.

  • ಬೆಂಗಳೂರು ಚಿತ್ರೋತ್ಸವ : ಲಕ್ಷ ಲಕ್ಷ ಏರಿಕೆಯಾದ ಬಹುಮಾನ ಮೊತ್ತ

    ಬೆಂಗಳೂರು ಚಿತ್ರೋತ್ಸವ : ಲಕ್ಷ ಲಕ್ಷ ಏರಿಕೆಯಾದ ಬಹುಮಾನ ಮೊತ್ತ

    ಮಾರ್ಚ್ 23 ರಿಂದ ಬೆಂಗಳೂರು (Bangalore) ಅಂತಾರಾಷ್ಟ್ರೀಯ ಚಿತ್ರೋತ್ಸವ ನಿಗದಿಯಾಗಿದೆ. ಇದು 14ನೇ ಅಂತಾರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವ (Film Festival) ಆಗಿದ್ದು, ನಾನಾ ರೀತಿಯ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತಷ್ಟು ನಿರೀಕ್ಷೆ ಮೂಡುವಂತೆ ಮಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ. ಸರಕಾರದಿಂದ ಹಣ ಬಿಡುಗಡೆ ಆಗಿಲ್ಲ ಎನ್ನುವ ಕಾರಣಕ್ಕಾಗಿ ಚಿತ್ರೋತ್ಸವ ನಡೆಯುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಕೊನೆಗೂ ಹಣ ಬಿಡುಗಡೆಯಾಗಿ ಚಿತ್ರೋತ್ಸವದ ಕೆಲಸಗಳಿಗೆ ವೇಗ ಬಂದಿದೆ.

    ಈ ಬಾರಿ ನಡೆಯುವ ಚಿತ್ರೋತ್ಸವದ ಕುರಿತು ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ (Ashok Kashyap) ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡರು. ಅದರಲ್ಲೂ ಸಿನಿಮಾ ಸ್ಪರ್ಧೆಯಲ್ಲಿ ಗೆದ್ದ ಚಿತ್ರಗಳ ಬಹುಮಾನ ಮೊತ್ತವನ್ನು ತಿಳಿಸಿ ಅಚ್ಚರಿ ಮೂಡಿಸಿದರು. ಈ ಬಾರಿ ಮೊದಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಚಿತ್ರಕ್ಕೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಸಿಗುವ ಸಾಧ್ಯತೆ ಇದೆ. ಈವರೆಗೂ ಮೂರು ಲಕ್ಷ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಬಾರಿ ಹತ್ತು ಲಕ್ಷಕ್ಕೆ ಏರಿಸಿ ಎಂದು ಸರಕಾರಕ್ಕೆ ಅಕಾಡೆಮಿ ಶಿಫಾರಸು ಮಾಡಿದೆಯಂತೆ. ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣವೆಂದು ಸೂಸೈಡ್‌ ನೋಟ್‌ ಬರೆದಿಟ್ಟ ʻವರ್ಷಧಾರೆʼ ನಟಿ ಪಾಯಲ್‌

    ಏಷಿಯನ್, ಭಾರತೀಯ ಹಾಗೂ ಕನ್ನಡ ಸಿನಿಮಾ ಹೀಗೆ ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನಗಳನ್ನು ನೀಡಲಾಗುತ್ತಿದ್ದು, ಕ್ರಮವಾಗಿ 10 ಲಕ್ಷ ರೂ, 5 ಲಕ್ಷ ರೂ ಹಾಗೂ 3 ಲಕ್ಷ ರೂಪಾಯಿ ಬಹುಮಾನವಾಗಿ ಇರಲಿದೆ ಎಂದೂ ಕಶ್ಯಪ್ ತಿಳಿಸಿದ್ದಾರೆ. ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಮಾರ್ಚ್ 23 ರಂದು ಸಂಜೆ 6 ಗಂಟೆಗೆ ಚಿತ್ರೋತ್ಸವ ಉದ್ಘಾಟನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.

    ಈ ಬಾರಿಯ ಚಿತ್ರೋತ್ಸವದ ಮತ್ತೊಂದು ವಿಶೇಷವೆಂದರೆ, ಮೊನ್ನೆಯಷ್ಟೇ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಏಳು ಆಸ್ಕರ್ ಪ್ರಶಸ್ತಿಯನ್ನು ಪಡೆದಿರುವ ‘ಎವ್ರಿಥಿಂಗ್ ಎವ್ರಿವೇರ್ ಆಲ್ ಆಟ್ ಒನ್ಸ್’ ಸಿನಿಮಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಜೊತೆಗೆ ವಿಶ್ವದ 61 ಸಿನಿಮಾಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಭಾಗಿಯಾಗಲಿವೆ. ಒಟ್ಟು 50 ದೇಶಗಳ 200 ಚಿತ್ರಗಳನ್ನು ಈ ಆವೃತ್ತಿಯಲ್ಲಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ ಎಂದು ಕಶ್ಯಪ್ ತಿಳಿಸಿದ್ದಾರೆ.

  • ಮಾಜಿ ಪ್ರಿಯಕರನಿಂದ ನಟಿ ಮೇಲೆ ಮಾರಣಾಂತಿಕ ಹಲ್ಲೆ: ಫೋಟೋ ಶೇರ್ ಮಾಡಿದ ಅನಿಕಾ

    ಮಾಜಿ ಪ್ರಿಯಕರನಿಂದ ನಟಿ ಮೇಲೆ ಮಾರಣಾಂತಿಕ ಹಲ್ಲೆ: ಫೋಟೋ ಶೇರ್ ಮಾಡಿದ ಅನಿಕಾ

    ಟಿ ಅನಿಕಾ ವಿಜಯ್ ವಿಕ್ರಮನ್ (Anika Vijay Vikraman) ಮೇಲೆ ಮಾಜಿ ಪ್ರಿಯಕರ ಅನೂಪ್ ಪಿಳ್ಳೈ (Anoop Pillai) ಮಾರಣಾಂತಿಕ ಹಲ್ಲೆ (Assault) ಮಾಡಿದ್ದಾರೆ. ಮುಖ, ಕಣ್ಣುಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆ. ರಕ್ತಸಿಕ್ತ ಮುಖದ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ರೂರ ಪ್ರಿಯಕರನ ಬಗ್ಗೆ ಬರೆದುಕೊಂಡಿದ್ದಾರೆ. ಅನುಭವಿಸಿದ ಯಾತನೆಯನ್ನು ಇಂಚಿಂಚಾಗಿ ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಕ್ರೂರವಾಗಿ ಥಳಿಸಿರುವ ಮಾಜಿ ಪ್ರಿಯಕರನ ಬಗ್ಗೆ ಬರೆದುಕೊಂಡಿದ್ದು, ‘ನಾನು ಅವನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅವನು ಹಲವು ತಿಂಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ತೊಂದರೆ ಕೊಡುತ್ತಲೇ ಬಂದ. ಈಗಾಗಲೇ ಎರಡು ಬಾರಿ ಥಳಿಸಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಪೊಲೀಸರು ಕೂಡ ಅವನಿಗೆ ಸಹಕರಿಸುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಈ ಕುರಿತು ಬೆಂಗಳೂರು (Bangalore) ಪೊಲೀಸರಿಗೆ ದೂರು (Complaint)  ನೀಡಿರುವ ಅವರು, ‘ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಅವನಿಂದ ದೂರ ಇರು ಎಂದು ನನಗೆ ಸಲಹೆ ನೀಡಿದರು. ಅವನು ಪೊಲೀಸರಿಗೂ ಹಣ ಕೊಟ್ಟಿದ್ದಾನೆ. ಹಾಗಾಗಿ ಮತ್ತೆ ಮತ್ತೆ ಅವನು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ’ ಎಂದು ಬೆಂಗಳೂರು ಪೊಲೀಸರ ಮೇಲೂ ಅನಿಕಾ ದೂರಿದ್ದಾರೆ. ಈ ಅನಿಕಾ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಪ್ರಿಯಕರನ ವಿರುದ್ಧದ ಕ್ರಮಕ್ಕೆ ಅನೇಕರು ಆಗ್ರಹಿಸಿದ್ದಾರೆ.

    ಅವನಿಂದ ಮೋಸವಾಗುತ್ತಿದೆ ಎಂದು ಗೊತ್ತಾದಾಗ ಪ್ರಿಯಕರನಿಂದ ದೂರವಾದರಂತೆ ಅನಿಕಾ. ಆದರೂ, ಅವನು ಮಾತ್ರ ದೂರವಾಗಲಿಲ್ಲವಂತೆ. ಅನುಮಾನ ಪಡುವುದು, ವಾಟ್ಸಪ್ ಪರಿಶೀಲಿಸುವುದು, ಅನುಮಾನ ಪಡುವ ರೀತಿಯಲ್ಲಿ ಪ್ರಶ್ನೆ ಮಾಡುವುದು ಹೀಗೆ ನಿರಂತರವಾಗಿ ಕಿರುಕುಳ ಕೊಡುತ್ತಾ ಬಂದಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.

  • ನಡುರಾತ್ರಿ ರಸ್ತೆ ಗುಂಡಿಗಳ ಮುಚ್ಚಿದ ನಟಿ : ಕಾರುಣ್ಯ ರಾಮ್ ಕೆಲಸಕ್ಕೆ ಮೆಚ್ಚುಗೆ

    ನಡುರಾತ್ರಿ ರಸ್ತೆ ಗುಂಡಿಗಳ ಮುಚ್ಚಿದ ನಟಿ : ಕಾರುಣ್ಯ ರಾಮ್ ಕೆಲಸಕ್ಕೆ ಮೆಚ್ಚುಗೆ

    ಟಿ ಕಾರುಣ್ಯ ರಾಮ್ (Karunya Ram) ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ತಮ್ಮ ರಾಜರಾಜೇಶ್ವರಿ ನಗರ (Rajarajeshwari Nagar) ಏರಿಯಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು (Potholes) ಮುಚ್ಚುವ ಮೂಲಕ ಪ್ರಶಂಸೆಗೆ ಕಾರಣರಾಗಿದ್ದಾರೆ. ನಿನ್ನೆ ರಾತ್ರಿ ಹನ್ನೊಂದು ಗಂಟೆಯ ಹೊತ್ತಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಳಿಗೆ ಇಳಿದ ಕಾರುಣ್ಯ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕಾರುಣ್ಯ, ‘ಎರಡು ಘಟನೆಗಳಿಂದಾಗಿ ನಾನು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲು ಹೊರಟೆ. ನನ್ನ ಸ್ನೇಹಿತರೊಬ್ಬರ ತಂದೆ ತಾಯಿ ವಾಹನ ಓಡಿಸುವಾಗ ರಸ್ತೆಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದರು. ಅದರಲ್ಲಿ ಒಬ್ಬರು ಮೃತರಾದರು. ಅಲ್ಲದೇ, ನನ್ನ ಕಣ್ಣಾರೆ ಹುಡುಗಿಯೊಬ್ಬಳು ರಸ್ತೆ ಗುಂಡಿಯಲ್ಲಿ ಬಿದ್ದದ್ದು ನೋಡಿದೆ. ಹಣಕ್ಕಿಂತಲೂ ಜೀವ ಅಮೂಲ್ಯ. ಈ ರೀತಿಯಲ್ಲಿ ಪ್ರಾಣ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಗುಂಡಿ ಮುಚ್ಚಲು ಮುಂದಾದೆ’ ಎನ್ನುತ್ತಾರೆ.

    ‘ಸರಕಾರ ಅಥವಾ ಜನಪ್ರತಿನಿಧಿಗಳನ್ನು ಬೈಯುತ್ತಾ ಕೂರುವ ಬದಲು, ನಮ್ಮ ಮನೆ, ಏರಿಯಾ ಸುತ್ತಲೂ ಇರುವ ಒಂದೊಂದು ಗುಂಡಿಯನ್ನು ಮುಚ್ಚಿದರೆ ಸಾಕು. ಗುಂಡಿ ಮುಕ್ತ ಬೆಂಗಳೂರು ಮಾಡಬಹುದು. ಜನರು ಮನಸ್ಸು ಮಾಡಬೇಕು ಅಷ್ಟೆ. ಜೀವ ನಮ್ಮದೆ. ಹಾಗಾಗಿ ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ಇದು ನಾನು ಕಂಡುಕೊಂಡ ಸತ್ಯ. ಈ ಸೂತ್ರವೇ ನನ್ನನ್ನು ಪ್ರೇರೇಪಿಸಿತು’ ಎನ್ನುವುದು ಕಾರುಣ್ಯ ಮಾತು.

    ರಾತ್ರಿ ಹನ್ನೊಂದರ ಹೊತ್ತಿಗೆ ಗುಂಡಿಗಳನ್ನು ಮುಚ್ಚುವುದಕ್ಕೆ ಶುರು ಮಾಡಿದ ಕಾರುಣ್ಯ ಮತ್ತು ಟೀಮ್ ಗೆ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ‘ಆ ರಸ್ತೆಯಲ್ಲಿ ಹೋಗುತ್ತಿದ್ದವರು ವಾಹನ ನಿಲ್ಲಿಸಿ, ನಮ್ಮನ್ನು ಮಾತನಾಡಿಸುತ್ತಿದ್ದರು. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಬೆನ್ನುತಟ್ಟಿದರು. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇದಕ್ಕಿಂತ ಬೇರೆ ಮೆಚ್ಚುಗೆ ಬೇಕಿಲ್ಲ’ ಎನ್ನುತ್ತಾರೆ ಕಾರುಣ್ಯ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ

    ಕಾರುಣ್ಯ ಕೇವಲ ಗುಂಡಿಗಳನ್ನು ಮಾತ್ರ ಮುಚ್ಚಿಲ್ಲ. ತಮ್ಮದೇ ಆದ ಸಂಸ್ಕಾರ ಟ್ರಸ್ಟ್ (Sanskara Trust) ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಮೊನ್ನೆಯಷ್ಟೇ ರಾಜರಾಜೇಶ್ವರಿ ನಗರದಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದರು. ಆ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿದರು. ಅಲ್ಲದೇ ಕೋವಿಡ್ ವೇಳೆಯಲ್ಲೂ ಅವರು ಫುಡ್ ಕಿಟ್ ಹಂಚಿದ್ದರು. ತಮ್ಮ ಹುಟ್ಟು ಹಬ್ಬದಂದು ಅನಾಥ ಮಕ್ಕಳಿಗೆ ನೆರವಾಗುತ್ತಾ ಬಂದಿದ್ದಾರೆ.

  • ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ

    ಒಬ್ಬಳನ್ನೇ ರೆಸಾರ್ಟ್ ಗೆ ಕರೆದರೆ ಉದ್ದೇಶ ಏನಿರತ್ತೆ? : ಕನ್ನಡದ ನಟಿ ಹೇಳಿಕೊಂಡ ಕಹಿ ಸತ್ಯ

    ವಿಷ್ಣುವರ್ಧನ್ ನಟನೆಯ ಅಪ್ಪಾಜಿ (Appaji) ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಮನಿ (Amani) ಇದೇ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ (Casting Couch) ಕರಾಳಮುಖವನ್ನು ಸಮಾಜದ ಮುಂದೆ ಬಿಚ್ಚಿಟ್ಟಿದ್ದಾರೆ. ಅಡ್ಡದಾರಿಯಲ್ಲಿ ಸಿನಿಮಾ ರಂಗಕ್ಕೆ ಹೋಗುವುದಕ್ಕೆ ನನಗೆ ಇಷ್ಟವಿರಲಿಲ್ಲ. ಹಾಗಾಗಿ ತಡವಾಗಿ ನಾನು ಎಂಟ್ರಿ ಕೊಟ್ಟೆ ಎಂದು ಅವರು ಹೇಳಿಕೊಂಡಿದ್ದಾರೆ.

    ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಅನೇಕ ಆಡಿಷನ್ ಗಳಿಗೆ ಅವರು ಹೋಗಿ ಬಂದಿದ್ದಾರಂತೆ. ಕೆಲವರು ಸೆಲಕ್ಟ್ ಆಗಿದ್ದೀಯಾ ಅಂತ ಹೇಳಿ ಕಳುಹಿಸಿ ಆನಂತರ ರಿಜೆಕ್ಟ್ ಆಗಿದ್ದೀಯಾ ಎಂದು ಹೇಳುತ್ತಿದ್ದರಂತೆ. ಇನ್ನೂ ಕೆಲವರು ನೀವು ಮನೆಗೆ ಹೋಗಿ ನಾವು ಫೋನ್ ಮಾಡುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರಂತೆ. ಒಬ್ಬರು ಕರೆ ಮಾಡಿ, ‘ಮೇಡಂ, ನಿರ್ದೇಶಕರು ಐಡಿಯಲ್ ಬೀಚ್ ರೆಸಾರ್ಟ್ ಗೆ ಬರೋಕೆ ಹೇಳಿದ್ದಾರೆ. ನೀವೊಬ್ಬರೇ ಬನ್ನಿ. ನಿಮ್ಮ ತಾಯಿ ಕರೆದುಕೊಂಡು ಬರಬೇಡಿ’ ಎಂದರಂತೆ. ಮೊದಲ ಮೊದಲು ಆಮನಿಗೆ ಅರ್ಥವೇ ಆಗಲಿಲ್ಲವಂತೆ.

    ನಂತರದ ದಿನಗಳಲ್ಲಿ ಅಮ್ಮನನ್ನು ಕರೆದುಕೊಂಡು ಬರಬೇಡಿ ಅಂತ ಹೇಳುತ್ತಿದ್ದ ಕಾರಣವನ್ನು ಅರಿತರಂತೆ. ಹಾಗಾಗಿ ಅವರು ಯಾವತ್ತೂ ಅಮ್ಮನನ್ನು ಬಿಟ್ಟು ಹೋಗುತ್ತಿರಲಿಲ್ಲವಂತೆ. ಹಾಗಾಗಿಯೇ ಎರಡು ವರ್ಷಗಳಾದರೂ ಅವರಿಗೆ ಯಾವುದೇ ಪಾತ್ರವನ್ನೂ ಕೊಡಲಿಲ್ಲವಂತೆ. ರೆಸಾರ್ಟ್ ಗೆ ಹೋಗುವಂತಹ ಸಂಸ್ಕೃತಿ ನನ್ನದಲ್ಲ. ಹಾಗಾಗಿ ನಾನು ಒಪ್ಪಲಿಲ್ಲ. ತಡವಾಗಿಯೇ ನನಗೆ ಅವಕಾಶ ಸಿಕ್ಕಿದ್ದು ಎಂದು ಅವರು ಹೇಳಿಕೊಂಡಿದ್ದಾರೆ.

    ನಟಿ ಆಮನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಕನ್ನಡವೂ ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ, ಕನ್ನಡಕ್ಕಿಂತ ಇತರ ಭಾಷೆಗಳಲ್ಲೇ ಅವರು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸದ್ಯ ಆಮನಿ ಎನ್ನುತ್ತಿದ್ದಂತೆಯೇ ನೆನಪಾಗುವ ಹಾಡೆಂದರೆ ಅಪ್ಪಾಜಿ ಸಿನಿಮಾದ ‘ಏನೆ ಕನ್ನಡತಿ ನೀ ಯಾಕೆ ಹಿಂಗಾಡುತೀ’ ಗೀತೆ. ಅಪ್ಪಾಜಿ ಸಿನಿಮಾದಲ್ಲಿ ಅವರು ವಿಷ್ಣುವರ್ಧನ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಣ್ಣನ ಹುಟ್ಟುಹಬ್ಬಕ್ಕೆ ಚಿನ್ನದ ಅಭಿಷೇಕ : ಬೆಂಗಳೂರಿನಲ್ಲಿ ರಜನಿಕಾಂತ್

    ಅಣ್ಣನ ಹುಟ್ಟುಹಬ್ಬಕ್ಕೆ ಚಿನ್ನದ ಅಭಿಷೇಕ : ಬೆಂಗಳೂರಿನಲ್ಲಿ ರಜನಿಕಾಂತ್

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕೆಲ ದಿನಗಳಿಂದ ಬೆಂಗಳೂರಿನಲ್ಲಿ (Bangalore) ಬೀಡು ಬಿಟ್ಟಿದ್ದಾರೆ. ಮೊನ್ನೆಯಷ್ಟೇ ಅವರು ಚಿಕ್ಕಬಳ್ಳಾಪುರ ಸಮೀಪದ ಆದಿಯೋಗಿ ಪ್ರತಿಮೆಗೆ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದರು. ಮೊನ್ನೆಯಷ್ಟೇ ರವಿಶಂಕರ್ ಗುರುಜಿ ಆಶ್ರಮಕ್ಕೂ ಹೋಗಿದ್ದರು. ಅಲ್ಲಿ ಶಿವರಾತ್ರಿ ಆಚರಣೆ ಮಾಡಿದ್ದರು. ನಿನ್ನೆ ಬೆಂಗಳೂರಿನಲ್ಲೇ ಇರುವ ಅಣ್ಣನ ಹುಟ್ಟುಹಬ್ಬದಲ್ಲಿ ರಜನಿ ಪಾಲ್ಗೊಂಡಿದ್ದಾರೆ.

    ರಜನಿಕಾಂತ್ ಅವರ ಪ್ರೀತಿಯ ಸಹೋದರ ಸತ್ಯನಾರಾಯಣ್ (Satyanarayan Gaikwad ) ಬೆಂಗಳೂರಿನಲ್ಲೇ ವಾಸವಿದ್ದಾರೆ. ಅವರೀಗ 80ರ ಹುಟ್ಟುಹಬ್ಬದ (Birthday) ಸಂಭ್ರಮ. ಅಲ್ಲದೇ ಸತ್ಯನಾರಾಯಣ ಅವರ ಪುತ್ರನಿಗೂ ಅದೇ ದಿನ 60ರ ಸಂಭ್ರಮ. ಈ ಇಬ್ಬರ ಹುಟ್ಟುಹಬ್ಬವನ್ನು ರಜನಿಕಾಂತ್ ವಿಶೇಷವಾಗಿ ಆಚರಿಸಿದ್ದಾರೆ. ಅಂದು ಅಣ್ಣನ ಮೇಲೆ ಬಂಗಾರದ ಸುರಿಮಳೆಗೈದಿದ್ದಾರೆ. ಈ ವಿಶೇಷ ಸಂಭ್ರಮವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇವತ್ತು ರಜನಿಕಾಂತ್ ಈ ಮಟ್ಟಕ್ಕೆ ಬೆಳೆಯಲು ಸಹೋದರ ಸತ್ಯನಾರಾಯಣ್ ಗಾಯಕವಾಡ ಕಾರಣವಂತೆ. ಹಾಗಾಗಿ ಸಹೋದರನನ್ನು ಅವರು ಚಿನ್ನದ ಮನುಷ್ಯ ಎಂದು ಕರೆದಿದ್ದಾರೆ. ಚಿನ್ನದ ಮನುಷ್ಯನಿಗೆ ಚಿನ್ನದಲ್ಲೇ ಅಭಿಷೇಕ ಮಾಡಿದ್ದಾರೆ. ‘ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ಅಣ್ಣ ಕಾರಣ. ಚಿನ್ನದ ಹೃದಯಕ್ಕೆ ಚಿನ್ನದ ಮಳೆಯ ಸುರಿಮಳೆ’ ಎಂದು ರಜನಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲವ್ಲಿ ಸ್ಟಾರ್ ಪ್ರೇಮ್‌ಗೆ `ಟಗರು’ ನಟಿ ಮಾನ್ವಿತಾ ನಾಯಕಿ

    ರಜನಿ ಸದ್ಯ ಜೈಲರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡು ವಾರಗಳಿಂದ ಅವರು ಕರ್ನಾಟಕದಲ್ಲೇ ಇದ್ದಾರೆ. ಕಳೆದ ವಾರ ಜೈಲರ್ ಸಿನಿಮಾದ ಶೂಟಿಂಗ್ ಮಂಗಳೂರಿನಲ್ಲಿ ನಡೆದಿತ್ತು. ಶಿವರಾಜ್ ಕುಮಾರ್, ಸಾಧು ಕೋಕಿಲಾ ಸೇರಿದಂತೆ ಹಲವರು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು ಚಿತ್ರೋತ್ಸವಕ್ಕೆ ರೂ. 4.49 ಕೋಟಿ ಮೀಸಲು : ಆರ್.ಅಶೋಕ್

    ಬೆಂಗಳೂರು ಚಿತ್ರೋತ್ಸವಕ್ಕೆ ರೂ. 4.49 ಕೋಟಿ ಮೀಸಲು : ಆರ್.ಅಶೋಕ್

    ಮಾರ್ಚ್ 23 ರಿಂದ ಬೆಂಗಳೂರು (Bangalore) ಅಂತಾರಾಷ್ಟ್ರೀಯ ಚಿತ್ರೋತ್ಸವ (film festival) ನಡೆಯಲಿದ್ದು, ಈ ಚಿತ್ರೋತ್ಸವಕ್ಕೆ ಸರಕಾರ 4.49 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಇನ್ನೂ ಹೆಚ್ಚಿನ ಹಣವನ್ನು ಚಿತ್ರೋತ್ಸವಕ್ಕಾಗಿ ಮೀಸಲಿಟ್ಟಿರುವುದಾಗಿ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. 14ನೇ ಚಿತ್ರೋತ್ಸವ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

    ಮಾರ್ಚ್ ನಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಇಡೀ ಚಿತ್ರೋದ್ಯಮ ಪಾಲ್ಗೊಳ್ಳುತ್ತಿದ್ದು, ಅತಿಥಿಗಳನ್ನಾಗಿ ಬಾಲಿವುಡ್ ನಟ ನಟಿಯರಿಗೆ ಆಹ್ವಾನ ನೀಡಲಾಗಿದೆ. ರೇಖಾ ಸೇರಿದಂತೆ ಹಲವು ಕಲಾವಿದರು ಫಿಲ್ಮೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ 300ಕ್ಕೂ ಹೆಚ್ಚು ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಅಶೋಕ್ ತಿಳಿಸಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ಚಿತ್ರೋತ್ಸವದ ಸ್ಪರ್ಧಿಯಲ್ಲಿ ಭಾಗಿಯಾಗುವ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಪ್ರತಿ ವರ್ಷವೂ ಮೂರುಲಕ್ಷ ರೂಪಾಯಿ ಪ್ರಶಸ್ತಿ ನೀಡಲಾಗುತ್ತಿತ್ತು. ಈ ಬಾರಿ ಅದನ್ನು ಐದು ಲಕ್ಷಕ್ಕೆ ಏರಿಸಲು ಅಶೋಕ್ ಸಲಹೆ ನೀಡಿದ್ದಾರಂತೆ. ಅಲ್ಲದೇ, ಹೆಚ್ಚು ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿ ಎನ್ನುವ ಮತ್ತೊಂದು ಸಲಹೆ ಕೂಡ ನೀಡಿದ್ದಾರಂತೆ. ಇತ್ತೀಚೆಗಷ್ಟೇ ಅಗಲಿರುವ ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ಹಾಗೂ ಗಾಯಕಿ ವಾಣಿ ಜಯರಾಮ್ ಅವರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾರ್ಚ್ 23 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

    ಮಾರ್ಚ್ 23 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

    ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಈ ವರ್ಷ ನಡೆಯುವುದು ಅನುಮಾನ ಎನ್ನಲಾಗಿತ್ತು. ಚುನಾವಣೆ ನೀತಿಸಂಹಿತೆ ಹಾಗೂ ಇನ್ನೂ ಸರಕಾರ ಅನುದಾನ ಬಿಡುಗಡೆ ಮಾಡದೇ ಇರುವ ಕಾರಣದಿಂದಾಗಿ ಈ ವರ್ಷ ಚಿತ್ರೋತ್ಸವ ನಡೆಯುವುದರ ಬಗ್ಗೆ ಗೊಂದಲ ಮೂಡಿತ್ತು. ಆದರೆ, ಎಲ್ಲದಕ್ಕೂ ತೆರೆ ಎಳೆಯಲಾಗಿದೆ. ಫೆಬ್ರವರಿಯಲ್ಲಿ ಫಿಲ್ಮೋತ್ಸವ ನಡೆಸದೇ ಮಾರ್ಚ್ ಕೊನೆಯ ವಾರದಲ್ಲಿ ಚಿತ್ರೋತ್ಸವ ನಡೆಸುವುದಾಗಿ ಅಕಾಡೆಮಿ ತಿಳಿಸಿದೆ.

    14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನವನ್ನು ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಅನಾವರಣ ಮಾಡಿದರು. ನಗರದ ಪದ್ಮನಾಭನಗರದಲ್ಲಿ ನಿನ್ನೆ ಸಂಜೆ ನಡೆದ ಸಮಾರಂಭದಲ್ಲಿ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆಗೊಂಡಿದ್ದು, 2023 ಮಾರ್ಚ್ 23ರಿಂದ 30ರವರೆಗೆ ಚಿತ್ರೋತ್ಸವ ನಡೆಯಲಿದೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ರಸ್ತೆ ಇಂದು ಉದ್ಘಾಟನೆ

    ಸಮಾರಂಭದಲ್ಲಿ ಚಿತ್ರೋತ್ಸವದ ಸಂಘಟನಾ ಸಮಿತಿ ಅಧ್ಯಕ್ಷರೂ ಆದ ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು, ಚಲನಚಿತ್ರರಂಗದ ಗಣ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k