Tag: Bangalore

  • ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ: ಗೆಳೆಯರಿಂದ ರಕ್ತದಾನ ಶಿಬಿರ

    ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬ: ಗೆಳೆಯರಿಂದ ರಕ್ತದಾನ ಶಿಬಿರ

    ಇಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (Sanchari Vijay) ಅವರ ಹುಟ್ಟುಹಬ್ಬ. ವಿಜಯ್ ಹುಟ್ಟು ಹಬ್ಬದ (Birthday) ನೆಪದಲ್ಲಿ ನಾಟಕ ಪ್ರದರ್ಶನ, ನೆನಪಿನ ಕಾರ್ಯಕ್ರಮಗಳು ಮತ್ತು ರಕ್ತದಾನ ಶಿಬಿರದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಅವರ ಆಪ್ತರು ಮಾಡುತ್ತಿದ್ದಾರೆ.

    ಬೆಂಗಳೂರಿನಲ್ಲಿ ಸಂಚಾರಿ ವಿಜಯ್ ಅವರಿಗೆ ಅನೇಕ ಗೆಳೆಯರಿದ್ದರೂ, ಅವರ ಆಪ್ತ ಬಳಗದಲ್ಲಿ ಇದ್ದವರು ಕೆಲವೇ ಕೆಲವರು. ಅವರಲ್ಲಿ ಅನಿಲ್ ಗೌಡ ಕೂಡ ಒಬ್ಬರು. ವಿಜಯ್ ಅವರ ಹುಟ್ಟು ಹಬ್ಬದಂದು ಅನಿಲ್ ಗೌಡ ಕಳೆದ ಎರಡು ವರ್ಷಗಳಿಂದ ರಕ್ತದಾನ ಶಿಬಿರ (Blood Donation Camp) ಹಮ್ಮಿಕೊಳ್ಳುತ್ತಲೇ ಇದ್ದಾರೆ. ಈ ಬಾರಿಯೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.

    ಸಂಚಾರಿ ವಿಜಯ್ ಅವರ ಗೆಳೆಯರ ಬಳಗ ಇಂದು ಬೆಂಗಳೂರಿನ (Bangalore) ನಾಗರಭಾವಿ ಬಿ.ಡಿಎ ಕಾಂಪ್ಲೆಕ್ಸ್ ಬಳಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ವಿಜಯ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಜಯ್‌ ಸ್ನೇಹಿತರು ವಿಶೇಷ ಕಾರ್ಯಕ್ಕೆ ಕೈ ಜೋಡಿಸಿದ್ದರು, ಅನೇಕರು ಅಲ್ಲಿಗೆ ಬಂದು ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ:ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ

    ವಿಜಯ್ ಹುಟ್ಟುಹಬ್ಬಕ್ಕಾಗಿ ಆಯೋಜನೆಗೊಂಡಿದ್ದ ರಕ್ತದಾನ ಶಿಬಿರದಲ್ಲಿ ಆಪ್ತರಾದ ಅನಿಲ್ ಗೌಡ, ಅರುಣ್, ವಿವೇಕ್, ಮನು, ಕಾರ್ತಿಕ್, ಸಾಗರ್, ಪೂರ್ಣಾ, ಗೌತಮ್ ಸೇರಿದಂತೆ ಅನೇಕರು ಹಾಜರಿದ್ದರು. ಗೆಳೆಯನ ನೆನಪಿನಲ್ಲಿ ಎಲ್ಲರೂ ರಕ್ತದಾನ ಮಾಡಿದರು. ಸಂಚಾರಿ ವಿಜಯ್ ಅವರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

    ವಿಜಯ್ ಬದುಕಿದ್ದಾಗ ಇಂತಹ ಹತ್ತಾರು ಕೆಲಸಗಳನ್ನು ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆಹಾರ ಕಿಟ್ ವಿತರಣೆ, ಅಸಕ್ತ ಕಲಾವಿದರಿಗೆ ಸಹಾಯ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಹಾಯ ಸಹಕಾರವನ್ನು ವಿಜಯ್ ಮಾಡುತ್ತಿದ್ದರು. ಹಾಗಾಗಿ ಅವರ ಹುಟ್ಟು ಹಬ್ಬದ ದಿನಕ್ಕೆ ಇಂತಹ ಕೆಲಸಕ್ಕೆ ಮುಂದಾಗಿದ್ದೇವೆ ಅಂತಾರೆ ವಿಜಯ್ ಸ್ನೇಹಿತ ಅನಿಲ್ ಗೌಡ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಣ್ಣ ಹುಟ್ಟು ಹಬ್ಬಕ್ಕೆ ಆಟೋ ಓಡಿಸಿಕೊಂಡೇ ಬೆಂಗಳೂರಿಗೆ ಬಂದ ಕಾಫಿನಾಡು ಚಂದು

    ಶಿವಣ್ಣ ಹುಟ್ಟು ಹಬ್ಬಕ್ಕೆ ಆಟೋ ಓಡಿಸಿಕೊಂಡೇ ಬೆಂಗಳೂರಿಗೆ ಬಂದ ಕಾಫಿನಾಡು ಚಂದು

    ‘ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ.. ಈ ಕಾಫಿನಾಡು ಚಂದು ಮಾಡುವ ನಮಸ್ಕಾರಗಳು’ ಎನ್ನುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮನರಂಜನೆ ನೀಡುವ ಕಾಫಿನಾಡು ಚಂದು (Coffee Nadu Chandu) ಇಂದು ಬೆಂಗಳೂರಿನಲ್ಲಿ (Bangalore) ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಚಂದು, ಅದೇ ಆಟೋನಲ್ಲೇ ಶಿವರಾಜ್ ಕುಮಾರ್ ಹುಟ್ಟು ಹಬ್ಬವನ್ನು ಆಚರಿಸಲು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

    ಶಿವರಾಜ್ ಕುಮಾರ್ (Shivaraj Kumar) ಮನೆ ಮುಂದೆ ಆಟೋ ನಿಲ್ಲಿಸಿ, ನೆಚ್ಚಿನ ನಟನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಶಿವಣ್ಣನ ಅಭಿಮಾನಿ. ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಬಂದಿದ್ದೇನೆ. ನನಗೆ ಶಿವಣ್ಣನೇ ದೇವರು ಆಗಿರುವುದರಿಂದ ಕಾಣಲು ಬಂದಿರುವೆ’ ಎಂದಿದ್ದಾರೆ. ಇದನ್ನೂ ಓದಿ:‘ದಸರಾ’ ನಂತರ ಮತ್ತೆ ಜೊತೆಯಾದ ಸತೀಶ್ ನೀನಾಸಂ ಮತ್ತು ಶರ್ಮಿಳಾ

     

    ಶಿವರಾಜ್ ಕುಮಾರ್ ಬರ್ತಡೇಗೆ (Birthday) ಫ್ಯಾನ್ಸ್ ಕಡೆಯಿಂದ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾತ್ರಿ 11:30ಕ್ಕೆ ನಾಗವಾರದ ಮನೆಯಲ್ಲಿ ಆಪ್ತರ ಜೊತೆ ಆಚರಣೆ ಶಿವಣ್ಣ, ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ಬೆಳಗ್ಗೆ 8ರಿಂದ 10ಗಂಟೆಯವರೆಗೆ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದರು. ಬಳಿಕ 10:30ಕ್ಕೆ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಪೂಜೆ ಮಾಡಲಾಗಿದೆ. ಇದಾದ ನಂತರ ಶಿವಣ್ಣ ನಟನೆಯ ಘೋಸ್ಟ್ ಸಿನಿಮಾದ ಟೀಸರ್ 11:45ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ ಲಾಂಚ್ ಆಗಿದೆ. ಮತ್ತೆ ಸಂಜೆ ನಾಗವಾರದ ಮನೆಯಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲಿದ್ದಾರೆ.

     

    ಶಿವರಾಜ್‌ಕುಮಾರ್ ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ‘ಘೋಸ್ಟ್’ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಟ್ಟಿದ್ದಾರೆ. ಅದರ ಜೊತೆಗೆ ಈ ಬಿಗ್ ಡ್ಯಾಡಿ ಅಂದರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡುವ ಹಾಗೇ ಮಾಡಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಪತ್ನಿ ಕೊಟ್ಟ ಗಿಫ್ಟ್ : ಭಾವುಕರಾದ ಫ್ಯಾನ್ಸ್

    ಪತಿ ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಪತ್ನಿ ಕೊಟ್ಟ ಗಿಫ್ಟ್ : ಭಾವುಕರಾದ ಫ್ಯಾನ್ಸ್

    ಟ, ನಿರ್ಮಾಪಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ತಮ್ಮ ಹುಟ್ಟುಹಬ್ಬವನ್ನು (Birthday) ನಿನ್ನೆ ಬೆಂಗಳೂರಿನ ನಂದಿಲಿಂಕ್ ಗ್ರೌಂಡ್ಸ್ ನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಡು ರಿಷಬ್ ಶೆಟ್ಟಿ ಭಾವುಕರಾದರು.

    ನನ್ನಂತ ಸಣ್ಣ ಹಳ್ಳಿಯಿಂದ ಬಂದ ಮಧ್ಯಮ ಕುಟುಂಬದ ಹುಡುಗ ಸಿನಿಮಾ ಕನಸು ಕಂಡು ನಿಮ್ಮ ಮನದಲ್ಲಿ ಜಾಗ ಮಾಡಿಕೊಳ್ಳಬಹುದೆಂದು ನೀವು ಸಾಬೀತುಪಡಿಸಿದ್ದೀರಾ.  “ಕಾಂತಾರ” ಸಿನಿಮಾಕ್ಕೆ ಕನ್ನಡಿಗರು ತೋರಿಸಿದ ಪ್ರೀತಿಯಿಂದ ಇವತ್ತು ಅದು ಜಗತ್ತಿನ ಸಿನಿಮಾವಾಗಿದೆ, ಅದ್ದರಿಂದ ನಿಮ್ಮನ್ನು ಭೇಟಿಯಾಗಿ  ಕೃತಜ್ಞತೆ ಸಲ್ಲಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ, ಆ ದಿನ ಇವತ್ತು ನನ್ನ ಹುಟ್ಟುಹಬ್ಬದ ಮೂಲಕ ಒದಗಿ ಬಂದಿದೆ. ಮಳೆ ಬಂದರು ತಾವೆಲ್ಲ ಇಲ್ಲಿಗೆ ಬಂದು ತೋರಿಸುತ್ತಿರುವ  ಪ್ರಿತಿಯ ಋಣವನ್ನು ನಾನು ಸಾಯುವವರೆಗೂ ನನ್ನ ಸಿನಿಮಾ ಮತ್ತು ಕೆಲಸದ ಮೂಲಕ ತೀರುಸುತ್ತಲೆ ಇರುತ್ತೇನೆ ಎಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾವುಕರಾಗಿ ರಿಷಬ್ ಶೆಟ್ಟಿ ನುಡಿದರು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಈ ಕಾರ್ಯಕ್ರಮವನ್ನು ಅಯೋಜಿಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ, ತಮ್ಮ ಮಡದಿ ಪ್ರಗತಿ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿಗೆ ಅವರಿಗೆ ರಿಷಬ್ ಶೆಟ್ಟಿ ಧನ್ಯವಾದ ತಿಳಿಸಿದರು. ರಿಷಬ್ ಶೆಟ್ಟಿ ಸ್ನೇಹಿತ ಪ್ರಮೋದ್ ಶೆಟ್ಟಿ ಮಾತನಾಡುತ್ತಾ,  ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಜವಾಬ್ದಾರಿಯನ್ನು ರಿಷಬ್ ವಹಿಸುತ್ತಿದ್ದರು, ಆದರೆ ಯಾರಿಗೂ ಬಹಿರಂಗ ಪಡಿಸಿರಲಿಲ್ಲ’ ಎಂದು ರಿಷಬ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.

    ಯಾವುದೇ ಉಡಗೊರೆಯನ್ನ ಇಷ್ಟ ಪಡದ ತಮ್ಮ ಗಂಡನಿಗೆ, ಹುಟ್ಟುಹಬ್ಬದ ಉಡುಗೊರೆಯಾಗಿ  ‘ರಿಷಬ್ ಶೆಟ್ಟಿ ಫೌಂಡೇಶನ್’ ಎಂಬ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ನೀಡುವ ಸಂಸ್ಥೆಯನ್ನು ರಿಷಬ್ ಅವರ ಹುಟ್ಟುಹಬ್ಬದ ದಿನದಿಂದಲೇ ಆರಂಭಿಸುವುದಾಗಿ ಪ್ರಗತಿ ರಿಷಬ್  ಶೆಟ್ಟಿ (Pragati Shetty) ತಿಳಿಸಿದರು.

    ಕರ್ನಾಟಕವಲ್ಲದೆ ಬೇರೆ ರಾಜ್ಯಗಳಿಂದಲೂ ರಿಷಬ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮಳೆಯನ್ನ ಲೆಕ್ಕಿಸದೆ ಆಗಮಿಸಿದ್ದರು. ಎಲ್ಲಾ ನಟರ ಅಭಿಮಾನಿಗಳು  ರಿಷಬ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಹುಲಿ ವೇಷ ಮತ್ತು ಚಂಡೆ ಕಾರ್ಯಕ್ರಮ ಸಮಾರಂಭದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Breaking – ಸ್ಯಾಂಡಲ್ ವುಡ್ ಹಿರಿಯ ನಟ, ನಿರ್ದೇಶಕ ಸಿ.ವಿ.ಶಿವಶಂಕರ್ ವಿಧಿವಶ

    Breaking – ಸ್ಯಾಂಡಲ್ ವುಡ್ ಹಿರಿಯ ನಟ, ನಿರ್ದೇಶಕ ಸಿ.ವಿ.ಶಿವಶಂಕರ್ ವಿಧಿವಶ

    ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ ಹಾಡಿನ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಸ್ಯಾಂಡಲ್ ವುಡ್ (Sandalwood) ನ ಹಿರಿಯ ನಟ, ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಸಿ.ವಿ.ಶಿವಶಂಕರ್ (90)  (C.V. Shivashankar) ಇಂದು ಮಧ್ಯಾಹ್ನ ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ. ಮೊನ್ನೆಯಷ್ಟೇ ಅವರ ಮಗನ ಜೊತೆಗಿನ ವಿಡಿಯೋವೊಂದು ವೈರಲ್ ಆಗಿತ್ತು.

    ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಊಟ ಮುಗಿಸಿದ್ದಾರೆ. ಪೂಜೆ ಮಾಡಿದ್ದಾರೆ. ಆ ಬಳಿಕ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೂ, ಅವರು ಬದುಕುಳಿಯಲಿಲ್ಲ ಎಂದಿದ್ದಾರೆ ಕುಟುಂಬಸ್ಥರು. ಶಿವಶಂಕರ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರದೇ ಇದ್ದರೂ, ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಬಾಲನಟನಾಗಿ ರಂಗಭೂಮಿ ಪ್ರವೇಶ ಮಾಡಿದ್ದ ಸಿ.ವಿ ಶಿವಶಂಕರ್, ಬಾಲನಟರಾಗಿಯೇ ಅನೇಕ ನಾಟಕಗಳನ್ನು ಮಾಡಿದ್ದಾರೆ. ನಂತರ ಅವರು ಸಿನಿಮಾ ರಂಗವನ್ನು ಪ್ರವೇಶಿಸಿ, ರತ್ನ ಮಂಜಡಿ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಅವರು, ‘ಮನೆ ಕಟ್ಟಿ ನೋಡು’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದವರು.

    ಸಿ. ವಿ ಶಿವಶಂಕರ್ ಅವರ ಸಾಧನೆಯನ್ನು ಗುರುತಿಸಿ, 1991ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ ರಾಜ್ ಕುಮಾರ್ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಸ್ಪೈ ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದು ದೋಸೆ ಚಪ್ಪರಿಸಿದ ನಟ ನಿಖಿಲ್

    ಸ್ಪೈ ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದು ದೋಸೆ ಚಪ್ಪರಿಸಿದ ನಟ ನಿಖಿಲ್

    ಬೆಂಗಳೂರಿನ (Bangalore) ಸಿಟಿಆರ್ ಹೋಟೆಲ್ ದೋಸೆ ಇಂಡಿಯಾಗೆ ಫೇಮಸ್. ಈ ಹೋಟೆಲ್ ನಲ್ಲಿ ಬಂದ ಸೆಲೆಬ್ರಿಟಿಗಳೆಲ್ಲಾ ದೋಸೆ ರುಚಿ ಸವಿಯುತ್ತಾರೆ. ಅದರಂತೆ ನಿಖಿಲ್ ಸಿದ್ಧಾರ್ಥ್ (Nikhil Siddharth) ಸಿಟಿಆರ್ ಹೋಟೆಲ್ ನಲ್ಲಿ ದೋಸೆಯನ್ನು ಚಪ್ಪರಿಸಿ ತಿಂದಿದ್ದಾರೆ. ಇದೇ ವೇಳೆ ಅಭಿಮಾನಿಗಳು ನಿಖಿಲ್ ಜೊತೆ ಫೋಟೋಗೆ ಮುಗಿಬಿದ್ದರು. ಬಳಿಕ ರಾಮೇಶ್ವರಂ ಕೆಫೆಯಲ್ಲಿ ಕಾಫಿ ಕುಡಿದರು.

    ಸ್ಪೈ (Spy) ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ತಮ್ಮ ಸಿನಿಮಾದ ಪ್ರಚಾರದ ನಡುವೆಯೂ ದೋಸೆ ತಿಂದು ಸಂಭ‍್ರಮಿಸಿದ್ದಾರೆ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಸಿದ್ಧಾರ್ಥ್, ಕಾರ್ತಿಕೇಯ ಸಿನಿಮಾಗೆ ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡ ಪ್ರೇಕ್ಷಕರಿಗೆ ನನ್ನ ಧನ್ಯವಾದ. ಅದೇ ರೀತಿ ಜೂನ್ 29ಕ್ಕೆ ಬರ್ತಿರುವ ಸ್ಪೈ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿ. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಸಿನಿಮಾ ಮಾಡಿರೋದು ನನಗೆ ಹೆಮ್ಮೆ ಇದೆ. ಅವರ ಸಾವಿನ ಬಗ್ಗೆ ಈ ಚಿತ್ರದ ಮೂಲಕ ಒಂದು ಕ್ಲಾರಿಟಿ ಸಿಗಲಿದೆ. ಆಕ್ಷನ್, ಎಂಟರ್‌ಟೈನರ್ ಎಲ್ಲವೂ ಚಿತ್ರದಲ್ಲಿದೆ. ಪ್ರತಿಯೊಬ್ಬ ಭಾರತೀಯ ಈ ಸಿನಿಮಾ ನೋಡಲೇಬೇಕು. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

    ನಟಿ ಐಶ್ವರ್ಯ ಮೆನನ್ (Aishwarya Menon) ಮಾತನಾಡಿ, ಇದೇ 29ಕ್ಕೆ ಸ್ಪೈ ಸಿನಿಮಾ ರಿಲೀಸ್ ಆಗ್ತಿದೆ. ಪ್ರತಿಯೊಬ್ಬರೂ ಚಿತ್ರಕ್ಕೆ ಬೆಂಬಲ ನೀಡಿ. ನಾನು ವೈಷ್ಣವಿ ಎಂಬ ಪಾತ್ರದಲ್ಲಿ ನಟಿಸಿದ್ದು, ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದೇನೆ. ದಾಸವಾಳ ಹಾಗೂ ನಮೋ ಭೂತಾತ್ಮ ಕನ್ನಡ ಸಿನಿಮಾಗಳಲ್ಲಿ ನನ್ನ ಜರ್ನಿ ಶುರುವಾಗಿದೆ. ಕನ್ನಡ ಇಂಡಸ್ಟ್ರೀ ನನಗೆ ಬಹಳ ವಿಶೇಷ. ಸ್ಪೈ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ. ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗಲಿದೆ ಎಂದರು.

    ಸುಭಾಷ್ ಚಂದ್ರ ಬೋಸ್ (Subhash Chandra Bose) ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸ್ಪೈ ಸಿನಿಮಾಗೆ ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್‌ ಸ್ಪೈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಎವರು ಮತ್ತು ಹಿಟ್‌ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್‌ ರೆಡ್ಡಿ, ಚರಣ್‌ ರಾಜ್‌ ಉಪ್ಪಲಪತಿ ಚಿತ್ರ ನಿರ್ಮಿಸಿದ್ದಾರೆ. ಸನ್ಯಾ ಠಾಕೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸ್ಪೆಷಲ್‌ ರೋಲ್‌ ನಲ್ಲಿ ಬಾಹುಬಲಿ ಬಲ್ಲಾಳದೇವ ರಾಣಾ ದಗ್ಗುಭಾಟಿ ಕೂಡ ಕಾಣಿಸಿಕೊಂಡಿದ್ದಾರೆ. ಅಭಿನವ್‌ ಗೋಮತಮ್, ಮಕರಂದ್‌ ದೇಶಪಾಂಡೆ, ನಿತಿನ್‌ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್‌, ಸೋನಿಯಾ ನರೇಶ್‌ ಮತ್ತು ಇತರರು ತಾರಾಬಳಗದಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ನಿಖಿಲ್ ಸಿದ್ಧಾರ್ಥ್  ಪ್ಯಾನ್ ಇಂಡಿಯಾ ಸ್ಪೈ 29ಕ್ಕೆ ಬಿಡುಗಡೆಯಾಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಸ್ಪೈ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದ ನಿಖಿಲ್ ಸಿದ್ಧಾರ್ಥ್

    ಸ್ಪೈ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದ ನಿಖಿಲ್ ಸಿದ್ಧಾರ್ಥ್

    ಟಾಲಿವುಡ್ (Tollywood) ಚಿತ್ರರಂಗದ ಟ್ಯಾಲೆಂಟೆಡ್ ನಟ ಅಖಿಲ್ ಸಿದ್ಧಾರ್ಥ್ (Akhil Siddharth) ನಟನೆಯ ಬಹು ನಿರೀಕ್ಷಿತ ಸಿನಿಮಾ ಸ್ಪೈ (Spy) ಇದೇ 29ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮುಂಬೈನಲ್ಲಿ ಪ್ರಮೋಷನ್ ಮುಗಿಸಿರುವ ಸ್ಪೈ ಟೀಂ ಈಗ ಬೆಂಗಳೂರಿಗೆ (Bangalore) ಬಂದಿಳಿದಿದೆ.

    ನಾಯಕ ನಿಖಿಲ್ ಸಿದ್ಧಾರ್ಥ್, ನಾಯಕಿ ಐಶ್ವರ್ಯ ಮೆನನ್ (Aishwarya Menon) ಸಿಲಿಕಾನ್ ಸಿಟಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಸ್ಪೈ ಸಿನಿಮಾಗೆ ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್‌ ಸ್ಪೈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಎವರು ಮತ್ತು ಹಿಟ್‌ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್‌ ರೆಡ್ಡಿ, ಚರಣ್‌ ರಾಜ್‌ ಉಪ್ಪಲಪತಿ ಚಿತ್ರ ನಿರ್ಮಿಸಿದ್ದಾರೆ. ಸನ್ಯಾ ಠಾಕೂರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸ್ಪೆಷಲ್‌ ರೋಲ್‌ ನಲ್ಲಿ ಬಾಹುಬಲಿ ಬಲ್ಲಾಳದೇವ ರಾಣಾ ದಗ್ಗುಭಾಟಿ ಕೂಡ ಕಾಣಿಸಿಕೊಂಡಿದ್ದಾರೆ.

    ಅಭಿನವ್‌ ಗೋಮತಮ್, ಮಕರಂದ್‌ ದೇಶಪಾಂಡೆ, ನಿತಿನ್‌ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್‌, ಸೋನಿಯಾ ನರೇಶ್‌ ಮತ್ತು ಇತರರು ತಾರಾಬಳಗದಲ್ಲಿದ್ದಾರೆ. ಈಗಾಗಲೇ ಕಾರ್ತಿಕೇಯ, ಕಾರ್ತಿಕೇಯ-2 ನಂತಹ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ನಿಖಿಲ್ ಸಿದ್ಧಾರ್ಥ್ ಸ್ಪೈ ಮೇಲೆ ನಿರೀಕ್ಷೆ ಹೆಚ್ಚಿದೆ.

  • ಮೇರುನಟ ಡಾ.ವಿಷ್ಣು ಅವರ 52ನೇ ಪುತ್ಥಳಿ ಅನಾವರಣ

    ಮೇರುನಟ ಡಾ.ವಿಷ್ಣು ಅವರ 52ನೇ ಪುತ್ಥಳಿ ಅನಾವರಣ

    ನ್ನಡದ ಮೇರುನಟ ಡಾ. ವಿಷ್ಣುವರ್ಧನ್ ಅವರ ಪುತ್ಥಳಿಗಳು ರಾಜ್ಯಾದ್ಯಂತ ತಲೆಯೆತ್ತಿವೆ. ವಿಷ್ಣು ಅಭಿಮಾನಿಗಳು ರಾಜ್ಯದ ನಾನಾ ಕಡೆ ಅವರ ಪುತ್ಥಳಿಯನ್ನು (Putthali) ಪ್ರತಿಷ್ಠಾಪಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ (Bangalore) ಕರುನಾಡ  ತಿಲಕ ಡಾ.ವಿಷ್ಣು ಕನ್ನಡ ಅಭಿಮಾನಿಗಳ‌ ಸಂಘದ ವತಿಯಿಂದ ಗಿರಿನಗರ ಹಿರಣ್ಣನ ಗುಟ್ಟೆ ಸರ್ಕಲ್ ನಲ್ಲಿ  ಡಾ‌.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಅವರ  ಉಪಸ್ಥಿತಿಯಲ್ಲಿ ಶಾಸಕ ಎಂ ಕೃಷ್ಣಪ್ಪ (M. Krishnappa) ಅಮೃತ ಹಸ್ತದಿಂದ ಪುತ್ಥಳಿ ಅನಾವರಣವಾಯಿತು

    ವಿಶೇಷ ಏನಂದ್ರೆ ಇದು ವೀರಕಪುತ್ರ ಶ್ರೀನಿವಾಸ್ ಅವರು ವೈಯಕ್ತಿಕವಾಗಿ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಕೊಡುಗೆಯಾಗಿ ನೀಡುತ್ತಿರುವ 52 ನೇ ಪುತ್ಥಳಿ ಆಗಿರುವುದು ವಿಶೇಷ. ವಿಷ್ಣು ಅವರ ಹೆಸರಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಾ ಬಂದಿರುವ ವೀರಕಪುತ್ರ ಶ್ರೀನಿವಾಸ್ ಸಾಕಷ್ಟು ಕಡೆ ಪುತ್ಥಳಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಮೊನ್ನೆಯಷ್ಟೇ ವಿಷ್ಣುವರ್ಧನ್ (Dr. Vishnuvardhan) ಹೆಸರಿನಲ್ಲಿ ದಾಖಲೆ (Record) ಯೊಂದು  ಸೃಷ್ಟಿಯಾಗಿತ್ತು. ವೀರಕಪುತ್ರ ಶ್ರೀನಿವಾಸ್ ಮತ್ತು ವಿಷ್ಣು ಸೇನಾನಿಗಳು ವಿಷ್ಣುವರ್ಧನ್ ಹುಟ್ಟು ಹಬ್ಬದಂದು ಕಟೌಟ್ ಜಾತ್ರೆ ಮಾಡಿದ್ದರು. ನೆಚ್ಚಿನ ನಟನ 52 ಕಟೌಟ್‌ಗಳನ್ನು ಅಂದು ಬೆಂಗಳೂರಿನ ಬಾಲಣ್ಣ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಮುಂದೆ ನಿಲ್ಲಿಸಿದ್ದರು. ಇದನ್ನು ಪರಿಗಣಿಸಿ ಏಷ್ಯಾ ಬುಕ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅದು ದಾಖಲಾಗಿತ್ತು.

    ಡಾ. ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನಲೆಯಲ್ಲಿ ಅವರ 50 ಸೇನಾನಿಗಳು ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022ರ ಸೆಪ್ಟೆಂಬರ್‌ 18 ರಂದು ಬೆಂಗಳೂರಿನ ಡಾ. ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ ‘ಕಟೌಟ್‌ ಜಾತ್ರೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಸಹ ಹಾಕಿಸಿದ್ದರು. ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು.

     

    ಅಂದೇ ಈ ಕಟೌಟ್‌ ಜಾತ್ರೆಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಯು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಸಹ ಮಾಡಿದ್ದರು. ನಂತರ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ‌ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ.

  • ಸಿಇಟಿ ಸೀಟು ಹಂಚಿಕೆ – ಜೂ. 27ರಿಂದ ಜು. 15ರವರೆಗೆ ದಾಖಲೆಗಳ ಆನ್‌ಲೈನ್ ಪರಿಶೀಲನೆ

    ಸಿಇಟಿ ಸೀಟು ಹಂಚಿಕೆ – ಜೂ. 27ರಿಂದ ಜು. 15ರವರೆಗೆ ದಾಖಲೆಗಳ ಆನ್‌ಲೈನ್ ಪರಿಶೀಲನೆ

    ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಬಯಸಿ ಈ ವರ್ಷ ಸಿಇಟಿ ಪರೀಕ್ಷೆ (CET Exam) ಬರೆದು ಎ ಅರ್ಹತಾ ಕಂಡಿಕೆಯಡಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣಪತ್ರ ಮತ್ತು ಇತರ ದಾಖಲಾತಿಗಳ ಆನ್‌ಲೈನ್ ಪರಿಶೀಲನೆ ಜೂನ್ 27ರಿಂದ ಜುಲೈ 15ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಇದಕ್ಕಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority)ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.

    ಈ ಸಂಬಂಧ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಯಾವ ರ‍್ಯಾಂಕಿಂಗ್ ಪಡೆದಿರುವ ಅಭ್ಯರ್ಥಿಗಳು ಯಾವ ದಿನಾಂಕದಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳು ಯಾವ ದಾಖಲಾತಿಗಳನ್ನು ಹಾಜರುಪಡಿಸಬೇಕು ಎಂದೂ ವಿವರವಾಗಿ ಸೂಚಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ ನೋಡಬಹುದು ಎಂದಿದ್ದಾರೆ.

    ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಮುಂತಾದವುಗಳ ಪರಿಶೀಲನೆ ನಿಯಮಗಳ ಪ್ರಕಾರ ನಡೆಯಲಿದೆ. ಜಾತಿ/ಆದಾಯ ಪ್ರಮಾಣಪತ್ರಗಳನ್ನು ಅಭ್ಯರ್ಥಿಗಳ ಹೆಸರಿನಲ್ಲೇ ಪಡೆದಿರಬೇಕು ಎಂದು ಅವರು ಹೇಳಿದ್ದಾರೆ.

    ಇವುಗಳ ಜೊತೆಗೆ ಅಭ್ಯರ್ಥಿಗಳು ಸಿಇಟಿ ಪ್ರವೇಶಪತ್ರ, ಅಂತಿಮವಾಗಿ ಅರ್ಜಿ ಪ್ರಿಂಟ್ ಮಾಡಿದ ಪ್ರತಿ, ಬಿಇಒ/ಡಿಡಿಪಿಯು ಅವರ ಮೇಲುರುಜು ಮಾಡಿರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ ಇವುಗಳನ್ನೂ ಪರಿಶೀಲನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಮೆರಿಕ ಉಪರಾಯಭಾರಿ ಕಚೇರಿ ಪ್ರಾರಂಭ; ಪ್ರಧಾನಿ ಪ್ರಯತ್ನ ಶ್ಲಾಘಿಸಿದ ಬಿಜೆಪಿ ಮುಖಂಡ ಆನಂದ್

    ‘ಎ’ ಅರ್ಹತಾ ಕಂಡಿಕೆಯಡಿ ಸೀಟು ಬಯಸುವ ಅಭ್ಯರ್ಥಿಗಳು ಕರ್ನಾಟಕದ ಯಾವುದಾದರೂ ಸರ್ಕಾರಿ ಶಾಲೆಯಲ್ಲಿ ಕನಿಷ್ಠಪಕ್ಷ 7 ವರ್ಷಗಳಾದರೂ ವ್ಯಾಸಂಗ ಮಾಡಿರಬೇಕು. ಹಾಗೂ ಎಸ್‌ಎಸ್‌ಎಲ್‌ಸಿ/ಪಿಯುಸಿ ಪರೀಕ್ಷೆಯನ್ನು ಕರ್ನಾಟಕ ರಾಜ್ಯದಲ್ಲೇ ಬರೆದಿರಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

    ಉಳಿದಂತೆ ಬಿ, ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಅರ್ಹತಾ ಕಂಡಿಕೆಗಳಡಿ ಸೀಟು ಬಯಸಿರುವ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಯು ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಆಫ್‌ಲೈನ್ ಮಾದರಿಯಲ್ಲಿ ನಡೆಯಲಿದೆ. ಈ ಸಂಬಂಧದ ದಿನಾಂಕಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ – ಜಗದೀಶ್‌ ಶೆಟ್ಟರ್‌ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ

  • ಮಗನ ವಿರುದ್ಧ ದೂರು ನೀಡಿದ ಹಿರಿಯ ನಟಿ ಶ್ಯಾಮಲಾದೇವಿ

    ಮಗನ ವಿರುದ್ಧ ದೂರು ನೀಡಿದ ಹಿರಿಯ ನಟಿ ಶ್ಯಾಮಲಾದೇವಿ

    ನ್ನಡ ಸಿನಿಮಾ ರಂಗದ ಹಿರಿಯ ನಟಿ (Actress) ಶ್ಯಾಮಲಾದೇವಿ (Shyamala Devi) ತಮ್ಮ ಮಗ ಹಾಗೂ ಸೊಸೆಯ ವಿರುದ್ಧವೇ ಪೊಲೀಸ್ ಠಾಣೆ (Police Station) ಮೆಟ್ಟಿಲು ಏರಿದ್ದಾರೆ. ಶ್ಯಾಮಲಾದೇವಿ ಅದೆಷ್ಟೋ ಚಲನಚಿತ್ರಗಳಲ್ಲಿ ನಟಿಸಿದ್ದ ಕಲಾವಿದೆ. ಸುಖ ದುಖಃದ ಪಾತ್ರಕ್ಕೆ ಜೀವ ತುಂಬಿದ ನಟಿಯೇ ಕಣ್ಣೀರು ಹಾಕುತ್ತಾ ಪೊಲೀಸ್ ಠಾಣೆಯ ಮುಂದೆ ನಿಲ್ಲುವಂತೆ ಆಗಿದೆ. ಇದಕ್ಕೆ ಕಾರಣವಾಗಿದ್ದು ಮಾತ್ರ ತಾನೇ ಜನ್ಮ ಕೊಟ್ಟ ಮಗ.

    ಸಾಕಷ್ಟು ಕನ್ನಡದ ಚಲನಚಿತ್ರದಲ್ಲಿ ನಟಿಸಿರೋ ಶ್ಯಾಮಲಾದೇವಿ ಇವತ್ತು ಕಣ್ಣೀರು ಹಾಕುತ್ತಾ ಬೀದಿಯಲ್ಲಿ ನಿಂತಿದ್ದಾರೆ. ಮಗ ನಿತೀನ್ ಮತ್ತು ಸೊಸೆ ಸ್ಮಿತಾ ಅವರೇ ಇವರ ಕಣ್ಣೀರಿಗೆ ಕಾರಣ ಆಗಿದ್ದಾರೆ. ಚಂದ್ರಲೇಔಟ್ ನ ಬಳಿ ಅಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ಮಗನ ಜೊತೆಯಲ್ಲಿ ಶ್ಯಾಮಲಾದೇವಿ ವಾಸವಾಗಿದ್ದಾರೆ. ಶ್ಯಾಮಲಾದೇವಿಗೆ ವಯಸ್ಸಾಗಿರೋದ್ರಿಂದ ಮಗ ನಿತೀನ್ ಮತ್ತು ಸೊಸೆ ಇಬ್ಬರೂ ಮನೆಯಿಂದ ಹೊರಗೆ ಹಾಕೋದಕ್ಕೆ ಪ್ರಯತ್ನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಇದನ್ನೂ ಓದಿ:ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ತಾಯಿ ಅನ್ನುವುದನ್ನೂ ಲೆಕ್ಕಿಸದೇ ಈ ಹಿರಿಯ ನಟಿಗೆ ಕೆಟ್ಟ ಕೆಟ್ಟ ಪದಗಳಿಂದ ಮಾತನಾಡೊದು, ಬೇಕಂತಲೇ ಹಿಂಸೆಯನ್ನು ಕೊಡೋದು ಮಾಡುತ್ತಾ ಇದ್ದಾರಂತೆ ಅಲ್ಲದೇ, ಕೈಗೆ ಸಿಕ್ಕ ವಸ್ತುಗಳಿಂದ ಶ್ಯಾಮಲಾದೇವಿಯ ಮೇಲೆ ಹಲ್ಲೆ ಮಾಡಿದ್ದಾರಂತೆ. ಮನೆಯಿಂದ ಹೊರಗೆ ಹಾಕೋದಕ್ಕಾಗಿಯೇ ಸರಿಯಾಗಿ ಮನೆಯಲ್ಲಿ ಊಟವನ್ನು ಹಾಕುತ್ತಾ ಇಲ್ಲ, ನನ್ನ ಊಟವನ್ನು ನಾನೇ ಮಾಡಿಕೊಂಡರೂ ಹಿಂಸೆ ಕೊಡ್ತಾ ಇದ್ದಾರೆ ಅಂತ ಬಸವನಗುಡಿ ಪೊಲೀಸ್ ಠಾಣೆಗೆ ಮಗ ಹಾಗೂ ಸೊಸೆ ಮೇಲೆ ದೂರು ನೀಡಿದ್ದಾರೆ ಶ್ಯಾಮಲಾ ದೇವಿ.

    ಈ ಹಿಂದೆಯೂ ಶ್ಯಾಮಲಾದೇವಿ ಅವರು ಮಗ ಹಾಗೂ ಸೊಸೆಯ ವಿರುದ್ಧ ಹಿರಿಯ ನಾಗರೀಕರ ವೇದಿಕೆಗೆ ದೂರು ನೀಡಿದ್ದರು. ಆಗ ಮಗ ಮತ್ತು ಸೊಸೆ ತಪ್ಪೊಪ್ಪಿಕೊಂಡು ಮತ್ತೆ ತಾಯಿಯೊಂದಿಗೆ ವಾಸಿಸುತ್ತಿದ್ದರು. ಇದೀಗ ಮತ್ತೆ ತಾಯಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

  • ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದ ನಿರ್ದೇಶಕ ಶಶಾಂಕ್: ಏನಿದೆ ಪತ್ರದಲ್ಲಿ?

    ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದ ನಿರ್ದೇಶಕ ಶಶಾಂಕ್: ಏನಿದೆ ಪತ್ರದಲ್ಲಿ?

    ನ್ನಡದ ಖ್ಯಾತ ನಿರ್ದೇಶಕ ಶಶಾಂಕ್ (Shashank), ಬೆಂಗಳೂರು ಅಭಿವೃದ್ಧಿ ಕುರಿತಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ತುರ್ತಾಗಿ ಬೆಂಗಳೂರಿಗೆ ಆಗಬೇಕಾಗಿದ್ದೇನು ಎನ್ನುವುದನ್ನು ಆ ಪತ್ರದಲ್ಲಿ ತಿಳಿಸಿದ್ದಾರೆ. ಆ ಪತ್ರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಶಶಾಂಕ್ ಪತ್ರಕ್ಕೆ ಬೆಂಗಳೂರಿಗರು ಮೆಚ್ಚುಗೆ ಸೂಚಿಸಿದ್ದಾರೆ.

    ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ‘ನಮ್ಮೆಲ್ಲರ ಹೆಮ್ಮೆಯ ಬೆಂಗಳೂರು ನಗರ, ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವುದು ತಮಗೆ ಗೊತ್ತೇ ಇದೆ. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಇದರ ನಿವಾರಣೆಯ ಕುರಿತಾಗಿ ಕಾರ್ಯಪ್ರವೃತ್ತರಾಗಿರುವುದು ನಿಜಕ್ಕೂ ಶ್ಲ್ಯಾಘನೀಯ. ಇದೀಗ, ಕನ್ನಡಿಗರು ಅತ್ಯಂತ ತುರ್ತಾಗಿ ಎದುರು ನೋಡುತ್ತಿರುವ ಎರಡು ಯೋಜನೆಗಳನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಈ ಪತ್ರದ ಮೂಲಕ ಉದ್ದೇಶ’ ಎಂದು ಶಶಾಂತ್ ಪತ್ರ ಶುರು ಮಾಡಿದ್ದಾರೆ. ಇದನ್ನೂ ಓದಿ:ಖ್ಯಾತ ಕಥೆಗಾರ ಟಿ.ಕೆ. ದಯಾನಂದ್ ಬರೆದ ಕಥೆಯೇ ‘ಟೋಬಿ’ ಸಿನಿಮಾ

    ಮುಂದುವರೆದು, ‘ಮೊದಲನೆಯದು- ನೆಲಮಂಗಲ ರಸ್ತೆಯ ಗೊರಗುಂಟೆ ಪಾಳ್ಯ ಜಂಕ್ಷನ್. ರಾಜಧಾನಿಯಿಂದ ಮುಕ್ಕಾಲು ಭಾಗ ಕರ್ನಾಟಕಕ್ಕೆ ಹೋಗಲು, ಇದೇ ಹೆಬ್ಬಾಗಿಲು. ಹಲವಾರು ವರ್ಷಗಳಿಂದ ಇಲ್ಲಿ ಆಗುತ್ತಿರುವುದು ಟ್ರಾಫಿಕ್ ಜಾಮ್. ಅಸಹನೀಯವಾಗಿದೆ. ಶೀಘ್ರವೇ ಇದಕ್ಕೆ ಪರಿಹಾರ ಕಲ್ಪಿಸಿ’ ಎಂದು ಮೊದಲ ಬೇಡಿಕೆಯನ್ನು ಇಟ್ಟಿದ್ದು, ನಂತರ ಮತ್ತೊಂದು ಮಹತ್ವದ ಯೋಜನೆ ಬಗ್ಗೆಯೂ ಬರೆದುಕೊಂಡಿದ್ದಾರೆ.

    ಎರಡನೆಯದು ‘ ನೆಲಮಂಗಲ ಫ್ಲೈ ಓವರ್ ಮೇಲಿನ ಹೊರೆತಗ್ಗಿಸಲು ಅಭಿವೃದ್ಧಿಪಡಿಸಲಾಗುತ್ತಿರುವ ಮಾಗಡಿ ರಸ್ತೆ ವಿಚಾರ. ಒಮ್ಮೆ ಈಗಿನ ರಸ್ತೆ ಕಾಮಗಾರಿ ಪೂರ್ತಿಯಾಗಿ ಸಂಚಾರಕ್ಕೆ ಮುಕ್ತಗೊಂಡರೆ, ಅದೇ ರಸ್ತೆಯಲ್ಲಿರುವ ಸುಂಕದಕಟ್ಟಿ ಈಗಿನ ಗೊರಗುಂಟೆ ಪಾಳ್ಯ ಜಂಕ್ಷನಂತೆ ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆಗಳನ್ನು ಸೃಷ್ಟಿಸುವುದು ಪಕ್ಕಾ. ಆದ್ದರಿಂದ ಈಗಲೇ ಅದಕ್ಕೆ ಪರಿಹಾರ   ಕಂಡುಕೊಳ್ಳುವುದು ಸೂಕ್ತ. ಈ ಎರಡೂ ಯೋಜನೆಗಳು ರಾಜಧಾನಿಯನ್ನು ಬಹುತೇಕ ಕರ್ನಾಟಕಕ್ಕೆ ಸಂಪರ್ಕಿಸುವ ಮತ್ತು  ಕನ್ನಡಿಗರು ಅತೀ ಹೆಚ್ಚು ವಾಸವಿರುವ ಭಾಗಗಳು. ಇವುಗಳ ಅನುಷ್ಠಾನ, ಆ ಭಾಗದ ಕನ್ನಡಿಗರಿಗೆ ನೀವು ನೀಡುವ ಉತ್ತಮ ಕಾಣಿಕೆಯಾಗುತ್ತವೆ’ ಎಂದು ಶಶಾಂಕ್ ಪತ್ರದಲ್ಲಿ ಬರೆದಿದ್ದಾರೆ.