Tag: Bangalore

  • ಬಿ.ಎಸ್.ವೈ ಆಸ್ಪತ್ರೆಗೆ ದಾಖಲು – ಎಲ್ಲ ವಿಚಾರವೂ ಗುಪ್ತ್ ಗುಪ್ತ್!

    ಬಿ.ಎಸ್.ವೈ ಆಸ್ಪತ್ರೆಗೆ ದಾಖಲು – ಎಲ್ಲ ವಿಚಾರವೂ ಗುಪ್ತ್ ಗುಪ್ತ್!

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಯಡಿಯೂರಪ್ಪ ಆಪ್ತರು ಹಾಗೂ ಆಸ್ಪತ್ರೆ ಅಧಿಕೃತರು ಮಾತ್ರ ಯಡಿಯೂರಪ್ಪ ಅವರಿಗೆ ಏನೂ ಆಗಿಲ್ಲ, ಅವರನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರು ಸದಾ ಓಡಾಡುವ ಫಾರ್ಚೂನರ್ ಕಾರು ಮಾತ್ರ ಇನ್ನೂ ಆಸ್ಪತ್ರೆಯಲ್ಲೇ ಇದೆ.

    ಏನಾಗಿದೆ?: ಪಬ್ಲಿಕ್ ಟಿವಿಗೆ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಜ್ವರದಿಂದ ಯಡಿಯೂರಪ್ಪ ಬಳಲುತ್ತಿದ್ದಾರೆ. ಅವರಿಗೆ ಡಾ. ಪ್ರಮೋದ್ ಹಾಗೂ ಡಾ.ಜಯಚಂದ್ರ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರೆದಿದೆ. ನಿನ್ನೆ ರಾತ್ರಿ 9 ಗಂಟೆಗೆ ಬಿಎಸ್‍ವೈ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.

    ಯಡಿಯೂರಪ್ಪ ಆಪ್ತರು ಹಾಗೂ ಬಿಜೆಪಿ ನಾಯಕರು ಮಾತ್ರ ಅನಾರೋಗ್ಯ ವಿಚಾರ ಹೈಡ್ ಮಾಡುತ್ತಿದ್ದಾರೆ. ಆಸ್ಪತ್ರೆ ಹಾಗೂ ಬಿಜೆಪಿ ಮೂಲಗಳು ಯಡಿಯೂರಪ್ಪ ಅವರು ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ಯಡಿಯೂರಪ್ಪ ಪಾರ್ಚುನರ್ ಗಾಡಿ ಆಸ್ಪತ್ರೆಯಲ್ಲಿಯೇ ಇದೆ. ಇದ್ರಿಂದ ಯಡಿಯೂರಪ್ಪ ಆಸ್ಪತ್ರೆಯಿಂದ ಇನ್ನು ಡಿಸ್‍ಜಾರ್ಜ್ ಆಗಿಲ್ಲ ಅನ್ನೋದು ಖಚಿತವಾಗಿದೆ. ನಮ್ಮ ಪ್ರತಿನಿಧಿಗೆ ಸಿಕ್ಕಿರುವ ಮಾಹಿತಿಯಂತೆ ಯಡಿಯೂರಪ್ಪನವರಿಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸಂಜೆಯವರೆಗೂ ಅಬ್ಸರ್ವೇಷನ್ ನಲ್ಲಿರುವಂತೆ ಸೂಚಿಸಿದ್ದಾರೆ. ಇಂದು ಬೆಳಿಗ್ಗೆ ಡಿಸ್ಚಾರ್ಜ್ ಮಾಡುವಂತೆ ಬಿಎಸ್‍ವೈ ಮನವಿ ಮಾಡಿದ್ದಾರೆ. ಆದ್ರೆ ಸಂಜೆಯವರೆಗೂ ಆಸ್ಪತ್ರೆಯಲ್ಲೇ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ.

    ಕಳೆದ ಭಾನುವಾರವೂ ಬಿಎಸ್‍ವೈ ಆಸ್ಪತ್ರೆಗೆ ಆಡ್ಮಿಟ್ ಆಗಿದ್ರು. ಬಳಿಕ ಸೋಮವಾರ ಮತ್ತೆ ಡಿಸ್ ಜಾರ್ಜ್ ಆಗಿದ್ದಾರೆ. ನಿನ್ನೆ ರಾತ್ರಿ ಮತ್ತೆ ಆಡ್ಮಿಟ್ ಆಗಿದ್ದಾರೆ. ಡಾ.ಜಯಚಂದ್ರ ಟ್ರೀಟ್‍ಮೆಂಟ್ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ವೈದ್ಯರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಸದ್ಯ ಇದೇ ಆಸ್ಪತ್ರೆಯ ಬೇರೆ ವಿಭಾಗದವರನ್ನು ಸಂಪರ್ಕಿಸಿದಾಗ ಅವರು ನೀಡಿದ ಮಾಹಿತಿಯೇ ಬೇರೆ. ಅವರ ಮಾಹಿತಿ ಪ್ರಕಾರ ಯಡಿಯೂರಪ್ಪ ಇಲ್ಲಿಯೇ ಟ್ರೀಟ್‍ಮೆಂಟ್ ತೆಗೆದುಕೊಳ್ತಾರೆ. ಅವರಿಗೆ ಡಯಾಬಿಟಿಸ್ ಇದ್ದು ಪ್ರತಿ ಬಾರಿಯೂ ಟ್ರೀಟ್‍ಮೆಂಟ್ ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಯೋಸಹಜ ಸಮಸ್ಯೆಯಿಂದ ಯಡಿಯೂರಪ್ಪ ಬಳಲುತ್ತಿದ್ದು ಇತ್ತೀಚೆಗೆ ಸಾಕಷ್ಟು ಬಾರಿ ಅಡ್ಮಿಟ್ ಆಗುತ್ತಿದ್ರು. ಮುಖ್ಯ ವಾಗಿ ಮಧುಮೇಹದ ಸಮಸ್ಯೆಯೇ ಅವರನ್ನು ಹೆಚ್ಚಾಗಿ ಕಾಡುತ್ತಿತ್ತು.

    ಮೊನ್ನೆ ಭಾನುವಾರವಷ್ಟೇ ಅಡ್ಮಿಟ್ ಆಗಿದ್ದ ಯಡಿಯೂರಪ್ಪ ಒಂದು ದಿನ ಆಡ್ಮಿಟ್ ಆಗಿ ಮಧುಮೇಹ ನಿಯಂತ್ರಣಕ್ಕೆ ಚಿಕಿತ್ಸೆ ಪಡೆದುಕೊಂಡರು. ಆದ್ರೆ ನಿನ್ನೆ ಮತ್ತೆ ಶೀತ ಜ್ವರ, ರಕ್ತದೊತ್ತಡದಿಂದ ಬಳಲಿ ಆಡ್ಮಿಟ್ ಆಗಿದ್ದಾರೆ. ಇಂದು ಡಿಸ್ ಜಾರ್ಜ್ ಮಾಡಿ ಅಂತಾ ಯಡಿಯೂರಪ್ಪ ಕೇಳಿಕೊಂಡರೂ ವೈದ್ಯರು ಅವರನ್ನು ಕಳಿಸಿಲ್ಲ. ಕೆಮ್ಮು ಕೂಡ ಅವರಿಗೆ ತೊಂದರೆ ಕೊಡುತ್ತಿದೆ. ಅಧಿಕ ರಕ್ತದೊತ್ತಡದಿಂದ ಯಡಿಯೂರಪ್ಪ ಸಹಜವಾಗಿ ಲವಲವಿಕೆ ಕಳೆದುಕೊಂಡಿದ್ದಾರೆ. ಬಿಟ್ಟೂ ಬಿಡದೆ ಕಾಡೋ ಜ್ವರ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ನವೆಂಬರ್ 2ರಂದು ನವ ಕರ್ನಾಟಕ ಪರಿವರ್ತನಾ ಯಾತ್ರೆ ಇರೋದ್ರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕಾಗಿದೆ.

    ಈ ನಡುವೆ ಬಿಜೆಪಿ ಶಾಸಕ ಶಾಸಕ ವಿಜಯ್ ಕುಮಾರ್ ಸಾಗರ್ ಅಪೋಲೋ ಆಸ್ಪತ್ರೆಗೆ ಭೇಟಿ ಕೊಟ್ಟರು. ಆದರೆ ಭೇಟಿ ಮುಗಿಸಿ ವಾಪಸ್ ಬಂದ ಅವರು, ನನ್ನ ಸ್ನೇಹಿತನ ಮಗ ಆಡ್ಮಿಟ್ ಆಗಿದ್ರು. ಅದಕ್ಕೆ ಬಂದಿದ್ದೆ. ಯಡಿಯೂರಪ್ಪ ಅಡ್ಮಿಟ್ ಹಾಗೂ ಡಿಸ್ಚಾರ್ಜ್ ಬಗ್ಗೆ ಆಸ್ಪತ್ರೆಯವರನ್ನು ಕೇಳಬೇಕು. ನನ್ನ ಬಳಿ ಕೆದಕಿ ಕೇಳಬೇಡಿ ಎಂದು ಹೊರಟೇಬಿಟ್ರು.

     

     

  • ಕೊಳೆತ ಸ್ಥಿತಿಯಲ್ಲಿ ಮಹಿಳೆಯ ತಲೆಯಿಲ್ಲದ ಮೃತದೇಹ ಪತ್ತೆ

    ಕೊಳೆತ ಸ್ಥಿತಿಯಲ್ಲಿ ಮಹಿಳೆಯ ತಲೆಯಿಲ್ಲದ ಮೃತದೇಹ ಪತ್ತೆ

    ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಪ್ಪನಹಳ್ಳಿ ಗ್ರಾಮ ಹೊರವಲಯದ ನೀಲಗಿರಿ ತೋಪಿನಲ್ಲಿ ಮಹಿಳೆಯ ತಲೆ ಇಲ್ಲದ ಅಪರಿಚಿತ ಮೃತದೇಹ ಪತ್ತೆಯಾಗಿದೆ.

    ಸುಮಾರು 45 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ದುರ್ವಾಸನೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಮೃತ ಮಹಿಳೆಯ ತಲೆಗಾಗಿ ಪೊಲೀಸರು ನೀಲಗಿರಿ ತೋಪಿನಲ್ಲಿ ಹುಡುಕಾಟ ನಡೆಸಿದ್ದಾರೆ. ಮೇಲ್ನೋಟಕ್ಕೆ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೆಂಗಳೂರು ಏರ್‍ಪೋರ್ಟ್ ನಲ್ಲಿ ಪ್ರಯಾಣಿಕನ ಬಳಿ 2.5 ಕೆ.ಜಿ ಗಾಂಜಾ ಪತ್ತೆ

    ಬೆಂಗಳೂರು ಏರ್‍ಪೋರ್ಟ್ ನಲ್ಲಿ ಪ್ರಯಾಣಿಕನ ಬಳಿ 2.5 ಕೆ.ಜಿ ಗಾಂಜಾ ಪತ್ತೆ

    ಬೆಂಗಳೂರು: ಪ್ರಯಾಣಿಕನೊಬ್ಬನ ಬ್ಯಾಗ್‍ನಲ್ಲಿ ಸುಮಾರು ಎರಡುವರೆ ಕೆ.ಜಿ ಗಾಂಜಾ ಪತ್ತೆಯಾಗಿರುವ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಕೇರಳ ಮೂಲದ ಪೂಲಪರಂಬಿ ಹಂಸ ಮೊಹಮ್ಮದ್ (31) ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಆರೋಪಿ ಮೊಹಮೊದ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾಗೆ ಪ್ರಯಾಣ ಮಾಡಲು ಬಂದಿದ್ದ. ಸ್ಕ್ರೀನಿಂಗ್‍ನಲ್ಲಿ ಹ್ಯಾಂಡ್ ಬ್ಯಾಗ್ ಪರಿಶೀಲನೆ ಮಾಡುತ್ತಿದ್ದಾಗ ಆತನ ಬ್ಯಾಗ್‍ನಲ್ಲಿ ಸುಮಾರು ಎರಡೂವರೆ ಕೆ.ಜಿ ಗಾಂಜಾ ಪತ್ತೆಯಾಗಿದೆ.


    ಏರ್ ಪೋರ್ಟ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಗಾಂಜಾವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

     

  • ಚರ್ಚೆಗೆ ಗ್ರಾಸವಾಗಿದೆ ಬೆಂಗ್ಳೂರು ಮೇಯರ್ ವಿದ್ಯಾರ್ಹತೆ

    ಚರ್ಚೆಗೆ ಗ್ರಾಸವಾಗಿದೆ ಬೆಂಗ್ಳೂರು ಮೇಯರ್ ವಿದ್ಯಾರ್ಹತೆ

    ಬೆಂಗಳೂರು: ಬೆಂಗಳೂರು ಮೇಯರ್ ಯಾರೂ ಮಾಡಿರದ ಬಿಇ(ಸಿಸಿ) ಎಂಬ ಕೋರ್ಸ್ ಮಾಡಿದ್ದಾರೆ. ವಿದ್ಯಾರ್ಹತೆ ಅಫಿಡವಿಟ್ ಅನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

    ಚುನಾವಣಾ ಆಯೋಗಕ್ಕೆ ಮೇಯರ್ ಕೊಟ್ಟ ವಿದ್ಯಾರ್ಹತೆ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ. ಮೊದಲು ಕಾರ್ಪೋರೇಟರ್ ಹುದ್ದೆಗೆ ನಿಲ್ಲುವಾಗ ಬಿಇ ಉತ್ತೀರ್ಣ ಅಂತಾ ಬರೆದಿದ್ದರು. ಕಳೆದ ಬಾರಿ ಸಿಸಿ ಅಂತಾ ಸೇರಿಸಿ ಬರೆದಿದ್ದಾರೆ. ಅಸಲಿಗೆ ಮೇಯರ್ ಬಿಇ ನಲ್ಲಿ ಸಬ್ಜೆಕ್ಟ್ ಕ್ಲೀಯರ್ ಮಾಡಿಲ್ಲ. ನಾಲ್ಕು ವರ್ಷದ ಕೋರ್ಸ್‍ನಲ್ಲಿ ಎರಡು ವರ್ಷ ಕ್ಲಿಯರ್ ಆಗಿದೆ ಸಾಕಷ್ಟು ವಿಷಯಗಳಲ್ಲಿ ಉತ್ತೀರ್ಣರಾಗಿಲ್ಲ.

    ಈ ಸುಳ್ಳು ಮರೆಮಾಚೋಕೆ ಸಿಕ್ಕ ಸಿಕ್ಕಲ್ಲಿ ಕೋರ್ಸ್ ಕಂಪ್ಲೀಟೆಡ್ ಅಂತಾ ಬರೆಯುತ್ತಿದ್ದಾರೆ. ಅಸಲಿಗೆ ಕೋರ್ಸ್ ಕಂಪ್ಲೀಟ್ ಆಗದೇ ಇದ್ದರೆ ಬ್ರಾಕೆಟ್ ನಲ್ಲಿ ಬಿಇ ಅಂತಾ ಬರೆಯಬೇಕು. ಆದರೆ ನಮ್ ಮೇಯರ್ ಮಾತ್ರ ಡಿಫರೆಂಟ್. ಬಿಇ ಅಂತಾ ನೀಟಾಗಿ ಬರೆದು ಬ್ರಾಕೆಟ್‍ನೊಳಗೆ ಕೋರ್ಸ್ ಕಂಪ್ಲಿಟೆಡ್ ಅಂತಾ ಸ್ಟೈಲ್ ಆಗಿ ಬರೆದಿದ್ದಾರೆ. ರಾಮಯ್ಯ ಕಾಲೇಜ್‍ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿರೋದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ.

     

  • ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

    ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

    ಬೆಂಗಳೂರು: ರಾಜ್ಯ ಚುನಾವಣೆ ಗೆಲ್ಲಲು ಜೆಡಿಎಸ್ ಭರದ ಸಿದ್ಧತೆ ಕೈಗೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಅವರ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್ ಬಸ್ ನಿರ್ಮಾಣವಾಗಿದೆ.

    2018ರ ಚುನಾವಣಾ ಪ್ರಚಾರಕ್ಕೆ ಹೆಚ್ಚು ಕಡಿಮೆ ಒಂದು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ಬಸ್ ಸಿದ್ಧವಾಗಿದೆ. ತಮಿಳುನಾಡಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಅಶೋಕ ಲೈಲೆಂಡ್ ಬಸ್ಸನ್ನು ಮಾಡಿಫೈ ಮಾಡಲಾಗಿದೆ. ಈ ಹೈಟೆಕ್ ಬಸ್ ತಯಾರಿಕೆ ಜುಲೈನಲ್ಲಿಯೇ ಆರಂಭವಾಗಿದ್ದು, ಮುಂದಿನ ತಿಂಗಳು ನವೆಂಬರ್‍ನಲ್ಲಿ ಈ ಬಸ್‍ಗೆ ಚಾಲನೆ ನೀಡಲಾಗುತ್ತದೆ.

    ಬಸ್‍ನಲ್ಲಿದೆ ಹೈಟೆಕ್ ವ್ಯವಸ್ಥೆ: ಈ ಬಸ್‍ನಲ್ಲಿ ಏನುಂಟು, ಏನಿಲ್ಲ. ಇದನ್ನು ಚಲಿಸುವ ಅರಮನೆ ಎಂದರೂ ತಪ್ಪಿಲ್ಲ. ಈ ಬಸ್‍ನಲ್ಲಿ ಐಷಾರಾಮಿ ಬೆಡ್ ರೂಮ್ ಇದೆ. ಒಂದು ಚಿಕ್ಕ ಮೀಟಿಂಗ್ ಹಾಲ್, ಅಡುಗೆ ರೂಮ್, ಶೌಚಾಲಯವಿದೆ. ಅಲ್ಲದೆ ಹೈಡ್ರೋಲಿಕ್ ಲಿಫ್ಟ್, ಸನ್ ರೂಫ್, ಎಸಿ, ಟಿವಿ ಮತ್ತು ಕುಳಿತುಕೊಳ್ಳಲು ಸೋಫಾ ಇತ್ಯಾದಿ ವ್ಯವಸ್ಥೆಗಳಿವೆ. ಪ್ರಚಾರದ ಸಮಯದಲ್ಲಿ ನಾಲ್ಕು ಮಂದಿ ಬಸ್ ಒಳಗೆ ನಿಲ್ಲಬಹುದಾಗಿದೆ. ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋಹಿತ್ ಅಲ್ತಾಫ್ ನೇತೃತ್ವದಲ್ಲಿ ಈ ಬಸ್ ತಯಾರಾಗುತ್ತಿದೆ.

    ಈ ಬಸ್‍ನಲ್ಲಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರವನ್ನು ಮಾಡಲಿದ್ದು, ಗ್ರಾಮ ವಾಸ್ತವ್ಯ ಸೇರಿದಂತೆ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ. ಮೊದಲಿಗೆ ಮೈಸೂರಿನ ಚಾಮುಂಡೇಶ್ವರಿ ತಾಯಿಗೆ ನಮಿಸಿ ನಂತರ ಪ್ರಚಾರವನ್ನು ಆರಂಭಿಸುತ್ತಾರೆ ಎನ್ನಲಾಗಿದೆ.

    https://www.youtube.com/watch?v=kgc3R7fTvW4

  • ಮಳೆ ನಿಲ್ಲಲಿ ಎಂದು ಬೆಂಗ್ಳೂರಲ್ಲಿ ಶರಭ ಯಾಗ

    ಮಳೆ ನಿಲ್ಲಲಿ ಎಂದು ಬೆಂಗ್ಳೂರಲ್ಲಿ ಶರಭ ಯಾಗ

    ಬೆಂಗಳೂರು: ಮಳೆ ಬಂದಿಲ್ಲ ಅಂದರೆ ಜಪ ತಪ, ಯಾಗ, ಹೋಮ, ಹಾವನ, ಕತ್ತೆ-ಕಪ್ಪೆಗಳ ಮದುವೆ ಮಾಡುತ್ತಿದ್ದ ಜನರು ಈಗ ಸಾಕು ಈ ಮಳೆಯ ಅವಾಂತರ ಅಂತಾ ವರುಣನ ಆರ್ಭಟವನ್ನು ನಿಲ್ಲಿಸಲು ಶರಭ ಯಾಗವನ್ನು ಮಾಡುತ್ತಿದ್ದಾರೆ.

    ಕಳೆದ ಎರಡೂವರೆ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಜನರು ಅಬ್ಬಾ! ಸಾಕು ಈ ಮಳೆ ಅಂತಾ ಭಯದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಆದ್ದರಿಂದ ಮಳೆಯಿಂದ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರು ಕಳೆದ ಮೂರು ದಿನಗಳಿಂದ ಒಂದು ಗುಹೆಯಲ್ಲಿ ಕುಳಿತು ಪ್ರಾರ್ಥನೆ ಮಾಡುತ್ತಾ ಶರಭ ಯಾಗವನ್ನು ಮಾಡುತ್ತಿದ್ದಾರೆ.

    ಶರಭ ಯಾಗವನ್ನು ಶರಭದೇವರ ಹೆಸರಿನಲ್ಲಿ ಮಾಡುತ್ತಾರೆ. ಪಂಚಭೂತಗಳ ನಿಯಂತ್ರಣವನ್ನು ಈ ಶರಭ ಯಾಗದಿಂದ ಮಾಡಬಹುದು. ಮಳೆ ಬರಿಸಲು ಪ್ರಜ್ಜನ್ನ ಯಾಗ ಮಾಡುತ್ತಾರೆ. ಈ ಶರಭ ಯಾಗದಿಂದ ಮಳೆಯನ್ನು ನಿಲ್ಲಿಸಬಹುದು ಹಾಗೂ ಮಳೆಯನ್ನು ತಡೆಯಲುಬಹುದು. ಈ ಹಿಂದೆ ರಾಜರೂ ಈ ಯಾಗವನ್ನು ಮಾಡುಸುತ್ತಿದ್ದರು. ನಾವು ಈ ಯಾಗ ಮಾಡಿ ಮಳೆ ನಿಲ್ಲಿಸಿದ ಉದಾಹರಣೆಗಳು ಇದೆ ಅಂತಾ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಹೇಳಿದ್ದಾರೆ.

    ಈ ವರ್ಷದ ದಾಖಲೆಯ ಮಳೆ ಅನೇಕ ತೊಂದರೆಗಳನ್ನು ಮಾಡಿದೆ. ಅತಿವೃಷ್ಠಿಯಿಂದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 18ರ ನಂತರ ಮಳೆ ಕಡಿಮೆಯಾಗುತ್ತೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಶೂ ಬಾಕ್ಸ್ ಒಳಗಡೆ ಪತ್ತೆಯಾದ್ವು ಮೂರು ಉಡಗಳು!

    ಶೂ ಬಾಕ್ಸ್ ಒಳಗಡೆ ಪತ್ತೆಯಾದ್ವು ಮೂರು ಉಡಗಳು!

    ಬೆಂಗಳೂರು: ಕೊರಿಯರ್ ಮೂಲಕ ತಮಿಳುನಾಡಿಗೆ ಅಕ್ರಮವಾಗಿ ಉಡ ಕಳುಹಿಸುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಮೈಸೂರ್ ರಸ್ತೆಯ ಮಹಾಲಕ್ಷ್ಮೀ ಕೊರಿಯರ್ ಆಫೀಸ್ ಬಳಿ ಇಂದು ಸಂಜೆ ನಾಲ್ಕು ಗಂಟೆಗೆ ಅನಾಮಿಕ ವ್ಯಕ್ತಿಯೊಬ್ಬ ಶೂ ಬಾಕ್ಸ್ ನೀಡಿ ತಮಿಳುನಾಡಿನ ಬಸ್ ಗೆ ಪಾರ್ಸಲ್ ಕಳಿಸುವಂತೆ ಹೇಳಿದ್ದ.

    ಪಾರ್ಸೆಲ್ ಒಳಗಡೆ ಉಡವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳಾದ ಪಿ.ಐ ಪುರುಷೋತ್ತಮ್, ಎಂ.ಎಸ್ ರಾಮಮೂರ್ತಿ, ಮುಂಕುಂದ ಅವರು ಕೊರಿಯರ್ ಆಫೀಸ್ ಮೇಲೆ ದಾಳಿ ಮಾಡಿ ಬಾಕ್ಸ್ನಲ್ಲಿದ್ದ ಮೂರು ಉಡಾಗಳು ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ. ನಂತರ ಕೊರಿಯರ್ ಬಾಯ್ ವಿಚಾರಣೆಗೆ ಒಳಪಡಿಸಿದಾಗ ಯಾರೋ ಅನಾಮಿಕ ವ್ಯಕ್ತಿ ನೀಡಿರುವುದಾಗಿ ತಿಳಿಸಿದ್ದಾನೆ.

    ಮೂರು ಉಡಾಗಳು ರಾಜಸ್ಥಾನ ಜಾತಿಗೆ ಸೇರಿದ ಉಡಾಗಳು ಎಂದು ಪತ್ತೆ ಹಚ್ಚಿದ್ದಾರೆ. ಘಟನೆಯ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆ ದೂರು ದಾಖಲಿಸಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

    ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

    ಬೆಂಗಳೂರು: ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ ಟಿ.ದಾಸರಹಳ್ಳಿಯ ಬಾಗಲಗುಂಟೆ ಬಳಿ ಘಟನೆ ನಡೆದಿದೆ.

    ಕೆಂಡಕ್ಕೆ ಬಿದ್ದ ಮಹಿಳೆಯನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಬಾಗಲಗುಂಟೆ ಗ್ರಾಮದೇವತೆ ಉತ್ಸವದ ವೇಳೆ ಅವಘಡ ಸಂಭವಿಸಿದೆ.

    ಗೌರಮ್ಮ ಅವರು ದೇವರಿಗೆ ಹರಕೆ ಮಾಡಿಕೊಂಡಿದ್ದು, ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿ ಸಾರ್ವಜನಿಕರು ಆಕೆಯನ್ನು ಮೇಲಕ್ಕೆಳೆದು ರಕ್ಷಿಸಿದ್ದಾರೆ. ಆದರೆ ಅದಾಗಲೇ ಗಂಭೀರ ಗಾಯಗೊಂಡಿರುವ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮ ದೇವತೆಯ ಜಾತ್ರೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಇಂದು ಜಾತ್ರೆಯ ಕೊನೆ ಆಚರಣೆಯಾಗಿ ಕೆಂಡಾ ಹಾಯುವ ಸಾಂಪ್ರಾದಾಯಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಘಟನೆಯಿಂದ ದೇವಾಲಯದ ಆವರಣದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿದೆ.

    ಕಳೆದ ಎರಡು ವರ್ಷಗಳ ಹಿಂದೆ ದೇವಾಲಯದ ಆರ್ಚರು ಕೆಂಡ ಹಾಯುವಾಗ ಜಾರಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದರು.

     

     

  • ದಲಿತರನ್ನು ಅರ್ಚಕರನ್ನಾಗಿ ನೇಮಿಸಲು ನನ್ನ ಸಹಮತವಿದೆ: ಸಿದ್ದರಾಮಯ್ಯ

    ದಲಿತರನ್ನು ಅರ್ಚಕರನ್ನಾಗಿ ನೇಮಿಸಲು ನನ್ನ ಸಹಮತವಿದೆ: ಸಿದ್ದರಾಮಯ್ಯ

    ಮೈಸೂರು: ಕರ್ನಾಟಕದಲ್ಲಿಯೂ ದಲಿತರನ್ನು ಮುಜರಾಯಿ ಅರ್ಚಕರಾಗಿ ನೇಮಕ ಮಾಡಿಕೊಳ್ಳಲು ನಾವು ಮುಕ್ತ ಮನಸ್ಸನ್ನು ಹೊಂದಿದ್ದೇವೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಕೇರಳದಲ್ಲಿ ದಲಿತರನ್ನು ಮುಜರಾಯಿ ಅರ್ಚಕರಾಗಿ ನೇಮಕ ಮಾಡಿರುವ ವಿಚಾರ ಕುರಿತು ಮಾತನಾಡಿದ ಸಿದ್ದರಾಮಯ್ಯ ನವರು, ಕರ್ನಾಟಕದಲ್ಲೂ ನೇಮಕ ಮಾಡಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ದಲಿತ ಅರ್ಚಕರನ್ನು ನೇಮಕ ಮಾಡಲು ನಮ್ಮ ವಿರೋಧ ಇಲ್ಲ ಹೇಳಿಕೆ ನೀಡಿದರು.

    ಜನರಲ್ಲಿ ನಂಬಿಕೆ ಇಟ್ಟವನು:
    ಈಗ ಶತ್ರುಗಳ ಶತ್ರು ಮಿತ್ರರಾಗಿದ್ದಾರೆ ಆದರೆ ಯಾವ ನಾಯಕರ ತಂತ್ರ ರಣತಂತ್ರಗಳಿಗೂ ಜನಾಭಿಪ್ರಾಯ ಬದಲಾಗೋಲ್ಲ. ಅವರೆಲ್ಲ ಒಂದಾದರೆ ನನಗೇನು ಸಮಸ್ಯೆ ಇಲ್ಲ. ನಾನು ನಾಯಕರಲ್ಲಿ ನಂಬಿಕೆ ಇಟ್ಟವನಲ್ಲ, ಬದಲಿಗೆ ಜನರಲ್ಲಿ ನಂಬಿಕೆ ಇಟ್ಟವನು. ಯಾವ ಶತ್ರುಗಳು ಒಂದಾದರೂ ನನ್ನನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ವಲಸಿಗರಿಗೆ ತಿರುಗೇಟು ಕೊಟ್ಟರು.

    ಶ್ರೀನಿವಾಸ್ ಪ್ರಸಾದ್ ಬಗ್ಗೆ ನಾನು ಏನೂ ಮಾತನಾಡೋಲ್ಲ ಅವರು ಚುನಾವಣೆಯಲ್ಲಿ ಸೋತು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿಯೂ ಎಲ್ಲರು ಒಂದಾಗಿದ್ದರು. ಆಗ ಗೆದ್ದದ್ದು ನಾನೆ ತಾನೆ, ಕಡಿಮೆ ಅಂತರದಲ್ಲಿ ಗೆದ್ದಿರಬಹುದು ಆದರೆ ಗೆಲುವು ಮುಖ್ಯ ಚಾಮುಂಡೇಶ್ವರಿ ಜನರು ನನ್ನ ಕೈ ಬಿಡಲಿಲ್ಲ, ಈಗ ನನ್ನನ್ನ ಕೈ ಬಿಡುತ್ತಾರಾ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

    ಬಿಜೆಪಿ ಅವರು ಕರ್ನಾಟಕ ಪರಿವರ್ತನಾ ಸಮಾವೇಶ ಮಾಡುತ್ತಿದ್ದಾರೆ. ಅವರ ಲೆಕ್ಕದಲ್ಲಿ ಪರಿವರ್ತನೆ ಅಂದ್ರೆ ಸಮಾಜದ ಪರಿವರ್ತನೆ ಅಲ್ಲ, ಸಮಾಜ ಒಡೆಯುವ ಪರಿವರ್ತನೆ. ಬಿಜೆಪಿಯವರು ಯಾವಾಗಲಾದರೂ ಮಹಿಳೆಯರ, ರೈತರ ಬಗ್ಗೆ ಮಾತಾನಾಡಿದ್ದಾರಾ. ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.

    ಯಡಿಯೂರಪ್ಪರಿಗೆ ಕನಿಷ್ಟ ಜ್ಞಾನವಿಲ್ಲ: ಮೈಸೂರು ಮಿನರಲ್ಸ್ ನಲ್ಲಿನ ಹಣ ಸರ್ಕಾರದ್ದು, ತುರ್ತು ಕಾರಣಕ್ಕೆ ಅದನ್ನು ಬಳಸಿದ್ದೇವೆ. ಮುಂದಿನ ಬಜೆಟ್‍ನಲ್ಲಿ ಆ ಹಣವನ್ನು ಅವರಿಗೆ ವಾಪಸ್ ನೀಡುತ್ತೇವೆ. ಇದರಲ್ಲಿ ಯಾವುದೇ ತಪ್ಪು ಇಲ್ಲ ಇದು ಸಾಮಾನ್ಯ ಪ್ರಕ್ರಿಯೆ. ಹಣಕಾಸು ವ್ಯವಸ್ಥೆ ಬಗ್ಗೆ ಯಡಿಯೂರಪ್ಪಗೆ ಕನಿಷ್ಟ ಜ್ಞಾನವು ಇಲ್ಲ. ಮುಖ್ಯಮಂತ್ರಿ, ಹಣಕಾಸು ಸಚಿವರಾಗಿದ್ದವರಿಗೆ ಈ ಸಾಮಾನ್ಯ ಜ್ಞಾನ ಇರಬೇಕಿತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮೈಸೂರು ಮಿನರಲ್ಸ್ ಲಿಮಿಟೆಡ್ ನಿಂದ ಸಾಲ ಮನ್ನಾದ ಹಣವನ್ನು ಅಪೆಕ್ಸ್ ಬ್ಯಾಂಕ್ ಗೆ ನೀಡಿದ್ದಾರೆ ಎಂಬುವ ಯಡಿಯೂರಪ್ಪ ಹೇಳಿಕೆಗೆ ಸಿಎಂ ಸ್ಪಷ್ಟೀಕರಣ ನೀಡಿದರು.

    ಮಳೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹಳೆ ಸರ್ಕಾರಗಳು ಬರಿ ತಿಂದು ತೇಗಿ ಹೋಗಿದ್ದಾರೆ. ಮಳೆ ವಿಚಾರದಲ್ಲಿ ಕೆಲಸ ಮಾಡಿರೋದೆ ನಮ್ಮ ಸರ್ಕಾರ. ಬಿಜೆಪಿಯವರು ರಸ್ತೆ ಗುಂಡಿಗಳಿಗೆ ಬಣ್ಣ ಹೊಡೆದು ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಈ ರೀತಿಯ ಡೊಂಗಿ ರಾಜಕೀಯ ಬೇಡ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ನಾನು 1983 ರಿಂದಲೂ ಬೆಂಗಳೂರಿನಲ್ಲಿ ಇದ್ದೇನೆ. ಅಂದಿನಿಂದಲೂ ಇಷ್ಟು ಪ್ರಮಾಣದ ಮಳೆ ಬಂದಿಲ್ಲ. ಕಳೆದ 60 ದಿನದಲ್ಲಿ 45 ದಿನ ಮಳೆ ಬಂದಿದೆ. ಅದು ಸಹ ಭಾರಿ ಮಳೆ ಬಂದಿದೆ. ಅಂತಹ ಮಳೆಯನ್ನ ನಮ್ಮ ರಾಜಕಾಲುವೆಗಳು ತಡೆಯೋಲ್ಲ. ಪರಿಣಾಮ ಕೆಲವೆಡೆ ಅನಾಹುತ ಸಂಭವಿಸಿದೆ ಆದರೆ ಸಮಸ್ಯೆಗಳನ್ನ ನಿಭಾಯಿಸುವಲ್ಲಿ ಸರ್ಕಾರ ಸಮರ್ಥವಾಗಿ ಕೆಲಸ ಮಾಡಿದೆ. ನಮ್ಮ ಸರ್ಕಾರವೇ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದು. ರಸ್ತೆ ಗುಂಡಿಗಳನ್ನ ಮುಚ್ಚಿದ್ದು ನಮ್ಮ ಸರ್ಕಾರವೇ. ಹಿಂದೆ ಇದ್ದ ಮುಖ್ಯಮಂತ್ರಿ ಏನ್ ಮಾಡಿದರು ಎಂದು ಬಿಜೆಪಿ ಜೆಡಿಎಸ್ ಪಕ್ಷಗಳಿಗೆ ಪ್ರಶ್ನೆ ಹಾಕಿದರು.

     

  • ಅ.25ರಂದು ವಿಧಾನಸೌಧದ ವಜ್ರಮಹೋತ್ಸವ: ಪರಿಷತ್ ಸದಸ್ಯ, ಶಾಸಕ, ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್

    ಅ.25ರಂದು ವಿಧಾನಸೌಧದ ವಜ್ರಮಹೋತ್ಸವ: ಪರಿಷತ್ ಸದಸ್ಯ, ಶಾಸಕ, ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್

    ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವವು ಅಕ್ಟೋಬರ್ 25 ರಂದು ನಡೆಯಲಿದ್ದು, ಇದರ ಸವಿನೆನಪಿಗಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಚಿನ್ನದ ಬಿಸ್ಕತ್ ಹಾಗೂ ಸಿಬ್ಬಂದಿಗಳಿಗೆ ಬೆಳ್ಳಿತಟ್ಟೆ ನೀಡಲು ನಿರ್ಧರಿಸಿದೆ.

    ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸುತ್ತಿರುವ ಎರಡು ದಿನಗಳ ವಜ್ರಮಹೋತ್ಸವ ಸಮಾರಂಭದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ವಿಧಾನಸೌಧ ವಜ್ರಮಹೋತ್ಸವ ಸಮಾರಂಭಕ್ಕಾಗಿ ಒಟ್ಟು 27 ಕೋಟಿ ರೂ. ವೆಚ್ಚದಲ್ಲಿ 300 ಶಾಸಕರಿಗೆ ಹಾಗೂ ಪರಿಷತ್ ಸದಸ್ಯರಿಗೆ 50,000 ಮೌಲ್ಯದ ಚಿನ್ನದ ಬಿಸ್ಕತ್ ನೀಡಲು ನಿರ್ಧರಿಸಿದೆ.

    ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ಸಾವು ನೋವು ಸಂಭವಿಸಿರುವಾಗ 27 ಕೋಟಿ ಖರ್ಚು ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

    ಇನ್ನು ಯಾರು, ಯಾವ ಕಾರಣಕ್ಕೆ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

    27 ಕೋಟಿ ರೂ. ಖರ್ಚಿನ ಲೆಕ್ಕಾಚಾರ ಇಂತಿದೆ: