Tag: Bangalore

  • ನನ್ನ ಪತ್ನಿ ಪ್ರಾಕ್ಟೀಸ್ ಮಾಡ್ವಾಗ ಯಾರೂ ಬರ್ಬೇಡಿ- ನ್ಯಾಷನಲ್ ಅಥ್ಲೀಟ್‍ಗಳನ್ನ ಹೊರಗೆ ಕಳಿಸಿದ ಐಪಿಎಸ್ ಅಧಿಕಾರಿ

    ನನ್ನ ಪತ್ನಿ ಪ್ರಾಕ್ಟೀಸ್ ಮಾಡ್ವಾಗ ಯಾರೂ ಬರ್ಬೇಡಿ- ನ್ಯಾಷನಲ್ ಅಥ್ಲೀಟ್‍ಗಳನ್ನ ಹೊರಗೆ ಕಳಿಸಿದ ಐಪಿಎಸ್ ಅಧಿಕಾರಿ

    ಬೆಂಗಳೂರು: ನನ್ನ ಪತ್ನಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಆದ್ದರಿಂದ ಸ್ಟೇಡಿಯಂಗೆ ಯಾರೂ ಬರಬೇಡಿ ಎಂದು ಹೇಳಿ ಐಪಿಎಸ್ ಅಧಿಕಾರಿ ಅನುಪಮ್ ಅಗರವಾಲ್ ನ್ಯಾಷನಲ್ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಅವಮಾನ ಮಾಡಿದ್ದಾರೆ.

    ಕಂಠೀರವ ಸ್ಟೇಡಿಯಂ ನಿರ್ದೇಶಕ ಅನುಪಮ್ ಅಗರವಾಲ್ ರಾಷ್ಟ್ರೀಯ ಕ್ರೀಡಾಪಟುಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸ್ಟೇಡಿಯಂನಲ್ಲಿ ನನ್ನ ಪತ್ನಿ ಪ್ರಾಕ್ಟೀಸ್ ಮಾಡುವ ಸಂದರ್ಭದಲ್ಲಿ ಯಾರೂ ಸ್ಟೇಡಿಯೋ ಒಳಗಡೆ ಇರಬಾರದು ಎಂದು ಹೆಂಡತಿಗೋಸ್ಕರ ಅಥ್ಲೀಟ್‍ಗಳನ್ನು ಸ್ಟೇಡಿಯಂನಿಂದ ಹೊರ ಹೋಗಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಹೋಂಗಾರ್ಡ್‍ಗಳನ್ನು ಕರೆದು ಕ್ರೀಡಾಪಟುಗಳನ್ನು ಹೊರ ಹಾಕಿಸಿದ್ದಾರೆ.

    ಐಪಿಎಸ್ ಅಧಿಕಾರಿ ಅನುಪಮ್ ಅಗರವಾಲ್ ಅವರ ಪತ್ನಿಪ್ರೇಮಕ್ಕೆ ಕಂಗಾಲಾದ ಅಥ್ಲೀಟ್‍ಗಳು ಕಂಠೀರವ ಸ್ಟೇಡಿಯಂ ಬಿಟ್ಟು ಕಬ್ಬನ್ ಪಾರ್ಕ್‍ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಎಲ್ಲಾ ಅಥ್ಲೆಟಿಕ್ ಕ್ರೀಡಾಪಟುಗಳು ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

    ಅನುಪಮ್ ಅಗರವಾಲ್ ಫೋನ್ ಮಾಡಿ ಯಾವುದೇ ಪೆÇಲೀಸ್ ಠಾಣೆಯಲ್ಲೂ ದೂರು ಸ್ವೀಕಾರ ಮಾಡಬೇಡಿ ಅಂತ ಹೇಳಿದ್ದಾರೆ. ಸಂಪಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ.

    https://www.youtube.com/watch?v=sYO07ojfHMg

     

  • ತೆಲಗಿ ಮೃತದೇಹದ ಮುಂದೆ ಕುಟುಂಬಸ್ಥರ ಗಲಾಟೆ

    ತೆಲಗಿ ಮೃತದೇಹದ ಮುಂದೆ ಕುಟುಂಬಸ್ಥರ ಗಲಾಟೆ

    ಬೆಳಗಾವಿ: ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪಿದ್ದ ಬಹುಕೋಟಿ ಛಾಪಾಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ತೆಲಗಿ ಮೃತದೇಹದ ಮುಂದೆಯೇ ಕುಟುಂಬಸ್ಥರು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ತೆಲಗಿ ಮರಣ ನಂತರ ಆತನ ಮೃತದೇಹವನ್ನು ನೋಡಲು ಬಂದ ತೆಲಗಿ ಸಹೋದರ ಅಜಿಂ ತೆಲಗಿ ಹಾಗೂ ಮಗಳು ಸನ್ನಾ ಮಧ್ಯೆ ತೀವ್ರ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.

    ತೆಲಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಯಾರೂ ನಮ್ಮನ್ನು ನೋಡಲು ಬಂದಿರಲಿಲ್ಲ ಎಂದು ಆರೋಪಿಸಿರುವ ಸನ್ನಾ, ತೆಲಗಿ ಮೃತ ದೇಹದ ಅಂತಿಮ ದರ್ಶನ ಪಡೆಯಲು ಬಂದ ಅಜಿಂ ತೆಲಗಿ ಅವರಿಗೆ ಈಗ ನಿಮ್ಮ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸನ್ನಾ ಅವರ ಮಾತುಗಳಿಂದ ಬೇಸತ್ತ ಅಜಿಂ ತೆಲಗಿ ತಕ್ಷಣ ಮನೆಯಿಂದ ಹೊರನಡೆದಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಮೃತಪಟ್ಟ ತೆಲಗಿ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬೆಳಗಾವಿಯ ಖಾನಾಪುರದ ವಿದ್ಯಾನಗರದ ಮನೆಗೆ ಕೊಂಡೊಯ್ಯಲಾಗಿತ್ತು. ತೆಲಗಿಯ ಅಂತಿಮ ದರ್ಶನದ ವ್ಯವಸ್ಥೆಯನ್ನು ಇಂದು 10 ಗಂಟೆಯ ವರೆಗೆ ಖಾನಾಪುರದಲ್ಲಿ ಏರ್ಪಡಿಸಲಾಗಿದ್ದು, ನಂತರ ಮುಸ್ಲಿಂ ಸಾಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

    2006ರ ಜನವರಿ 17ರಂದು ನಕಲಿ ಛಾಪಾಕಾಗದ ಹಗರಣದಲ್ಲಿ ತೆಲಗಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು.

    ಇದನ್ನೂ ಓದಿ: ತೆಲಗಿ ಬದುಕಿದ್ದರೆ ಇನ್ನು 12 ದಿನಗಳಲ್ಲಿ ಜೈಲಿಂದ ಹೊರಬರುತ್ತಿದ್ದನಂತೆ!

  • ಈಜಿಪುರದಿಂದ ಮಡಿಕೇರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕ ವಶ

    ಈಜಿಪುರದಿಂದ ಮಡಿಕೇರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕ ವಶ

    ಬೆಂಗಳೂರು: ಕಂಠಪೂರ್ತಿ ಕುಡಿದು ಸೈರನ್ ಹಾಕೊಂಡು ತಮಗೆ ತೋಚಿದಂತೆ ಓಡಾಡೋ ಆಂಬುಲೆನ್ಸ್ ಚಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೇ ವಾರದಲ್ಲಿ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಡೆ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕ ಸಿಕ್ಕಿಬಿದ್ದಿದ್ದಾನೆ.

    ಕೆ.ಆರ್. ಪುರಂನ ಸತ್ಯಸಾಯಿ ಅರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ಗೆ ಸೇರಿದ ಆಂಬುಲೆನ್ಸ್ ಚಾಲಕ ಮಹೇಶ್ ಎಂದು ಗುರುತಿಸಲಾಗಿದ್ದು, ಈತ ಈಜಿಪುರದಿಂದ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಮಡಿಕೇರಿಗೆ ಕರೆದೊಯ್ಯುತ್ತಿದ್ದ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬರುವಾಗ ಬಿಡದಿ ಬಳಿ ಕುಡಿದು ಸೈರನ್ ಬಳಸಿಕೊಂಡು ಚಾಲನೆ ಮಾಡುತ್ತಿದ್ದನು.

    ಹಲಸೂರು ಗೇಟ್ ಮಾರ್ಗದಲ್ಲಿ ಇನ್ಸ್‍ಪೆಕ್ಟರ್ ಮಹಮ್ಮದ್ ಆಂಬುಲೆನ್ಸ್ ಅನ್ನು ತಡೆದು ತಪಾಸಣೆ ನಡೆಸಿದಾಗ ಚಾಲಕನ ಕುಡಿದಿರುವುದು ತಿಳಿದಿದೆ. ನಂತರ ಪೊಲೀಸರು ಆಂಬುಲೆನ್ಸ್ ಅನ್ನು ವಶಕ್ಕೆ ಪಡೆದು ಚಾಲಕ ಮಹೇಶ್‍ಗೆ ದಂಡ ಹಾಕಿದ್ದಾರೆ.

     

     

     

  • ಸದ್ಯಕ್ಕೆ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ- ಎಚ್.ಡಿ.ಕೆ

    ಸದ್ಯಕ್ಕೆ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ- ಎಚ್.ಡಿ.ಕೆ

    ಬೆಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ರಾಜೀನಾಮೆ ನೀಡಬೇಕು ಎಂಬ ವಿಚಾರ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬ್ಯಾಟ್ ಬೀಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಎಫ್‍ಐಆರ್ ಹಾಕಿದಾಕ್ಷಣ ಜಾರ್ಜ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಸಿಬಿಐ ತನಿಖೆ ಆರಂಭಿಸಿ ಯಾವುದಾದರೂ ಸಾಕ್ಷ್ಯ ದೊರಕಿದರೆ ಆಗ ರಾಜೀನಾಮೆ ಕೊಡಬೇಕಾಗತ್ತದೆ ಎಂದು ಹೇಳಿದರು.

    ಪ್ರಸ್ತುತ ಜಾರ್ಜ್ ಅವರು ರಾಜೀನಾಮೆ ಕೊಡಬೇಕು ಎಂದು ನಾನು ಹೇಳುವುದಿಲ್ಲ. ಗಣಪತಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ಹಾಗೂ ರಾಜ್ಯ ಸರ್ಕಾರ ಪ್ರಕರಣದ ಸಾಕ್ಷ್ಯ ನಾಶ ಮಾಡಿದೆ ಎಂದು ಆರೋಪಿಸಿ ಅವರ ಕುಟುಂಬದವರು ಸುಪ್ರೀಂ ಮೊರೆ ಹೋಗಿದ್ದರು. ಆ ಕಾರಣಕ್ಕೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದೆ. ಇದು ಕೇಂದ್ರ ಅಥವಾ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದ ಪ್ರಕರಣ ಅಲ್ಲ. ಯಾವುದೇ ಪ್ರಕರಣ ಇದ್ದರೂ ಎಫ್‍ಐಆರ್ ಹಾಕೋದು ಸಹಜ ಎಂದು ತಿಳಿಸಿದರು.

    ಇಂದಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಉಳಿದಿಲ್ಲ. ರಾಗ ದ್ವೇಷ ಇಲ್ಲದೆ ಕೆಲಸ ಮಾಡುವ ಭಾವನೆ ಕುಸಿತವಾಗಿದೆ. ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸಲಿ. ಸಿಐಡಿ ತನಿಖೆ ವೇಳೆ ಸಾಕ್ಷ್ಯ ನಾಶಪಡಿಸಿದೆ ಎಂಬ ಆರೋಪ ಇದೆ. ಪೆನ್ ಡ್ರೈವ್, ಡಾಕ್ಯುಮೆಂಟ್ ನಾಶ ಪಡಿಸಿದ್ದೇ ನಿಜ ಆಗಿದ್ದರೆ ಸಿಬಿಐಗೆ ಮಾಹಿತಿ ಸಿಗುತ್ತಾ? ಸಾಕ್ಷ್ಯ ನಾಶ ನಿಜವೇ ಆಗಿದ್ದರೆ ಸಿಬಿಐ ನಿಂದ ಸತ್ಯಾಂಶ ಹೊರ ತರಲು ಸಾಧ್ಯವಾಗದೆ ಇರಬಹುದು ಎಂದು ಎಚ್‍ಡಿಕೆ ಹೇಳಿದರು.

    ಜಂತಕಲ್ ಮೈನಿಂಗ್ ವಿಚಾರದಲ್ಲಿ ನನ್ನ ಮೇಲೂ ಎಸ್‍ಐಟಿ ಎಫ್‍ಐಆರ್ ದಾಖಲಿಸಿದೆ. ಆದರೆ ರಾಜ್ಯ ಸರ್ಕಾರ ನಮಗೆ ಸಂಬಂಧ ಇಲ್ಲ ಎನ್ನುತ್ತಿದೆ. ಇತ್ತೀಚೆಗೆ ಎಫ್‍ಐಆರ್ ಹಾಕೋದು ಕಾಮನ್, ತೆಗೆಸೋದು ಕಾಮನ್. ಬಿ ರಿಪೋರ್ಟ್ ಹಾಕಿಸೋದು ಸಹಜವಾಗಿದೆ. ಆದಾಗ್ಯೂ ಸುಪ್ರೀಂ ಮುಂದೆ ಎಸ್‍ಐಟಿ ಮೂಲಕ ಯಾಕೆ ಅರ್ಜಿ ಹಾಕಿಸಿದ್ರು ಅಂಥ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್‍ಡಿಕೆ ಚಾಟಿ ಬೀಸಿದರು.

  • ಮದ್ವೆಯಾಗಲು ನಿರಾಕರಿಸಿದ ಯುವತಿ ಮೇಲೆ ಆಸಿಡ್ ಹಾಕಿದ ಯುವಕನಿಗೆ ಬಿತ್ತು ಗೂಸಾ

    ಮದ್ವೆಯಾಗಲು ನಿರಾಕರಿಸಿದ ಯುವತಿ ಮೇಲೆ ಆಸಿಡ್ ಹಾಕಿದ ಯುವಕನಿಗೆ ಬಿತ್ತು ಗೂಸಾ

    ಬೆಂಗಳೂರು: ನಗರದಲ್ಲಿ ಹಾಡಹಗಲೇ ಯುವತಿಯ ಮೇಲೆ ಆಸಿಡ್ ದಾಳಿ ಮಾಡಲು ಯತ್ನಿಸಿರುವ ಘಟನೆ ಪೀಣ್ಯಾ 2ನೇ ಹಂತದ ಪ್ರದೇಶದಲ್ಲಿ ನಡೆದಿದೆ.

    ಚಂದನ್ ಎಂಬ ಯುವಕ ಯುವತಿಯೊಬ್ಬಳ ಮೇಲೆ ಆಸಿಡ್ ದಾಳಿಯನ್ನು ಮಾಡಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

    ಚಂದನ್ ಹಲವು ದಿನಗಳಿಂದ ಯುವತಿಯೊಬ್ಬಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಅಲ್ಲದೇ ತನ್ನನ್ನು ಮದುವೆಯಾಗಲು ಒಪ್ಪದೇ ಇದ್ದರೆ ಆಸಿಡ್ ಹಾಕುವುದಾಗಿ ಬೆದರಿಕೆಯನ್ನು ಹಾಕಿದ್ದ. ಆದರೆ ಯುವತಿ ಚಂದನ್‍ನನ್ನು ಮದುವೆಯಾಗಲು ನಿರಾಕರಿಸಿದ್ದಳು.

    ತನ್ನ ಕೋರಿಕೆಯನ್ನು ನಿರಾಕರಿಸಿದ ಕಾರಣ ಚಂದನ್ ಕೋಪಗೊಂಡು ಇಂದು ಏಕಾಏಕಿ ಯುವತಿಯ ಮೇಲೆ ಆಸಿಡ್ ನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಆದರೆ ಸ್ಥಳದಲ್ಲಿದ್ದ ಸಾರ್ವಜನಿಕರು ಸಮಯ ಪ್ರಜ್ಞೆ ಪ್ರದರ್ಶಿಸಿ ಯುವತಿಯನ್ನು ರಕ್ಷಿಸಿದ್ದಾರೆ. ನಂತರ ಚಂದನ್‍ನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

    ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಚಂದನ್‍ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

  • `ದಿ ವಿಲನ್’ ಸಿನಿಮಾದಲ್ಲಿ ಶಿವಣ್ಣನ ಆಕ್ಷನ್ ಶುರು

    `ದಿ ವಿಲನ್’ ಸಿನಿಮಾದಲ್ಲಿ ಶಿವಣ್ಣನ ಆಕ್ಷನ್ ಶುರು

    ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಒಟ್ಟಾಗಿ ಅಭಿನಯಿಸುತ್ತಿರುವ `ದಿ ವಿಲನ್’ ಸಿನಿಮಾದ ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ.

    ಇಷ್ಟು ದಿನ ಕಿಚ್ಚನ ಪಾತ್ರವನ್ನು ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಈಗ ಶಿವಣ್ಣ ಅವರ ಪಾತ್ರದ ಶೂಟಿಂಗ್ ಅನ್ನು ಭರದಿಂದಲೇ ಮಾಡುತ್ತಿದೆ. ಚಿತ್ರತಂಡ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಶಿವಣ್ಣ ಅವರ ಸಾಹಸ ದೃಶ್ಯಗಳನ್ನು ಚಿತ್ರಿಕರಣ ಮಾಡಿ ಮುಗಿಸಿದೆ. ಈಗ ಬ್ಯಾಂಕಾಕ್‍ನಲ್ಲಿ ಶಿವಣ್ಣ ಅವರ ಕಾರ್ ಚೇಸಿಂಗ್ ದೃಶ್ಯವನ್ನು ಚಿತ್ರೀಕರಣವನ್ನು ಮಾಡಿ ಮುಗಿಸಿದೆ.

    ಶೂಟಿಂಗ್ ಮುಗಿಸಿ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದು, ಚಿತ್ರತಂಡದೊಂದಿಗೆ ಸೇರಿ ಅಪರೂಪದ ಕ್ಷಣಗಳನ್ನು ಕಳಿಯುತ್ತಿದ್ದಾರೆ. ಕಾರ್ ಚೇಸಿಂಗ್ ಶೂಟಿಂಗ್‍ನಲ್ಲಿ ಚಿತ್ರತಂಡ ಶಿವಣ್ಣ ಅವರನ್ನು ರಸ್ತೆಯ ಮಧ್ಯೆದಲ್ಲಿ ಓಡಾಡುವ ಕಾರು, ಲಾರಿಗಳ ಮೇಲೆ ಜಂಪ್ ಮಾಡಿಸಿ ಫೈಟಿಂಗ್ ಮಾಡಿಸುತ್ತಿದ್ದಾರೆ. ಅವರ ಈ ಫೈಟಿಂಗ್ ನೋಡಿದರೆ ಸಿನಿಮಾದಲ್ಲಿ ಶಿವಣ್ಣ ತಮ್ಮ ಹವವನ್ನು ಸೃಷ್ಟಿಸಿದ್ದಾರೆ ಎನಿಸುತ್ತದೆ.

    ಶಿವಣ್ಣ ಅವರ ಸಾಹಸ ದೃಶ್ಯಗಳಿಗೆ ನಿರ್ದೇಶಕ ರವಿವರ್ಮ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ತಕ್ಕಂತೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

    ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್‍ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಮುಂದಿನ ವರ್ಷ ಫೆ. 14 ರಂದು ತೆರೆಗೆ ಬರುವ ಸಾಧ್ಯತೆಗಳಿವೆ.

     

  • ಈ ಕಾರಣಕ್ಕೆ ಭಾರತಕ್ಕೆ ಡಾನ್ ದಾವೂದ್ ಬರೋದೇ ಇಲ್ವಂತೆ

    ಈ ಕಾರಣಕ್ಕೆ ಭಾರತಕ್ಕೆ ಡಾನ್ ದಾವೂದ್ ಬರೋದೇ ಇಲ್ವಂತೆ

    ಮುಂಬೈ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚುಕೋರ ದಾವೂದ್ ಇಬ್ರಾಹಿಂ ಭಾರತಕ್ಕೆ ಹಿಂದಿರುಗಿ ಬರುವ ಸಾಧ್ಯತೆ ಇಲ್ಲ ಎಂದು ಮುಂಬೈನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ದಾವೂದ್ ಪ್ರಮುಖ ಆರೋಪಿಯಾಗಿರುವ 1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುಮಾರು 227 ಜನರು ದಾರಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 713 ಜನ ಗಂಭೀರವಾಗಿ ಗಾಯಗೊಂಡಿದ್ದರು. ಅಷ್ಟೇ ಅಲ್ಲದೇ ಸುಮಾರು 27 ಕೋಟಿ. ರೂ ನಷ್ಟವಾಗಿತ್ತು.

     

    ಮಾಜಿ ಪೊಲೀಸ್ ಆಯುಕ್ತರಾದ ಎಂಎನ್ ಸಿಂಗ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, ನಾವು ಅವನು ಮಾಡಿರುವ ಅಪರಾಧಗಳನ್ನು ಮರೆತುಬಿಡಬೇಕು ಎಂದು ಹೇಳುತ್ತಿಲ್ಲ. ಆದರೆ ಅವನು ಭಾರತಕ್ಕೆ ಹಿಂದಿರುಗುವುದಿಲ್ಲ. ಇದಕ್ಕೆ ಪಾಕಿಸ್ತಾನ ಅವಕಾಶ ಮಾಡಿ ಕೊಡಲ್ಲ. ಒಂದು ವೇಳೆ ದಾವೂದ್ ಅಲ್ಲಿಂದ ಭಾರತಕ್ಕೆ ಬರಲು ಯತ್ನಿಸಿದರೆ ಆತನನ್ನು ಕೊಂದೇ ಬಿಡುತ್ತಾರೆ. ಆತ ಈಗ ಪಾಕಿಸ್ತಾನದ ಐಎಸ್‍ಐನ ವಶದಲ್ಲಿದ್ದಾನೆ ಎಂದು ಹೇಳಿದ್ದಾರೆ.

    ಪ್ರಸ್ತುತ ಮುಂಬೈ ನಗರ ಮತ್ತು ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ದಾವೂದ್ ಭಯ ಕಡಿಮೆಯಾಗಿದೆ. ಇಂತಹ ಗ್ಯಾಂಗ್‍ಗಳಿಗೆ ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸರ ಬೆಂಬಲವಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಾಂಬ್ ಸ್ಫೋಟದ ಕೇಸ್ ತನಿಖೆ ಮಾಡುವ ಸಂದರ್ಭದಲ್ಲಿ ಇಬ್ಬರು ಪೊಲೀಸರಿಗೆ ದಾವೂದ್ ಜೊತೆ ಲಿಂಕ್ ಇರೋದು ನನಗೆ ಗೊತ್ತಾಗಿತ್ತು ಎಂಬುದನ್ನ ನಾನು ಒಪ್ಪಿಕೊಳ್ಳುತ್ತೇನೆ. ನಂತರ ಆ ಪೊಲೀಸರನ್ನು ವಜಾ ಮಾಡಲಾಯಿತು. ಇದೊಂದು ದುರದೃಷ್ಟಕರವಾದ ಸಂಗತಿ ಎಂದು ಸಿಂಗ್ ಹೇಳಿದರು.

    1993 ರ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಸಿಂಗ್ ಜಂಟಿ ಆಯುಕ್ತರಾಗಿ ವಿಶೇಷ ತನಿಖಾ ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದರು. ಇತ್ತ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್‍ನನ್ನು ತನಿಖೆ ಮಾಡುತ್ತಿರುವ ಥಾಣೆಯ ಪೊಲೀಸ್ ಆಯುಕ್ತರಾದ ಪರಮ್ ಬೀರ್ ಸಿಂಗ್ ಮಾತನಾಡಿ, ಥಾಣೆಯ ಸ್ಥಳೀಯ ಕಾರ್ಪೋರೇಟರ್‍ಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಅನುಮಾನವಿದೆ ಎಂದಿದ್ದಾರೆ. ಕಳೆದ ತಿಂಗಳು ಬಿಲ್ಡರ್‍ವೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸುಲಿಗೆ ಆರೋಪದಡಿ ಕಸ್ಕರ್‍ನನ್ನು ಬಂಧಿಸಲಾಗಿತ್ತು.

     

  • ವಿದ್ಯಾರ್ಥಿಗಳೇ ಗಮನಿಸಿ, SSLC & PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಸಿದ್ಧ – ಪರೀಕ್ಷೆ ಬರೆಯೋಕೆ ರೆಡಿಯಾಗಿ

    ವಿದ್ಯಾರ್ಥಿಗಳೇ ಗಮನಿಸಿ, SSLC & PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಸಿದ್ಧ – ಪರೀಕ್ಷೆ ಬರೆಯೋಕೆ ರೆಡಿಯಾಗಿ

    ಬೆಂಗಳೂರು: 2017-18 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿಯು ಪ್ರಕಟ ಮಾಡಿದೆ. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ ಏಪ್ರಿಲ್ 4ರವರೆಗಿನ ಅವಧಿಯೊಳಗೆ ನಡೆಯಲಿವೆ ಎಂದು ತಿಳಿಸಿದೆ.

    ಮಾರ್ಚ್ 1 ರಿಂದ ಮಾರ್ಚ್ 16ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದೆ. ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಈ ಕೆಳಗಿನ ದಿನಾಂಕದಂದು ನಡೆಯಲಿವೆ:
    ಮಾರ್ಚ್ 23 – ಪ್ರಥಮ ಭಾಷೆ, ಮಾರ್ಚ್ 26 – ಗಣಿತ, ಮಾರ್ಚ್ 28 – ದ್ವಿತೀಯ ಭಾಷೆ, ಮಾರ್ಚ್ 31 – ವಿಜ್ಞಾನ, ಏಪ್ರಿಲ್ 2 – ತೃತೀಯ ಭಾಷೆ, ಏಪ್ರಿಲ್ 4 – ಸಮಾಜ ವಿಜ್ಞಾನ

    ಪಿಯುಸಿ ಪರೀಕ್ಷೆಯು ಈ ಕೆಳಗಿನ ದಿನಾಂಕದಂದು ನಡೆಯಲಿವೆ:
    ಮಾರ್ಚ್ 1 – ಅರ್ಥಶಾಸ್ತ್ರ, ಭೌತಶಾಸ್ತ್ರ, ಮಾರ್ಚ್ 2 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್ 3 – ಹಿಂದಿ, ತೆಲುಗು, ಮರಾಠಿ, ಫ್ರೆಂಚ್, ಮಾರ್ಚ್ 5 – ಬ್ಯುಸಿನೆಸ್ ಸ್ಟಡೀಸ್, ಜೀವಶಾಸ್ತ್ರ, ಮಾರ್ಚ್ 6 – ರಾಜ್ಯಶಾಸ್ತ್ರ, ಮಾರ್ಚ್ 7- ಮಾಹಿತಿ ತಂತ್ರಜ್ಞಾನ, ಹೆಲ್ತ್ ಕೇರ್, ಮಾರ್ಚ್ 8 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಕೆಮಿಸ್ಟ್ರಿ, ಮಾರ್ಚ್ 9- ಲಾಜಿಕ್, ಲೆಕ್ಕಶಾಸ್ತ್ರ, ಎಜುಕೇಷನ್, ಮಾರ್ಚ್ 10- ಇತಿಹಾಸ, ಗೃಹ ವಿಜ್ಞಾನ, ಮಾರ್ಚ್ 12- ಸಮಾಜಶಾಸ್ತ್ರ, ಗಣಿತ, ಬೇಸಿಕ್ ಗಣಿತ, ಮಾರ್ಚ್ 13- ಉರ್ದು, ಸಂಸ್ಕೃತ, ಮಾಚ್ 14- ಇಂಗ್ಲಿಷ್, ಮಾರ್ಚ್ 15 ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನ ಸಂಗೀತ, ಪ್ರಾಣಿಶಾಸ್ತ್ರ, ಮಾರ್ಚ್ 16- ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್.

     

  • ನಿಮ್ಮ ಅಭಿಮಾನಕ್ಕೆ ನಿಮ್ಮ ದಾಸ ಯಾವಾಗಲೂ ಚಿರಋಣಿ ಎಂದ ಚಾಲೆಂಜಿಂಗ್ ಸ್ಟಾರ್!

    ನಿಮ್ಮ ಅಭಿಮಾನಕ್ಕೆ ನಿಮ್ಮ ದಾಸ ಯಾವಾಗಲೂ ಚಿರಋಣಿ ಎಂದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಲಂಡನ್ ನಲ್ಲಿ ಪಡೆದ ಗ್ಲೋಬಲ್ ಇಂಟಿಗ್ರಿಟಿ ಪ್ರಶಸ್ತಿಯ ಕುರಿತು ಇಂದು ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ದರ್ಶನ್ ಇಂದು ತಮ್ಮ ಟ್ವಿಟರ್‍ನಲ್ಲಿ ತಮ್ಮ ಅಭಿಮಾನಿಗಳನ್ನ ಕುರಿತು, ಈ ಪ್ರಶಸ್ತಿ ಪುರಸ್ಕಾರಗಳೆಲ್ಲಾ ನೀವು ನೀಡಿದ್ದು, ನಿಮ್ಮ ಅಭಿಮಾನಕ್ಕೆ ನಿಮ್ಮ ದಾಸ ಯಾವಾಗಲೂ ಚಿರಋಣಿ. ನಿಮ್ಮ ಈ ಪ್ರೀತಿ ಕನ್ನಡ ಚಿತ್ರರಂಗದ ಮೇಲೆ ಸದಾ ಹೀಗೇ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.

    ದರ್ಶನ್ ಅವರಿಗೆ ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ಗ್ಲೋಬಲ್ ಇಂಟಿಗ್ರಿಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿಯನ್ನು ಸ್ವೀಕರಿಸಿದ ಅವರು ಬುಧವಾರ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ವಾಪಸಾಗಿದ್ದರು.

  • ರಾಸಲೀಲೆ ವೀಡಿಯೋದಲ್ಲಿರೋದು ‘ನಾನವಳಲ್ಲ, ನಾನವಳಲ್ಲ, ನಾನವಳಲ್ಲ’ ಅಂದ್ರು ಕಾವ್ಯಾ ಆಚಾರ್ಯ!

    ರಾಸಲೀಲೆ ವೀಡಿಯೋದಲ್ಲಿರೋದು ‘ನಾನವಳಲ್ಲ, ನಾನವಳಲ್ಲ, ನಾನವಳಲ್ಲ’ ಅಂದ್ರು ಕಾವ್ಯಾ ಆಚಾರ್ಯ!

    ಬೆಂಗಳೂರು: ದಯಾಯನಂದ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರೋದು ಸ್ಯಾಂಡಲ್ ವುಡ್ ನಟಿ ಕಾವ್ಯ ಆಚಾರ್ಯ ಎಂಬ ವದಂತಿ ವೀಡಿಯೋ ರಿಲೀಸ್ ಆದ ಹೊತ್ತಿನಿಂದಲೂ ಹರಿದಾಡ್ತಿತ್ತು.

    ಆದರೆ ಈ ಬಗ್ಗೆ ನಟಿ ಕಾವ್ಯಾ ಆಚಾರ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನಾನು ಈಗ ತಾನೇ ಈ ಸುದ್ದಿ ಕೇಳಿದೆ. ಆದರೆ ಅದು ನಾನಲ್ಲ. ನಿಮಗೆ ಗೊತ್ತಿದೆ ಯಾರು ಬೇಕಾದರೂ ಹೀಗೆ ಮಾಡ್ತಾರೆ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ನನಗೆ ಯಾವ ಸ್ವಾಮೀಜಿಯೂ ಗೊತ್ತಿಲ್ಲ. ನನಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಇಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವುದು ನಟಿ ಕಾವ್ಯಾ ಆಚಾರ್ಯ ಎಂಬ ವದಂತಿ ಹರಡಿತ್ತು.