Tag: Bangalore

  • ಮೆಟ್ರೊ ನಿಲ್ದಾಣಗಳಲ್ಲಿ ನೀವು ಬೈಕ್ ನಿಲ್ಲಿಸಿ ಕೆಲ್ಸಕ್ಕೆ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಮೆಟ್ರೊ ನಿಲ್ದಾಣಗಳಲ್ಲಿ ನೀವು ಬೈಕ್ ನಿಲ್ಲಿಸಿ ಕೆಲ್ಸಕ್ಕೆ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಬೆಂಗಳೂರು: ಮೆಟ್ರೊ ನಿಲ್ದಾಣಗಳಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ನಿವಾಸಿಯಾಗಿರುವ ಮುಬಾರಕ್ ಎಂಬ ವ್ಯಕ್ತಿಯೇ ಬಂಧಿತ ಬೈಕ್ ಕಳ್ಳನಾಗಿದ್ದು, ಬೈಕ್ ಕಳ್ಳತನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ 10ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಆರೋಪಿ ಮುಬಾರಕ್ ಮೆಟ್ರೋ ನಿಲ್ದಾಣಗಳಲ್ಲದೇ ನಗರದ ವಿವಿಧ ಪ್ರದೇಶಗಳಲ್ಲಿ ಮಾಸ್ಟರ್ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ. ನಂತರ ಕದ್ದ ಬೈಕ್‍ಗಳನ್ನು ದಾಸರಹಳ್ಳಿ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗುತ್ತಿದ್ದ. ಮರು ದಿನ ಸ್ಥಳಕ್ಕೆ ಬರುತ್ತಿದ್ದ ಆತನ ಬಾಸ್ ಯುವರಾಜ್ ಎಂಬಾತ ಬೈಕ್ ತೆಗೆದುಕೊಂಡು ಹೋಗುತ್ತಿದ್ದ.

    ಕದ್ದ ಬೈಕ್‍ಗಳನ್ನು ನಗರದಲ್ಲಿ ಮಾರಾಟ ಮಾಡಿದರೆ ಸಿಕ್ಕಿ ಬೀಳುವ ಅವಕಾಶಗಳು ಹೆಚ್ಚಾಗಿರುವುದರಿಂದ ಅವುಗಳನ್ನು ಗ್ರಾಮೀಣ ಭಾಗದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಅಲ್ಲದೇ ಕದ್ದ ಬೈಕ್ ಚಾಸಿ ನಂಬರ್ ನೋಡಿ ನಕಲಿ ದಾಖಲೆಗಳನ್ನು ತಯಾರಿಸಿ ಕಡಿಮೆ ಬೆಲೆಗೆ ಮಾರುತ್ತಿದ್ದರು. ಆರೋಪಿ ಮುಬಾರಕ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಾಂದರ್ಭಿಕ ಚಿತ್ರ

     

  • ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವರ್ಗಗಳ ನೌಕರರು ಇಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

    ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ 62 ವಿವಿಧ ವರ್ಗಗಳ ಸಾವಿರಾರು ನೌಕರರು ಅಹಿಂಸಾ ಸಂಘಟನೆ(ಅಲ್ಪ ಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗ) ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಇಂದು ಬೆಳಗ್ಗೆ ಫ್ರೀಡಂ ಪಾರ್ಕ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅರಮನೆ ಮೈದಾನದ ವರೆಗೂ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಮುಂಬಡ್ತಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಜಾರಿ ಮಾಡುವಂತೆ ಎಂದು ಒತ್ತಾಯ ಮಾಡಿದರು. ಅಲ್ಲದೇ ಸುಪ್ರೀಂ ಆದೇಶವಿದ್ದರೂ ರಾಜ್ಯ ಸರ್ಕಾರ ಮುಂಬಡ್ತಿಯನ್ನು ನೀಡಲು ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರದ ಶೇ.82 ರಷ್ಟು ನೌಕರರಿಗೆ ಮುಂಬಡ್ತಿ ನೀಡಬೇಕು ಆಗ್ರಹಿಸಿದರು.

    ಅಲ್ಲದೇ ರಾಜ್ಯ ಸರ್ಕಾರವು ಸುಪ್ರೀಂ ಆದೇಶಕ್ಕೆ ತದ್ವಿರುದ್ಧವಾಗಿ ಕಾನೂನು ಜಾರಿಗೆ ಮಾಡಲು ನಿರ್ಧರಿಸಿದೆ. ಆದರಿಂದಲೇ ಈ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯಪಾಲರಿಗೆ ಕಡತ ರವಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • 17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

    17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

    ಬೆಂಗಳೂರು: ಹೈಕೋರ್ಟ್ ಆದೇಶದಂತೆ ದಂಡುಪಾಳ್ಯ ಗ್ಯಾಂಗ್ ನ ಅಪರಾಧ ಕೃತ್ಯಗಳ ಕುರಿತು ಮರುವಿಚಾರಣೆಯನ್ನು ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 34ನೇ ವಿಶೇಷ ಸತ್ರನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

    ಈ ಪ್ರಕರಣದಲ್ಲಿ ಈ ಹಿಂದೆಯೇ ಕೆಳಹಂತದ ನ್ಯಾಯಾಲಯ 14 ವರ್ಷಗಳ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶದ ವಿರುದ್ಧ ದಂಡುಪಾಳ್ಯ ಗ್ಯಾಂಗ್ ಶಿಕ್ಷೆ ರದ್ದುಪಡಿಸಿ ಮರುವಿಚಾರಣೆ ನಡೆಸುವಂತೆ ಹೈಕೋರ್ಟ್ ಮೊರೆಹೋಗಿದ್ದರು. ಕಳೆದ 17 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದೇವೆ. ಮಕ್ಕಳು ದೊಡ್ಡವರಾಗಿದ್ದಾರೆ. ನಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ಕೆಳ ನ್ಯಾಯಾಲಯದ ಶಿಕ್ಷೆ ರದ್ದುಪಡಿಸಿ, 3 ತಿಂಗಳ ಒಳಗೆ ಮರುವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶಿಸಿತ್ತು.

    ಅದರಂತೆ ಕಳೆದ ಮೂರು ತಿಂಗಳಿಂದ ಮರುವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವನಗೌಡರು, ಸರ್ಕಾರದ ಪರ ವಕೀಲರಾದ ಬಿ.ಎಸ್.ಪಾಟೀಲ ಅವರು ಸಲ್ಲಿಸಿದ 15 ಜನರ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅಂತಿಮವಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.

    ದಂಡು ಪಾಳ್ಯ ಗ್ಯಾಂಗ್‍ನ ದೊಡ್ಡಹನುಮ, ಮುನಿಕೃಷ್ಣ, ವೆಂಕಟೇಶ, ನಲ್ಲ ತಿಮ್ಮ ಮತ್ತು ಲಕ್ಷ್ಮೀ ತಂಡ ಬೆಂಗಳೂರು ನಗರ ಹೊರವಲಯದ ಅಗ್ರಹಾರ ದಾಸರಹಳ್ಳಿಯ ಗೀತಾ ಎಂಬ ಒಂಟಿ ಮಹಿಳೆಯನ್ನು ಕೊಲೆ ಮಾಡಿ, ಮನೆಯಲ್ಲಿದ್ದ ನಗ-ನಾಣ್ಯ ದೋಚಿ ಪರಾರಿಯಾಗಿತ್ತು. ಅಲ್ಲದೇ ಈ ಗ್ಯಾಂಗ್ 2000 ದಶಕದಲ್ಲಿ ರಾಜ್ಯಾದ್ಯಂತ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಮತ್ತು ಸುಲಿಗೆಯಂತಹ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಅಲ್ಲದೆ ಅಪರಾಧಿಗಳ ತಂಡ ಒಟ್ಟು 88 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿರುವುದರಿಂದ ಇವರಿಗೆ ಮರಣದಂಡನೆ ನೀಡಬೇಕೆಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.

    ಸತತ ಮೂರು ದಶಕಗಳ ಕಾಲ ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದ ಈ ತಂಡ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿತ್ತು. ಅಲ್ಲದೇ ಬರೋಬ್ಬರಿ 88 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆ ಪಾತಕಿಗಳ ಭಾವಚಿತ್ರಗಳು ಸಹ ಇದೇ ಮೊದಲ ಬಾರಿಗೆ ನೀಡಲಾಗಿದೆ.


    ಯಾವ ಪ್ರಕರಣಕ್ಕೆ ತೀರ್ಪು: 2000 ಇಸವಿಯ ನವೆಂಬರ್ 02 ರಂದು ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿ ಕುಡಿಯುವ ನೀರಿನ ನೆಪದಲ್ಲಿ ಗೀತಾ ಎಂಬವರ ಮನೆಗೆ ಹೋಗುವ ಪಾತಕಿ ಲಕ್ಷ್ಮೀ, ಮನೆಯಲ್ಲಿ ಒಂಟಿ ಮಹಿಳೆಯಿರುವುದನ್ನು ಖಾತ್ರಿಪಡಿಸಿಕೊಂಡಿದ್ದಳು. ಲಕ್ಷ್ಮೀ ಹಿಂದೆಯೇ ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮ ಬಂದು ಪ್ರಾಣಿಗಳಂತೆ ಗೀತಾರನ್ನು ಚಾಕುವಿನಿಂದ ಕ್ರೂರವಾಗಿ ಕುತ್ತಿಗೆ ಕುಯ್ದು ಹೊಟ್ಟೆಗೆ ತಿವಿದು ಮೈ ಮೇಲಿದ್ದ ಮಾಂಗಲ್ಯಸರ, ಜುಮುಕಿ, ಮಾಟಿ ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಸೀರೆ ಮತ್ತು ಇನ್ನಷ್ಟು ಒಡವೆಗಳನ್ನು ದೊಚಿ ಪರಾರಿಯಾಗಿದ್ದರು.

    ಸೆರೆಯಾಗಿದ್ದು ಹೇಗೆ: ಅಪರಾಧಿಗಳು ತಾವು ದೋಚಿದ್ದ ವಸ್ತುಗಳನ್ನು ನಗರದ ಅವೆನ್ಯೂ ರಸ್ತೆಯ ರಾಜಮಾರುಕಟ್ಟೆಯ ಸತ್ಯನಾರಾಯಣ ಜ್ಯುವೆಲರಿ ಶಾಪ್ ನಲ್ಲಿ ಮಾರಾಟ ಮಾಡಿದ್ದರು. ಪೊಲೀಸರ ವಿಚಾರಣೆ ವೇಳೆ ಈ ಅಂಶ ಬೆಳಕಿಗೆ ಬಂದಿತ್ತು. ಅಲ್ಲದೇ ಪೊಲೀಸರು ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯನ್ನು ಕೋರ್ಟ್‍ಗೆ ಸಲ್ಲಿಸಿದ್ದರು. ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯೇ ಈ ಪ್ರಕರಣಕ್ಕೆ ದೊಡ್ಡ ಅಡಿಪಾಯವಾಯಿತು. ಇನ್ನುಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ 15 ಜನರ ಸಾಕ್ಷಿಗಳನ್ನು ಕೋರ್ಟ್ ಮುಂದೆ ಪ್ರಸ್ತುತ ಪಡಿಸಲಾಗಿತ್ತು.

    ರಾಜ್ಯದಲ್ಲಿನ ಒಂಟಿ ಮಹಿಳೆಯರ ಪಾಲಿಗೆ ಯಮಕಿಂಕರರಾಗಿದ್ದ ಈ ಪಾತಕಿಗಳ ಬಗ್ಗೆ ಚಲನಚಿತ್ರ ನಿರ್ಮಾಣವಾದಾಗ ರಾಜ್ಯದ ಜನತೆ ಈ ದೊಡ್ಡ ಹನುಮ ಹಾಗೂ ಇವನ ಎಲ್ಲಾ ಕೃತ್ಯಗಳಲ್ಲೂ ಭಾಗಿಯಾಗಿದ್ದ ಲಕ್ಷ್ಮೀ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮನ ಪಾತ್ರಗಳನ್ನು ನಿರ್ವಹಿಸಿದ್ದ ಚಿತ್ರ ನಟರನ್ನು ನೋಡಿ, ಅಸಲೀ ದಂಡುಪಾಳ್ಯದ ಗ್ಯಾಂಗ್ ನೋಡಲು ಇಡೀ ರಾಜ್ಯದ ಜನತೆ ಕಾದು ಕುಳಿತಿದ್ದರು. ಪರಪ್ಪನ ಅಗ್ರಹಾರದ ನ್ಯಾಯಾಲಯಕ್ಕೆ ಬೆಳಗಾವಿಯ ಹಿಂಡಲಗಾದಿಂದ ಬಂದಿದ್ದ ಈ ಪಾತಕಿಗಳನ್ನು ನೋಡಿ ಬೆಂಗಳೂರಿನ ಸಜಾ ಬಂಧಿಗಳು ಬೆಚ್ಚಿದ್ದರು.

     

     

  • ಎಲೆಕ್ಷನ್ ಎಫೆಕ್ಟ್ ಏಪ್ರಿಲ್‍ನಲ್ಲೇ ಸಿಇಟಿ ಪರೀಕ್ಷೆ: ಯಾವ ದಿನ ಯಾವ ಪರೀಕ್ಷೆ

    ಎಲೆಕ್ಷನ್ ಎಫೆಕ್ಟ್ ಏಪ್ರಿಲ್‍ನಲ್ಲೇ ಸಿಇಟಿ ಪರೀಕ್ಷೆ: ಯಾವ ದಿನ ಯಾವ ಪರೀಕ್ಷೆ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು, ವಿಧಾನ ಸೌಧ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಏಪ್ರಿಲ್ ನಲ್ಲಿ ಪರೀಕ್ಷೆ ನಡೆಸಲು ಪ್ರಾಧಿಕಾರ ನಿರ್ಧಾರಿಸಿದೆ.

    ಕಳೆದ ವರ್ಷಕ್ಕಿಂತ 15 ದಿನ ಮುಂಚಿತವಾಗಿ ಏಪ್ರಿಲ್ 18 ರಿಂದ 20 ರವರೆಗೆ ಸಿಇಟಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಮುಂಚಿತವಾಗಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುವ ಅಗತ್ಯವಿದೆ.

    ಯಾವ ದಿನ ಯಾವ ಪರೀಕ್ಷೆ?
    1. ಏಪ್ರಿಲ್ 18 – ಜೀವಶಾಸ್ತ್ರ, ಗಣಿತ
    2. ಏಪ್ರಿಲ್ 19 – ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ
    3. ಏಪ್ರಿಲ್ 20 – ಹೊರನಾಡು – ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ

    ಇನ್ನೂ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಹಾಗೂ ಆರ್ಕಿಟೆಕ್ಚರ್ ಕೋರ್ಸ್‍ನ ಪ್ರವೇಶಕ್ಕಾಗಿ ಜೆಇಇ-2 ಅಥವಾ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನಡೆಸುವ ಎನ್‍ಎಟಿಎ ಪರೀಕ್ಷೆಗೆ ಹಾಜರಾಗಬೇಕಾಗಿದೆ. ಈ ಕುರಿತು ಪರೀಕ್ಷಾ ಪ್ರಾಧಿಕಾರ ಮುಂಚಿತವಾಗಿ ದಿನಾಂಕ ನಿಗದಿ ಮಾಡಿ ಪ್ರಕಟನೆ ನೀಡಿದೆ.

    ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕೃಷಿ ವಿಜ್ಞಾನ ಸೇರಿದಂತೆ ವಿವಿಧ ಕೋರ್ಸ್‍ಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

  • ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ ಸಜೀವ ಗುಂಡುಗಳು ಪತ್ತೆ

    ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ ಸಜೀವ ಗುಂಡುಗಳು ಪತ್ತೆ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಬಳಿ 22 ನಂಬರ್‍ನ ಎರಡು ಸಜೀವ ಗುಂಡುಗಳು ಪತ್ತೆಯಾಗಿದ್ದು, ಆರೋಪಿಯನ್ನು ಏರ್‍ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

    ಬಾದೆ ದಾನೇಶ್ವರ್ ಎಂಬಾತ ಬಂಧಿತ ಆರೋಪಿ. ಈತ ನವೆಂಬರ್ 2 ರಂದು ಕೆಐಎಎಲ್‍ನಿಂದ ಪುಣೆಗೆ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್‍ಜಿ 424ನಲ್ಲಿ ಪ್ರಯಾಣ ಮಾಡಲು ಯತ್ನಿಸಿದ್ದನು. ಈ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಹ್ಯಾಂಡ್ ಬ್ಯಾಗ್ ಮುಖಾಂತರ ಗುಂಡುಗಳನ್ನು ಕೊಂಡೊಯ್ಯುತ್ತಿದ್ದನು. ತಪಾಸಣೆ ಮಾಡುವ ವೇಳೆ ಅಕ್ರಮ ಗುಂಡುಗಳು ಹಾಗೂ ಕಾಟ್ರಿಡ್ಜ್ ಪತ್ತೆಯಾಗಿವೆ.

    ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿ ಬಳಿ 22 ನಂಬರ್‍ನ ಎರಡು ಖಾಲಿ ಕಾಟ್ರಿಡ್ಜ್ ಹಾಗೂ 5.56 ನಂಬರ್‍ನ ಒಂದು ಹೆಡ್ ಪಾರ್ಟ್ ಪತ್ತೆಯಾಗಿವೆ. ಆದರೆ ವಿಚಾರಣೆಯ ವೇಳೆ ಬೇರೆ ಯಾವುದೇ ರೀತಿಯ ದಾಖಲಾತಿಗಳು ದೊರಕಲಿಲ್ಲ.

    ಈ ಘಟನೆ ಸಂಬಂಧ ಏರ್‍ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

  • ಮೈ ಎಲ್ಲಾ ಪೊಗರು ತುಂಬಿಕೊಂಡು ಬಂದ ಶಿವಣ್ಣ

    ಮೈ ಎಲ್ಲಾ ಪೊಗರು ತುಂಬಿಕೊಂಡು ಬಂದ ಶಿವಣ್ಣ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರ `ಟಗರು’ ಮೈ ಎಲ್ಲಾ ಪೊಗರು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

    ಜೋಗಿ ಸಿನಿಮಾದಲ್ಲಿ ನೋಡಿದ ಶಿವಣ್ಣನನ್ನು ಮತ್ತೆ ನೆನಪಿಸುವಂತಹ ಟಗರು ಸಿನಿಮಾ ಪಕ್ಕಾ ಮಾಸ್ ಫಿಲ್ಮಂ ಆಗಿದ್ದು, ಸಿನಿಮಾದಲ್ಲಿ ಶಿವಣ್ಣ ಅವರು ಒಬ್ಬ ಪೊಲೀಸ್ ಅಧೀಕಾರಿಯಾಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸಿನಿಮಾದ ಹೆಸರಿನ ಟಗರಿನಂತೆ ಎಗರಿ ಎಗರಿ ಎದುರಾಳಿಗಳನ್ನು ಸದೇ ಬಡಿಯುತ್ತಿದ್ದಾರೆ. ಟೀಸರ್ ನೋಡಿದರೆ ಪಕ್ಕಾ ಸಸ್ಪೆನ್ಸ್ ಸಿನಿಮಾವಾಗಿದ್ದು, ಅಭಿಮಾನಿಗಳಲ್ಲಿ ಕುತೂಲಹವನ್ನು ಮೂಡಿಸುವಂತಿದೆ. ಜೋಗಿ ಅಭಿಮಾನಿಗಳಿಗೆ ಪಕ್ಕಾ ಎಂಟರ್‍ಟೈನ್ಮೆಂಟ್ ಸಿಗಲಿದೆ.

    ಸೂರಿ ನಿರ್ದೇಶದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ವೀನಸ್ ಎಂಟಟೈನರ್ಸ್ ಬ್ಯಾನರ್ ಅಡಿಯಲ್ಲಿ ಟೀಸರ್ ಮೂಡಿ ಬಂದಿದೆ. ಸಿನಿಮಾದಲ್ಲಿ ರೌಡಿಗಳ ಅಟ್ಟಹಾಸ ಬಲು ಜೋರಾಗಿ ಸದ್ದು ಮಾಡಿದೆ. ನಟ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಭಾವನಾ ಹಾಗೂ ಕೆಂಡಸಂಪಿಗೆ ಮಾನ್ವಿತಾ ಅಭಿನಯಿಸಿದ್ದಾರೆ.

    https://www.youtube.com/watch?v=scekni9K2Mg



  • ಮತ್ತೊಬ್ಬ ಹುಡುಗನ ಜೊತೆ ರಚಿತಾ ಅಫೇರ್? ಡೇಟಿಂಗ್ ಸುದ್ದಿ ಬಗ್ಗೆ ಗುಳಿಕೆನ್ನೆಯ ಹುಡುಗಿ ಹೇಳಿದ್ದು ಹೀಗೆ

    ಮತ್ತೊಬ್ಬ ಹುಡುಗನ ಜೊತೆ ರಚಿತಾ ಅಫೇರ್? ಡೇಟಿಂಗ್ ಸುದ್ದಿ ಬಗ್ಗೆ ಗುಳಿಕೆನ್ನೆಯ ಹುಡುಗಿ ಹೇಳಿದ್ದು ಹೀಗೆ

    ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಹರಣ್ ರಾಜ್ ಎಂಬ ಹುಡುಗ ರಚಿತಾ ಎಲ್ಲಿರುತ್ತಾರೊ ಅಲ್ಲಿರುತ್ತಾನೆ, ರಚಿತಾ ಎಲ್ಲಿ ಹೋಗುತ್ತಾರೊ ಅಲ್ಲಿ ಹಾಜರಿರುತ್ತಾನೆ ಎನ್ನುವ ಮಾತು ಕೇಳಿ ಬಂದಿತ್ತು. ಎರಡು ದಿನಗಳ ಹಿಂದೆ ನಡೆದ ಭರ್ಜರಿ ಚಿತ್ರದ ಐವತ್ತನೇ ದಿನದ ಸಂಭ್ರಮದಂದೂ ಈತ ರಚಿತಾ ಜೊತೆಗಿದ್ದ. ಹಾಗಂತ ನೋಡಿದವರು ಹೇಳುತ್ತಿದ್ದಾರೆ. ಇವರಿಬ್ಬರ ಓಡಾಟ ನೋಡಿಯೇ ಗಾಸಿಪ್ ಸುದ್ದಿ ಹರಡುವ ಸದಸ್ಯರು `ಇಬ್ಬರ ನಡುವೆ ಕುಚ್ ಕುಚ್ ಹೋ ರಹಾ ಹೈ…’ ಎಂದು ಬ್ಯಾಂಡ್ ಬಾರಿಸಿದ್ದರು. ಇದರ ಬೆನ್ನಿಗೆ ಹರಣ್‍ರಾಜ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದ್ದವು.

    ಯಾರು ಈ ಹರಣ್ ರಾಜ್?
    ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಹರಣ್ ರಾಜ್ ಗೆ ರ‍್ಯಾಂಕ್‌ ಸ್ಟುಡೆಂಟ್ ಕ್ರೆಡಿಟ್ ಇದೆ. ರಾಜಕಾರಣಿಯೊಬ್ಬರ ಕುಟುಂಬಕ್ಕೆ ಹತ್ತಿರದ ಸಂಬಂಧಿಯಾಗಿರುವ ಹರಣ್ ರಾಜ್‍ಗೆ ರಚಿತಾ ಮಾತ್ರ ಅಲ್ಲ, ಇನ್ನು ಕೆಲವು ನಟಿಯರ ಪರಿಚಯವೂ ಇದೆಯಂತೆ. ಮಜಾ ಅಂದರೆ ರಚಿತಾಗಿಂತ ಈತ ಮೂರು ನಾಲ್ಕು ವರ್ಷ ಚಿಕ್ಕವನೂ ಹೌದು. `ಪ್ರೀತಿಗೆ ವಯಸ್ಸು ಗಿಯಸ್ಸು ಲೆಕ್ಕಕ್ಕೆ ಬರಲ್ಲ ಬಿಡ್ರಿ’ ಎಂದು ಗಾಸಿಪ್ ಪಂಡಿತರು ಒಂದೇ ಸಾಲಿನಲ್ಲಿ ಇಬ್ಬರ ನಡುವೆ ಲವಿ ಡವ್ವಿ ನಡೆದಿದೆ ಎಂದು ಷರಾ ಬರೆದುಬಿಟ್ಟರು.

    ರಚಿತಾ ಅವರಿಗೆ ಇಂಥ ಸುದ್ದಿಗಳು ಹೊಸದೇನಲ್ಲ. ಈ ಹಿಂದೆ ಭರ್ಜರಿ ಹುಡುಗ ಧ್ರುವ ಸರ್ಜಾ ಜೊತೆಗೂ ರಚಿತಾರ ನಂಟು ಬೆಸೆದಿದ್ದರು. ಇನ್ನೇನು ಎಂಗೇಂಜ್‍ಮೆಂಟ್ ಎದುರಿಗೆ ನಿಂತಿದೆ, ಮದುವೆ ಬಾಕಿ ಎನ್ನುವ ಮಾತು ಊರ ಬಾಯಿಗೆ ಎಲೆ ಅಡಿಕೆಯಾಗಿತ್ತು. ಈಗ ನೋಡಿದರೆ ಹರಣ್ ರಾಜ್ ಜೊತೆ ಗುಳಿಕೆನ್ನೆಯ ಪ್ರೇಮ ಪಲ್ಲವಿ ಚರಣ ನಡೆಯುತ್ತಿದೆ ಎನ್ನುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ರಚಿತಾ ಏನು ಮಾಡಿದರೂ `ಮಾಂಗಲ್ಯಂ ತಂತು ನಾನೇನಾ’ ಅನ್ನೋದೇ ಫೈನಲ್ ಟಚ್ ಆಗುತ್ತಿದೆ. ಇದಕ್ಕೆಲ್ಲ ಈಗ ರಚಿತಾ ರಾಮ್ ಪ್ರತಿಕ್ರಿಯೆ ನೀಡಿ ಈ ಗಾಸಿಪ್ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

    ರಚಿತಾ ಹೇಳಿದ್ದು ಹೀಗೆ:
    ನಾನು ಆ ಇಶ್ಯೂ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಹುಡುಗ ನನ್ನ ಒಳ್ಳೆ ಸ್ನೇಹಿತ, ನನಗಿಂತ 4 ವರ್ಷ ಚಿಕ್ಕವನು. ನನ್ನ ತಂದೆ-ತಾಯಿ ಕೂಡ ತುಂಬಾ ಬೋಲ್ಡ್ ಆಗಿ ಇಂಥ ವಿಷ್ಯ ರಿಸೀವ್ ಮಾಡ್ತಾರೆ. ಆದ್ರೆ ಆ ಹುಡುಗನ ತಂದೆ-ತಾಯಿ ಯಾವ ರೀತಿ ರಿಯಾಕ್ಟ್ ಮಾಡ್ತಾರೆ? ಕಾಮನ್ ಮ್ಯಾನ್ ಇಂಥ ವಿಚಾರಗಳನ್ನು ಯೋಚನೆ ಮಾಡೋ ರೀತೀನೆ ಬೇರೆ. ಆ ಹುಡುಗ ಸಿವಿಲ್ ಇಂಜಿನಿಯರಿಂಗ್ ಸ್ಟೂಡೆಂಟ್. ಮತ್ತೆ ಆ ಹುಡುಗನಿಗೆ ಬಹಳಷ್ಟು ಹೀರೋಯಿನ್‍ಗಳ ಪರಿಚಯ ಇದೆ ಅಂತೆಲ್ಲ ಸುದ್ದಿಯಾಗಿದೆ. ಅದೆಲ್ಲ ಶುದ್ದ ಸುಳ್ಳು. ಅವ್ನಿಗೆ ನಾನು ಬಿಟ್ರೆ ಬೇರೆ ಯಾವ ಹೀರೊಯಿನ್‍ಗಳ ಪರಿಚಯ ಇಲ್ಲ. ಆ ಹುಡುಗ ನನ್ನ ಫ್ರೆಂಡ್ ರಿಲೇಟಿವ್ ಎಂದು ಹೇಳಿದ್ದಾರೆ.

    ಅವ್ರ ಮನೆಯಲ್ಲಿ ಫಂಕ್ಷನ್, ಪಾರ್ಟಿ ಆದ್ರೆ ನಾವೆಲ್ಲಾ ಒಟ್ಟಿಗೆ ಸೇರ್ತಿವಿ. ಎಲ್ಲಾ ಕಡೆ ಹರಿದಾಡ್ತಿರೋ ಫೋಟೊ 1 ವರ್ಷದ ಹಳೇದು. ಆ ಫೋಟೋ ಇಟ್ಕೊಂಡು ಈ ರೀತಿ ಗಾಸಿಪ್ ಹರಡಿಸ್ತಿದ್ದಾರೆ. ನನಗೆ ಹಲವರು ಸ್ನೇಹಿತರಿದ್ದಾರೆ. ಅವ್ರೆಲ್ಲಾ ಫೋಟೊ ತೆಗೆಸಿಕೊಂಡು ಪೋಸ್ಟ್ ಮಾಡಿದ್ರೆ ನನಗೆ ಅವ್ರ ಜೊತೆ ಅಫೇರ್ ಇದೆ ಅಂತ ಆಗುತ್ತಾ? ನನಗಿಂತ 4 ವರ್ಷ ಚಿಕ್ಕ ಹುಡುಗನ ಜೊತೆ ಸುತ್ತಾಡೊಕೆ ನನಗೆ ತಲೆ ಇಲ್ವಾ? ರಚಿತಾ – ಧ್ರುವಾ ಸರ್ಜಾ ಮದುವೆ ಆಗ್ತಾರೆ ಅಂತ ಗಾಸಿಪ್ ಹಬ್ಬಿಸಿದ್ರು. ಇನ್ನು ಎಷ್ಟು ಜನ ನನ್ನ ಕೋ-ಸ್ಟಾರ್‍ಗಳ ಜೊತೆ ನನಗೆ ಮದುವೆ ಮಾಡಿಸ್ತಾರೊ ಗೊತ್ತಿಲ್ಲ. ಆದ್ರೆ ಆ ಹುಡುಗನ ಪರಿಸ್ಥಿತಿ ಯೋಚಿಸಿದ್ರೆ ಭಯ ಆಗುತ್ತೆ. ನನ್ನ ಮದುವೆ ಬಗ್ಗೆ ಇನ್ನೂ ಸೀರಿಯಸ್ ಆಗಿ ಯೋಚನೆ ಮಾಡಿಲ್ಲ. ಎಲ್ಲರಂತೆ ನಾನೂ ಮದುವೆ ಆಗ್ತೀನಿ. ಹುಡುಗ ಫೈನಲ್ ಆದ್ಮೇಲೆ ಎಲ್ಲರಿಗೂ ಹೇಳ್ತಿನಿ. ಆಂಜನೇಯನ ಆಣೆಗೂ ನಾನು ಯಾವುದೇ ಹುಡುಗನ ಜೊತೆ ಡೇಟ್ ಮಾಡ್ತಿಲ್ಲ ಎಂದು ರಚಿತಾ ರಾಮ್ ಹೇಳುವ ಮೂಲಕ ಗಾಸಿಪ್ ಸುದ್ದಿಗೆ ಫುಲ್‍ಸ್ಟಾಪ್ ಹಾಕಿದರು.

    ಇಲ್ಲಿಗೆ ರಚಿತಾ ರಾಮ್ ನಕಲಿ ಪ್ರೇಮ ಪುರಾಣ ಈ ರೀತಿ ಮುಕ್ತಾಯವಾಗಿದೆ. ಸಿನಿಮಾ ರಂಗದಲ್ಲಿ ಇದು ಕಾಮನ್. ಒಂದು ಜೋಡಿ ಕಂಟಿನ್ಯೂ ಆಗಿ ಎರಡು ಮೂರು ಸಿನಿಮಾಗಳಲ್ಲಿ ನಟಿಯಾದ ತಕ್ಷಣ ಅವರ ನಡುವೆ ಲಿಂಕ್ ಹಚ್ಚುತ್ತಾರೆ, ಸಿನಿಮಾಕ್ಕೆ ಸಂಬಂಧಪಡದ ವ್ಯಕ್ತಿ ಜೊತೆಗಿದ್ದರೂ ಗಂಟು ಹಾಕುತ್ತಾರೆ. ಇದಕ್ಕೆಲ್ಲ ರಚಿತಾ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಹಾಗಂತ ಅವರೇ ಹೇಳುತ್ತಾರೆ. ಆದರೆ ನೀವು ತಲೆ ಕೆಡಿಸಿಕೊಂಡರೂ ಬಿಟ್ಟರೂ, ನಾವು ಮಾತ್ರ ಆಗಾಗ ಇಂಥ ಹುಳವನ್ನು ಎಲ್ಲರ ತಲೆಗೆ ಬಿಡುತ್ತಿರುತ್ತೇವೆ ಎನ್ನುತ್ತಿದೆ ಬಣ್ಣದ ಲೋಕದ ಬೆರಕಿ ದೇಹಗಳು. ಎಲುಬಿಲ್ಲದ ನಾಲಿಗೆಗೆ ನೀತಿ ಕಲಿಸಲು ಸಾಧ್ಯವೆ?

     

  • ಟಿಪ್ಪು ಜಯಂತಿ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಟಿಪ್ಪು ಜಯಂತಿ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಬೆಂಗಳೂರು: ನವೆಂಬರ್ 10 ರಂದು ರಾಜ್ಯ ಸರ್ಕಾರದ ವತಿಯಿಂದ ಆಯೋಜನೆಗೊಂಡಿರುವ ಟಿಪ್ಪು ಜಯಂತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

    ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸುವಂತೆ ಕೋರಿ ಕೊಡಗಿನ ಕೆ.ಪಿ. ಮಂಜುನಾಥ್ ಎಂಬವರು ಹೈ ಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‍ನ ಹಂಗಾಮಿ ಸಿಜೆ ವಿಭಾಗೀಯ ಪೀಠವು ತಡೆ ನೀಡಲು ನಿರಾಕರಿಸಿದೆ.

    ವಿಚಾರಣೆ ವೇಳೆ ಟಿಪ್ಪು ಜಯಂತಿ ಆಚರಣೆ ತಡೆಯಲು ಕಾನೂನಿನಲ್ಲಿ ಅವಕಾಶವಿದೆಯಾ? ಅಥವಾ ಈ ಹಿಂದೆ ಆಚರಣೆ ರದ್ದು ಪಡಿಸಿರುವ ಕುರಿತು ಸುಪ್ರೀಂ ಕೋರ್ಟ್ ಅಥವಾ ಯಾವುದಾದರೂ ಹೈಕೋರ್ಟ್ ಆದೇಶವಿದೆಯೇ ಎಂದು ಅರ್ಜಿದರರನ್ನು ಪ್ರಶ್ನಿಸಿದೆ.

    ಟಿಪ್ಪು ಜಯಂತಿ ಆಚರಣೆಗೆ ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ. ಇದೊಂದು ದೊಡ್ಡ ವಿಚಾರವಾಗಿದ್ದು, ಸಮಗ್ರವಾಗಿ ವಿಚಾರಣೆ ನಡೆಯ ಬೇಕಿದೆ ಎಂದು ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ.

    ವರ್ಷ ಟಿಪ್ಪು ಜಯಂತಿ ವೇಳೆ ಕೊಡಗಿನ ಅಹಿತಕರ ಘಟನೆ ನಡೆದಿದೆ. ಹೀಗಾಗಿ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಪಿಐಎಲ್‍ನಲ್ಲಿ ಮನವಿ ಮಾಡಿದ್ದರು.

     

  • ಕೆಲ್ಸ ಸಿಗುತ್ತೆ ಅಂತಾ ಯಾರಿಗಾದ್ರು ಹಣ ಕೊಡೋಕು ಮೊದಲು ಈ ಸ್ಟೋರಿ ಓದಿ

    ಕೆಲ್ಸ ಸಿಗುತ್ತೆ ಅಂತಾ ಯಾರಿಗಾದ್ರು ಹಣ ಕೊಡೋಕು ಮೊದಲು ಈ ಸ್ಟೋರಿ ಓದಿ

    ಬೆಂಗಳೂರು: ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಹಣ ಪೀಕುತ್ತಿದ್ದ ವ್ಯಕ್ತಿಯೊಬ್ಬನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ಅನಿಲ್ ಕುಮಾರ್ ರಾಯ್ ಬಂಧಿತ ಆರೋಪಿ. ಕೆಲಸ ಸಿಗುವುದಾಗಿ ಹಣ ಕೊಟ್ಟು ಮೋಸಕ್ಕೊಳಗಾದ ನಿರುದ್ಯೋಗಿಯೊಬ್ಬರು ಸಿಐಡಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಿಐಡಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

    ಮೋಸ ಹೇಗೆ ಮಾಡ್ತಿದ್ದ?
    ಅನಿಲ್ ಕುಮಾರ್ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಕೆಲಸ ಕೊಡಿಸುವುದಾಗಿ ಅವರಿಂದಲೇ ನಿರುದ್ಯೋಗಿಗಳಿಗೆ ಕರೆ ಮಾಡಿಸುತ್ತಿದ್ದ. ಈ ಕೆಲಸಕ್ಕೆ ಪ್ರೀತಿ ಹೆಸರಿನ ಇಬ್ಬರು ಯುವತಿಯರು ಹಾಗೂ ರಾಧಿಕಾ ಎಂಬ ಒಬ್ಬ ಯುವತಿಯನ್ನು ಇಟ್ಟುಕೊಂಡಿದ್ದನು.

    ಕಳೆದ ತಿಂಗಳು 10 ರಂದು ನಿರುದ್ಯೋಗಿಯೊಬ್ಬರಿಗೆ ಈ ಯುವತಿಯರು ಕರೆ ಮಾಡಿ ಏರ್‍ಟೆಲ್ ಕಂಪೆನಿಯಲ್ಲಿ ಟ್ರಾವೆಲ್ ಮ್ಯಾನೇಜರ್ ಕೆಲಸವಿದೆ. ನಿಮಗೆ ಕೊಡಿಸುತ್ತೇವೆ ಎಂದು ಹೇಳಿ ಬಲೆ ಬೀಸಿದ್ದಾರೆ. ದಾಖಲಾತಿ ಪರಿಶೀಲನೆಗಾಗಿ 6,400 ರೂ. ಜಾಬ್ ಕನ್ಫರ್ಮೇಶನ್ ಫೀಸ್ 11,700 ರೂ., ಐಡಿ ಆಕ್ಟಿವೇಷನ್‍ಗೆ 43,6500 ರೂ., ಕನ್ಸಲ್ಟೆನ್ಸಿ ಸೇವೆಗೆ 52,400 ರೂ., ಅಧಿಕಾರಿಗಳ ಸಹಿಗಾಗಿ 65,900 ರೂ. ಹಾಗೂ ಜಿಎಸ್‍ಟಿ ಚಾರ್ಜಸ್ 68,642 ರೂ. ಒಟ್ಟಾರೆ ಸೇರಿ 7,19,360 ರೂ. ಕೇಳಿದ್ದಾರೆ.

    ಕೆಲಸ ಸಿಗುತ್ತದೆ ಎಂಬ ಆಸೆಯಿಂದ ನಿರುದ್ಯೋಗಿ ಅನಿಲ್ ಕುಮಾರ್ ರಾಯ್ ಎಂಬುವರ ಹೆಸರಿನ ಅಕೌಂಟ್‍ಗೆ ಹಣವನ್ನು ಜಮಾ ಮಾಡಿದ್ದಾರೆ. ಆದರೆ ಹಣ ಅವರ ಖಾತೆಗೆ ಬಂದ ತಕ್ಷಣ ಯಾವುದೇ ಕರೆಯನ್ನೂ ಕೂಡ ಮಾಡಿಲ್ಲ. ಇತ್ತ ನಿರುದ್ಯೋಗಿ ಕಾದು ಕಾದು ಅನುಮಾನಗೊಂಡು ಈ ಕುರಿತು ಸಿಐಡಿಗೆ ದೂರು ನೀಡಿದ್ದರು.

  • ಕಪ್ಪು ಹಣ ವಿರೋಧಿ ದಿನ ಆಚರಿಸುವ ಮೊದಲು ಪ್ಯಾರಡೈಸ್ ಪೇಪರ್ಸ್ ಬಿಡುಗಡೆ

    ಕಪ್ಪು ಹಣ ವಿರೋಧಿ ದಿನ ಆಚರಿಸುವ ಮೊದಲು ಪ್ಯಾರಡೈಸ್ ಪೇಪರ್ಸ್ ಬಿಡುಗಡೆ

    ಬೆಂಗಳೂರು: ನವೆಂಬರ್ 8 ರಂದು ನೋಟ್ ಬ್ಯಾನ್ ಮಾಡಿ ಒಂದು ವರ್ಷವಾಗುತ್ತದೆ. ಆದ್ದರಿಂದ ಕಪ್ಪು ಹಣ ವಿರೋಧಿ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಅದರ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

    ಸರ್ಕಾರಕ್ಕೆ ತೆರಿಗೆ ವಂಚಿಸಿ 19 ವಿದೇಶ ರಾಷ್ಟ್ರಗಳಲ್ಲಿ ಅಕ್ರಮ ಹೂಡಿಕೆ ಮಾಡಿರುವವರ ಪಟ್ಟಿಯನ್ನು ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿದೆ. 96 ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಜಂಟಿಯಾಗಿ 10 ತಿಂಗಳುಗಳ ಕಾಲ ನಡೆಸಿದ ತನಿಖಾ ಪತ್ರಿಕೋದ್ಯಮದಲ್ಲಿ ಸುಮಾರು 1 ಕೋಟಿ ದಾಖಲೆಗಳನ್ನು ಕಲೆಹಾಕಲಾಗಿದೆ. ಇದರಲ್ಲಿ 180 ರಾಷ್ಟ್ರಗಳ ಕಾಳ ಧನಿಕರು, ಕಡಲಿನಾಚೆಗಿನ ತೆರಿಗೆ ಸ್ವರ್ಗ ಎಂದು ಕರೆಸಿಕೊಳ್ಳುವ 19 ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿರುವ ಮಹತ್ವದ ಮಾಹಿತಿ ಬಯಲಾಗಿದೆ.

    180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 19ನೇ ಸ್ಥಾನದಲ್ಲಿದ್ದು, ಇಲ್ಲಿನ 714 ಮಂದಿ ಅಕ್ರಮ ಹೂಡಿಕೆಯಲ್ಲಿ ಭಾಗಿಯಾಗಿರುವುದಾಗಿ ಮಾಧ್ಯಮ ವರದಿ ಮಾಡಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರರು, ಕ್ಯಾಬಿನೆಟ್ ಸದಸ್ಯರು ಹಾಗೂ ಪಕ್ಷದ ದೇಣಿಗೆದಾರರು ಸೇರಿದಂತೆ 13 ಮಂದಿ ಪ್ಯಾರಡೈಸ್ ಪೇಪರ್ಸ್ ನ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ನಂದ್ ಲಾಲ್ ಕೆಮ್ಕಾ ಮಾಲೀಕತ್ವದ ಸನ್ ಗ್ರೂಪ್, ಪಟ್ಟಿಯಲ್ಲಿ 2ನೇ ಅತಿದೊಡ್ಡ ಹೂಡಿಕೆದಾರನಾಗಿರುವುದು ವರದಿಯಲ್ಲಿ ಬಯಲಾಗಿದೆ.

    18 ತಿಂಗಳ ಬಳಿಕ ಪ್ಯಾರಡೈಸ್ ಪೇಪರ್ಸ್ ಬಿಡುಗಡೆ:
    * ಜಾರ್ಖಂಡ್‍ನ ಹಝರಿಬಾಗ್ ಕ್ಷೇತ್ರದ ಸಂಸದ ಹಾಗೂ ಕೇಂದ್ರದ ರಾಜ್ಯ ಸಚಿವರೂ ಆಗಿರುವ ಜಯಂತ್ ಸಿಂಹ, ಒಮಿದಿಯಾರ್ ನೆಟ್‍ವರ್ಕ್ ಕಂಪನಿಯ ವ್ಯವಸ್ಥಪಾಕ ನಿರ್ದೇಶಕ. ಅಮೆರಿಕ ಮೂಲದ ಡಿ ಲೈಟ್ ಕಂಪನಿಯಲ್ಲಿ ಒಮಿದಿಯಾರ್ ನೆಟ್‍ವರ್ಕ್ ಹೂಡಿಕೆ ಮಾಡಿದ್ದು, ಕೆರಿಬಿಯನ್ ಸಮುದ್ರದಲ್ಲಿನ ಕೇಮನ್ ದ್ವೀಪಗಳಲ್ಲಿ ಡಿ. ಲೈಟ್ ಹೂಡಿಕೆ ಮಾಡಿದೆ. ಚುನಾವಣೆಗೆ ಸ್ಪರ್ಧಿಸುವ ವೇಳೆ ಯಾವುದೇ ಕಂಪನಿಯ ಮಾಲಿಕತ್ವ ಅಥವಾ ಶೇರ್ ಹೊಂದಿರುವ ಕುರಿತು ಜಯಂತ್ ಸಿಂಹ ನಮೂದಿಸಿಲ್ಲ.
    * ನಸ್ಜಯ್ ಕಂಪನಿ ಲಿಮಿಟೆಡ್, – 2010ರಲ್ಲಿ ಬಹಾವi ದೇಶದಲ್ಲಿ ನೋಂದಣಿಯಾಗಿರುವ ಈ ಕಂಪನಿಗೆ ಬಾಲಿವುಡ್ ನಟ ಸಂಜಯ್ ದತ್ ವ್ಯವಸ್ಥಾಪಕ ನಿರ್ದೇಶಕ.
    * ಸಿಲ್ವರ್ಲೈನ್ ಎಸ್ಟೇಟ್ ಲಿಮಿಟೆಡ್ – 2016ರಲ್ಲಿ ಡೊಮಿನಿಕಾದಲ್ಲಿ ನೋಂದಣಿಯಾಗಿರುವ ಈ ಕಂಪನಿಗೆ ಜಲಂಧರ್ ಮೂಲದ ಪವಿತ್ರಾ ಸಿಂಗ್ ಉಪ್ಪಲ್ ನಿರ್ದೇಶಕಿ.