Tag: Bangalore

  • ಬೆಂಗ್ಳೂರಿನಲ್ಲಿ ವೃದ್ಧ ದಂಪತಿಯ ಕೈ-ಕಾಲು ಕಟ್ಟಿ ಬರ್ಬರ ಹತ್ಯೆ

    ಬೆಂಗ್ಳೂರಿನಲ್ಲಿ ವೃದ್ಧ ದಂಪತಿಯ ಕೈ-ಕಾಲು ಕಟ್ಟಿ ಬರ್ಬರ ಹತ್ಯೆ

    ಬೆಂಗಳೂರು: ವೃದ್ಧ ದಂಪತಿಯನ್ನು ಬರ್ಬರವಾಗಿ ದುರ್ಷ್ಕಮಿಗಳು ಮಾರಕಾಸ್ತ್ರಗಳಿಂದ ಕೂಲೆ ಮಾಡಿರುವ ಘಟನೆ ನಗರದ ಎಚ್‍ಎಎಲ್‍ನ ಹೇಮಂತ್ ನಗರದಲ್ಲಿ ನಡೆದಿದೆ.

    ಗೋವಿಂದನ್ ಹಾಗೂ ಸರೋಜಾ ದಂಪತಿ ಕೂಲೆಗೀಡಾಡ ದುರ್ದೈವಿಗಳು. ಎರಡು ದಿನಗಳ ಹಿಂದೆಯೇ ದಂಪತಿಯನ್ನ ಕೂಲೆ ಮಾಡಿ ದುರ್ಷ್ಕಮಿಗಳು ಪರಾರಿಯಾಗಿದ್ದಾರೆ. ಆದರೆ ಮಂಗಳವಾರ ಸಂಜೆ ಮನೆಯಿಂದ ದುರ್ವಾಸನೆ ಬರತೂಡಗಿದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಎಚ್‍ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ದಂಪತಿಯ ಕೈ-ಕಾಲುಗಳನ್ನು ಕಟ್ಟಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಬೆಲೆಬಾಳುವ ಆಭರಣಗಳನ್ನು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ. ಗೋವಿಂದನ್ ದಂಪತಿಗೆ ಪರಿಚಯವಿರುವವರೇ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

    ಸಾಕ್ಷಿ ನಾಶಕ್ಕೆ ಸಿಲಿಂಡರ್ ಬ್ಲಸ್ಟ್ ಗೆ ಯತ್ನ: ಹಂತಕರು ಈ ಕೃತ್ಯವೆಸಗಿದ ಬಳಿಕ ಸಾಕ್ಷಿ ನಾಶ ಮಾಡಲು ಸಿಲಿಂಡರ್ ಬ್ಲಾಸ್ಟ್ ಮಾಡೋಕೆ ಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗ ಗ್ಯಾಸ್ ಲೀಕ್ ಮಾಡಿ ಹೋಗಿರುವ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಬಿಇಎಲ್‍ನಲ್ಲಿ ನೌಕರರಾಗಿದ್ದ ಗೋವಿಂದನ್ ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ್ದು, ಸ್ವಂತ ಮಕ್ಕಳ ಮೇಲೆ ಅವಲಂಬಿತವಾಗದೇ ತನ್ನ ಪತ್ನಿಯೊಂದಿಗೆ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಈ ಭಾನುವಾರ ಅದೇ ಏರಿಯಾದಲ್ಲಿರುವ ತಮ್ಮ ಮಗಳು ಉಷಾಗೆ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ಬರುತ್ತೀವಿ ಎಂದು ಹೇಳಿ ಹೋಗಿದ್ದರು. ಹೀಗಾಗಿ ಪ್ರತಿದಿನ ಅಪ್ಪ-ಅಮ್ಮನ ಮನೆಗೆ ತೆರಳಿ ಅವರ ಕುಷಲೋಪರಿಯನ್ನು ವಿಚಾರಿಸುತ್ತಿದ್ದ ಉಷಾ, ಕಳೆದ ಎರಡು ದಿನ ಆ ಕಡೆ ಹೋಗಿಯೇ ಇರಲಿಲ್ಲ. ಇಂದು ಪೊಲೀಸರು ಬಂದಾಗಲೇ ಮಗಳು ಉಷಾಗೂ ತನ್ನ ತಂದೆ-ತಾಯಿ ಕೊಲೆಯಾಗಿರುವುದು ಗತ್ತಾಗಿದೆ.

    ನಗರ ಪೊಲೀಸ್ ಆಯುಕ್ತರಾದ ಟಿ.ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಕೂಡ ಸ್ಥಳ ಪರಿಶೀಲನೆ ನಡೆಸಿ, ಕೆಲವು ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ. ಗೋವಿಂದನ್ ಮತ್ತು ಸರೋಜಾರನ್ನು ಮೂರ್ನಾಲ್ಕು ದಿನಗಳ ಹಿಂದೆಯೇ ಹತ್ಯೆಗೈಯಲಾಗಿದೆ.

    ಈ ದಂಪತಿ ಒದ್ದಾಡದಂತೆ ತಡೆಯಲು ಹಂತಕರು ಮೊದಲು ಅವರ ಮುಖಕ್ಕೆ ಮತ್ತು ಕೈ-ಕಾಲುಗಳ ಬಟ್ಟೆ ಕಟ್ಟಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಆ ಬಳಿಕ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

     

  • ಕೈ ಕೊಡಲು ಬಂದ ಅಭಿಮಾನಿಗೆ ಬಹುಭಾಷಾ ನಟ ಕಮಲ್ ಹಾಸನ್ ಕಪಾಳಮೋಕ್ಷ

    ಕೈ ಕೊಡಲು ಬಂದ ಅಭಿಮಾನಿಗೆ ಬಹುಭಾಷಾ ನಟ ಕಮಲ್ ಹಾಸನ್ ಕಪಾಳಮೋಕ್ಷ

    ಬೆಂಗಳೂರು: ರಾಜಕೀಯಕ್ಕೆ ಬರುವ ತಯಾರಿ ಮಾಡಿಕೊಳ್ಳುತ್ತಿರುವ ಹೊತ್ತಲ್ಲೇ ಬಹುಭಾಷಾ ನಟ ಕಮಲ್ ಹಾಸನ್ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅಭಿಮಾನಿವೊಬ್ಬರು ನಟ ಎಂದು ಕೈ ಕೊಡಲು ಬಂದರೆ ಅವರ ಕಪಾಳಕ್ಕೆ ಹೊಡೆದಿರುವ ಘಟನೆ ನಗರದಲ್ಲಿ ನಡೆದಿದೆ.

    ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದ ಕಮಲ್ ಹಾಸನ್, ಖಾಸಗಿ ಸಮಾರಂಭವೊಂದರಲ್ಲಿ ನಟ ರಮೇಶ್ ಜೊತೆ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಮಾರಂಭ ಮುಗಿಸಿ ರಮೇಶ್ ಮೊದಲು ಹೊರಬಂದಿದ್ದಾರೆ. ಅವರ ಹಿಂಂದೆಯೇ ಕಮಲ್ ಹಾಸನ್ ಹೊರಬರುತ್ತಿದ್ದಂತೆ ಅಭಿಮಾನಿಗಳು ಇವರನ್ನು ನೋಡಲು, ಶೇಕ್‍ಹ್ಯಾಂಡ್ ಮಾಡಲು ಮುಂದಾಗಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗಿದ್ದು, ಸಿಟ್ಟಿಗೆದ್ದ ಕಮಲ್ ಹಾಸನ್ ಕೈ ಕುಲುಕಲು ಮುಂದೆ ಬಂದ ಅಭಿಮಾನಿಯೊಬ್ಬರ ಕೆನ್ನೆಗೆ ಬಾರಿಸಿದ್ದಾರೆ.

    ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸ್ಯಾಂಡಲ್‍ವುಡ್‍ನ ನಟ ರಮೇಶ್ ಅರವಿಂದ್ ಕೂಡ ಇದ್ದಾರೆ.

     

     

     

  • ಲವ್ವರ್ ಜೊತೆ ಪತ್ನಿ ಪರಾರಿಯಾಗಿದ್ದಕ್ಕೆ ಪತಿಯಿಂದಲೇ ಸ್ನೇಹಿತನ ಕೊಲೆ: ಇದೊಂದು ಮದ್ಯದ ಕಥೆ

    ಲವ್ವರ್ ಜೊತೆ ಪತ್ನಿ ಪರಾರಿಯಾಗಿದ್ದಕ್ಕೆ ಪತಿಯಿಂದಲೇ ಸ್ನೇಹಿತನ ಕೊಲೆ: ಇದೊಂದು ಮದ್ಯದ ಕಥೆ

    ಬೆಂಗಳೂರು: ಅನೈತಿಕ ಸಂಬಂಧ ಬೆಳೆಸಿ ವ್ಯಕ್ತಿಯ ಜೊತೆ ಪತ್ನಿ ಪರಾರಿಯಾಗಿದ್ದಕ್ಕೆ ರೊಚ್ಚಿಗೆದ್ದ ಪತಿ ವ್ಯಕ್ತಿಯ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹೆಬ್ಬಗೋಡಿ ಸಮೀಪದ ಗೊಲ್ಲಹಳ್ಳಿಯಲ್ಲಿ ನಡೆದಿದೆ.

    ಹಾವೇರಿ ಮೂಲದ ಗುಡ್ಡಪ್ಪ (30) ಕೊಲೆಯಾದ ದುರ್ದೈವಿ. ಆರೋಪಿ ಗಿರೀಶ್ ಎಂಬಾತ ಕೊಲೆ ಮಾಡಿ ಈಗ ತಲೆ ಮರೆಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಏನಿದು ಪ್ರಕರಣ?
    ಗಿರೀಶ್ ಎಂಬಾತ ಪವಿತ್ರಳನ್ನು ಮದುವೆಯಾಗಿದ್ದ. ಮದುವೆಯಾದ ಬಳಿಕ ಪತಿ ಮದ್ಯಕ್ಕೆ ದಾಸನಾಗಿರುವ ವಿಚಾರ ತಿಳಿದು ಪವಿತ್ರ, ಗಿರೀಶ್ ಕುಡಿತವನ್ನು ಬಿಡಿಸುವ ಸಲುವಾಗಿ ಪುನರ್ ವಸತಿ ಕೇಂದ್ರಕ್ಕೆ ಆತನನ್ನು ದಾಖಲಿಸಿದ್ದಳು. ಈ ಕೇಂದ್ರಕ್ಕೆ ಗಿರೀಶ್ ನನ್ನು ಕರೆದೊಯ್ಯಲು ಜಗದೀಶ್ ಎಂಬಾತ ಮನೆಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಪವಿತ್ರ ಜಗದೀಶ್ ನಡುವೆ ಪ್ರೇಮಾಂಕರುವಾಗಿದೆ. ಅಷ್ಟೇ ಅಲ್ಲದೇ ಅಕ್ರಮ ಸಂಬಂಧ ಬೆಳೆದು ಕೆಲ ದಿನಗಳ ಹಿಂದೆ ಇವರಿಬ್ಬರು ಪರಾರಿಯಾಗಿದ್ದರು.

    ಪತ್ನಿ ಪರಾರಿಯಾಗಿದ್ದನ್ನು ನೋಡಿ ಗಿರೀಶ್ ಮಾನಸಿಕ ಖಿನ್ನತೆಗೆ ಜಾರಿದ್ದ. ಈ ನಡುವೆ ಜಗದೀಶ್ ಮತ್ತು ಪವಿತ್ರಾ ನಡುವಿನ ಅಕ್ರಮ ಸಂಬಂಧ ವಿಚಾರ ಜಗದೀಶ್ ಸ್ನೇಗಿತ ಗುಡ್ಡಪ್ಪನಿಗೆ ತಿಳಿದಿತ್ತು ಎನ್ನುವ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಶನಿವಾರ ರಾತ್ರಿ ಗಿರೀಶ್ ತನ್ನ ಸ್ನೇಹಿತರ ಜೊತೆ ಸೇರಿ ಗುಡ್ಡಪ್ಪನಿಗೆ ಕಂಟಪೂರ್ತಿ ಕುಡಿಸಿ ಜಗದೀಶ್ ಬಗ್ಗೆ ವಿಚಾರಿಸಿದ್ದಾನೆ.

    ಗುಡ್ಡಪ್ಪ ತನಗೆ ಏನೂ ಗೊತ್ತಿಲ್ಲ. ಅವರ ಅಕ್ರಮ ಸಂಬಂಧ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ. ಆದರೆ ಅನೈತಿಕ ಸಂಬಂಧ ಮಾಹಿತಿ ತಿಳಿದಿದ್ದರೂ ವಿಚಾರವನ್ನು ತನ್ನ ಜೊತೆ ತಿಳಿಸದ್ದಕ್ಕೆ ರೊಚ್ಚಿಗೆದ್ದ ಗಿರೀಶ್ ಗುಡ್ಡಪ್ಪನನ್ನು ಕೊಲೆ ಮಾಡಿದ್ದಾನೆ. ಈ ಕೃತ್ಯಕ್ಕೆ ಗಿರೀಶ್ ಸ್ನೇಹಿತರು ಸಾಥ್ ನೀಡಿದ್ದಾರೆ.

    ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯ ಬಂಧನವಾಗಿದೆ. ಪ್ರಮುಖ ಆರೋಪಿ ಗಿರೀಶನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ಕುರುಕ್ಷೇತ್ರದಲ್ಲಿ ದುರ್ಯೋಧನ ಪತ್ನಿಯಾಗಿ ನಟಿಸಲು ಈ ನಟಿ ಬಂದ್ರು

    ಕುರುಕ್ಷೇತ್ರದಲ್ಲಿ ದುರ್ಯೋಧನ ಪತ್ನಿಯಾಗಿ ನಟಿಸಲು ಈ ನಟಿ ಬಂದ್ರು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರ ಮಲ್ಟಿಸ್ಟಾರ್ ಮುನಿರತ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ನಾಯಕಿಯ ಆಯ್ಕೆ ಅಂತಿಮವಾಗಿದೆ. ರಾಜಾ ಹುಲಿ ಹುಡುಗಿ ಮೇಘನಾ ರಾಜ್ ಭಾನುಮತಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದು, ಮುಂದಿನ ವಾರದಿಂದ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಗದಾಯುದ್ಧ ದೃಶ್ಯವನ್ನು ಚಿತ್ರೀಕರಿಸುವುದಕ್ಕೆ ಸಕಲ ತಯಾರಿ ಆಗುತ್ತಿದೆ. ಆದರೆ ದುರ್ಯೋಧನ ಪಾತ್ರದ ದರ್ಶನ್ ಗೆ ನಾಯಕಿಯ ಪಾತ್ರ ಮಾತ್ರ ಅಂತಿಮವಾಗದೇ ಚಿತ್ರ ತಂಡ ತಲೆ ಬಿಸಿ ಮಾಡಿಕೊಂಡಿತ್ತು. ಕೊನೆಗೂ ಕನ್ನಡದ ನಟಿಯೇ ದರ್ಶನ್‍ಗೆ ಜೋಡಿಯಾಗಿದ್ದಾರೆ. ಇದರಿಂದ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ತುಂಬಾ ಖುಷಿ ಕೊಟ್ಟಿದೆ.

    ಕುರುಕ್ಷೇತ್ರ ಸಿನಿಮಾವು ಸ್ಯಾಂಡಲ್ ವುಡ್ ನ ಬಹುದೊಡ್ಡ ತಾರಬಳಗ ಮತ್ತು ದೊಡ್ಡ ಬಜೆಟ್ ನ ಸಿನಿಮಾವಾಗಿದ್ದು, ದರ್ಶನ್ ಅವರ 50ನೇ ಚಿತ್ರವಾಗಿದೆ. ಆದ್ದರಿಂದ ದರ್ಶನ್ ಪತ್ನಿ ಭಾನುಮತಿಯ ಪಾತ್ರಕ್ಕೆ ಈ ಮುಂಚೆ ದಕ್ಷಿಣ ಭಾರತದ ಖ್ಯಾತ ನಟಿಯರಾದ ರೆಜಿನಾ ಮತ್ತು ರಮ್ಯಾ ನಂಬಿಸನ್ ಆಯ್ಕೆ ಆಗಿದ್ದರು. ಆದರೆ ಈಗ ಅವರಿಬ್ಬರ ಬದಲು ಕೊನೆಗೆ ಮೇಘನಾ ರಾಜ್ ಆಯ್ಕೆ ಆಗಿದ್ದಾರೆ.

    ಕಳೆದ ತಿಂಗಳು ನಟ ಚಿರಂಜೀವಿ ಸರ್ಜಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೇಘನಾ, ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಕುರುಕ್ಷೇತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಟಿ.ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಅಲ್ಲಮ’ ಚಿತ್ರದಲ್ಲಿ ಮೇಘನಾ ನಾಯಕಿ ಆಗಿ ಕಾಣಿಸಿಕೊಂಡಿದ್ದು, ಪೌರಾಣಿಕ ಪಾತ್ರವನ್ನು ನಿಭಾಯಿಸಿದ್ದರು. ಹೀಗಾಗಿ ಕುರುಕ್ಷೇತ್ರ ಚಿತ್ರದಲ್ಲಿ ಭಾನುಮತಿ ಪಾತ್ರಕ್ಕೆ ಮೇಘನಾ ಸೂಕ್ತ ಎಂದು ಆಯ್ಕೆ ಮಾಡಿದ್ದಾರೆ.

    ಇದೇ ಮೊದಲ ಬಾರಿಗೆ ಮೇಘನಾ ದರ್ಶನ್ ಗೆ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೂಸ್ ಮಾದ ಯೋಗೇಶ್, ರಾಕಿಂಗ್ ಸ್ಟಾರ್ ಯಶ್, ಶ್ರೀನಗರ ಕಿಟ್ಟಿ, ಚಿರಂಜೀವಿ ಸರ್ಜಾ, ಧನಂಜಯ್ ಅಂತಹ ಸ್ಟಾರ್ ನಟರ ಜೊತೆ ಈ ಹಿಂದೆ ಅಭಿನಯಿಸಿದ್ದಾರೆ.

     

     

     

     

     

     

  • ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

    ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

    ಬೆಂಗಳೂರು: ವಿಶ್ವ ಸುಂದರಿ ಆದರೆ ಸಾಕು ಎಲ್ಲರೂ ಅವರನ್ನೇ ನೋಡುತ್ತಾರೆ. ಅದರಲ್ಲೂ ಅವರು ಧರಿಸುವ ಕಿರೀಟದ ಮೇಲೆಯೇ ಪ್ರೇಕ್ಷಕರ ಕಣ್ಣು ಇರುತ್ತದೆ. ಸುಂದರಿಯರು ಧರಿಸುವ ಕೀರಿಟದ ಬೆಲೆ ಎಷ್ಟು? ಅದನ್ನು ಯಾವುದರಿಂದ ತಯಾರಿಸುತ್ತಾರೆ? ಹೇಗೆಲ್ಲಾ ವಿನ್ಯಾಸಗೊಳಿಸುತ್ತಾರೆ? ಎನ್ನುವ ಕುತೂಹಲಕಾರಿ ಪ್ರಶ್ನೆಗಳು ನಿಮಗೆ ಮೂಡುವುದು ಸಹಜ. ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎನ್ನುವುಂತೆ ಕೆಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ಮಿಸ್ ವರ್ಲ್ಡ್:

    ಬರೋಬ್ಬರಿ 4.95 ಕೋಟಿ ರೂ. ಮೌಲ್ಯದ ಕಿರೀಟವನ್ನು ಮಾನುಷಿ ಚಿಲ್ಲರ್ ಮುಡಿಗೇರಿಸಿಕೊಂಡಿದ್ದಾರೆ. ವಿಶ್ವಸುಂದರಿಗೆ ತೊಡುವ ಕಿರೀಟಗಳನ್ನು ಚಿನ್ನ, ವಜ್ರ ಹಾಗೂ ಪ್ಲಾಟಿನಂ ನಿಂದ ವಿಶೇಷವಾಗಿ ತಯಾರಿಸಲಾಗುತ್ತದೆ.

    ಮಿಸ್ ಯೂನಿವರ್ಸ್:

    ಈ ಕಿರೀಟವನ್ನು ಝೆಕ್ ಜ್ಯುವೆಲರ್ ನವರು ವಿನ್ಯಾಸ ಮಾಡುತ್ತಾರೆ. ಇದರಲ್ಲಿ ನ್ಯೂಯಾರ್ಕ್ ಸ್ಕೈಲೈನ್ ಪ್ರತಿನಿಧಿಸುವಂತಹ ಉದ್ದನೆಯ ಕ್ರಿಸ್ಟಲ್ ಹರಳುಗಳನ್ನು ಕಿರೀಟದ ಡಿಸೈನ್‍ನೊಳಗೆ ಸೇರಿಸಲಾಗುತ್ತದೆ. ಸಫೈರ್‍ನೊಂದಿಗೆ ವಜ್ರ ಖಚಿತವಾಗಿರುತ್ತದೆ. ಇದರ ಮೌಲ್ಯ ರೂ.1.98 ಕೋಟಿ ರೂ.

    ಮಿಸ್ ಇಂಟರ್‍ನ್ಯಾಷನಲ್:

    ಇದು ನೋಡಲು ಸಿಂಪಲ್ ಆಗಿದ್ದು, ಸುಂದರವಾಗಿರುತ್ತದೆ. ಇದರಲ್ಲಿ ಶುದ್ಧ ಬೆಳ್ಳಿ ಹಾಗೂ ವಜ್ರದ ಹರಳು ಹಾಕಿ ವಿನ್ಯಾಸ ಮಾಡಲಾಗುತ್ತದೆ. ಇದರ ಮೌಲ್ಯ ರೂ.2.30 ಕೋಟಿ ರೂ.

    ಮಿಸ್ ಗ್ರ್ಯಾಂಡ್ ಇಂಟರ್‍ನ್ಯಾಷನಲ್:

    ಸಂಪೂರ್ಣವಾಗಿ ಬಂಗಾರದಿಂದ ಕಿರೀಟವನ್ನು ತಯಾರಿಸಲಾಗುತ್ತದೆ. ಇದು ನೋಡಲು ಯುದ್ಧದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಹಾಗೆ ಇರುತ್ತದೆ. ಇದರ ತಯಾರಿಕೆಗೆ ಹಾರ್ಟ್ ಶೇಪ್‍ನ ಜೇಡ್ ಜೆಮ್ ಸ್ಟೋನ್ ಬಳಸಲಾಗುತ್ತದೆ. ಜೊತೆಗೆ ಹೊಸ ಬ್ಯೂಟಿ ಪೇಜೆಂಟ್‍ನ ಕ್ರೌನ್ ಬಳಸಿ ಚಿನ್ನದಿಂದ ಮಾಡಲಾಗಿರುತ್ತದೆ. ಇದರ ಬೆಲೆ ರೂ.1.98 ಕೋಟಿ ರೂ.

    ಮಿಸ್ ಅರ್ಥ್:

    ಈ ಕಿರೀಟವನ್ನು ಸ್ಟೆರ್ಲಿಂಗ್ ಬೆಳ್ಳಿ ಮತ್ತು ಡೈಮಂಡ್‍ನಿಂದ ರೂಪಿಸಲಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಬೆಲೆ ಬಾಳುವ ರತ್ನಗಳನ್ನು ಕಿರೀಟದಲ್ಲಿ ಜೋಡಿಸಿರುತ್ತದೆ. ಇದರ ಮೌಲ್ಯ ರೂ. 3.55 ಕೋಟಿ ರೂ.

  • ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಯಾವ ಸ್ವಾರ್ಥವೂ ಇಲ್ಲದೆ ಬೀದಿನಾಯಿಗಳ ಸಂರಕ್ಷಣೆ ಮಾಡ್ತಿದೆ `ಲವ್ ಫಾರ್ ಫರ್ಗಟನ್’ ಸಂಸ್ಥೆ

    ಬೆಂಗಳೂರು: ಬೀದಿ ನಾಯಿ ಅಂದರೆ ಸಾಕು ಜನರಿಗೆ ಕಚ್ಚುತ್ತೆ, ಗಲೀಜು ಅಂತಾ ದೂರ ಹೋಗುತ್ತಾರೆ. ಆದರೆ ಬೀದಿ ನಾಯಿಗಳ ಸಂರಕ್ಷಣೆಗಾಗಿಯೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ಅವುಗಳನ್ನು ರಕ್ಷಿಸುತ್ತಿದ್ದಾರೆ.

    ಬೆಂಗಳೂರಿನ ಜೆಪಿನಗರದಲ್ಲಿ ಲವ್ ಫಾರ್ ಫರ್ಗಟನ್ ಎನ್ನುವ ಸಂಸ್ಥೆ ಇದೆ. ಕಳೆದ ಒಂದು ವರ್ಷದಿಂದ ಸುಕನ್ಯ ಮತ್ತು ಅವರ ತಂಡ ಈ ಸಂಸ್ಥೆಯನ್ನು ಸ್ಥಾಪಿಸಿ ಬೀದಿ ನಾಯಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಹಸಿವಿನಿಂದ, ಅನಾರೋಗ್ಯದಿಂದ ಮತ್ತು ಅಪಘಾತವಾದ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ, ತಮ್ಮ ಶೇಲ್ಟರ್ನಲ್ಲಿ ರಕ್ಷಣೆ ನೀಡುತ್ತಿದ್ದಾರೆ. ಅವುಗಳು ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಅವುಗಳ ಮೂಲ ಸ್ಥಳಕ್ಕೆ ಬಿಟ್ಟುಬರುತ್ತಾರೆ.

    ಒಂದು ವರ್ಷದಲ್ಲಿ ಸುಮಾರು 150 ಕ್ಕೂ ಹೆಚ್ಚು ಬೀದಿ ನಾಯಿಗಳ ರಕ್ಷಣೆ ಮಾಡಿದ್ದೇವೆ. ನಮ್ಮ ದೊಡ್ಡಮ್ಮನಿಂದ ಉತ್ತೇಜನ ಪಡೆದು ಈ ಕೆಲಸ ಮಾಡುತ್ತಿದ್ದಾನೆ. ಅನಾರೋಗ್ಯದಿಂದ ನರಳುವ ಬೀದಿನಾಯಿಗಳಿಗಾಗಿಯೇ ಶೇಲ್ಟರ್ ನಿರ್ಮಿಸಿದ್ದೇವೆ. ಈಗ ಸುಮಾರು 25 ಕ್ಕೂ ಹೆಚ್ಚಿನ ನಾಯಿಗಳು ಇಲ್ಲಿವೆ. ನಿಮ್ಮ ಏರಿಯಾಗಳಲ್ಲಿ ಅನಾರೋಗ್ಯ ಪೀಡಿತ ನಾಯಿಗಳ ಕಂಡರೆ ನಮಗೆ ತಿಳಿಸಿ ನಾವು ಅವುಗಳ ಕೇರ್ ತಗೋತ್ತೀವೆ ಎಂದು ಟ್ರೇಸ್ಟಿ ಸುಕನ್ಯಾ ಹೇಳಿದರು.

    ಯಾವ ಸ್ವಾರ್ಥವೂ ಇಲ್ಲದೆ ತಮ್ಮ ಸಂಪಾದನೆಯಲ್ಲವನು ಇತಂಹ ಬೀದಿನಾಯಿಗಳ ರಕ್ಷಣೆಗೆ ಬಳಸುತ್ತಿರುವ ಸುಕನ್ಯಾ ಮತ್ತು ಅವರ ತಂಡಕ್ಕೆ ಧನ್ಯವಾದಗಳು.

  • ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು ನಿವಾಸಿಗಳಿಗೆ ಬಿಬಿಎಂಪಿ ಯಿಂದ ಶಾಕಿಂಗ್ ನ್ಯೂಸ್

    ಬೆಂಗಳೂರು: ಬಿಬಿಎಂಪಿ ಬೆಂಗಳೂರಿಗರಿಗೆ ಶಾಕ್ ಕೊಟ್ಟಿದ್ದು, ನಗರದಲ್ಲಿ ಇನ್ಮುಂದೆ ಕಸ ವಿಲೇವಾರಿಗಾಗಿ ಶೇ. 15ರಷ್ಟು ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದೆ.

    ಹೌದು, ಮಹಾನಗರ ಜನರು ಮೇಲೆ ಬಿಬಿಎಂಪಿ ಕೌಸ್ಸಿಲ್ ಆಸ್ತಿಯ ವಿಸ್ತೀರ್ಣ ಆಧರಿಸಿ ತೆರಿಗೆ ಹೆಚ್ಚಳ ಮಾಡುತ್ತಿದೆ. ಕಳೆದ 7 ವರ್ಷಗಳಿಂದ ಘನ ತ್ಯಾಜ್ಯ ನಿರ್ವಹಣೆ ಮೇಲಿನ ತೆರಿಗೆ ಹೆಚ್ಚಳ ಮಾಡಿಲ್ಲ. ಲೆಕ್ಕ ಪರಿಶೋಧಕರ ಆಕ್ಷೇಪವನ್ನು ಗಣನೆಗೆ ತೆಗೆದುಕೊಂಡು ಆರ್ಥಿಕ ಸ್ಥಾಯಿ ಸಮಿತಿ ಸಲಹೆ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳಲಿದೆ ಅಂತಾ ಪಾಲಿಕೆಯ ಅರೋಗ್ಯ ಮತ್ತು ಘನತ್ಯಾಜ್ಯ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳಿದ್ದಾರೆ.

    ಇದುವರೆಗೆ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಸದ ಮೇಲೆ ತೆರಗೆ ವಿಧಿಸಲಾಗುತ್ತಿತ್ತು. ಆದರೆ ಇನ್ನು ಆಸ್ತಿ ವಿಸ್ತೀರ್ಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಈ ಕುರಿತು ಕೌನ್ಸಿಲ್ ನಲ್ಲಿ ಚರ್ಚೆ ನಡೆದು ಒಪ್ಪಿಗೆ ಪಡೆದರೆ ಸಾರ್ವಜನಿಕರು ಶೇ.15ರಷ್ಟು ಹೆಚ್ಚಿನ ಕಸದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

    ತೆರಿಗೆ ಹೆಚ್ಚಳಕ್ಕೆ ವಿರೋಧ: ಬಿಬಿಎಂಪಿ ತೆರಿಗೆ ಹೆಚ್ಚಳ ಪ್ರಸ್ತಾವನೆಗೆ ಪಾಲಿಕೆಯ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೆರಿಗೆ ಹೆಚ್ಚಳದಿಂದ ಶಾಲಾ ಕಾಲೇಜುಗಳು, ನರ್ಸಿಂಗ್ ಹೋಂಗಳು, ಕಲ್ಯಾಣ ಮಂಟಪಗಳು, ಕೈಗಾರಿಕೆಗಳು, ಟೆಕ್‍ಪಾರ್ಕ್‍ಗಳಿಗೆ ಹೆಚ್ಚಿನ ಹೊರೆ ಬೀಳಲಿದೆ. ಬಿಬಿಎಂಪಿ ಈ ನಿರ್ಧಾರ ವಾಪಸ್ ಪಡೆಯದೆ ಹೋದರೆ ಅಹೋರಾತ್ರಿ ಧರಣಿಯ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಬಿಬಿಎಂಪಿ ಕಸ ವಿಲೇವಾರಿ ಮಾಡಲು ಅಧಿಕ ವೆಚ್ಚ ಮಾಡುತ್ತಿದ್ದು, ಪ್ರಸ್ತುತ ಸಾರ್ವಜನಿಕರ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಕಸ ನಿರ್ವಹಣೆ ಸಮಸ್ಯೆ ನಗರದಲ್ಲಿ ಪ್ರಮುಖ ಸಮಸ್ಯೆ ಆಗಿರುವುದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

    ಅಲ್ಲದೇ ಇದುವರೆಗೆ ಬಿಬಿಎಂಪಿ ಬಾಡಿಗೆ ನೀಡಿದ ಕಟ್ಟಡಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹೊಸ ಪ್ರಸ್ತಾವನೆಯಲ್ಲಿ ರದ್ದು ಪಡಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ರಾಜಸ್ಥಾನ ಮಾದರಿಯಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಬಿಬಿಎಂಪಿ ತೆರಿಗೆ ಹೆಚ್ಚಳ ನಿರ್ಧಾರದಿಂದ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಹೆಚ್ಚಳವಾಗಲಿದೆ. ಅಲ್ಲದೇ ನಗರದಲ್ಲಿ ವಾಸಿಸುತ್ತಿರುವ ಗಣ್ಯರಿಗೂ ತೆರಿಗೆ ಹೆಚ್ಚಳ ಬಿಸಿ ತಟ್ಟಲಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಮಿತಾ- ಫೋಟೋಗಳಲ್ಲಿ ನೋಡಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಮಿತಾ- ಫೋಟೋಗಳಲ್ಲಿ ನೋಡಿ

    ಬೆಂಗಳೂರು: ತಿರುಪತಿ ತಿಮ್ಮಪ್ಪನ ಆಶೀರ್ವಾದದೊಂದಿಗೆ ಬಹುಭಾಷಾ ತಾರೆ ನಮಿತಾ ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡಿದ್ದಾರೆ.

    ‘ನೀಲಕಂಠ’, ‘ಹೂ’, ‘ನಮಿತಾ ಐ ಲವ್ ಯು’ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಮಿಂಚಿದ್ದ ನಟಿ ನಮಿತಾ ಇಂದು ತಮ್ಮ ಇನಿಯ ವೀರೇಂದ್ರ ಜೊತೆ ಹಸೆಮಣೆ ಏರಿದ್ದಾರೆ. ಇಂದು ಮುಂಜಾನೆ 5.30ರ ಶುಭ ಮುಹೂರ್ತದಲ್ಲಿ ತಿರುಪತಿಯಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ನಮಿತಾ ಕೊರಳಿಗೆ ವೀರೇಂದ್ರ ಚೌಧರಿ ಮಾಂಗಲ್ಯಧಾರಣೆ ಮಾಡಿದ್ದಾರೆ. ಮದುವೆಯ ಸಂಭ್ರಮ ಸಡಗರ ನಮಿತಾ ಮನೆಯಲ್ಲಿ ರಾರಾಜಿಸುತ್ತಿತ್ತು.

    ಚಿತ್ರರಂಗದ ಗಣ್ಯರು ಮದುವೆಯಲ್ಲಿ ಭಾಗಿಯಾಗಿ ನವಜೋಡಿಯ ವಿವಾಹಕ್ಕೆ ಸಾಕ್ಷಿಯಾಗಿದ್ದು, ಶುಭಾಶಯವನ್ನು ಕೋರಿದ್ದಾರೆ. ರಾಧಿಕಾ-ಶರತ್ ಕುಮಾರ್ ದಂಪತಿ ಕೂಡ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಿದರು.

    ನವೆಂಬರ್ 22 ರಂದು ತಿರುಪತಿಯಲ್ಲಿಯೇ ನಮಿತಾ ರವರ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮದ ನಡೆದಿತ್ತು. ಇನ್ನು ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರಿಗಾಗಿ ನಮಿತಾ-ವೀರೇಂದ್ರ ಆರತಕ್ಷತೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆಯಲಿದೆ.

    2001 ರಲ್ಲಿ ‘ಮಿಸ್ ಇಂಡಿಯಾ’ ಸ್ಪರ್ಧಿಯಾಗಿದ್ದ ನಮಿತಾ ಬಳಿಕ ತೆಲುಗು ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿಯೂ ಸ್ಪರ್ಧಿಸಿದ್ದರು.

    https://www.youtube.com/watch?v=1OyWDbTqZ1A

    https://www.instagram.com/p/BbzWdGOBDR2/?hl=en&tagged=namveerwedding

    https://www.instagram.com/p/BbzTB5gghOD/?hl=en&tagged=namveerwedding

    https://www.instagram.com/p/BbzCaU5g5KV/?hl=en&tagged=namveerwedding

    https://www.instagram.com/p/BbzFomfApw5/?hl=en&tagged=namveerwedding

    https://www.instagram.com/p/Bb3ff91gywG/?hl=en&tagged=namveerwedding

    https://www.instagram.com/p/Bb3fWI7hFkM/?hl=en&tagged=namveerwedding

    https://www.instagram.com/p/Bb3MAPdFqZL/?hl=en&tagged=namveerwedding

    https://www.instagram.com/p/Bb3A9Bulwvx/?hl=en&tagged=namveerwedding

    https://www.instagram.com/p/Bby-3xPhoWQ/?hl=en&tagged=namveerwedding

    https://www.instagram.com/p/BbVtP6blwtx/?hl=en&tagged=namveerwedding

    https://www.instagram.com/p/BbzQ9n2nJjU/?hl=en&tagged=namveerwedding

    https://www.instagram.com/p/Bb1L0seBuCl/?hl=en&tagged=namveerwedding

    https://www.instagram.com/p/Bb1TsATAsoK/?hl=en&tagged=namveerwedding

    https://www.instagram.com/p/Bb3ExjHjxY4/?hl=en&tagged=namveerwedding

     

  • ಕಂಪೆನಿಯ 10 ಮಹಡಿಯಿಂದ ಟೆಕ್ಕಿ ಜಿಗಿದಿದ್ದು ಯಾಕೆ: ಪೋಷಕರು ಬಿಚ್ಚಿಟ್ಟರು ನಿಖರ ಕಾರಣ

    ಕಂಪೆನಿಯ 10 ಮಹಡಿಯಿಂದ ಟೆಕ್ಕಿ ಜಿಗಿದಿದ್ದು ಯಾಕೆ: ಪೋಷಕರು ಬಿಚ್ಚಿಟ್ಟರು ನಿಖರ ಕಾರಣ

    ಬೆಂಗಳೂರು: ಹುಟ್ಟುಹಬ್ಬವನ್ನು ಆಚರಿಸಿ ನಗರದಲ್ಲಿ ಕೆಲಸ ಮಾಡುತ್ತಿದ್ದ ಕಂಪೆನಿಯ 10ನೇ ಮಹಡಿಯಿಂದ ಗೋವಾ ಮೂಲದ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕೆ ನಿಖರ ಕಾರಣ ಸಿಕ್ಕಿದೆ.

    ಮಗಳು ಗೀತಾಂಜಲಿಯ ಶವ ಪಡೆಯಲು ಗೋವಾದಿಂದ ಪೋಷಕರು ಬೆಂಗಳೂರಿಗೆ ಬಂದಿದ್ದ ವೇಳೆ ಮಾರತ್ತಹಳ್ಳಿ ಪೊಲೀಸರು ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ಕಾರಣವನ್ನು ತಿಳಿಸಿದ್ದಾರೆ.

    ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಗೋವಾದಲ್ಲಿರುವ ನಮ್ಮ ಮನೆಗೆ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೀತಾಂಜಲಿ ಬಂದಿದ್ದಳು. ಹುಟ್ಟುಹಬ್ಬದ ದಿನವಾದ ಮಂಗಳವಾರ ಗೀತಾಂಜಲಿಗೆ ನಾವು ನಿಶ್ಚಿತಾರ್ಥ ಮಾಡಿದ್ದೆವು. ಆದರೆ ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಆದರೂ ವಿವಾಹ ನಿಶ್ಚಯಕ್ಕೆ ನಾವು ಬಲವಂತವಾಗಿ ಆಕೆಯನ್ನು ಒಪ್ಪಿಸಿದ್ದೆವು. ನಮ್ಮ ನಿರ್ಧಾರದಿಂದ ಆಕೆ ಮನನೊಂದಿದ್ದಳು. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.

    ಪೊಲೀಸ್ ತನಿಖೆಯ ವೇಳೆ ಗೀತಾಂಜಲಿ ವ್ಯಕ್ತಿಯೊಬ್ಬರನ್ನು ಪ್ರೀತಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    27 ವರ್ಷದ ಗೀತಾಂಜಲಿ ನಗರದ ಬೆಳ್ಳಂದೂರಿನ ಸೆಸ್ನಾ ಟೆಕ್ ಪಾರ್ಕ್ ನಲ್ಲಿರೊ ಅಡ್ವೊ ಆಪ್ಟಿಕ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ತಮ್ಮನ ಜೊತೆ ಎಚ್‍ಎಚ್‍ಎಸ್‍ಆರ್ ಲೇಔಟ್ ನಲ್ಲಿ ವಾಸವಾಗಿದ್ದ ಗೀತಾಂಜಲಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಮತ್ತು ಚಿಕ್ಕಮ್ಮನ ಜೊತೆ ಗೋವಾಕ್ಕೆ ತೆರಳಿದ್ದರು. ಪೋಷಕರ ಜೊತೆ ರಾತ್ರಿ ಬರ್ತ್ ಡೇ ಪಾರ್ಟಿ ಆಚರಿಸಿದ್ದ ಗೀತಾಂಜಲಿ ಬೆಳಗ್ಗೆ 8.30ರ ವಿಮಾನದಲ್ಲಿ ತಮ್ಮ, ಚಿಕ್ಕಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು.

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದು ನೇರವಾಗಿ ಮಾರತ್ತಹಳ್ಳಿಯ ಕಂಪನಿಗೆ ಬಂದಿದ್ದ ಗೀತಾಂಜಲಿ ನಂತರ ತಮ್ಮ ಮತ್ತು ಚಿಕ್ಕಮ್ಮನನ್ನು ಬನ್ನೇರುಘಟ್ಟ ರಸ್ತೆಯ ಮನೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದರು. ಬಳಿಕ ಮನೆಗೆ ಫೋನ್ ಮಾಡಿ ಬೆಂಗಳೂರು ತಲುಪಿದ್ದೇನೆ ಎಂದು ಹೇಳಿ ಕಂಪೆನಿಯನ್ನು ಪ್ರವೇಶಿಸಿದ್ದಾರೆ. ಕಂಪೆನಿಯ ಒಳಗಡೆ ಪ್ರವೇಶಿಸಿದ್ದರೂ ಯಾರ ಜೊತೆ ಮಾತನಾಡದೇ ಮಧ್ಯಾಹ್ನ 12.30ಕ್ಕೆ ನೇರವಾಗಿ 10ನೇ ಮಹಡಿಗೆ ತೆರಳಿ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

  • ಐದು ಕಾಲಿನ ವಿಚಿತ್ರ ಕರು ಜನನ

    ಐದು ಕಾಲಿನ ವಿಚಿತ್ರ ಕರು ಜನನ

    ಬೆಂಗಳೂರು: ಐದು ಕಾಲು ಇರುವ ವಿಚಿತ್ರ ಕರುವೊಂದು ಜನಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಳೆಸಂದ್ರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ರೈತ ರಾಜಣ್ಣ ಎಂಬುವರಿಗೆ ಸೇರಿದ ಹಸುವೊಂದು ಈ ರೀತಿಯ ವಿಚಿತ್ರ ರೀತಿಯಲ್ಲಿ ಇರುವ ಕರುವನ್ನು ಇಂದು ಮಧ್ಯಾಹ್ನ ಹಾಕಿದೆ. ಸಾಮಾನ್ಯ ಕರುವಿನಂತೆ ನಾಲ್ಕು ಕಾಲುಗಳಿದ್ದು, ಆದರೆ ಕರುವಿನ ಬೆನ್ನ ಮೇಲೆ ಮತ್ತೊಂದು ಕಾಲು ಮೂಡಿ ಬಂದಿದೆ. ಹೀಗಾಗಿ ವಿಚಿತ್ರವಾಗಿ ಜನಿಸಿರುವ ಕರುವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.

    ಈ ಹಿಂದೆ ರಾಮನಗರದಲ್ಲಿ ಎರಡು ತಲೆ ಹಾಗೂ ಮೂರು ಕಣ್ಣು ಇರುವ ಕರು ಹುಟ್ಟಿರುವುದನ್ನು ನೋಡಿದ್ದೇವು. ಈಗ ಐದು ಕಾಲುಗಳನ್ನು ಹೊಂದಿರುವ ಕರು ಹುಟ್ಟಿದೆ.

    ಇದನ್ನು ಓದಿ: ರಾಮನಗರ: ಮೂರು ಕಣ್ಣು ಎರಡು ತಲೆಯ ಕರು ಜನನ