Tag: Bangalore

  • ಸಿಸಿಬಿ ಮುಂದೆ 7 ಶಾರ್ಪ್ ಶೂಟರ್ ಗಳ ಬಗ್ಗೆ ಬಾಯ್ಬಿಟ್ಟ ತಾಹಿರ್

    ಸಿಸಿಬಿ ಮುಂದೆ 7 ಶಾರ್ಪ್ ಶೂಟರ್ ಗಳ ಬಗ್ಗೆ ಬಾಯ್ಬಿಟ್ಟ ತಾಹಿರ್

    ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆ ಮಾಡಲು ರವಿ ಬೆಳಗೆರೆ ಸುಪಾರಿ ನೀಡಿದ ಕುರಿತು ಶಶಿಧರ್ ಮುಂಡೇವಾಡ ಬಾಯ್ಬಿಟ್ಟ ನಂತರ ಸಿಸಿಬಿ ಅಧಿಕಾರಿಗಳು ವೆಪನ್ ಸಪ್ಲೈಯರ್ ತಾಹಿರ್ ನಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ.

    ಅಲ್ಲದೇ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಮಹಾರಾಷ್ಟ್ರದ ಏಳು ಶಾರ್ಪ್ ಶೂಟರ್ ಗಳ ಬಗ್ಗೆ ತಾಹಿರ್ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ತನಿಖೆ ವೇಳೆ ಸಿಸಿಬಿ ಮುಂದೆ ಹೇಳಿಕೆ ನೀಡಿರೋ ತಾಹೀರ್ ನಾನು ಶಾರ್ಪ್ ಶೂಟರ್ ಗಳಿಗೆ ರಿವಲ್ವಾರ್ ಸಪ್ಲೈ ಮಾಡುತ್ತೇನೆ. ಆದರೆ ಯಾರು ಯಾರನ್ನು ಕೊಲೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸಾಕಷ್ಟು ಜನರು ನನ್ನ ಬಳಿ ರಿವಲ್ವಾರ್ ಪಡೆದು ಹಣ ನೀಡಿದ್ದಾರೆ ಎಂದು ಹೇಳಿದ್ದಾನೆ.

    ಬೆಲೆ ಎಷ್ಟು?: ನನ್ನ ಬಳಿಯೇ ಬಂದು ರಿವಲ್ವಾರ್ ಪಡೆದರೆ 15 ಸಾವಿರ ರೂ. ನಾನೇ ರಿವಾಲ್ವರ್ ತಗೆದುಕೊಂಡು ಹೋದರೆ 30 ರಿಂದ 50 ಸಾವಿರ ರೂ. ಹಣ ಪಡೆದುಕೊಳ್ಳುತ್ತೇನೆ ಎಂಬ ಮಾಹಿತಿಯನ್ನು ನೀಡಿದ್ದಾನೆ. ತಾಹಿರ್ ನೀಡಿರುವ ಮಾಹಿತಿ ಆಧಾರಿಸಿ ಒಂದು ದಿನದ ಹಿಂದೆಯೇ ಮಹಾರಾಷ್ಟ್ರಕ್ಕೆ ತೆರಳಿರುವ ಎಸ್‍ಐಟಿ ತಂಡ ಅಲ್ಲಿಯೇ ಬಿಡು ಬಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

    https://www.youtube.com/watch?v=86k-IW3-boE

    https://www.youtube.com/watch?v=lgEoaxQ1l44

    https://www.youtube.com/watch?v=tvAkOpM6ZZo

  • ಈ ನಟಿಯೊಂದಿಗೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಬಿಗ್‍ಬಾಸ್ ಅಯ್ಯಪ್ಪ

    ಈ ನಟಿಯೊಂದಿಗೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಬಿಗ್‍ಬಾಸ್ ಅಯ್ಯಪ್ಪ

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲೆಲ್ಲೂ ಮದುವೆಯ ಸುದ್ದಿ ಜೋರಾಗಿದೆ. ವಾರಕ್ಕೆ ಕನ್ನಡ ಚಿತ್ರರಂಗದ ಒಬ್ಬರ ಮದುವೆ ಸುದ್ದಿ ಅಂತೂ ಕೇಳಿ ಬರುತ್ತಿದೆ.

    ಡಿಸೆಂಬರ್ 7 ಗುರುವಾರ ನಿರ್ದೇಶಕ ಪವನ್ ಒಡೆಯರ್ ನಿಶ್ಚಿತಾರ್ಥ ನಡೆದಿದೆ. ಇದರ ಹಿಂದೆಯೇ ಬಿಗ್‍ಬಾಸ್ ಸೀಸನ್ 4ರ ಸ್ಪರ್ಧಿ ಸಂಜನಾ ಕೂಡ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಈಗ ಅದೇ ಬಿಗ್‍ಬಾಸ್ ಖ್ಯಾತಿಯ, ಕ್ರಿಕೆಟಿಗ ಅಯ್ಯಪ್ಪ ಅವರು ಹಸೆಮಣೆ ಏರಲಿದ್ದಾರೆ ಎಂದು ತಿಳಿದುಬಂದಿದೆ.

    ಅಯ್ಯಪ್ಪ ಅವರು `ಕರ್ವ’ ಸಿನಿಮಾದ ಖ್ಯಾತಿಯ ಅನು ಜೊತೆ ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ. ಇಬ್ಬರೂ ಕೊಡಗು ಮೂಲದವರಾಗಿದ್ದು, ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

    ಅಯ್ಯಪ್ಪ ಮತ್ತು ಅನು ಬಹು ಕಾಲದಿಂದ ಸ್ನೇಹಿತರಾಗಿದ್ದರು. ಈಗ ಇಬ್ಬರೂ ಗುರುಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಲಿದ್ದಾರೆ. ನಿಶ್ಚಿತಾರ್ಥ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಅತೀ ಶೀಘ್ರದಲ್ಲಿ ಅಧಿಕೃತ ಮಾಹಿತಿ ನೀಡಲಿದ್ದಾರೆ. ಅನು ಕರ್ವ, ಪಾನಿಪೂರಿ, ಕಥಾ ವಿಚಿತ್ರಾ, ಲೈಫ್ ಸೂಪರ್ ಗುರು ಸಿನಿಮಾಗಳಲ್ಲಿ ನಟಿಸಿದ್ದಾರೆ.

    https://youtu.be/dVM9MNapbtI

     

     

     

  • 5 ವರ್ಷ ಪ್ರೀತಿಸಿ, 17 ವರ್ಷ ಸಂಸಾರ ಮಾಡ್ದ ಪತ್ನಿಯಿಂದ ಪತಿ ಹತ್ಯೆಗೆ ಸುಪಾರಿ!

    5 ವರ್ಷ ಪ್ರೀತಿಸಿ, 17 ವರ್ಷ ಸಂಸಾರ ಮಾಡ್ದ ಪತ್ನಿಯಿಂದ ಪತಿ ಹತ್ಯೆಗೆ ಸುಪಾರಿ!

    ಬೆಂಗಳೂರು: ಐದು ವರ್ಷ ಪ್ರೀತಿಸಿ ನಂತರ 17 ವರ್ಷ ಸಂಸಾರ ಮಾಡಿದ ಪತ್ನಿ ತನ್ನ ಪ್ರಿಯಕರನ ಜೊತೆಗೂಡಿ ಪತಿಯ ಕೊಲೆಗೆ ಸ್ಕೆಚ್ ಹಾಕಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಕುದುರೆಗೆರೆ ಕಾಲೋನಿಯಲ್ಲಿ ನಡೆದಿದೆ.

    ಪಾಂಡುರಂಗ ಮತ್ತು ಮಂಜುಳ 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪಾಂಡುರಂಗ ಚಿಕ್ಕದೊಂದು ಗಾರ್ಮೆಂಟ್ಸ್ ಕಾರ್ಖಾನೆಯನ್ನು ನಡೆಸಿ ಜೀವನ ಸಾಗಿಸುತ್ತಿದ್ದರು.

    ಕೆಲವು ದಿನಗಳ ಹಿಂದೆ ಗಾರ್ಮೆಂಟ್ಸ್ ಗೆ ಶ್ರೀನಿವಾಸ್ ಎಂಬಾತ ಹೊಸದಾಗಿ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿದ ನಂತರ ಆತನ ಜೊತೆ ಮಂಜುಳ ಸ್ನೇಹ ಬೆಳೆಸಿದ್ದಾಳೆ. ಇವರ ಸ್ನೇಹ ಪ್ರೀತಿಗೆ ತಿರುಗಿ ಪತಿಯನ್ನೇ ಕೊಲೆ ಮಾಡುವ ಹಂತಕ್ಕೆ ತಲುಪಿದೆ.

    ಪತಿಗೆ ಕೆಲವು ದಿನಗಳಿಂದ ಇವರ ಮೇಲೆ ಅನುಮಾನವಿತ್ತು. ಒಂದು ದಿನ ಪತ್ನಿ ತನ್ನ ಫೋನ್ ಬಿಟ್ಟು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಫೋನಿನ ವಾಯ್ಸ್ ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಕೊಲೆಗೆ ಪ್ಲಾನ್ ಮಾಡಿದ್ದ ವಿಚಾರ ಪಾಂಡುರಂಗಗೆ ಗೊತ್ತಾಗಿದೆ. ಪತಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಶ್ರೀನಿವಾಸ್ ಜೊತೆ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾಳೆ.

    ಪತ್ನಿ ಓಡಿ ಹೋದ ಬಳಿಕ ಪತಿ ಸಾಕ್ಷಿ ಸಮೇತ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆಯೇ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಆದರೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇವರಿಬ್ಬರು ಸೇರಿ ನನ್ನನ್ನು ಹತ್ಯೆ ಮಾಡುತ್ತಾರೆ. ಆಮೇಲೆ ನನ್ನ ಇಬ್ಬರು ಮಕ್ಕಳು ಅನಾಥರಾಗುತ್ತಾರೆ. ಆದ್ದರಿಂದ ಪೊಲೀಸರು ಕೂಡಲೇ ಸೂಕ್ತ ಕ್ರಮಕೈಗೊಂಡು ನನಗೆ ರಕ್ಷಣೆ ನೀಡಬೇಕೆಂದು ಪಾಂಡುರಂಗ ಒತ್ತಾಯಿಸಿದ್ದಾರೆ.

     

  • ಸಾವಿನಂಚಿನಲ್ಲಿರೋ ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಕಿಚ್ಚ

    ಸಾವಿನಂಚಿನಲ್ಲಿರೋ ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ತೆರೆ ಮೇಲೆ ಮಾತ್ರ ಹೀರೋ ಅಲ್ಲ. ತೆರೆಯ ಹಿಂದೆಯೂ ಕೂಡ ಹೀರೋ ಎಂಬುದನ್ನು ಕಿಚ್ಚ ಸಾಬೀತು ಮಾಡಿದ್ದಾರೆ. ಸಾವಿನ ಅಂಚಿನಲ್ಲಿರುವ ಅಭಿಮಾನಿಯೊಬ್ಬರ ಕೊನೆಯ ಆಸೆಯನ್ನು ಸುದೀಪ್ ಈಡೇರಿಸಿದ್ದಾರೆ.

    ಕಿಚ್ಚನ ಅಭಿಮಾನಿ ವಿನುತಾ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಉಲ್ಬಣಗೊಂಡು ನಾಲ್ಕನೆಯ ಹಂತ ತಲುಪಿದೆ. ವೈದ್ಯರು ವಿನುತಾ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಸಿದ್ದಾರೆ.

    ಸಾವಿನಂಚಿನಲ್ಲಿರುವ ವಿನುತಾ ಸುದೀಪ್ ಅವರ ದೊಡ್ಡ ಅಭಿಮಾನಿ, ಅವರ ಕೊನೆಯ ಆಸೆ ಏನು ಎಂದು ಕೇಳಿದಾಗ, ಒಮ್ಮೆ ತಮ್ಮ ಮೆಚ್ಚಿನ ನಟನನ್ನು ನೋಡಬೇಕು ಎಂಬ ಆಸೆಯನ್ನು ಹೇಳಿಕೊಂಡಿದ್ದಾರೆ.

    ವಿನುತಾರ ಕೊನೆಯ ಆಸೆಯ ಬಗ್ಗೆ ಕಿಚ್ಚಾ ಸುದೀಪ್ ಸೇನಾ ಸಮಿತಿಯು (KSSS) ನಟ ಸುದೀಪ್ ಅವರಿಗೆ ಹೇಳಿತ್ತು. ವಿಷಯ ತಿಳಿದ ನಂತರ ಸುದೀಪ್ ವಿನುತಾ ಕೊನೆಯಾಸೆಯಂತೆ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆ ಮಾತನಾಡುತ್ತಾ ಸಮಯ ಕಳೆದಿದ್ದಾರೆ.

  • ಮೂವರು ಸರ್ಜಾ ಹೀರೋಗಳ ಜೊತೆ ದರ್ಶನ್ ಸಖತ್ ಸ್ಟೆಪ್

    ಮೂವರು ಸರ್ಜಾ ಹೀರೋಗಳ ಜೊತೆ ದರ್ಶನ್ ಸಖತ್ ಸ್ಟೆಪ್

    ಬೆಂಗಳೂರು: ಇದೊಂದು ಅಪರೂಪದ ಡ್ಯಾನ್ಸ್ ಆಗಿದ್ದು, ಸ್ಯಾಂಡಲ್‍ವುಡ್‍ನ ದಿಗ್ಗಜ ನಟರು ಒಟ್ಟಾಗಿ ಸೇರಿ ಸ್ಟೆಪ್ ಹಾಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಆ್ಯಕ್ಷನ್ ಪ್ರಿನ್ಸ್ ಧ್ರುವ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಒಟ್ಟಿಗೆ ಸೇರಿ ಒಂದೇ ಥರದ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ ಆಂಜನೇಯನಿಗೆ ನೃತ್ಯ ನಮನ ಸಲ್ಲಿಸಿದ್ದಾರೆ.

    ಅರ್ಜುನ್ ಸರ್ಜಾ ನಿರ್ದೇಶನದ `ಪ್ರೇಮಬರಹ’ ಚಿತ್ರದ ಹಾಡಿನ ಚಿತ್ರೀಕರಣವೊಂದು ಬೆಂಗಳೂರಿನ ಹಳೆಯ ಏರ್‍ಪೋರ್ಟ್ ರಸ್ತೆಯ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿದೆ. ಪ್ರೇಮಬರಹ ಚಿತ್ರದಲ್ಲಿ ದರ್ಶನ್, ಧ್ರುವ, ಚಿರಂಜೀವಿ ಹಾಗೂ ಅರ್ಜುನ್ ಸರ್ಜಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ.

    ಆಂಜನೇಯ ವಿಗ್ರಹದ ಮುಂದೆ ಸೆಟ್ ನಿರ್ಮಾಣ ಮಾಡಿ ನಾಲ್ವರು ನಟರು ಮತ್ತು ಸಹ ನೃತ್ಯ ತಂಡ ಕೇಸರಿ ಬಣ್ಣದ ಬಟ್ಟೆ, ತಲೆಗೆ ಪಟ್ಟಿಯನ್ನು ಕಟ್ಟಿಕೊಂಡು, ಕೆಂಪು ಬಣ್ಣವನ್ನು ಮೈ, ಮುಖಕ್ಕೆ ಹಚ್ಚಿಕೊಂಡು “ರಾಮನ ಪಂಚಪ್ರಾಣ ಹನುಮ, ಹನುಮ’  ಎಂಬ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

    ಪ್ರೇಮಬರಹ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಮತ್ತು ಚಂದನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಪ್ರತಾಪ್ ಸಿಂಹಗೆ ಪೊಲಿಟಿಕಲ್ ಮೆಚ್ಯುರಿಟಿ ಇಲ್ಲ: ಸಿಎಂ ಸಿದ್ದರಾಮಯ್ಯ

    ಪ್ರತಾಪ್ ಸಿಂಹಗೆ ಪೊಲಿಟಿಕಲ್ ಮೆಚ್ಯುರಿಟಿ ಇಲ್ಲ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಇನ್ನೂ ಪೊಲಿಟಿಕಲ್ ಮೆಚ್ಯೂರಿಟಿ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಹುಣುಸೂರು ಹನುಮ ಜಯಂತಿ ಘಟನೆಗೆ ಕೆಂಪಯ್ಯ ಕಾರಣ ಎಂದು ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರತಾಪ್ ಸಿಂಹಗೆ ಪೊಲಿಟಿಕಲ್ ಮೆಚ್ಯುರಿಟಿ ಬರಬೇಕು. ಆದರೆ ಅವರಿಗೆ ಮೆಚ್ಯುರಿಟಿ ಇಲ್ಲ. ಜನರ ಪ್ರತಿನಿಧಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ಸಹಕರಿಸಬೇಕು. ಅದು ಬಿಟ್ಟು ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ಒಂದು ವೇಳೆ ಶಾಂತಿ ಕದಡುವ ಕೆಲಸ ಮಾಡಿದರೆ, ಅದನ್ನ ನಿಯಂತ್ರಣ ಮಾಡೋದು ವಿಪಕ್ಷ ಕೆಲಸವಲ್ಲ. ಅದು ಸರ್ಕಾರದ ಕೆಲಸ. ಆದ್ದರಿಂದ ಸರ್ಕಾರವೇ ಆ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

    ಪೊಲೀಸರು ನಿಗದಿ ಮಾಡಿದ ರಸ್ತೆಯಲ್ಲಿ ಮೆರವಣಿಗೆ ಹೋಗಬೇಕಿತ್ತು. ಆದರೆ ಪ್ರತಿಷ್ಠೆಗಾಗಿ ಬೇರೆ ಮಾರ್ಗದಲ್ಲಿ ಹೋಗಿದ್ದಾರೆ. ಸಮಾಜದಲ್ಲಿ ಶಾಂತಿ ಹಾಳು ಮಾಡೋ ಸಲುವಾಗಿ ಈ ರೀತಿ ಮಾಡಿದ್ದಾರೆ. ಇದಕ್ಕೆಲ್ಲಾ ಸರ್ಕಾರ ಅವಕಾಶ ಮಾಡಿಕೊಡಲ್ಲ. ಇದರಲ್ಲಿ ಕೆಂಪಯ್ಯ ಪಾತ್ರ ಏನು ಇಲ್ಲ ಎಂದು ಪ್ರತಾಪ್ ಸಿಂಹ ಮಾಡಿದ್ದ ಆರೋಪದ ವಿರುದ್ಧ ತಿರುಗೇಟು ನೀಡಿದರು.

    ಎಸ್.ಪಿ.ರವಿ ಚನ್ನಣ್ಣನವರ್‍ಗೆ ಕೆಂಪಯ್ಯ ಮಾತಾಡಿದರೆ ತಪ್ಪೇನು? ಯಾಕೆ ಮಾತಾಡಬಾರದು. ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಮಾತಾಡಿದ್ರೆ ಏನು ತಪ್ಪಿದೆ? ಅವರು ಗೃಹ ಇಲಾಖೆ ಸಲಹೆಗಾರರಾಗಿದ್ದು ಯಾಕೆ ಕೇಳಬಾರದು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಂಗಳವಾರ ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್ ನಲ್ಲಿ ನೀವು ಪೊಲೀಸ್ ಇಲಾಖೆಗೆ ನಿಷ್ಠರೋ, ಕೆಂಪಯ್ಯ ಅವರಿಗೆ ನಿಷ್ಠರೋ. ನಿಮ್ಮ ಮಾಸ್ಟರ್ ಯಾರು ಅಂತ ನನಗೆ ಗೊತ್ತಿದೆ. ಕರ್ತವ್ಯದ ಹೆಸರಿನಲ್ಲಿ ಜಿಲ್ಲಾಧಿಕಾರಿಗಳನ್ನು ಎಳೆದು ತರಬೇಡಿ ಎಂದು ಮೈಸೂರು ಎಸ್‍ಪಿ ರವಿಚನ್ನಣ್ಣನವರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

    https://www.youtube.com/watch?v=4lHDGBADYCs

    https://youtu.be/0C5M6aKA7SQ

     

  • ಕೋಟಿಗೊಬ್ಬ 3 ಚಿತ್ರಕ್ಕೆ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಕೋಟಿಗೊಬ್ಬ 3 ಚಿತ್ರಕ್ಕೆ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಬರಿ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೇ ತಮಿಳು, ತೆಲುಗು ಹಿಂದಿ ಅಷ್ಟೇ ಅಲ್ಲದೆ ಹಾಲಿವುಡ್ ನಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಮೂಲಕ ಸುದೀಪ್ ಜನಪ್ರಿಯತೆ, ಡಿಮ್ಯಾಂಡ್, ಅಭಿಮಾನಿಗಳು ಹೆಚ್ಚಾಗುತ್ತಿದ್ದಂತೆ ಅವರ ಸಂಭಾವನೆ ಕೂಡ ಹೆಚ್ಚಾಗಿದೆ.

    ಒಂದು ಕಾಲದಲ್ಲಿ ಸ್ಯಾಂಡಲ್‍ವುಡ್ ನಲ್ಲಿ 8 ಕೋಟಿ ರೂ.ಗೆ ಒಂದು ಸ್ಟಾರ್ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಈಗ ಒಂದು ಸಿನಿಮಾದ ಒಬ್ಬ ಸ್ಟಾರ್ ನಟನಿಗೆ 8 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ.

    ಇಷ್ಟು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರುವ ನಟ ಕಿಚ್ಚ. ಇವರು ತಮ್ಮ ಹೊಸ ಚಿತ್ರಕ್ಕೆ ಬರೋಬ್ಬರಿ 8 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೇ ನಟ ಧ್ರುವ ಸರ್ಜಾ 6 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆಗ ಈ ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಸುದ್ದಿ ಆಗಿತ್ತು. ಆದರೆ ಇದರ ಹಿಂದೆಯೇ ಕಿಚ್ಚನ ಸಂಭಾವನೆ ಬಗ್ಗೆ ಕೂಡ ಗಾಂಧಿನಗರದಲ್ಲಿ ಮಾತು ಶುರುವಾಗಿದೆ.

    ಕಿಚ್ಚ `ಕೋಟಿಗೊಬ್ಬ 2′ ಸಿನಿಮಾದ ನಂತರ `ಕೋಟಿಗೊಬ್ಬ 3′ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿಯೇ 8 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ತಮ್ಮ `ಕೋಟಿಗೊಬ್ಬ 3′ ಸಿನಿಮಾಗೆ 8 ಕೋಟಿ ಸಂಭಾವನೆ ನೀಡಿದ್ದಾರಂತೆ. ಈ ವಿಚಾರದ ಬಗ್ಗೆ ಸ್ವತಃ ಅವರೇ ಮಾತನಾಡಿ, ನಿರ್ಮಾಪಕರ ಜೇಬನ್ನು ಭದ್ರವಾಗಿಸುವ ನಟರಲ್ಲಿ ಸುದೀಪ್ ಕೂಡ ಒಬ್ಬರು. ಅವರ ಡಿಮ್ಯಾಂಡ್ ಏನು ಎಂದು ಒಬ್ಬ ನಿರ್ಮಾಪಕನಾಗಿ ನನಗೆ ಗೊತ್ತಿದೆ. ಇದುವರೆಗೂ ನನಗೆ ಇಷ್ಟು ಸಂಭಾವನೆ ಕೊಡಿ ಎಂದು ಕೇಳಿ ಪಡೆದವರಲ್ಲ. ನಾನೇ ಅವರ ಮುಂದೆ 8 ಕೋಟಿ ರೂ. ಆಫರ್ ಕೊಟ್ಟೆ. ನಂತರ ಅವರು `ಕೋಟಿಗೊಬ್ಬ 2′ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.

    ನಿರ್ಮಾಪಕರು ಉಳಿದರೆ ಸಿನಿಮಾರಂಗ ಉಳಿಯುತ್ತದೆ ಎಂಬ ಭಾವನೆ ಹೊಂದಿರುವವರು. ಅವರಿಗೆ ಇಷ್ಟು ಸಂಭಾವನೆ ಕೊಟ್ಟಿರುವುದು ನನಗೆ ಖುಷಿಯಾಗಿದೆ. ಇದರಿಂದ ಯಾವುದೇ ರೀತಿಯ ಕಷ್ಟ ಇಲ್ಲ ಎಂದು ಹೇಳಿದ್ದಾರೆ.

    ಸುದೀಪ್ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ಬೇಡಿಕೆ ನಟರಾಗಿದ್ದಾರೆ. ಹಾಲಿವುಡ್ ನಲ್ಲಿ `ರೈಸನ್’ ಸಿನಿಮಾ ಮಾಡುತ್ತಿರುವ ಇವರು ಬಾಲಿವುಡ್ ನಲ್ಲಿ ಬಚ್ಚನ್ ಜೊತೆ ಮತ್ತೆ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯಕ್ಕೆ `ದಿ ವಿಲನ್’ ಸಿನಿಮಾದ ಹಾಡಿನ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ನಂತರ `ಕೋಟಿಗೊಬ್ಬ 3′ ಸಿನಿಮಾದ ಶೂಟಿಂಗ್‍ನನ್ನು ನಿರ್ಮಾಪಕರು ಶುರು ಮಾಡುವ ಪ್ಲಾನ್ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡದ ನಟಿಯನ್ನೇ ಆಯ್ಕೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

    ಕಿಚ್ಚನ ಕೈ ನಲ್ಲಿ `ದಿ ವಿಲನ್’, `ಪೈಲ್ವಾನ್’, `ರೈಸನ್’ ಮತ್ತು `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾಗಳು ಇವೆ.

  • 60 ವರ್ಷ ಹಳೇ ಶಾಲಾ ಕಟ್ಟಡ ತೆರವುಗೊಳಿಸುವಾಗ ಧರೆಗುರುಳಿದ ವಿದ್ಯುತ್ ಕಂಬಗಳು- ತಪ್ಪಿತು ಭಾರೀ ಅನಾಹುತ

    60 ವರ್ಷ ಹಳೇ ಶಾಲಾ ಕಟ್ಟಡ ತೆರವುಗೊಳಿಸುವಾಗ ಧರೆಗುರುಳಿದ ವಿದ್ಯುತ್ ಕಂಬಗಳು- ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ಸುಮಾರು 60 ವರ್ಷದ ಹಳೇ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಗೋಡೆ ಕುಸಿದ ಪರಿಣಾಮ ವ್ಯಾಪಾರ ನಡೆಯುವ ಸಂದರ್ಭದಲ್ಲೇ ಸಾಲು ಸಾಲು ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರಂ ಧರೆಗುಳಿದ ಘಟನೆ ನಗರದ ಯಶವಂತಪುರ ಮಾರ್ಕೆಟ್ ಬಳಿ ನಡೆದಿದೆ.

    ಯಶವಂತಪುರದ ತರಕಾರಿ ಮಾರ್ಕೆಟ್ ಬಳಿ ಇರುವ ಸುಮಾರು 60 ವರ್ಷ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ ಈ ವೇಳೆ ಏಕಾಏಕಿ ಗೋಡೆ ಕುಸಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದೆ. ಪರಿಣಾಮ 2 ವಿದ್ಯುತ್ ಟ್ರಾನ್ಸ್ ಫಾರಂ ಮತ್ತು 6 ವಿದ್ಯುತ್ ಕಂಬಗಳು ನೆಲಕ್ಕುರುಳಿ ಎರಡು ಬೈಕ್ ಮತ್ತು ನಾಲ್ಕು ತರಕಾರಿ ಗಾಡಿಗಳು ಜಖಂಗೊಂಡಿದೆ. ಘಟನೆಯಲ್ಲಿ ಸ್ಥಳದಲ್ಲಿದ್ದ ವ್ಯಾಪಾರಿಗಳು ಅನಾಹುತದಿಂದ ಪಾರಾಗಿದ್ದಾರೆ.

    ಕಟ್ಟಡ ತೆರವು ಕಾರ್ಯಾಚರಣೆ ಕುರಿತು ಸ್ಥಳೀಯ ವ್ಯಾಪಾರಿಗಳಿಗೆ ಮಾಹಿತಿ ನೀಡಿ ಈ ಸ್ಥಳದಲ್ಲಿ ವ್ಯಾಪಾರ ಮಾಡದಂತೆ ಸೂಚನೆ ನೀಡಲಾಗಿತ್ತು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡವನ್ನು ಕರೆಸಲಾಗಿದೆ. ತ್ವರಿತವಾಗಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಾಗುವುದು ಎಂದು ಯಶವಂತಪುರ ವಾರ್ಡ್ ಕಾರ್ಪೊರೇಟರ್ ವೆಂಕಟೇಶ್ ತಿಳಿಸಿದರು.

    ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಬೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಬೇರೆ ಕಂಬಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದರು.

     

  • ಲೋಡ್ ಶೆಡ್ಡಿಂಗ್ ಇಲ್ಲಾ ಅಂತಾರೆ ಪವರ್ ಮಂತ್ರಿ – 2 ದಿನದಲ್ಲಿ ಬಂತು 13 ಸಾವಿರ ಕಂಪ್ಲೆಂಟ್

    ಲೋಡ್ ಶೆಡ್ಡಿಂಗ್ ಇಲ್ಲಾ ಅಂತಾರೆ ಪವರ್ ಮಂತ್ರಿ – 2 ದಿನದಲ್ಲಿ ಬಂತು 13 ಸಾವಿರ ಕಂಪ್ಲೆಂಟ್

    ಬೆಂಗಳೂರು: ಒಂದು ಕಡೆ ಒಖಿ ಚಂಡಮಾರುತ ಅಬ್ಬರ. ಇನ್ನೊಂದೆಡೆ ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟ ಶುರುವಾಗಿದೆ.

    ಪವರ್ ಮಿನಿಸ್ಟರ್ ಡೊಂಟ್ ವರಿ ಲೋಡ್ ಶೆಡ್ಡಿಂಗ್ ಆಗಲ್ಲ ಅಂತಾ ಹೇಳಿದ್ದರೂ ಬೆಂಗಳೂರಿನಲ್ಲಿ ಕರೆಂಟ್ ಕೈ ಕೊಡುತ್ತಿದೆ. ಉಷ್ಣ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಎದುರಾದ ಬೆನ್ನಲ್ಲೆ ಕರ್ನಾಟಕ ಕತ್ತಲೆಯಲ್ಲಿ ಇರುವಂತಾಗಿದೆ.

    ಬೆಸ್ಕಾಂ ವ್ಯಾಪ್ತಿಯಲ್ಲಿ ಡಿಸೆಂಬರ್ 1 ಹಾಗೂ 2 ರಂದು ಹೆಲ್ಪ್ ಲೈನ್‍ಗೆ ಬರೋಬ್ಬರಿ 13 ಸಾವಿರ ಕಂಪ್ಲೆಂಟ್ ಕರೆಗಳು ಬಂದಿದೆ. ಕೆಲವಡೆ ಒಖಿ ಚಂಡಮಾರುತದ ಎಫೆಕ್ಟ್ ಗೆ ಮಳೆಯ ಹೊಡೆತಕ್ಕೆ ಕರೆಂಟ್ ಕೈ ಕೊಟ್ಟರೆ ಮತ್ತೊಂದೆಡೆ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಶುರುವಾಗಿದೆ.

     

  • ಪ್ರೀತಿಸಿ ಮದ್ವೆಯಾಗಿ ಮಕ್ಕಳಾದ್ಮೇಲೆ ಹೆಂಡ್ತಿ ಬೋರ್ ಅಂತಾ 2 ಕಂದಮ್ಮಗಳ ಜೊತೆ ಪತಿ ಪರಾರಿ!

    ಪ್ರೀತಿಸಿ ಮದ್ವೆಯಾಗಿ ಮಕ್ಕಳಾದ್ಮೇಲೆ ಹೆಂಡ್ತಿ ಬೋರ್ ಅಂತಾ 2 ಕಂದಮ್ಮಗಳ ಜೊತೆ ಪತಿ ಪರಾರಿ!

    ಬೆಂಗಳೂರು: ಪ್ರೀತಿಸಿ ಮದುವೆಯಾಗಿ ಮಕ್ಕಳಾದ ಮೇಲೆ ಹೆಂಡತಿ ಬೋರ್ ಎಂದು ಮಕ್ಕಳನ್ನು ಕರೆದುಕೊಂಡು ಪತಿ ಪರಾರಿಯಾಗಿರುವ ಘಟನೆ ಸಿಲಿಕಾಲ್ ಸಿಟಿಯಲ್ಲಿ ನಡೆದಿದೆ.

    ನಗರದ ಥಣಿಸಂದ್ರ ನಿವಾಸಿ ಹೇಮಾವತಿ, ಬೆಂಗಳೂರಿನಲ್ಲಿ ಲಾರಿ ಡ್ರೈವರ್ ಆಗಿದ್ದ ಮೂಲತಃ ಮಹಾರಾಷ್ಟ್ರದ ಹುಡುಗ ಪ್ರವೀಣ್ ರಾಥೋಡ್‍ನನ್ನು ಪ್ರೀತಿಸಿ ಮದುವೆಯಾಗಿದ್ದರು. ವಿವಾಹದ ಮೊದ ಮೊದಲು ಚೆನ್ನಾಗಿದ್ದ ಪತಿ ಪ್ರವೀಣ್ ಒಂದು ಮಗು ಆದ ಮೇಲೆ ಅಸಲಿ ಮುಖ ತೋರಿಸಲು ಶುರು ಮಾಡಿದ್ದಾನೆ. ಇದೀಗ ಎರಡನೇ ಮಗು ಆದ ಬಳಿಕ ತನಗೆ ಹೆಂಡತಿ ಬೋರು ಎಂದು ಹೇಳಿ ರಾತ್ರೋ ರಾತ್ರಿ ಇಬ್ಬರು ಕಂದಮ್ಮಗಳನ್ನು ಎತ್ಕೊಂಡು ನಾಪತ್ತೆಯಾಗಿದ್ದಾನೆ.

    ಹೇಮಾವತಿ ಕಳೆದ 3 ತಿಂಗಳಿಂದ ಮಹಾರಾಷ್ಟ್ರದ ಪೊಲೀಸ್ ಠಾಣೆಗಳಿಗೆಲ್ಲಾ ಅಲೆದಾಡುತ್ತಿದ್ದಾರೆ. ಮತ್ತೊಂದೆಡೆ ಪ್ರವೀಣ್ ಲಾರಿ ಮಾಲೀಕ ರೆಡ್ಡಿ ಅನ್ನೋರ ಬಳಿ ಸಾಲ ಮಾಡಿ ಅದನ್ನು ವಾಪಸ್ ಕೂಡ ಮಾಡಿಲ್ಲ. ಇದರಿಂದ ಲಾರಿ ಮಾಲೀಕ, ಗಂಡ ಬಿಟ್ಟ ಹೋಗಿದ್ದಾನೆ, ನನ್ನ ಜೊತೆ ಬಂದು ಇರು ಅಂತಾ ಅಶ್ಲೀಲವಾಗಿ ಮಾತಾನಾಡಿ ಹಿಂಸೆ ಕೊಡುತ್ತಾ ಇದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಕರ್ನಾಟಕದ ಪೊಲೀಸರು ಈ ವಿಚಾರದಲ್ಲಿ ಸಹಾಯ ಮಾಡುತ್ತಿಲ್ಲ, ತನಗೆ ಗಂಡ ಬೇಡ, ಇಬ್ಬರು ಕಂದಮ್ಮಗಳನ್ನು ವಾಪಸ್ ಕೊಡಿಸಿ ಎಂದು ಹೇಮಾವತಿ ಕಣ್ಣೀರು ಇಡುತ್ತಿದ್ದಾರೆ.