Tag: Bangalore

  • ಮುಂದಿನ ಚುನಾವಣೆಯಲ್ಲಿ ಸಿಎಂ ಪರ ಕಿಚ್ಚ, ದರ್ಶನ್ ಪ್ರಚಾರ?

    ಮುಂದಿನ ಚುನಾವಣೆಯಲ್ಲಿ ಸಿಎಂ ಪರ ಕಿಚ್ಚ, ದರ್ಶನ್ ಪ್ರಚಾರ?

    ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಸ್ಯಾಂಡಲ್‍ವುಡ್ ಗ್ಲಾಮರ್ ಕೊಡಲು ಪ್ಲಾನ್ ಮಾಡಿದ್ದಾರೆ. ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಕಲರ್‍ಫುಲ್ ಆಗಲಿದೆ.

    ಕಾಂಗ್ರೆಸ್ ನೇತೃತ್ವವನ್ನು ವಹಿಸಿರುವ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಸ್ವಕೇತ್ರದಲ್ಲಿ ಸಿನಿಮಾ ತಾರೆಯರ ದಂಡು ಇಳಿಸಿ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದ್ದಾರೆ. ನಟ ಸುದೀಪ್, ದರ್ಶನ್, ನಟಿ ರಮ್ಯಾ, ಭಾವನಾ ಅಖಾಡದಲ್ಲಿ ಇರುತ್ತಾರೆ ಎಂದು ಹೇಳಲಾಗಿದೆ.

    ಈಗಾಗಲೇ ಪಕ್ಷದ ಪ್ರಚಾರದ ಹೊಣೆ ಹೊರಲು ಮಾಜಿ ಸಂಸದೆ ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ನಟಿ ಭಾವನಾ ಪ್ರಚಾರದಲ್ಲಿ ಸಕ್ರಿಯವಾಗಿ ಇರುತ್ತಾರೆ. ಇವರ ಜೊತೆಗೆ ದರ್ಶನ್ ತಾಯಿ, ಇವರು ಈಗಾಗಲೇ ಮಹಿಳಾ ಕಾಂಗ್ರೆಸ್ ಘಟಕದಲ್ಲಿದ್ದಾರೆ. ಆದ್ದರಿಂದ ದರ್ಶನ್ ಸಿಎಂ ಕುಟುಂಬಕ್ಕೆ ಮನೆ ಮಗ ಇದ್ದಂತೆ. ಹಾಗಾಗಿ ತಾಯಿ ಜೊತೆಗೆ ದರ್ಶನ್ ಕೂಡ ವರುಣಾ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ ಅಂತ ಹೇಳಲಾಗಿದೆ.

    ಸೋಮವಾರ ಸುದೀಪ್ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿಯ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ಸಿಎಂ ತಮ್ಮ ಹಾಗೂ ಮಗನ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸುದೀಪ್ ಒಪ್ಪಿಕೊಂಡಿದ್ದು, ಚುನಾವಣಾ ಪ್ರಚಾರದಲ್ಲಿ ಸುದೀಪ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

  • ತಂದೆಯ ಆರೋಗ್ಯದ ಬಗ್ಗೆ ಮಗಳು ಚೇತನಾ ಬೆಳಗೆರೆ ಹೇಳಿದ್ದು ಹೀಗೆ

    ತಂದೆಯ ಆರೋಗ್ಯದ ಬಗ್ಗೆ ಮಗಳು ಚೇತನಾ ಬೆಳಗೆರೆ ಹೇಳಿದ್ದು ಹೀಗೆ

    ಬೆಂಗಳೂರು: ತಂದೆ ರವಿಬೆಳಗೆರೆ ಅವರಿಗೆ ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊದಲ ಹಂತದ ಆರೋಗ್ಯ ಪರೀಕ್ಷೆ ನಡೆದಿರುವುದಿರಂದ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ ಎಂಬುದಾಗಿ ಚೇತನಾ ಬೆಳಗೆರೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ್ದಾರೆ ಎಂಬ ಪ್ರಕರಣದ ಕುರಿತು ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಧೀಶ ಜಗದೀಶ್ ಅವರು ರವಿಬೆಳಗೆರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶ ನೀಡಿದ್ದಾರೆ. ಅಲ್ಲದೇ ಜೈಲಿನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂಬುದಾಗಿ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

    ನಮ್ಮ ತಂದೆ ಆನಾರೋಗ್ಯ ಸಮಸ್ಯೆಯಿಂದ ಬಳಸುತ್ತಿದ್ದು, ಈಗಾಗಲೇ ಈ ಕುರಿತು ಚಿಕಿತ್ಸೆಯ ದಾಖಲೆಗಳನ್ನು ಕೋರ್ಟ್‍ಗೆ ಸಲ್ಲಿಸಲಾಗಿದೆ. ನ್ಯಾಯಾಲಯದ ಮೂಲಕವೇ ಈ ದಾಖಲೆಗಳನ್ನು ಸರ್ಕಾರಿ ವೈದ್ಯರಿಗೆ ಸಲ್ಲಿಸಲಾಗುತ್ತದೆ. ವೈದ್ಯರು ಸಲ್ಲಿಸುವ ವರದಿಯ ಆಧಾರ ಮೇಲೆ ನಮ್ಮ ಫ್ಯಾಮಿಲಿ ಡಾಕ್ಟರ್ ಅವರ ಮೂಲಕ ಚಿಕಿತ್ಸೆ ನೀಡಬೇಕೇ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕೇ ಎಂಬುದನ್ನು ಕಾನೂನು ನಿಯಮಗಳ ಆಧಾರ ಮೇಲೆ ನಿರ್ಧರಿಸಲಾಗುತ್ತದೆ ಎಂದರು.

    ಅನಾರೋಗ್ಯ ಸಮಸ್ಯೆ ಇರುವ ಕಾರಣ ನಮ್ಮ ತಂದೆಗೆ ಸೂಕ್ತ ಚಿಕಿತ್ಸೆ ನೀಡಲು ಮಾತ್ರ ನಾವು ಮನವಿ ಮಾಡಿದ್ವಿ. ಆದರೆ ಕೋರ್ಟ್ ಜಾಮೀನು ನೀಡುವುದು, ಬಿಡುವುದು ನಿರ್ಧರಿಸುತ್ತದೆ. ಆದರೆ ನಾವು ನಮ್ಮ ತಂದೆಯ ಆರೋಗ್ಯದ ಕುರಿತು ಚಿಂತೆಗೆ ಒಳಗಾಗಿದ್ದು, ಅವರಿಗೆ ನಿಲ್ಲಲು, ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕೋರ್ಟ್ ಮೆಡಿಕಲ್ ಚಿಕಿತ್ಸೆ ನೀಡಲು ಸಮ್ಮತಿ ನೀಡಿರುವುದಕ್ಕೆ ನಮಗೆ ಸಮಾಧಾನ ನೀಡಿದೆ ಎಂದು ತಿಳಿಸಿದರು.

    ರವಿಬೆಳಗೆರೆ ಅವರ ಕಾಲಿಗೆ ಗಾಯವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಭಾನುವಾರ ಅವರನ್ನು ವಿಲ್ ಚೇರ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಗಾಯವಾಗಿದೆ. ಅವರಿಗೆ ಈಗಾಗಲೇ ಸಕ್ಕರೆ ಕಾಯಿಲೆ ಇರುವುದರಿಂದ ಅದು ಗ್ಯಾಂಗ್ರಿನ್ ಆಗಿ ತಿರುಗುವ ಸಾಧ್ಯತೆಗಳಿವೆ. ಆದ್ದರಿಂದ ಅವರನ್ನು ಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಬೇಕಿದೆ. ಕೋರ್ಟ್ ಗೆ ತೆರಳುವ ವೇಳೆಯೂ ಅವರನ್ನು ನಡೆಸಿಕೊಂಡು ಹೋಗಲಾಗಿದೆ. ಇದರಿಂದ ಅವರ ದೇಹಕ್ಕೆ ಹೆಚ್ಚು ಬಳಲಿಕೆಯಾಗಿದ್ದು, ವಿಶ್ರಾಂತಿಯ ಅಗತ್ಯವಿದೆ ಎಂದರು.

    ಜಾಮೀನು ಅರ್ಜಿ ಸಲ್ಲಿಸುವ ಕುರಿತು ನಮ್ಮ ವಕೀಲರು ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದು, ಯಾವಾಗ ಸಲ್ಲಿಸುತ್ತಾರೆ ಎಂಬುವುದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.

    https://www.youtube.com/watch?v=0wDpeO8ZHxk

    https://www.youtube.com/watch?v=-Eeqo83EKnM

     

     

     

     

     

     

     

     

  • ಸಿಎಂರನ್ನು ದಿಢೀರ್ ಭೇಟಿ ಮಾಡಿದ ಕಿಚ್ಚ ಸುದೀಪ್

    ಸಿಎಂರನ್ನು ದಿಢೀರ್ ಭೇಟಿ ಮಾಡಿದ ಕಿಚ್ಚ ಸುದೀಪ್

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನಟ ಕಿಚ್ಚ ಸುದೀಪ್ ದಿಢೀರ್ ಭೇಟಿ ಮಾಡಿದ್ದು, ಇದು ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

    ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯರನ್ನು ಸುದೀಪ್ ಭೇಟಿ ಮಾಡಿದ್ದಾರೆ. ಆದರೆ ಸಿಎಂ ಜೊತೆ ಭೇಟಿ ಮುಕ್ತಾಯವಾದ ಬಳಿಕ ಸುದೀಪ್ ಸ್ವತಃ ಮಾತನಾಡಿ, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿಯ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ವಿಷ್ಣು ಸಮಾಧಿಯ 100 ಎಕರೆ ಜಾಗವನ್ನ ನಾವೇ ಖರೀದಿ ಮಾಡುತ್ತೇನೆ. ಸಮಾಧಿಯನ್ನು ಸ್ಥಳಾಂತರ ಮಾಡೋದು ಬೇಡ, ಸಮಾಧಿ ಜಾಗವನ್ನ ಪುಣ್ಯಭೂಮಿ ಅಂತಾ ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿದ್ದೇನೆ. ಭಾರತೀಯರ ಆಸೆಯಂತೆ ಇಲ್ಲಿ ಬದಲಾಗಿ ಸ್ಮಾರಕವನ್ನು ಮೈಸೂರಿನಲ್ಲಿ ಮಾಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಜೊತೆಗೆ ಪುಣ್ಯಭೂಮಿ ಮಾಡಿಕೊಡೋದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಸುದೀಪ್ ಹೇಳಿದರು.

    ಇನ್ನು ಸಿಎಂ ಜೊತೆ ರಾಜಕೀಯದ ಬಗ್ಗೆ ಮಾತನಾಡಿದ್ರಾ ಎಂದು ಕೇಳಿದ್ದಕ್ಕೆ ಸುದೀಪ್ ಕೈ ಮುಗಿದು ಹೊರಟು ಹೋಗಿದ್ದಾರೆ.

    ಇದನ್ನು ಓದಿ: 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ರೀ ರಿಲೀಸ್

     

  • 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ರೀ ರಿಲೀಸ್

    45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ರೀ ರಿಲೀಸ್

    ಬೆಂಗಳೂರು: 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ತೆರೆಗೆ ಬರುತ್ತಿದ್ದು, ಸಾಹಸ ಸಿಂಹ ಅಭಿವನ ಭಾರ್ಗವ ವಿಷ್ಣುವರ್ಧನ್ ಪುಣ್ಯ ತಿಥಿಯಂದು ಸಿನಿಮಾ ಬಿಡುಗಡೆಯಾಗಲಿದೆ.

    ನಾಗರಹಾವು ರಿಲೀಸ್ ಆಗಿ ಬರೋಬ್ಬರಿ 45 ವರ್ಷಗಳಾಗಿವೆ. ಆದರೆ ಈಗ ಅವರ ಪುಣ್ಯತಿಥಿ ಪ್ರಯುಕ್ತ ಮತ್ತೆ ನಾಗರಹಾವು ರೀ ರಿಲೀಸ್ ಆಗುತ್ತಿದ್ದು, ತೆರೆಯ ಮೇಲೆ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಮತ್ತೆ ಮೋಡಿ ಮಾಡಲು ಬರುತ್ತಿದ್ದಾರೆ.

    ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ನಾಗರಹಾವು ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಪಡೆದಿತ್ತು. ಅದೇ ಮೊದಲ ಬಾರಿಗೆ ನಾಯಕ ನಟರಾಗಿ ವಿಷ್ಣುವರ್ಧನ್ ಅಭಿನಯಿಸಿದ್ದು, ನಾಗರಹಾವು ಸಿನಿಮಾ ಅವರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟಿತ್ತು. ಈಗ ನಾಗರಹಾವು ಸಿನಿಮಾವನ್ನು ವೀರಾಸ್ವಾಮಿಯವರ ಮಗ ಬಾಲಾಜಿ ಅವರು ರೀ ರಿಲೀಸ್ ಮಾಡುತ್ತಿದ್ದು, ವಿಶೇಷವಾಗಿ ಡಿಟಿಎಸ್ ಸೌಂಡ್ ಎಫೆಕ್ಟ್ ನೊಂದಿಗೆ ಬಿಡುಗಡೆಯಾಗುತ್ತಿದೆ.

    ಈ ಹಿಂದೆ ಕಸ್ತೂರಿ ನಿವಾಸ ಚಿತ್ರ ಕೂಡ ಹೊಸ ರೂಪದಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ತಿಂಗಳು ತೆರೆಯ ಮೇಲೆ ನಾಗರಹಾವು ಸಿನಿಮಾ ರಾರಾಜಿಸಲಿದೆ. ಡಿಸೆಂಬರ್ ತಿಂಗಳಲ್ಲಿ ವಿಷ್ಣು ಅಗಲಿದ್ದರು. ಹಾಗಾಗಿ ಅವರ ಪುಣ್ಯತಿಥಿಯ ಪ್ರಯುಕ್ತ ಇದೇ ತಿಂಗಳು ಮತ್ತೆ ನಾಗರಹಾವು ಚಿತ್ರ ಬಿಡುಗಡೆಯಾಗುತ್ತಿದೆ.

     

  • ಸಿಸಿಬಿ ಕಚೇರಿಯಿಂದ್ಲೇ ಸುನಿಲ್ ಹೆಗ್ಗರವಳ್ಳಿಗೆ ಬೆಳಗೆರೆ ಕರೆ- ಬೇಲ್‍ಗೆ ಅಡ್ಡಿಯಾಗುತ್ತಾ ಫೋನ್‍ಕಾಲ್?

    ಸಿಸಿಬಿ ಕಚೇರಿಯಿಂದ್ಲೇ ಸುನಿಲ್ ಹೆಗ್ಗರವಳ್ಳಿಗೆ ಬೆಳಗೆರೆ ಕರೆ- ಬೇಲ್‍ಗೆ ಅಡ್ಡಿಯಾಗುತ್ತಾ ಫೋನ್‍ಕಾಲ್?

    ಬೆಂಗಳೂರು: ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ, ಸಿಸಿಬಿ ವಶದಲ್ಲಿದ್ದುಕೊಂಡೇ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

    ಭಾನುವಾರ ರಾತ್ರಿ ಸುಮಾರು 9.40ರ ವೇಳೆಗೆ ಮಧು ಎಂಬಾತ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ. ಸುನಿಲ್ ರಿಸೀವ್ ಮಾಡಿದಾಗ ಕರೆ ಮಾಡಿದ್ದ ಮಧು ಎಂಬಾತ ರವಿ ಬೆಳೆಗೆರೆಯವರಿಗೆ ಫೋನ್ ಕೊಟ್ಟಿದ್ದಾನೆ. ಈ ವೇಳೆ ಸುನಿಲ್ ಜೊತೆ ಮಾತನಾಡಿದ ರವಿ ಬೆಳಗೆರೆ, ಯಶೋಮತಿ ಜೊತೆ ಸಂಬಂಧ ಇದೆ ಅಂತಾ ಮಾಧ್ಯಮಗಳ ಮುಂದೆ ಹೇಳಿದ್ದೀಯಾ? ಅಂತಾ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುನಿಲ್ , ನನಗೆ ಯಶೋಮತಿ ಜೊತೆ ಸಂಬಂಧವಿಲ್ಲ. ಹೀಗಿದ್ದಾಗ ನಾನ್ ಯಾಕೆ ಹಾಗೆ ಹೇಳಲಿ? ಅಂತಾ ಪ್ರಶ್ನಿಸಿದ್ದಾರೆ.

    ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಳಗೆರೆ ಪುತ್ರಿ ಚೇತನಾ ಬೆಳಗೆರೆ, ಸಿಸಿಬಿ ಕಚೇರಿಯಿಂದ ನಮ್ಮ ತಂದೆ ಕರೆ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸುನಿಲ್ ಹೆಗ್ಗರವಳ್ಳಿಯವರೂ ದೂರು ನೀಡಲಿ. ನಾವೂ ದೂರು ನೀಡುತ್ತೇವೆ. ನಮ್ಮ ತಂದೆಗೆ ಬೇಲ್ ಸಿಗದಂತೆ ಮಾಡಲು ಮತ್ತೊಂದು ಷಡ್ಯಂತ್ರ ರಚಿಸಿದ್ದಾರೆ ಎಂದಿದ್ದಾರೆ.

    ನನಗೆ ಏನೇ ಆದರೂ ರವಿ ಬೆಳಗೆರೆ ಅವರೇ ಕಾರಣ ಅಂತ ಸುನಿಲ್ ಹೆಗ್ಗರವಳ್ಳಿ ಹೇಳಿದ್ದಾರೆ. ಸಿಸಿಬಿ ಕಚೇರಿಯಿಂದ ಕರೆ ಮಾಡುವ ಮೂಲಕ ತಾನು ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಯಶೋಮತಿ ನನ್ನ ಗೆಳತಿಯಷ್ಟೇ. ಎಲ್ಲರೂ ರವಿ ಬೆಳಗೆರೆಯಂತೆ ಇರಲು ಆಗುತ್ತಾ? ಅವರಿಗಾದರೂ ಹತ್ತಾರು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ ಅಂತಾ ಸುನಿಲ್ ಹೇಳಿದ್ದಾರೆ.

     

  • ಇಂದು ಕೋರ್ಟ್ ಮುಂದೆ ಬೆಳಗೆರೆ ಹಾಜರು- ಜಾಮೀನು ಪಡೆಯಲು ಅನಾರೋಗ್ಯದ ಅಸ್ತ್ರ

    ಇಂದು ಕೋರ್ಟ್ ಮುಂದೆ ಬೆಳಗೆರೆ ಹಾಜರು- ಜಾಮೀನು ಪಡೆಯಲು ಅನಾರೋಗ್ಯದ ಅಸ್ತ್ರ

    ಬೆಂಗಳೂರು: ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಸಿಸಿಬಿ ಕಚೇರಿಯಲ್ಲೇ ಮೂರನೇ ದಿನ ಕಳೆದಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಎಸಿಎಂಎಂ ಕೋರ್ಟ್‍ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.

    ಮೂರು ದಿನಗಳ ಸತತ ವಿಚಾರಣೆಯಿಂದ ಬೇಸತ್ತಿರುವ ಬೆಳಗೆರೆ, ಇಂದು ಏನಾಗಬಹುದು ಅನ್ನೋ ಆಲೋಚನೆಯಲ್ಲೇ ರಾತ್ರಿ ಕಳೆದಿದ್ದಾರೆ. ರಾತ್ರಿ 9 ಗಂಟೆಗೆ ವಿಚಾರಣೆ ಮುಕ್ತಾಯವಾದ ಬಳಿಕ ಮನೆಯಿಂದ ತರಿಸಲಾಗಿದ್ದ ಊಟ ಮಾಡಿ, ಬಳಿಕ ಪೊಲೀಸರಿಂದ ಪೆನ್ನು ಪೇಪರ್ ಪಡೆದು ದಿನಚರಿ ಬರೆದಿದ್ದಾರೆ. ಆದರೆ ರಾತ್ರಿ ಕೂಡ ಬಿಪಿ ಲೋ ಮತ್ತು ಕಾಲು ನೋವಿನಿಂದಾಗಿ ನಿದ್ದೆ ಬಾರದೆ ಪರದಾಡಿದ್ದಾರೆ.

    ರವಿ ಬೆಳಗೆರೆ ಪರ ವಕೀಲ ದಿವಾಕರ್ ಜಾಮೀನಿಗೆ ಅರ್ಜಿ ಸಲ್ಲಿಸಲಿಸಿದ್ದಾರೆ. ಆದರೆ ಸಿಸಿಬಿ ಅಕ್ರಮ ಶಸ್ತ್ರಾಸ್ತ್ರ, ಕೊಲೆ ಸಂಚು ಸೇರಿ ಇನ್ನಿತರ ಜಾಮೀನು ರಹಿತ ಸೆಕ್ಷನ್ ಹಾಕಿದ್ದಾರೆ. ಆದ್ದರಿಂದ ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡುವಂತೆ ವಕೀಲರು ವಾದ ಮಂಡಿಸಲಿದ್ದಾರೆ. ಇದಕ್ಕಾಗಿ ಬಿಪಿ, ಶುಗರ್, ನರ ದೌರ್ಬಲ್ಯ ಸೇರಿದಂತೆ ಹಲವು ಕಾಯಿಲೆಗಳಿಂದ ಬೆಳಗೆರೆ ಬಳಲುತ್ತಿರುವ ಕುರಿತು ಮೆಡಿಕಲ್ ಸರ್ಟಿಫಿಕೇಟ್‍ಗಳನ್ನು ಕೂಡ ರೆಡಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಜಾಮೀನು ನೀಡದಿದ್ದರೆ ಕನಿಷ್ಠ ಪಕ್ಷ ಆಸ್ಪತ್ರೆಗೆ ಸೇರಿಸಲು ಮನವಿ ಮಾಡುವ ಸಾಧ್ಯತೆ ಇದೆ. ಜೊತೆಗೆ ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನಿಗೂ ಮನವಿ ಮಾಡಿದ್ದಾರೆ.

  • ಚುನಾವಣೆ ಹೊತ್ತಲ್ಲೇ ರಾಜ್ಯದ ರೈತರಿಗೆ ಸರ್ಕಾರದಿಂದ ಸಿಹಿಸುದ್ದಿ!

    ಚುನಾವಣೆ ಹೊತ್ತಲ್ಲೇ ರಾಜ್ಯದ ರೈತರಿಗೆ ಸರ್ಕಾರದಿಂದ ಸಿಹಿಸುದ್ದಿ!

    ಬೆಂಗಳೂರು: ಚುನಾವಣೆಯ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ರೈತರಿಗಾಗಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

    ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ `ನೀರಾ’ ತೆಗೆಯಲು ರೈತರಿಗೆ ಅನುಮತಿ ನೀಡಲು ಮುಂದಾಗಿದ್ದು, ನೀರಾ ತೆಗೆಯುವುದಕ್ಕೆ ರಾಜ್ಯದ ರೈತರಿಗೆ ಲೈಸೆನ್ಸ್ ನೀಡಲು ತೀರ್ಮಾನಿಸಿದೆ. ಸರ್ಕಾರ ನೀರಾದಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ಬರುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಆದ್ದರಿಂದ ಈ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.

    ಸರ್ಕಾರ ಹಾಲು ಒಕ್ಕೂಟದ ಮಾದರಿಯಲ್ಲೇ ಸಂಘ ಕಟ್ಟಿಕೊಂಡು ನೀರಾ ತೆಗೆದು ಮಾರಾಟಕ್ಕಷ್ಟೇ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ನೀರಾದಿಂದ ರೈತರ ಆದಾಯ ವೃದ್ಧಿಯಾಗಲಿದೆ ಅನ್ನೋ ಲೆಕ್ಕಾಚಾರದಲ್ಲಿ ಈ ತಿರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

    ಪ್ರತಿ ಮರಕ್ಕೆ ವರ್ಷಕ್ಕೆ 15 ರೂಪಾಯಿ ಶುಲ್ಕ, 1500 ರೂಪಾಯಿ ಪರವಾನಿಗೆ ಶುಲ್ಕ ಸಾಧ್ಯತೆ ಇದೆ. 10 ವರ್ಷಗಳಿಂದ ಧೂಳು ತಿನ್ನುತ್ತಿದ್ದ ನೀರಾ ನೀತಿಗೆ ಸಿದ್ದರಾಮಯ್ಯ ಸರ್ಕಾರದ ಅಸ್ತು ಎಂದಿದ್ದು, ಮದ್ಯಪಾನ ನಿಷೇಧದ ಕೂಗಿನ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ನೀರಾಗೆ ಜೈ ಎಂದಿದೆ.

  • ಕಿಚ್ಚ ಸುದೀಪ್ ಅಭಿಮಾನಿಯ ಚಳಿ ಬಿಡಿಸಿದ ಹರ್ಷಿಕಾ ಪೂಣಚ್ಚ!

    ಕಿಚ್ಚ ಸುದೀಪ್ ಅಭಿಮಾನಿಯ ಚಳಿ ಬಿಡಿಸಿದ ಹರ್ಷಿಕಾ ಪೂಣಚ್ಚ!

    ಬೆಂಗಳೂರು: ಸ್ಯಾಂಡಲ್‍ವುಡ್ ಚಿಟ್ಟೆ, ನಟಿ ಹರ್ಷಿಕಾ ಪೂಣಚ್ಚ ಅವರು ಕಿಚ್ಚ ಸುದೀಪ್ ಅಭಿಮಾನಿಗಳ ಮೇಲೆ ಗರಂ ಆಗಿದ್ದಾರೆ.

    ಹರ್ಷಿಕಾ ಪೂಣಚ್ಚ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿಂದಿ ಚಿತ್ರದ ಹಾಡೊಂದಕ್ಕೆ ಡಬ್ ಸ್ಮ್ಯಾಶ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಆದರೆ ವ್ಯಕ್ತಿಯೊಬ್ಬ ಈ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ನಟಿಯ ಕಾಲೆಳೆದಿದ್ದಾರೆ. ಇದರಿಂದ ಕೋಪಗೊಂಡ ನಟಿ ಟ್ವಿಟ್ಟರ್ ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿ ಬೈದಿದ್ದಾರೆ.

    `ಸಿನಿಮಾದಲ್ಲಿ ಅವಕಾಶ ಸಿಕ್ತಿಲ್ಲ ಅಂತ ಡಬ್ ಸ್ಮ್ಯಾಶ್ ಮಾಡಿದ್ಯಾ ಚಿನ್ನಾ’ ಎಂದು ಮಲ್ಲಿಕಾರ್ಜುನ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ, ಎಲ್ಲಾರೂ ಆಕೆಯ ಫಿಲ್ಮ್ ನೋಡ್ಬೇಡಿ, ನಾವು ನೋಡಿದ್ರೆ ಜಾಬ್ ಲೆಸ್ ಆಗ್ತಿವಿ’ ಎಂದಿದ್ದಾರೆ.

    ನನ್ನ ಮನಸ್ಸಿಗೆ ನೋವಾದಾಗ ನೇರವಾಗಿ ಮಾತನಾಡೋದನ್ನ ಕಿಚ್ಚ ಸುದೀಪ್ ಅವರಿಂದ ಕಲಿತಿದ್ದೇನೆ. ಅಂತವರ ಅಭಿಮಾನಿಯಾಗಿ ಈ ರೀತಿ ಮಾತನಾಡಲು ನಾಚಿಕೆ ಆಗೋದಿಲ್ವ. `ಥೂ ನಿನ್ನ ಜನ್ಮಕ್ಕೆ. ಟ್ವೀಟ್ ಮಾಡಿದ್ರೆ ಯಾರು ಲೈಕ್ ಮಾಡುತ್ತಿಲ್ಲ ಎಂದು ಈ ರೀತಿ ಸ್ಟುಪಿಡ್ ಆಗಿ ಬರೆಯೋಕೆ ನಾಚಿಕೆ ಆಗಬೇಕು ನಿನಗೆ. ನಾನು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಈ ರೀತಿ ವಿಡಿಯೋ ಮಾಡುತ್ತೇನೆ. ನೀನು ಕೆಲಸ ಇಲ್ಲದೆ ಕೂತಿರಬಹುದು, ನಾನಲ್ಲ. ನಾನು ಮೂರು ದೊಡ್ಡ ಸಿನಿಮಾಗಳನ್ನ ಮಾಡುತ್ತಿದ್ದೇನೆ’ ಎಂದು ರೀ ಟ್ವೀಟ್ ಮಾಡೋ ಮೂಲಕ ಸುದೀಪ್ ಅಭಿಮಾನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    `ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದ ಹರ್ಷಿಕಾ ಪೂಣಚ್ಚ ಸದ್ಯಕ್ಕೆ ಮಲಯಾಳಂನ `ಚಾರ್ ಮಿನರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ `ಚಿಟ್ಟೆ’, ‘ಅಧಿತಿ’ ಚಿತ್ರಗಳಲ್ಲಿ ನಟಿಸುತ್ತಿರುವ ಹರ್ಷಿಕಾ, ತೆಲುಗು ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಚಿತ್ರದ ಅಭಿನಯಕ್ಕಾಗಿ ತನ್ನ ಮೈಮೇಲೆ ಚಿಟ್ಟೆಯ ಹಚ್ಚೆ ಹಾಕಿಸಿ ಫೋಟೋ ಶೂಟ್ ಮಾಡಿಕೊಳ್ಳುವ ಮೂಲಕ ಇತ್ತೀಚೆಗಷ್ಟೇ ಸುದ್ದಿಯಾಗಿದ್ದರು.

    https://twitter.com/actressharshika/status/937892248858984448

    https://twitter.com/actressharshika/status/939408118693314560

    https://twitter.com/actressharshika/status/939552071946080256

  • ರವಿ ಬೆಳಗೆರೆಗೆ ಸಿಗರೇಟ್ ಕೊರತೆಯಂತೆ!

    ರವಿ ಬೆಳಗೆರೆಗೆ ಸಿಗರೇಟ್ ಕೊರತೆಯಂತೆ!

    ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಶುಕ್ರವಾರದಂದು ಪತ್ರಕರ್ತ ರವಿ ಬೆಳಗೆರೆ ಬಂಧಿತರಾಗಿದ್ದು, ಸಿಸಿಬಿ ಕಸ್ಟಡಿಯಲ್ಲಿದ್ದಾರೆ.

    ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಚೇರಿಯಲ್ಲಿ ರವಿ ಬೆಳಗೆರೆಯನ್ನು ಸಿಸಿಬಿ ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ಈ ವೇಳೆ ಬೆಳಗೆರೆಗೆ ಸಿಗರೇಟ್ ಕೊರತೆ ಉಂಟಾಗಿದೆಯಂತೆ. ಎಲ್ಲರಿಗೂ ಗೊತ್ತಿರುವ ಹಾಗೆ ಅವರಿಗೆ ಎಲ್ಲಾ ಕಡೆ ಸಿಗರೇಟ್ ಇರಲೇಬೇಕು. ಸಿಸಿಬಿ ಒಂದು ಎರಡು ಸಿಗರೇಟ್ ಪೂರೈಕೆ ಮಾಡುತ್ತಿದ್ದು, ಅವರು ಕೇಳಿದಷ್ಟು ಕೊಡುತ್ತಿಲ್ಲ ಎಂದು ಹೇಳಲಾಗ್ತಿದೆ.

    ರವಿ ಬೆಳಗೆರೆ ದಿನಕ್ಕೆ ತುಂಬಾ ಸಿಗರೇಟ್ ಸೇದುತ್ತಿದ್ದರು. ಆದರೆ ಸಿಸಿಬಿ ಒಂದು ಎರಡು ಸಿಗರೇಟ್ ಮಾತ್ರ ಕೊಡುತ್ತಿದ್ದಾರೆ. ಆದ್ದರಿಂದ ರವಿಬೆಳಗೆರೆಗೆ ಸಿಗರೇಟ್ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.

    https://www.youtube.com/watch?v=NVU9MGtsE60

    https://www.youtube.com/watch?v=kJ5uYUEgVeM

    https://www.youtube.com/watch?v=lgEoaxQ1l44

    https://www.youtube.com/watch?v=ucQolRekyhU

  • ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ Mr & Mrs ರಾಮಾಚಾರಿ -ಎಫ್‍ಬಿಯಲ್ಲಿ ಹೊಸ ಫೋಟೋ

    ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ Mr & Mrs ರಾಮಾಚಾರಿ -ಎಫ್‍ಬಿಯಲ್ಲಿ ಹೊಸ ಫೋಟೋ

    ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷ ಪೂರೈಸಿದ್ದು, ರಾಕಿಂಗ್ ಜೋಡಿ ಸದ್ಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಕಳೆದ ವರ್ಷ ತಾಜ್ ವೆಸ್ಟ್ ಎಂಡ್ ನಲ್ಲಿ ಅದ್ಧೂರಿಯಾಗಿ ಗುರು-ಹಿರಿಯರು, ಸ್ನೇಹಿತರು ಹಾಗೂ ಹಲವಾರು ಗಣ್ಯರ ಸಮ್ಮುಖದಲ್ಲಿ ಇಬ್ಬರು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತೆರೆಯ ಮೇಲೆ ಹಿಟ್ ಆಗಿರುವ ಈ ಜೋಡಿ ನಿಜ ಜೀವನದಲ್ಲೂ ಅಷ್ಟೇ ಅನ್ಯೂನ್ಯವಾಗಿದ್ದಾರೆ. ಇಬ್ಬರೂ ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

    ಮದುವೆಯಾಗಿ ಒಂದು ವರ್ಷ ಪೂರೈಸಿರುವ ಈ ರಾಂಕಿಗ್ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ರಾಧಿಕಾ ಮದುವೆ ವಾರ್ಷಿಕೋತ್ಸವದ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದು, ಪ್ರತಿದಿನ ಮದುವೆಯ ತಯಾರಿ, ಮದುವೆಯ ಎಕ್ಸ್ ಕ್ಲೂಸಿವ್ ಫೋಟೋ ಮತ್ತು ಸಣ್ಣ ವಿಡಿಯೋಗಳನ್ನು ಫೇಸ್‍ಬುಕ್ ನಲ್ಲಿ ಶೇರ್ ಮಾಡಿದ್ದಾರೆ.

    ಅದೇ ರೀತಿ ಇಂದು ತಮ್ಮ ಎಫ್‍ಬಿಯಲ್ಲಿ ಮೂರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ವಿವಾಹ ವಾರ್ಷಿಕೋತ್ಸದ ಸಂಭ್ರಮವನ್ನು ಆಚರಣೆ ಮಾಡಲು ಈ ಜೋಡಿ ವಿದೇಶಕ್ಕೆ ಹೋಗಿದ್ದು, ಕೆಲ ದಿನಗಳು ಸುತ್ತಾಡಿಕೊಂಡು ನಂತರ ತಮ್ಮ ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

    https://twitter.com/NimmaRPFC/status/939355206776635392

    https://twitter.com/YashFC/status/939354277683740673