Tag: Bangalore

  • ಆಸ್ಪತ್ರೆಗೆ ದಾಖಲಿಸಿದ್ದ 2 ವರ್ಷದ ಮಗುವನ್ನ ಕೊಂಡೊಯ್ದು ಕೊಂದೇಬಿಟ್ಳು ತಾಯಿ!

    ಆಸ್ಪತ್ರೆಗೆ ದಾಖಲಿಸಿದ್ದ 2 ವರ್ಷದ ಮಗುವನ್ನ ಕೊಂಡೊಯ್ದು ಕೊಂದೇಬಿಟ್ಳು ತಾಯಿ!

    ಬೆಂಗಳೂರು: ಹೆತ್ತ ತಾಯಿಯೇ ತನ್ನ ಕರುಳ ಕುಡಿಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಅನ್ನಪೂರ್ಣ (2) ತಾಯಿಂದಲೇ ಕೊಲೆಯಾದ ಮಗು. ಆರೋಪಿ ತಾಯಿ ನಿವೇದಿತಾಗೆ 5 ವರ್ಷದ ಹಿಂದೆ ತನ್ನ ಮಾವ ಚಂದ್ರಶೇಖರನೊಂದಿಗೆ ಮದುವೆಯಾಗಿತ್ತು. ಅವಡದೇನಹಳ್ಳಿಯ ಗಂಡನ ಮನೆಯಲ್ಲಿ ವಾಸವಿದ್ದಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಮಗುವನ್ನೇ ಕೊಂದಿದ್ದಾಳೆ.

    ಒಂದೂವರೆ ವರ್ಷದಿಂದ ನಿವೇದಿತಾ ತನ್ನ ಅತ್ತೆಯ ಮಗ ಸತೀಶ್ ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರು ಎಲ್ಲಾದರು ಓಡಿಹೋಗಿ ಬೇರೆ ಸಂಸಾರ ಮಾಡಲು ನಿರ್ಧರಿಸಿದ್ದರು.

    ಮಂಗಳವಾರ ಮಗು ಅನ್ನಪೂರ್ಣಾಗೆ ಹುಷಾರಿಲ್ಲ ಎಂದು ಆನೇಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ನಿವೇದಿತಾ ಆಸ್ಪತ್ರೆಯಿಂದ ಮಗುವಿನೊಂದಿಗೆ ಸತೀಶ್ ಜೊತೆ ಬೈಕ್ ನಲ್ಲಿ ಪರಾರಿಯಾಗಿದ್ದಾಳೆ.

    ಇತ್ತ ಆಸ್ಪತ್ರೆಗೆ ಬಂದ ಚಂದ್ರಶೇಖರ್ ಮಗು ಮತ್ತು ಹೆಂಡತಿ ಕಾಣದಿದ್ದಾಗ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸಿದಾಗ ನಿವೇದಿತಾ ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಗೊತ್ತಾಗಿದೆ. ನಂತರ ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಅತ್ತಿಬೆಲೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

    ಪೊಲೀಸ್ ಮತ್ತು ಪತಿ ಮಗುವಿನ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಮಗುವನ್ನು ಕೊಂದು ಪೊದೆಯಲ್ಲಿ ಎಸೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಗುವನ್ನು ಕೊಲೆ ಮಾಡಿದ್ದ ಸ್ಥಳಕ್ಕೆ ಹೋಗಿ ಮಗುವಿನ ಶವವನ್ನು ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಿದ್ದಾರೆ. ಸದ್ಯಕ್ಕೆ ಆನೇಕಲ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

  • ರೈತರು ಬೆಳೆದ ಅನ್ನವನ್ನೇ ನಾವು, ನೀವು ತಿನ್ನೋದು, ಹೋರಾಟಕ್ಕೆ ಬನ್ನಿ: ರೈಗೆ ಪ್ರಥಮ್ ಮನವಿ

    ರೈತರು ಬೆಳೆದ ಅನ್ನವನ್ನೇ ನಾವು, ನೀವು ತಿನ್ನೋದು, ಹೋರಾಟಕ್ಕೆ ಬನ್ನಿ: ರೈಗೆ ಪ್ರಥಮ್ ಮನವಿ

    ಬೆಂಗಳೂರು: ನಿಮ್ಮಪ್ಪ, ನಮ್ಮಪ್ಪ ಎಲ್ಲಾ ತಿನ್ನೋದು ಇದೇ ರೈತರು ಬೆಳೆದ ಅನ್ನವನ್ನ. ನೀವು ಮಹದಾಯಿ ಹೋರಾಟದ ನೇತೃತ್ವ ವಹಿಸಿಕೊಳ್ಳಿ. ಇದು ನನ್ನ ಮನವಿ ಎಂದು ನಟ ನಿರ್ದೇಶಕ ಪ್ರಥಮ್, ನಟ ಪ್ರಕಾಶ್ ರೈ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಮಹದಾಯಿ ರೈತರ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿದ ಪ್ರಥಮ್, ನನ್ನದು ಪಕ್ಷಾತೀತವಾದ ಹೋರಾಟ, ರೈತರ ಪರವಾದ ಹೋರಾಟವಾಗಿದೆ. ರೈತರು ನ್ಯಾಯ ಕೇಳುವುದು ಅವರ ಹಕ್ಕು, ನೀರು ಕೇಳುವುದು ಅವರ ಜವಾಬ್ದಾರಿ. ಆದರೆ ಮುಗ್ಧ ರೈತರ ಪ್ರತಿಭಟನೆಗೆ ರಾಜಕೀಯ ಬಣ್ಣ ಹಚ್ಚಿದ್ದಾರೆ. ಅದು ಸ್ವಲ್ಪ ಬೇಸರವಾಗಿದೆ ಎಂದು ಹೇಳಿದ್ರು.

    ಸಾಮಾಜಿಕ ವಿಚಾರದಲ್ಲಿ ನೀವು ಬೆಳಕು ಚೆಲ್ಲಿದ್ದೀರಿ. ಗೌರಿ ಲಂಕೇಶ್ ಪ್ರಕರಣದಲ್ಲೂ ಬೆಳಕು ಚೆಲ್ಲಿದ್ದೀರಿ. ನಾವು, ನೀವು, ನಮ್ಮಪ್ಪ ತಿನ್ನೋದು ರೈತರು ಬೆಳೆದ ಅನ್ನವನ್ನು. ಈ ಸಂದರ್ಭದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ನೀವು ಬಂದು ನಾಯಕತ್ವ ವಹಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

    ನಾನು ಅವರ ಖಾಸಗಿ ವಿಚಾರ ಮಾತನಾಡುತ್ತಿಲ್ಲ. ಅವರ ಹೇಳಿಕೆಯನ್ನು ವಿರೋಧಿಸುತ್ತೇನೆ ಅಷ್ಟೇ. ನಾನು ಕಾಂಗ್ರೆಸ್-ಬಿಜೆಪಿಯ ಪರ ಅಲ್ಲ, ನಾನು ರೈತ ಪರ. ರಾಜ್ಯದಲ್ಲಿ ಎಲ್ಲರೂ ಪಕ್ಷವನ್ನು ಮರೆತು ಒಟ್ಟೂಗೂಡಿ ಸಮಸ್ಯೆಯನ್ನು ಪರಿಹರಿಸಿ ಎಂದು ಪ್ರಥಮ್ ಹೇಳಿದ್ರು.

    ಸಿನಿಮಾ ನಟರು ರೈತರ ಬೆಂಬಲಕ್ಕೆ ಬಂದಿಲ್ಲ ಎಂಬ ವಿಚಾರಕ್ಕೆ, ದರ್ಶನ್ ಕರುಕ್ಷೇತ್ರ ಸಿನಿಮಾದಲ್ಲಿ, ಸುದೀಪ್ ದಿ ವಿಲನ್ ಮತ್ತು ಬಿಗ್‍ಬಾಸ್ ನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಾಹಿತಿ ಕೊಡದೇ ತಕ್ಷಣ ಬರಬೇಕು ಎಂದರೆ ಸಾಧ್ಯವಿಲ್ಲ. ಆದರೆ ಎಲ್ಲರೂ ರೈತರ ಪರ ಇದ್ದಾರೆ. ಶಿವಣ್ಣ ಟಗರು ಆಡಿಯೋ ರಿಲೀಸ್ ಮಾಡಲು ಬಳ್ಳಾರಿಯಲ್ಲಿ ಬ್ಯುಸಿ ಇದ್ದರು. ಆದರೂ ಇಡೀ ಇಂಡಸ್ಟ್ರೀಯನ್ನೇ ಉತ್ತರ ಕನ್ನಡಕ್ಕೆ ಕರೆದುಕೊಂಡು ಹೋಗಿದ್ರು. ಶಿವಣ್ಣ ನಾನು ಯಾರ ಪರನೂ ಅಲ್ಲ. ರೈತರ ಪರ, ರೈತರ ನೀರಿನ ಪರ ಅಂತಾ ಹೇಳಿದ್ದಾರೆ ಎಂದು ಪ್ರಥಮ್ ಹೇಳಿದರು.

  • ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿ!

    ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿ!

    ಬೆಂಗಳೂರು: ನಗರದ ಪ್ರಸಿದ್ಧ ದೇವಾಲಯವಾದ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿಯಾಗಿದೆ.

    ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಒಂದೂವರೆ ತಿಂಗಳಿಗೆ ಬರೋಬ್ಬರಿ 50 ಲಕ್ಷ ರೂ. ಹುಂಡಿ ಹಣ ಸಂಗ್ರಹವಾಗಿದ್ದು ಇತಿಹಾಸ ಸೃಷ್ಟಿಯಾಗಿದೆ. ಇದರಿಂದ ಮುಜರಾಯಿ ಇಲಾಖೆಯ ಅಧಿಕಾರಿಗಳು ತುಂಬಾ ಖುಷಿಯಾಗಿದ್ದಾರೆ.

    ಈ ಹಿಂದೇ ಒಂದೂವರೆ ತಿಂಗಳಲ್ಲಿ ಸಾಮಾನ್ಯವಾಗಿ 30 ಲಕ್ಷ ರೂ. ಆದಾಯ ಬರುತ್ತಿತ್ತು, ಆದರೆ ಈ ಬಾರಿ ಬನಶಂಕರಿ ಅಮ್ಮನಿಗೆ 50 ಲಕ್ಷ ರೂ. ಕಾಣಿಕೆ ಬಂದಿದೆ. ಇಂದು ಹುಂಡಿಯಲ್ಲಿದ್ದ ಹಣವನ್ನು ಹೊರ ತೆಗೆದು ಸುಮಾರು 30 ಕ್ಕೂ ಅಧಿಕ ಮಂದಿ ಕುಳಿತು ಲೆಕ್ಕ ಹಾಕಿದ್ದಾರೆ.

    ಬನಶಂಕರಿ ದೇವಾಲಯದಲ್ಲಿ ಪ್ರತಿದಿನ ಸಂಜೆ ಭಕ್ತಾಧಿಗಳು ಬರುತ್ತಿರುತ್ತಾರೆ. ಆದರೆ ಶನಿವಾರ ಭಾನುವಾರ ಬಂದರೆ ಸಾಕು ಈ ದೇವಾಲಯದಲ್ಲಿ ಜನಸಾಗರವೇ ನೆರೆದಿರುತ್ತದೆ. ದೇವಾಲಯಕ್ಕೆ ಬಂದ ಭಕ್ತಾಧಿಗಳು ವರ ಬೇಡಿಕೊಂಡು ನಿಂಬೆ ಹಣ್ಣು ಮತ್ತು ಎಳ್ಳಿನ ದೀಪವನ್ನು ಹಚ್ಚಿ ಹೋಗುತ್ತಾರೆ. ಬೇಡಿಕೆ ಈಡೇರಿದ ಮೇಲೆ ಹರಕೆ ಹಣವನ್ನು ಹುಂಡಿಯಲ್ಲಿ ಹಾಕಿ ದೀಪವನ್ನು ಹಚ್ಚಿ ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಾಲಯ ಬನಶಂಕರಿ ಬಸ್ ನಿಲ್ದಾಣದ ಪಕ್ಕದಲ್ಲಿ ಇದೆ.

  • ವೈದ್ಯರ ನಿರ್ಲಕ್ಷ್ಯಕ್ಕೆ 3 ದಿನದ ಮಗು ಬಲಿ ಆರೋಪ- ವಾಣಿ ವಿಲಾಸ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

    ವೈದ್ಯರ ನಿರ್ಲಕ್ಷ್ಯಕ್ಕೆ 3 ದಿನದ ಮಗು ಬಲಿ ಆರೋಪ- ವಾಣಿ ವಿಲಾಸ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

    ಬೆಂಗಳೂರು: ವಾಣಿ ವಿಲಾಸ ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ದಿನದ ಮಗು ಬಲಿಯಾಗಿರುವ ಆರೋಪ ಕೇಳಿಬಂದಿದೆ.

    ಮೂರು ದಿನದ ಹಿಂದೆ ಹೆರಿಗೆಗೆಂದು 35 ವರ್ಷದ ಅನಿತಾ ಎಂಬಾಕೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮಗು ಮೂರು ದಿನದಿಂದ ಆರೋಗ್ಯವಾಗಿದೆ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಭಾನುವಾರ ಸಂಜೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರ ನಿರ್ಲಕ್ಷ್ಯವೇ ಮಗು ಮೃತಪಡಲು ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ವೈದ್ಯರ ಜೊತೆ ಪೋಷಕರು ವಾಗ್ವಾದ ನಡೆಸಿದ್ದು, ಕೆಲಕಾಲ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಗಿತ್ತು.

    ಪೋಷಕರು ಮಧ್ಯಾಹ್ನ 2.45 ಕ್ಕೆ ಮಗು ಹಾಲು ಕುಡಿಯುತ್ತಿಲ್ಲ, ಮೂತ್ರ ಮಾಡ್ತಿಲ್ಲ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಆದರೆ ವೈದ್ಯರು ಇದಕ್ಕೆ ಸ್ಪಂದಿಸದೆ, ಆಗ ಏನು ಸಮಸ್ಯೆ ಇಲ್ಲ ಎಂದು ಹೇಳಿ ಕಳಿಸಿದ್ದಾರೆ. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಮಗು ಮೃತಪಟ್ಟಿದೆ. ಆದರೆ ಇದುವರೆಗೂ ಮಗು ಸತ್ತರೂ ಇನ್ನೂ ರಿಪೋರ್ಟ್ ನೀಡದೆ ವೈದ್ಯರು ಸತಾಯಿಸುತ್ತಿದ್ದಾರೆ, ಕೇವಲ ಮೌಖಿಕ ಕಾರಣ ನೀಡುತ್ತಿದ್ದಾರೆ ಎಂದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೋಷಕರು ಮಾಡಿದ ಆರೋಪವನ್ನು ವೈದ್ಯರು ತಳ್ಳಿಹಾಕಿದ್ದು, ಮಗು ಮೃತಪಡಲು ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

  • ಬೆಸ್ಕಾಂನಿಂದ ವಾಕ್ ಥಾನ್ – ಡಿಕೆಶಿ ಸೇರಿದಂತೆ ಕಿರುತೆರೆ ನಟಿಯರು ಭಾಗಿ

    ಬೆಸ್ಕಾಂನಿಂದ ವಾಕ್ ಥಾನ್ – ಡಿಕೆಶಿ ಸೇರಿದಂತೆ ಕಿರುತೆರೆ ನಟಿಯರು ಭಾಗಿ

    ಬೆಂಗಳೂರು: ವಿದ್ಯುತ್ ಉಳಿತಾಯದ ಸಂದೇಶ ಸಾರುವ ಉದ್ದೇಶದಿಂದ ಬೆಸ್ಕಾಂನಿಂದ ನಗರದಲ್ಲಿ ವಾಕ್ ಥಾನ್ ಹಮ್ಮಿಕೊಳ್ಳಲಾಗಿತ್ತು.

    ಇಂಧನ ಸಚಿವ ಡಿಕೆ ಶಿವಕುಮಾರ್, ನಟಿ ಮಯೂರಿ ಮತ್ತು ಪುಟ್ಟಗೌರಿ ಖ್ಯಾತಿ ರಂಜಿನಿ ಸೇರಿದಂತೆ ಹಲವು ಕಿರುತೆರೆ ನಟಿಯರು ವಾಕ್ ಥಾನ್‍ನಲ್ಲಿ ಪಾಲ್ಗೊಂಡಿದ್ದರು. ಕಂಠೀರವ ಸ್ಟೇಡಿಯಂನಿಂದ ಕಬ್ಬನ್‍ಪಾರ್ಕ್ ವರೆಗೆ ಜಾಗೃತಿ ಜಾಥ ನಡೆದಿದ್ದು, ವಿದ್ಯುತ್ ಉಳಿತಾಯ ಸಂದೇಶವನ್ನು ನೀಡಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಉಳಿತಾಯ ಮಾಡಬೇಕು. ವಿದ್ಯುತ್ ನ ಒಂದು ಯುನಿಟ್ ಉಳಿಸಿದರೆ, ನಾವು ಒಂದು ಯುನಿಟ್ ಸಂಪಾದನೆ ಮಾಡಿದಂತೆ ಆಗುತ್ತದೆ. ನಾವು ಇವತ್ತು ನೂರಾರು ಸೈಕಲ್ ಇಟ್ಟಿದ್ದೇವೆ. ಆ ಸೈಕಲಿನಲ್ಲಿ ವಿದ್ಯುತ್ ಜನರೇಟ್ ಮಾಡಬಹುದು. ಈ ರೀತಿ ಸೈಕಲ್ ನನ್ನು ಮನೆಯಲ್ಲಿ, ಜಿಮ್‍ಗಳಲ್ಲಿ ತುಳಿದರೆ ವಿದ್ಯುತ್ ಜನರೇಟ್ ಆಗುತ್ತದೆ. ನಮ್ಮ ಜನರಿಗೆ ಹಾಗೂ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿಯ ಒಂದು ಪ್ರಯೋಗ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

  • 2 ಬಾರಿ ಜೈಲಿಗೆ ಹೋಗಿಬಂದ್ರೂ ಗೃಹಿಣಿಯನ್ನ ಮಂಚಕ್ಕೆ ಬಾ ಎಂದು ಪೀಡಿಸುತ್ತಿರೋ ಕಾಮುಕ

    2 ಬಾರಿ ಜೈಲಿಗೆ ಹೋಗಿಬಂದ್ರೂ ಗೃಹಿಣಿಯನ್ನ ಮಂಚಕ್ಕೆ ಬಾ ಎಂದು ಪೀಡಿಸುತ್ತಿರೋ ಕಾಮುಕ

    ನನ್ನ ಬಿಟ್ಟು ಗಂಡನಿಂದ ಗರ್ಭಿಣಿಯಾಗಿದ್ದಾಳೆಂದು ಬೈಕಿನಿಂದ ಗುದ್ದಿ ಮಹಿಳೆಗೆ ಗರ್ಭಪಾತ

    ಬೆಂಗಳೂರು: ವ್ಯಕ್ತಿಯೊಬ್ಬ 2 ಬಾರಿ ಜೈಲಿಗೆ ಹೋದರೂ ಗೃಹಿಣಿಯೊಬ್ಬರನ್ನು ಮಂಚಕ್ಕೆ ಬಾ ಎಂದು ಪೀಡಿಸುತ್ತಿರುವ ಘಟನೆ ನಗರದ ಮೈಸೂರು ರಸ್ತೆಯ ನ್ಯೂ ಟಿಂಬರ್ ಯಾರ್ಡ್ ಲೇಔಟ್‍ನಲ್ಲಿ ನಡೆದಿದೆ.

    ಆರೋಪಿ ಸೆಲ್ವಕುಮಾರ್ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಲಂ ಬೋರ್ಡ್ ನಲ್ಲಿ ವಾಸವಾಗಿದ್ದಾನೆ. ಈತ ತನಗೆ ಬೇಕು ಎಂದ ಹೆಣ್ಣನ್ನ ಅನುಭವಿಸಲೇಕು ಅನ್ನೋ ಕಾಮಪಿಶಾಚಿ. ಈತನ ಕಣ್ಣು ಕಳೆದ ಮೂರು ವರ್ಷದಿಂದ ಮನೆ ಮುಂದೆ ವಾಸವಿರುವ ಗೃಹಿಣಿ ಪದ್ಮಾವತಿ ಅವರ ಮೇಲೆ ಬಿದ್ದಿದೆ.

    ಮದುವೆಯಾದ ಗೃಹಿಣಿಯನ್ನ ಮಂಚಕ್ಕೆ ಬಾ ಎಂದು ಪೀಡಿಸುತ್ತಿದ್ದ. ಅಷ್ಟೇ ಅಲ್ಲದೇ ಮನೆ, ಆಫೀಸ್ ಎನ್ನದೆ ಹಿಂಬಾಲಿಸಿ ಟಾರ್ಚರ್ ನೀಡುತ್ತಿದ್ದ. ಇವನ ಕಾಟ ಸಹಿಸಲಾಗದೇ ಗೃಹಿಣಿ, ನಿಮ್ಮ ಮಗ ನನಗೆ ಹಿಂಸೆ ಕೊಡುತ್ತಿದ್ದಾನೆ ಎಂದು ಸೆಲ್ವನ ತಂದೆ ತಾಯಿಗೆ ತಿಳಿಸಿದ್ದಾರೆ. ಆದರೆ ಅವರು ನನ್ನ ಮಗ ಒಮ್ಮೆ ಆಸೆ ಪಟ್ರೆ ಮುಗಿತು ಅಡ್ಜೆಸ್ಟ್ ಮಾಡ್ಕೋ ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಪದ್ಮಾವತಿ ಗರ್ಭಿಣಿಯಾಗಿದ್ದರು. ಆದರೆ ಆರೋಪಿ ನನ್ನನ್ನು ಬಿಟ್ಟು ಗಂಡನಿಂದ ಗರ್ಭವತಿ ಆಗಿದ್ದೀಯಾ ಎಂದು ಬೈಕಿನಲ್ಲಿ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಪದ್ಮಾವತಿಗೆ ಗರ್ಭಪಾತವಾಗಿದೆ. ಕೊನೆಗೆ ಇವನ ರೋದನೆಗೆ ಬೇಸತ್ತ ಪದ್ಮಾವತಿ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ಸೆಲ್ವನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 143, 354(ಎ)(ಡಿ), 506, 307 ಮತ್ತು 149 ಕಲಂನಡಿ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದರು. ಆದರೆ ಆರೋಪಿ ಸೆಲ್ವ ಬೇಲ್ ಮೇಲೆ ಹೊರಬಂದಿದ್ದಾನೆ. ಬೇಲ್ ಮೇಲೆ ಹೊರಬಂದ ಮೇಲೂ ಅದೇ ಚಾಳಿ ಮುಂದುವೆರಸಿದ್ದಾನೆ. ಮಂಚಕ್ಕೆ ಬಾ, ಇಲ್ಲ ನಿನ್ನ ಪ್ರಾಣ ತೆಗೀತಿನಿ ಅಂತಾ ಹೆದರಿಸಿದ್ದಾನೆ. ಮತ್ತೆ ನೊಂದ ಮಹಿಳೆ ಪದ್ಮಾವತಿ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನನ್ವಯ ಜೈಲಿಗೆ ಹೋದ ಸೆಲ್ವ ಮತ್ತೆ ರೀಲಿಸ್ ಆಗಿದ್ದಾನೆ.

    ಜೈಲಿನಿಂದ ಬೇಲ್ ಮೇಲೆ ಹೊರಬಂದ ಸೆಲ್ವ, ಮನೆ ಮುಂದೆ ಬಂದು ಮೂತ್ರ ವಿಸರ್ಜನೆ ಮಾಡುವುದು, ಗಲಾಟೆ ಮಾಡುವುದು ಮಾಡುತ್ತಿದ್ದ. ಈ ಕಿರಾತಕನ ಕಾಟಕ್ಕೆ ಮಹಿಳೆ ಮನೆಗೆ ಸಿಸಿಟಿವಿ ಆಳವಡಿಸಿಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ಹೇಳಿದರೇ ಸ್ಲಂನಲ್ಲಿ ಇವೆಲ್ಲ ಕಾಮನ್. ನೀನೆ ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಎಂದು ಹೇಳಿದ್ದಾರೆ. ಈಗ ಸಂತ್ರಸ್ತ ಮಹಿಳೆಗೆ ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಇದ್ದಾರೆ.

  • ಇಂದು ದೇವೇಗೌಡರ `ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ

    ಇಂದು ದೇವೇಗೌಡರ `ಸಾಧನೆಯ ಶಿಖರಾರೋಹಣ’ ಪುಸ್ತಕ ಬಿಡುಗಡೆ

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ಕುರಿತಾದ `ಸಾಧನೆಯ ಶಿಖರಾರೋಹಣ’ ಎಂಬ ಪುಸ್ತಕ ಇಂದು ಬಿಡುಗಡೆಯಾಗುತ್ತಿದೆ.

    ಪುಸ್ತಕ ಬಿಡುಗಡೆಗಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

    ಡಾ.ಪ್ರಧಾನ್ ಗುರುದತ್ತ, ಡಾ.ಸಿ.ನಾಗಣ್ಣ ಅವರು ಬರೆದಿರುವ ಪುಸ್ತಕ ಇದಾಗಿದ್ದು, ಪ್ರಧಾನ ಮಂತ್ರಿಯಾಗಿ ದೇವೇಗೌಡ ಅವರು ಮಾಡಿರುವ ಸಾಧನೆಗಳು, ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಷಡ್ಯಂತ್ರಗಳು ಸೇರಿದಂತೆ ಹಲವು ಮಜಲುಗಳು ಈ ಪುಸ್ತಕದಲ್ಲಿ ಅಡಕವಾಗಿದೆ.

    ಇನ್ನು ಈ ಪುಸ್ತಕದಲ್ಲಿ ರಾಮಕೃಷ್ಣ ಹೆಗಡೆ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದ್ದು, ಅವರಿಗೆ ಪಾದರಕ್ಷೆಯಲ್ಲಿ ಹೊಡೆತ ಬಿದ್ದಿದ್ದು, ಈ ವೇಳೆ ಬೊಮ್ಮಾಯಿಯವರಿಗೆ ಪೆಟ್ಟಾದ ವಿಷಯ ಉಲ್ಲೇಖ ಮಾಡಲಾಗಿದೆ. ಅಷ್ಟೇ ಅಲ್ಲದೇ ಎರಡು ದಿನಗಳ ಹಿಂದೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಹೆಗಡೆ, ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದು, ಇದಕ್ಕೆ ಜನ ರೊಚ್ಚಿಗೆದ್ದಿದ್ದರ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • ನಿನ್ನೆ ರಿಲೀಸ್ ಆಗಿದ್ದ ಅಂಜನಿಪುತ್ರನಿಗೆ ಅಭಿಮಾನಿಯಿಂದ ಶಾಕ್!

    ನಿನ್ನೆ ರಿಲೀಸ್ ಆಗಿದ್ದ ಅಂಜನಿಪುತ್ರನಿಗೆ ಅಭಿಮಾನಿಯಿಂದ ಶಾಕ್!

    ಬೆಂಗಳೂರು: ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಇಷ್ಟು ದಿನ ಪೈರಸಿ ಕಾಟ ಇತ್ತು. ಆದರೆ ಈಗ ಫೇಸುಬುಕ್ ಲೈವ್ ಕಾಟ ಶುರುವಾಗಿದೆ.

    ಗುರುವಾರ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾ ಬಿಡುಗಡೆಯಾಗಿತ್ತು. ಸದ್ಯಕ್ಕೆ ಪೈರಸಿ ಕಾಟ ಇಲ್ಲ ಎಂದು ಚಿತ್ರತಂಡ ಖುಷಿಯಲ್ಲಿತ್ತು. ಆದರೆ ಇದರ ಬೆನ್ನಲ್ಲೇ ಬೆಂಗಳೂರಿನ ಯುವಕನೊಬ್ಬ ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ಸಿನಿಮಾವನ್ನು ಲೈವ್ ಮಾಡಿದ್ದಾನೆ.

    ಇವತ್ತು ಥಿಯೇಟರ್‍ ನಲ್ಲಿ ಸಿನಿಮಾ ನೋಡುತ್ತಿದ್ದ ಯುವಕ ಇಡೀ ಸಿನಿಮಾವನ್ನು ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರಿಗೆ ಲೈವ್ ಮಾಡಿದ್ದಾನೆ. ಬರೋಬ್ಬರಿ 1 ಗಂಟೆ 10 ನಿಮಿಷ ಗಂಟೆಗೂ ಅಧಿಕ ಹೊತ್ತು ಸಿನಿಮಾವನ್ನು ಲೈವ್ ತೋರಿಸಿದ್ದಾನೆ.

    ಬೆಂಗಳೂರಿನ ಯಲಹಂಕ ಮೂಲದ ನಿತೀಶ್ ಈ ಕೃತ್ಯ ಎಸಗಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡು ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾನೆ. ಈ ಸಂಬಂಧ ಚಿತ್ರತಂಡ ನಿತೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಿದ್ಧತೆ ನಡೆಸುತ್ತಿದೆ.

    ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

    ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     

  • ಚುನಾವಣೆಗೆ ಬರೋಬ್ಬರಿ 320 ಕೋಟಿ ರೂ. ವೆಚ್ಚ- ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗ ಪತ್ರ

    ಚುನಾವಣೆಗೆ ಬರೋಬ್ಬರಿ 320 ಕೋಟಿ ರೂ. ವೆಚ್ಚ- ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗ ಪತ್ರ

    ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆದಿದ್ದು, ಈಗ ಕರ್ನಾಟಕದಲ್ಲಿ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ.

    2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬರೋಬ್ಬರಿ 320 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಚುನಾವಣಾ ಆಯುಕ್ತರು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

    ಈ ಬಾರಿ ಮತಗಟ್ಟೆಗಳಲ್ಲಿ ವಿವಿಪಿಎಟಿ ಅಳವಡಿಸಿದ ಇವಿಎಂ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಾಗಲಿದ್ದು, ಹಣದುಬ್ಬರ, ಬೆಲೆ ಏರಿಕೆಯಿಂದ ಖರ್ಚು ಹೆಚ್ಚಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.

    ಹಿಂದಿನ ಬಾರಿ ಚುನಾವಣೆಗೆ ಸುಮಾರು 54,261 ಮತಗಟ್ಟೆಗಳು ಇದ್ದವು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸುಮಾರು 57,000 ಮತಗಟ್ಟೆಗಳು ಇರಲಿವೆ. ಇನ್ನು ಮತದಾರರ ಸಂಖ್ಯೆಯೂ 4.9 ಕೋಟಿಗೆ ಏರಿಕೆಯಾಗಿದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.