Tag: Bangalore

  • ಗೌರಿ ಲಂಕೇಶ್ ಹತ್ಯೆ: ತನಿಖೆ ತಂಡಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

    ಗೌರಿ ಲಂಕೇಶ್ ಹತ್ಯೆ: ತನಿಖೆ ತಂಡಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡಕ್ಕೆ ಮತ್ತೊಂದು ತಲೆ ನೋವು ಎದುರಾಗಿದೆ. ಗೌರಿ ಹತ್ಯೆಯಾದ ಜಾಗದಲ್ಲಿ ಸಿಕ್ಕ ಕಾಟ್ರಿಜ್‍ಗಳ ಪರೀಕ್ಷೆ ನಡೆಸಿರುವ ಮೂರು ಪ್ರಯೋಗಾಲಯಗಳು ಮೂರು ವಿಭಿನ್ನ ವರದಿ ನೀಡಿವೆ.

    ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಅಂತೇ ಗೌರಿ ಲಂಕೇಶ್ ಹತ್ಯೆಗೆ ಸಾಮ್ಯತೆ ಇಲ್ಲ ಅಂತಾ ವರದಿ ಒಪ್ಪಿಸಿವೆ ಎಂದು ತಿಳಿದು ಬಂದಿದೆ. ಆದ್ರೆ 7.55 ಎಂಎಂ ಕಂಟ್ರಿಮೇಡ್ ಪಿಸ್ತೂಲ್‍ನಿಂದ ಫೈರ್ ಆಗಿರೋದನ್ನ ಖಚಿತಪಡಿಸಿವೆ. ಇತ್ತ ಹಂತಕರನ್ನ ಆದಷ್ಟು ಬೇಗನೇ ಅರೆಸ್ಟ್ ಮಾಡ್ತೇವೆ ಅಂತ ಸಾಗರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದು, ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.

    https://www.youtube.com/watch?v=gMCRfdWRT8w

    https://www.youtube.com/watch?v=Wm2_FgKUvtA

    https://www.youtube.com/watch?v=E47pvUQ887A

    https://www.youtube.com/watch?v=h54A6zdpI3A

    https://www.youtube.com/watch?v=d5V8Pu3eGnM

    https://www.youtube.com/watch?v=CZ76KMF2i74

  • `ಮಿಸ್ ಇಂಡಿಯಾ ಸೂಪರ್ ಮಾಡೆಲ್’ ಪಟ್ಟ ಮುಡಿಗೇರಿಸಿಕೊಂಡ ಪುಟ್ಟಗೌರಿ

    `ಮಿಸ್ ಇಂಡಿಯಾ ಸೂಪರ್ ಮಾಡೆಲ್’ ಪಟ್ಟ ಮುಡಿಗೇರಿಸಿಕೊಂಡ ಪುಟ್ಟಗೌರಿ

    ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್ ಗಳ ಫೆವರೇಟ್ ಆಗಿದ್ದ `ಪುಟ್ಟಗೌರಿ’ ಪಾತ್ರಧಾರಿ ರಂಜನಿ ಈಗ `ಮಿಸ್ ಇಂಡಿಯಾ ಸೂಪರ್ ಮಾಡೆಲ್’ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    `ಪುಟ್ಟಗೌರಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಸಾಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ಫ್ಯಾಶನ್ ಲೋಕವನ್ನ ತನ್ನತ್ತ ತಿರುಗಿಸಿಕೊಂಡು ಮಿಂಚಿದ್ದಾರೆ.

    ಇತ್ತೀಚೆಗೆ ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ `ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017′ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ರಂಜನಿ ಭಾಗವಹಿಸಿದ್ದು, ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷದ ಮಿಸ್ ಇಂಡಿಯಾ ಸೂಪರ್ ಮಾಡೆಲ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಸ್ಪರ್ಧೆಯಲ್ಲಿ ರಂಜನಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಮೊದಲನೇ ರನ್ನರ್ ಅಪ್ ಆಗಿ ಐಶ್ವರ್ಯ ಮತ್ತು ಎರಡನೇ ರನ್ನರ್ ಅಪ್ ಆಗಿ ಅನಿತಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಶೋನಲ್ಲಿ ಒಟ್ಟು 44 ರೂಪದರ್ಶಿಯರು ಭಾಗವಹಿಸಿದ್ದರು.

    ರಂಜನಿ ಧಾರಾವಾಹಿಯ ಜೊತೆ ಸಿನಿಮಾ ಕೂಡ ಮಾಡುತ್ತಿದ್ದಾರೆ. ಇವರ ಮೊದಲ ಸಿನಿಮಾ `ರಾಜಹಂಸ’. ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಜಹಂಸ ಚಿತ್ರದ ನಂತರ ಸೂಫಿ ಎಂಬ ಹೊಸ ಚಿತ್ರಕ್ಕೆ ರಂಜನಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾವನ್ನು ಶಿವು ಜಮಖಂಡಿ ನಿರ್ದೇಶನ ಮಾಡುತ್ತಿದ್ದಾರೆ. `ಜಸ್ಟ್ ಆಕಸ್ಮಿಕ’ ಖ್ಯಾತಿಯ ನಟ ವಿನೋದ್ ಪಾಟೀಲ್ ಈ ಸಿನಿಮಾದ ನಾಯಕರಾಗಿದ್ದು, ರಮೇಶ್ ಅರವಿಂದ್ ಮತ್ತು ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

  • ಮೌಂಟ್ ಎವರೆಸ್ಟ್ ಸುತ್ತಿ ಬಂದ ಕಿಚ್ಚನ ಪತ್ನಿ-ಮಗಳು

    ಮೌಂಟ್ ಎವರೆಸ್ಟ್ ಸುತ್ತಿ ಬಂದ ಕಿಚ್ಚನ ಪತ್ನಿ-ಮಗಳು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಸ್ಟಾರ್ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಪತ್ನಿ ಮತ್ತು ಮುದ್ದಿನ ಮಗಳು ಮೌಂಟ್ ಎವರೆಸ್ಟ್ ಸುತ್ತಾಡಿಕೊಂಡು ಬಂದಿದ್ದಾರೆ.

    ಸುದೀಪ್ ಮಲ್ಟಿ ಟ್ಯಾಲೆಂಟೆಡ್ ಆಗಿದ್ದು, ನಟನೆ, ನಿರ್ದೇಶನ, ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಹಾಡುವ ಸಾಮರ್ಥ್ಯ  ಹೊಂದಿದ್ದಾರೆ. ಅವರ ಪತ್ನಿ ಪ್ರಿಯಾ ಕೂಡ ಒಬ್ಬ ಗೃಹಿಣಿಯಾಗಿ ಮನೆಯನ್ನ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇವೆಂಟ್ ಕಂಪನಿ ಹಾಗೂ ನಿರ್ಮಾಣ ಸಂಸ್ಥೆಯನ್ನೂ ನೋಡಿಕೊಳ್ಳುತ್ತಿದ್ದಾರೆ.

    ಇವುಗಳ ನಡುವೆಯೂ ಬಿಡುವು ಮಾಡಿಕೊಂಡು ಪ್ರಿಯಾ ಸುದೀಪ್ ಇತ್ತೀಚಿಗೆ ವಿಮಾನದಲ್ಲಿ ಮೌಂಟ್ ಎವೆರೆಸ್ಟ್ ಪರ್ವತವನ್ನ ಸುತ್ತಿ ಬಂದಿದ್ದಾರೆ. ಪ್ರಿಯಾ ಅವರು ಒಬ್ಬರೇ ಹೋಗದೇ ಜೊತೆಯಲ್ಲಿ ತಮ್ಮ ಮಗಳು ಸ್ವಾನಿಯನ್ನು ಕರೆದುಕೊಂಡು ಹೋಗಿದ್ದು, ಹೊಸ ವರ್ಷದ ನೆನಪಿಗಾಗಿ ಸುಮಧುರ ಕ್ಷಣಗಳನ್ನು ಕಳೆದು ಬಂದಿದ್ದಾರೆ.

    ಮೌಂಟ್ ಎವರೆಸ್ಟ್ ನಲ್ಲಿ ಕಳೆದ ಕ್ಷಣಗಳು, ಖುಷಿ, ಎಲ್ಲಾ ಅನುಭವಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. “ಹದ್ದಿನ ರೀತಿಯಲ್ಲಿ ಪರ್ವತವನ್ನ ಸುತ್ತಿದ ಹಾಗೆ ಅನುಭವ ಆಯ್ತು. ಭವ್ಯವಾದ ಮೌಂಟ್ ಎವೆರೆಸ್ಟ್ ನೋಡಿದ ಅನುಭವ ಎಂದಿಗೂ ಮರೆಯಲಾಗದು” ಎಂದು ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

     

  • ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

    ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

    ಬೆಂಗಳೂರು: ನಿಮ್ಮ ಸರ್ಕಾರ ಇದ್ದಾಗ ನಾನು ಪಿಎಫ್‍ಐ ನಿಷೇಧಿಸಬೇಕೆಂದು ಖುದ್ದು ಮನವಿ ಕೊಟ್ಟು ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಮಾಡಿ ಅಂತಾ ಹೇಳಿದ್ದೆ. ಆದರೆ ಆಗ ಸುಮ್ಮನಿದ್ದವರು ಈಗೇನು ಮಾತಾನಾಡುವುದು ಎಂದು ಪ್ರಶ್ನಿಸಿ ಬಿಜೆಪಿ ನಾಯಕರನ್ನು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದೀಪಕ್ ಹತ್ಯೆ ಪ್ರಕರಣದಲ್ಲಿ ರಾಜಕೀಯ ಬೇಕಾಗಿಲ್ಲ. ಪೊಲೀಸರಿಗೆ ಸಂಪೂರ್ಣ ಸ್ವತಂತ್ರ್ಯ ನೀಡಬೇಕು. ಬಿಜೆಪಿ ಮನಸ್ಸು ಮಾಡಿದ್ದರೆ ಈ ಕೃತ್ಯ ಎಸಗುವ ಸಂಘಟನೆಯನ್ನು ಯಾವಗಲೋ ಬ್ಯಾನ್ ಮಾಡಬಹುದಿತ್ತು. ಆದರೆ ಅದು ಬಿಜೆಪಿಗೆ ಆಗ ಬೇಕಾಗಿರಲಿಲ್ಲ. ಕರಾವಳಿ ಶಾಂತವಾಗಬೇಕಾದರೇ ಮೊದಲು ರಾಜಕೀಯ ಪಕ್ಷಗಳನ್ನು ಹೊರಗೆ ಹಾಕಬೇಕು ಎಂದರು. ಇದನ್ನು ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ಹಿಂದೂ ಸಂಘಟನೆ ಗಳಿಗೆ ಹೋರಾಟ ಮಾಡೋದು ಗೊತ್ತಿದೆ. ಈ ರೀತಿ ಮೇಲಿಂದ ಮೇಲೆ ನಡೆಯುತ್ತಿರುವುದನ್ನು ನೋಡಿದರೆ ವ್ಯವಸ್ಥಿತವಾದ ಕುಂತಂತ್ರ ನಡೆಯುತ್ತಿದೆ. ಇದನ್ನು ಸರ್ಕಾರ ನಿಲ್ಲಿಸದಿದ್ದರೆ ಹಿಂದೂ ಸಂಘಟನೆಗಳಲ್ಲ ಬದಲಾಗಿ ಹಿಂದೂಗಳೇ ಸಿಡಿದು ಏಳಲಿದ್ದಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ರಾಜಕೀಯವನ್ನು ಹೊರಗಡೆ ಇಟ್ಟು, ಪೇಜಾವರ ಶ್ರೀ, ವೀರೇಂದ್ರ ಹೆಗಡೆ, ಮುಸ್ಲಿಂ ಮೌಲ್ವಿ, ಮುಖಂಡರು ಸೇರಿ ಶಾಂತಿ ಸಮನ್ವಯ ಸಭೆ ನಡೆಸಬೇಕು. ಈ ಎಲ್ಲಾ ಮುಖಂಡರ ಜೊತೆ ಶಾಂತಿ ಸಭೆ ನಡೆಸುವಂತೆ ಪತ್ರ ಬರೆಯುತ್ತೇನೆ ಎಂದು ಮುತಾಲಿಕ್ ಹೇಳಿಕೆ ನೀಡಿದ್ದಾರೆ.

    ಯುಟಿ ಖಾದರ್ ಮತ್ತು ರಮಾನಾಥ್ ರೈ ಅವರ ಕ್ಷೇತ್ರದಲ್ಲೇ ಈ ರೀತಿಯ ಪ್ರವೃತ್ತಿ ಆದರೆ ಮುಂದಿನ ಚುನಾವಣೆಯಲ್ಲಿ ನೀವು ಉತ್ತರಿಸಬೇಕಾಗುತ್ತದೆ. ಕೃತ್ಯ ನಡೆದ ಮೂರು ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

  • ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ಬೆಂಗಳೂರು: ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ಮೋಟುಗಳನ್ನ ಬ್ಯಾನ್ ಮಾಡಿ ವರ್ಷವೇ ಕಳೆದಿದೆ. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಧೂಳು ತಿನ್ನುತ್ತಿವೆ.

    ಹೆಚ್ಚಿನ ದೇವಾಲಯಗಳು ಹಳೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ ದೇವಾಲಯದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಂಡಿದ್ದರು. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ಮಾತ್ರ ಹಳೇ ನೋಟುಗಳು ಧೂಳು ತಿನ್ನುತ್ತಾ ಬಿದ್ದಿವೆ.

    ಬೆಂಗಳೂರಿನ ಶ್ರೀ ಮಹಾಗಣಪತಿ ಮತ್ತು ಸಮೂಹ ದೇವಸ್ಥಾನ, ಶ್ರೀ ರಾಯರಾಯ ಕಲ್ಯಾಣ ಮಂಟಪ ಮತ್ತು ಸಮೂಹ ದೇವಾಲಯಗಳು, ಬನಶಂಕರಿ, ಪ್ರಸನ್ನ ವೀರಾಂಜನೇಯ ಸ್ವಾಮಿ, ದೊಡ್ಡಗಣಪತಿ ಸೇರಿದಂತೆ ಒಟ್ಟು 54 ದೇವಾಲಯಗಳಲ್ಲಿ ಕಳೆದ ಮಾರ್ಚ್ 27ರಂದು ಅಧಿಕಾರಿಗಳು ಹುಂಡಿ ತೆರೆದಿದ್ದರು. ಈ ವೇಳೆ 20 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಳೇ ನೋಟುಗಳು ಪತ್ತೆಯಾಗಿದ್ದವು. ಆದರೆ ಅಧಿಕಾರಿಗಳು ಈ ನೋಟುಗಳನ್ನು ಬ್ಯಾಂಕಿಗೆ ಹಾಕದೆ ಸ್ಟ್ರಾಂಗ್ ರೂಮ್‍ನಲ್ಲಿ ಧೂಳು ಹಿಡಿಯಲು ಬಿಟ್ಟಿದ್ದಾರೆ. ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ ಟಿಐ ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಬಹಿರಂಗವಾಗಿದೆ.

    ಬೆಂಗಳೂರಿನ ಒಟ್ಟು 54 ದೇವಾಲಯಗಳ ಹುಂಡಿಗಳಲ್ಲಿ 20 ಲಕ್ಷ ರೂಪಾಯಿ ಹಳೇ ನೋಡು ಕೊಳೆಯುತ್ತಾ ಬಿದ್ದಿದೆ. ದೇವಾಲಯಗಳ ಅಭಿವೃದ್ಧಿಗೆ ಈ ಹಣವನ್ನ ಬಳಸಬಹುದಿತ್ತು. ಅಷ್ಟು ದುಡ್ಡಿಗೆ ಬೆಲೆನೇ ಇಲ್ವಾ? ಮುಜರಾಯಿ ಸಚಿವರು, ಅಧಿಕಾರಿಗಳೇ ಇದಕ್ಕೆ ಕಾರಣ. ಅವರೇ ಇದಕ್ಕೆ ಉತ್ತರ ಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿ ಆಗ್ರಹಿಸಿದ್ದಾರೆ.

  • ಈ ಐದು ಜನರೇ ಬಿಜೆಪಿಯನ್ನ ಕರ್ನಾಟಕದಲ್ಲಿ ಮುಳುಗಿಸುತ್ತಾರೆ: ಯುಟಿ ಖಾದರ್

    ಈ ಐದು ಜನರೇ ಬಿಜೆಪಿಯನ್ನ ಕರ್ನಾಟಕದಲ್ಲಿ ಮುಳುಗಿಸುತ್ತಾರೆ: ಯುಟಿ ಖಾದರ್

    ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಳುಗಿಸೋಕೆ ಬಿಜೆಪಿ ಪಕ್ಷದ ನಾಯಕರೇ ಸಾಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಮುಳುಗಿಸೋಕೆ ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಮತ್ತು ಗೋ ಮಧುಸೂದನ್ ಸಾಕು ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಈ ಐದು ಜನರೇ ಬಿಜೆಪಿಯನ್ನ ಮುಳುಗಿಸುತ್ತಾರೆ. ಒಬ್ಬರು ಸಂವಿಧಾನ ಬದಲಾಯಿಸಬೇಕು ಎಂದು ಹೇಳಿದರೆ, ಇನ್ನೊಬ್ಬರು ಬೆಂಕಿ ಹಚ್ಚಬೇಕು ಅಂತಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರೇ ರಾಜ್ಯಕ್ಕೆ ಬೆಂಕಿ ಹಚ್ಚಬೇಕು ಅಂತಾರೆ. ಇಂತಹವರನ್ನ ಜನ ಗೆಲ್ಲಿಸುವುದಿಲ್ಲ. ಜೈಲಿಗೆ ಹೋದವರನ್ನ ಜನರು ಮರೆಯುತ್ತಾರೆ. ಆದರೆ ಅನ್ನ, ಕ್ಷೀರ, ಮನೆ ಕೊಟ್ಟವರನ್ನ ರಾಜ್ಯದ ಜನ ಮರೆಯೊಲ್ಲ ಅಂತ ಯಡಿಯೂರಪ್ಪ, ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

    ಗುಜರಾತ್‍ನಲ್ಲೇ ಮೋದಿ ಹವಾ ಇಲ್ಲ. ಇನ್ನು ಕರ್ನಾಟಕದಲ್ಲಿ ಮೋದಿ ಹವಾ ನಡೆಯುತ್ತಾ? ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರಿಗೆ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಅವರಂತಹ ನಾಯಕರು ಸಿಕ್ಕಿದ್ರೆ ಬಿಜೆಪಿ ಧೂಳಿಪಟ ಆಗ್ತಿತ್ತು ಎಂದರು.

    ಜನಾರ್ದನ ಪೂಜಾರಿ ಹಾಗೂ ರಮಾನಾಥ್ ರೈ ಕಣ್ಣೀರು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ. ಅವರಿಬ್ಬರು ಗುರು ಶಿಷ್ಯರು ಇದ್ದಂತೆ. ಇದೆಲ್ಲ ಸರಿ ಹೋಗುತ್ತೆ. ಇದರಲ್ಲಿ ಬೇರೆ ಯಾರು ರಾಜಕೀಯಕ್ಕೆ ಬಳಸಿಕೊಳ್ಳೋದು ಬೇಡ ಎಂದ್ರು.

    ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಿಸಿದಂತೆ, ಅದನ್ನ ಮಾಧ್ಯಮದವರು ನೈತಿಕ ಪೊಲೀಸ್ ಗಿರಿ ಎನ್ನಬಾರದು. ಇದು ಗೂಂಡಾಗಿರಿ ಅಂತ ಕರೆಯಬೇಕು. ಇಂತಹ ಗೂಂಡಾಗಿರಿ ಯಾರೇ ಮಾಡಿದ್ರು ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಜನರನ್ನ ಇಬ್ಭಾಗ ಮಾಡಲು ಕೆಲವರು ಹೀಗೆ ಮಾಡುತ್ತಿದ್ದಾರೆ. ಜನರು ಈ ಬಗ್ಗೆ ಸರಿಯಾಗಿ ನಿರ್ಧಾರ ಮಾಡಬೇಕು ಎಂದು ಬಿಜೆಪಿ ಮೇಲೆ ಬೊಟ್ಟು ಮಾಡಿದ್ರು.

    ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ ಅವರು, ಎಲ್ಲವನ್ನು ಕಾನೂನಿನ ಅಡಿಯಲ್ಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಧಾರ್ಮಿಕ ಮುಖಂಡರನ್ನ ಈ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬೇರೆ ಧರ್ಮಗಳಲ್ಲೂ ಕೆಲ ಪದ್ಧತಿಗಳಿವೆ. ಎಲ್ಲವನ್ನು ಕಾನೂನಿನ ಮೂಲಕವೇ ಸರಿ ಮಾಡುತ್ತೇವೆ ಅನ್ನೋದು ಸಾಧ್ಯವಿಲ್ಲ ಎಂದು ವಿಧೇಯಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ಮೇಲೆ 9 ಲಕ್ಷ ಬೋಗಸ್ ಕಾರ್ಡ್ ಪತ್ತೆಹಚ್ಚಲಾಗಿದೆ. ಅನ್ನಭಾಗ್ಯ, ಕನ್ನ ಭಾಗ್ಯ ಅಂತಿದ್ದ ವಿರೋಧ ಪಕ್ಷ ಈಗ ಇದು ಒಳ್ಳೆ ಭಾಗ್ಯ ಅಂತಿದ್ದಾರೆ. ಸದ್ಯಕ್ಕೆ ರೇಷನ್ ಕಾರ್ಡ್ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ ಎಂದರು.

    ಪಡಿತರ ಚೀಟಿಗಾಗಿ 15 ಲಕ್ಷ 47 ಸಾವಿರ ಜನ ಅರ್ಜಿ ಹಾಕಿದ್ರು. ಇದರಲ್ಲಿ 15 ಲಕ್ಷ 25 ಚೆಕ್ ಲೀಸ್ಟ್ ತೆಗೆದು ತಹಶೀಲ್ದಾರ್ ರಿಂದ ಪರಿಶೀಲನೆ ಮಾಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿತ್ತು. ಜಾತಿ ಮತ್ತು ವರಮಾನದ ಪರಿಶೀಲನೆ ಮಾಡಿಸಲಾಗಿದ್ದು, 14 ಲಕ್ಷ 92 ಸಾವಿರ ಫೀಲ್ಡ್ ವೆರಿಫಿಕೇಷನ್ ಮುಗಿದಿದೆ. 13 ಲಕ್ಷ ಗ್ರಾಮೀಣ ಭಾಗದಲ್ಲಿ ಕ್ಲಿಯರ್ ಆಗಿದೆ. 11 ಲಕ್ಷ ಕಾರ್ಡ್ ಪ್ರಿಂಟ್ ಆಗಿ ಫಲಾನುಭವಿಗಳಿಗೆ ತಲುಪಿದೆ. ಸ್ಪೀಡ್ ಪೋಸ್ಟ್ ಮೂಲಕ ಫಲಾನುಭವಿಗಳ ಕೈಗೆ ಸೇರಿದೆ. ahara.kar.nic.in ವೆಬ್‍ಗೆ ಹೋದ್ರೆ ಪಡಿತರ ಚೀಟಿ ವಿವರ ಸಾರ್ವಜನಿಕರಿಗೆ ಲಭ್ಯವಾಗುತ್ತೆ. ಪಡಿತರ ಚೀಟಿಗಾಗಿ ಸಲ್ಲಿದ್ದ ಅರ್ಜಿಯಲ್ಲಿ 26 ಸಾವಿರ ಅರ್ಜಿ ರಿಜೆಕ್ಟ್ ಆಗಿದೆ. ರಿಜೆಕ್ಟ್ ಆದ ಅರ್ಜಿಗಳನ್ನ ವೆಬ್‍ಸೈಟ್‍ಗೆ ಹಾಕಲಾಗುತ್ತದೆ ಎಂದು ತಿಳಿಸಿದರು.

    ಅನ್ಯಭಾಗ್ಯ ಕೇಂದ್ರ ಸರ್ಕಾರದ ಯೋಜನೆ ಅಂತಾರೆ. ಬಿಜೆಪಿ ರಾಜ್ಯಗಳಲ್ಲಿ ಯಾಕೆ ಈ ಯೋಜನೆ ಇಲ್ಲ. ಅಷ್ಟು ಬದ್ಧತೆ ಇದ್ದರೆ ಬೇರೆ ರಾಜ್ಯದಲ್ಲಿ ಅನ್ನಭಾಗ್ಯ ಜಾರಿಗೆ ತರಲಿ. ಸಿದ್ದರಾಮಯ್ಯ ಕೆಲಸ ಮಾಡೋದು ನೀವು ಹೆಸರು ಪಡೆಯೋದು ಸರಿಯಲ್ಲ ಎಂದು ವಿಪಕ್ಷಗಳಿಗೆ ಯುಟಿ ಖಾದರ್ ಟಾಂಗ್ ಕೊಟ್ಟರು.

  • ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ

    ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ

    ಬೆಂಗಳೂರು: ಡಿಕೆ ರವಿ ಮತ್ತು ಗಣಪತಿ ಪ್ರಕರಣಗಳನ್ನು ಸಮೀಕ್ಷೆಗೆ ಪರಿಗಣಿಸಿದ್ದು ಯಾಕೆ ಎಂದು ಸಚಿವ ಕೆಜೆ ಜಾರ್ಜ್ ಪಬ್ಲಿಕ್ ಟಿವಿಯನ್ನು ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಅವರು, ಸಮೀಕ್ಷೆಗಳ ಫಲಿತಾಂಶಗಳು ನಿಜವಾಗುವುದಿಲ್ಲ. ಇದು ಗುಜರಾತ್ ಚುನಾವಣೆಯಲ್ಲಿ ಸಾಬೀತಾಗಿದೆ. ನಿಮ್ಮ ಸರ್ವೆಯನ್ನ ನಾನು ನೋಡಿದ್ದೇವೆ. ಅದರಲ್ಲಿ ಡಿಕೆ ರವಿ ಕೇಸ್ ಹಾಗೂ ಗಣಪತಿ ಕೇಸ್ ಸರ್ಕಾರದ ಇಮೇಜ್‍ಗೆ ಧಕ್ಕೆ ಆಗುತ್ತೆ ಎಂದು ತೋರಿಸಲಾಗಿದೆ. ಇದನ್ನು ಯಾಕೆ ಸಮೀಕ್ಷೆಗೆ ಪರಿಗಣಿಸಿದ್ದು ಎನ್ನುವುದನ್ನು ನೀವು ಹೇಳಬೇಕು ಎಂದು ಪ್ರಶ್ನಿಸಿದರು.

    ಡಿಕೆ ರವಿ ಕೇಸ್ ನಲ್ಲಿ ಸಿಬಿಐ ಆತ್ಮಹತ್ಯೆ ಅಂತ ವರದಿ ಕೊಟ್ಟಿದೆ. ಗಣಪತಿ ಕೇಸ್‍ನಲ್ಲಿ ಸಿಐಡಿ ಬಿ ರಿಪೋರ್ಟ್ ನೀಡಿದೆ. ಹೀಗಾಗಿ ನೀವು ಸರ್ವೆಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಿರೋದು ಸರಿಯಲ್ಲ. ರಾಜ್ಯದ ಜನ ಯಾವ ಸರ್ಕಾರ ಬೇಕು ಅಂತ ನಿರ್ಧಾರ ಮಾಡುತ್ತಾರೆ. ಅತಂತ್ರ ಸರ್ಕಾರ ನಿರ್ಮಾಣ ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಇದನ್ನು ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

    2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮೆಗಾ ಸಮೀಕ್ಷೆಯನ್ನು ನಡೆಸಿತ್ತು. ಜನವರಿ 1 ಮತ್ತು 2ನೇ ತಾರೀಕಿನಂದು ಮೆಗಾ ಸಮೀಕ್ಷೆಯ ಫಲಿತಾಂಶಗಳು ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು

    ಈ ಮೆಗಾ ಸರ್ವೆಯಲ್ಲಿ ಜನರಿಗೆ ಯಾವ ಹಗರಣಗಳು ಸಿದ್ದರಾಮಯ್ಯ ಇಮೇಜ್ ಮೇಲೆ ಹೆಚ್ಚು ಪರಿಣಾಮ ಬೀರಿವೆ ಎಂದು ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಹ್ಯೂಬ್ಲೋಟ್ ವಾಚ್ ಹಗರಣಕ್ಕೆ 7.69%, ಡಿಕೆ ರವಿ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ 31.84%, ಪರಮೇಶ್ವರ ನಾಯ್ಕ್ ಪ್ರಕರಣಕ್ಕೆ 2.96%, ಮೇಟಿ ಲೈಂಗಿಕ ಹಗರಣಕ್ಕೆ 6.71% ಮತ್ತು ಡಿಕೆ ಶಿವಕುಮಾರ್ ಐಟಿ ದಾಳಿ ಪ್ರಕರಣಕ್ಕೆ 6.91% ಫಲಿತಾಂಶ ಸಿಕ್ಕಿತ್ತು. ಒಟ್ಟು ಮೇಲಿನ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ 30.56%, ಏನೂ ಹೇಳಲ್ಲ 12.96% ಹಾಗೂ ಇತರೆಗೆ 0.37% ಫಲಿತಾಂಶ ಸಿಕ್ಕಿತ್ತು. ಇದನ್ನು ಓದಿ:ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದ

  • ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಮೈಸೂರು/ಬೆಂಗಳೂರು: ಹೆಲ್ಮೆಟ್ ಧರಿಸೋದು ಕಡ್ಡಾಯ. ಹಾಗಂತ ಕೈಗೆ ಸಿಕ್ಕ ಹೆಲ್ಮೆಟ್ ಹಾಕ್ಕೊಂಡು ಪೊಲೀಸರ ಕೈಯಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು.

    ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕುವಂತಿಲ್ಲ. ಒಂದು ವೇಳೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕ್ಕೊಂಡು ಸಿಕ್ಕಿಬಿದ್ರೆ ಹೆಲ್ಮೆಟ್ ಹೋಗುತ್ತೆ ಜೊತೆಗೆ ದುಡ್ಡು ಹೋಗುತ್ತೆ. ಅಲ್ಲದೆ ಕಿವಿಯನ್ನ ಮುಚ್ಚದ ಅರ್ಧ ಹೆಲ್ಮೆಟ್ ಕೂಡಾ ಧರಿಸುವಂತಿಲ್ಲ. ಈಗಾಗಲೇ ಬೆಂಗಳೂರು, ಮೈಸೂರಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಐಎಸ್‍ಐ ಮಾರ್ಕ್ ಇಲ್ಲದ ಹಾಗೂ ಅರ್ಧ ಹೆಲ್ಮೆಟ್ ಧರಿಸಿ ಸಿಕ್ಕಿಬಿದ್ದವರಿಂದ ಹೆಲ್ಮೆಟ್ ವಶಪಡಿಸಿಕೊಳ್ತಿದ್ದಾರೆ.

    ಮೈಸೂರು ಸಂಚಾರಿ ಪೊಲೀಸರಿಂದ ಮಂಗಳವಾರದಂದು ಆಪರೇಷನ್ ಸೇಫ್ ರೈಡ್ ಹೆಸರಿನಲ್ಲಿ ಮೆಗಾ ಹೆಲ್ಮೆಟ್ ತಪಾಸಣೆ ನಡೆಯಿತು. ಇಷ್ಟು ದಿನ ಹೆಲ್ಮೆಟ್ ಹಾಕದವರಿಗೆ ದಂಡ ಮಾತ್ರ ಹಾಕುತ್ತಿದ್ದ ಪೊಲೀಸರು ನಿನ್ನೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್‍ಗಳನ್ನು ಸ್ಥಳದಲ್ಲಿಯೇ ವಶಪಡಿಸಿಕೊಂಡ್ರು. ಗಟ್ಟಿಯಾದ ಹಾಗೂ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸೂಚನೆ ನೀಡಿದ್ರು.

    ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ಸವಾರರಿಂದ ಪಡೆದು ದಂಡ ಕಟ್ಟಿಸಿಕೊಳ್ಳದೇ ಎಚ್ಚರಿಕೆ ನೀಡಿ ಕಳಿಸಿದ್ರು. ಹಳೇ ಹೆಲ್ಮೆಟ್ ಬೇಕು ಎಂದರೆ ಹೊಸದಾಗಿ ಐಎಸ್‍ಐ ಮಾಕ್ ಉಳ್ಳ ಫುಲ್ ಹೆಲ್ಮೆಟ್ ಖರೀದಿಸಿ ತಂದು ತೋರಿಸುವಂತೆ ಸೂಚಿಸಿದ್ರು. ಮೈಸೂರು ನಗರದಾದ್ಯಂತ ಈ ವಿಶೇಷ ತಪಾಸಣೆ ನಡೆಯಿತು.

    ನಿನ್ನೆ ಮೈಸೂರು ನಗರ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ 15 ಸಾವಿರಕ್ಕೂ ಹೆಚ್ಚು ಹೆಲ್ಮೆಟ್‍ಗಳನ್ನ ವಶಪಡಿಸಿಕೊಂಡಿದ್ದಾರೆ. ಇದೇ ವಾರ ಮತ್ತೊಮ್ಮೆ ದಿಢೀರ್ ದಾಳಿ ಮಾಡಲಿದ್ದಾರೆ.

    ಹೆಲ್ಮೆಟ್ ಕಸಿದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಪೊಲೀಸರು ಹೊಸ ಐಎಸ್‍ಐ ಮಾರ್ಕ್ ಉಳ್ಳ ಹೆಲ್ಮೆಟ್ ತಂದು ತೋರಿಸಿದ್ರೆ ಹಳೇ ಹೆಲ್ಮೆಟ್ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಮತ್ತೆ ಆ ಹಳೇ ಹೆಲ್ಮೆಟ್ ಧರಿಸುವಂತಿಲ್ಲ.

     

  • ಚಿಕನ್ ಪ್ರಿಯರೇ ಎಚ್ಚರ- ಸಿಲಿಕಾನ್ ಸಿಟಿಯಲ್ಲಿ ಕಾಣಿಸಿಕೊಂಡಿದೆ ಹಕ್ಕಿ ಜ್ವರ

    ಚಿಕನ್ ಪ್ರಿಯರೇ ಎಚ್ಚರ- ಸಿಲಿಕಾನ್ ಸಿಟಿಯಲ್ಲಿ ಕಾಣಿಸಿಕೊಂಡಿದೆ ಹಕ್ಕಿ ಜ್ವರ

    ಬೆಂಗಳೂರು: ಚಿಕನ್ ಪ್ರಿಯರೇ ಸ್ವಲ್ಪ ಎಚ್ಚರವಾಗಿರಿ. ಸಿಲಿಕಾನ್ ಸಿಟಿಯಲ್ಲಿ ಈಗ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಚಿಕನ್ ತಿನ್ನೋ ಮೊದಲು ಹುಷಾರಾಗಿರಿ.

    ಐಟಿ-ಬಿಟಿ ಮಂದಿ ಈಗಾಗಲೇ ಡೆಂಗ್ಯೂ, ಚಿಕೂನ್ ಗುನ್ಯ ಜ್ವರಗಳಿಂದ ಸಾವನ್ನಪ್ಪುತ್ತಿದ್ದಾರೆ. ಈ ಸಂದರ್ಭದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ದಾಸರಹಳ್ಳಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಕಳೆದ ವಾರ ತಮಿಳುನಾಡಿನ 15 ಕೋಳಿಯನ್ನ ನಗರದ ದಾಸರಹಳ್ಳಿಯ ಕೆಜಿಎನ್ ಕೋಳಿ ಅಂಗಡಿ ಮಾಲೀಕ ಖರಿದೀಸಿದ್ದರು. ಅದರಲ್ಲಿ ನಾಲ್ಕೈದು ಕೋಳಿಗಳು ಸಾವನ್ನಪಿದ್ದು, ಮೃತ ಕೋಳಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಹಕ್ಕಿ ಜ್ವರ ಇರುವುದು ಪತ್ತೆಯಾಗಿದೆ.

    ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಬಿಎಂಪಿ ಎಚ್ಚೆತ್ತುಕೊಂಡು ಹೊರರಾಜ್ಯದ ಕೋಳಿಗಳನ್ನ ಖರೀದಿಸದಂತೆ ಚಿಕನ್ ಅಸೋಸಿಯೇಷನ್‍ಗೆ ತಿಳಿಸಿದೆ. ಅಷ್ಟೇ ಅಲ್ಲದೇ ಈ ಹಕ್ಕಿ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

  • ಕಳ್ಳತನವಾಗಿದ್ದ ಮನೆಯವರಿಗೆ ಹೊಸ ವರ್ಷದಂದು ಸರ್ಪ್ರೈಸ್ ಗಿಫ್ಟ್ ಕೊಟ್ಟ ಪೊಲೀಸರು

    ಕಳ್ಳತನವಾಗಿದ್ದ ಮನೆಯವರಿಗೆ ಹೊಸ ವರ್ಷದಂದು ಸರ್ಪ್ರೈಸ್ ಗಿಫ್ಟ್ ಕೊಟ್ಟ ಪೊಲೀಸರು

    ಬೆಂಗಳೂರು: ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಯಿಂದ ಕೆಲವರಿಗೆ ಸರ್ಪ್ರೈಸ್ ಉಡುಗೊರೆ ದೊರೆತಿದೆ.

    ಹೊಸ ವರ್ಷಕ್ಕೆ ಪೊಲೀಸ್ ಇಲಾಖೆ ವಿನೂತನ ಕೊಡುಗೆ ನೀಡಿದ್ದು, ಕಳ್ಳತನವಾದ ಚಿನ್ನಾಭರಣವನ್ನು ಅವರವರ ಮನೆಗೆ ತಲುಪಿಸಿದ್ದಾರೆ. ಹೊಸ ವರ್ಷ ರಾತ್ರಿ 12 ಗಂಟೆಗೆ ಇನ್ಸ್ ಪೆಕ್ಟರ್ ಮುಖಾಂತರ ರಿಕವರಿಯಾಗಿದ್ದ ವಸ್ತುಗಳನ್ನು ವಾಪಸ್ ನೀಡಿದ್ದಾರೆ.

    ಕೋರ್ಟ್ ಅನುಮತಿ ಪಡೆದು ನಂತರ ಕಳ್ಳರಿಂದ ರಿಕವರಿ ಮಾಡಿಕೊಂಡಿದ್ದ ವಸ್ತುಗಳನ್ನು ಹೊಸ ವರ್ಷದ ಪ್ರಯುಕ್ತ ಸರ್ಪ್ರೈಸ್ ಆಗಿ ವಾಪಾಸ್ ನೀಡಿದ್ದಾರೆ. ಯಲಹಂಕ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜೇಗೌಡ, ವೆಂಕಟೇಶ್ವರಲು ದಂಪತಿಗೆ ತಾವು ಕಳೆದುಕೊಂಡಿದ್ದ 40 ಗ್ರಾಂ ಚಿನ್ನಾಭರಣವನ್ನು ಹಿಂತಿರುಗಿಸಿದ್ದಾರೆ. ಪೊಲೀಸರು ಹುಣಸಮಾರನಹಳ್ಳಿ ಮನೆಗೆ ದಿಢೀರ್ ಭೇಟಿ ಕೊಟ್ಟು ಹೊಸ ವರ್ಷದ ಗಿಫ್ಟ್ ಕೊಟ್ಟಿದ್ದಾರೆ.

    ಬೊಮ್ಮನಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಕೋಟ್ಯಾನ್, ನಂದಕಿಶೋರ್ ಮನೆಗೆ ತೆರಳಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಾಪಸ್ ನೀಡಿದ್ದಾರೆ. ಹೀಗೆ ಪೊಲೀಸರು ಚಿನ್ನಾಭರಣ ಕಳೆದುಕೊಂಡಿದ್ದ ದಂಪತಿಗಳ ಮನೆಗೆ ಹೋಗಿ ವಸ್ತುಗಳನ್ನ ವಾಪಸ್ ನೀಡಿ ವಿಶಿಷ್ಟತೆ ಮೆರೆದಿದ್ದಾರೆ.

    ಪೊಲೀಸ್ ಕಮೀಷನರ್ ಸುನೀಲ್ ಕುಮಾರ್ ಆದೇಶದ ಮೇರೆಗೆ ಪೊಲೀಸರು ಈ ಕರ್ತವ್ಯವನ್ನು ನೆರವೇರಿಸಿದ್ದಾರೆ.