Tag: Bangalore

  • ತಾನು ನಟಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡು ಬಂದ ಸ್ಯಾಂಡಲ್‍ವುಡ್ ನಟಿ!

    ತಾನು ನಟಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡು ಬಂದ ಸ್ಯಾಂಡಲ್‍ವುಡ್ ನಟಿ!

    ಬೆಂಗಳೂರು: ನಟಿ ಹರಿಪ್ರಿಯಾ ತಾವು ಅಭಿನಯಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡು ಸಿನಿಮಾ ಥಿಯೇಟರ್ ಗೆ  ಹೋಗಿದ್ದಾರೆ.

    ಸ್ಟಾರ್ ಗಳು ಸಾಮಾನ್ಯರಂತೆ ಎಂದಿಗೂ ಜೀವನ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವುದು, ತಾವು ಅಭಿನಯಿಸಿದ ಸಿನಿಮಾ ನೋಡುವುದು ಮತ್ತು ಸಾಮಾನ್ಯರಂತೆ ಶಾಪಿಂಗ್ ಮಾಡಲು ಸಾಧ್ಯವಿರುವುದಿಲ್ಲ. ಎಲ್ಲಿ ಹೋದರು ಅವರ ಅಭಿಮಾನಿಗಳು ಬರುತ್ತಾರೆ. ಹೀಗಾಗಿ ತಾವು ಅಭಿನಯಿಸಿದ ಸಿನಿಮಾದ ಬಗ್ಗೆ ಜನರಿಂದ ಸತ್ಯವಾದ ವಿಮರ್ಶೆ ಪಡೆಯಲು ನೀರ್ ದೋಸೆ ಬೆಡಗಿ ಹರಿಪ್ರಿಯಾ ಮಾರುವೇಷ ಧರಿಸಿ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದಾರೆ.

    ಹರಿಪ್ರಿಯಾ ಅಭಿನಯಿಸಿರುವ `ಜೈಸಿಂಹ’ ಸಿನಿಮಾ ಬಿಡುಗಡೆಯಾಗಿ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಆಗಿದ್ದು, ಜೈಸಿಂಹ ಸಿನಿಮಾದಲ್ಲಿ ಹರಿಪ್ರಿಯಾ ಕೂಡ ಅಭಿನಯಿಸಿದ್ದಾರೆ. ಆದ್ದರಿಂದ ತಮ್ಮ ಪಾತ್ರಕ್ಕೆ ಹಾಗೂ ಸಿನಿಮಾ ಬಗ್ಗೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ತಿಳಿಯಲು ಮಾರುವೇಷದಲ್ಲಿ ಹರಿಪ್ರಿಯಾ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.

    ಈ ಬಗ್ಗೆ ಹರಿಪ್ರಿಯಾ, “ಜೈಸಿಂಹ ಸಿನಿಮಾದ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ ಎಂಬುದನ್ನು ತಿಳಿಯಲು ನಾನು ಮಾರುವೇಷ ಹಾಕಿಕೊಂಡು ಸ್ಥಳಿಯ ಥಿಯೇಟರ್ ಗೆ ಬಂದಿದ್ದೇನೆ. ಈ ಹಿಂದೆ ಈ ರೀತಿಯ ಪ್ರಯತ್ನ ಮಾಡಿಲ್ಲ. ಆದರೆ ಖುಷಿ ಎನ್ನಿಸುತ್ತಿದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ ಬಂದು ಸಿನಿಮಾ ನೋಡಬೇಕೆಂದು ಆಸೆ ಆಗುತ್ತಿದೆ” ಎಂದು ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ಬರೆದು ತಾವು ವೇಷ ಹಾಕಿಕೊಂಡು ಬಂದಿದ್ದ ಫೋಟೋ ಜೊತೆಗೆ ಫೋಸ್ಟ್ ಮಾಡಿದ್ದಾರೆ.

  • ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಹೊತ್ತಿ ಉರಿದ ಕಾರು- ತಾಯಿ, 4 ವರ್ಷದ ಮಗು ಸಜೀವ ದಹನ

    ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಹೊತ್ತಿ ಉರಿದ ಕಾರು- ತಾಯಿ, 4 ವರ್ಷದ ಮಗು ಸಜೀವ ದಹನ

    ಬೆಂಗಳೂರು: ಬೆಂಕಿ ತಗುಲಿ ತಾಯಿ ಹಾಗೂ 4 ವರ್ಷದ ಮಗು ಕಾರಿನಲ್ಲೇ ಸಜೀವವಾಗಿ ದಹನವಾಗಿರುವ ಘಟನೆ ನಗರದ ವೈಟ್ ಫೀಲ್ಡ್ ಸಮೀಪದ ನಲ್ಲೂರಹಳ್ಳಿಯ ಬೋರ್ವೆಲ್ ರಸ್ತೆಯ ಸುಮಧುರ ಆನಂದಮ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.

    ಅಪಾರ್ಟ್ಮೆಂಟ್ ವಾಸಿಯಾದ ನೇಹಾವರ್ಮ(30) ಹಾಗೂ ಮಗ ಪರಮ್(4) ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಎಂದಿನಂತೆ ಸಂಜೆ ತಮ್ಮ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಕಾರ್ ನಿಲ್ಲಿಸುವ ಸಮಯದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಕಾರ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

    ಘಟನೆ ನಡೆದ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇನ್ನು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರು ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಅಳವಡಿಸಿರುವ ವೈರಿಂಗ್ ಸರಿಯಾದ ನಿರ್ವಹಣೆ ಇಲ್ಲದೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನೆಲಮಡಿಯಲ್ಲಿನ ವಿದ್ಯುತ್ ಟ್ರಾನ್ಸ್ ಫಾರ್ಮಾರ್ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ನೆಲಮಹಡಿಯಲ್ಲಿನ ವೈರಿಂಗ್ ಸಂಪೂರ್ಣ ಸುಟ್ಟುಹೋಗಿದೆ.

    ವೈಟ್ ಫೀಲ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಹೆಬ್ಬುಲಿ ನಾಯಕಿಯ ಮೇಲೆ ಲೈಂಗಿಕ ಕಿರುಕುಳ

    ಹೆಬ್ಬುಲಿ ನಾಯಕಿಯ ಮೇಲೆ ಲೈಂಗಿಕ ಕಿರುಕುಳ

    ಬೆಂಗಳೂರು: ಸ್ಯಾಂಡಲ್‍ವುಡ್ ನ ಹೆಬ್ಬುಲಿ ಸಿನಿಮಾದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಅಭಿನಿಯಿಸಿದ್ದ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ.

    ಮಲೇಷಿಯಾದಲ್ಲಿ ನಡೆಯಲಿರುವ ಕಾರ್ಯಕ್ರಮಯೊಂದಕ್ಕೆ ಅವರು ಡ್ಯಾನ್ಸ್ ನನ್ನು ಅಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ. ನಂತರ ಚೆನ್ನೈನಲ್ಲಿರುವ ಟಿ.ನಗರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ದೂರು ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅಮಲಾ ಪೌಲ್, ನಾನು ಮಲೇಷಿಯಾದ ಕಾರ್ಯಕ್ರಮಯೊಂದಕ್ಕೆ ಹೋಗಬೇಕಿತ್ತು. ಆದ್ದರಿಂದ ಆ ಕಾರ್ಯಕ್ರಮಕ್ಕಾಗಿ ನಾನು ಡ್ಯಾನ್ಸ್ ಅಭ್ಯಾಸಕ್ಕೆ ಹೋಗಿದ್ದೆ. ನಾನು ಅಭ್ಯಾಸ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ನಾನು ಅವರಿಗೆ ತಿಳಿದಿರುವಂತೆ ಬಂದು ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಬಳಿಕ ನಾನು ಒಬ್ಬಂಟಿಯಾಗಿ ಇದ್ದಾಗ ಅಸಭ್ಯವಾಗಿ ನನ್ನೊಂದಿಗೆ ಮಾತನಾಡಿದರು. ನನಗೆ ತಕ್ಷಣ ಆಘಾತವಾಯಿತು. ಆದ್ದರಿಂದ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

    ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಈ ಘಟನೆಯಿಂದ ನನಗೆ ಸುರಕ್ಷಿತ ಇಲ್ಲ ಎಂದು ಭಾವನೆ ಉಂಟಾಯಿತು. ನಾನೊಬ್ಬ ಸ್ವತಂತ್ರ ಮಹಿಳೆಯಾಗಿದ್ದೇನೆ. ಯಾರೋ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ನಗರದ ಪ್ರಸಿದ್ಧ ನೃತ್ಯ ನಿರ್ದೇಶಕ ಶ್ರೀಧರನ ನೃತ್ಯ ಸ್ಟುಡಿಯೊದಲ್ಲಿ ನಡೆದಿದೆ. ಆದರೆ ಆ ಸಮಯದಲ್ಲಿ ಅವರು ಅಲ್ಲಿ ಇರಲಿಲ್ಲ ಎಂದು ಅಮಲಾ ಪೌಲ್ ತಿಳಿಸಿದ್ದಾರೆ.

    ಅಮಲಾ ಪೌಲ್ ಅವರು ಮಲೇಷಿಯಾದಲ್ಲಿ `ಡ್ಯಾಜ್ಲಿಂಗ್ ಥೈಮಿಝಾಚಿ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾನು ಮಹಿಳಾ ಸಬಲೀಕರಣ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೇನೆ. ಮಹಿಳೆಯರಿಗೆ ಸಮಾಜದಲ್ಲಿ ಭದ್ರತೆ ಇಲ್ಲ. ಮಾತುಗಳ ಮೂಲಕ ಕೈಗಳ ಮೂಲಕ ಲೈಂಗಿಕ ಕ್ರಿಯೆ ಹೆಚ್ಚುತ್ತಿದೆ. ನನ್ನನ್ನು ಲೈಂಗಿಕವಾಗಿ ಕಿರುಕುಳ ನೀಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಟಿಯ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಆಸಕ್ತಿಯನ್ನು ವಹಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಸ್ಥ ಅಝೇಗೆಸನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಿನಿಮಾರಂಗದಲ್ಲಿ 22 ವರ್ಷ ಪೂರೈಸಿದ ಕಿಚ್ಚ- ಪತ್ರದ ಮೂಲಕ ಮನದಾಳದ ಮಾತು

    ಸಿನಿಮಾರಂಗದಲ್ಲಿ 22 ವರ್ಷ ಪೂರೈಸಿದ ಕಿಚ್ಚ- ಪತ್ರದ ಮೂಲಕ ಮನದಾಳದ ಮಾತು

    ಬೆಂಗಳೂರು: ಸುದೀಪ್ ಅವರು ಚಿತ್ರರಂಗ ಎಂಟ್ರಿ ಕೊಟ್ಟು 22 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಪ್ರೀತಿಯ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.

    ಸುದೀಪ್ ತಮ್ಮ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನ ಗಳಿಸಿ ಅವರಿಂದಲೇ `ಅಭಿನಯ ಚಕ್ರವರ್ತಿ’ ಎಂಬ ಬಿರುದನ್ನು ಕೂಡ ಪಡೆದಿದ್ದಾರೆ. ಸುದೀಪ್ ಅಭಿನಯದಲ್ಲಿ ಮಾತ್ರವಲ್ಲದೆ ತೆರೆಯ ಹಿಂದೆ ಅಪಾರವಾದ ಕೆಲಸವನ್ನು ಮಾಡಿದ್ದಾರೆ. ಅತ್ಯುತ್ತಮ ನಟ, ಹಾಡುಗಾರ, ಬರಹಗಾರ, ನಿರ್ದೇಶಕ, ನಿರ್ಮಾಪಕ, ಉತ್ತಮ ಮಾತುಗಾರ ಹೀಗೆ ತಮ್ಮ ಪ್ರತಿಭೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಅವರ ಹೆಜ್ಜೆ ಗುರುತುಗಳಿವೆ.

    ಸಮಾಜಸೇವೆಗೂ ಸ್ಫೂರ್ತಿ ಆಗಿರುವ ಕಿಚ್ಚ ಸುದೀಪ್, ಸಿನಿಮಾ ರಂಗಕ್ಕೆ ಬಂದು ಇಂದಿಗೆ 22 ವರ್ಷಗಳು ಕಳೆದಿವೆ. ಸಿನಿಮಾರಂಗದಲ್ಲಿ ಅನೇಕ ಸೋಲು-ಗೆಲುವುಗಳ ಮೆಟ್ಟಿಲುಗಳನ್ನ ದಾಟಿ ಬಂದಿರುವ ಅಭಿನಯ ಚಕ್ರವರ್ತಿ ತಮ್ಮ ಅನುಭವವನ್ನ ಪತ್ರದ ಮೂಲಕ ಹಂಚಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಪತ್ರದಲ್ಲಿ ಕಿಚ್ಚ ಸುದೀಪ್ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. `ನಾನು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, 1996ರಲ್ಲಿ, ಬ್ರಹ್ಮ ಸಿನಿಮಾದ ಚಿತ್ರೀಕರಣಕ್ಕಾಗಿ. ಈ ಚಿತ್ರದ ಮೂಲಕ ಸಿನಿಮಾರಂಗದಲ್ಲಿ ನನ್ನ ಪ್ರಯಾಣವನ್ನ ಶುರು ಮಾಡಿದೆ. ಇದಕ್ಕೂ ಮುನ್ನ ನಾನು ನನ್ನ ತಂದೆಯ ಜೊತೆ, ಸ್ನೇಹಿತರ ಜೊತೆ ಚಿತ್ರೀಕರಣದ ಸ್ಥಳಕ್ಕೆ ಹೋದಾಗ ಆಕ್ಷನ್ -ಕಟ್‍ನಲ್ಲಿ ಭಾಗಿ ಆಗುವ ಅನುಭವ ಮಾತ್ರ ಅದ್ಭುತವಾಗಿತ್ತು.

    ಚಿತ್ರದಲ್ಲಿ ಅಣ್ಣನ ಪಾತ್ರ ಮಾಡಿದ್ದ ಅಂಬರೀಶ್, ಮಾವನ ಆಶೀರ್ವಾದವನ್ನ ಪಡೆಯುವ ದೃಶ್ಯದ ಚಿತ್ರೀಕರಣ ಇತ್ತು. ಅದು ತುಂಬಾ ಸುಲಭವಾದುದ್ದು, ಆದರೆ ನನಗೆ ಅದು ಸುಲಭವಾಗಿರಲಿಲ್ಲ. ಆ ದೃಶ್ಯ ಮಾಡಲು ನಾನು ಅನೇಕ ಟೇಕ್‍ಗಳನ್ನು ತೆಗೆದುಕೊಂಡಿದ್ದೆ. ಅಂದು ಅನೇಕರು ನನ್ನ ಮೇಲೆ ಅನುಮಾನ ಇಟ್ಟುಕೊಂಡಿದ್ದರು. ಆದನೆ ನಿಧಾನವಾಗಿ ನಾನು ಎಲ್ಲವನ್ನು ಕಲಿಯುತ್ತಾ ಬಂದೆ.

    ಇಂದಿಗೆ ನನ್ನ ಸಿನಿಮಾ ವೃತ್ತಿ ಜೀವನದ ಪಯಣಕ್ಕೆ 22 ವರ್ಷ ತುಂಬಿದೆ. ಈ ಪ್ರಯಾಣದಲ್ಲಿ ಪಾಲುದಾರರಾದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಹ ಕಲಾವಿದರು, ಮಾಧ್ಯಮಗಳು, ವಿತರಕರು, ಪ್ರದರ್ಶಕರು ಸೇರಿದಂತೆ ಅವರ ಜೊತೆ ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೆ ಧನ್ಯವಾದ ಅರ್ಪಿಸುತ್ತೇನೆ.

    ಸಿನಿಮಾ ಎಂಬುದು ನನ್ನ ಜೀವನದಲ್ಲಿ ಅತ್ಯಂತ ಸುಂದರ ಸಂಗತಿ. ಮುಖ್ಯವಾಗಿ ಇಂದು ನಾನು ಏನಾಗಿದ್ದೇನೋ ಅದು ನೀವೆಲ್ಲರೂ ನನಗೆ ಕೊಟ್ಟ ಉಡುಗೊರೆಯಾಗಿದೆ ಎಲ್ಲರಿಗೂ ಧನ್ಯವಾದಗಳು.

    ನನ್ನ ಈ ಬೆಳವಣಿಗೆ ಕಾರಣವಾದ ನನ್ನ ಕುಟುಂಬಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಈ ಸಾಧನೆಗೆ ತನ್ನ ಕುಟುಂಬದವರು ತುಂಬಾ ತ್ಯಾಗ ಮಾಡಿದ್ದಾರೆ. ಅದಕ್ಕಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಸೋತನಾಗ ನನ್ನ ಜೊತೆ ನಿಂತಿದ್ದ ಚಿತ್ರತಂಡ ಹಾಗೂ ಅಭಿಮಾನಿಗಳಿಗೆ ನಾನು ಯಾವಾಗ್ಲೂ ಚಿರಋಣಿಯಾಗಿರುತ್ತೇನೆ. ತುಂಬು ಪ್ರೀತಿಯ ಮತ್ತು ಅಪ್ಪುಗೆಯ ಕಿಚ್ಚ ಸುದೀಪ್. ಅಂತ ಪತ್ರದಲ್ಲಿ ಬರೆದುಕೊಂಡಿದ್ದಾರೆ.

    22ರ ಸಂಭ್ರಮದಲ್ಲಿ ಕಿಚ್ಚ ಸುದೀಪ್ ತಮ್ಮ ಅನುಭವವನ್ನ ಚಿಕ್ಕದಾಗಿ ಬರೆದಿದ್ದಾರೆ. ಈ ಸಿನಿಮಾ ಪ್ರಯಾಣ ಹೀಗೆ ಮುಂದುವರೆಯಲಿದೆ ಎಂದಿದ್ದು, ಸದ್ಯಕ್ಕೆ ಬಿಗ್ ಬಾಸ್ ಮುಗಿಸಿರುವ ಕಿಚ್ಚ ಇನ್ನು ಕೆಲವೇ ದಿನಗಳಲ್ಲಿ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ.

     

  • ಕ್ರಿಕೆಟ್ ಕೋಚ್‍ನಿಂದ ಬಾಲಕನಿಗೆ ಲೈಂಗಿಕ ಕಿರುಕುಳ – ಅರ್ಧಗಂಟೆಯಲ್ಲಿ ಆರೋಪಿ ಜೈಲು ಪಾಲು

    ಕ್ರಿಕೆಟ್ ಕೋಚ್‍ನಿಂದ ಬಾಲಕನಿಗೆ ಲೈಂಗಿಕ ಕಿರುಕುಳ – ಅರ್ಧಗಂಟೆಯಲ್ಲಿ ಆರೋಪಿ ಜೈಲು ಪಾಲು

    ಬೆಂಗಳೂರು: 13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕ್ರಿಕೆಟ್ ಕೋಚ್ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಗರದ ಯಲಹಂಕದಲ್ಲಿ ನಡೆದಿದೆ.

    ಆರೋಪಿ ಕ್ರಿಕೆಟ್ ಕೋಚ್ ನನ್ನು ನಾಸೀರ್ ಎಂದು ಗುರುತಿಸಿದ್ದು, ಇದೀಗ ಈತನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. 3 ದಿನಗಳ ಹಿಂದೆ ಕೋಚ್ ನಾಸೀರ್ ಬಾಲಕ ತರಬೇತಿ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ಜಿಕೆವಿಕೆ ಆವರಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.

    ಆರೋಪಿ ಪೊದೆಯೊಂದರ ಬಳಿ ತಬ್ಬಿಕೊಳ್ಳಲು ಮುಂದಾಗಿ ಬಾಲಕನ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ನಂತರ ಕೋಚ್‍ನಿಂದ ತಪ್ಪಿಸಿಕೊಂಡ ಬಾಲಕ ಭಯದಿಂದ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ರಾತ್ರಿ ಊಟಕ್ಕೂ ಬರಲಿಲ್ಲ. ಇದರಿಂದ ಪೋಷಕರು ಮಗನನ್ನು ಕರೆದು ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

    ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಅರ್ಧ ಗಂಟೆಯಲ್ಲಿ ಆರೋಪಿ ನಾಸೀರ್‍ನನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿ ಜೈಲಿಗಟ್ಟಿದ್ದಾರೆ.

  • ಸಿಎಂಗಿಂದು ವೇತನಾ ಆಯೋಗದ ವರದಿ ಸಲ್ಲಿಕೆ – ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ ನಿರೀಕ್ಷೆ

    ಸಿಎಂಗಿಂದು ವೇತನಾ ಆಯೋಗದ ವರದಿ ಸಲ್ಲಿಕೆ – ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ ನಿರೀಕ್ಷೆ

    ಬೆಂಗಳೂರು: ಚುನಾವಣಾ ಸಮಯದಲ್ಲೇ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಈ ಗಿಫ್ಟ್ ಮೂಲಕ ರಾಜ್ಯದಲ್ಲಿರೋ ಸರ್ಕಾರಿ ನೌಕರರ ಜೊತೆ ಅವರ ಕುಟುಂಬದವರ ಮತವನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದೆ.

    ಇಂದು ಎಮ್.ಆರ್. ಶ್ರೀನಿವಾಸ್ ಮೂರ್ತಿ ನೇತೃತ್ವದ ಸಮಿತಿಯಲ್ಲಿ 6 ನೇ ವೇತನ ಆಯೋಗದ ವರದಿ ಮಂಡನೆಯಾಗಲಿದೆ. ಸಮಿತಿ ಬೆಳಿಗ್ಗೆ ಸುಮಾರು 10.30ಕ್ಕೆ 6 ವೇತನ ಆಯೋಗದ ವರದಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಲಿದೆ. ಆದ್ದರಿಂದ 6 ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ವೇತನ ಪರಿಷ್ಕರಣೆಯ ಬಗ್ಗೆ ಬಜೆಟ್‍ನಲ್ಲಿ ಘೋಷಣೆ ಮಾಡುವ ಸಾದ್ಯತೆಗಳಿದ್ದು, ಈ ಮೂಲಕ 6 ಲಕ್ಷ ಸರ್ಕಾರಿ ನೌಕರರ ಮತ್ತು ಅವರ ಕುಟುಂಬದವರ ಮತ ಬ್ಯಾಂಕ್ ಭದ್ರ ಪಡಿಸುವ ತೀರ್ಮಾನ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರೋ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದು, ಚುನಾವಣಾ ಸಮಯದಲ್ಲಿ ರಾಜ್ಯದಲ್ಲಿರೋ 5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ವೋಟ್ ಬ್ಯಾಂಕ್ ಸೆಳೆಯೋ ಸಲುವಾಗಿ ನಿವೃತ್ತಿ ವಯಸ್ಸನ್ನು ರಾಜ್ಯ ಸರ್ಕಾರ 2 ವರ್ಷ ಹೆಚ್ಚಿಸಲು ಚಿಂತನೆ ನಡೆಸಿದೆ.

    ವರದಿಯಲ್ಲಿ ಏನು ಇರಬಹುದು?
    1. 6 ನೇ ವೇತನ ಆಯೋಗದ ಸಂಭವನೀಯ ವರದಿಯಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು. ನೌಕರರಿಗೆ ವಾರಕ್ಕೆ ಎರಡು ರಜೆ, ಕೆಲ ಜಯಂತಿಗಳಿಗೆ ಇರುವ ರಜೆಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ.

    2. ಈ ಬಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಾಧ್ಯತೆ ಇದೆ. ಅಂದರೆ ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ ನಿಗದಿಯಾಗುವ ಸಾಧ್ಯತೆ ಇದ್ದು, ಕನಿಷ್ಠ ಮೂಲ ವೇತನ 16,350 ರೂ. ಮತ್ತು ಗರಿಷ್ಠ ಮೂಲ ವೇತನ 1,32,925 ರೂ. ನಿಗದಿಯಾಗಬಹುದು.

    3. ಐಎಎಸ್ ಅಲ್ಲದ ಅಧಿಕಾರಿಗಳಿಗೆ 95,325 ರೂ., ಗ್ರೂಪ್ ಎ ನೌಕರರಿಗೆ 48,625 ರೂ., ಗ್ರೂಪ್ ಬಿ ನೌಕರರಿಗೆ 39,425 ರೂ., ಎಪ್‍ಡಿಎ ನೌಕರರಿಗೆ 28,125 ರೂ., ಸಿ ಗ್ರೂಪ್ ನೌಕರರಿಗೆ 19,850 ರೂ., ಮತ್ತು ಡಿ ಗ್ರೂಪ್ ನೌಕರರಿಗೆ 16,350 ರೂ. ಎಂದು ಮೂಲ ಸಂಬಳ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಓದಿ: ಎಲೆಕ್ಷನ್ ಹೊತ್ತಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸಿಎಂ

  • ದರ್ಶನ್ ಮುಡಿಗೇರಿತು ಮತ್ತೊಂದು ಬಿರುದು

    ದರ್ಶನ್ ಮುಡಿಗೇರಿತು ಮತ್ತೊಂದು ಬಿರುದು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಈಗಾಗಲೇ ಅನೇಕ ಬಿರುದುಗಳಿವೆ. ಅವರ ಸರಳ ವ್ಯಕ್ತಿತ್ವ ಹಾಗೂ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳು ಅನೇಕ ಹೆಸರಿನಿಂದ ಅವರನ್ನು ಕರೆಯುತ್ತಾರೆ.

    ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ದಚ್ಚು ಹೀಗೆ ಅನೇಕ ಹೆಸರಿನಿಂದ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಇಷ್ಟು ಹೆಸರಿನ ಜೊತೆಗೆ ದರ್ಶನ್ ಅವರಿಗೆ ಈಗ ಮತ್ತೊಂದು ಬಿರುದು ಅವರ ಮುಡಿಗೆ ಸೇರಿಕೊಂಡಿದೆ.

    ದರ್ಶನ್ ಅವರ ಸ್ನೇಹಿತ ಹಾಗೂ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ. ನಾಗೇಂದ್ರ ಪ್ರಸಾದ್ ಅವರು `ಶತಸೋದರಾಗ್ರಜಾ ಶರವೀರ’ ಎಂದು ಹೊಸ ಬಿರುದನ್ನು ನೀಡಿದ್ದಾರೆ.

    ದರ್ಶನ್ ನೂರಾರು ಜನರ ಸಹೋದರ ಹಾಗೂ ತಮ್ಮ ಸುತ್ತಮುತ್ತ ಇರುವವರನ್ನ ಸಹೋದರರಂತೆ ಕಾಣುತ್ತಾರೆ. ಈ ಕಾರಣಕ್ಕೆ ಶತಸೋದರಾಗ್ರಜಾ ಎಂದು ಕರೆಯಲಾಗಿದೆ. ಗದಾಯುದ್ಧ ಹಾಗೂ ಬಿಲ್ಲು ವಿದ್ಯೆಯಲ್ಲೂ ವೀರನಾಗಿರುವ ಕಾರಣ ಶರವೀರ ಎಂದು ಬಿರುದು ನೀಡಲಾಗಿದೆ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

    ವಿ.ನಾಗೇಂದ್ರ ಪ್ರಸಾದ್ ಅಭಿನಯಿಸಿ ನಿರ್ದೇಶನ ಮಾಡಿರುವ ಗೂಗಲ್ ಸಿನಿಮಾದ ಹಾಡುಗಳನ್ನು ದರ್ಶನ್ ವೀಕ್ಷಣೆ ಮಾಡಿದ್ದು, ಹಾಡುಗಳನ್ನ ಮೆಚ್ಚಿಕೊಂಡು ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಮುಗಿಸಿ ಪ್ರಚಾರ ಪ್ರಾರಂಭ ಮಾಡಿರುವ ಗೂಗಲ್ ಚಿತ್ರ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.

  • ಗೌರಿ ಲಂಕೇಶ್ ಜನ್ಮದಿನ: ಬೆಂಗ್ಳೂರಿನಲ್ಲಿ  ಇಂದು ಗೌರಿದಿನ ಆಯೋಜನೆ

    ಗೌರಿ ಲಂಕೇಶ್ ಜನ್ಮದಿನ: ಬೆಂಗ್ಳೂರಿನಲ್ಲಿ ಇಂದು ಗೌರಿದಿನ ಆಯೋಜನೆ

    ಬೆಂಗಳೂರು: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ಗೆ ಇಂದು ಜನ್ಮದಿನ. ಹೀಗಾಗಿ ಇಂದು ನಗರದ ಟೌನ್‍ಹಾಲ್‍ನಲ್ಲಿ `ಗೌರಿ ದಿನ’ ಆಯೋಜನೆ ಮಾಡಲಾಗಿದೆ.

    ಗೌರಿ ಹತ್ಯೆಗೆ ನ್ಯಾಯ ಕೇಳಿ ‘ಗೌರಿ ಸ್ಮಾರಕ’ ಇಂದು ಬೀದಿಗಿಳಿದು ಹೋರಾಟ ಮಾಡಲಿದ್ದು, ಈ ಮೂಲಕ `ನಾನು ಗೌರಿ’ ಅನ್ನೋ ಹೋರಾಟವನ್ನ ಮತ್ತೆ ಶುರುಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಗ್ನೇಶ್ ಮೇವಾನಿ, ಕನ್ನಯ್ಯ ಕುಮಾರ್, ದೊರೆಸ್ವಾಮಿ, ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ಸಾಹಿತಿಗಳು ಆಗಮಿಸಲಿದ್ದಾರೆ. ಇಂದು ಗೌರಿ ಲಂಕೇಶ್ ಕುರಿತಾದ ಪುಸ್ತಕ ಕೂಡ ಬಿಡುಗಡೆಯಾಗಲಿದೆ.

    ಸೆಪ್ಟೆಂಬರ್ 5 2017 ಮಂಗಳವಾರ ರಾತ್ರಿ 7.30 ರ ಸುಮಾರಿಗೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗವೇ ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡಿಟ್ಟು ಹತ್ಯೆ ಮಾಡಿದ್ದರು.

    ತನಿಖೆಯ ನಂತರ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದರು. ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.

    ಪ್ರಕರಣದ ಕುರಿತು ಮತ್ತಷ್ಟು ಸುಳಿವನ್ನು ಪಡೆಯುವ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಮತ್ತೆ ಕಾಟ್ರೇಜ್‍ಗಳ ಮರು ಪರೀಕ್ಷೆಯನ್ನು ನಡೆಸುತ್ತಿದ್ದು, ತನಿಖಾ ತಂಡ ಹಂತಕರನ್ನು ಹುಡುಕುವ ಕಾರ್ಯಾಚರಣೆ ಮಾಡುತ್ತಿದೆ. ಇದನ್ನು ಓದಿ: ಗೌರಿ ಲಂಕೇಶ್ ಹತ್ಯೆ ತನಿಖೆ ಈಗ ಎಲ್ಲಿಯವರೆಗೆ ಬಂದಿದೆ?

  • ಲೇಔಟ್ ಗೆ ನುಗ್ಗಿ ನಾಯಿಯನ್ನ ಅಟ್ಟಾಡಿಸಿಕೊಂಡು ಹೋದ ಆನೆ -ವಿಡಿಯೋ ನೋಡಿ

    ಲೇಔಟ್ ಗೆ ನುಗ್ಗಿ ನಾಯಿಯನ್ನ ಅಟ್ಟಾಡಿಸಿಕೊಂಡು ಹೋದ ಆನೆ -ವಿಡಿಯೋ ನೋಡಿ

    ಬೆಂಗಳೂರು: ಕಾಡಾನೆಯೊಂದು ನಾಡಿಗೆ ಬಂದು ಲೇಔಟ್‍ಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಬಿಲ್ವಾರ ಗ್ರಾಮದಲ್ಲಿ ನಡೆದಿದೆ.

    ಬಿಲ್ವಾರ ಗ್ರಾಮ ಬನ್ನೇರುಘಟ್ಟ ಕಾಡುಪ್ರದೇಶಕ್ಕೆ ಹೊಂದಿಕೊಂಡಿರುವ ಕಾರಣ ಆಗಾಗ ಇಲ್ಲಿಗೆ ಆನೆ ಬರುತ್ತದೆ. ಇದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿರುವಂತಹ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಬಿಲ್ವಾರ ಗ್ರಾಮದ ಲೇಔಟ್ ಒಂದರಲ್ಲಿ ಮುಂಜಾನೆ ಸಮಯದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ದಾಂದಲೆ ನಡೆಸಿದೆ.

    ಅಷ್ಟೇ ಅಲ್ಲದೆ ಬೀದಿ ನಾಯಿಗಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಕಂಡ ಸ್ಥಳಿಯರು ಮುಂಜಾನೆ ಸಮಯದಲ್ಲಿ ಮನೆಯಿಂದ ಹೊರಬರಲು ಅತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದೆದು, ಅಲ್ಲಿನ ಜನರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಲೇಔಟ್ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಹೊಡಿಸಲು ಹರಸಾಹಸ ಪಟ್ಟಿದ್ದಾರೆ.

    https://www.youtube.com/watch?v=K3d7TG9qn4Y

     

     

  • ಬೆಂಗ್ಳೂರಿನಲ್ಲಿ ನಡೆಯಿತು ಭೂಲೋಕದ ಶಿವ-ಪಾರ್ವತಿ ಮದುವೆ!

    ಬೆಂಗ್ಳೂರಿನಲ್ಲಿ ನಡೆಯಿತು ಭೂಲೋಕದ ಶಿವ-ಪಾರ್ವತಿ ಮದುವೆ!

    ಬೆಂಗಳೂರು: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯಲ್ಲಿ ಜರಗುತ್ತದೆ ಎನ್ನುವ ನುಡಿಯನ್ನು ನೀವು ಕೇಳಿರಬಹುದು. ಆದರೆ ಸ್ವರ್ಗದಲ್ಲಿರುವ ದೇವತೆಗಳಂತೆ ಭೂಲೋಕದಲ್ಲಿ ಶಿವ-ಪಾರ್ವತಿಯಂತೆ ವೇಷಧರಿಸಿ ನಗರದಲ್ಲಿ ನವ ಜೋಡಿಯ ಮದುವೆ ವೈಭವದಿಂದ ನಡೆದಿದೆ.

    ಬೆಂಗಳೂರಿನಲ್ಲಿ ಬನ್ನೇರುಘಟ್ಟದಲ್ಲಿ ಈ ರೀತಿಯ ವಿಶೇಷ ಮದುವೆ ನಡೆದಿದ್ದು, ಪಾರ್ವತಿ ಅವತಾರದಲ್ಲಿದ್ದ ಕುಸಮಾರನ್ನು ಶಿವ ವೇಷಧಾರಿಯಾಗಿದ್ದ ಲಕ್ಷ್ಮೀಶ ವರಿಸಿದ್ದಾರೆ. ವಧು ಕುಸುಮಾ ಪಾರ್ವತಿ, ವಧು ಲಕ್ಷ್ಮೀಶ ಶಿವನ ವೇಷ ಧರಿಸಿದದ್ದರು. ಮಂತ್ರ ಹೇಳುವ ಪೂಜಾರಿಗಳು ಋಷಿ ಮುನಿಗಳ ವೇಷ ಧರಿಸಿದ್ದು, ಹತ್ತಿರದ ಸಂಬಂಧಿಕರು ದೇವತೆಗಳ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದರು.

     

    ಲಕ್ಷ್ಮೀಶ ಮೂಲತಃ ಅರ್ಚಕರ ಕುಟುಂದವರಾಗಿದ್ದು, ಕಾಲಬೈರೇವಶ್ವರ ಆರಾಧಕರು. ಲಕ್ಷ್ಮೀಶ ತಂದೆ ತನ್ನ ಮಗನ ಮದುವೆಯನ್ನು ಇದೇ ರೀತಿ ಶಿವ ಪಾರ್ವತಿ ಕಲ್ಯಾಣದಂತೆ ನಡೆಸಬೇಕು ಎಂದು ಸಂಕಲ್ಪ ಮಾಡಿದ್ದರು. ಆದ್ದರಿಂದ ಮಗನ ಮದುವೆಯನ್ನು ಅದೇ ರೀತಿಯಲ್ಲಿ ಮಾಡಿದ್ದಾರೆ.

    ಮಧು ಮಕ್ಕಳು ಮಾತ್ರವಲ್ಲದೇ ಅವರ ಹತ್ತಿರ ಸಂಬಂಧಿಕರು ಬ್ರಹ್ಮ, ವಿಷ್ಣು, ಗಣೇಶ, ನಾರದ, ಷಣ್ಮುಖ ವೇಷಧರಿಸಿದ್ದರು. ಇದನ್ನು ಓದಿ: ದೇವತೆಗಳ ಸಮ್ಮುಖದಲ್ಲಿ ನಡೆಯಿತು ಮದುವೆ! ಫೋಟೋ ಗಳಲ್ಲಿ ನೋಡಿ

    https://www.youtube.com/watch?v=sSub2PwQShk