Tag: Bangalore

  • ಪ್ರೀತಿಯ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ದಚ್ಚು

    ಪ್ರೀತಿಯ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ದಚ್ಚು

    ಬೆಂಗಳೂರು: ಕ್ಯಾನ್ಸರ್ ನಿಂದ ಜೀವನದ ಕೊನೆಯ ಅಂಚಿನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಗೆ ದರ್ಶನ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

    ಶಿವಮೊಗ್ಗದ ರೇವಂತ್ ಅವರಿಗೆ ದರ್ಶನ್ ಅಂದ್ರೆ ಅಚ್ಚುಮೆಚ್ಚು. ನೆಚ್ಚಿನ ನಟನ ಎಲ್ಲಾ ಸಿನಿಮಾ ನೋಡಿರುವ ಅವರು, ಪ್ರತಿ ಹುಟ್ಟುಹಬ್ಬದ ದಿನ ಬೆಂಗಳೂರಿಗೆ ಹೋಗಿ ಶುಭ ಕೋರಿ ಬರುತ್ತಾರೆ. ದರ್ಶನ್ ಅವರನ್ನು ಭೇಟಿಯಾಗಬೇಕು, ಮಾತನಾಡಬೇಕೆಂಬ ಬಯಕೆ ಅವರಿಗೆ ಜಾಸ್ತಿಯಾಗಿತ್ತು. ಆದ್ದರಿಂದ ದರ್ಶನ್ ತಮ್ಮ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ, ನಾನು ಬ್ಯುಸಿಯಾಗಿದ್ದೇನೆ. ಆದಷ್ಟು ಬೇಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ್ದಾರೆ.

    ಮೂಲತಃ ಶಿವಮೊಗ್ಗದವರಾದ ರೇವಂತ್, ತನ್ನ 20ನೇ ವಯಸ್ಸಿಗೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ತಮ್ಮ, ಅಕ್ಕ ಹಾಗೂ ಅಪ್ಪ-ಅಮ್ಮ ಇದ್ದಾರೆ. ಶಿವಮೊಗ್ಗದಲ್ಲಿ ವಾಸವಿರುವ ರೇವಂತ್ ಸಾಕಷ್ಟು ದಿನಗಳಿಂದ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಚಿಕಿತ್ಸೆಯನ್ನು ಪಡೆದು ಹೋಗಿದ್ದರು. ಆದರೆ ಕ್ಯಾನ್ಸರ್ ಮತ್ತೆ ಕಾಣಿಸಿದ್ದು ಉಲ್ಭಣಿಸಿದೆ.

    ಪ್ರತಿ ವರ್ಷ ಫೆ.16ಕ್ಕೆ ರೇವಂತ್ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸುತ್ತಿದ್ದರು. ಆದರೆ ಈ ವರ್ಷ ದರ್ಶನ್ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ದುಖಃದಲ್ಲಿದ್ದರು. ವೈದ್ಯರು ಇನ್ನು ಮುಂದೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ರೇವಂತ್ ಅವರ ಕಡೆಯ ಆಸೆಯಾಗಿ ದರ್ಶನ್ ಅವರನ್ನು ನೋಡಬೇಕು ಎಂದು ಹೇಳಿದ್ದರು. ಇದನ್ನು ಓದಿ: ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ನೆರೆವೇರಿಸುತ್ತಾರಾ ದಚ್ಚು!?

  • ಬೆಂಗಳೂರಲ್ಲಿ ಕಿಡಿಗೇಡಿಗಳ ಪುಂಡಾಟ- ಪೊಲೀಸ್ ಠಾಣೆ ಮುಂದೆಯೇ ವಾಹನಗಳಿಗೆ ಬೆಂಕಿ

    ಬೆಂಗಳೂರಲ್ಲಿ ಕಿಡಿಗೇಡಿಗಳ ಪುಂಡಾಟ- ಪೊಲೀಸ್ ಠಾಣೆ ಮುಂದೆಯೇ ವಾಹನಗಳಿಗೆ ಬೆಂಕಿ

    ಬೆಂಗಳೂರು: ಪೊಲೀಸ್ ಠಾಣೆ ಎದುರಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಬೆಂಗಳೂರಿನ ಜೆಸಿ ನಗರದಲ್ಲಿ ನಡೆದಿದೆ.

    ಗುರುವಾರ ಜೆಸಿ ನಗರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಎರಡು ಕಾರು ಮತ್ತು ಒಂದು ಆಟೋವನ್ನು ಪಾರ್ಕ್ ಮಾಡಲಾಗಿತ್ತು. ಸಂಜೆ ಕಿಡಿಗೇಡಿಗಳು ಕಾರು ಮತ್ತು ಆಟೋಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಒಂದು ಕಾರು ಮತ್ತು ಒಂದು ಆಟೋ ಸಂಪೂರ್ಣವಾಗಿ ಭಸ್ಮವಾಗಿವೆ.

    ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ, ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೇರೆ ವಾಹನಗಳಿಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಿಯಂತ್ರಿಸಿದ್ದಾರೆ.

    ಈ ಕುರಿತು ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

    ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಮದುವೆಯಾದ ಹೊಸತರಲ್ಲಿ ಒಟ್ಟೊಟ್ಟಿಗೆ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದರು. ವರ್ಷಕಳೆದರೂ ಒಬ್ಬೊಬ್ಬರನ್ನು ಬಿಟ್ಟು ಸುತ್ತಾಡ್ತಿರಲಿಲ್ಲ. ಅಷ್ಟೊಂದು ಅನ್ಯೋನ್ಯತೆ ಅವರಲ್ಲಿದೆ. ಆದ್ರೆ ದಿಢೀರ್ ಅಂತ ರಾಧಿಕಾ ಪಂಡಿತ್ ಪತಿ ಯಶ್ ಅವರನ್ನ ಬೆಂಗಳೂರಲ್ಲೇ ಬಿಟ್ಟು ಫ್ಲೈಟ್ ಹತ್ತಿ ವಿದೇಶಕ್ಕೆ ಹಾರಿದ್ದಾರೆ.

    ಸ್ಯಾಂಡಲ್‍ವುಡ್ ಪರ್ಫೆಕ್ಟ್ ಜೋಡಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ. ಯಾವಾಗಲೂ ಜೊತೆಯಾಗಿ ಸುತ್ತಾಡುತ್ತಿದ್ದರು. ಮದುವೆಯಾದ ಮೇಲೆ ಯಶ್ `ಕೆಜಿಎಫ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದರು. ರಾಧಿಕಾ ಈಗ ಹೊಸ ಚಿತ್ರದ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿದ ಮೇಲೆ ರಿಲ್ಯಾಕ್ಸ್ ಆಗೋಕೆ ಯೋಚಿಸಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

    ರಾಧಿಕಾ ಮದುವೆಯಾದ ಮೇಲೆ ಒಬ್ಬರೇ ವಿದೇಶಕ್ಕೆ ಪ್ರಯಾಣ ಬೆಳಸಿದ್ದು, ಚಿಕಾಗೋಗೆ ಹೋಗಿದ್ದಾರೆ. ಏರ್‍ಫೋರ್ಟ್‍ನಲ್ಲಿ ಒಬ್ಬರೇ ಇದ್ದ ಫೋಟೋ ಕ್ಲಿಕ್ಕಿಸಿ ತಮ್ಮ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕಾಗೋದಲ್ಲಿ ರಾಧಿಕಾ ಅವರ ಸಹೋದರ ಕುಟುಂಬ ನೆಲೆಸಿದೆ. ಹೀಗಾಗಿ ಸಹೋದರನ ಜೊತೆ ಒಂದಿಷ್ಟು ಸಮಯ ಕಳೆಯೋದಕ್ಕಾಗಿ ರಾಧಿಕಾ ವಿದೇಶ ಪ್ರಯಾಣ ಬೆಳೆಸಿದ್ದಾರೆ.

    ಯಶ್ ಅಭಿನಯದ ಕೆಜಿಎಫ್ ಸಿನಿಮಾ ಚಿತ್ರೀಕರಣ ಕಾರಣಾಂತರಗಳಿಂದ ಸ್ವಲ್ಪ ದಿನ ಮುಂದಕ್ಕೆ ಹೋಗಿದೆ. ಫೆಬ್ರವರಿ 13ಕ್ಕೆ ಯಶ್ ಕೂಡ ವಿದೇಶಕ್ಕೆ ಹೋಗುತ್ತಾರೆ. ಯಾಕೆಂದರೆ ಈ ವರ್ಷದ ಪ್ರೇಮಿಗಳ ದಿನವನ್ನು ವಿದೇಶದಲ್ಲಿ ಆಚರಣೆ ಮಾಡುವ ಯೋಜನೆಯನ್ನು ಈ ಕ್ಯೂಟ್ ದಂಪತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

  • ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ನೆರೆವೇರಿಸುತ್ತಾರಾ ದಚ್ಚು!?

    ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ನೆರೆವೇರಿಸುತ್ತಾರಾ ದಚ್ಚು!?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಅಭಿಮಾನಿಗಳು ದಿನಗಳನ್ನು ಎಣಿಸುತ್ತಿದ್ದಾರೆ. ಆದರೆ ದರ್ಶನ್ ಅಪ್ಪಟ ಅಭಿಮಾನಿ ತಮ್ಮ ಜೀವನದ ಕೊನೆಯ ಅಂಚಿನಲ್ಲಿದ್ದಾರೆ.

    ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ರೇವಂತ್ ಎಲ್ಲರ ಹಾಗೆ ನೆಚ್ಚಿನ ಸ್ಟಾರ್‍ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿ ಆಗಬೇಕು ಎಂಬ ಆಸೆ ಇದೆ. ಆದರೆ ರೇವಂತ್ ಕ್ಯಾನ್ಸರ್ ನಿಂದಾಗಿ ಬದುಕಿನ ಕೊನೆಯ ಕ್ಷಣಗಳನ್ನ ಎಣಿಸುತ್ತಿದ್ದಾರೆ.

    ಮೂಲತಃ ಶಿವಮೊಗ್ಗದವರಾದ ರೇವಂತ್ ತನ್ನ 20ನೇ ವಯಸ್ಸಿಗೆ ಕ್ಯಾನ್ಸರ್ ಕಾಯಿಲೆಯಿಂದ ನೋವು ಅನುಭವಿಸುತ್ತಿದ್ದಾರೆ. ಇವರಿಗೆ ತಮ್ಮ, ಅಕ್ಕ ಹಾಗೂ ಅಪ್ಪ ಅಮ್ಮ ಇದ್ದಾರೆ. ಶಿವಮೊಗ್ಗದಲ್ಲಿ ವಾಸವಿರುವ ರೇವಂತ್ ಸಾಕಷ್ಟು ದಿನಗಳ ಹಿಂದೆ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಚಿಕಿತ್ಸೆಯನ್ನು ಪಡೆದು ಹೋಗಿದ್ದರು. ಆದರೆ ಕ್ಯಾನ್ಸರ್ ಮತ್ತೆ ಕಾಣಿಸಿ ಉಲ್ಭಣಿಸಿದೆ.

    ಪ್ರತಿ ವರ್ಷ ಫೆ.16ಕ್ಕೆ ರೇವಂತ್ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸುತ್ತಿದ್ದರು. ಆದರೆ ಈ ವರ್ಷ ದರ್ಶನ್ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ದುಖಃದಲ್ಲಿ ಇದ್ದಾರೆ. ವೈದ್ಯರು ಇನ್ನು ಮುಂದೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ರೇವಂತ್ ಅವರ ಕಡೆಯ ಆಸೆಯಾಗಿ ದರ್ಶನ್ ಅವರನ್ನು ನೋಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ತಮ್ಮ ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ದಾಸ ದರ್ಶನ್ ಪೂರೈಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

  • ರಮ್ಯಾ ಹೆಸರಲ್ಲೇ ರಮ್ ಇದೆ, ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ: ಶಿಲ್ಪಾ ಗಣೇಶ್

    ರಮ್ಯಾ ಹೆಸರಲ್ಲೇ ರಮ್ ಇದೆ, ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ: ಶಿಲ್ಪಾ ಗಣೇಶ್

    ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ನಟಿ ರಮ್ಯಾ ವಿರುದ್ಧ ನಟ ಗಣೇಶ್ ಪತ್ನಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಗರಂ ಆಗಿದ್ದು, “ರಮ್ಯಾ ಹೆಸರಲ್ಲೇ ರಮ್ ಇದೆ. ಟ್ವೀಟ್ ಮಾಡುವಾಗೆಲ್ಲ ರಮ್ಯಾ ಕುಡಿದಿರುತ್ತಾರೆ ಅನ್ಸುತ್ತೆ” ಎಂದು ಟ್ವೀಟ್ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾ ವಿರುದ್ಧ ಶಿಲ್ಪಾ ಗಣೇಶ್, “ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

    ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟ್ಯೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್ ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ.  ಇದನ್ನು ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ

    ಪದಪುಂಜ ಬಿಡಿಸೋದು ಬಿಟ್ಟರೆ ಪ್ರಧಾನಿ ರೈತರ ಬಗ್ಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರೆ, ಮೋದಿ ಸರ್ಕಾರ ಮಾಡಿರೋ ಸಾಲ ಮನ್ನಾ ಸೊನ್ನೆ ಎಂದು ರಮ್ಯಾ ತಿರುಗೇಟು ನೀಡಿದ್ದರು.  ಇದನ್ನು ಓದಿ: 2013ರ ಟ್ವೀಟ್ ಎತ್ತಿ ಮೋದಿ ವಿರುದ್ಧ ರಮ್ಯಾ ವಾಗ್ದಾಳಿ

    ಪ್ರಧಾನಿ ಮೋದಿ ಅವರ ಟಾಪ್ (T-O-P)  ಕುರಿತು ಟ್ವೀಟ್ ಮಾಡಿರುವ ರಮ್ಯಾ ಅವರು, ನೀವು `P-O-T’ ನಲ್ಲಿದ್ದಾಗ ಹಾಗೇ ಆಗುತ್ತದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು. ಇದನ್ನು ಓದಿ: ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

  • ಭಾವನಾ-ನವೀನ್ ಆರತಕ್ಷತೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರ ದಂಡು!

    ಭಾವನಾ-ನವೀನ್ ಆರತಕ್ಷತೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರ ದಂಡು!

    ಬೆಂಗಳೂರು: ಬಹುಭಾಷಾ ಚಿತ್ರ ತಾರೆ, ಮಲೆಯಾಳಂ ಬೆಡಗಿ ನಟಿ ಭಾವನಾ ಕನ್ನಡದ ಹುಡುಗ ನವೀನ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹದಿನೈದು ದಿನಗಳು ಕಳೆದಿವೆ.

    ಕೇರಳದ ತ್ರಿಶೂರ್ ಜವರ್ ಲಾಲ್ ಕನ್ವೇಷನ್ ಹಾಲ್‍ನಲ್ಲಿ ಈ ಜೋಡಿ ಜನವರಿ 22 ರಂದು ಸಪ್ತಪದಿ ತುಳಿದಿತ್ತು. ಕೇರಳ ಸಂಪ್ರದಾಯದಂತೆ ಇವರ ಮದುವೆ ನಡೆದಿದ್ದು, ಹಲವು ಸಿನಿಮಾ ತಾರೆಯರು ಮತ್ತು ಆಪ್ತರು ಮದುವೆಗೆ ಹೋಗಿದ್ದರು. ಸರಳವಾಗಿ ಮದುವೆ ಮಾಡಿಕೊಂಡ ಈ ತಾರಾ ಜೋಡಿ ಕೇರಳದ ಚಿತ್ರರಂಗದ ಗಣ್ಯರಿಗೆ ಹಾಗೂ ಸ್ನೇಹಿತರಿಗಾಗಿ ಅದ್ಧೂರಿ ಆರತಕ್ಷತೆಯನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದರು.

    ನವೀನ್ ಬೆಂಗಳೂರಿನ ನಿವಾಸಿಯಾಗಿರುವುದರಿಂದ ಇಲ್ಲಿನ ಸ್ನೇಹಿತರು ಹಾಗೂ ಸಿನಿಮಾರಂಗದ ಗಣ್ಯರಿಗಾಗಿ ಅದ್ಧೂರಿಯಾಗಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಆಯೋಜಿಸಿದ್ದರು. ಭಾವನಾ ಅಭಿನಯಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದವರು, ನವೀನ್ ಕುಟುಂಬಸ್ಥರು ಮತ್ತು ಸ್ನೇಹಿತರಷ್ಟೇ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

    ಆರತಕ್ಷತೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್,  ಪ್ರಿಯಾಮಣಿ, ಪಾರೂಲ್ ಯಾದವ್, ಮಾನ್ವಿತಾ, ಮಾಳವಿಕಾ, ಅವಿನಾಶ್, ಹರೀಶ್ ಸೇರಿದಂತೆ ಸ್ಯಾಂಡಲ್‍ವುಡ್ ಸ್ಟಾರ್ ಗಳು ಬಂದು ನವ ವಧು-ವರರಿಗೆ ಶುಭಾ ಹಾರೈಸಿದ್ದಾರೆ.

    ಜಾಕಿ ಭಾವನಾ ಅಭಿನಯದ ಟಗರು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಆರತಕ್ಷತೆಗೆ ಇಡೀ ಟಗರು ಸಿನಿಮಾತಂಡವನ್ನ ಆಹ್ವಾನ ಮಾಡಲಾಗಿತ್ತು. ಕಲಾವಿದರು ಸೇರಿದಂತೆ ಇಡೀ ಟಗರು ತಂಡದ ತಂತ್ರಜ್ಞರು ಭಾವನಾ ಮತ್ತು ನವೀನ್ ಅವರಿಗೆ ಶುಭ ಹಾರೈಸಿದರು. ಆರತಕ್ಷತೆಯಲ್ಲಿ ನಟಿ ಭಾವನಾ ಪೀಚ್ ಗ್ರೀನ್ ಗೌನ್ ಹಾಕಿಕೊಂಡಿದ್ದು, ನವೀನ್ ಬ್ಲೂ ಸೂಟ್ ನಲ್ಲಿ ಕಾಣಿಸಿಕೊಂಡರು.

    ದಕ್ಷಿಣ ಚಿತ್ರರಂಗದ ಈ ವರ್ಷದ ಮೊದಲ ಸಿನಿಮಾ ಜೋಡಿಯ ಮದುವೆ ಇದಾಗಿತ್ತು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ. ಇದನ್ನು ಓದಿ: ಕನ್ನಡದ ಹುಡುಗನ ಜೊತೆ ಸಪ್ತಪದಿ ತುಳಿದ ಭಾವನಾ-ಫೋಟೋಗಳಲ್ಲಿ ನೋಡಿ

  • ಪತ್ನಿ ವಿಜಯಲಕ್ಷ್ಮಿಯಿಂದ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಪಡೆದ ದಚ್ಚು

    ಪತ್ನಿ ವಿಜಯಲಕ್ಷ್ಮಿಯಿಂದ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಪಡೆದ ದಚ್ಚು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೆಲವು ದಿನಗಳು ಬಾಕಿ ಇದ್ದು, ಅಭಿಮಾನಿಗಳು `ಡಿ ಬಾಸ್’ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಲು ವಿಭಿನ್ನವಾಗಿ ಯೋಚನೆ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಅವರ ಪತ್ನಿ ಕೂಡ ತಮ್ಮ ಪತಿಯ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ಸರ್ಪ್ರೈಸ್ ನೀಡಿದ್ದಾರೆ.

    ವಿಜಯಲಕ್ಷ್ಮಿ ದರ್ಶನ್ ವಿಶೇಷವಾದ ಸರ್ಪ್ರೈಸ್ ನೀಡಿದ್ದಾರೆ. ವಿಜಯಲಕ್ಷ್ಮಿ ಅವರು ತಮ್ಮ ಉಂಗುರದ ಬೆರಳಿನ ಮೇಲೆ ದರ್ಶನ್ ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳು ಸ್ಟಾರ್ ಗಳ ಹೆಸರು ಹಾಗೂ ಭಾವಚಿತ್ರವನ್ನ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ದರ್ಶನ್ ಪತ್ನಿ ಈ ಬಾರಿಯ ಬರ್ತ್ ಡೇ ಸ್ಪೆಷಲ್ ಆಗಿ ಈ ರೀತಿಯಲ್ಲಿ ಡಿ ಬಾಸ್ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

    ದರ್ಶನ್ ಅನ್ನುವ ಹೆಸರನ್ನ ತಮ್ಮ ಎಡಗೈ ಉಂಗುರದ ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹೆಸರಿನ ಜೊತೆಯಲ್ಲಿ ಒಂದು ಹಾರ್ಟ್ ಸಿಂಬಲ್ ಕೂಡ ಇದೆ. ಇದು ಖುಷಿಯ ವಿಚಾರವಾಗಿದೆ.

    ವಿಜಯಲಕ್ಷ್ಮಿ ಅವರು ಪರ್ಷಿಯನ್ ಬೆಕ್ಕನ್ನು ಹಿಡಿದುಕೊಂಡು ಫೋಟೋವನ್ನ ತೆಗೆಸಿಕೊಂಡು ಅದನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಹಚ್ಚೆ ಹಾಕಿಸಿಕೊಂಡಿರುವುದು ಕಾಣಿಸುತ್ತದೆ.

  • ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ

    ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ

    ಬೆಂಗಳೂರು: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

    8ನೇ ತರಗತಿ ಓದುತ್ತಿದ್ದ ರಾಣಿ ಎಂಬಾಕೆ ಮೂರು ದಿನದ ಹಿಂದೆ ಸುಭಾಷ್ ನಗರದಿಂದ ನಾಪತ್ತೆಯಾಗಿದ್ದಳು. ಆದ್ರೆ ಶನಿವಾರ ಹೊಸರೋಡ್ ಜಂಕ್ಷನ್ ಬಳಿಯ ಬಸವಾಪುರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

    ರಾಣಿಯ ಪೋಷಕರು ಮೂರು ದಿನಗಳ ಹಿಂದೆಯೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಆದರೆ ಶನಿವಾರ ರಾಣಿ ವಿದ್ಯಾರ್ಥಿನಿಯು ಶಾಲಾ ಸಮವಸ್ತ್ರದಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಶವವನ್ನು ಕೆರೆಯಿಂದ ಹೊರ ತೆಗೆದು ಶವ ಪರೀಕ್ಷೆಗಾಗಿ ನಗರದ ವಿಕ್ಟೋರಿಯ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

    ವಿದ್ಯಾರ್ಥಿನಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಪ್ರಧಾನಿ ಮೋದಿ ಪರಿವರ್ತನಾ ಸಮಾರಂಭದ ಪಕ್ಕದಲ್ಲೇ ಪಕೋಡ ಮಾರಾಟ?

    ಪ್ರಧಾನಿ ಮೋದಿ ಪರಿವರ್ತನಾ ಸಮಾರಂಭದ ಪಕ್ಕದಲ್ಲೇ ಪಕೋಡ ಮಾರಾಟ?

    ಬೆಂಗಳೂರು: ಬಿಜೆಪಿ ಪರಿಚರ್ತನಾ ಯಾತ್ರೆ ನಡೆಯುವ ನಗರದ ಅರಮನೆ ಮೈದಾನದ ಸುತ್ತಲ ಸ್ಥಳದಲ್ಲಿ ಪಕೋಡಾ ಮಾರಾಟ ಮಾಡಲು ಅನುಮತಿ ನೀಡುವಂತೆ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಪೊಲೀಸ್ ಆಯುಕ್ತಿಗೆ ಮನವಿ ಸಲ್ಲಿಸಿದೆ.

    ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಸ್ಥಳದಲ್ಲಿ ಪಕೋಡಾ ಮಾರಾಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಅದರೆ ವಿದ್ಯಾರ್ಥಿ ಸಂಘಟನೆಯ ಮನವಿಯನ್ನು ಪೊಲೀಸ್ ಕಮಿಷನರ್ ತಿರಸ್ಕರಿಸಿದ್ದಾರೆ. ಅಲ್ಲದೇ ನಗರದಲ್ಲಿ ಎಲ್ಲೂ ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ ಎಂದು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಒದಿ:

    ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಸಹ ಪ್ರಧಾನಿ ಮೋದಿ ಅವರ ಪಕೋಡಾ ಹೇಳಿಕೆಗೆ ಕಿಡಿಕಾರಿದ್ದಾರೆ. ಧಾರವಾಡದ ನವಲಗುಂದಲ್ಲಿ ಮಾತನಾಡಿದ ಅವರು, ಪ್ರಧಾನಿಗಳು ಯುವ ಜನತೆಗೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿ ಇಂದು ಪಕೋಡಾ ಮಾರಾಟ ನಡೆಸಲು ಹೇಳುತ್ತಿದ್ದಾರೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

    ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಕೋಡಾ ಮಾರಾಟ ಮಾಡುವುದು ಒಂದು ಸ್ವಯಂ ಉದ್ಯೋಗ ಎಂದು ಹೇಳಿದ್ದರು. ಪ್ರಧಾನಿಗಳ ಹೇಳಿಕೆಗೆ ದೇಶದ್ಯಾಂತ ಹಲವರು ಪಕೋಡಾ ತಯಾರಿಸಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಇದನ್ನು ಓದಿ: ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ

  • ಗುರಾಯಿಸಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿದು ಕೊಂದ್ರು!

    ಗುರಾಯಿಸಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿದು ಕೊಂದ್ರು!

    ಬೆಂಗಳೂರು: ಗುರಾಯಿಸಿದ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಗರದ ಮುದ್ದಿನಪಾಳ್ಯದಲ್ಲಿ ನಡೆದಿದೆ.

    ಮಲ್ಲತ್ತಹಳ್ಳಿ ನಿವಾಸಿ ಅರುಣ್(22) ಕೊಲೆಯಾದ ದುರ್ದೈವಿ. ಶನಿವಾರ ರಾತ್ರಿ ಮುದ್ದಿನಪಾಳ್ಯದ ಮಾರುತಿ ಬಾರಿಗೆ ಅರುಣ್ ಸ್ನೇಹಿತರ ಜೊತೆ ಮದ್ಯ ಖರೀದಿಸಲು ತೆರಳಿದ್ದನು. ಈ ವೇಳೆ ಬಾರಿನಲ್ಲಿದ್ದ ಮೂವರು ಯಾಕೋ ಗುರಾಯಿಸುತ್ತಿದ್ದೀಯ ಎಂದು ಗಲಾಟೆ ಶುರು ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಅರುಣ್‍ಗೆ ಚಾಕುವಿನಿಂದ ಇರಿದಿದ್ದಾರೆ.

    ಅರುಣ್ ಜೊತೆಯಲ್ಲಿದ್ದ ಕಿಶನ್ ಎಂಬಾತನಿಗೂ ಚಾಕುವಿನಿಂದ ಇರಿದಿದ್ದಾರೆ. ತಕ್ಷಣವೇ ಅಲ್ಲಿದ್ದವರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅರುಣ್ ಎದೆ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯಕ್ಕೆ ಕಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.