Tag: Bangalore

  • ಸ್ಟಾರ್ ಹೋಟೆಲ್‍ಗಳಲ್ಲಿ ಮಜಾ ಮಾಡ್ತಿದ್ದ ನಲಪಾಡ್ ಕಂಬಿ ಹಿಂದೆ- ತಟ್ಟೆ ಊಟ, ಲಾಕಪ್‍ನಲ್ಲೇ ನಿದ್ದೆ

    ಸ್ಟಾರ್ ಹೋಟೆಲ್‍ಗಳಲ್ಲಿ ಮಜಾ ಮಾಡ್ತಿದ್ದ ನಲಪಾಡ್ ಕಂಬಿ ಹಿಂದೆ- ತಟ್ಟೆ ಊಟ, ಲಾಕಪ್‍ನಲ್ಲೇ ನಿದ್ದೆ

    ಬೆಂಗಳೂರು: ಉದ್ಯಮಿಯೊಬ್ಬರ ಮಗನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಾಸಕ ಹ್ಯಾರಿಸ್ ಪುತ್ರ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಸೋಮವಾರ ಶರಣಾಗಿದ್ದನು. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಜಾ ಮಾಡುತ್ತಿದ್ದ ಹ್ಯಾರಿಸ್ ಈಗ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿವರೆಗೂ ನಿದ್ದೆಯಿಲ್ಲದೆ ಕೂರುವಂತಾಗಿತ್ತು.

    ಶನಿವಾರ ರಾತ್ರಿ ಉದ್ಯಮಿ ಲೋಕನಾಥ್ ಅವರ ಮಗ ವಿದ್ವತ್ ಜೊತೆ ಜಗಳವಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ನಲಪಾಡ್ ಪಾರಾರಿಯಾಗಿದ್ದನು. ಆದ್ರೆ ಸೋಮವಾರ ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದನು. ನಂತರ ಪೊಲೀಸರು ನಲಪಾಡ್ ನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ರಾತ್ರಿ ಸುಮಾರು 8ಕ್ಕೆ ಆರಂಭವಾದ ನಲಪಾಡ್ ವಿಚಾರಣೆ 11ಗಂಟೆ ವರೆಗೂ ನಡೆದಿದೆ.

    ಕೋರ್ಟ್ ಕಡಿಮೆ ಕಾಲಾವಧಿ ನೀಡಿರೋದ್ರಿಂದ ಪೊಲೀಸರು ಹಲ್ಲೆ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮೊಹಮ್ಮದ್ ನಲಪಾಡ್ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ತರಿಸಿದ ಊಟವನ್ನೇ ಆರೋಪಿ ನಲಪಾಡ್‍ಗೂ ರಾತ್ರಿ ನೀಡಿದ್ದಾರೆ. ವಿಚಾರಣೆ ವೇಳೆ ಘಟನೆ ನಡೆದಾಗ ಯಾರು ಇದ್ದರು, ಯಾವ ಕಾರಣಕ್ಕೆ ಗಲಾಟೆ ನಡೆಯಿತು? ವಿದ್ವತ್ ಮೇಲೆ ಹಲ್ಲೆ ಮಾಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದಾರೆ. ಆದ್ರೆ ಆರೋಪಿ ನಲಪಾಡ್ ಮಾತ್ರ ನಗುಮುಖದಿಂದಲೇ ಉತ್ತರ ನೀಡಿದ್ದಾನೆ ಎನ್ನಲಾಗಿದೆ.

    ಪೊಲೀಸರು ರಾತ್ರಿ 11.30ವರೆಗೂ ವಿಚಾರಣೆ ನಡೆಸಿದ್ದು, ನಂತರ ನಲಪಾಡ್ ರಾತ್ರಿ 1 ಗಂಟೆವರೆಗೆ ರೌಡಿ ಟೀಮ್ ಜೊತೆ ಮಾತಾಡುತ್ತ ಕುಳಿತಿದ್ದನು. ಬಳಿಕ ಪೊಲೀಸರು ಲಾಕಪ್‍ನಲ್ಲೇ ಪೆಂಡಾಲ್ ಹಾಸಿ ಮಲಗಲು ಹೇಳಿದ್ದಾರೆ. ಪೊಲೀಸರು ಇಂದು ಬೆಳಗ್ಗೆ ಮತ್ತೆ ವಿಚಾರಣೆ ನಡೆಸಲಿದ್ದಾರೆ. ಆರೋಪಿ ನಲಪಾಡ್ ನನ್ನ ವಿಚಾರಣೆ ನಡೆಸುವಾಗ ಬೆಂಬಲಿಗರು ಪೊಲೀಸ್ ಠಾಣೆ ಹೊರಗಡೆ ಇದ್ದರು.

    ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ. ವಿದ್ವತ್ ಸಿಂಗಾಪೂರ್ ನಲ್ಲಿ ಪದವಿ ಮುಗಿಸಿ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಇದನ್ನು ಓದಿ: ಪಬ್ಲಿಕ್ ಟಿವಿ ಕ್ಯಾಮೆರಾಮೆನ್ ಮೇಲೆ ರೌಡಿ ನಲಪಾಡ್ ಗ್ಯಾಂಗ್ ಹಲ್ಲೆ

    ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನು ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷೀ ಬಾರಮ್ಮ ಖ್ಯಾತಿಯ ಗೊಂಬೆ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷೀ ಬಾರಮ್ಮ ಖ್ಯಾತಿಯ ಗೊಂಬೆ

    ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಗೊಂಬೆ ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ನೇಹಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೇಹಾ ಇಂದು ಸಪ್ತಪದಿ ತುಳಿದಿದ್ದಾರೆ. ನಟಿ ಸೋನುಗೌಡ ಅವರ ಸಹೋದರಿ ಆಗಿರುವ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರನ್ನು ವಿವಾಹವಾಗಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ.

    ಧಾರವಾಹಿಯಲ್ಲೂ ಗೊಂಬೆಯನ್ನ ಮದುವೆಯಾಗಿರುವ ನಾಯಕನ ಹೆಸರು ಚಂದನ್ ಆಗಿದ್ದು, ನಿಜ ಜೀವದಲ್ಲೂ ಮದುವೆಯಾದ ಹುಡುಗನ ಹೆಸರು ಚಂದನ್ ಆಗಿದೆ. ಚಂದನ್ ಸದ್ಯ ಬ್ಯಾಂಕಾಕ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೆಲವು ದಿನಗಳ ನಂತರ ನೇಹಾಗೌಡ ಕೂಡ ಬ್ಯಾಂಕಾಕ್ ಗೆ ಪ್ರಯಾಣ ಬೆಳೆಸಲಿದ್ದಾರೆ. ನೇಹಾ ಅಭಿನಯ ಮಾಡುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಚಿತ್ರೀಕರಣ ಮುಗಿಯುವ ತನಕವೂ ಗೊಂಬೆ ಪಾತ್ರದಲ್ಲಿ ನೇಹಾಗೌಡ ಅವರೇ ಮುಂದುವರಿದಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾರಂಗದ ಸಾಕಷ್ಟು ಜನರು ಹಾಗೂ ಧಾರಾವಾಹಿಯ ಕಲಾವಿದರು ಕೂಡ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು.

  • ಪಿಜಿ ಮೇಲಿಂದ ಬಿದ್ದು ಟೆಕ್ಕಿ ಅನುಮಾನಾಸ್ಪದ ಸಾವು

    ಪಿಜಿ ಮೇಲಿಂದ ಬಿದ್ದು ಟೆಕ್ಕಿ ಅನುಮಾನಾಸ್ಪದ ಸಾವು

    ಬೆಂಗಳೂರು: ಪಿಜಿ ಮೇಲಿಂದ ಬಿದ್ದು ಟೆಕ್ಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.

    ಮಹಾರಾಷ್ಟ್ರದ ನಾಗಪುರದ ಮೂಲದ ರಿಶಬ್(26) ಸಾವನ್ನಪ್ಪಿರುವ ಟೆಕ್ಕಿ. ರಿಶಬ್ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಹೆಚ್.ಸಿ.ಎಲ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.

    ರಿಶಬ್ ದೊಡ್ಡತೋಗುರಿನ ವಿಜಯ ಜೆಂಟ್ಸ್ ಪಿಜಿಯಲ್ಲಿ ವಾಸ್ತವಿದ್ದರು. ಬೆಳ್ಳಗ್ಗೆ ಎದ್ದು ಕೊನೆ ಮಹಡಿ ಮೇಲೆ ಕುಳಿತಿದ್ದರು. ಆದರೆ ಇದ್ದಕ್ಕಿದ್ದಂತೆ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.

    ಈ ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಿಶಬ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ವಿವಿಧ ಅಯಾಮಗಳಲ್ಲಿ ತನಿಖೆಯನ್ನು ಮುಂದುವರೆಸಿದ್ದಾರೆ.

  • ಪ್ರಿಯಾ ವಾರಿಯರ್ ಸ್ಟೈಲಲ್ಲೇ ಕಿಸ್ ಶೂಟ್ ಮಾಡಿದ ಸ್ಯಾಂಡಲ್‍ವುಡ್ ನಟಿ

    ಪ್ರಿಯಾ ವಾರಿಯರ್ ಸ್ಟೈಲಲ್ಲೇ ಕಿಸ್ ಶೂಟ್ ಮಾಡಿದ ಸ್ಯಾಂಡಲ್‍ವುಡ್ ನಟಿ

    ಬೆಂಗಳೂರು: ಜಸ್ಟ್ 1 ವಿಡಿಯೋದಲ್ಲೇ ಪಡ್ಡೆ ಹುಡುಗರ ಹೃದಯ ಕದ್ದಿರುವ ಮಲಯಾಳಂ ಬೆಡಗಿ ಪ್ರಿಯಾ ವಾರಿಯರ್ ಸದ್ಯಕ್ಕೆ ಇಂಟರ್ ನೆಟ್ ಸೆನ್ಸೇಷನ್ ಆಗಿದ್ದಾರೆ. ಪ್ರಿಯಾ ವಾರಿಯರ್ ಹಾಡಿನಲ್ಲಿನ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡಿತ್ತು. ಈಗ ಆಕೆಯ ಕಿಸ್ ಸ್ಟೈಲ್‍ಗೆ ಎಲ್ಲರೂ ಫಿದಾ ಆಗಿದ್ದು, ಕನ್ನಡದ ಚೆಲುವೆಯೂ ಸಹ ಮನಸೋತಿದ್ದಾರೆ.

    ರಾಜು ಕನ್ನಡ ಮೀಡಿಯಂ ಚಿತ್ರದ ಬೆಡಗಿ ಆಶಿಕಾ ರಂಗನಾಥ್ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಿಸ್ ಸ್ಟೈಲ್‍ಗೆ ಫಿದಾ ಆಗಿದ್ದು, ಪ್ರಿಯಾ ಸ್ಟೈಲ್‍ನಲ್ಲೇ ಆಶಿಕಾ ಕೂಡ ಕಿಸ್ ಅನ್ನು ಗನ್‍ನೊಳಗೆ ಲೋಡ್ ಮಾಡಿ ಶೂಟ್ ಮಾಡಿದ್ದಾರೆ.

    ಆಶಿಕಾ ಪ್ರಿಯಾ ಸ್ಟೈಲ್‍ನಲ್ಲಿ ಕಿಸ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ 22 ಗಂಟೆಗೆ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಆಶಿಕಾ ವಿಡಿಯೋ ನೋಡಿರುವ ಪಡ್ಡೆ ಹುಡುಗರು ಮನಸೋತಿದ್ದಾರೆ. ಇದನ್ನು ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

    ನಟಿ ಪ್ರಿಯಾ ಪ್ರಕಾಶ್ ಕೇರಳದ ತ್ರಿಶೂರ್ ಮೂಲದವರು. ಪ್ರಸ್ತುತ ಅಲ್ಲಿನ ಸ್ಥಳೀಯ ಕಾಲೇಜಿನಲ್ಲಿ ಬಿಕಾಂ ಪದವಿ ಮಾಡುತ್ತಿದ್ದಾರೆ. ಸಿನಿಮಾ ಆಡಿಷನ್ ವೇಳೆ ಇವರಿಗೆ ಸಣ್ಣ ಪಾತ್ರವನ್ನು ನೀಡಲಾಗಿದ್ದು, ಆದರೆ ಇದೀಗ ಈ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗುತ್ತಿದಂತೆ ಮಲಯಾಳಂ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್ ನಲ್ಲೂ ಹೆಚ್ಚು ವೈರಲ್ ಆಗಿದೆ. ಪ್ರಿಯಾ ಅವರ ಒರು ಅಡಾರ್ ಲವ್ ಚಿತ್ರ ಏಪ್ರಿಲ್ ನಲ್ಲಿ ತೆರೆ ಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಇದನ್ನು ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

    https://www.instagram.com/p/BfP_VnGBttE/?hl=en&taken-by=ashika_rangnath

  • ಸಾರಥಿಗೆ 41ನೇ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ದರ್ಶನ್ ಸಂಭ್ರಮ

    ಸಾರಥಿಗೆ 41ನೇ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ದರ್ಶನ್ ಸಂಭ್ರಮ

    ಬೆಂಗಳೂರು: ಇಂದು ಬಾಕ್ಸ್ ಆಫೀಸ್ ಸುಲ್ತಾನನಿಗೆ 41ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.

    ಸಹಸ್ರಾರು ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಿದ್ದು, ಸರತಿ ಸಾಲಲ್ಲಿ ಕಾದು ನಿಂತು, ತಮ್ಮ ಆರಾಧ್ಯ ದೈವ ದರ್ಶನ್ ಗೆ ಹುಟ್ಟು ಹಬ್ಬದ ಭರಪೂರ ಶುಭಾಶಯಗಳನ್ನ ಸಲ್ಲಿಸಿದ್ದಾರೆ. ಕುಟುಂಬದ ಸದಸ್ಯರು, ತಮ್ಮ ದಿನಾಕರ್ ತೂಗುದೀಪ, ಕಾಮಿಡಿ ಸ್ಟಾರ್ ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ರವಿಚೇತನ್, ತರುಣ್ ಸುಧೀರ್ ಇತರ ನಟರು ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

    ರಾಜ್ಯದ ಮೂಲೆ ಮೂಲೆಯಿಂದ ಸಾರಥಿಯ ಹುಟ್ಟುಹಬ್ಬವನ್ನ ಕಣ್ತುಂಬಿಕೊಳ್ಳಲು ಸಹಸ್ರೋಪಾದಿಯಾಗಿ ಅಭಿಮಾನಿಗಳು ಆಗಮಿಸಿದ್ದರು. ಕೇಕ್ ಕತ್ತರಿಸುವ ಮೂಲಕ ದರ್ಶನ್ ಹುಟ್ಟುಹಬ್ಬದ ಸಿಹಿಘಳಿಗೆಯನ್ನ ಝೇಂಕಾರದೊಂದಿಗೆ ಆಚರಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಗಳನ್ನ ಹಾಕಿ, ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.

    ಪ್ರತಿ ವರ್ಷದಂತೆ ಈ ವರ್ಷ ಕೂಡ ಅಭಿಮಾನಿಗಳು ಹಾಗೂ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನಿಜಕ್ಕೂ ವಿಶೇಷವಾಗಿದೆ. ಇದೇ ವೇಳೆ ಮಾತಾನಾಡಿ ದರ್ಶನ್, ಅಭಿಮಾನಿಗಳೇ ನನಗೆಲ್ಲಾ ಸ್ನೇಹಿತರು ದಿನಾ ಸಿಗುತ್ತಾರೆ. ಅಭಿಮಾನಿಗಳು ಇವತ್ತು ಮಾತ್ರ ಸಿಗುತ್ತಾರೆ. ಅವರಿಗೋಸ್ಕರ ಅವರ ಜೊತೆ ಇರುತ್ತೀನಿ. ನಾನಾ ಜಿಲ್ಲೆಗಳಿಂದ ಬಂದು ಶುಭ ಹಾರೈಸಲು ಬಂದಿರೋ ಅಭಿಮಾನಿಗಳಿಗೆ ನಾನು ಚಿರುಋಣಿಯಾಗಿರುತ್ತೀನಿ. ಯುವಕರಿಗೆ ನಾನಿಷ್ಟೇ ಹೇಳಲು ಬಯಸುತ್ತೇನೆ. ಅದೇನೆಂದ್ರೆ ಟೈಂ ಇಂಪಾರ್ಟೆಂಟ್.. ಟೈಂ ವೇಸ್ಟ್ ಮಾಡಬೇಡಿ.. ಎಂದು ಹೇಳಿ ಇನ್ನೂ ಒಳ್ಳೋಳ್ಳೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

  • ಮೆಸೆಂಜರ್ ನಿಂದಲೇ ಆವಾಜ್ ಹಾಕಿದ ರೌಡಿಶೀಟರ್!

    ಮೆಸೆಂಜರ್ ನಿಂದಲೇ ಆವಾಜ್ ಹಾಕಿದ ರೌಡಿಶೀಟರ್!

    ಬೆಂಗಳೂರು: ನಗರದ ಜೈಲಿನಲ್ಲಿ ಇತ್ತೀಚೆಗೆ ಗಾಂಜಾ, ಮೊಬೈಲ್ ಯಾವುದು ಇಲ್ಲ. ಅಷ್ಟರ ಮಟ್ಟಿಗೆ ಸ್ಟ್ರಿಕ್ಟ್ ಮಾಡಲಾಗಿದೆ. ಅದರ ನಡುವೆಯೂ ರೌಡಿಯೊಬ್ಬ ಫೇಸ್‍ಬುಕ್‍ನಿಂದಲೇ ಆವಾಜ್ ಹಾಕಿದ್ದಾನೆ

    ನಟೋರಿಯಸ್ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ ಎಂಬಾತ ಮೆಸೇಂಜರ್ ನಿಂದಲೇ ಆವಾಜ್ ಹಾಕಿದ್ದಾನೆ. 2016ರಲ್ಲಿ ಕೆಂಗೇರಿ ಉಪನಗರ ಬಳಿ ಮಾರ ಹನುಮ ಎಂಬಾತನನ್ನ ಕ್ವಾಲೀಸ್‍ನಲ್ಲಿ ಬರುವಾಗ ಕೊಚ್ಚಿ ಕೊಲ್ಲಲಾಗಿತ್ತು. ಕೇಸ್‍ನ ಪ್ರಮುಖ ಆರೋಪಿ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ, ಕಿರಣ್ ಅಲಿಯಾಸ್ ತಮಟೆ, ಸುನಿಲ್ ಅಲಿಯಾಸ್ ಸಿಲಿಂಡರ್ ಎಂಬವರು ಸೇರಿ 6 ಜನ ಜೈಲು ಸೇರಿದ್ರು. ಬೇಲ್ ಕೂಡ ಸಿಕ್ಕಿರಲಿಲ್ಲ.

    ಈ ಕೇಸ್‍ಗೆ ಮೃತ ಮಾರಹನುಮನ ಮಗ ವಿಜಯ್ ಕುಮಾರ್ ಪ್ರಮುಖ ಸಾಕ್ಷಿ. ಹೀಗಾಗಿ ಆತ ಏನಾದ್ರೂ ಸಾಕ್ಷಿ ಹೇಳಿಬಿಟ್ರೆ ಎಡವಟ್ಟಾಗುತ್ತೆ ಅಂತಾ ಜೈಲಿನಲ್ಲಿ ಇದ್ದುಕೊಂಡೇ ಶ್ರೀನಿವಾಸ ಒತ್ತಡ ಹಾಕ್ತಿದ್ದ. ಇಷ್ಟು ಸಾಲದು ಅಂತ ಪರಪ್ಪನ ಅಗ್ರಹಾರದಲ್ಲೇ ಕೂತು ಫೇಸ್‍ಬುಕ್ ಮೆಸೆಂಜರ್‍ನಿಂದ ಆಡಿಯೋ ಸೆಂಡ್ ಮಾಡಿ, ರಾಜಿ ಮಾಡ್ಕೋ ಅಂತ ಧಮ್ಕಿ ಹಾಕಿದ್ದಾನೆ. ಇದರಿಂದ ಬೆಚ್ಚಿರುವ ಮಾರಹನುಮ ಅವರ ಪುತ್ರ ವಿಜಯ್ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.

  • ಪಬ್ಲಿಕ್ ಟಿವಿಗೆ 6 ವರ್ಷ- ರಾಜ್ಯಾದ್ಯಂತ ಸಂಭ್ರಮಾಚರಣೆ

    ಪಬ್ಲಿಕ್ ಟಿವಿಗೆ 6 ವರ್ಷ- ರಾಜ್ಯಾದ್ಯಂತ ಸಂಭ್ರಮಾಚರಣೆ

    ಬೆಂಗಳೂರು: ಕನ್ನಡ ನಾಡಿನ ಜನತೆಯ ಮನೆಮಾತಾಗಿರುವ ಪಬ್ಲಿಕ್ ಟಿವಿ 6 ನೇ ವರ್ಷದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆದಿದೆ.

    ಪಬ್ಲಿಕ್ ಮ್ಯೂಸಿಕ್ ಸಹ ಯಶಸ್ಸಿನ ಪಯಣ ಕಾಣುತ್ತಿದ್ದು 4 ನೇ ವರ್ಷಕ್ಕೆ ಕಾಲಿರಿಸಿದ್ದು, ಈಗ ಪಬ್ಲಿಕ್ ಟಿವಿ ಜೊತೆ ಪಬ್ಲಿಕ್ ಮೂವಿಸ್ ಚಾನೆಲ್ ಸಹ ಲೋಕಾರ್ಪಣೆಗೊಂಡಿದೆ. ಆದ್ದರಿಂದ ನಾಡಿನೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆನೇಕಲ್, ಬೀದರ್, ವಿಜಯಪುರ ಮತ್ತು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡುತ್ತಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಕೇಕ್ ಕತ್ತರಿಸುವ ಮುಖಾಂತರ ಜನರಿಗೆ ಸಿಹಿ ಹಂಚಿ ಪಬ್ಲಿಕ್ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ಇದೇ ವೇಳೆ ಕರವೇ ಶಿವರಾಮೇಗೌಡ ಬಣದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಲೋಕೇಶ್ ಗೌಡ ಮಾತನಾಡಿ,  ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವಂತಹ ಹಾಗೂ ಬಡವರ ದನಿಯಾಗಿ ಸುದ್ದಿ ಪ್ರಸಾರ ಮಾಡುತ್ತಿರುವ ಪಬ್ಲಿಕ್ ಟಿವಿ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭಹಾರೈಸಿದರು.

    ಗಡಿ ಜಿಲ್ಲೆ ಬೀದರ್ ನಲ್ಲಿ ಕನ್ನಡ ವಿಜಯ ಸೇನೆಯ ಕಾರ್ಯಕರ್ತರು ತಡರಾತ್ರಿ ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ನಗರದ ಶಿವಾಜಿ ವೃತದ ಬಳಿ ತಡರಾತ್ರಿ ಕನ್ನಡ ಸೇನೆಯ ಕಾರ್ಯಕರ್ತರು ಸೇರಿ ಹಬ್ಬದ ರೀತಿಯಲ್ಲಿ ಪಬ್ಲಿಕ್ ಟಿವಿಯ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಖುಷಿ ಪಟ್ಟಿದ್ದಾರೆ. ತಡರಾತ್ರಿ ಬಂದ ಬೈಕ್ ಸವಾರರಿಗೂ ಕೇಕ್ ಹಂಚಿ, ಪಬ್ಲಿಕ್ ಟಿವಿಯ ಕಾರ್ಯಕ್ಕೆ ಜೈಗೋಷ ಹಾಕಿದ್ದಾರೆ. ಬೆಳಕು ಹಾಗೂ ಪಬ್ಲಿಕ್ ಹೀರೋಗಳಂತಹ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯನ್ನು ಮೆಚ್ಚಲೆಬೇಕು. ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಪಬ್ಲಿಕ್ ಟಿವಿಗೆ ಅಭಿನಂದನೆಗಳ ಸುರಿ ಮಳೆಯನ್ನು ಸುರಿಸಿದ್ರು.

    ಐತಿಹಾಸಿಕ ನಗರಿ ವಿಜಯಪುರದಲ್ಲಿ ಸಾರ್ವಜನಿಜರು ನಗರದ ಗಾಂಧಿ ವೃತದ ಬಳಿ ತಡರಾತ್ರಿ ಸಾರ್ವಜನಿಕರು, ಆಟೋ ಚಾಲಕರು, ಯುವಕರು ಸೇರಿದಂತೆ ಹಲವಾರು ಪಬ್ಲಿಕ್ ಟಿವಿ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಪಬ್ಲಿಕ್ ಟಿವಿಯ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಖುಷಿ ಪಟ್ಟಿದ್ದಾರೆ.

    ದಾವಣಗೆರೆಯಲ್ಲಿ ಲೋಕಿಕೆರೆ ನಾಗರಾಜ್ ಅಭಿಮಾನಿ ಬಳಗದಿಂದ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ನಗರದ ನಿಟ್ಟುವಳ್ಳಿಯಲ್ಲಿರುವ ಅಂಗವಿಕಲರ ಕೇಂದ್ರದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಪಬ್ಲಿಕ್ ಟಿವಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಅಂಗವಿಕಲ ಮಕ್ಕಳಿಗೆ ಸಿಹಿ ಹಂಚಿ ಪಬ್ಲಿಕ್ ಟಿವಿ ಇನ್ನು ನೂರು ವರ್ಷ ಹೀಗೆ ಸಾಗಲೀ. ಜನಪರವಾದ ಕೆಲಸ ಮಾಡುತ್ತ ಸಮಾಜದ ಓಳಿತಿಗಾಗಿ ಶ್ರಮಿಸುತ್ತಿರುವ ಪಬ್ಲಿಕ್ ಟಿವಿಗೆ ಹಾಗೂ ಸಂಸ್ಥೆಯ ಮುಖ್ಯಸ್ಥರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.

    ಪಬ್ಲಿಕ್ ಟಿವಿ ಮತ್ತೊಂದು ಕೂಸಾದ ಪಬ್ಲಿಕ್ ಮೂವೀಸ್ ಗು ಸಹ ಶುಭಾಶಯ ತಿಳಿಸಿದ್ದಾರೆ. ಜನಸಾಮಾನ್ಯರ ಧ್ವನಿಯಾಗಿರುವ ಪಬ್ಲಿಕ್ ಟಿವಿಯ, ಕೀರ್ತಿ ಉತ್ತುಂಗಕ್ಕೆ ಏರಲಿ, ಪಬ್ಲಿಕ್ ಟಿವಿಯ ಹಾಗೂ ನೂತನ ಚಾನಲ್ ಪಬ್ಲಿಕ್ ಮೂವೀಸ್‍ಗೆ ನೆಲಮಂಗಲದ ಜನತೆ ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಸ್ಟಾರ್ ನಿರ್ದೇಶಕನ ಸಿನಿಮಾಗೆ ನಾಯಕಿಯಾಗಿ ಬಿಗ್ ಬಾಸ್ ಸ್ಪರ್ಧಿ ಶೃತಿ, ಚಂದನ್ ಶೆಟ್ಟಿ ಸಂಗೀತ ಸಂಯೋಜಕ

    ಸ್ಟಾರ್ ನಿರ್ದೇಶಕನ ಸಿನಿಮಾಗೆ ನಾಯಕಿಯಾಗಿ ಬಿಗ್ ಬಾಸ್ ಸ್ಪರ್ಧಿ ಶೃತಿ, ಚಂದನ್ ಶೆಟ್ಟಿ ಸಂಗೀತ ಸಂಯೋಜಕ

    ಬೆಂಗಳೂರು: ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ಶ್ರುತಿ ಪ್ರಕಾಶ್ ಗೆ ಕಾರ್ಯಕ್ರಮ ಮುಗಿದ ಮೇಲೆ ಸಿನಿಮಾ ಮಾಡುವ ಅವಕಾಶ ಸಿಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಅದರಂತೆ ಈಗ ಶ್ರುತಿಗೆ ಸ್ಯಾಂಡಲ್ ವುಡ್ ನಿಂದ ಆಫರ್ ಗಳೇ ಹರಿದುಬರುತ್ತಿವೆ.

    ಇದುವರೆಗೂ ಯಾವ ಚಿತ್ರವನ್ನು ಒಪ್ಪಿಕೊಳ್ಳದ ಶ್ರುತಿ ಪ್ರಕಾಶ್, ಈಗ ಕನ್ನಡದ ಸ್ಟಾರ್ ನಿರ್ದೇಶಕರೊಬ್ಬರ ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳಗಾವಿ ಮೂಲದ ಶ್ರುತಿ ಪ್ರಕಾಶ್ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಗಾಯಕಿಯಾಗಿರುವ ಶ್ರುತಿ, ಅಭಿನಯದಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲದೇ ಶೃತಿ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ.

    ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಮಾಡಲಿರುವ ಮುಂದಿನ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಲಿದ್ದಾರೆ. ಈ ಬಗ್ಗೆ ಈಗಾಗಲೇ ಕಲಾ ಸಾಮ್ರಾಟ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುವುದರ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಅಂತಿಮ ನಿರ್ಧಾರ ಇನ್ನಷ್ಟೆ ಹೊರಬೀಳಬೇಕಿದೆ.

    ಎಸ್ ನಾರಾಯಣ್ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೆ ತಮ್ಮ ಮಗ ಪಂಕಜ್ ನಾಯಕನಾಗಿದ್ದು, ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದಾರೆ. ಸಿನಿಮಾ ಆರಂಭ ಮಾಡುವ ತಯಾರಿಯಲ್ಲಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷ ಅಂದರೆ ಬಿಗ್ ಬಾಸ್ ಕನ್ನಡ 5 ವಿನ್ನರ್ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ. ಹಲವು ವಿಶೇಷತೆಗಳೊಂದಿಗೆ ಆರಂಭವಾಗಲಿರುವ ಈ ಚಿತ್ರದ ಬಗ್ಗೆ ಅಧಿಕೃತವಾಗಿ ಬಹಿರಂಗವಾಗಬೇಕಿದೆ.

  • ವಾಹನವನ್ನ ಹಿಂದಿಕ್ಕಲು ಹೋಗಿ ಕೆರೆಗೆ ಉರುಳಿದ ಟ್ರ್ಯಾಕ್ಟರ್- ಚಾಲಕ ಸಾವು

    ವಾಹನವನ್ನ ಹಿಂದಿಕ್ಕಲು ಹೋಗಿ ಕೆರೆಗೆ ಉರುಳಿದ ಟ್ರ್ಯಾಕ್ಟರ್- ಚಾಲಕ ಸಾವು

    ಬೆಂಗಳೂರು: ವಾಹನವನ್ನು ಹಿಂದಿಕ್ಕಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಕೆರೆಗೆ ಉರುಳಿದ ಘಟನೆ ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹೊರಮಾವು ಅಗರ ಕೆರೆಯಲ್ಲಿ ನಡೆದಿದೆ.

    ಟ್ರ್ಯಾಕ್ಟರ್ ಚಾಲಕ ಕೊಪ್ಪಳ ಮೂಲದ ಕಲ್ಲೇಶ್(31) ಮೃತ ದುರ್ದೈವಿ. ಈ ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಬಂಡೆಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸುಮಾರು 1:15 ರ ವೇಳೆ ಈ ಅವಘಡ ಸಂಭವಿಸಿದೆ.

    ಘಟನೆ ಬಗ್ಗೆ ಮಾಹಿತಿ ತಿಳಿದ ಬಾಣಸವಾಡಿ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಮೂಲಕ ಟ್ರ್ಯಾಕ್ಟರ್ ಮೇಲೆತ್ತಿದ್ದಾರೆ. ಈ ಅಪಘಾತದಿಂದಾಗಿ ಹೊರಮಾವು ಅಗರ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

  • ಸಂತರ ಕೆಲ್ಸ ಸಂತರು ಮಾಡ್ಬೇಕು, ಸರ್ಕಾರದ ಕೆಲ್ಸ ಸರ್ಕಾರ ಮಾಡ್ಬೇಕು, ಮಠ ವಶಕ್ಕೆ ಪಡೆಯೋ ದುಸ್ಸಾಹಸ ಬೇಡ- ನಿರ್ಮಲಾನಂದ ಸ್ವಾಮೀಜಿ

    ಸಂತರ ಕೆಲ್ಸ ಸಂತರು ಮಾಡ್ಬೇಕು, ಸರ್ಕಾರದ ಕೆಲ್ಸ ಸರ್ಕಾರ ಮಾಡ್ಬೇಕು, ಮಠ ವಶಕ್ಕೆ ಪಡೆಯೋ ದುಸ್ಸಾಹಸ ಬೇಡ- ನಿರ್ಮಲಾನಂದ ಸ್ವಾಮೀಜಿ

    ಬೆಂಗಳೂರು: ಮಠ ಮಾನ್ಯಗಳ ಸುಪರ್ದಿಗೆ ಸರ್ಕಾರದ ಸುತ್ತೋಲೆ ವಿಚಾರವಾಗಿ ಸರ್ಕಾರದ ನಡೆಯ ವಿರುದ್ಧ ಆದಿಚುಂಚನಗಿರಿಯ ನಿರ್ಮಾಲಾನಂದನಾಥ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುತ್ತೋಲೆಯನ್ನು ವಾಪಸ್ ಪಡೆದಿರುವ ಬಗ್ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬಹುಶಃ ಸಾರ್ವಜನಿಕರಲ್ಲಿ ಎದ್ದಿದ್ದ ಗೊಂದಲ, ಆತಂಕ ನಿವಾರಣೆಯಾಗಿದೆ. ಈ ರೀತಿಯ ಪ್ರಯತ್ನವನ್ನು ಯಾವ ಕಾಲಕ್ಕೂ ಮಾಡಬಾರದು ಎಂದರು.

    ಸಂತರು ಮಾಡುವ ಕೆಲಸವೇ ಬೇರೆ. ಸರ್ಕಾರ ಮಾಡುವ ಕೆಲಸವೇ ಬೇರೆ. ಆ ದೃಷ್ಟಿಯಿಂದ ಸಂಸ್ಕತಿಯನ್ನ, ಆಧ್ಯತ್ಮವನ್ನು, ಅರಿವನ್ನ ಮತ್ತು ತಿಳಿವಳಿಕೆಯನ್ನು ಕೊಡಲು ಹೊರಟ್ಟಿದ್ದ ಮಠಗಳ ಕೆಲಸವನ್ನು ಸ್ವತಂತ್ರವಾಗಿ ಮಾಡಲು ಬಿಡಬೇಕು. ಮುಂದೆ ಇಂತಹ ದುಸ್ಸಾಸಹಕ್ಕೆ ಕೈ ಹಾಕಬಾರದು. ಈಗಾಗಲೇ ಸಿದ್ದರಾಮಯ್ಯ ಅವರ ಈ ವಿಚಾರದ ಬಗ್ಗೆ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದ್ದರಿಂದ ಈ ವಿವಾದ ಮುಗಿದಿದೆ ಎಂದು ನಿರ್ಮಲಾನಂದ ಸ್ವಾಮೀಜಿ ಹೇಳಿದ್ರು.

    ಗುರುವಾರದಂದು ಪರಿಷತ್ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಮಠ, ಮಾನ್ಯಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ಈ ಕೂಡಲೇ ಹಿಂದೆ ಪಡೆಯುವುದಾಗಿ ಹೇಳಿದರು. ಹೈಕೋರ್ಟ್ ವಿಭಾಗಿಯ ಪೀಠದ ಆದೇಶದಂತೆ ಸಮಿತಿ ರಚನೆ ಮಾಡಿ ಸಾರ್ವಜನಿಕರ ಅಭಿಪ್ರಾಯಕ್ಕೆ ಸರ್ಕಾರ ಮುಂದಾಗಿತ್ತು. ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಬೇರೆಯವರ ಉಸಾಬರಿ ನಮಗೆ ಯಾಕೆ ಎಂದು ಪ್ರಶ್ನಿಸಿದರು.

    ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮಾತನಾಡಿ, ಇದು ತುಘಲಕ್ ಸರ್ಕಾರದ ರೀತಿ ನಡೆದುಕೊಳ್ಳುತ್ತಿದೆ. ಹಿಂದೂಗಳನ್ನ ಪದೇ ಪದೇ ಟಾರ್ಗೆಟ್ ಮಾಡುತ್ತಿದೆ. ಈ ಆದೇಶದಿಂದ ಮಠಾಧೀಶರಿಗೆ ಆಘಾತವಾಗಿದ್ದು ಸರ್ಕಾರ ಕೂಡಲೇ ಆದೇಶ ಹಿಂಪಡೆದು ಮಠಾಧೀಶರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನು ಓದಿ:  ಮಠಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವಿರೋಧ

    ಇದು ತುಘಲಕ್ ಪಕ್ಷ ಎಂದು ಈಶ್ವರಪ್ಪ ಟೀಕಿಸಿದಾಗ 2007ರ ಮಾರ್ಚ್ 1 ರಂದು ರಾಮಾಜೋಯಿಸ್ ಅಧ್ಯಕ್ಷತೆಯ ಸಮಿತಿ ಇದೇ ರೀತಿ ಆದೇಶ ಮಾಡಿತ್ತು ಎಂದು ಸಿಎಂ ಉತ್ತರಿಸಿದರು. ಇದಕ್ಕೆ ಈಶ್ವರಪ್ಪ ಅಂದು ಸಮಿತಿ ಆದೇಶ ಮಾಡಿತ್ತು, ಇಂದು ಸರ್ಕಾರವೇ ಆದೇಶ ಮಾಡಿದೆ ಎಂದು ತಿರುಗೇಟು ನೀಡಿದರು. ಇದನ್ನು ಓದಿ: ಯಾವುದೇ ಮಠಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ: ಸಿಎಂ