Tag: Bangalore

  • ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಬೆಂಂಗಳೂರು: ಮಕ್ಕಳು ಬ್ಯಾಗ್ ಯೂನಿಫಾರ್ಮ್ ಹಾಕ್ಕೊಂಡು ಸ್ಕೂಲಿಗೆ ಹೋಗುವಾಗ ಪೋಷಕರು ನೂರು ಕನಸು ಗರಿಗೆದರುತ್ತದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಭವಿಷ್ಯ ಮಾದಕ ವ್ಯಸನದೊಳಗೆ ಬಂಧಿಯಾಗುತ್ತಿದೆ. ಶಾಲಾ ಮಕ್ಕಳನ್ನೇ ಈ ಕೆಟ್ಟ ಜಾಲ ಟಾರ್ಗೆಟ್ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯೇ ಭಯಾನಕ ಸತ್ಯವನ್ನು ಹೊರಹಾಕಿದೆ.

    ಪಾನಿಪುರಿಯಲ್ಲಿ ಡ್ರಗ್ಸ್ ಹಾಕಿಕೊಡಲಾಗುತ್ತಿದೆ. ಬೆಂಗಳೂರು ಡ್ರಗ್ಸ್ ಜಾಲದ ಸಿಟಿಯಾಗಿದೆ ಎಂದು ಶಾಸಕ ವಿಜಯ್ ಕುಮಾರ್ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದಾಗ ಇದು ಸಾಧ್ಯನೇ ಇಲ್ಲ ಎಂದು ಹೇಳಿದ್ದರು. ಆದರೆ ಇದು ನಿಜ ಅಂತಾ ಆರೋಗ್ಯ ಇಲಾಖೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.

    ಶಾಲೆಯ ಅಕ್ಕಪಕ್ಕದಲ್ಲಿ ಪಾನಿಪುರಿಯೊಳಗೆ, ಐಸ್ ಕ್ರೀಂನಲ್ಲಿಯೇ ಮಕ್ಕಳಿಗೆ ಡ್ರಗ್ಸ್ ರುಚಿ ತೋರಿಸುವ ಜಾಲ ಬೆಳೆದಿದೆ. ಈ ಜಾಲದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಆದ್ದರಿಂದ ಈಗಾಗಲೇ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕೊಟ್ಟಿದ್ದು, ಶಾಲೆಯ ನೂರು ಮೀಟರ್ ಅಂತರದಲ್ಲಿರುವ ಅನುಮಾನಸ್ಪದ ಶಾಪ್, ಐಸ್‍ಕ್ರೀಂ ಪಾನೀಪುರಿ ಅಂಗಡಿಗಳ ಮೇಲೆ ಕಣ್ಣಿಡುವಂತೆ ಆದೇಶಿಸಿಲಾಗಿದೆ. ಅಲ್ಲದೇ ಪೋಷಕರಿಗೂ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಜಂಟಿ ಆಯುಕ್ತ ಹರ್ಷವರ್ಧನ್ ಹೇಳಿದ್ದಾರೆ.

    ಮಕ್ಕಳ ಬದುಕು ಕಸಿದುಕೊಳ್ಳುವ ಈ ಜಾಲದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಇದ್ದರೆ ದೂರು ನೀಡುವಂತೆ ಆಹಾರ ಸುರಕ್ಷತಾ ಇಲಾಖೆ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಸುರಕ್ಷತಾ ವಿಭಾಗ ತನಿಖಾಧಿಕಾರಿಗಳ ತಂಡ ರಚನೆ ಮಾಡಿಕೊಂಡು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿವೆ.

  • ಬೆಂಗಳೂರು ವಿಶ್ವದಲ್ಲೇ ಅಗ್ಗದ ನಗರಿ!

    ಬೆಂಗಳೂರು ವಿಶ್ವದಲ್ಲೇ ಅಗ್ಗದ ನಗರಿ!

    ಬೆಂಗಳೂರು: ವಿಶ್ವದ ಟಾಪ್ 10 ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 5ನೇ ಸ್ಥಾನ ಸಿಕ್ಕಿದೆ.

    ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್, ಕಾಸ್ಟ್ ಆಫ್ ಲಿವಿಂಗ್ ಇಂಡೆಕ್ಸ್ -2018ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಂಗಳೂರು ವಿಶ್ವದ 5ನೇ ಅಗ್ಗದ ನಗರವೆಂದು ತಿಳಿಸಿದೆ.

    ಪಟ್ಟಿಯಲ್ಲಿ ಚೆನ್ನೈ 8ನೇ ಸ್ಥಾನವನ್ನು ಪಡೆದುಕೊಂಡಿದ್ದು, ನವದೆಹಲಿಗೆ 10ನೇ ಸ್ಥಾನ ಸಿಕ್ಕಿದೆ. ಈ ಪಟ್ಟಿಯಲ್ಲಿ ಏಷ್ಯಾ, ವಿಶೇಷವಾಗಿ ಭಾರತ ಹಾಗೂ ಪಾಕಿಸ್ತಾನದ ನಗರಗಳು ಹಣ ಮತ್ತು ಸಾಂಪ್ರದಾಯಿಕವಾದ ಉತ್ತಮ ಮೌಲ್ಯವನ್ನು ಒದಗಿಸುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

    ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಸಿಂಗಾಪುರ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಫ್ರಾನ್ಸ್ ನ ಪ್ಯಾರಿಸ್ ನಗರ ಪಡೆದುಕೊಂಡಿದೆ. ಸ್ವಿಜರ್ಲ್ಯಾಂಡ್‍ನ ಜ್ಯುರಿಚ್, ಹಾಂಕಾಂಗ್, ನಾರ್ವೆಯ ಓಸ್ಲೋ ಕ್ರಮವಾಗಿ ಮೂರು, ನಾಲ್ಕು, ಐದನೇ ಸ್ಥಾನವನ್ನು ಪಡೆದುಕೊಂಡಿದೆ.

    ವಿಶ್ವದ ಅಗ್ಗದ ನಗರಗಳ ಪೈಕಿ ಮೊದಲ ಸ್ಥಾನದಲ್ಲಿ ಸಿರಿಯಾದ ಡಮಾಸ್ಕಸ್, ವೆನಿಜುವೆಲಾದ ಕ್ಯಾರಕಸ್‍ಗೆ ಎರಡನೇ ಸ್ಥಾನ ಸಿಕ್ಕಿದೆ. ಕಜಕಿಸ್ತಾನದ ಅಲ್ಮಾಟಿ, ನೈಜೀರಿಯಾ ಲಾಗೋಸ್‍ಗೆ ಮೂರು ಮತ್ತು ನಾಲ್ಕನೇಯ ಸ್ಥಾನ ಸಿಕ್ಕಿದೆ.

  • ರಚಿತಾ ರಾಮ್ ಜೊತೆ ಲಿಪ್ ಲಾಕ್ ಮಾಡಬೇಕೆಂದ ಸ್ಯಾಂಡಲ್‍ ವುಡ್ ನಟ

    ರಚಿತಾ ರಾಮ್ ಜೊತೆ ಲಿಪ್ ಲಾಕ್ ಮಾಡಬೇಕೆಂದ ಸ್ಯಾಂಡಲ್‍ ವುಡ್ ನಟ

    ಬೆಂಗಳೂರು: ಸಿನಿಮಾ ಅಂದಮೇಲೆ ಕಿಸ್ಸಿಂಗ್ ದೃಶ್ಯಗಳು ಸಾಮಾನ್ಯ. ಹಾಗೇ ಗುಳಿಕೆನ್ನೆ ಬೆಡಗಿ ನಟಿ ರಚಿತಾ ರಾಮ್ ಜೊತೆ ಲಿಪ್‍ಲಾಕ್ ಮಾಡುತ್ತೀನಿ ಎಂದು ಸ್ಯಾಂಡಲ್ ವುಡ್ ನಟರೊಬ್ಬರು ಹೇಳಿದ್ದಾರೆ.

    ರಚಿತಾ ರಾಮ್ ಸ್ಯಾಂಡಲ್‍ ವುಡ್‍ನ ಟಾಪ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡು ಯಶಸ್ವಿಯಾಗಿದ್ದಾರೆ. ಈಗ ಇವರಿಗೆ ಥೇಟರ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ `ಟಗರು’ ಸಿನಿಮಾದ ಡಾಲಿ ಅಲಿಯಾಸ್ ಧನಂಜಯ್ ಅವರು ಲಿಪ್ ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ‘ನಂ 1 ಯಾರಿ’ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ‘ಟಗರು’ ಸಿನಿಮಾದಲ್ಲಿ ನಟಿಸಿದ್ದ ಧನಂಜಯ್, ವಸಿಷ್ಠ ಮತ್ತು ಮಾನ್ವಿತಾ ಹರೀಶ್ ಬಂದಿದ್ದರು. ಈ ವೇಳೆ ಟಗರು ಶಿವ ಶಿವರಾಜ್ ಕುಮಾರ್ ಕೇಳಿರುವ ತರ್ಲೆ ಪ್ರಶ್ನೆಗಳಿಗೆ ಡಾಲಿ, ಚಿಟ್ಟೆ ಉತ್ತರ ನೀಡಿದ್ದಾರೆ. ಅದರಲ್ಲಿಯೂ ಲಿಪ್ ಲಾಕ್ ದೃಶ್ಯದ ಬಗ್ಗೆ ಧನಂಜಯ್ ಯಾವುದೇ ಮುಜುಗರ, ಸಂಕೋಚ ಇಲ್ಲದೆ ಮಾತನಾಡಿದ್ದಾರೆ.

    ಕಾರ್ಯಕ್ರಮದ ಕೊನೆಯ ಸುತ್ತಿನಲ್ಲಿ ಶಿವಣ್ಣ `ಆನ್ ಸ್ಕ್ರೀನ್ ನಲ್ಲಿ ನಿಮಗೆ ಯಾರ ಜೊತೆಗೆ ಲಿಪ್ ಲಾಕ್ ಮಾಡಬೇಕು ಅಂತ ಆಸೆ ಇದೆ?’ ಎಂದು ಧನಂಜಯ್ ಗೆ ಪ್ರಶ್ನೆ ಕೇಳಿದ್ದಾರೆ. ಆಗ ಧನಂಜಯ್ ದೀಪಿಕಾ ಪಡುಕೋಣೆ ಎಂದು ಹೇಳಿದ್ದರು. ಮತ್ತೆ ಶಿವಣ್ಣ ‘ಓಕೆ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಆದರೆ ಕನ್ನಡದಲ್ಲಿ ಯಾರು?” ಎಂದು ಕೇಳಿದರು. ಆಗ ಧನಂಜಯ್ ರಚಿತಾ ರಾಮ್ ಅವರ ಹೆಸರನ್ನು ಹೇಳಿದ್ದಾರೆ.

  • ಮನೆಯಲ್ಲಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆ – ದತ್ತು ಮಗಳೇ ಮೃತ್ಯುವಾದ್ಳಾ!

    ಮನೆಯಲ್ಲಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆ – ದತ್ತು ಮಗಳೇ ಮೃತ್ಯುವಾದ್ಳಾ!

    ಬೆಂಗಳೂರು: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಚಾಮರಾಜಪೇಟೆಯ ಐದನೇ ಮುಖ್ಯರಸ್ತೆಯಲ್ಲಿ ನಡೆದಿದೆ.

    50 ವರ್ಷದ ವಿಜಯಮ್ಮ ಕೊಲೆಯಾದ ಮಹಿಳೆ. ವಿಜಯ ದಂಪತಿಗೆ ಮಕ್ಕಳಿಲ್ಲದ ಕಾರಣ ಯುವತಿಯನ್ನ ದತ್ತು ಪಡೆದು ಸಾಕಿಕೊಂಡಿದ್ದರು.  ಸಾಕು ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಒಂದು ವಾರದ ಹಿಂದೆ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದಳು. ಈ ವಿಚಾರದಲ್ಲಿ ಮೃತ ವಿಜಯಮ್ಮ ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

    ಮದುವೆ ಆದ ಬಳಿಕ ಮಗಳು ತಾಯಿ ವಿಜಯಳಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳೆಂದು ತಿಳಿದು ಬಂದಿದೆ. ಆದರೆ ಮದುವೆ ಬಳಿಕ ಮಗಳು ಅಳಿಯ ಇಬ್ಬರು ವಿಜಯಮ್ಮನ ಮನೆಯಲ್ಲಿ ಇದ್ದರು. ಹೀಗಾಗಿ ದತ್ತು ಮಗಳು ಮತ್ತು ಅಳಿಯನ ಮೇಲೆ ಅನುಮಾನಗಳು ವ್ಯಕ್ತವಾಗಿದ್ದು, ದತ್ತು ಮಗಳೇ ತಾಯಿಯನ್ನ ಕೊಂದಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ.

    ಈ ಘಟನೆ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಡಾಗ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಪೊಲೀಸರು ದತ್ತು ಮಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

  • ನಿರ್ಭಯಾ ತಾಯಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಾಂಗ್ಲಿಯಾನ

    ನಿರ್ಭಯಾ ತಾಯಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಾಂಗ್ಲಿಯಾನ

    ಬೆಂಗಳೂರು: ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವ ಭರದಲ್ಲಿ ತಾಯಿ ದೇಹವನ್ನ ಉದಾಹರಣೆ ನೀಡಿ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನರ ಹೇಳಿಕೆ ಇದೀಗ ವಿವಾದ ಎಬ್ಬಿಸಿದೆ.

    ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ನಿರ್ಭಯ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಂಗ್ಲಿಯಾನ, ನಿರ್ಭಯಾ ತಾಯಿಯ ಫಿಸಿಕ್ ನೋಡಿದ್ರೇ ನಿರ್ಭಯ ಸೌಂದರ್ಯ ಹೇಗಿರಬಹುದು ಅನ್ನೋದು ನನ್ನ ಕಣ್ಣ ಮುಂದೆ ಬಂತು ಅನ್ನೊ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ವೇದಿಕೆ ಮೇಲೆ ಈ ಪದ ಬಳಕೆ ಮಾಡಿದಾಗಲೇ ಕಾರ್ಯಕ್ರಮದಲ್ಲಿ ವಿರೋದ ವ್ಯಕ್ತವಾಗಿದೆ. ನಿರ್ಭಯಾ ಪ್ರಶಸ್ತಿ ಸ್ವೀಕರಿಸಲು ಬಂದ ಹಲವು ಮಹಿಳೆಯರು ಪ್ರಶಸ್ತಿಯನ್ನ ಸ್ವೀಕರಿಸದೇ ಹೊರ ನಡೆದಿದ್ರು. ನಿರ್ಭಯಾ ಪ್ರಕರಣ ಇಡೀ ಭಾರತ ಮಾತ್ರವಲ್ಲ ವಿಶ್ವದಲ್ಲೇ ಹೆಣ್ಣಿನ ರಕ್ಷಣೆಯ ಬಗ್ಗೆ ಪ್ರಶ್ನೆ ಎತ್ತಿತ್ತು. ವೇದಿಕೆ ಮೇಲೆ ನಿರ್ಭಯಾ ತಾಯಿ ಇದ್ದಾಗಲೇ ಸಾಂಗ್ಲಿಯಾನ ಈ ರೀತಿ ಮಾತನಾಡಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

    ನಿರ್ಭಯಾ ಪ್ರಕರಣ ನಡೆದು ಹಲವು ವರ್ಷಗಳಾಗಿದ್ರೂ, ಅದೇ ಹೆಸರಿನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆಯ ಡಿಐಜಿ ರೂಪ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಸಹ ಭಾಗವಹಿಸಿದ್ರು. ಇತ್ತ ಸಾಂಗ್ಲಿಯಾನಾರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯುಟಿಸಿ ಮತ್ತು ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಸೇಶನ್ ಅನ್ನೊ ಎನ್ ಜಿಒ ಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆದಿತ್ತು.

  • ನಟ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ- ವಿಷಯ ತಿಳಿದ ಕಿಚ್ಚ ಹೀಗಂದ್ರು

    ನಟ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ- ವಿಷಯ ತಿಳಿದ ಕಿಚ್ಚ ಹೀಗಂದ್ರು

    ಬೆಂಗಳೂರು: ನಾನು ಅಭಿಮಾನಿಗಳ ಅಭಿಮಾನಿ ಎನ್ನುವ ಮಾತನ್ನ ನಟ ಕಿಚ್ಚ ಸುದೀಪ್ ಹೇಳಿದ್ದರು. ಆದರೆ ಸ್ಟಾರ್ ನಟರಿಗೆ ಕೆಲವೊಮ್ಮೆ ಅಭಿಮಾನಿಗಳನ್ನ ನಿಭಾಯಿಸುವುದೇ ತಲೆನೋವಾಗಿ ಪರಿಣಮಿಸಿಬಿಡುತ್ತದೆ. ಸದ್ಯಕ್ಕೆ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಯೊಬ್ಬರ ಅತಿರೇಕದ ನಡವಳಿಕೆ ತಲೆನೋವಾಗಿದೆ.

    ನಟ ಕಿಚ್ಚನಿಗಾಗಿ ಉಪವಾಸ ಮಾಡುತ್ತೇನೆ ಎಂದು ಅಭಿಮಾನಿಯೊಬ್ಬರು ನಿರ್ಧಾರ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸುದೀಪ್ ಅವರನ್ನ ಭೇಟಿ ಮಾಡಬೇಕು ಎನ್ನುವ ಉದ್ದೇಶದಿಂದ ಉಪವಾಸ ಮಾಡಲು ಮುಂದಾಗಿದ್ದಾರೆ. ಉಪವಾಸದ ಉದ್ದೇಶ ಕಿಚ್ಚನನ್ನು ಭೇಟಿಯಾಗುವುದು.

    ಸುದೀಪ್ ಅಭಿಮಾನಿಯಾದ ಕನಕಪುರ ಬಳಿಯ ಸಾತನೂರಿನ ನಾಗಸೊಂಡೆ ಗ್ರಾಮದ ನಿವಾಸಿ ಕಿಚ್ಚ ಶಿವು ಉಪವಾಸ ಮಾಡುತ್ತೇನೆ ಎಂದು ಮುಂದಾಗಿದ್ದಾರೆ. ಸುದೀಪ್ ಅವರನ್ನ ನೋಡಬೇಕು ಎಂದು ಈ ರೀತಿ ಮಾಡುತ್ತಿದ್ದಾನೆ ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

    ಸುದೀಪ್ ಗಾಗಿ ಉಪವಾಸ ಮಾಡುತ್ತೇನೆ ಎಂದು ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಇತರೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರನ್ನು ಭೇಟಿ ಮಾಡಲು ಸಾವಿರ ದಾರಿಯಿದೆ. ಅದನ್ನ ಬಿಟ್ಟು ಈ ರೀತಿ ಮಾಡುವುದು ತಪ್ಪು ಎಂದಿದ್ದಾರೆ.

    ತಮಗಾಗಿ ಉಪವಾಸ ಕುಳಿತಿದ್ದ ಅಭಿಮಾನಿಯ ವಿಚಾರ ತಿಳಿದ ನಟ ಸುದೀಪ್ “ನೀವು ಚೆನ್ನಾಗಿದ್ದರೆ ನನಗೆ ಖುಷಿ. ಉಪವಾಸ ಮಾಡಿ ನನಗೆ ನೋವು ಕೊಡಬೇಡಿ. ಭೇಟಿ ಮಾಡಲು ಬೇಕಾಗಿರುವುದು ಸಮಯ, ಪ್ರೀತಿ ಹಾಗೂ ತಾಳ್ಮೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಚಿರಋಣಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ಹೆಬ್ಬುಲಿ ಸಿನಿಮಾ ಬಿಡುಗಡೆ ಆದ ನಂತರ ಸುದೀಪ್, ಅಭಿಮಾನಿಗಳಿಗೆ ಧನ್ಯವಾದ ಹೇಳಲು ಕೆಲ ಊರಿಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ನಮ್ಮ ಊರಿಗೆ ಬರಲಿಲ್ಲ ಎನ್ನುವ ಉದ್ದೇಶದಿಂದ ಅಭಿಮಾನಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಸಾಯಲು ಮುಂದಾಗಿದ್ದರು. ಆಗ ಕಿಚ್ಚ ಅವರನ್ನ ಮನೆ ಬಳಿ ಕರೆಸಿಕೊಂಡು ಬುದ್ಧಿವಾದ ಹೇಳಿದ್ದರು.

  • 61 ವರ್ಷದ ಹಳೆಯ ಸೀರೆ ತೊಟ್ಟು ಪ್ರಶಸ್ತಿ ಸ್ವೀಕರಿಸಿದ ರಶ್ಮಿಕಾ- ಸೀರೆಯ ರಹಸ್ಯ ಬಿಚ್ಚಿಟ್ಟ ಸಾನ್ವಿ

    61 ವರ್ಷದ ಹಳೆಯ ಸೀರೆ ತೊಟ್ಟು ಪ್ರಶಸ್ತಿ ಸ್ವೀಕರಿಸಿದ ರಶ್ಮಿಕಾ- ಸೀರೆಯ ರಹಸ್ಯ ಬಿಚ್ಚಿಟ್ಟ ಸಾನ್ವಿ

    ಬೆಂಗಳೂರು: `ಕಿರಿಕ್ ಪಾರ್ಟಿ’ ಚೆಲುವೆ, ‘ಅಂಜನಿಪುತ್ರ’ನ ರಾಣಿ, ರಶ್ಮಿಕಾ ಮಂದಣ್ಣ ಅವರಿಗೆ ಜೀ ವಾಹಿನಿಯ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಒಲಿದಿದೆ. ಕಾರ್ಯಕ್ರಮದಲ್ಲಿ 61 ವರ್ಷಗಳಷ್ಟು ಹಳೆಯದಾದ ಸೀರೆಯನ್ನು ತೊಟ್ಟು ರಶ್ಮಿಕಾ ಪಾಲ್ಗೊಂಡಿದ್ದು, ತಮ್ಮ ಸೀರೆಯ ಮೂಲಕ ಎಲ್ಲರ ಗಮನವನ್ನ ಸೆಳೆದಿದ್ದಾರೆ.

    ಕೂರ್ಗಿ ಸ್ಟೈಲ್‍ನಲ್ಲಿ ರಶ್ಮಿಕಾ ಮಂದಣ್ಣ ಸೀರೆ ಧರಿಸಿದ್ದು, ಮೆರೂನ್ ಬಣ್ಣದ ಸೀರೆಗೆ ಗ್ರೀನ್ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು. ರಶ್ಮಿಕಾ ಧರಿಸಿದ್ದ ಸೀರೆಯ ಹಿಂದೆ ಒಂದು ಇತಿಹಾಸ ಕೂಡ ಇದೆ.

    ಈ ಸೀರೆಯನ್ನು ರಶ್ಮಿಕಾ ಅಜ್ಜಿ ಅವರ ಮದುವೆಯಲ್ಲಿ ಧರಿಸಿದ್ದರಂತೆ. ಅಜ್ಜಿ ಅದನ್ನು ರಶ್ಮಿಕಾ ಅವರ ತಾಯಿಗೆ ನೀಡಿದ್ದಾರೆ. ಈಗ ರಶ್ಮಿಕಾ ತಾಯಿ ಅದನ್ನು ರಶ್ಮಿಕಾ ಅವರಿಗೆ ನೀಡಿದ್ದಾರೆ. ರಶ್ಮಿಕಾ ಈ ಸೀರೆ ಧರಿಸುತ್ತಿರುವ ಮೂರನೇಯ ತಲೆಮಾರಿನವರು.

    ”ನಾನು ಬೆಳೆದದ್ದು ಅಜ್ಜಿ ಬಳಿಯೇ. ನಾನು ಜೀವನದಲ್ಲಿ ‘ಏನೋ ಒಂದು ಆಗುವೆ’ ಎಂದು ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಅವರು ನಮ್ಮನ್ನು ಬಿಟ್ಟು ಹೋದಾಗ ನನಗೆ ಕೋಪ ಬಂದಿತ್ತು. ನಾವರನ್ನು ಈಗಲೂ ತುಂಬಾ ಮಿಸ್ ಮಾಡುತ್ತಿರುವೆ. ಈಗ ಅಜ್ಜಿ ನನ್ನ ನೋಡಿ ಹೆಮ್ಮೆ ಪಡುತ್ತಿರಬಹುದು. ಆಕೆಯ ಸೀರೆ ಧರಿಸಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯಾಗಿದೆ. ನನಗೆ ಸಿಕ್ಕಿರುವುದು ನನ್ನ ಮುಂದಿನ ಪೀಳಿಗೆಗೂ ಹೋಗಬೇಕಾಗಿದೆ. ಆದ್ದರಿಂದ ಇದರ ಬಗ್ಗೆ ನನಗೆ ತುಂಬಾ ಸೆಂಟಿಮೆಂಟ್” ಎಂದು ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/Bf43-ZkF_Km/?taken-by=rashmika_mandanna

  • ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಯುವತಿಯನ್ನ ನೋಡಿ ಪ್ಯಾಂಟ್ ಬಿಚ್ಚಿ ಹಸ್ತ ಮೈಥುನ!

    ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಯುವತಿಯನ್ನ ನೋಡಿ ಪ್ಯಾಂಟ್ ಬಿಚ್ಚಿ ಹಸ್ತ ಮೈಥುನ!

    ಬೆಂಗಳೂರು: ಸಿಲಿಕಾನ್ ಸಿಟಿ ಯುವತಿಯರೇ ಎಚ್ಚರ ಎಚ್ಚರ..! ನಗರದಲ್ಲಿ ನಿಮ್ಮ ಬಳಿ ಅಸಭ್ಯವಾಗಿ ವರ್ತಿಸುವ ತಂಡ ಹುಟ್ಟಿಕೊಂಡಿದೆ. ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಯುವತಿಯನ್ನ ನೋಡಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಸ್ ಸ್ಟಾಪ್ ಬಳಿ ಶನಿವಾರ ಈ ಘಟನೆ ನಡೆದಿದ್ದು, ಕೆಎ-53ಸಿ1877 ನಂಬರಿನ ಕಾರಿನ ಚಾಲಕನಿಂದ ಈ  ಕೃತ್ಯ ನಡೆದಿದೆ. ಈ ಬಗ್ಗೆ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ.

    ಏನಿದು ಘಟನೆ?: ಶನಿವಾರ ಯುವತಿಯೊಬ್ಬರು ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ಬಸ್ ಸ್ಟಾಪ್ ಬಳಿ ನಿಂತಿದ್ದರು. ಆಗ ಕೆಎ-53 ಸಿ 1877 ನಂಬರಿನ ಕಾರಿನಲ್ಲಿ ಚಾಲಕನೊಬ್ಬ ಕುಳಿತಿದ್ದ. ಈ ವೇಳೆ ಕಾರಿನ ಚಾಲಕ ಯುವತಿಯನ್ನ ನೋಡಿಕೊಂಡು ಪ್ಯಾಂಟ್ ಬಿಚ್ಚಿ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಇದರಿಂದ ಭಯಗೊಂಡು ಯುವತಿ ಬೇರೆ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಆರೋಪಿ ಮಾತ್ರ ಅಲ್ಲಿಗೂ ಹೋಗಿ ಮತ್ತೆ ಹಸ್ತ ಮೈಥುನ ಮಾಡಿಕೊಂಡು ಮಾನಸಿಕ ಹಿಂಸೆ ನೀಡಿದ್ದಾನೆ. ಬಳಿಕ ಯುವತಿ ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಹೈ ಗ್ರೌಂಡ್ಸ್ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 294 ಮತ್ತು 509 ರಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಹ್ಯವಾಗಿ ವರ್ತಿಸಿದ ಕಾರಿನ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಶಿವಣ್ಣ ಕೇಳಿದ ಒಂದು ಪ್ರಶ್ನೆಗೆ ಕಣ್ಣೀರಿಟ್ಟ ತರುಣ್ ಸುಧೀರ್

    ಶಿವಣ್ಣ ಕೇಳಿದ ಒಂದು ಪ್ರಶ್ನೆಗೆ ಕಣ್ಣೀರಿಟ್ಟ ತರುಣ್ ಸುಧೀರ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ಹಿರಿಯ ಖಳ ನಟ ಅವರ ಸುಧೀರ್ ಮಗ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಕಣ್ಣೀರಿಟ್ಟಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಎರಡನೇ ಸಂಚಿಕೆ ಭಾನುವಾರ ಪ್ರಸಾರವಾಗಿದೆ. ಈ ಎರಡನೇ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದರು. ಶರಣ್, ಚಿಕ್ಕಣ್ಣ, ತರುಣ್ ಸುಧೀರ್ ಅವರ ಸಂಚಿಕೆ ತುಂಬ ನಗು ಇತ್ತು. ಆದರೆ ಕೊನೆಯ ಸುತ್ತಿನಲ್ಲಿ ಶಿವಣ್ಣನ ಒಂದು ಪ್ರಶ್ನೆಗೆ ಉತ್ತರಿಸುತ್ತ ತರುಣ್ ಸುಧೀರ್ ಕಣ್ಣೀರು ಹಾಕಿದ್ದಾರೆ.

    ಕಾರ್ಯಕ್ರಮದಲ್ಲಿ `ನಿಮ್ಮ ಜೀವನದ ದೊಡ್ಡ ಮಿಸ್ಟೇಕ್ ಏನು?’ ಎಂದು ಶಿವಣ್ಣ ಅತಿಥಿಯಾಗಿ ಬಂದಿದ್ದ ತರುಣ್ ಸುಧೀರ್‍ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ಆ ಪ್ರಶ್ನೆಗೆ ಉತ್ತರಿಸಲು ಶುರು ಮಾಡಿದ ತರುಣ್ ಭಾವುಕರಾಗಿ, “ನಮ್ಮ ತಂದೆ ಇರಬೇಕಾದರೆ ಅವರ ಬೆಲೆ ನಮಗೆ ಗೊತ್ತಿರಲಿಲ್ಲ” ಎಂದು ಹೇಳಿ ಮುಂದೆ ಏನು ಮಾತನಾಡಲಾಗದೆ ತಂದೆಯನ್ನು ನೆನೆದು ಕಣ್ಣೀರು ಹಾಕಿದರು.

    “ನಮಗೆ ಅವರು ತುಂಬ ಹತ್ತಿರ ಆದವರು. ನಾನು ಅವರ ಜೊತೆಗೆ ಸಿನಿಮಾ ಸಹ ಮಾಡಿದ್ದೇನೆ. ಅಪ್ಪಾಜಿಗೆ ಅವರು ಆಪ್ತರಾಗಿದ್ದರು. ಯಾವಾಗಲೂ ಊಟ ಮಾಡುವಾಗ ಅವರನ್ನು ಕರೆಯುತ್ತಿದ್ದರು. ಅವರು ಈಗ ಇದ್ದಿದ್ದರೆ ನಿಮ್ಮನ್ನು ನೋಡಿ ತುಂಬ ಖುಷಿ ಪಡುತ್ತಿದ್ದರು” ಎಂದು ತರುಣ್ ರನ್ನು ಶಿವಣ್ಣ ಸಮಾಧಾನ ಮಾಡಿದ್ದಾರೆ. ಈ ವೇಳೆ ಶಿವಣ್ಣ ನಮ್ಮ ಹುಡುಗಾಟದಲ್ಲಿ ಏನೋ ಮಾಡಿರುತ್ತೇವೆ. ನಮಗೂ ಹಾಗೆ ಆಗಿದೆ. ಆದರೆ ಬರುತ್ತಾ ಬುರತ್ತಾ ಅವರ ಬೆಲೆ ಗೊತ್ತಾಯಿತು ಎಂದು ಹೇಳಿ ತಮ್ಮ ತಂದೆ ರಾಜ್ ಕುಮಾರ್ ಅವರನ್ನು ನೆನೆದರು.

    “ನೀವು ಸಾಯುವುದಕ್ಕೂ ಮುಂಚೆ ಏನನ್ನು ಸಾಧಿಸಬೇಕು?” ಎಂದು ಶಿವಣ್ಣ ಮತ್ತೆ ಒಂದು ಪ್ರಶ್ನೆ ಕೇಳಿದ್ದಾರೆ. ಆಗ ತರುಣ್ ಸಿನಿಮಾ ಬಗ್ಗೆ ಅಲ್ಲ. ವೈಯಕ್ತಿಕವಾಗಿ ಅಂದರೆ ನನಗೆ ಒಂದೇ ಒಂದು ಆಸೆ ಇದೆ. ನಾನು ಇರುವಷ್ಟು ದಿನ ಯಾವುದೇ ಕಷ್ಟ ಆಗದಂತೆ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಖ್ಯಾತ ಖಳ ನಟ ಸುಧೀರ್ ಅವರ ಮಗನಾಗಿರುವ ತರುಣ್ ಸುಧೀರ್ ಇಂದು ಒಬ್ಬ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುಧೀರ್ ಅವರ ಇಬ್ಬರು ಮಕ್ಕಳಾದ ತರುಣ್ ಸುಧೀರ್ ಮತ್ತು ನಂದಕಿಶೋರ್ ಅಪ್ಪನ ಹೆಸರನ್ನು ಉಳಿಸಿದ್ದಾರೆ. ಆದರೆ ತಂದೆ ಇದ್ದಾಗ ಅವರ ಬೆಲೆ ನಮಗೆ ತಿಳಿಯಲಿಲ್ಲ ಎನ್ನುವ ನೋವು ತರುಣ್ ಅವರಿಗೆ ಇಂದಿಗೂ ಕಾಡುತ್ತಿದೆ.

  • ಅಪರಾಧ ಮುಕ್ತ ಸಮಾಜ ನಿರ್ಮಿಸಲು ರಾಕಿಂಗ್ ಸ್ಟಾರ್ ಯಶ್ ನಿರ್ಧಾರ

    ಅಪರಾಧ ಮುಕ್ತ ಸಮಾಜ ನಿರ್ಮಿಸಲು ರಾಕಿಂಗ್ ಸ್ಟಾರ್ ಯಶ್ ನಿರ್ಧಾರ

    ಬೆಂಗಳೂರು: ನಾವು ಜೀವನ ಮಾಡುವ ಸುತ್ತಮುತ್ತ ಉತ್ತಮ ಪರಿಸರ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಸಂದೇಶ ಸಾರಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಪ್ರೋ-ಕಬ್ಬಡ್ಡಿ ಜಾಹೀರಾತನ್ನು ಹೊರತುಪಡಿಸಿ ಈವರೆಗೆ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಈಗ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯ ರಾಯಭಾರಿ ಆಗುವ ಮೂಲಕ ಮೊಟ್ಟ ಮೊದಲ ಜಾಹೀರಾತಿನಲ್ಲಿ ಅಭಿನಯಿಸಲಿದ್ದು, ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಿಸಿಬಿಯ ರಾಯಭಾರಿ ಆಗಿ ಆಯ್ಕೆ ಮಾಡಲಾಗಿದೆ.


    ಈ ಹಿಂದೆ ಕಿಚ್ಚ ಸುದೀಪ್ ಸಿಸಿಬಿಯ ರಾಯಭಾರಿ ಆಗಿದ್ದರು. ಕಿಚ್ಚನ ನಂತರ ರಾಕಿಂಗ್ ಸ್ಟಾರ್ ಸಿಸಿಬಿಯ ರಾಯಭಾರಿ ಆಗಿದ್ದಾರೆ. ಸರ್ಕಾರದ ಸಾಕಷ್ಟು ಜಾಹೀರಾತುಗಳಲ್ಲಿ ಸಿನಿಮಾ ಹಾಗೂ ಕ್ರೀಡೆಯ ಗಣ್ಯರು ಭಾಗಿಯಾಗಿದ್ದಾರೆ.

    ಯುವ ಮನಸ್ಸುಗಳನ್ನು ಸೆಳೆಯಲು “ಬ್ರಾಂಡ್ ಅಂಬಾಸಿಡರ್’ ಬಳಕೆಗೆ ಮುಂದಾಗಿರುವ ಪೊಲೀಸ್ ಇಲಾಖೆ ಮಾದಕ ವಸ್ತು ಸೇವನೆ, ರೌಡಿ ಚಟುವಟಿಕೆಗಳು ಹಾಗೂ ಕಳ್ಳತನ ಸೇರಿದಂತೆ ಅಪರಾಧ ಚಟುವಟಿಕೆಗಳಿಂದ ಮುಕ್ತರಾಗುವಂತೆ ಸಂದೇಶ ಸಾರುವ ಜಾಹೀರಾತುಗಳಲ್ಲಿ ಯಶ್ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತಾಯುಷಿ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿದ ಯಶ್

    ಯಸ್ ಮೊದಲ ಬಾರಿಗೆ ಗೂಗ್ಲಿ ಸಿನಿಮಾದಲ್ಲಿ ಖಾಕಿ ತೊಟ್ಟು ಪೋಸ್ ಕೊಟ್ಟಿದ್ದರು. ಈ ಬಾರಿ ಸಿಸಿಬಿಯ ರಾಯಭಾರಿಯಾಗಿ ಅಪರಾಧಿಗಳಿಗೆ ಪಾಠ ಹೇಳಲು ನಿರ್ಧರಿಸಿದ್ದಾರೆ. ಸಾಕಷ್ಟು ವಿಚಾರಗಳಲ್ಲಿ ಅನೇಕರಿಗೆ ಮಾದರಿ ಆಗಿರುವ ಯಶ್ ಮತ್ತೊಂದು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ.