Tag: Bangalore

  • ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ನಂತ್ರ ಸುದೀಪ್ ಅವರದ್ದು ಅತ್ಯುತ್ತಮ ಧ್ವನಿ!

    ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ನಂತ್ರ ಸುದೀಪ್ ಅವರದ್ದು ಅತ್ಯುತ್ತಮ ಧ್ವನಿ!

    ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಕನ್ನಡದ ಕಿಚ್ಚ ಸುದೀಪ್ ಅವರ ಮಧ್ಯೆ ಕೆಲವೊಂದು ವಿಚಾರದಲ್ಲಿ ಸಾಮ್ಯತೆ ಇದೆ. ಹೈಟ್ ಅಂದ್ರೆ ಅಮಿತಾಬ್ ಬಚ್ಚನ್ ಎನ್ನುವ ಕಾಲವೊಂದಿತ್ತು. ಆದ್ರೆ ಈಗ ಅಮಿತಾಬ್ ಅವರಂತೆ ಅನೇಕ ನಟರು ಎತ್ತರವಾಗಿದ್ದಾರೆ. ಇವರಲ್ಲಿ ಸುದೀಪ್ ಕೂಡ ಒಬ್ಬರು.

    ಅಮಿತಾಬ್ ಅವರ ಕಂಠಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಬಹುಶಃ ಅವರ ರೀತಿಯ ಧ್ವನಿ ಯಾರಿಗೂ ಇಲ್ಲ. ಆದರೆ ಅವರ ನಂತರ ಸುದೀಪ್ ಆ ರೀತಿ ಧ್ವನಿ ಹೊಂದಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

    ಇತ್ತೀಚಿಗಷ್ಟೆ ತಮಿಳು ಅಭಿಮಾನಿಯೊಬ್ಬರು ಸುದೀಪ್ ಸಿನಿಮಾಗಳನ್ನ ನೋಡಲು ಕನ್ನಡ ಕಲಿಯುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದರು. `ಸರ್ ನಾನು ತಮಿಳುನಾಡಿನವನು. ನನಗೆ ನೀವಂದ್ರೆ ತುಂಬಾ ಇಷ್ಟ. ನಾನು ಕನ್ನಡ ಕಲಿಯುತ್ತಿದ್ದೇನೆ. ನಾನು ನಿಮ್ಮ ಡಬ್ಬಿಂಗ್ ಸಿನಿಮಾಗಳಾದ ‘ಈಗ’, ‘ಬಾಹುಬಲಿ’, `ಪುಲಿ’, ‘ರಕ್ತಚರಿತ್ರ’ ನೋಡಿದ್ದೇನೆ. ನಾನು ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ಕಿಲ್ಲಿಂಗ್ ಲುಕ್ ಗೆ ಮನಸೋತಿದ್ದೇನೆ. ನಾನು ನಿಮ್ಮ ಉಳಿದ ಚಿತ್ರಗಳನ್ನ ನೋಡಲು ನಿರ್ಧರಿಸಿದ್ದು, ಅದಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

    ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದು, ನೀವು ಕನ್ನಡ ಕಲಿಯಲು ಶ್ರಮ ಪಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ. ತಮಿಳು ಅಭಿಮಾನಿ `ಭಾರತೀಯ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ಅವರ ನಂತರ ಸುದೀಪ್ ಅವರಿಗೆ ಅತ್ಯುತ್ತಮ ಧ್ವನಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಷ್ಟೇ ಅಲ್ಲದೇ ಕಾಲಿವುಡ್ ನಲ್ಲಿ ನಿಮ್ಮ ಧ್ವನಿ ಕೇಳಲು ನಾನು ಕಾಯುತ್ತಿದ್ದೇನೆ. ದಯವಿಟ್ಟು ನಿಮ್ಮ ನೈಜ ಧ್ವನಿಯಲ್ಲೇ ಸಿನಿಮಾ ಮಾಡಿ. ನಿಮ್ಮ ಅಭಿನಯಕ್ಕೆ ಬೇರೆಯವರು ಧ್ವನಿ ನೀಡಿದರೆ ಅದು ಚೆನ್ನಾಗಿರಲ್ಲ ಎಂದು ಹೇಳಿದ್ದಾರೆ.

    ಅಮಿತಾಬ್ ಬಚ್ಚನ್ ಮತ್ತು ಸುದೀಪ್ ಒಟ್ಟಿಗೆ ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2010ರಲ್ಲಿ ತೆರೆಕಂಡಿದ್ದ `ರಣ್’ ಚಿತ್ರದಲ್ಲಿ ಇಬ್ಬರು ತೆರೆಹಂಚಿಕೊಂಡಿದ್ದಾರೆ. ಸದ್ಯಕ್ಕೆ `ದಿ ವಿಲನ್’ ಚಿತ್ರದ ಚಿತ್ರೀಕರಣ ಮುಗಿಸಿರುವ ಸುದೀಪ್ ಮುಂದಿನ ತಿಂಗಳಿನಿಂದ ಪೈಲ್ವಾನ್ ಚಿತ್ರವನ್ನ ಆರಂಭಿಸಲಿದ್ದಾರೆ. ಈ ಮಧ್ಯೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151ನೇ ಸಿನಿಮಾದಲ್ಲೂ ಕಿಚ್ಚ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

     

  • 5 ಸಾವಿರ ಬಾರಿ `ರಾಜರಥ’ ಸಿನಿಮಾ ನೋಡಿದ ನಟ

    5 ಸಾವಿರ ಬಾರಿ `ರಾಜರಥ’ ಸಿನಿಮಾ ನೋಡಿದ ನಟ

    ಬೆಂಗಳೂರು: ಒಂದು ಸಿನಿಮಾವನ್ನು ಒಂದು ಬಾರಿ ನೋಡಬಹುದು. ತುಂಬಾ ಇಷ್ಟವಾದರೆ ಐದಾರು ಬಾರಿ ನೋಡಬಹುದು. `ರಾಜರಥ’ ಸಿನಿಮಾ ಶುಕ್ರವಾರದಂದು ರಾಜಾದ್ಯಂತ ಬಿಡುಗಡೆಯಾಗಿದ್ದು, ನಟರೊಬ್ಬರು ಈ ಸಿನಿಮಾವನ್ನ ಐದು ಸಾವಿರ ಬಾರಿ ನೋಡಿದ್ದಾರೆ.

    `ರಾಜರಥ’ ಚಿತ್ರವನ್ನು ಐದು ಸಾವಿರ ಬಾರಿ ನೋಡಿದವರು ಬೇರೆ ಯಾರು ಅಲ್ಲ, ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ. ಅನೂಪ್ ಸಿನಿಮಾದ ಚಿತ್ರದ ಬಿಡುಗಡೆಗೆ ಮುಂಚೆ ಮಾತನಾಡಿ ರಂಗಿತರಂಗ ಸಿನಿಮಾಕ್ಕಿಂತ ರಾಜರಥ ಸಿನಿಮಾಗೆ ಹೆಚ್ಚು ಕಷ್ಟಪಟ್ಟಿದ್ದೇನೆ. ಎರಡು ವರ್ಷ ಈ ಸಿನಿಮಾಗಾಗಿ ಮೀಸಲಿಟ್ಟಿದ್ದೇನೆ. ಇದುವರೆಗೆ ಐದು ಸಾವಿರ ಸಲ ಸಿನಿಮಾ ನೋಡಿದರೂ ನನಗೆ ಬೋರ್ ಆಗಲಿಲ್ಲ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.

    ರಾಜರಥ ಎಂಬ ಹೈಟೆಕ್ ಬಸ್ ನಲ್ಲಿ ಚೆನ್ನೈಗೆ ಹೊರಟಿರುವ ಪ್ರಯಾಣಿಕರ ಕಥೆಯೇ ಈ ಸಿನಿಮಾ. ಬಸ್ ನಲ್ಲಿ ಪ್ರಯಾಣ ಬೆಳೆಸುವವರ ಪರಿಚಯ ಒಂದೆಡೆ ಆದರೆ, ಇದ್ದಕ್ಕಿದ್ದಂತೆ ಭುಗಿಲೇಳುವ ಹಿಂಸಾಚಾರದ ಹಿನ್ನಲೆ ಇನ್ನೊಂದು ಕಡೆ. ಹಿಂಸಾಚಾರದಲ್ಲಿ ಪ್ರಯಾಣಿಕರು ಸೇಫ್ ಆಗುತ್ತಾರಾ, ಇಲ್ವಾ ಎಂಬುದು ಕ್ಲೈಮ್ಯಾಕ್ಸ್ ಆಗಿದೆ.

    ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿನಿಮಾ ಮೂಡಿದ್ದು, ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ನಿರೂಪ್ ಗೆ ಜೊತೆಯಾಗಿ ನಟಿ ಆವಂತಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

  • ರಾಜ್ಯಸಭೆಗೆ ಬಿಜೆಪಿಯ ಒಬ್ಬರು, ಕಾಂಗ್ರೆಸ್‍ ನ ಮೂವರು – ಜೆಡಿಎಸ್‍ಗೆ ಎರಡನೇ ಬಾರಿ ಸೋಲು

    ರಾಜ್ಯಸಭೆಗೆ ಬಿಜೆಪಿಯ ಒಬ್ಬರು, ಕಾಂಗ್ರೆಸ್‍ ನ ಮೂವರು – ಜೆಡಿಎಸ್‍ಗೆ ಎರಡನೇ ಬಾರಿ ಸೋಲು

    ಬೆಂಗಳೂರು: ರಾಜ್ಯದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಚುನಾವಣೆ ಗೊಂದಲ, ಗಲಾಟೆ ಜೊತೆಗೆ ಜೆಡಿಎಸ್‍ನಿಂದ ಬಹಿಷ್ಕಾರದಂತ ಕಠಿಣ ನಡೆಯಿಂದ ಅಂತ್ಯವಾಗಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ನ ಎಲ್. ಹನುಮಂತಯ್ಯ(44), ನಸೀರ್ ಹುಸೇನ್ (42), ಜಿಸಿ ಚಂದ್ರಶೇಖರ್(46) ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್(50) ಜಯಶೀಲರಾಗಿದ್ದಾರೆ.

    ಕಾಂಗ್ರೆಸ್ ನಾಯಕರು ಸೇರಿದಂತೆ ಬಿಜೆಪಿಯ ಸಿಪಿ ಯೋಗೇಶ್ವರ್, ಪಾಟೀಲ್ ನಡಹಳ್ಳಿ ಸೇರಿದಂತೆ ಹಲವು ನಾಯಕರು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಿದರು. ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇರಲಿಲ್ಲ. ಆದರೆ ಕಾಂಗ್ರೆಸ್‍ನಲ್ಲಿ ಕೆಲಕಾಲ ತಳಮಳ ಉಂಟಾಗಿತ್ತು. ಕಾರಣ ಮಧ್ಯಾಹ್ನ ಆದರು ಶಾಸಕ ಅಂಬರೀಶ್, ಶಾಮನೂರು ಶಿವಶಂಕರಪ್ಪ, ಎಸ್‍ಎಸ್ ಮಲ್ಲಿಕಾರ್ಜುನ್ ಮತ ಚಲಾಯಿಸಲು ಆಗಮಿಸಿರಲಿಲ್ಲ. ನಂತರ ಸಂಜೆ ವೇಳೆಗೆ ಬಂದು ಮತ ಚಲಾಯಿಸಿದ್ರು.

    ವಿಶೇಷವಾಗಿ ಎಂಇಎಸ್ ಶಾಸಕ ಸಾಂಬಾಜಿ ಪಾಟೀಲ್‍ಗೆ ಕೈ ನಡುಗುತ್ತಿದೆ ಎಂದು ಲಕ್ಷ್ಮಿನಾರಾಯಣ್ ಮತ ಚಲಾಯಿಸಲು ಅಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಜೆಡಿಎಸ್ ನಾಯಕರು ಸಂಬಾಜಿ ಪಾಟೀಲ್ ಮೊದಲು ವೈದ್ಯರ ಸರ್ಟಿಫಿಕೇಟ್ ಕೊಟ್ಟು ಬಳಿಕ ಬೇರೆಯವರ ಕೈಲಿ ಮತ ಚಲಾಯಿಸಲಿ ಎಂದು ಕಿಡಿಕಾರಿದರು. ಬಳಿಕ ಸಾಂಬಾಜಿ ಪಾಟೀಲ್ ಅವರೇ ಮತ ಚಲಾಯಿಸಿದರು. ಇದರ ಮಧ್ಯೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ರಾಮಕೃಷ್ಣ ಅವರ ಕೈ ಹಿಡಿದು ಸಚಿವ ಪ್ರಿಯಾಂಕ್ ಖರ್ಗೆ ಮತ ಚಲಾಯಿಸಿದರು.

    ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಪಕ್ಷದ ಅಭ್ಯರ್ಥಿ ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಡವಟ್ಟು ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಏಜೆಂಟ್ ಎಚ್ಚರಿಸಿದ ಬಳಿಕ ಚುನಾವಣಾ ಅಧಿಕಾರಿಗಳಿಂದ ಹೊಸದಾಗಿ ಬ್ಯಾಲೆಟ್ ಪೇಪರ್ ಪಡೆದು ಮತ ಚಲಾಯಿಸಿದರು. ಈ ನಡೆಗೆ ಜೆಡಿಎಸ್ ನಾಯಕರು ಚುನಾವಣಾ ಅಧಿಕಾರಿ ವಿ.ಮೂರ್ತಿ ಅವರು ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಹಾಗೂ ಚಿಂಚನಸೂರ್ ಅವರಿಗೆ 2ನೇ ಬಾರಿಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಎರಡು ಮತಗಳನ್ನು ಅಸಿಂಧುಗೊಳಿಸಿ ಎಂದು ರಾಜ್ಯ ಚುನಾವಣಾ ಅಧಿಕಾರಿಗೆ ಜೆಡಿಎಸ್ ಅಭ್ಯರ್ಥಿ ಫಾರೂಕ್ ದೂರು ನೀಡಿದರು. ಆಕಸ್ಮಿಕವಾಗಿ ಆಗಿರುವ ತಪ್ಪನ್ನು ಪರಿಗಣಿಸಲು ಸಾಧ್ಯವಿಲ್ಲ, ಆಕಸ್ಮಿಕ ತಪ್ಪಿನ ಬಗ್ಗೆ ಎಲ್ಲರಿಗೂ ಮನವರಿಕೆವಾಗಬೇಕು ಎಂದು ಅಭಿಪ್ರಾಯಪಟ್ಟ ಚುನಾವಣಾ ಆಯೋಗ ಎರಡು ಮತಗಳನ್ನು ತಿರಸ್ಕರಿಸಿತು.

    ಈ ಎಲ್ಲಾ ಗೊಂದಲದ ಮಧ್ಯೆ ತಮ್ಮ ರಾಜಕೀಯ, ಪಕ್ಷ ನಿಷ್ಠೆಯನ್ನ ಮೆರೆದ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ತಮ್ಮ ತಂದೆಯ ಅಗಲಿಕೆ ನಡುವೆಯೂ ಮತ ಚಲಾಯಿಸಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಬೆಳಗಾವಿಯ ರಾಮದುರ್ಗಕ್ಕೆ ತೆರಳಿದರು. ಆರೋಗ್ಯ ಹದಗೆಟ್ಟು ವಿಕ್ರಂ ಆಸ್ಪತ್ರೆಯಲ್ಲಿದ್ದ ಬೇಲೂರು ಶಾಸಕ ರುದ್ರೇಶ್‍ಗೌಡರನ್ನು ವ್ಹೀಲ್ ಚೇರ್‍ನಲ್ಲಿ ಕೂರಿಸಿ ವಿಧಾನಸೌಧಕ್ಕೆ ಕರೆತರಲು ಕಾಂಗ್ರೆಸ್ ಯತ್ನಿಸಿತ್ತು. ಆದರೆ ವೈದ್ಯರು ಇದಕ್ಕೆ ಅವಕಾಶ ನೀಡಿಲ್ಲ.

  • ಬೆಂಗ್ಳೂರಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷ – ಮಹಿಳೆಯರ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ನಿಂತ ಕಾಮುಕ

    ಬೆಂಗ್ಳೂರಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷ – ಮಹಿಳೆಯರ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ನಿಂತ ಕಾಮುಕ

    ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಬ್ಬ ಸೈಕೋ ಪ್ರತ್ಯಕ್ಷನಾಗಿದ್ದು, ನಡುರಸ್ತೆಯಲ್ಲಿ ಪ್ಯಾಂಟ್ ಜಿಪ್ ಬಿಚ್ಚಿ ಕಾಮುಕನೊಬ್ಬ ನಿಂತಿದ್ದ ಘಟನೆ ನಡೆದಿದೆ.

    ಸುಬ್ರಹ್ಮಣ್ಯ ನಗರದಲ್ಲಿ ಕಾಮುಕನೊಬ್ಬ ಮಹಿಳೆಯರ ಎದುರಲ್ಲೇ ಪ್ಯಾಂಟ್ ಜಿಪ್ ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ರಾತ್ರಿ ವೇಳೆ ಏರಿಯಾಗೆ ಎಂಟ್ರಿ ಕೊಟ್ಟು ಈ ರೀತಿ ಮಾಡಿದ್ದಾನೆ. ಇದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

    ಸಂಗೊಳ್ಳಿರಾಯಣ್ಣ ಪಾರ್ಕ್ ಬಳಿ ಪ್ರತ್ಯಕ್ಷನಾಗಿದ್ದ ಕಾಮುಕ ಪರಮೇಶ್ ಎಂಬಾತ ಈ ಕೃತ್ಯ ಎಸಗುತ್ತಿದ್ದಾನೆ. ಮೂರು ದಿನಗಳಿಂದ ಸುಬ್ರಮಣ್ಯ ನಗರದ ಏರಿಯಾದ ರಸ್ತೆಯಲ್ಲಿ ಕಂಡ ಮಹಿಳೆಯರ ಮುಂದೆ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೊರಿಸಿದ್ದಾನೆ. ಈತನ ಕೃತ್ಯದಿಂದ ಮಹಿಳೆಯರು ಗಾಬರಿಗೊಂಡಿದ್ದಾರೆ.

    ಗುರುವಾರ ರಾತ್ರಿ ಮತ್ತೆ ಪ್ರತ್ಯಕ್ಷನಾಗಿದ್ದ ಸೈಕೋ ನಡುರಸ್ತೆಯಲ್ಲೇ ಪ್ಯಾಟ್ ಜಿಪ್ ಬಿಚ್ಚಿ ನಿಂತಿದ್ದ. ಈ ಕೃತ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈತನ ಈ ವರ್ತನೆಯಿಂದ ಸ್ಥಳಿಯರು ಬೇಸತ್ತು ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

  • ತೆಲುಗು ಸಿನಿಮಾ ಮಾಡಿ ಎಂದು ಮನವಿ ಮಾಡಿಕೊಂಡ ಅಭಿಮಾನಿಗೆ ಉತ್ತರ ಕೊಟ್ಟ ಕಿಚ್ಚ

    ತೆಲುಗು ಸಿನಿಮಾ ಮಾಡಿ ಎಂದು ಮನವಿ ಮಾಡಿಕೊಂಡ ಅಭಿಮಾನಿಗೆ ಉತ್ತರ ಕೊಟ್ಟ ಕಿಚ್ಚ

    ಬೆಂಗಳೂರು: ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರ ಮತ್ತು ತೆಲಂಗಾಣಗಳಲ್ಲೂ ಅಭಿಮಾನಿಗಳಿದ್ದಾರೆ.

    ಸುದೀಪ್ ತಮಿಳು ಮತ್ತು ತೆಲುಗು ಭಾಷೆಯಲ್ಲೂ ಅಭಿನಯಿಸಿ ಅಭಿಮಾನ ಗಳಿಸಿದ್ದಾರೆ. ಸಾಮಾನ್ಯವಾಗಿ ಸುದೀಪ್ ಅವರ ಸಿನಿಮಾ ಬಂದಿಲ್ಲವೆಂದರೆ ಸ್ಯಾಂಡಲ್ ವುಡ್ ಅಭಿಮಾನಿಗಳು ಕಿಚ್ಚನನ್ನ ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ತೆಲುಗು ಫ್ಯಾನ್ಸ್ ಕೂಡ ಸುದೀಪ್ ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.

    ತೆಲುಗು ಅಭಿಮಾನಿಯೊಬ್ಬ ಕಿಚ್ಚ ಅವರಿಗೆ ಟ್ವೀಟ್ ಮಾಡಿದ್ದು, “ಸುದೀಪ್ ಅಣ್ಣ ನಾನು ಆಂಧ್ರದವನು. ನಿಮ್ಮ ಸಿನಿಮಾಗಳನ್ನ ಹೆಚ್ಚು ಇಷ್ಟ ಪಡುತ್ತೀನಿ. ಅದರಲ್ಲೂ ‘ಹೆಬ್ಬುಲಿ’ ಅಂದರೆ ನನಗೆ ತುಂಬಾ ಇಷ್ಟ. ದಯವಿಟ್ಟು ತೆಲುಗು ಸಿನಿಮಾ ಮಾಡಿ. ನಾವು ನಿಮ್ಮನ್ನ ಮತ್ತು ನಿಮ್ಮ ಧ್ವನಿಯನ್ನ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ಕೇಳಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ”ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿಯೂ ತೆಲುಗು ಸಿನಿಮಾ ಮಾಡುತ್ತೇನೆ” ಎಂದು ಅಭಿಮಾನಿಯ ಮನವಿಗೆ ಉತ್ತರಿಸಿದ್ದಾರೆ.

    ಸುದೀಪ್ ಎಸ್.ಎಸ್ ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದ ಮೂಲಕ ತೆಲುಗು ಸಿನಿಮಾರಂಗ ಪ್ರವೇಶಿಸಿದ್ದರು. ನಂತರ ‘ಬಾಹುಬಲಿ ದಿ ಬಿಗಿನಿಂಗ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಕೋಟಿಗೊಬ್ಬ-2’ ಸಿನಿಮಾ ತೆಲುಗಿನಲ್ಲಿ ಡಬ್ಬಿಂಗ್ ಆಗಿ ಯಶಸ್ಸು ಕಂಡಿತ್ತು. ಈಗ ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರ ‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ.

  • ಚಂದನ್ ಶೆಟ್ಟಿಯ ಹೊಸ ಹೇರ್ ಸ್ಟೈಲ್ ಗೆ ಶೃತಿ ಹರಿಹರನ್ ಫಿದಾ

    ಚಂದನ್ ಶೆಟ್ಟಿಯ ಹೊಸ ಹೇರ್ ಸ್ಟೈಲ್ ಗೆ ಶೃತಿ ಹರಿಹರನ್ ಫಿದಾ

    ಬೆಂಗಳೂರು: ಕನ್ನಡ ರ‍್ಯಾಪರ್​ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದ ನಂತರ ಅವರ ಹಾಡುಗಳಿಗೆ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

    ಸದ್ಯಕ್ಕೆ ಚಂದನ್ ಹಾಡಿಗೆ ಮಾತ್ರವಲ್ಲದೆ ಅವರ ಹೇರ್ ಸ್ಟೈಲ್ ನೋಡಿ ಕೂಡ ಕನ್ನಡದ ನಟಿ ಶೃತಿಹರಿಹರನ್ ಮಾರು ಹೋಗಿದ್ದಾರೆ. ರ‍್ಯಾಪರ್​ ಚಂದನ್ ಶೆಟ್ಟಿ ಆಗಾಗ ಬೇರೆ ಬೇರೆ ರೀತಿಯ ಹೇರ್ ಸ್ಟೈಲ್ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಶೆಟ್ರು ಒಂದು ಹೊಸ ಕೇಶವಿನ್ಯಾಸದೊಂದಿಗೆ ಬಂದಿದ್ದಾರೆ.

    ನಟಿ ಶೃತಿ ಹರಿಹರನ್ ಗೆ ಚಂದನ್ ಹೇರ್ ಸ್ಟೈಲ್ ಸಖತ್ ಇಷ್ಟ ಆಗಿದೆ. ಆದ್ದರಿಂದ ಶೃತಿ ತಮ್ಮ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಜೊತೆಗೆ ತೆಗೆಸಿಕೊಂಡ ಫೋಟೋ ಹಾಕಿದ್ದು, ಅವರ ಹೇರ್ ಸ್ಟೈಲ್ ಬಗ್ಗೆ ಬರೆದಿದ್ದಾರೆ. ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಅವರ ಫ್ಯಾನ್ಸ್ ಗಳಿಗೂ ಕೂಡ ಮೆಚ್ಚುಗೆಯಾಗಿದೆ.

    ಚಂದನ್ ಶೆಟ್ಟಿ ಬಿಗ್ ಬಾಸ್ ನಲ್ಲಿ ಗೆದ್ದ ನಂತರ ಖಾಸಗಿ ವಾಹಿನಿಯ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಂದಿದ್ದು, ಈ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್ ಮತ್ತು ಮಯೂರಿ ಚಂದನ್ ಗೆ ಸಾಥ್ ನೀಡಿದ್ದಾರೆ.

    https://www.instagram.com/p/BgkRybhBvzq/?hl=en&taken-by=sruthi_hariharan22

  • ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಓಡಿಸಿದ್ದ ಬೈಕ್ ಗೆ ರಾಯಲ್ ಲುಕ್!

    ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಓಡಿಸಿದ್ದ ಬೈಕ್ ಗೆ ರಾಯಲ್ ಲುಕ್!

    ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಫಸ್ಟ್ ಆಫ್ ನಲ್ಲಿ ಡಿಫ್ರೆಂಟ್ ಆಗಿರುವ ಕಾರ್ ಎಲ್ಲರನ್ನೂ ಆಕರ್ಷಣೆ ಮಾಡಿತ್ತು. ಅದರೆ ಸೆಕೆಂಡ್ ಆಫ್ ನಲ್ಲಿ ಬುಲೆಟ್ ನೋಡಿ ಸಾಕಷ್ಟು ಜನರು ಫಿದಾ ಆಗಿದ್ದರು.

    ಸಿನಿಮಾದ ಕಾರನ್ನು ಹರಾಜು ಹಾಕಿ ಎನ್‍ಜಿಒ ಸಂಘಟನೆಗೆ ನೀಡಲಾಗಿತ್ತು. ಆದರೆ ಬುಲೆಟ್ ಬೈಕಿನ ಕಥೆ ಏನಾಯ್ತು ಎನ್ನುವುದು ತಿಳಿದು ಬಂದಿರಲಿಲ್ಲ. ಯಾಕೆಂದರೆ ಅದು ರಕ್ಷಿತ್ ಶೆಟ್ಟಿ ಅವರ ಬಳಿ ಅಥವಾ ರಿಷಬ್ ಶೆಟ್ಟಿ ಅವರ ಹತ್ತಿರ ಇರುತ್ತದೆ ಎಂದು ಕೊಂಡಿದ್ದರು. ಆದರೆ ಈಗ ಕಿರಿಕ್ ಪಾರ್ಟಿ ಬೈಕ್ ಅವತಾರ ನೋಡಿದರೆ ಮತ್ತೆ ಅದರ ಮೇಲೆ ಪ್ರೀತಿಯ ಆಗುವ ರೀತಿ ಹೊಸ ಲುಕ್ ಪಡೆದುಕೊಂಡಿದೆ.

    ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಓಡಿಸಿದ್ದ ಬೈಕಿಗೆ ಈಗ ರಾಯಲ್ ಲುಕ್ ಸಿಕ್ಕಿದೆ. ಈ ರೀತಿಯೂ ಬೈಕ್ ರೆಡಿ ಮಾಡಿಸಬಹುದಾ ಎನ್ನುವ ಮಟ್ಟಿಗೆ ಬೈಕ್ ಲುಕ್ ಬದಲಾಗಿದೆ. ಬಾಟಲ್ ಗ್ರೀನ್ ಕಲರ್ ಇದ್ದ ಬೈಕ್ ಈಗ ರೆಡ್ ಕಲರ್ ಆಗಿ ಬದಲಾಗಿದೆ. ಬುಲೆಟರ್ ಕಸ್ಟಮ್ ಮೋಟಾರ್ ಸೈಕಲ್ ತಂಡ ರಕ್ಷಿತ್ ಅವರ ಹಿಂದಿನ ಬೈಕ್ ಗೆ ಹೊಸ ಟಚ್ ನೀಡಿದ್ದಾರೆ.

    ಹೊಸದಾಗಿ ಬೈಕ್ ರೆಡಿಯಾಗಿರುವ ಬಗ್ಗೆ ರಕ್ಷಿತ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು, ಬೈಕ್ ನ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಯುಗಾದಿ ಹಬ್ಬದಂದೆ ಬಂದ ಹೊಸ ಬೈಕ್ ನಲ್ಲಿ ಒಂದು ರೈಡ್ ಕೂಡ ಹೋಗಿ ಬಂದಿದ್ದಾರೆ.

    ಈ ಹೊಸ ಬೈಕಿಗೆ ಸಿಂಗಲ್ ಸೀಟ್ ಇದೆ. ಈ ರೀತಿ ಮಾಡಿಫಿಕೇಷನ್ ಆದ ಬೈಕ್ ಗಳಿಗೆ ಸಿಂಗಲ್ ಸೀಟ್ ಇದ್ದರೆ ಚೆಂದ ಎಂದು ಬೈಕಿನ ಲುಕ್ ಬದಲಾಯಿಸಿದವರು ಹೇಳಿದ್ದಾರೆ.

  • ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ದಿಗಂತ್

    ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ದಿಗಂತ್

    ಬೆಂಗಳೂರು: ದೂದ್ ಪೇಡ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ನಡುವೆ ಪ್ರೀತಿ-ಪ್ರೇಮ ಇದೆ ಅನ್ನೋ ವಿಷಯ ಹಳೇದು. ಆದ್ರೆ ಹೊಸ ಸುದ್ದಿ ಏನಂದ್ರೆ ಸ್ಯಾಂಡಲ್ ವುಡ್ ನ ಬ್ಯಾಚುಲರ್ ದಿಗಂತ್ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ.

    ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ‘ಯಾರೀ ಮೀಟರ್’ ಚೆಕ್ ಮಾಡುವ ಸುತ್ತು ಮುಗಿದ ಮೇಲೆ ಶಿವಣ್ಣ ಒಂದು ಪ್ರಶ್ನೆ ಕೇಳಿದರು. ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕೋಸ್ಕರ ನೀವು ಕಾಯಲು ಆಗುವುದಿಲ್ಲ, ಕಾಯುವುದಿಲ್ಲ.? ಎಂದು ಶಿವಣ್ಣ ಕೇಳಿದರು.

    ಅದಕ್ಕೆ ಉತ್ತರಿಸಿದ ದಿಗಂತ್, ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ. ಅದಕ್ಕೋಸ್ಕರ ಕಾಯುತ್ತಿದ್ದೇನೆ ಎಂದು ಹೇಳಿದ್ರು.

    ಶಿವಣ್ಣ ಮತ್ತೆ ಬೈಕಿನಲ್ಲಿ ಲಾಂಗ್ ಡೈವ್ ಹೋಗಬೇದಾರೆ ಯಾವ ನಟಿಯನ್ನ ಕರೆದುಕೊಂಡು ಹೋಗುತ್ತೀರಾ ಎಂದು ಕೇಳಿದ್ರು. ಗೋಕರ್ಣಕ್ಕೆ ನಿಧಿ ಸುಬ್ಬಯ್ಯ ಮತ್ತು ಊಟಿಗೆ ಐಂದ್ರಿತಾ ರೇ ಎಂದು ದಿಂಗತ್ ಉತ್ತರಿಸಿದ್ರು.

    ಇದೇ ವರ್ಷ ಮದುವೆ ಆಗಲು ಪ್ಲಾನ್ ಮಾಡಿದ್ದೇನೆ ಎಂದು ದಿಗಂತ್ ಹೇಳಿದ ಕೂಡಲೆ, ಐಂದ್ರಿತಾ ರೇ ಸಿದ್ಧವಾಗಿದ್ದಾರೆ. ಮದುವೆ ಊಟಕ್ಕೆ ಕಾಯುತ್ತಿದ್ದೇವೆ. ನಾವು ಖಂಡಿತ ಮದುವೆಗೆ ಬರುತ್ತೇವೆ ಎಂದು ಶಿವಣ್ಣ ಹೇಳಿದ್ರು.

  • ಪವರ್ ಸ್ಟಾರ್ ಗೆ ಚಿನ್ನಲೇಪಿತ ವೆಂಕಟೇಶ್ವರ ದೇವರ ಫೋಟೋ ಉಡುಗೊರೆ ನೀಡಿದ ಪ್ರಥಮ್

    ಪವರ್ ಸ್ಟಾರ್ ಗೆ ಚಿನ್ನಲೇಪಿತ ವೆಂಕಟೇಶ್ವರ ದೇವರ ಫೋಟೋ ಉಡುಗೊರೆ ನೀಡಿದ ಪ್ರಥಮ್

    ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರ ಮಧ್ಯೆ ಗುರುತಿಸಿಕೊಂಡಿರುವ ನಟ ನಿರ್ದೇಶಕ ಪ್ರಥಮ್ ಅವರು ಪುನೀತ್ ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ.

    ಕನ್ನಡ ಸಿನಿಮಾರಂಗದಲ್ಲಿ ಯಾವುದೇ ಸ್ಟಾರ್ ಹುಟ್ಟುಹಬ್ಬವಾದರೂ ಪ್ರಥಮ್ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಶುಭಾಶಯ ತಿಳಿಸುತ್ತಾರೆ. ಇದೀಗ ನಟ ಪುನೀತ್ ರಾಜ್ ಕುಮಾರ್ ಅವರು ಶನಿವಾರ ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಥಮ್ ಅವರು ಪವರ್ ಸ್ಟಾರ್ ಪುನೀತ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದರ ಜೊತೆಗೆ ವಿಭಿನ್ನವಾಗಿರುವ ಉಡುಗೊರೆಯನ್ನು ನೀಡಿದ್ದಾರೆ.

    ಬಂಗಾರದ ಮನುಷ್ಯನ ಪುತ್ರನಿಗೆ ಪ್ರಥಮ್ ಮತ್ತೆ ಬಂಗಾರದ ಉಡುಗೊರೆಯನ್ನು ನೀಡಿದ್ದಾರೆ. ಕಳೆದ ಬಾರಿಯೂ ಪ್ರಥಮ್ ಅಪ್ಪು ಅವರಿಗೆ ಚಿನ್ನ ಉಂಗುರವನ್ನು ನೀಡಿ ಶುಭ ಕೋರಿದ್ದರು. ಈ ಬಾರಿ ಚಿನ್ನ ಲೇಪಿತ ವೆಂಕಟೇಶ್ವರ ದೇವರ ಫೋಟೋವನ್ನು ಕೊಟ್ಟಿದ್ದಾರೆ. ಪ್ರಥಮ್ ಜೊತೆಯಲ್ಲಿ ಸಾರಾ ಗೋವಿಂದು ಹಾಗೂ ಪುತ್ರ ಅನೂಪ್ ಕೂಡ ಪವರ್ ಸ್ಟಾರ್ ಗೆ ಶುಭಾಶಯ ಕೋರಿದ್ದಾರೆ.

    ಪುನೀತ್ ಪ್ರಥಮ್ ಅವರ ಉಡುಗೊರೆಯನ್ನ ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಪುನೀತ್, ಪ್ರಥಮ್ ಅವರಿಗೆ ಶೋ ನಲ್ಲಿ ಹಾಕಿಕೊಂಡಿದ್ದ ಬ್ಲೇಜರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

  • ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯ ಮಾಲೀಕನಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ- ಎಫ್‍ಐಆರ್ ದಾಖಲು

    ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯ ಮಾಲೀಕನಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ- ಎಫ್‍ಐಆರ್ ದಾಖಲು

    ಬೆಂಗಳೂರು: ನಗರದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯ ಮಾಲೀಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈಗ ಆತನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಆಕಾಶ್ ಮೆಡಿಕಲ್ ಇನ್ಸ್ ಸ್ಟಿಟ್ಯೂಟ್ ಮಾಲೀಕ ಮುನಿರಾಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ. ತನ್ನದೇ ಸಂಸ್ಥೆಯಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆಗೆ ಮುನಿರಾಜು ಲೈಂಗಿಕ ಕಿರುಕುಳ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

    ಸಂಸ್ಥೆಯ ಮಾಲೀಕ, ಆತನ ಪತ್ನಿ ಹಾಗೂ ಸಹಾಯಕಿ ವಿರುದ್ಧ ಮಹಿಳೆ ದೇವನಹಳ್ಳಿ ಠಾಣೆ ಪೊಲೀಸರಿಗೆ ಮಾರ್ಚ್ 12ರಂದು ದೂರು ನೀಡಿದ್ದಾರೆ. ವೈದ್ಯಕೀಯ ಸಂಸ್ಥೆಯಲ್ಲಿ ಎಂಸಿಐ ನಿಯಮಾವಳಿ ಪ್ರಕಾರ ರೋಗಿಗಳು ಇರಲಿಲ್ಲ. ಆದರೆ ಎಂಸಿಐ ಇನ್‍ಸ್ಪೆಕ್ಷನ್ ವೇಳೆ ನಕಲಿ ರೋಗಿಗಳುನ್ನು ಆಸ್ಪತ್ರೆಗೆ ಕರೆಸಲಾಗುತಿತ್ತು. ಈ ಕೆಲಸವನ್ನು ಸಂತ್ರಸ್ತೆ ಮಾಲೀಕರ ಸೂಚನೆಯಂತೆ ಮಾಡುತ್ತಿದ್ದರು. ಬಳಿಕ ತಾನು ಮಾಡಿದ್ದು ತಪ್ಪೆಂದು ಗೊತ್ತಾಗಿ ಕೆಲಸ ಬಿಡಲು ಮುಂದಾಗಿದ್ದರಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.