Tag: Bangalore

  • ಯಾರು ಇಲ್ಲದ ವೇಳೆ ನೇಣಿಗೆ ಶರಣಾದ ಪಿಜಿ ನಡೆಸುತ್ತಿದ್ದ ಯುವಕ

    ಯಾರು ಇಲ್ಲದ ವೇಳೆ ನೇಣಿಗೆ ಶರಣಾದ ಪಿಜಿ ನಡೆಸುತ್ತಿದ್ದ ಯುವಕ

    ಬೆಂಗಳೂರು: ಪಿಜಿ (ಪೇಯಿಂಗ್ ಗೆಸ್ಟ್)ಯಲ್ಲಿ ಯಾರು ಇಲ್ಲದ ವೇಳೆ ಮಾಲೀಕ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ನಗರದ ಕುರುಬರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಜ್ಯೋತಿ ಪಿಜಿಯಲ್ಲಿ ನೆಡೆದಿದೆ.

    30 ವರ್ಷದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಪಿಜಿ ಮಾಲೀಕ. ಸಂತೋಷ್ ಮೂಲತಃ ಆಂಧ್ರದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಕುರುಬರಹಳ್ಳಿಯಲ್ಲಿ ಜ್ಯೋತಿ ಪಿಜಿ ನೆಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಪಿಜಿಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಂತೋಷ್ ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಮದ್ವೆಗೆ 2 ತಿಂಗಳು ಇದ್ದಾಗಲೇ ಯುವತಿ ನೇಣಿಗೆ ಶರಣು!

    ಮದ್ವೆಗೆ 2 ತಿಂಗಳು ಇದ್ದಾಗಲೇ ಯುವತಿ ನೇಣಿಗೆ ಶರಣು!

    ಬೆಂಗಳೂರು: ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ನಡೆದಿದೆ.

    ಕೋಲಾರದ ಮುಳಬಾಗಿಲು ಮೂಲದ 20 ವರ್ಷದ ಭವ್ಯ ಆತ್ಮಹತ್ಯೆಗೆ ಶರಣಾದ ಯುವತಿ. ಭವ್ಯ ಅವರಿಗೆ ಮದುವೆ ನಿಶ್ಚಯವಾಗಿದ್ದು, ಇನ್ನೆರಡು ತಿಂಗಳಲ್ಲಿ ಮದುವೆ ಕೂಡ ನಡೆಯಬೇಕಿತ್ತು. ಆದರೆ ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಭವ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಭವ್ಯ ಅವರಿಗೆ ಹೊಟ್ಟೆ ನೋವಿನ ಸಮಸ್ಯೆ ಇದ್ದುದರಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಕುರಿತು ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಲೆಸುತ್ತು ಬಂದು ಎಂದು ಆಸ್ಪತ್ರೆಗೆ ಹೋದ್ರೆ ಐಸಿಯುನಲ್ಲಿ ಇಟ್ರು – ಏನಾಗಿದೆ ಎಂದು ಕೇಳಿದ್ರೆ 80,000 ಬಿಲ್ ಕೊಟ್ರು

    ತಲೆಸುತ್ತು ಬಂದು ಎಂದು ಆಸ್ಪತ್ರೆಗೆ ಹೋದ್ರೆ ಐಸಿಯುನಲ್ಲಿ ಇಟ್ರು – ಏನಾಗಿದೆ ಎಂದು ಕೇಳಿದ್ರೆ 80,000 ಬಿಲ್ ಕೊಟ್ರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವೇ ಇಲ್ಲ ಎಂಬ ಪ್ರಶ್ನೆ ಹಲವರಲ್ಲಿ ಹುಟ್ಟಿಕೊಂಡಿದೆ.

    ನಗರದ ನಿವಾಸಿಯಾಗಿರುವ ಶಬಾನಾ ತಲೆಸುತ್ತು ಅಂತಾ ನಗರದ ಸಪ್ತಗಿರಿ ಆಸ್ಪತ್ರೆಗೆ ಬಂದಿದ್ದಾರೆ. ಕೇವಲ ತಲೆಸುತ್ತ ಬಂದಿದ್ದರಿಂದ ಆಸ್ಪತ್ರೆಯ ಮೆಟ್ಟಿಲುಗಳನ್ನು ಹತ್ತಿ ಬಂದಿದ್ದಾರೆ. ಆಸ್ಪತ್ರೆಯವರು ನೇರವಾಗಿ ಶಬಾನಾರನ್ನು ಐಸಿಯುನಲ್ಲಿ ಇಟ್ಟಿದ್ದಾರೆ. ಏನಾಗಿದೆ ರೋಗಿಗೆ ಎಂದು ಕುಟುಂಬಸ್ಥರು ಎರಡು ದಿನದಿಂದ ಕೇಳುತ್ತಿದ್ದರೂ, ಆಸ್ಪತ್ರೆ ಸಿಬ್ಬಂದಿ ಯಾವುದೇ ಸ್ಪಷ್ಟನೆ ನೀಡಿಲ್ಲ.

    ಇನ್ನು ವೈದ್ಯಕೀಯ ಪರೀಕ್ಷೆ ಮಾಡಬೇಕು ಎಂದು ನೆಪವೊಡ್ಡಿ ವೈದ್ಯರು ಮುಂದೂಡುತ್ತಿದ್ದಾರೆ. ಕುಟುಂಬದವರು ಹಾಗಿದ್ದರೆ ರೋಗಿಯನ್ನು ಐಸಿಯುಗೆ ಯಾಕೆ ಶಿಪ್ಟ್ ಮಾಡಿದ್ದೀರಿ ಎಂದು ವೈದ್ಯರ ಜೊತೆ ಜಗಳಕ್ಕೆ ಇಳಿದಿದ್ದಾರೆ. ಕುಟುಂಬದವರು ಗಲಾಟೆ ಮಾಡಿದ ತಕ್ಷಣ ಆಸ್ಪತ್ರೆಯವರು ಎರಡು ದಿನದ ಬಳಿಕ ಎಂಬತ್ತು ಸಾವಿರ ಬಿಲ್ ಕೊಟ್ಟು ರೋಗಿಯನ್ನು ಕರೆದುಕೊಂಡು ಹೋಗಿ ಎಂದು ಅವಾಜ್ ಹಾಕಿದ್ದಾರೆ. ವೈದ್ಯರ ಈ ವರ್ತನೆಗೆ ಕುಟುಂಬಸ್ಥರು ಕಿಡಿಕಾರಿದ್ದಾರೆ.

  • ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಿಶೇಷ ಪ್ರವಾಸವನ್ನು ಆಯೋಜಿಸಿದೆ.

    ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಕೈಗೆಟಕುವ ದರದಲ್ಲಿ ನಂದಿಬೆಟ್ಟ ಮತ್ತು ಮೈಸೂರು, ಹಾಸನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆಯೋಜಿಸಿದೆ. ಏಪ್ರಿಲ್ 1ರಿಂದ ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

    1.ಬೆಂಗಳೂರು-ದೇವನಹಳ್ಳಿ-ನಂದಿಬೆಟ್ಟ ಪ್ರವಾಸ: ಒಂದು ದಿನದ ಪ್ರವಾಸವಾಗಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಈ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಈ ಪ್ರವಾಸವು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ನಿರ್ಗಮಿಸಿ ದೇವನಹಳ್ಳಿ ಕೋಟೆ-ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳ-ನಂದಿಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾಯಂಕಾಲ 5 ಗಂಟೆವರೆಗೆ ನಂದಿಬೆಟ್ಟದ ವೀಕ್ಷಣೆ ಮಾಡುವ ವ್ಯವಸ್ಥೆ ಇರುತ್ತದೆ. ಈ ಪ್ರವಾಸದ ದರವು ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆ ಸೇರಿ 700 ರೂ. ಆಗಿರುತ್ತದೆ.

    2.ಬೆಂಗಳೂರು-ಮೈಸೂರು-ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ-ಪ್ರವಾಸ: ಇದು 2 ದಿನಗಳ ಪ್ರವಾಸವಾಗಿದ್ದು, ಮೊದಲನೆ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ-ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆ.ಆರ್ ಸಾಗರ ವೀಕ್ಷಣೆ ಮತ್ತು ಕೆ.ಆರ್ ಸಾಗರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ದಿನ ಬೆಳಿಗ್ಗೆ ಕೆ.ಆರ್ ಸಾಗರದಿಂದ ಹೊರಟು ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ ವೀರನಾರಾಯಣಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡುವ ವ್ಯವಸ್ಥೆ ಇದೆ. ಈ ಪ್ರವಾಸದ ದರವು ಊಟದ ವ್ಯವಸ್ಥೆ ಸೇರಿ ಪ್ರತಿಯೊಬ್ಬರಿಗೆ 1,900 ರೂ. ಆಗಿದೆ.

    ಪ್ರವಾಸಿಗರು ಇದೇ ರೀತಿ ಮುಂಬರುವ ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿಗಮದಿಂದ ಮೈಸೂರು-ಊಟಿ-ಕೊಡೆಕೆನಾಲ್-ಕೊಡಗಿನ ಪ್ರವಾಸಿ ಸ್ಥಳಗಳಿಗೆ ಬೇಡಿಕೆಗೆ ಅನುಗುಣವಾಗಿ ಪ್ರವಾಸಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಲು, ಬುಕ್ಕಿಂಗ್ ಗಾಗಿ
    www.kstdc.co  ವೆಬ್ ಸೈಟ್ ಹಾಗೂ ದೂರವಾಣಿ ಸಂಖ್ಯೆ – 89706 50070, 080-43344334 ಸಂಪರ್ಕಿಸಬಹುದಾಗಿದೆ.

  • ಪೈಪ್ ಲೈನ್ ಗುಂಡಿಗೆ ಬಿದ್ದಿದ್ದ ಮರಿಯಾನೆ ರಕ್ಷಣೆ

    ಪೈಪ್ ಲೈನ್ ಗುಂಡಿಗೆ ಬಿದ್ದಿದ್ದ ಮರಿಯಾನೆ ರಕ್ಷಣೆ

    ಬೆಂಗಳೂರು: ಪೈಪ್ ಲೈನ್ ಗುಂಡಿಗೆ ಬಿದ್ದಿದ್ದ ಮರಿಯಾನೆಯನ್ನು ಬೆಂಗಳೂರು ಹೊರವಲಯ ಆನೇಕಲ್ ಬಳಿ ರಕ್ಷಣೆ ಮಾಡಲಾಗಿದೆ.

    ಭಾನುವಾರ ರಾತ್ರಿ ಆನೇಕಲ್ ಗಡಿಗೆ ಹೊಂದಿಕೊಂಡಿರುವ ಹೊಸೂರು ಸಮೀಪದ ನಾಯಕನಪಲ್ಲಿಗೆ ಆಹಾರ ಅರಸಿ ಕಾಡಾನೆ ಹಿಂಡು ಬಂದಿದ್ದವು. ಆಗ ಆನೆಗಳ ಹಿಂಡಿನಲ್ಲಿದ್ದ ಸುಮಾರು 3 ವರ್ಷದ ಆನೆ ಕತ್ತಲಲ್ಲಿ ಪೈಪ್ ಲೈನ್ ಗುಂಡಿಗೆ ಸಿಲುಕಿಕೊಂಡಿದೆ.

    ಮರಿಯಾನೆ ಪೈಪ್ ಲೈನ್ ಗುಂಡಿಯಲ್ಲಿ ಸಿಲುಕಿ ಘೀಳಿಟ್ಟಿದ್ದು, ಮುಂಜಾನೆ ಗ್ರಾಮಸ್ಥರು ಬಂದು ನೋಡಿದ್ದಾರೆ. ನಂತರ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಮರಿಯಾನೆಯನ್ನು ರಕ್ಷಿಸಿದ್ದಾರೆ.

    ಬೇಸಿಗೆ ಪ್ರಾರಂಭದಲ್ಲಿ ಆನೆಗಳು ಮತ್ತೆ ನಾಡಿನಲ್ಲಿ ಪ್ರತ್ಯಕ್ಷವಾಗುತ್ತಿವೆ. ಇದರಿಂದ ಗ್ರಾಮಸ್ಥರು ಹೊಲ ತೋಟಗಳತ್ತ ತೆರಳಲು ಹೆದರುತ್ತಿರುವ ಪರಿಸ್ಥಿತಿ ಎದುರಾಗಿದೆ.

  • ಬೆಂಗ್ಳೂರಲ್ಲಿ ಮಹಿಳೆಯ ತಲೆ, ಹೊಟ್ಟೆಗೆ ಕಲ್ಲಿನಿಂದ ಹಲ್ಲೆಗೈದು ಬರ್ಬರ ಕೊಲೆ!

    ಬೆಂಗ್ಳೂರಲ್ಲಿ ಮಹಿಳೆಯ ತಲೆ, ಹೊಟ್ಟೆಗೆ ಕಲ್ಲಿನಿಂದ ಹಲ್ಲೆಗೈದು ಬರ್ಬರ ಕೊಲೆ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರಿಚಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

    ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬ್ಯಾಡರ ಹಳ್ಳಿಯ ಪೈಪ್‍ ಲೇನ್ ಬಳಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ಮಹಿಳೆಯ ತಲೆ ಮತ್ತು ಹೊಟ್ಟೆಗೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

    ದುಷ್ಕರ್ಮಿಗಳು ಮಹಿಳೆಯನ್ನ ಕೊಲೆ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬಂಧನಕ್ಕೆ ತೆರಳಿದ್ದ ಖಾಕಿಗೆ ಚಾಕು ಇರಿತ- ಯುವತಿ ಕಿಡ್ನಾಪರ್ಸ್ ಕಾಲಿಗೆ ಪೊಲೀಸರಿಂದ ಗುಂಡೇಟು

    ಬಂಧನಕ್ಕೆ ತೆರಳಿದ್ದ ಖಾಕಿಗೆ ಚಾಕು ಇರಿತ- ಯುವತಿ ಕಿಡ್ನಾಪರ್ಸ್ ಕಾಲಿಗೆ ಪೊಲೀಸರಿಂದ ಗುಂಡೇಟು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ಬೆಳ್ಳಂದೂರು ಪೊಲೀಸರು ಯುವತಿಯೊಬ್ಬಳ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆಂದು ಕೊಡತಿ ಬಸ್ ಡಿಪೋ ಬಳಿ ತೆರಳಿದ್ದರು. ಈ ವೇಳೆ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಮತ್ತು ಟೀಂ ಮೇಲೆ ಆರೋಪಿಗಳಾದ ಸೆಲ್ವಕುಮಾರ್ ಮತ್ತು ಶಂಕರ್ ದಾಳಿ ನಡೆಸಿದ್ದಾರೆ.

    ಮಾರ್ಚ್ 18 ರಂದು ಸರ್ಜಾಪುರ ರಸ್ತೆಯ ಕಸವನಹಳ್ಳಿ ಬಳಿ ಮನೆ ಬಳಿ ನಿಂತಿದ್ದ ಯುವತಿಯನ್ನ ಇಂಡಿಕಾ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಕೊಡತಿ ಬಿಎಂಟಿಸಿ ಕ್ವಾಟ್ರಸ್ ಬಳಿ ಆರೋಪಿಗಳಿರುವ ಮಾಹಿತಿ ಆಧಾರದ ಮೇರೆಗೆ ಬಂಧಿಸಲು ಪೊಲೀಸರು ಹೋಗಿದ್ದಾರೆ. ಬೆಳ್ಳಂದೂರು ಠಾಣೆಯ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಆಂಡ್ ಟಿಂ ನಿಂದ ಕಾರ್ಯಾಚರಣೆ ಮಾಡಲಾಗಿತ್ತು.


    ಈ ವೇಳೆ ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ಪೇದೆ ಮಹಾಂತೇಶ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ವಿಕ್ಟರ್ ಸೈಮನ್ ಮತ್ತು ಎಸ್‍ಐ ಸೋಮಶೇಖರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಸುಮ್ಮನಿರದ ಆರೋಪಿಗಳು ಪುನಃ ಹಲ್ಲೆಗೆ ಮುಂದಾಗಿದ್ದಾರೆ. ಆಗ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಸದ್ಯಕ್ಕೆ ಗಾಯಗೊಂಡಿರುವ ಆರೋಪಿಗಳಾದ ಸೆಲ್ವಕುಮಾರ್, ಶಂಕರ್ ಮತ್ತು ಪೇದೆ ಮಹಾಂತೇಶ್‍ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸಾಲು ಸಾಲು ರಜೆ – ಮಾರ್ಚ್ 29ರಿಂದ ಏಪ್ರಿಲ್ 2ರವರೆಗೂ ಬ್ಯಾಂಕ್ ಇರಲ್ಲ

    ಸಾಲು ಸಾಲು ರಜೆ – ಮಾರ್ಚ್ 29ರಿಂದ ಏಪ್ರಿಲ್ 2ರವರೆಗೂ ಬ್ಯಾಂಕ್ ಇರಲ್ಲ

    ಬೆಂಗಳೂರು: ಬ್ಯಾಂಕ್‍ನಲ್ಲಿ ದುಡ್ಡು ಡ್ರಾ ಹಾಗೂ ಡೆಪಾಸಿಟ್ ಸೇರಿದಂತೆ ಏನಾದ್ರೂ ಕೆಲಸವಿದ್ದರೆ ಬೇಗ ಬೇಗ ಮುಗಿಸಿಕೊಳ್ಳಿ. ಯಾಕೆಂದರೆ ಸಾಲು ಸಾಲು ರಜೆ ಇರುವುದರಿಂದ ಏಪ್ರಿಲ್ 2 ರವರೆಗೆ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ.

    ಗುರುವಾರ ಅಂದರೆ ಮಾರ್ಚ್ 29ರಿಂದ ಸಾಲು ಸಾಲು ರಜೆ ಇದೆ. ಯಾವುದೇ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುವುದಿಲ್ಲ. ನಂತರ ಏಪ್ರಿಲ್ 2ರವರೆಗೂ ಕಾಯಬೇಕಾಗುತ್ತೆ. ಮಾರ್ಚ್ 29 ಗುರುವಾರ ಮಹಾವೀರ ಜಯಂತಿ, ಮಾರ್ಚ್ 30ರಂದು ಗುಡ್‍ಫ್ರೈಡೆ, ಮಾರ್ಚ್ 31 ಹನುಮ ಜಯಂತಿ, ಏಪ್ರಿಲ್ 1ರಂದು ಭಾನುವಾರ ಇರುವ ಕಾರಣದಿಂದಾಗಿ ಯಾವುದೇ ಬ್ಯಾಂಕ್‍ಗಳು ಮತ್ತು ಸರ್ಕಾರಿ ಕಚೇರಿ ಕಾರ್ಯನಿರ್ವಹಿಸುವುದಿಲ್ಲ.

    ಹೀಗಾಗಿ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಲ್ಲಿ ಏನಾದರೂ ಮುಖ್ಯವಾದ ಕೆಲಸ ಇದ್ದರೆ ಗುರುವಾರದೊಳಗೆ ಮುಗಿಸಿಕೊಳ್ಳಬೇಕಾಗುತ್ತದೆ.

  • ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ, ರಾಜ್ಯದಲ್ಲಿ ತೇಲಿಕೊಂಡಿದ್ದೀರಿ, ಮುಂದೆ ಇಲ್ಲಿಯೂ ಮುಳುಗಿ ಅಸ್ತಂಗತರಾಗುತ್ತೀರಿ: ಎಚ್‍ಡಿಕೆ

    ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ, ರಾಜ್ಯದಲ್ಲಿ ತೇಲಿಕೊಂಡಿದ್ದೀರಿ, ಮುಂದೆ ಇಲ್ಲಿಯೂ ಮುಳುಗಿ ಅಸ್ತಂಗತರಾಗುತ್ತೀರಿ: ಎಚ್‍ಡಿಕೆ

    ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ಜಾತ್ಯತೀತ ಪಕ್ಷವಲ್ಲ ಎಂಬ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದು, ಜೆಡಿಎಸ್ ಜಾತ್ಯತೀತ ಪಕ್ಷವಲ್ಲ ಎನ್ನುತ್ತಿರುವ ರಾಹುಲ್ ಗಾಂಧಿ ಅವರು ಮೊದಲು ಕಾಂಗ್ರೆಸ್ ಜ್ಯಾತ್ಯತೀತ ಪಕ್ಷವೇ ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ಹೇಳಿದ್ದಾರೆ.

    ಶನಿವಾರ ರಾಹುಲ್ ಗಾಂಧಿ ಮೈಸೂರು ಪ್ರವಾಸದಲ್ಲಿ ಮಾತನಾಡುವಾಗ, ಜೆಡಿಎಸ್ ಎಂದರೆ ಜನತಾದಳ ‘ಸಂಘ’ ಪಕ್ಷ ಎಂದು ಹೇಳಿದ್ದರು. ಇವರ ಮಾತಿಗೆ ಕುಮಾರಸ್ವಾಮಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿ ವಾಗ್ದಾಳಿ ನಡೆಸಿದ್ದಾರೆ.

    ವೀರಶೈವ ಲಿಂಗಾಯತರನ್ನು ಒಡೆದು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಸವಣ್ಣರ ಹೆಸರನ್ನು, ಬಸವತತ್ವವನ್ನು ದುರ್ಬಳಕೆ ಮಾಡಿಕೊಂಡ ನಿಮ್ಮಂತ ಪಕ್ಷದವರಿಂದ ಬುದ್ಧಿ ಹೇಳಿಸಿಕೊಳ್ಳವಷ್ಟು ದಾರಿದ್ರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ. “ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಡಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು” ಎಂಬ ವಚನ ಸಾಲಿನಂತಾಗಿದೆ ನಿಮ್ಮ ಪಕ್ಷದ ಸ್ಥಿತಿ. ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ. ರಾಜ್ಯದಲ್ಲಿ ತೇಲಿಕೊಂಡಿದ್ದೀರಿ. ಮುಂದೆ ಇಲ್ಲಿಯೂ ಮುಳುಗಲಿದ್ದೀರಿ ಎಚ್ಚರಿಕೆ ನೀಡಿದ್ದಾರೆ.

    ತನ್ನ ಧರ್ಮ, ದೈವದ ಮೇಲೆ ಆಳವಾದ ನಂಬಿಕೆ, ಅಪಾರವಾದ ಗೌರವ ಹೊಂದಿದ್ದಾಗ್ಯೂ ಇತರ ಧರ್ಮ, ದೈವದ ಬಗ್ಗೆ ಗೌರವ ಹೊಂದಿರುವುದು. ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣುವುದು ನಾನು ನಂಬಿದ ಜಾತ್ಯತೀತತೆ. ಆದರೆ ನಿಮ್ಮದು? ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಾ, ಬಹುಸಂಖ್ಯಾತರು ತಮ್ಮ ಕಿಸೆಯಲ್ಲಿದ್ದಾರೆಂದು ಭಾವಿಸಿಕೊಂಡು ಶತಶತಮಾನಗಳಿಂದಲೂ ಅವರನ್ನು ಕಡೆಗಣಿಸಿಕೊಂಡು ಬಂದಿದ್ದು ನೀವು ಎಂದು ತಿರುಗೇಟು ನೀಡಿದ್ದಾರೆ.

    ಬಹುಸಂಖ್ಯಾತರನ್ನು ಕಡೆಗಣಿಸಿದ ನಿಮ್ಮ ನಡವಳಿಕೆಯಿಂದಾಗಿಯೇ ಇಂದು ನಿಮ್ಮ ಪಕ್ಷ ಅಳಿವಿನ ಅಂಚಿನಲ್ಲಿದೆ. ಮುಳುಗುವಾಗ ನಿಮ್ಮ ಪಕ್ಷಕ್ಕೆ ಸಮರ್ಥ ನಾಯಕ ಮತ್ತು ನಿಜ ಜಾತ್ಯತೀತ ನಾಯಕನ ಅಗತ್ಯವಿತ್ತು. ಆದರೆ ಭಾರತದ ಸಾಮಾಜಿಕ, ರಾಜಕೀಯ ವಾಸ್ತವನ್ನರಿಯದ ನಿಮ್ಮಂಥ ಅಪ್ರಬುದ್ಧರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟ ಬಿಜೆಪಿಗೆ ನಿಮ್ಮಂಥವರು ಸುಲಭ ತುತ್ತಾಗುವುದರಲ್ಲಿ ಅನುಮಾನವಿಲ್ಲ. ನೀವು ನಂಬಿದ್ದ ಡೋಂಗಿ ಜಾತ್ಯತೀತವಾದ ನಿಮಗೆ ಪಾಠ ಕಲಿಸುತ್ತದೆ. ಇಂದು ದೇಗುಲ, ಮಠ ಮಂದಿರಗಳಿಗೆ ಹೋಗುತ್ತಿದ್ದೀರಿ. ಮುಂದೊಂದು ದಿನ ಈ ಕಪಟ ನಡವಳಿಕೆಗಳಿಗೂ ಜನ ಉತ್ತರ ಕೊಡಲಿದ್ದಾರೆ ಎಂದು ಆಕ್ರೋಶದಿಂದ ಹೇಳಿದ್ದಾರೆ.

    ಜೆಡಿಎಸ್ ಅನ್ನು ಟೀಕಿಸುವಾಗ ನಿಮ್ಮ ಮಾತುಗಳಲ್ಲಿ ಭಯದ ಭಾವ ಸ್ಪಷ್ಟವಾಗಿ ವ್ಯಕ್ತವಾಗಿದೆ. ಆ ಮಾತನ್ನ ಆಡುವಾಗ ನೀವು ನಿಂತಿದ್ದ ನೆಲ ಮಂಡ್ಯ ಜಿಲ್ಲೆ, ಕಾವೇರಿ ಕಣಿವೆ. ಕಾವೇರಮ್ಮನ ಮಡಿಲಲ್ಲಿ ನಿಮ್ಮ ಪಕ್ಷವನ್ನು ಈ ಬಾರಿ ಜನ ಧೂಳೀಪಟ ಮಾಡಲಿದ್ದಾರೆ. ಮುಂದಿನ ಆ ದುಸ್ವಪ್ನ ಈಗ ನಿಮ್ಮ ಬಾಯಲ್ಲಿ ಅಂಥ ಮಾತಾಡಿಸಿದೆ ಎಂದು ಕಿಡಿಕಾರಿದ್ದಾರೆ.

    ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಅಲ್ಲವೇ? ಹಾಗಿದ್ದರೆ ನಮ್ಮ ಪಕ್ಷದ ಬೆಂಬಲದೊಂದಿಗೆ ಅಧಿಕಾರ ಹಿಡಿದಿರುವವರಿಂದ ನೈತಿಕತೆ ಹೆಸರಲ್ಲಿ ರಾಜೀನಾಮೆ ಕೊಡಿಸಿ. ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ನೀವು ಮಾಡಿಕೊಂಡಿರುವ ಮೈತ್ರಿ ಬಗ್ಗೆ ನಿಮ್ಮ ನಿಲುವು ತಿಳಿಸಿ. ನಮ್ಮ ಬೆಂಬಲದಿಂದ ನಂಜನಗೂಡು ಮತ್ತು ಗುಂಡ್ಲುಪೇಟೆಯನ್ನು ಗೆದ್ದು ಬೀಗಿದಿರಲ್ಲ. ಅಲ್ಲಿನ ಚುನಾಯಿತ ಪ್ರತಿನಿಧಿಗಳಿಂದ ರಾಜೀನಾಮೆ ಕೊಡಿಸಿ ನೋಡೋಣ ಸವಾಲು ಎಸೆದಿದ್ದಾರೆ.

    ಜೆಡಿಎಸ್ ಬಸವಣ್ಣನ ಮಾತಿನಂತೆ ನುಡಿದಂತೆ ನಡೆಯಬೇಕು ಎಂದಿದ್ದೀರಿ. ನಾವು ನುಡಿದಂತೇ ನಡೆಯುತ್ತಿದ್ದೇವೆ. ನಮ್ಮ ಪಕ್ಷದ ಕಾಳಜಿ ನಿಮಗೆ ಬೇಕಿಲ್ಲ. ಇಲ್ಲಿ ನುಡಿದಂತೆ ನಡೆ ಎಂದರೆ ಏನು ಅರ್ಥ? ನೀವು ನುಡಿದಂತೆ ನಾವು ನಡೆಯಬೇಕು ಎಂದಾ? ನೀವು ಹೇಳಿದಂತೆ ನಡೆದರೆ ಬಸವಣ್ಣರನ್ನು ಪಾಲಿಸಿದಂತೆ ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮಮೂರ್ಖತನದ ಪರಮಾವಧಿ ಎಂದಿದ್ದಾರೆ.

  • ಬರ್ತ್ ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಮದ್ಯಪಾನ ಮಾಡ್ಸಿ ಸ್ನೇಹಿತನಿಂದಲೇ ಅತ್ಯಾಚಾರ!

    ಬರ್ತ್ ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಮದ್ಯಪಾನ ಮಾಡ್ಸಿ ಸ್ನೇಹಿತನಿಂದಲೇ ಅತ್ಯಾಚಾರ!

    ಬೆಂಗಳೂರು: ಮದ್ಯಪಾನ ಮಾಡಿಸಿ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್ ನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.

    ಎಚ್‍ಎಸ್‍ಆರ್ ಲೇಔಟ್ ನ ಹೂಡ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ನಡೆದಿದ್ದು, ಭುವನೇಶ್ವರದಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ಬಂದಿದ್ದ ಸಂತ್ರಸ್ತೆಯನ್ನು ಬರ್ತ್ ಡೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ.

    ದೂರಿನಲ್ಲಿ ಏನಿದೆ?
    ಆಸ್ಪತ್ರೆಗೆಂದು ಬೆಂಗಳೂರಿಗೆ ಬಂದಿದ್ದೆ. ಈ ವೇಳೆ ಸ್ನೇಹಿತ ಹಿಮಾಂಶು ಭಟ್ ಕರೆ ಮಾಡಿ ಆತನ ಬಾವನ ಬರ್ತ್ ಡೇ ಎಂದು ರೆಸ್ಟೊರೆಂಟ್ ಗೆ ಕರೆದಿದ್ದನು. ನಂತರ ನಾನು ಪಾರ್ಟಿಗೆ ಹೋದೆ. ಅಲ್ಲಿ ಹಿಮಾಂಶು ಭಟ್, ಆತನ ಸಹೋದರಿ ಹಾಗು ಪತಿ, ಜೊತೆಗೆ ಆತನ ಸ್ನೇಹಿತ ರವಿರಂಜನ್ ಇದ್ದರು.

    ನನಗೆ ಪಾರ್ಟಿಯಲ್ಲಿ ಡ್ರಿಂಕ್ಸ್ ಕುಡಿಯಬೇಕು ಎಂದು ಒತ್ತಾಯಿಸಿ ಬಿಯರ್ ಕುಡಿಸಿದ್ರು. ಬಳಿಕ ಬಲವಂತವಾಗಿ ಹೆಚ್ಚಿನ ಡ್ರಿಂಕ್ಸ್ ಕುಡಿಸಿದರು. ಪಾರ್ಟಿಯಲ್ಲಿ ಸಹೋದರಿಯ ಪತಿ ಕೆಳಗೆ ಬಿದ್ದು ಗಾಯ ಮಾಡಿಕೊಂಡರು. ಅವರನ್ನು ಆಸ್ಪತ್ರೆಗೆಂದು ಹಿಮಾಂಶು ಭಟ್ ಮತ್ತು ಆತನ ಸಹೋದರಿ ಕರೆದುಕೊಂಡು ಹೋದರು. ಈ ವೇಳೆ ನನ್ನ ಫೋನ್ ತೆಗೆದುಕೊಂಡು ಹೋಗಿದ್ದರು.

    ಇದೇ ಸಂದರ್ಭದಲ್ಲಿ ರವಿರಂಜನ್ ಫೋನ್ ತೆಗೆದುಕೊಂಡು ಬರುದಾಗಿ ಹೇಳಿ ಕ್ಯಾಬಿನ್ ನಲ್ಲಿ ಕರೆದುಕೊಂಡು ಹೋದನು. ಆದರೆ ದಾರಿ ಮಧ್ಯೆ ಬೆದರಿಕೆ ಹಾಕಿ ಕ್ಯಾಬ್ ಚಾಲಕನ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.

    ಈ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ.