Tag: Bangalore

  • ಹನುಮ ಜಯಂತಿಗೆ ಸಿಎಂ ಶುಭಾಶಯ – ಟಾಂಗ್ ಕೊಟ್ಟ ಬಿಜೆಪಿ

    ಹನುಮ ಜಯಂತಿಗೆ ಸಿಎಂ ಶುಭಾಶಯ – ಟಾಂಗ್ ಕೊಟ್ಟ ಬಿಜೆಪಿ

    ಬೆಂಗಳೂರು: ಇಂದು ಹನುಮ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ.

    “ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಶ್ರದ್ಧೆ, ಭಕ್ತಿ ಹಾಗೂ ಧೈರ್ಯದ ಸಂಕೇತವಾದ ಹನುಮ ಜಯಂತಿಯಂದು ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ, ಭಗವಂತನ ಆಶೀರ್ವಾದ ನಾಡಿನ ಎಲ್ಲ ಜನರ ಮೇಲಿರಲಿ ಎಂದು ಹಾರೈಸುತ್ತೇನೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ವಚನಗಳನ್ನು ಬಳಸಿಕೊಂಡು ಕೈ, ಕಮಲ ಟಾಂಗ್!

    ಹನುಮ ಜಯಂತಿಗೆ ಶುಭಾಶಯ ಕೋರಿದ ಸಿಎಂಗೆ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ ಟಾಂಗ್ ನೀಡಿದ್ದು, “ಟ್ವಿಟ್ಟರ್ ನಲ್ಲಿ ಶುಭಾಶಯ ಕೋರುವುದು ಹಾಗಿರಲಿ ಸರ್. ಗಣೇಶ ಚತುರ್ಥಿ, ಹನುಮ ಜಯಂತಿ, ರಾಮನವಮಿ ಹೀಗೆ ಎಲ್ಲ ಹಬ್ಬಗಳ ಆಚರಣೆಗೆ ಸರ್ಕಾರದಿಂದ ನೂರು ತೊಡಕನ್ನು ತಂದು. ಈಗ ಮಾತ್ರ ಟ್ವಿಟ್ಟರ್ ನಲ್ಲಿ ಶುಭಾಶಯ ಕೋರುತ್ತಿರಲ್ಲ. ಏನು ಅನ್ನಿಸುವುದಿಲ್ಲವಾ ಎಂದು ಪ್ರಶ್ನಿಸಿ ಸಿಎಂ ಟ್ವೀಟ್ ಗೆ ರೀ ಟ್ವೀಟ್ ಮಾಡಿದೆ.

  • ಗಡಿ ದಾಟಿದ `ಸಾರಥಿ’ – ಸದ್ದಿಲ್ಲದೆ ಅಲ್ಲಿ ಹಬ್ಬಿಸಿದರಲ್ಲ ಕನ್ನಡದ ಕೀರ್ತಿ!

    ಗಡಿ ದಾಟಿದ `ಸಾರಥಿ’ – ಸದ್ದಿಲ್ಲದೆ ಅಲ್ಲಿ ಹಬ್ಬಿಸಿದರಲ್ಲ ಕನ್ನಡದ ಕೀರ್ತಿ!

    ಬೆಂಗಳೂರು: ಚಾಲೆಂಜಿಂಗ್‍ಸ್ಟಾರ್ ಮತ್ತೆ ಮತ್ತೆ ಹೊಸ ಹೊಸ ದಾಖಲೆಯನ್ನು ಮಾಡುತ್ತಲೇ ಇದ್ದಾರೆ. ಒಂದು ಮುಗಿಯಿತು ಎಂದಾಕ್ಷಣ ಇನ್ನೊಂದು ಬಾವುಟ ಹಾರಿಸುತ್ತಾರೆ. ಹೀಗೆ ಒಂದೊಂದು ಸಾಹಸಕ್ಕೆ ದರ್ಶನ್ ವೃತ್ತಿ ಬದುಕು ಸಾಕ್ಷಿಯಾಗಿದೆ.

    ವರ್ಷಕ್ಕೆ ಒಂದೇ ಒಂದು ಸಿನಿಮಾ ಮಾಡಿದರೂ ಅದರಿಂದಲೇ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ. ದರ್ಶನ್ ಅಂದರೆ ಸಾಕು ಅಭಿಮಾನಿಗಳು ಎದೆ ಉಬ್ಬಿಸುತ್ತಾರೆ. ಅವರ ಒಂದು ಸಿನಿಮಾ ರಿಲೀಸ್ ಆಗುತ್ತದೆ ಅಂದರೆ ಸಾಕು ಒಂದು ತಿಂಗಳ ಮುಂಚೆಯೇ ದಚ್ಚು ಅಭಿಮಾನಿ ಸಂಘಗಳು ಹಬ್ಬ ಮಾಡಲು ಸಜ್ಜಾಗುತ್ತವೆ. ಕಟೌಟು, ಹೂವಿನ ಹಾರ, ಹಾಲಿನ ಅಭಿಷೇಕ, ಅನ್ನ ಸಂತರ್ಪಣೆ ಮಾಡಿಕೊಳ್ಳುತ್ತಾರೆ.

    ಕನ್ನಡ ಚಿತ್ರಗಳು ಈಗ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶದಲ್ಲಿ ತೆರೆ ಕಾಣುವುದರಿಂದ ಹಿಡಿದು ಪರಭಾಷೆಗೆ ಡಬ್ ಆಗುವವರೆಗೆ ನಮ್ಮ ಚಿತ್ರರಂಗ ಬೆಳೆದಿದೆ. ಕನ್ನಡದ ಟಾಪ್ ಸ್ಟಾರ್ ಗಳ ಎಲ್ಲಾ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗುತ್ತವೆ. ಅಲ್ಲಿಯ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತವೆ. ಕೆಲವೇ ತಿಂಗಳಲ್ಲಿ ಎರಡು ಮೂರು ಬಾರಿ ಟೆಲಿಕಾಸ್ಟ್ ಆಗುವ ಈ ಸಿನಿಮಾಗಳು ಭರ್ತಿ ಲಾಭ ಕೂಡ ತಂದು ಕೊಡುತ್ತವೆ. ಸುದೀಪ್, ಪುನೀತ್, ಯಶ್, ಉಪೇಂದ್ರ ಸೇರಿದಂತೆ ಎಲ್ಲರ ಸಿನಿಮಾಗಳಿಗೆ ಅಲ್ಲಿ ಬೇಡಿಕೆ ಇದೆ.

    ವರ್ಷಗಳ ಹಿಂದೆ ವಿರಾಟ್ ಸಿನಿಮಾ ರಿಲೀಸ್ ಆಗಿತ್ತು. ಈಗ ಅದೇ ಸಿನಿಮಾ ಹಿಂದಿಗೆ ಡಬ್ ಆಗಿದೆ. ಖಾಸಗಿ ವಾಹಿನಿಗಳಲ್ಲಿ ಪ್ರಸಾರ ಕಂಡಿದೆ. ಅದಕ್ಕಿಂತ ಹೆಚ್ಚಾಗಿ ಹೊಸ ದಾಖಲೆಯನ್ನು ಯುಟ್ಯೂಬ್‍ ನಲ್ಲಿ ಬರೆದಿದೆ. ಕೆಲವೇ ದಿನಗಳಲ್ಲಿ ವಿರಾಟ್‍ನ ಹಿಂದಿ ಡಬ್ಬಿಂಗ್ ಸಿನಿಮಾವನ್ನು ಎಂಬತ್ತು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.

    ದರ್ಶನ್ ವೃತ್ತಿ ಬದುಕಿನಲ್ಲಿ ಇದು ಹೊಸ ಇತಿಹಾಸ. ಕನ್ನಡದ ನಾಯಕನ ಚಿತ್ರವೊಂದು ಇಷ್ಟೊಂದು ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗಿದ್ದು ಇದೇ ಮೊದಲಲ್ಲ. ಆದರೆ ಕೆಲವೇ ದಿನಗಳಲ್ಲಿ ಇಷ್ಟೊಂದು ಜನರು ನೋಡಿದ್ದಾರೆ. ಈ ಹಿಂದೆ ಇದೇ ದಚ್ಚು ಅಭಿನಯದ ಜಗ್ಗುದಾದಾ, ಐರಾವತ, ತಾರಕ್ ಸೇರಿದಂತೆ ಬಹುತೇಕ ಸಿನಿಮಾಗಳನ್ನು ಯೂ ಟ್ಯೂಬ್‍ನಲ್ಲಿ ಲಕ್ಷಕ್ಕೂ ಅಧಿಕ ಜನ ನೋಡಿದ್ದರು. ಆ ಸಾಲಿಗೆ ಈಗ ವಿರಾಟ್ ಕೂಡ ಸೇರಿದೆ.

  • ಫ್ರೀಜರ್ ಬೇಡ, 2 ಸಾವಿರ ರೂ. ಖರ್ಚು ಮಾಡಿದ್ರೆ ಬಹುದಿನಗಳ ಕಾಲ ಶವ ರಕ್ಷಿಸಬಹುದು!

    ಫ್ರೀಜರ್ ಬೇಡ, 2 ಸಾವಿರ ರೂ. ಖರ್ಚು ಮಾಡಿದ್ರೆ ಬಹುದಿನಗಳ ಕಾಲ ಶವ ರಕ್ಷಿಸಬಹುದು!

    ಬೆಂಗಳೂರು: ವ್ಯಕ್ತಿ ಮೃತಪಟ್ಟರೆ ಸಂಬಂಧಿಕರು ಬರುವವರೆಗೂ ಶವ ಕೆಡದಂತೆ ಕಾಪಾಡುವುದು ದೊಡ್ಡ ಖರ್ಚಿನ ಕೆಲಸ. ಆದರೆ ಇಲ್ಲೊಬ್ಬರು ಕೇವಲ 2 ಸಾವಿರ ರೂಪಾಯಿಯಲ್ಲಿ ಶವ ಕೆಡದಂತೆ ಯಾವ ಫ್ರಿಜರ್ ನಲ್ಲೂ ಇಡದೇ ಕಾಪಾಡುವ ವಿಧಾನವನ್ನು ಕಂಡುಹಿಡಿದಿದ್ದರೆ.

    ಡಾ.ದಿನೇಶ್ ಇವರು ಕಡಿಮೆ ಖರ್ಚಿನಲ್ಲಿ ಮೃತದೇಹವನ್ನು 10 ರಿಂದ 15 ವರ್ಷಗಳು ಕೆಡದಂತೆ ಹಾಗೂ ವಾಸನೆ ಬಾರದಂತೆ ಸಂರಕ್ಷಿಸಿಡುವ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಡಾ.ದಿನೇಶ್ ಈ ಸಂಶೋಧನೆಯನ್ನು ಹಾವಿನ ಮೇಲೆ ವಿಶೇಷ ರಾಸಾಯನಿಕವನ್ನು 10 ವರ್ಷದ ಹಿಂದೆಯೇ ಪ್ರಯೋಗಿಸಿದ್ದು, ಇಂದಿಗೂ ಹಾವು ಚೂರೂ ಸುಕ್ಕಾಗದೇ ಜೀವಂತವಿರುವಂತೆ ಭಾಸವಾಗುತ್ತಿದೆ.

    ಈಗ ತನ್ನ ಸಂಶೋಧನೆಯ ಪ್ರಾತ್ಯಕ್ಷಿಕೆಯನ್ನು ನಾನಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಖಾಸಗಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ದಿನೇಶ್ ಅವರು ನಡೆಸಿಕೊಟ್ಟಿದ್ದಾರೆ. 10 ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಶವವನ್ನು ಮುಂದಿಟ್ಟುಕೊಂಡು ದಿನೇಶ್ ಅವರು ಈಗ ಸಂಶೋಧನೆಯನ್ನು ವಿವರಿಸಿದ್ದಾರೆ.

    ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ದಾನ ಕೊಟ್ಟ ಶವಗಳನ್ನು ಕೆಮಿಕಲ್ಸ್ ನಲ್ಲಿ ಮುಳುಗಿಸಿಟ್ಟು ಕೆಡದಂತೆ ಕಾಪಾಡಲು ಹೆಚ್ಚಿನ ಹಣ ಖರ್ಚಾಗುತ್ತಿತ್ತು. ಆದರೆ ಡಾ. ದಿನೇಶ್ ಶವ ಸಂರಕ್ಷಣೆಗೆ ಕೇವಲ 2 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗಾಗಿ ಈ ಸಂಶೋಧನೆಯಿಂದ ವೈದ್ಯಕೀಯ ಕಾಲೇಜು ಮತ್ತು ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಸಂಶೋಧನಾ ವಿದ್ಯಾರ್ಥಿನಿ ಪವಿತ್ರ ಹೇಳಿದ್ದಾರೆ.

    https://www.youtube.com/watch?v=yGCm67SXFx8

  • ಕ್ಷುಲ್ಲಕ ಕಾರಣಕ್ಕೆ ನಿಶ್ಚಿತಾರ್ಥ ಬಳಿಕ ಮದ್ವೆ ಬೇಡ ಅಂದ- ವರನ ಮನೆ ಮುಂದೆ ವಧು ಪ್ರತಿಭಟನೆ

    ಕ್ಷುಲ್ಲಕ ಕಾರಣಕ್ಕೆ ನಿಶ್ಚಿತಾರ್ಥ ಬಳಿಕ ಮದ್ವೆ ಬೇಡ ಅಂದ- ವರನ ಮನೆ ಮುಂದೆ ವಧು ಪ್ರತಿಭಟನೆ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಿಶ್ಚಿತಾರ್ಥವಾದ ಬಳಿಕ ವರ ಮದುವೆಯಾಗುವುದಿಲ್ಲ ಎಂದು ಉಲ್ಟಾ ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಡರಹಳ್ಳಿಯ ನಿವಾಸಿ ಪುನೀತ್ ಯುವತಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಬ್ಯಾಡರಹಳ್ಳಿಯಲ್ಲಿ ನಿವಾಸಿ ಪುನೀತ್ ಹಾಗೂ ತಾವರೆಕೆರೆಯ ಪ್ರಸನ್ನ ಚರಿಪಾಳ್ಯದ ನಿವಾಸಿ ಶಾಂತಿಗೆ ಮದುವೆ ನಿಶ್ಚಯವಾಗಿತ್ತು.

    ನವೆಂಬರ್ 26ರಂದು ಹಿರಿಯರ ಸಮ್ಮುಖದಲ್ಲಿ ಶಾಂತಿ ಹಾಗೂ ಪುನೀತ್‍ಗೆ ನಿಶ್ಚಿತಾರ್ಥ ನೆರವೇರಿತ್ತು. ಅಂದೇ ಏಪ್ರಿಲ್ 21 ಹಾಗೂ 22ಕ್ಕೆ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ ಈಗ ವರ ಪುನೀತ್ ಮದುವೆಗೆ ನಿರಾಕರಿಸಿದ್ದು, ನೊಂದ ಶಾಂತಿ ಮತ್ತು ಅವರ ಷೋಷಕರು ಒಂದು ವಾರದಿಂದ ಪುನೀತ್ ಮನೆ ಎದುರು ಧರಣಿ ಕುಳಿತಿದ್ದರು.

    ಧರಣಿಯಿಂದ ಆಕ್ರೋಶಗೊಂಡ ವರ ಪುನೀತ್ ಹಾಗೂ ಆತನ ಸಹೋದರ ಬೀರೇಶ್ ಶುಕ್ರವಾರ ರಾತ್ರಿ ಧರಣಿ ಕುಳಿತಿದ್ದ ಶಾಂತಿ ಮತ್ತು ಆಕೆಯ ತಂದೆ, ತಾಯಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ನನ್ನ ತಾಯಿಗೆ ನೀನು ಬೈದಿದ್ದೀಯ ಅದಕ್ಕೆ ನಾನು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿದ್ದಾನೆ.

    ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಶಾಂತಿ ಷೋಷಕರು ದೂರು ನೀಡಿದ್ದಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನ ರಾಮಯ್ಯ ಪಾಲಿಟೆಕ್ನಿಕ್ ನಲ್ಲಿ ಟೆಕ್ನೋ ಫೆಸ್ಟ್

    ಬೆಂಗಳೂರಿನ ರಾಮಯ್ಯ ಪಾಲಿಟೆಕ್ನಿಕ್ ನಲ್ಲಿ ಟೆಕ್ನೋ ಫೆಸ್ಟ್

    ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತೆಗೆಯಲು ನಗರದ ರಾಮಯ್ಯ ಪಾಲಿಟೆಕ್ನಿಕ್ ಮಾರ್ಚ್ 22 ಮತ್ತು 23 ರಂದು “ಟೆಕ್ನೋ ಫೆಸ್ಟ್” ಆಯೋಜಿಸಿತ್ತು.

    ಫೆಸ್ಟ್ ನಲ್ಲಿ 15 ಪಾಲಿಟೆಕ್ನಿಕ್ ಕಾಲೇಜುಗಳು ಭಾಗವಹಿಸಿದ್ದು, 75 ತಾಂತ್ರಿಕ ಪ್ರೊಜೆಕ್ಟ್ ಗಳನ್ನು ಈ ಕಾರ್ಯಕ್ರಮಲ್ಲಿ ಪ್ರದರ್ಶನಗೊಂಡಿತು. ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್, ಕಂಪ್ಯೂಟರ್ ಸೈನ್ಸ್ ಹಾಗೂ ಫ್ಯಾಷನ್ ಟೆಕ್ನಾಲಜಿ ವಿಭಾಗದ ತಾಂತ್ರಿಕ ಸಂಶೋಧನೆಗಳು ಪ್ರದರ್ಶನಗೊಂಡವು.

    ಯುವ ಪ್ರತಿಭೆಗಳ ಈ ಪ್ರೊಜೆಕ್ಟ್ ಗಳು ತೀರ್ಪುಗಾರರ, ಉದ್ಯಮ ಪ್ರತಿನಿಧಿಗಳ ಮೆಚ್ಚುಗೆಗೆ ಕಾರಣವಾಯಿತು. ತರಗತಿಗಳ ಅಭ್ಯಾಸಗಳನ್ನು ಹೊರತುಪಡಿಸಿ ವಿಧ್ಯಾರ್ಥಿಗಳಿಗೆ ಹೊಸ ತಾಂತ್ರಿಕ ಸಂಶೋಧನೆಗಳನ್ನು ಪ್ರದರ್ಶಿಸಲು “ಟೆಕ್ನೋ ಫೆಸ್ಟ್-18” ಒಂದು ವೇದಿಕೆಯಾಗಿತ್ತು.

    ಉತ್ತಮ ತಾಂತ್ರಿಕ ಸಂಶೋಧನೆಗಳನ್ನು ಗುರುತಿಸಿ ತಂತ್ರಜ್ಞಾನವನ್ನು ಸಾಮಾನ್ಯ ಜನಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಯಯ್ಯ ಸಂಸ್ಥೆ ಈ ಫೆಸ್ಟ್ ಆಯೋಜಿಸಿತ್ತು.

  • ರಾಜರಥ ಸಿನಿಮಾ ವಿರೋಧಿಗಳಿಗೆ 2 ಪುಟ ರಿವ್ಯೂ ಬರೆದು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ

    ರಾಜರಥ ಸಿನಿಮಾ ವಿರೋಧಿಗಳಿಗೆ 2 ಪುಟ ರಿವ್ಯೂ ಬರೆದು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ

    ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ‘ರಾಜರಥ’ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಈ ಚಿತ್ರದ ರಿವ್ಯೂ ಮಾತ್ರ ಉತ್ತಮವಾಗಿ ಬಂದಿರಲಿಲ್ಲ.

    ಈ ಚಿತ್ರಕ್ಕೆ ಬಹುತೇಕ ನೆಗಟೀವ್ ರಿವ್ಯೂ ಸಿಕ್ಕಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಟ್ವಿಟರ್ ನಲ್ಲೂ ಬಹಳಷ್ಟು ಮಂದಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಇಲ್ಲ ಎಂದಿದ್ದರು. ಇದೆಲ್ಲದರ ಪರಿಣಾಮ ಪ್ರೇಕ್ಷಕರು ಚಿತ್ರಮಂದಿರದ ಕಡೆ ತಲೆ ಹಾಕಿರಲಿಲ್ಲ. ಇದೀಗ ಕನ್ನಡದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ‘ರಾಜರಥ’ ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಸ್ವತಃ ಈ ಚಿತ್ರದ ರಿವ್ಯೂ ಬರೆದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಕ್ಷಿತ್ ಬರದಿರುವ ರಿವ್ಯೂ:
    ನಾನು ನಿನ್ನೆ ಸಂಜೆ ಚಿತ್ರ ನೋಡಿದ್ದೇನೆ. ಕೆಲವು ದೋಷಗಳ ನಡುವೆಯೂ ಈ ಚಿತ್ರ ಇಷ್ಟವಾಗುತ್ತೆ. ರಿವ್ಯೂಗಳು ಏನು ಹೇಳಿವೆ ಅನ್ನೋದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಹಲವು ಭಾವನೆಗಳ ಮೂಲಕ ಈ ಚಿತ್ರವನ್ನು ನಿರ್ಮಿಸಿರುವ ನಿರ್ದೇಶಕ ಅನೂಪ್ ಭಂಡಾರಿ ಪ್ರತಿಭೆಯನ್ನು ನಾವು ಮೆಚ್ಚಲೇಬೇಕು. ನಾನು ಥಿಯೇಟರ್‍ಗೆ ಎಂಟ್ರಿ ಕೊಟ್ಟಾಗ ನನ್ನ ಮೈಂಡ್‍ನಲ್ಲಿ ಈ ಚಿತ್ರದಲ್ಲಿಯ ತಪ್ಪಗಳೇನು? ಯಾಕೆ ಈ ರೀತಿ ಕೆಟ್ಟ ರಿವ್ಯೂ ಬರೆದಿದ್ದಾರೆ? ಒಬ್ಬ ಫಿಲ್ಮ್ ಮೇಕಿಂಗ್‍ನ ವಿದ್ಯಾರ್ಥಿಯಾಗಿ ಇದನ್ನು ಕಲಿಯಲು ನಾನು ಬಯಸಿದ್ದೆ. ಆದರೆ, ಈ ಚಿತ್ರ ನೋಡಿದ ಮೇಲೆ ಅನೂಪ್ ಭಂಡಾರಿಯ ಟಾಲೆಂಟ್ ಬಗ್ಗೆ ಮೆಚ್ಚುಗೆಯಾಯಿತು ಎಂದಿದ್ದಾರೆ.

    ಅನೂಪ್ ಒಬ್ಬ ಪ್ರತಿಭಾವಂತ ನಿರ್ದೇಶಕ ಅನ್ನೋದರಲ್ಲಿ ಎರಡನೇ ಮಾತು ಬೇಡ. ಬಾಲಿವುಡ್‍ನ ಚಿತ್ರಗಳ ನಿರ್ದೇಶನಕ್ಕೆ ಅವರಿಗೆ ಆಫರ್‍ಗಳು ಬಂದಿದ್ದವು. ಆದರೆ, ಅವುಗಳನ್ನು ತಿರಸ್ಕರಿಸಿ ಕನ್ನಡಕ್ಕಾಗಿ ಅವರು ಇಲ್ಲೆ ಉಳಿದುಕೊಂಡರು. ಕನ್ನಡ ಚಿತ್ರರಂಗ ಬೆಳೆಸಲು ನಮ್ಮ ಜತೆ ನಿಂತರು. ಇದೀಗ ಅವರ ಜತೆ ನಾವು ನಿಲ್ಲಬೇಕಾಗಿದೆ.

    ಒಬ್ಬ ನಿರ್ದೇಶಕ ಸುಂದರವಾದ ಕಲ್ಪನೆಯೊಂದಿಗೆ ಚಿತ್ರ ಮಾಡುತ್ತಾನೆ. ನೀವು ಒಂದು ಚಿತ್ರದ ಬಗ್ಗೆ ಕಳಪೆ ರಿವ್ಯೂ ಬರೆಯಲು ಕೇವಲ 10 ನಿಮಿಷ ತೆಗೆದುಕೊಳ್ಳುತ್ತೀರಿ. ಆದರೆ, ಒಂದು ಚಿತ್ರವನ್ನು ರೆಡಿ ಮಾಡಲು ಒಂದು ವರ್ಷ ಬೇಕಾಗುತ್ತೆ. ನಾನು ಅನೂಪ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರು ನನಗೆ ಅಷ್ಟು ಆತ್ಮಿಯರೂ ಅಲ್ಲ. ಆದರೆ, ಅವರ ಟಾಲೆಂಟ್‍ಗೆ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

    ಅನೂಪ್ ನನ್ನ ಗೆಳೆಯ ಇರಬಹುದು. ಹೆಚ್ಚು ಎಂದರೆ ನಾವು 5 ರಿಂದ 10 ಸಲ ಭೇಟಿಯಾಗಿರುತ್ತೇವೆ. ಇದಕ್ಕಾಗಿ ಅವರನ್ನು ಬೆನ್ನುತಟ್ಟುತ್ತಿದ್ದೇನೆ ಎಂದು ಭಾವಿಸುವುದು ಬೇಡ ಎಂದು ಸ್ಪಷ್ಟಪಡಿಸಿರುವ ರಕ್ಷಿತ್, ರಾಜರಥ ಚಿತ್ರವನ್ನು ಅತ್ಯಂತ ಉತ್ಸಾಹ, ಕಠಿಣ ಪರಿಶ್ರಮದಿಂದ ನಿರ್ಮಿಸಲಾಗಿದೆ. ಚಿತ್ರದ ಬಗ್ಗೆ ಕಾಮೆಂಟ್ ಮಾಡುವುದು ತಪ್ಪಲ್ಲ. ಇದೊಂದು ಕೆಟ್ಟ ಚಿತ್ರ ಎನ್ನುವುದಾದರೆ ಓಕೆ. ಆದರೆ ಅನೂಪ್ ಪ್ರತಿಭೆ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ನಮಗ್ಯಾರಿಗೂ ಇಲ್ಲ ಎಂದಿದ್ದಾರೆ.

    ಅನೂಪ್ ಸ್ಯಾಂಡಲ್‍ವುಡ್‍ನ ಅಮೂಲ್ಯ ರತ್ನ ಇದ್ದಂತೆ. ಅವರೊಬ್ಬ ಆಸ್ತಿ. ಇಂತಹ ಪ್ರತಿಭೆಗಳನ್ನು ಹುರುದುಂಬಿಸಬೇಕಾಗಿದೆ. ಬಾಲಿವುಡ್ ಚಿತ್ರ ನಿರ್ದೇಶನಕ್ಕೂ ಅವರಿಗೆ ಅವಕಾಶ ಬಂದಿತ್ತು. ಆದರೆ ಅವರ ಒಲವು ಕನ್ನಡ ಚಿತ್ರಗಳ ಕಡೆಗಿತ್ತು. ಅಂದು ಅವರು ನಮ್ಮ ಪರವಾಗಿ ನಿಂತರು, ಇಂದು ನಾವು ಅವರ ಪರವಾಗಿ ನಿಲ್ಲೋಣ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

    https://twitter.com/rakshitshetty/status/979222138837061632

  • ಎಲೆಕ್ಷನ್, ಎಕ್ಸಾಂ ಎಫೆಕ್ಟ್- ಒಂದೇ ತಿಂಗ್ಳಲ್ಲಿ ಬನಶಂಕರಿ ದೇವಿಗೆ ಹರಿದುಬಂತು 30ಲಕ್ಷ ರೂ.!

    ಎಲೆಕ್ಷನ್, ಎಕ್ಸಾಂ ಎಫೆಕ್ಟ್- ಒಂದೇ ತಿಂಗ್ಳಲ್ಲಿ ಬನಶಂಕರಿ ದೇವಿಗೆ ಹರಿದುಬಂತು 30ಲಕ್ಷ ರೂ.!

    ಬೆಂಗಳೂರು: ಎಲೆಕ್ಷನ್ ಕಾವು ಒದೆಡೆಯಾದ್ರೆ, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಎಕ್ಸಾಂ. ಇದರಿಂದ ರಾಜ್ಯದ ದೇವರುಗಳೆಲ್ಲಾ ದಿಢೀರ್ ಶ್ರೀಮಂತವಾಗುತ್ತಿವೆ.

    ಮಹಾಸಮರಕ್ಕೆ ಅಖಾಡ ರೆಡಿಯಾಗುತ್ತಿದ್ದಂತೆ ರಾಜಕೀಯ ನಾಯಕರುಗಳು ಮತದಾರರ ಮನೆಗೆ ಹೋಗುತ್ತಿದ್ದಾರೆ. ಮತ್ತೆ ಇರೋ ಬರೋ ದೇವರ ಹುಂಡಿಗೆ ಜೈ.. ಜೈ ಅಂತ ದುಡ್ಡು ಹಾಕುತ್ತಿದ್ದಾರೆ. ಇನ್ನೊಂದು ಕಡೆ ಪರೀಕ್ಷೆ ಸೀಸನ್, ಮಕ್ಕಳು, ಪೋಷಕರು ಹರಕೆ ಹೊತ್ತು ಮಕ್ಕಳನ್ನು ಪಾಸ್ ಮಾಡಪ್ಪ ಎಂದು ದೇವರ ಹುಂಡಿಗೆ ಲಂಚದ ರೂಪದಲ್ಲಿ ಕಾಣಿಕೆ ಹಾಕಿದ್ದಾರೆ. ಇದರ ಎಫೆಕ್ಟ್ ಬನಶಂಕರಿಯಮ್ಮನ ಹುಂಡಿ ತುಂಬಿದ್ದು, ಮೊದಲ ಬಾರಿಗೆ ದಾಖಲೆ ಸೃಷ್ಟಿಸಿದೆ.

    ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಹುಂಡಿ ತೆರೆಯೋದು ಸಾಮಾನ್ಯ. ಆದರೆ ಮಾರ್ಚ್ ಇಯರ್ ಎಂಡ್ ಎಂದು ಒಂದೇ ತಿಂಗಳ ಅಂತರದಲ್ಲಿ ಹುಂಡಿ ತೆರೆದಾಗ ಬರೋಬ್ಬರಿ 30 ಲಕ್ಷ ಸಂಗ್ರಹವಾಗಿದೆ. ಸಾಮಾನ್ಯವಾಗಿ ಎರಡು ತಿಂಗಳಲ್ಲಿ 20 ರಿಂದ 25 ಲಕ್ಷ ದುಡ್ಡು ಸಂಗ್ರಹವಾಗುತ್ತಿದ್ದು, ಈ ಬಾರಿ ದಿಢೀರ್ ಅಂತ 30 ಲಕ್ಷ ರೂ. ಸಂಗ್ರವಾಗಿರುವುದಕ್ಕೆ ಅಧಿಕಾರಿಗಳು ಫುಲ್ ಖುಷಿಯಾಗಿದ್ದಾರೆ. ದುಡ್ಡಿನ ಜೊತೆಗೆ ಚಿನ್ನ ಬೆಳ್ಳಿಯೂ ದಾಖಲೆಯ ಮಟ್ಟದಲ್ಲಿ ಹುಂಡಿಗೆ ಬಿದ್ದಿದೆ.

    ಇನ್ನು ಪರೀಕ್ಷೆಗೆ ಮಕ್ಕಳು ಓದೇ ಇಲ್ಲ, ನೀನೇ ಕಾಪಾಡಬೇಕು ಪಾಸು ಮಾಡಿಸು ಎಂದು ಬೇಡಿಕೊಂಡು ಲೆಕ್ಕವಿಲ್ಲದಷ್ಟು ಪತ್ರ ಹುಂಡಿಗೆ ಬಿದ್ದಿದೆಯಂತೆ. ರಾಜಕೀಯ ಉನ್ನತಿ, ಶೈಕ್ಷಣಿಕ, ಮನೆ ಸಮಸ್ಯೆ ಏನೇ ಇದ್ದರೂ ಇಲ್ಲಿ ಹರಕೆ ಹೊತ್ತಿದರೆ ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರಿಗಿದೆ.

    ಎಲೆಕ್ಷನ್ ಪ್ರಾರಂಭದಲ್ಲಿಯೇ ಹಣ ದಾಖಲೆಯ ಮಟ್ಟ ಏರಿದೆ, ಮುಂದಿನ ತಿಂಗಳು ಇನ್ನು ಹೆಚ್ಚು ಹುಂಡಿ ದರ ಸಂಗ್ರಹವಾಗಬಹುದು ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

     

  • ಕೊನೆಗೂ ಕಿರಿಕ್ ಪಾರ್ಟಿಯ ಬೆಡಗಿಯ ಮೇಲೆ ರಾಜಮೌಳಿಯ ಕಣ್ಣು ಬಿತ್ತು!

    ಕೊನೆಗೂ ಕಿರಿಕ್ ಪಾರ್ಟಿಯ ಬೆಡಗಿಯ ಮೇಲೆ ರಾಜಮೌಳಿಯ ಕಣ್ಣು ಬಿತ್ತು!

    ಬೆಂಗಳೂರು: ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣಗೆ ಕನ್ನಡಕ್ಕಿಂತ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

    ಕನ್ನಡದಲ್ಲಿ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಗಶೌರ್ಯ ಅಭಿನಯದ ಚಲೋ ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ ಮೊದಲ ನೋಟದಲ್ಲೇ ತೆಲುಗು ಅಭಿಮಾನಿಗಳನ್ನು ಕೂಡ ಬೌಲ್ಡ್ ಮಾಡಿದ್ದರು. ಈಗ ಮತ್ತಷ್ಟು ತೆಲುಗು ಸಿನಿಮಾಗಳು ಕನ್ನಡದ ಹುಡುಗಿಯ ಪಾಲಾಗುತ್ತಿದೆ.

    ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿಯ ಕಣ್ಣು ಈಗ ರಶ್ಮಿಕಾ ಮಂದಣ್ಣ ಅವರ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಚಿತ್ರದ ನಂತರ ಮೆಗಾ ಸಿನಿಮಾ ಕೈಗೆತ್ತಿಕೊಂಡಿರುವ ರಾಜಮೌಳಿ ತೆಲುಗಿನ ಇಬ್ಬರು ಸೂಪರ್ ಸ್ಟಾರ್ ನಟರ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ.

    ರಾಜಮೌಳಿ ಆಕ್ಷನ್ ಕಟ್ ಹೇಳಲಿರುವ ‘RRR’ ಪ್ರಾಜೆಕ್ಟ್ ಗೆ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಇದೆ. ರಾಮ್ ಚರಣ್ ತೇಜ್ ಮತ್ತು ಜೂನಿಯರ್ ಎನ್.ಟಿ.ಆರ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇಬ್ಬರಲ್ಲಿ ಒಬ್ಬರಿಗೆ ಜೋಡಿಯಾಗಬಹುದು ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದೆ.

    ಸದ್ಯದ ಮಾಹಿತಿ ಪ್ರಕಾರ ರಾಜಮೌಳಿಯ ಈ ದೊಡ್ಡ ಪ್ರಾಜೆಕ್ಟ್ ಗೆ ತೆಲುಗಿನ ನಟಿ ರಾಶಿ ಖನ್ನಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ತೆಲುಗಿನ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿರುವ ರಾಶಿ, ರಾಜಮೌಳಿ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ‘RRR’ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರಿದ್ದು, ಇಬ್ಬರು ನಾಯಕಿಯರು ಇರುವುದು ಖಚಿತ. ಹೀಗಾಗಿ ಆ ಇಬ್ಬರಿಗೆ ಸೂಕ್ತವಾದ ನಟಿಯರ ಅವಶ್ಯಕತೆ ಇದೆ. ಈಗಾಗಲೇ ರಾಶಿ ಖನ್ನಾ ಜೊತೆ ರಕುಲ್ ಪ್ರೀತ್ ಸಿಂಗ್ ಮತ್ತು ಸಮಂತಾ ಅಕ್ಕಿನೇನಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಕೂಡ ಒಬ್ಬ ನಾಯಕಿಯಾಗುವ ಸಾಧ್ಯತೆ ಇದೆ ಎಂದು ಈ ಸುದ್ದಿ ಕೇಳಿ ಬರುತ್ತಿದೆ.

    ‘ಚಲೋ’ ಚಿತ್ರದಲ್ಲಿ ಮೋಡಿ ಮಾಡಿದ್ದ ರಶ್ಮಿಕಾ ಮಂದಣ್ಣ ಈಗ ನಾನಿ ವಿಜಯ ದೇವರಕೊಂಡ ಅಭಿನಯದ ಚಿತ್ರದಲ್ಲೂ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.

    ಈಗಾಗಲೇ RRR ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ಮುಗಿಸಿರುವ ರಾಜಮೌಳಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. ಮತ್ತೊಂದೆಡೆ ರಾಮ್ ಚರಣ್ ‘ರಂಗಸ್ಥಲಂ’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಎನ್.ಟಿ.ಆರ್ ತ್ರಿವಿಕ್ರಮ ಶ್ರೀನಿವಾಸ್ ಜೊತೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಬಹುಶಃ ಈ ವರ್ಷವೇ ಸೆಟ್ಟೇರಲಿದ್ದು, ಮುಂದಿನ ವರ್ಷ ಈ ಚಿತ್ರ ತೆರೆಕಾಣಬಹುದು.

  • ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಟಿ ಜಯಂತಿಯ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

    ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಟಿ ಜಯಂತಿಯ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಅಸ್ತಮಾದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜಯಂತಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ.

    ಸೋಮವಾರ ಸ್ಯಾಂಡಲ್‍ವುಡ್ ಅಭಿನಯ ಶಾರದೆ ಜಯಂತಿ ಅವರು ಅಸ್ವಸ್ಥರಾಗಿದ್ದು, ಸುಮಾರು ಬೆಳಗ್ಗೆ 11 ಗಂಟೆಗೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ್ದು, ಜಯಂತಿ ಅವರ ಆರೋಗ್ಯ ವಿಚಾರಿಸಿದ್ದಾರೆ.

    ಜಯಂತಿ ಅವರು ಹಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದರು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಯಂತಿ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಭಾರತೀ ವಿಷ್ಣುವರ್ಧನ್, ಶ್ರೀನಾಥ್, ಶಿವರಾಜ್ ಕುಮಾರ್, ದೊಡ್ಡಣ್ಣ ಮತ್ತು ನಾಗೇಂದ್ರ ಪ್ರಸಾದ್ ಸೇರಿದಂತೆ ಹಿರಿಯ ಕಲಾವಿದರು ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.

    ಜಯಂತಿ ಅವರು ಆಸ್ಪತ್ರೆಯಲ್ಲಿದ್ದಾಗೆ ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿತ್ತು. ಈ ಬಗ್ಗೆ ಅವರ ಪುತ್ರ ಕೃಷ್ಣಕುಮಾರ್, ಮಾಧ್ಯಮಗಳ ಜೊತೆ ಮಾತನಾಡಿ ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ಯಾವುದೇ ರೀತಿಯಲ್ಲಿ ಗಾಬರಿಯಾಗೋದು ಬೇಡ. ಅಮ್ಮನ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ. ಸದ್ಯ ವೈದ್ಯಕೀಯ ತಪಾಸಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

  • ಸಾಲು ಸಾಲು ರಜೆ ಬಸ್ ಪ್ರಯಾಣ ದರ ಏರಿಕೆ- ಪ್ರಯಾಣಿಕರ ಪರದಾಟ

    ಸಾಲು ಸಾಲು ರಜೆ ಬಸ್ ಪ್ರಯಾಣ ದರ ಏರಿಕೆ- ಪ್ರಯಾಣಿಕರ ಪರದಾಟ

    ಬೆಂಗಳೂರು: ಇಂದಿನಿಂದ ಸಾಲು ಸಾಲು ಸರ್ಕಾರಿ ರಜೆಗಳು ಬಂದಿದ್ದು, ಜನರು ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

    ಜನ ಸಂದಣಿ ಹೆಚ್ಚಿರುವ ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಪ್ರಯಾಣ ದರವನ್ನು ಹೆಚ್ಚಿಸಿದೆ. ಕೆಎಸ್‍ಆರ್ ಟಿಸಿ, ಖಾಸಗಿ ಬಸ್ ಮತ್ತು ವಿಶೇಷ ಬಸ್ ಸೇವೆಯ ಪ್ರಯಾಣ ದರವನ್ನು ಹೆಚ್ಚಿಸಲಾಗಿದ್ದು. ರಾಜ್ಯದಲ್ಲಿ ಸಂಚರಿಸುವ ಬಸ್ ದರ 20% ರಷ್ಟು ಏರಿಕೆಯಾಗಿದೆ.

    ಹೊರ ರಾಜ್ಯಕ್ಕೆ ಹೋಗುವ ಬಸ್ ನ ದರ 50% ರಷ್ಟು ಏರಿಕೆಯಾಗಿದೆ. ಇನ್ನೂ ಖಾಸಗಿ ಬಸ್ ದರ ಅಂತೂ ಮೂರು ಪಟ್ಟು ಅಧಿಕವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

    ಸಾರಿಗೆ ಸಂಸ್ಥೆಯ ಬದಲಾದ ಪ್ರಯಾಣ ದರ ಹೀಗಿದೆ.

                                                      ಪ್ರಯಾಣ ದರ (ರೂ.ಗಳಲ್ಲಿ)

                                                     ಸಾಮಾನ್ಯ ದಿನಗಳಲ್ಲಿ                ವಿಶೇಷ ದಿನಗಳಲ್ಲಿ
    1. ಬೆಂಗಳೂರು – ಬೆಳಗಾವಿ                     919                                        1081
    2. ಬೆಂಗಳೂರು – ಧರ್ಮಸ್ಥಳ                    676                                        805
    3. ಬೆಂಗಳೂರು – ತಿರುಪತಿ                      683                                       1008
    4. ಬೆಂಗಳೂರು – ಮುಂಬೈ                      1365                                      1985
    5. ಬೆಂಗಳೂರು – ಪಣಜಿ                         998                                        1444
    6. ಬೆಂಗಳೂರು – ಚೆನ್ನೈ                         893                                        1316