Tag: Bangalore

  • ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು – ಕ್ಷಮೆ ಕೇಳಿದ ಅನೂಪ್ ಭಂಡಾರಿ

    ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು – ಕ್ಷಮೆ ಕೇಳಿದ ಅನೂಪ್ ಭಂಡಾರಿ

    ಬೆಂಗಳೂರು: ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು ಎಂದಿದ್ದ ನಿರ್ದೇಶಕ ಅನೂಪ್ ಭಂಡಾರಿ ಈಗ ಕ್ಷಮೆ ಕೇಳಿದ್ದಾರೆ.

    ರಾಜರಥ ಸಿನಿಮಾದ ಸಂಬಂಧ ಮಹಿಳಾ ರೇಡಿಯೋ ಜಾಕಿಯೊಬ್ಬರು ನಡೆಸಿದ ಕಾರ್ಯಕ್ರಮದಲ್ಲಿ ನಿರ್ದೇಶಕ ಅನೂಪ್ ಭಂಡಾರಿ, ನಾಯಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ರಾಜರಥ ಸಿನಿಮಾ ನೋಡದವರು “ಕಚಡ ನನ್ ಮಕ್ಳು” ಎಂದು ಮೂವರು ಹೇಳಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ರಂಗಿತರಂಗ ಸಿನಿಮಾ ನಿರ್ದೇಶಿಸಿದ ಬಳಿಕ ಅನೂಪ್ ಭಂಡಾರಿ ರಾಜರಥವನ್ನು ನಿರ್ಮಿಸಿದ್ದರು. ಈ ಸಿನಿಮಾ ಎರಡು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ ‘ರಂಗಿತರಂಗ’ ರೇಂಜ್ ಗೆ ಈ ಸಿನಿಮಾ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈಗ ‘ರಾಜರಥ’ ಸಿನಿಮಾ ನೋಡದ ಪ್ರೇಕ್ಷಕರಿಗೆ ಅಣ್ಣ-ತಮ್ಮ ಇಬ್ಬರೂ “ಕಚಡ ನನ್ ಮಕ್ಳು” ಎಂದು ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.

    ಭಂಡಾರಿ ಸಹೋದರರು ಹೇಳಿದ್ದು ಏನು?
    ಸಂದರ್ಶನದ ನಡುವೆ ನಿರೂಪಕಿ “ರಾಜರಥ ಸಿನಿಮಾ ನೋಡದ ಪ್ರೇಕ್ಷಕರು______” ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ನನ್ ಮಕ್ಳು” ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು” ಎಂದು ಹೇಳಿದ್ದಾರೆ.

    ಕ್ಷಮೆ ಕೇಳಿದ ಅನೂಪ್ ಭಂಡಾರಿ:
    ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕು ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೆ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://twitter.com/anupsbhandari/status/980852507319574528

  • ಸ್ಯಾಂಡಲ್ ವುಡ್ ನಟಿಗೆ ಫಿದಾ ಆದ ಕಾಲಿವುಡ್ ನಟ

    ಸ್ಯಾಂಡಲ್ ವುಡ್ ನಟಿಗೆ ಫಿದಾ ಆದ ಕಾಲಿವುಡ್ ನಟ

    ಬೆಂಗಳೂರು: ಕಾಲಿವುಡ್ ನಟ ಆರ್ಯ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ‘ರಾಜ ರಾಣಿ’ ಸಿನಿಮಾ ಮಾಡಿರುವ ಈ ನಟ ಅನೇಕ ಹುಡುಗಿಯರ ಪಾಲಿಗೆ ಕನಸಿನ ರಾಜ ಆಗಿದ್ದಾರೆ. ಹೀಗಿರುವಾಗ ಕನ್ನಡದ ಒಬ್ಬ ನಟಿ ನೋಡಿ ಆರ್ಯ ಫಿದಾ ಆಗಿದ್ದಾರೆ.

    ಕಾಲಿವುಡ್ ಇಂಡಸ್ಟ್ರಿಯ ಸ್ಟಾರ್ ನಟನಾಗಿರುವ ಆರ್ಯಗೆ ಕನ್ನಡದಲ್ಲಿ ಯಾವ ನಟಿ ಇಷ್ಟ ಎಂಬುದು ಅನೇಕರಿಗೆ ಇರುವ ಕುತೂಹಲ. ಇತ್ತೀಚೆಗಷ್ಟೆ ಖಾಸಗಿ ವಾಹಿನಿಯ ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮಕ್ಕೆ ನಟ ಆರ್ಯ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ಕೇಳಿದ ತಮಾಷೆಯ ಪ್ರಶ್ನೆಗಳಿಗೆ ನಗು ನಗುತ್ತಾ ಆರ್ಯ ಉತ್ತರಿಸಿದ್ದಾರೆ.

    ಸಾಮಾನ್ಯವಾಗಿ ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಡೇಟಿಂಗ್ ಬಗ್ಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ. ಅದೇ ರೀತಿ ನಟ ಆರ್ಯಗೂ ಕೂಡ ಶಿವಣ್ಣ ಕಾರ್ಯಕ್ರಮದಲ್ಲಿ ನಟ ಆರ್ಯ ಅವರಿಗೆ ಕಿಸ್, ಹಗ್ ಮತ್ತು ಡೇಟ್ ಯಾರ ಜೊತೆ ಮಾಡುತ್ತೀರಾ ಎಂದು ಕೇಳಿದ್ದಾರೆ. ಅವರ ಪ್ರಶ್ನೆಗೆ ಆರ್ಯ ಡೇಟಿಂಗ್ ಪ್ರಶ್ನೆಗೆ ಆರ್ಯ ಡೇರಿಂಗ್ ಆಗಿ ಉತ್ತರ ನೀಡಿದ್ದಾರೆ.

    ಶಿವಣ್ಣ ”ನೀವು ಶ್ರಿಯಾ, ಶ್ರದ್ಧಾ ಶ್ರೀನಾಥ್ ಮತ್ತು ರಮ್ಯಾ ಇವರಲ್ಲಿ ಯಾರಿಗೆ ಕಿಸ್ ಕೊಡುತ್ತೀರಾ? ಯಾರ ಜೊತೆಗೆ ಡೇಟ್ ಹೋಗುತ್ತೀರಾ? ಹಾಗೂ ಯಾರಿಗೆ ಹಗ್ ಮಾಡುತ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಆರ್ಯ ”ನಾನು ಶ್ರಿಯಾಗೆ ಕಿಸ್ ಕೊಡುತ್ತೇನೆ, ಶ್ರದ್ಧಾ ಶ್ರೀನಾಥ್ ಅವರನ್ನು ಹಗ್ ಮಾಡಿಕೊಳ್ಳುತ್ತೇನೆ ಹಾಗೂ ರಮ್ಯಾ ಜೊತೆಗೆ ಡೇಟಿಂಗ್ ಹೋಗುತ್ತೇನೆ” ಎಂದು ಹೇಳಿದ್ದಾರೆ. ಇದನ್ನು ಓದಿಯಾವುದೇ ಷರತ್ತಿಲ್ಲ, ನನ್ನನ್ನು ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ: ನಟ ಆರ್ಯ

    ಕಾರ್ಯಕ್ರಮದಲ್ಲಿ ಆರ್ಯಗೆ ಶಿವಣ್ಣ ”ನಿಮಗೆ ಕನ್ನಡದಲ್ಲಿ ಫೇವರೇಟ್ ನಟಿ ಯಾರು?” ಎಂದು ಮತ್ತೊಂದು ಪ್ರಶ್ನೆ ಕೇಳಿದರು. ಆಗ ಆರ್ಯ ರಮ್ಯಾ ಹೆಸರನ್ನು ಹೇಳಿದಾರೆ. ”ರಮ್ಯಾ ಸಿನಿಮಾ ಮಾಡುವಾಗ ತುಂಬಾ ಹಾಟ್ ಆಗಿ ಇದ್ದರು. ಇದರೆ ಈಗ ಅವರು ಹೇಗಿದ್ದಾರೆ ಗೊತ್ತಿಲ್ಲ.” ಎಂದು ಹೇಳಿ ನಕ್ಕಿದ್ದಾರೆ.

    ಮನೋರಂಜನ್ ಮತ್ತು ವಿನಯ್ ರಾಜ್ ಕುಮಾರ್ ಇತ್ತೀಚೆಗಷ್ಟೆ ನಡೆದ ಸಂದರ್ಶನವೊಂದಲ್ಲಿ ಇಬ್ಬರು ರಮ್ಯಾ ಜೊತೆಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇದರ ಜೊತೆಗೆ ರಮ್ಯಾ ಮತ್ತೆ ಸಿನಿಮಾ ಮಾಡಬೇಕು, ಅವರ ನಟನೆ ತೆರೆ ಮೇಲೆ ನೋಡಬೇಕು ಎಂಬುದು ಕೂಡ ಅನೇಕ ಅಭಿಮಾನಿಗಳ ಆಸೆ ಆಗಿದೆ.

  • SSLC ಟಾಪರ್ ಆಗಿದ್ದ ಹುಡ್ಗ, ಇಂದು ಸ್ಯಾಂಡಲ್‍ ವುಡ್ ನ ಟಾಪ್ ರೌಡಿ

    SSLC ಟಾಪರ್ ಆಗಿದ್ದ ಹುಡ್ಗ, ಇಂದು ಸ್ಯಾಂಡಲ್‍ ವುಡ್ ನ ಟಾಪ್ ರೌಡಿ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಹುಡುಗ ಇಂದು ಸ್ಯಾಂಡಲ್ ವುಡ್ ನ ಟಾಪ್ ಖಳನಟನಾಗಿ ಮಿಂಚುತ್ತಿದ್ದಾರೆ.

    ಟಗರು ಸಿನಿಮಾದ ಯಶಸ್ವಿನ ಗುಂಗಿನಲ್ಲಿರುವ, ಚಿತ್ರದ ಡಾಲಿ ಪಾತ್ರದ ಮೂಲಕವೇ ಧನಂಜಯ್ ಗುರುತಿಸಿಕೊಳ್ಳುತ್ತಿದ್ದಾರೆ. ನಟ ಧನಂಜಯ್ ಅಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು. ಇಂದು ಟಗರು ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ರೌಡಿಯಾಗಿ ಮಿಂಚಿದ್ದಾರೆ.

    ಅರಸೀಕೆರೆ ತಾಲೂಕಿನ ಸೆಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಧನಂಜಯ್ ಓದಿದ್ದರು. ಅಂದು ಧನಂಜಯ್ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ 95.32% ಅಂಕಗಳನ್ನು ಪಡೆದುಕೊಂಡು ಟಾಪರ್ ಆಗಿದ್ದರು. ಟಾಪರ್ ಆಗಿದ್ದರಿಂದ ಧನಂಜಯ್ ಅವರ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಡೈರೆಕ್ಟರ್ ಸ್ಪೆಷಲ್, ಬಾಕ್ಸ್ ರ್, ರಾಟೆ ಮತ್ತು 2016 ರಲ್ಲಿ ಬಿಡುಗಡೆಗೊಂಡ ಪವನ್ ಒಡೆಯರ್ ನಿರ್ದೇಶನದ `ಜೆಸ್ಸಿ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ.

    ಇಲ್ಲಿಯವರೆಗೆ ಹೀರೋ ಪಾತ್ರ ಮಾಡುತ್ತಿದ್ದ ನಟ ಧನಂಜಯ್ ಸೂರಿ ನಿರ್ದೇಶನದ ಟಗರು ಸಿನಿಮಾದಲ್ಲಿ ಮೊದಲ ಬಾರಿಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ನನ್ನ ವೃತ್ತಿ ಜೀವನದಲ್ಲಿ ಇದು ಹೊಸ ಆರಂಭವಾಗಿದೆ. ನಾನು ಎಲ್ಲೇ ಹೋದರೂ ಇದೀಗ ಡಾಲಿ ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಅಭಿಮಾನಿಗಳ ರೆಸ್ಪಾನ್ಸ್ ಗೆ ಸಖತ್ ಖುಷಿಯಾಗುತ್ತಿದೆ. ಅಲ್ಲದೇ ಶಿವಣ್ಣನ ಜೊತೆ ನಟನೆ ಮಾಡಿರೋದು ತುಂಬಾ ಸಂತಸ ನೀಡಿದೆ ಎಂದು ಎಂದು ಧನಂಜಯ್ ಹೇಳಿದ್ದರು.

    ಟಗರಿನ ಡಾಲಿ ನಂತರ ದರ್ಶನ್ ಅವರ ಮುಂದಿನ ಚಿತ್ರ ಯಜಮಾನದಲ್ಲಿ ಕೂಡ ಧನಂಜಯ್ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ. ಇದು ಮತ್ತೊಂದು ಕುತೂಹಲಕಾರಿ ಪಾತ್ರವಾಗಿದ್ದು ದರ್ಶನ್ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.

  • ನೀನು 4 ಅಡಿ ನಾನು 6 ಅಡಿ ನೋಡೇ ಬಿಡೋಣ – ಜಮೀರ್ ಅಹ್ಮದ್‍ಗೆ ಅಲ್ತಾಫ್ ಪಂಥಾಹ್ವಾನ

    ನೀನು 4 ಅಡಿ ನಾನು 6 ಅಡಿ ನೋಡೇ ಬಿಡೋಣ – ಜಮೀರ್ ಅಹ್ಮದ್‍ಗೆ ಅಲ್ತಾಫ್ ಪಂಥಾಹ್ವಾನ

    – ಜೆಡಿಎಸ್ ಸೇರ್ಪಡೆ ಬೆನ್ನಲ್ಲೇ ಗುಡುಗು

    ಬೆಂಗಳೂರು: ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಮಾಜಿ ಪ್ರಧಾನಿ ದೇವೇಗೌಡ ಸಮ್ಮುಖದಲ್ಲಿ ಅಲ್ತಾಫ್ ಖಾನ್ ಜೆಡಿಎಸ್ ಕೈ ಹಿಡಿದ್ದಾರೆ.

    ಅಲ್ತಾಫ್ ಖಾನ್ ಕಳೆದ 25 ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಈಗ ಜಮೀರ್ ಅಹಮದ್ ವಿರುದ್ಧ ಜೆಡಿಎಸ್‍ನಿಂದ ಕಣಕ್ಕಿಳಿಯಲಿದ್ದಾರೆ. ಇಂದು ಮಾಜಿ ಪ್ರಧಾನಿ ದೇವೇಗೌಡ ಜೆಡಿಎಸ್ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದು, ಪಕ್ಷದ ಸದಸ್ಯತ್ವದ ಚೀಟಿಯನ್ನು ಕೂಡ ನೀಡಿದ್ದಾರೆ. ಅಷ್ಟೇ ಅಲ್ಲದೇ ಅಲ್ತಾಫ್ ಖಾನ್ ಜೊತೆ ಚಾಮರಾಜಪೇಟೆಯ ಅನೇಕ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

    ದೇವೇಗೌಡರು ನಮ್ಮ ತಂದೆ ಅಂತ ಹೇಳುತ್ತಾರೆ. ತಂದೆ ತಾಯಿಯನ್ನ ದೇವರು ರೀತಿ ನೋಡಿಕೊಳ್ಳಬೇಕು. ಆದರೆ ತಂದೆ ತಾಯಿ ಬಿಟ್ಟು ಹೋದ ನೀವು ನಮ್ಮ ಕ್ಷೇತ್ರವನ್ನು ಹೇಗೆ ನೋಡಿಕೊಳ್ಳುತ್ತೀರಿ. ಇಂಥವರಿಗೆ ನೀವು ಅವಮಾನ ಮಾಡಿದ್ದೀಯ. ನಿಮ್ಮನ್ನು ಇಡೀ ರಾಜ್ಯ ನೋಡುತ್ತಾ ಇದೆ. ನೀನು 4 ಅಡಿ ನಾನು 6 ಅಡಿ ನೋಡೇ ಬಿಡೋಣ ಎಂದು ಜಮೀರ್ ಅಹಮದ್ ಖಾನ್ ಗೆ ಅಲ್ತಾಫ್ ಖಾನ್ ಬಹಿರಂಗವಾಗಿಯೇ ಸವಾಲ್ ಎಸೆದರು. ಈ ಬಾರಿ ಜಮೀರ್ ಖಾನ್ ಗೆ ಠೇವಣಿ ಕಳೆದುಕೊಳ್ಳೋದು ಗ್ಯಾರೆಂಟಿ. ಪಕ್ಷ ಬಿಟ್ಟು ಹೋದವರೆಲ್ಲ ಠೇವಣಿ ಉಳಿಸಿಕೊಳ್ಳೊದಕ್ಕೆ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಉರ್ದುವಿನಲ್ಲಿ ಮಾತನಾಡುವಂತೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಗೆ ಶರವಣ ಮನವಿ ಮಾಡಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ಜಫ್ರುಲ್ಲಾ ಖಾನ್, ಕರ್ನಾಟಕದಲ್ಲಿ ಪ್ರತಿಯೊಬ್ಬ ಮುಸ್ಲಿಮರು ಮೊದಲು ಕನ್ನಡ ನಂತರ ಉರ್ದುವಿನಲ್ಲಿ ಮಾತನಾಡಬೇಕು ಎಂದು ಉತ್ತರಿಸಿದ್ದಾರೆ.

    ಜಫ್ರುಲ್ಲಾ ಖಾನ್ ಆದರೆ ಕೊನೆಗೆ ಉರ್ದುವಿನಲ್ಲಿ ಭಾಷಣ ಮಾಡಿದ್ದಾರೆ. ಒಬ್ಬ ಖಾನ್ ಆಚೆ ಹೋದ ಕಾರಣ ನಮ್ಮ ಕೈ ಖಾಲಿ ಆಯ್ತು ಎಂದು ಬೇಸರವಾಗಿತ್ತು. ಈಗ ಆ ಜಾಗವನ್ನು ಮತ್ತೊಬ್ಬ ಖಾನ್ ತುಂಬಿದ್ದಾರೆ. ನಂಬಿದವರಿಗೆ ಮೋಸ ಮಾಡುವುದು ನೈಜ ಮುಸ್ಲಿಂ ಧರ್ಮವಲ್ಲ. ಈಗ ಪಕ್ಷ ಬಿಟ್ಟು ಹೋದವರು ಪಕ್ಷಕ್ಕೆ ಮಾತ್ರವಲ್ಲ ಧರ್ಮಕ್ಕೂ ದ್ರೋಹ ಮಾಡಿದ್ದಾರೆ ಎಂದು ಜಫ್ರುಲ್ಲಾ ಹೇಳಿದರು. ಇದನ್ನು ಓದಿ: ಜಮೀರ್ ಅಹಮದ್ ಗೆ ಸೆಡ್ಡು ಹೊಡೆಯಲು ದೇವೇಗೌಡರಿಂದ ಬಿಗ್ ಪ್ಲಾನ್

    ನಾವು ಯುದ್ದಕ್ಕೆ ರೆಡಿಯಾಗಿದ್ದೇವೆ. ಬನ್ನಿ ನೋಡೋಣ ನಿಮ್ಮನ್ನು ಸಚಿವರು ಮಾಡಿದ್ದು ಜೆಡಿಎಸ್ ಪಕ್ಷ. ನಿಮಗೆ ಯಾವುದೇ ನೈತಿಕತೆ ಇಲ್ಲ. ಇದು ಬಕೆಟ್ ರಾಜಕಾರಣ ಅಲ್ಲ. ಕುಮಾರಣ್ಣ ನೀವು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೀರಿ. ಆದ್ರೆ ನೀವು ಮಾಡಿದ್ದಾದರೂ ಏನು? ಹಣಕ್ಕೋಸ್ಕರ ನಿಮ್ಮ ಮತ ಮಾರಿಕೊಂಡಿದ್ದೀರಿ ಎಂದು ಶರವಣ ಹೇಳಿದ್ದಾರೆ.

    ನನ್ನ ರಾಜಕೀಯ ಹೋರಾಟದಲ್ಲಿ ಇವತ್ತು ವಿಶೇಷ ದಿನ. ನಮ್ಮ ಪಕ್ಷದಿಂದ ಗೆದ್ದು ರಾಜ್ಯ ಆಳುತ್ತಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಹಂಬಲ ಇತ್ತು. ನಾವು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದೀವೆ. ಆದರೆ ಅವರು ಪಕ್ಷ ಬಿಟ್ಟು ಹೋದರು. ಇವತ್ತು ಇಡೀ ಪಕ್ಷವನ್ನೇ ನಾಶ ಮಾಡಬೇಕೆಂದು ಹೊರಟ್ಟಿದ್ದಾರೆ. ನಮ್ಮ ಪಕ್ಷದ ಅನೇಕ ಶಾಸಕರನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇವೇಗೌಡ ಟೀಕಿಸಿದ್ದಾರೆ.

  • ‘ಕೆಲವು ದಿನಗಳ ನಂತರ’ ಮಗು ಜೊತೆ ಬಂದ ಶುಭಾ ಪೂಂಜಾ…!!

    ‘ಕೆಲವು ದಿನಗಳ ನಂತರ’ ಮಗು ಜೊತೆ ಬಂದ ಶುಭಾ ಪೂಂಜಾ…!!

    ಬೆಂಗಳೂರು: ಮೊಗ್ಗಿನ ಮನಸ್ಸಿನ ಸುಂದರಿ ಶುಭಾ ಪೂಂಜಾ ‘ಕೆಲವು ದಿನಗಳ ನಂತರ’ ಎಂಬ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಗೂಗಲ್ ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ನಟಿಸುವ ಮೂಲಕ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

    ಇಂದಿನ ಯುವ ಜನತೆಯ ಸಮಸ್ಯೆಯ ಕುರಿತು “ಕೆಲವು ದಿನಗಳ ನಂತರ” ಎಂಬ ತಯಾರಾಗುತ್ತಿದ್ದು, ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾವಾಗಿದೆ. ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಟೀಸರ್ ಸಾಕಷ್ಟು ಭರವಸೆಯನ್ನು ಮೂಡಿಸಿದೆ. ಅಷ್ಟೇ ಅಲ್ಲದೇ ಟೀಸರ್ ನಲ್ಲಿ ಸೌಂಡ್ ಎಫೆಕ್ಟ್ ಉತ್ತವಾಗಿದ್ದು, ಸಿನಿಮಾ ಸಸ್ಪೆನ್ಸ್ ನಿಂದ ಕೂಡಿದೆ ಅಂತಾ ಚಿತ್ರತಂಡ ತಿಳಿಸಿದೆ. ಈ ಸಿನಿಮಾದ ವಿಶೇಷತೆ ಎಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.

    ಕೆಲವು ದಿನಗಳ ನಂತರ ಚಿತ್ರತಂಡದಲ್ಲಿ ಸಾಕಷ್ಟು ಹಾಸ್ಯ ಕಲಾವಿದರನ್ನು ಮತ್ತು ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಕಲಾವಿದರನ್ನು ನೋಡಿದ್ರೆ ಸಿನಿಮಾ ಫುಲ್ ಕಾಮಿಡಿ ಇದೆ ಅಂತಾ ತಿಳಿದ್ರೆ ತಪ್ಪಾಗುತ್ತದೆ. ಟೀಸರ್ ನಲ್ಲಿ ಹಾರರ್ ಸಿನಿ ಶೈಲಿಯಲ್ಲಿ ಮೂಡಿಬಂದಿದ್ದು ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ಮೂಲಕ 6 ತಿಂಗಳ ಮಗುವನ್ನು ಸಹ ಸೃಷ್ಟಿಸಲಾಗಿದೆ. ಕಥೆ ಮಗುವಿನ ಸುತ್ತ ಕೇಂದ್ರಿಕೃತವಾಗಿರುವ ಸಾಧ್ಯತೆಗಳಿವೆ. ಚಿತ್ರತಂಡ ಟೀಸರ್ ನಲ್ಲಿ ಎಲ್ಲಿಯೂ ಪಾತ್ರಗಳ ಪರಿಚಯ ಮತ್ತು ಕಥೆಯನ್ನು ಸಹ ಬಿಟ್ಟುಕೊಟ್ಟಿಲ್ಲ.

    ಕೆಲವು ದಿನಗಳ ನಂತರ ಮುತ್ತುರಾಜ್ ಹೆಚ್.ಪಿ ಅವರು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಶ್ರೀನಿ ರವರ ನಿರ್ದೇಶನವನ್ನು ಚಿತ್ರ ಹೊಂದಿದೆ. ಶುಭಾ ಪೂಂಜಾ, ಮಜಾ ಟಾಕೀಸ್ ಖ್ಯಾತಿಯ ಪವನ್, ಕಾಮಿಡಿ ಕಿಲಾಡಿ ಲೋಕೇಶ್, ದ್ರವ್ಯ ಶೆಟ್ಟಿ, ಜಗದೀಶ್, ಸೋನು ಪಾಟೀಲ್ ಮತ್ತು ಶರಣಯ್ಯ ಮುಂತಾದ ತಾರಾಬಳಗ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಸದ್ಯಕ್ಕೆ ಈ ಚಿತ್ರತಂಡ ಶೂಟಿಂಗ್ ಮುಗಿಸಿ, ಆಡಿಯೋ ರಿಲೀಸ್ ಮಾಡುವ ಹಂತದಲ್ಲಿದೆ. ಮೇ ಕೊನೆವಾರದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಟೀಸರ್ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡಿರುವ ‘ಕೆಲವು ದಿನಗಳ ನಂತರ’ ರಿಲೀಸ್ ಆದ್ಮೇಲೆ ನೋಡುಗರ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

  • 111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

    111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

    ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ(ಅನ್ನ, ಅಕ್ಷರ, ಜ್ಞಾನ)ದಾಸೋಹಿ, ಕಲಿಯುಗದ ಚೈತನ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು 111ನೇ ವರ್ಷಕ್ಕೆ ಕಾಲಿಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕನ್ನಡದಲ್ಲೇ ಶುಭಕೋರಿದ್ದಾರೆ.

    `ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸುದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ತಮ್ಮ ಸಾನ್ನಿಧ್ಯದಿಂದ ಭಕ್ತರನ್ನು ಅನುಗ್ರಹಿಸುತ್ತಾ, ಸಮಾಜಕ್ಕೆ ಅವರ ಮಾರ್ಗದರ್ಶನ ನಿರಂತರವಾಗಿರಲಿ ಅಂತ ಪ್ರಧಾನಿಯವರು ಶುಭಾಶಯ ತಿಳಿಸಿದ್ದಾರೆ.

    ತುಮಕೂರಿನ ಶ್ರೀ ಸಿದ್ದಗಂಗಾ ಮಠ ಭಾರತ ದೇಶದ ಹಿರಿಮೆಯಾಗಿದೆ. ಸಮಾಜಕ್ಕೆ ಶಕ್ತಿ ತುಂಬುತ್ತಾ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠ ಮುಂಚೂಣಿಯಲ್ಲಿದೆ. ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿರುವುದು ನನ್ನ ಸೌಭಾಗ್ಯ ಎಂದು ನಾನು ಭಾವಿಸಿದ್ದೇನೆ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದಂದು ಇಡೀ ದೇಶವೇ ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದೆ. ದೇಶದ ಅತ್ಯಂತ ವಂದನೀಯ ಮತ್ತು ಪೂಜನೀಯ ಗುರುಗಳಲ್ಲಿ ಪೂಜ್ಯ ಶ್ರೀಗಳು ಒಬ್ಬರಾಗಿದ್ದಾರೆ. ಅವರ ಅತ್ಯುತ್ತಮ ಸೇವಾಕಾರ್ಯಗಳು ತಲೆಮಾರುಗಳನ್ನು ತಲುಪಿದೆ ” ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೂಡ ಸ್ವಾಮೀಜಿಯವರಿಗೆ ವಿಶ್ ಮಾಡಿದ್ದು, `ನಡೆದಾಡುವ ದೇವರು, ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳಿಗೆ 111ನೇ ಜನ್ಮದಿನದಂದು ನಾಡಿನ ಜನತೆಯ ಪರವಾಗಿ ಪ್ರಣಾಮಗಳು. ಅವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯ, ಶ್ರೀಗಳಿಗೆ ದೀರ್ಘಾಯುಷ್ಯ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

     

  • ಪಿಸ್ತೂಲ್ ನಿಂದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿದ ಆರೋಪಿಗಳ ಕಾಲಿಗೆ ಗುಂಡು

    ಪಿಸ್ತೂಲ್ ನಿಂದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿದ ಆರೋಪಿಗಳ ಕಾಲಿಗೆ ಗುಂಡು

    ಬೆಂಗಳೂರು: ಭಾನುವಾರ ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಕಾರ್ಯಚರಣೆ ಶುರುವಾಗಿದ್ದು, ಇಬ್ಬರು ರೌಡಿಶೀಟರ್ ಮೇಲೆ ಗುಂಡು ಹಾರಿಸಿದ್ದಾರೆ.

    ಬೆಂಗಳೂರು ಹೊರವಲಯದಲ್ಲಿ ತಲಘಟ್ಟಪುರ ಪೊಲೀಸರು ಇಬ್ಬರು ರೌಡಿಶೀಟರ್ಸ್ ಮೇಲೆ ಶೂಟೌಟ್ ಮಾಡಿದ್ದಾರೆ. ಆರೋಪಿಗಳಾದ ಕೆಂಬತ್ತಹಳ್ಳಿ ಪರಮೇಶ್ ಮತ್ತು ಆತನ ಸಹಚರ ಸಂತೋಷ್ ಕಾಲಿಗೆ ಗುಂಡು ಹಾರಿಸಲಾಗಿದೆ.

    ಇಬ್ಬರು ರೌಡಿಶೀಟರ್ ಮೇಲೆ ಕೊಲೆ ಕೇಸ್ ದಾಖಲಾಗಿತ್ತು. ಈ ಸಂದರ್ಭದಲ್ಲಿ ಪರಮೇಶ್ ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಪಿಸ್ತೂಲ್ ನಿಂದ ಫೈರಿಂಗ್ ಮಾಡಿದ್ದಾರೆ. ಈ ದಾಳಿಯಲ್ಲಿ ಮುಖ್ಯ ಪೇದೆ ಸುರೇಶ್ ಮತ್ತು ಪೇದೆ ನೇಮಿನಾಥ್‍ಗೆ ಗಾಯವಾಗಿದೆ. ಇದರಿಂದ ಆತಂಕಗೊಂಡ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಸದ್ಯಕ್ಕೆ ಆರೋಪಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಕನ್ನಡದ ಬಿಗ್ ಸ್ಟಾರ್ ಗಳ ಸಿನಿಮಾದಲ್ಲಿ ಅವಕಾಶ ಪಡೆದ ಮಯೂರಿ

    ಕನ್ನಡದ ಬಿಗ್ ಸ್ಟಾರ್ ಗಳ ಸಿನಿಮಾದಲ್ಲಿ ಅವಕಾಶ ಪಡೆದ ಮಯೂರಿ

    ಬೆಂಗಳೂರು: ‘ಕೃಷ್ಣಲೀಲಾ’ ಖ್ಯಾತಿಯ ಮಯೂರಿ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಬ್ಯುಸಿಯಾಗುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

    ‘ಕರಿಯ-2’ ಚಿತ್ರದ ನಂತರ ‘ಗರ್ಲ್ ನಾಟ್ ಸಿನ್’ ಎಂಬ ಇಂಗ್ಲಿಷ್ ಮ್ಯೂಸಿಕ್ ಆಲ್ಬಂನಲ್ಲಿ ಮಯೂರಿ ಹೆಜ್ಜೆ ಹಾಕಿದ್ದರು. ಈ ಮಧ್ಯೆ ಕನ್ನಡದ ಬಿಗ್ ಪ್ರಾಜೆಕ್ಟ್ ಗಳಲ್ಲಿ ಮಯೂರಿ ನಟಿಸುತ್ತಿದ್ದು, ಈಗ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ದಕ್ಷಿಣ ಭಾರತದಲ್ಲಿ ಖ್ಯಾತ ಸಾಹಸ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಮಯೂರಿ ಎಂಟ್ರಿ ಕೊಟ್ಟಿದ್ದಾರೆ. ಇದು ಈಕೆಯ ಕನಸು ಕೂಡ ಆಗಿತ್ತು. ಇದೀಗ ಬಹುದಿನಗಳ ಆಸೆ ನೆರವೇರಿದ್ದು, ಸ್ಯಾಂಡಲ್ ವುಡ್ ಚಕ್ರವರ್ತಿಯ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ.

    ಪ್ರಸ್ತುತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಕೂಡ ಪಡೆದುಕೊಂಡಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಲಿರುವ ರುಸ್ತಂ ಚಿತ್ರದಲ್ಲಿ ನಟಿ ಮಯೂರಿ ನಟಿಸಲಿದ್ದಾರೆ. ಈಗಾಗಲೇ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದು, ಮುಖ್ಯ ಪಾತ್ರವೊಂದಕ್ಕೆ ಮಯೂರಿ ಕೂಡ ರುಸ್ತುಂ ಸೇರಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಯೂರಿ, ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ನನಗೆ ಈ ಸಿನಿಮಾ ಮೈಲಿಗಲ್ಲಾಗುವುದು ಎಂದು ಸಂತಸ ಹಂಚಿಕೊಂಡಿದ್ದಾರೆ.

    ಪ್ರಸ್ತುತ ಮಯೂರಿ ನಟ ಜಗ್ಗೇಶ್ ಅವರ ನಟಿಸುತ್ತಿರುವ 8ಎಂಎಂ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಈಗಾಗಲೇ ಸಂಚಾರಿ ವಿಜಯ್ ಅವರೊಂದಿಗೆ ಆಟಕ್ಕುಂಟು ಲೆಕ್ಕಲಿಲ್ಲ ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ ನಟಿ ಮಯೂರಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

  • ಮಕ್ಕಳನ್ನು ನೋಡಲು ಬರುತ್ತಿದ್ದಾಗ ಅಪಘಾತ- ಕಾರ್ ನಜ್ಜುಗುಜ್ಜಾದ್ರೂ ಪೋಷಕರು ಬಚಾವ್

    ಮಕ್ಕಳನ್ನು ನೋಡಲು ಬರುತ್ತಿದ್ದಾಗ ಅಪಘಾತ- ಕಾರ್ ನಜ್ಜುಗುಜ್ಜಾದ್ರೂ ಪೋಷಕರು ಬಚಾವ್

    ಬೆಂಗಳೂರು: ಸಾಲು ಸಾಲು ರಜೆ ಇದ್ದ ಕಾರಣ ತಮ್ಮ ಮಕ್ಕಳನ್ನು ನೋಡಲು ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದ ಪೋಷಕರ ಕಾರ್ ಅಪಘಾತಕ್ಕೀಡಾಗಿ ಪವಾಡ ರೀತಿಯಲ್ಲಿ ಪಾರಾದ ಘಟನೆಯೊಂದು ಇಂದು ಬೆಳಗ್ಗೆ ನಡೆದಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರ ದೇವರಹೊಸಹಳ್ಳಿ ಮೇಲ್ ಸೇತುವೆ ಬಳಿ ನಡೆದಿದೆ. ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.

    ಅಪಘಾತದ ರಭಸಕ್ಕೆ ಕಾರ್ ಸಂಪೂರ್ಣವಾಗಿ ನಜ್ಜು ಗುಜ್ಜಾಗಿ ರಸ್ತೆ ಸೇತುವೆಯ ಬ್ಯಾರಿಕೇಡ್ ಗೆ ಗುದ್ದಿದೆ. ಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

    ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

  • 42 ಆರೋಪಿಗಳ ಬಂಧನ – 140 ಬೈಕ್, 200ಗ್ರಾಂ ಚಿನ್ನ, ಹಣ, ಲ್ಯಾಪ್ ಟಾಪ್, ಮೊಬೈಲ್ ವಶ

    42 ಆರೋಪಿಗಳ ಬಂಧನ – 140 ಬೈಕ್, 200ಗ್ರಾಂ ಚಿನ್ನ, ಹಣ, ಲ್ಯಾಪ್ ಟಾಪ್, ಮೊಬೈಲ್ ವಶ

    ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ, ಸರಗಳ್ಳತನ ಪ್ರಕರಣಗಳನ್ನು ಬೇಧಿಸಿ 42 ಆರೋಪಿಗಳ ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ 1.6 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ. ಮಾರತ್ ಹಳ್ಳಿ, ಮಹದೇವಪುರ, ಎಚ್‍ಎಎಲ್ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಬಗ್ಗೆ ತನಿಖೆ ನಡೆಸಿ ಪೊಲೀಸರು 42 ಆರೋಪಿಗಳ ಬಂಧಿಸಿದ್ದು, ಬಂಧಿತರಿಂದ 140 ಬೈಕ್, 200 ಗ್ರಾಂ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್, ಒಂದು ಕಾರು, ಟೆಂಪೋ ಸೇರಿದಂತೆ ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಎಟಿಎಂಗೆ ಹಣ ಜಮೆ ಮಾಡಲು ಹೋಗಿ 52 ಲಕ್ಷ ಹಣ ದೋಚಿದ ಅಸಾಮಿ ಪರಮೇಶನನ್ನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ಅಷ್ಟು ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ವಿಧಾನಸಭಾ ಎಲೆಕ್ಷನ್ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಭದ್ರತೆ ವಹಿಸಲಾಗಿದೆ. ನಗರದಲ್ಲಿ ಪರವಾನಿಗೆ ಪಡೆದಿರುವ 8000 ವೆಪನ್ಸ್ ಇದೆ. ಈಗಾಗಲೇ 1500 ವೆಪನ್ ಗಳನ್ನ ಡಿಪಾಸಿಟ್ ಮಾಡಲಾಗಿದೆ. ಉಳಿದವರು ಆಯಾ ಠಾಣಾ ವ್ಯಾಪ್ತಿಗಳಲ್ಲಿ ವೆಪನ್ ಗಳನ್ನ ಡೆಪಾಸಿಟ್ ಮಾಡಿ ಅವಶ್ಯಕತೆ ಇದ್ದಲ್ಲಿ ಡಿಸಿಪಿಗೆ ಲೇಟರ್ ನೀಡುವಂತೆ ಸೂಚನೆ ನೀಡಿದ್ದಾರೆ.