ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಾಭಾ ಚುನಾವಣೆ ವೇಳೆ ಪ್ರಚಾರ ಮಾಡುವುದಿಲ್ಲ ಎಂದು ಸೆಂಚುರಿ ಸ್ಟಾರ್ ಶಿವಣ್ಣ ಹೇಳಿದ್ದಾರೆ.
ಡಾ. ರಾಜ್ ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋಗೆ ಬಂದಿದ್ದ ಶಿವರಾಜ್ ಕುಮಾರ್, ತಂದೆ ಸ್ಮಾರಕಕ್ಕೆ ಪೂಜೆಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.
ನಾನು ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲದೆ ನನ್ನ ಶ್ರೀಮತಿ ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ನನಗೆ ಶೂಟಿಂಗ್ ಇದ್ದು ಡೇಟ್ಸ್ ಇಲ್ಲದ ಕಾರಣ ನಾನು ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನ ಸ್ಮಾರಕ ಸೇರಿಸಿ ಎಲ್ಲೂ ಇಲ್ಲದ ಯೋಗ ಕೇಂದ್ರ ನಿರ್ಮಾಣ ಮಾಡ್ತೀವಿ: ರಾಘವೇಂದ್ರ ರಾಜ್‍ಕುಮಾರ್

ಇಂದು ವರನಟ ಡಾ. ರಾಜ್‍ಕುಮಾರ್ ಪುಣ್ಯಸ್ಮರಣೆ. 12 ನೇ ವರ್ಷ ಪುಣ್ಯಸ್ಮರಣೆಯನ್ನ ಸರಳವಾಗಿ ಆಚರಿಸಲು ಕುಟುಂಬವರ್ಗ ನಿರ್ಧರಿಸಿದ್ದು, ಶಿವರಾಜ್‍ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್‍ರಾಜ್‍ಕುಮಾರ್ ಸೇರಿದಂತೆ ಕುಟುಂಬವರ್ಗ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.
ರಾಜ್ ಪುಣ್ಯಸ್ಮರಣೆಗೆ ನೀತಿಸಂಹಿತೆ ಎಫೆಕ್ಟ್ ತಟ್ಟಿದ್ದು, ಸರಳವಾಗಿ ಪುಣ್ಯಸ್ಮರಣೆ ಆಚರಿಸಲು ನಿರ್ಧಾರ ಮಾಡಿದ್ದರು. ಹಾಗಾಗಿ ಪ್ರತಿವರ್ಷ ಸುಮಾರು 3 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಬಂದಿರುವುದರಿಂದ ರಾಜ್ ಕುಮಾರ್ ಪುಣ್ಯಸ್ಮರಣೆಯನ್ನ ಶಾಮಿಯಾನ, ಊಟದ ವ್ಯವಸ್ಥೆ ಇಲ್ಲದೆ ಮಾಡಲಾಗುತ್ತಿದೆ.
























