Tag: Bangalore

  • ಐಪಿಎಸ್ ಅಧಿಕಾರಿ ಸೇರಿದಂತೆ 22 ಪೊಲೀಸರ ಸಾವಿಗೆ ಕಾರಣನಾಗಿದ್ದ ವೀರಪ್ಪನ ಸಹಚರ ಸೈಮನ್ ಸಾವು

    ಐಪಿಎಸ್ ಅಧಿಕಾರಿ ಸೇರಿದಂತೆ 22 ಪೊಲೀಸರ ಸಾವಿಗೆ ಕಾರಣನಾಗಿದ್ದ ವೀರಪ್ಪನ ಸಹಚರ ಸೈಮನ್ ಸಾವು

    ಬೆಂಗಳೂರು: ಪಾಲರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಹಾಗು ವೀರಪ್ಪನ್ ಸಹಚರ ಸೈಮನ್ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಸಾವನ್ನಪ್ಪಿರುವ ಸೈಮನ್ ಮಾದಯ್ಯ 1993 ರಲ್ಲಿ ಐಪಿಎಸ್ ಆಧಿಕಾರಿ ರಾಂಬೋ ಗೋಪಾಲಕೃಷ್ಣ ಸೇರಿದಂತೆ 22 ಜನ ಎಸ್‍ಟಿಎಫ್ ಅಧಿಕಾರಿಗಳು ಸಾವಿಗೆ ಕಾರಣನಾಗಿದ್ದನು. ರಾಂಬೋ ಗೋಪಾಲಕೃಷ್ಣ ತಮ್ಮ ತಂಡದೊಂದಿಗೆ ಕಾಡುಗಳ್ಳ ವೀರಪ್ಪನನ್ನು ಹಿಡಿಯಲು ಸೊರ್ ಕಾಯ್‍ಮಡು ಅರಣ್ಯಕ್ಕೆ ತೆರಳಿದ್ದರು.

    ಈ ವೇಳೆ ನೆಲಬಾಂಬ್ ಸ್ಫೋಟಿಸುವುದರಲ್ಲಿ ಪ್ರವೀಣನಾಗಿದ್ದ ಸೈಮನ್ ಮಾದಯ್ಯನಿಗೆ ಹೇಳಿ ವೀರಪ್ಪನ್ ಸೂರ್‍ಕಾಯ್‍ಮಡುವಿನ ಬಾಂಬ್ ಹೂತಿಡಿಸಿದ್ದ. ರಾಂಬೋ ಗೋಪಾಲಕೃಷ್ಣ ಅರಣ್ಯ ಪ್ರದೇಶಕ್ಕೆ ಕಾಲಿಡುತ್ತಿದ್ದಂತೆ 14 ಕಡೆ ಬಾಂಬ್ ಸ್ಫೋಟ ನಡೆಸಿದ್ದನು. ಘಟನೆಯಲ್ಲಿ ಒಟ್ಟು 22 ಜನ ಎಸ್‍ಟಿಎಫ್ ಅಧಿಕಾರಿಗಳು ಸಾವನ್ನಪಿದ್ರು.

    ಈ ಪ್ರಕರಣ ಸಂಬಂಧ ಸೈಮನ್ ಮಾದಯ್ಯ ಸೇರಿದಂತೆ 4 ಜನರಿಗೆ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್ ವಿಧಿಸಿತು. ಅಂದಿನಿಂದ ಜೈಲು ಹಕ್ಕಿಯಾಗಿದ್ದ ಸೈಮನ್ ಮಾದಯ್ಯ ವಿಕ್ಟೋರಿಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇಂದು ಬೆಳಗ್ಗೆ ಮೃತ ಪಟ್ಟಿದ್ದಾನೆ.

  • ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮ್ಗೆ ಹೊಡೀತಿದ್ರು: ಗುಂಡೂರಾವ್ ವಿರುದ್ಧ ಸಿಂಹ ಕೆಂಡಾಮಂಡಲ

    ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮ್ಗೆ ಹೊಡೀತಿದ್ರು: ಗುಂಡೂರಾವ್ ವಿರುದ್ಧ ಸಿಂಹ ಕೆಂಡಾಮಂಡಲ

    ಬೆಂಗಳೂರು: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ.

    ದಿನೇಶ್ ಗುಂಡುರಾವ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಟ್ವಿಟ್ಟರ್ ನಲ್ಲಿ ಲೈವ್ ಗೆ ಬಂದು ಗುಂಡೂರಾವ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯೋಗಿ ಕರ್ನಾಟಕಕ್ಕೆ ಬಂದ್ರೆ ಚಪ್ಪಲಿಯಲ್ಲಿ ಹೊಡೆಯಿರಿ: ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ

    `ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಂತಹ ಮೇಣದ ಬತ್ತಿ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರು ತುಚ್ಚಾ ಮಾತುಗಳನ್ನು ಆಡಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂದಿದ್ದೀರಲ್ಲಾ ಗುಂಡೂರಾವ್ ಅವರೇ. ಯೋಗಿ ಬದಲು ಒಬ್ಬ ಮುಲ್ಲಾ ಅಥವಾ ಮೌಲ್ವಿ ಬಗ್ಗೆನೋ ಇದೇ ಮಾತನ್ನು ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬ್ಬು ಅವರೇ ಆ ಕೆಲಸವನ್ನು ನಿಮಗೆ ಮಾಡಿರುತ್ತಿದ್ದರು. ಮಾತನಾಡಬೇಕಾದರೆ ಸ್ವಲ್ಪ ಎಚ್ಚರಿಕೆ ಇರಬೇಕು. ನಾಲಿಗೆಯ ಮೇಲೆ ನಿಗಾ ಇರಬೇಕು. ಇಲ್ಲ ಅಂದರೆ ನಿಮಗೆ ತಕ್ಕ ಉತ್ತರ ಕೊಡಬೇಕಾಗುತ್ತದೆ’ ಎಂದು ಕೆಂಡಾಮಂಡಲರಾಗಿದ್ದಾರೆ.

    ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಮಾತನಾಡಿದ್ದರು. ಈ ವೇಳೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು. ಅವರು ಕರ್ನಾಟಕಕ್ಕೆ ಬಂದು ಭಾಷಣ ಮಾಡುತ್ತಾರೆ. ಈ ಬಾರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿಕೆ ನಿಡಿದ್ದರು.

  • ಕುರುಕ್ಷೇತ್ರದ ಅದ್ಧೂರಿ ಮೇಕಿಂಗ್ ರಿಲೀಸ್ – ನೋಡೋಕೆ ಮಸ್ತಾಗೈತೆ ಮುನಿರತ್ನ ಮೇಕಿಂಗ್

    ಕುರುಕ್ಷೇತ್ರದ ಅದ್ಧೂರಿ ಮೇಕಿಂಗ್ ರಿಲೀಸ್ – ನೋಡೋಕೆ ಮಸ್ತಾಗೈತೆ ಮುನಿರತ್ನ ಮೇಕಿಂಗ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಮಹತ್ವಕಾಂಕ್ಷೆಯ, ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಬರೆಯಲು ಸಿದ್ಧವಾಗಿರುವ `ಮುನಿರತ್ನ ಕುರುಕ್ಷೇತ್ರ’ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ರೆಬಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರ್ ಹಾಗೂ ಕುರುಕ್ಷೇತ್ರದ ಅಷ್ಟು ಕಲಾವಿದರು ಶೂಟಿಂಗ್ ಟೈಮಲ್ಲಿ ಹೇಗಿದ್ದರು. ಹೈದ್ರಾಬಾದ್‍ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ವೇಳೆ ಏನೆಲ್ಲಾ ಫನ್ ನಡೀಯಿತು. ನಿರ್ಮಾಪಕ ಮುನಿರತ್ನ ಚಿತ್ರತಂಡದ ಜೊತೆ ಹೇಗೆಲ್ಲಾ ಕಾಲ ಕಳೆದರೂ ಅನ್ನೋದನ್ನು ಮೇಕಿಂಗ್‍ನಲ್ಲಿ ತೋರಿಸಲಾಗಿದೆ.

    ಮುನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ’ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ನಿರ್ದೇಶಕ ನಾಗಣ್ಣ ಸಾರಥ್ಯದಲ್ಲಿ ಕುರುಕ್ಷೇತ್ರ ಅದ್ಧೂರಿಯಾಗಿ ಮೂಡಿಬಂದಿದ್ದು, ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ.

    ದುರ್ಯೋಧನ ಪಾತ್ರದಲ್ಲಿ ದರ್ಶನ್ ಮಿಂಚುತ್ತಿದ್ದು, ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  • ಗೆಲ್ಲಿಸಿದ ಪ್ರತಿನಿಧಿಯನ್ನು ಸುಮ್ನೆ ಬಿಡಬೇಡಿ, ಚೆನ್ನಾಗಿ ರುಬ್ಬಿ: ಯಶ್ ಸಲಹೆ

    ಗೆಲ್ಲಿಸಿದ ಪ್ರತಿನಿಧಿಯನ್ನು ಸುಮ್ನೆ ಬಿಡಬೇಡಿ, ಚೆನ್ನಾಗಿ ರುಬ್ಬಿ: ಯಶ್ ಸಲಹೆ

    ಬೆಂಗಳೂರು: ರಾಜಕಾರಣಕ್ಕೆ ಬರಲ್ಲ ಆದರೆ ಒಳ್ಳೆಯ ಅಭ್ಯರ್ಥಿಗೆ ಸರ್ಪೋಟ್ ಮಾಡುತ್ತೀನಿ ಅಂತ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದರು. ಆದ್ರೆ ಈಗ ಅವರು ಹೊಸ ಸೆನ್ಸೇಷನ್ ಸ್ಟೇಟ್‍ಮೆಂಟ್ ಕೊಟ್ಟಿದ್ದಾರೆ.

    ಪತ್ರಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಅವರು, ರಾಜಕಾರಣಿಗಳು ಚುನಾವಣಾ ಪ್ರಚಾರ ಅಂದ್ರೆ ಬರೀ ಕೋಟಿ ಕೋಟಿ ಹಣ ಖರ್ಚು ಮಾಡಿ, ದೊಡ್ಡ ದೊಡ್ಡ ಸಮಾವೇಷ ಮಾಡುವುದು ಅಷ್ಟೆ ಎಂದುಕೊಂಡಿದ್ದಾರೆ. ಒಬ್ಬ ಅಭ್ಯರ್ಥಿಗೆ ತಾನು ಸ್ಫರ್ಧಿಸುವ ಕ್ಷೇತ್ರಕ್ಕೆ ಏನು ಬೇಕು. ತಾನೂ ಏನು ಕೆಲಸ ಮಾಡಬೇಕು ಅನ್ನೋದೆ ಗೊತ್ತಿರುವುದಿಲ್ಲ. ಇಂಥವರನ್ನ ಜನ ತಿರಸ್ಕರಿಸಬೇಕು. ಮತದಾನ ಅನ್ನೋ ಪವರ್ ಫುಲ್ ಕಾರ್ಯವನ್ನು ಜನಸಾಮಾನ್ಯರು ಸಮರ್ಥ ವ್ಯಕ್ತಿಗೆ ಸಲ್ಲಿಸಬೇಕು. ಆಗಲೇ ಉತ್ತಮ ನಗರ, ಅತ್ಯುತ್ತಮ ನಾಡು, ಅದ್ಭುತ ದೇಶ ಕಟ್ಟಲು ಸಾಧ್ಯವೆಂದು ಮತದಾರರಿಗೆ ಸಲಹೆ ಕೊಟ್ಟಿದ್ದಾರೆ.

    ಯಾವುದಾದರೂ ಅಥವಾ ಯಾರಾದ್ರೂ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೊಂದಿಷ್ಟು ಕನಸುಗಳಿವೆ, ಜನರನ್ನು ಸಬಲರಾಗಿಸಬೇಕು. ಯಾರು ಸಮರ್ಥ ಅಭ್ಯರ್ಥಿ ಎಂದು ನನ್ನ ವಿವೇಚನೆ ಬಂದರೆ ಖಂಡಿತ ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಆದರೆ ಇನ್ನು ಅಂತಹ ಅಭ್ಯರ್ಥಿ ಸಿಕ್ಕಿಲ್ಲ ಅಂತ ಹೇಳಿದ್ರು.

    ಎಲೆಕ್ಷನ್‍ನಲ್ಲಿ ಗೆಲ್ಲಿಸಿದ ಪ್ರತಿನಿಧಿಯನ್ನು ಸುಮ್ನೆ ಬಿಟ್ಟು ಬಿಡುವುದಲ್ಲ. ಪ್ರತಿವಾರ, ಪ್ರತಿತಿಂಗಳು ಟಾರ್ಗೆಟ್ ಕೊಡಬೇಕು. ಆಯಾ ಕಾಲದಲ್ಲಿ ಆಗಬೇಕಾದ ಕೆಲಸ ಆಗಿಲ್ಲವೆಂದರೆ ಆ ಕ್ಷೇತ್ರದ ಹಿರಿಯರು, ಪ್ರಜ್ಞಾವಂತರು ಸಂಘಟನೆ ಮಾಡಿಕೊಂಡು ಪ್ರತಿನಿಧಿಯನ್ನ ಹಾಕ್ಕೊಂಡು ರುಬ್ಬಬೇಕು ಅಂದಿದ್ದಾರೆ.

    ಈಗ ನಡೆಯುತ್ತಿರುವ ಪ್ರಚಾರ ಹಾಗೂ ರಾಜಕಾರಣಿಗಳು ಪ್ರಚಾರ ನಡೆಸುತ್ತಿರುವ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳು ಕ್ಷೇತ್ರದ ಬಗ್ಗೆ, ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ, ಯುವಕರ ಉದ್ಯೋಗ ಸೃಷ್ಠಿ ಇಂಥಹ ವಿಚಾರಗಳಿಗೆ ಭರವಸೆ ಮಾತುಗಳನ್ನ ಆಡುತ್ತಿಲ್ಲ. ಬದಲಾಗಿ ಆ ಪಕ್ಷದವರು ಅಷ್ಟು ಭ್ರಷ್ಟಚಾರ ಮಾಡಿದ್ದಾರೆ. ಈ ಅಭ್ಯರ್ಥಿ ಅಷ್ಟು ಅಕ್ರಮ ಮಾಡಿದ್ದಾನೆ ಎಂದು ಕೆಸರೆರೆಚಾಟ ಮಾಡುತ್ತಿದ್ದಾರೆ ಹೊರತು ಆಯಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಇವೆಲ್ಲಾ ನಾನ್ ಸೆನ್ಸ್ ಅಂತ ಗರಂ ಆಗಿದ್ದಾರೆ.

    ನಾಡಿನಾದ್ಯಂತ ಎಲೆಕ್ಷನ್ ಕಾವು ಜೋರಾಗಿದೆ. ರಾಜಕೀಯ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿಯಲು ಫೇಮಸ್ ಸೆಲಬ್ರಿಟಿಗಳ ಮನೆ ಬಾಗಿಲು ಬಡೆಯುತ್ತಿವೆ. ಸ್ಯಾಂಡಲ್ ವುಡ್‍ನ ಕಲಾವಿದರ ಪೈಕಿ ಯಶ್ ಕೂಡ ಸಖತ್ ಫಾರ್ಮ್‍ನಲ್ಲಿರುವ ನಾಯಕ ನಟ. ಹೀಗಾಗಿ ಯಶ್ ಅವರಿಗೆ ಸಾಕಷ್ಟು ಆಫರ್ ಗಳು ಪ್ರಮುಖ ಪಕ್ಷಗಳಿಂದ ಹೋಗಿದೆ. ಆದ್ರೆ ಸದ್ಯಕ್ಕೆ ಯಶ್ ಅವರು ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ `ಕೆಜಿಎಫ್’ ಚಿತ್ರದ ಕಟ್ಟಕಡೆಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಅನೈತಿಕ ತಾಣವಾಗ್ತಿದೆ ಹೇರೋಹಳ್ಳಿ ಸ್ಮಶಾನ – ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಡಂಪ್ ಆಗ್ತಿದೆ ತ್ಯಾಜ್ಯ

    ಅನೈತಿಕ ತಾಣವಾಗ್ತಿದೆ ಹೇರೋಹಳ್ಳಿ ಸ್ಮಶಾನ – ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಡಂಪ್ ಆಗ್ತಿದೆ ತ್ಯಾಜ್ಯ

    ಬೆಂಗಳೂರು: ರಾಜ ಆಗಲಿ, ಸೇವಕ ಆಗಲಿ, ಸತ್ತ ಮೇಲೆ ಬೇಕಿರೋದು ಮೂರಡಿ ಆರಡಿ ಜಾಗ. ಆ ಜಾಗ ಈಗ ಬಿಬಿಎಂಪಿ ನಿರ್ಲಕ್ಷ್ಯದಿಂದ ಗಾಂಜಾ ಹೋಡೆಯೋ ಸ್ಥಳವಾಗಿದೆ. ಇದೆಲ್ಲೋ ದೂರದ ಊರಿನ ಸುದ್ದಿ ಅಲ್ಲ ರಾಜಧಾನಿ ಬೆಂಗಳೂರಿನ ಸ್ಮಶಾನದ ಸುದ್ದಿಯಾಗಿದೆ. ಇಲ್ಲಿನ 5 ಎಕರೆ ಜಾಗ, ಈಗ ಬಿಬಿಎಂಪಿ ಡಂಪಿಂಗ್ ಯಾರ್ಡ್ ಆಗಿದೆ.

    ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ಗ್ರಾಮ ವಾರ್ಡ್ ನಂಬರ್ 72ರಲ್ಲಿ 5 ಎಕರೆ ಸ್ಮಶಾನ ಜಾಗ ಇದೆ. 2009ರಲ್ಲಿ ಇದನ್ನು ಬಿಬಿಎಂಪಿ ಸುಪರ್ದಿಗೆ ನೀಡಲಾಗಿತ್ತು. ಈ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕದ್ದು-ಮುಚ್ಚಿ ಗಾಂಜಾ ಸೇದೋಕೆ ಅಂತಾನೇ ಇಲ್ಲಿಗೆ ಯುವಕರು ಬರ್ತಿದ್ದಾರೆ.

    ಅಷ್ಟೇ ಅಲ್ಲದೇ ಬಿಬಿಎಂಪಿ ನಿರ್ಲಕ್ಷ್ಯದಿಂದ ಇದು ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ. ಬಿಬಿಎಂಪಿ ನಿರ್ಮಿಸಿದ್ದ ಸುತ್ತಲಿನ ಕಾಂಪೌಂಡ್ ನ್ನು ಡಂಪ್ ಮಾಡೋಕೆ ಸುಲಭ ಆಗಲಿ ಎಂದು ತೆರವು ಮಾಡಿದ್ದಾರೆ. ದಿನಕ್ಕೆ ಸುಮಾರು 10 ರಿಂದ 20 ಗಾಡಿಗಳಲ್ಲಿ ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಇಲ್ಲಿ ಓಡಾಡೋಕು ಹಿಂಸೆಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಇನ್ನು ಈ ಸ್ಮಶಾನದಲ್ಲೂ ದೊಡ್ಡ ರಾಜಕೀಯ ನಡೆದಿದೆ. ಕುರುಬ ಜನಾಂಗದವರನ್ನು ಓಲೈಸಿಕೊಳ್ಳಲು ಇಲ್ಲಿ ಕಾಂಗ್ರೆಸ್ ನವರು ಕನಕ ಭವನ ನಿರ್ಮಾಣ ಮಾಡಿದ್ದಾರೆ. ಜೊತೆ ಕೆಂಪೇಗೌಡ ನಿರ್ಮಾಣಕ್ಕೆ ಪಿಲ್ಲರ್ ಕೂಡ ಹಾಕಿದ್ದಾರೆ. ಗ್ರಾಮಸ್ಥರು ಕೋರ್ಟ್‍ನಲ್ಲಿ ದಾವೆ ಹೂಡಿರುವುದರಿಂದ ಇದಕ್ಕೆ ಕೋರ್ಟ್ ತಡೆಯಾಜ್ಞೆ ತಂದಿದೆ.

  • ಐಪಿಎಲ್ 11ರ ಮೊದಲ ಗೆಲುವು ಸವಿದ ರಾಯಲ್ ಚಾಲೆಂಜರ್ಸ್!

    ಐಪಿಎಲ್ 11ರ ಮೊದಲ ಗೆಲುವು ಸವಿದ ರಾಯಲ್ ಚಾಲೆಂಜರ್ಸ್!

    ಬೆಂಗಳೂರು: ಈ ಸಲ ಕಪ್ ನಮ್ಮದೇ ಎಂಬ ಅಭಿಮಾನಿಗಳ ಕನಸಿನೊಂದಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ರಾಯಲ್ಸ್ ಚಾಲೆಂಜರ್ಸ್ ಬಳಗ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರೋಚಕ 4 ವಿಕೆಟ್ ಗೆಲುವು ಪಡೆದು ಐಪಿಎಲ್‍ನ 11 ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು.

    ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಡಿ ಕಾಕ್, ಎಬಿ ಡಿವಿಲಿಯರ್ಸ್ ಆರ್.ಸಿ.ಬಿ ಗೆಲುವಿಗೆ ಕಾರಣರಾದರು. ಪಂಜಾಬ್ ನ 156 ರನ್ ಸುಲಭ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ ಮೊದಲ ಓವರ್ ನಲ್ಲೇ ಮ್ಯಾಕಲಮ್ ಶೂನ್ಯ ಸುತ್ತುವ ಮೂಲಕ ಅಘಾತ ಎದುರಿಸಿತು. ಬಳಿಕ ನಾಯಕ ಕೊಹ್ಲಿ ಹಾಗೂ ಡಿ ಕಾಕ್ ಜೋಡಿ ಬಿರುಸಿನ ಆಟ ಪ್ರದರ್ಶಿಸಿತು. ಈ ವೇಳೆ 21 ರನ್ ಗಳಿಸಿದ್ದ ಕೊಹ್ಲಿ ರೆಹಮಾನ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಡಿ ಕಾಕ್ (34 ಎಸೆತ 45 ರನ್) ರನ್ನು ಪಂಜಾಬ್ ನಾಯಕ ಅಶ್ವಿನ್ ಪೆವಿಲಿಯನ್ ಸೇರುವಂತೆ ಮಾಡಿದರು.

    ಈ ವೇಳೆ ಬ್ಯಾಟಿಂಗ್ ಇಳಿದ ಸ್ಫೋಟಕ ಆಟಗಾರ ಎಬಿಡಿ 40 ಎಸೆಗಳಲ್ಲಿ ಭರ್ಜರಿ ನಾಲ್ಕು ಸಿಕ್ಸರ್, 2 ಬೌಂಡರಿ ನೆರವಿನಿಂದ 57 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು. ಆದರೆ ಈ ವೇಳೆ ಮಿಂಚಿನ ದಾಳಿ ನಡೆಸಿದ ನೈಲ್ ಎಬಿಡಿ, ಮನ್ ದೀಪ್ ವಿಕೆಟ್ ಪಡೆದರು.

    ಕೊನೆಯ 4 ಓವರ್ ನಲ್ಲಿ ರಾಯಲ್ ಚಾಲೆಂಜರ್ಸ್ 41 ರನ್ ಗಳಿಸಬೇಕಿತ್ತು. 17ನೇ ಓವರ್ ನಲ್ಲಿ ಡಿವಿಲಿಯರ್ಸ್ ಎರಡು ಸಿಕ್ಸರ್ ಸಿಡಿಸಿ ದರೆ, ಮನ್ ದೀಪ್ ಸಿಂಗ್ 1 ಬೌಂಡರಿ ಬಾರಿಸಿದರು. ಈ ಓವರ್ ನಲ್ಲಿ ಒಟ್ಟು 19 ರನ್ ಗಳಿಸಿತು. 18ನೇ ಓವರ್ ನಲ್ಲೂ ಎಬಿ ಡಿವಿಲಿಯರ್ಸ್ 1 ಸಿಕ್ಸ್ ಬಾರಿಸಿ ಒಟ್ಟಾರೆ 11 ಗಳಿಸಿದರು. ಆದರೆ 19ನೇ ಓವರ್ ನ  ಮೊದಲ ಬಾಲ್ ನಲ್ಲೇ ಆಕ್ರಮಣಕಾರಿಯಾಗಿ ಆಡಲು ಹೋದ ಡಿವಿಲಿಯರ್ಸ್ ಔಟಾದರು. ಇದೇ ಓವರ್ ನಲ್ಲೇ ಮನ್ ದೀಪ್ ಸಿಂಗ್ ಕೂಡಾ ಔಟಾದರು. ಪಂಜಾಬ್ ತಂಡ ಕೇವಲ 4 ರನ್ ಮಾತ್ರ ಈ ಓವರ್ ನಲ್ಲಿ ಬಿಟ್ಟುಕೊಟ್ಟಿತ್ತು. ಕೊನೆಯ ಓವರ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ 5 ರನ್ ಗಳಿಸಬೇಕಿತ್ತು. ಈ ವೇಳೆ ಬ್ಯಾಟಿಂಗ್ ಗೆ ಆಗಮಿಸಿದ್ದ ವಾಷಿಂಗ್ಟನ್ ಸುಂದರ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಕೊನೆಯ ಓವರ್ ನಲ್ಲಿ ಮೂರು ಎಸೆತಗಳು ಬಾಕಿ ಇರುವಂತೆಯೇ ಬೌಂಡರಿ ಬಾರಿಸಿದ ವಾಷಿಂಗ್ಟನ್ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೊದಲ ಗೆಲುವಿನ ಸವಿಯುಣಿಸಿದರು.

    ಈ ಮೊದಲು ಟಾಸ್ ಗೆದ್ದು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಕೊಹ್ಲಿ ಆಯ್ಕೆ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಬೌಲ್ ಮಾಡಿದ ಉಮೇಶ್ ಯಾದವ್ ಓವರ್ ಒಂದರಲ್ಲಿ ಮೂರು ಪಡೆದು ಪಂಜಾಬ್ ಗೆ ಆಘಾತ ನೀಡಿದರು. ನಾಲ್ಕನೇ ಓವರ್ ಬೌಲ್ ಮಾಡಿದ ಯಾದವ್ ಪಂಜಾಬ್ ಓಪನರ್ ಮಯಾಂಕ್ ಅಗರವಾಲ್ (15), ಆರಾನ್ ಪಿಂಚ್ (0) ಹಾಗೂ ಯುವರಾಜ್ ಸಿಂಗ್(4) ವಿಕೆಟ್ ಪಡೆದರು.

    ಕಳೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದರು. 30 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದ ರಾಹುಲ್ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ತಂಡದ ಆಸರೆಯಾದ ಕರುಣ್ ನಾಯರ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. 29 ರನ್ ಗಳಿಸಿದ ನಾಯರ್ 12ನೇ ಓವರ್ ಎಸೆದ ಕುಲವಂತ್ ಖೆಜ್ರೊಲಿಯಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

    ಬಳಿಕ ಬಂದ ಮಾರ್ಕಸ್ ಸ್ಟಾಯ್ (11)ರನ್ನು ಕ್ವಿಂಟನ್ ಡಿ ಕಾಕ್ ಸ್ಟಂಪ್ ಗೆ ಬಲಿಯಾದರು. ಉಮೇಶ್ ಯಾದವ್ ಗೆ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದು ಪಂಜಾಬ್ ರನ್ ಓಟಕ್ಕೆ ಕಡಿವಾಣ ಹಾಕಿದರು. ನಂತರ ಬಂದ ಅಕ್ಷರ್ ಪಟೇಲ್ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಈ ವೇಳೆ ಪಂಜಾಬ್ ನಾಯಕ ಆರ್ ಅಶ್ವಿನ್ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 21 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ ಸಿಡಿಸಿ ತಂಡದ ಮೊತ್ತ 150 ರನ್ ಗಡಿ ದಾಟಲು ಕಾರಣರಾದರು. ಬಳಿಕ ಬಂದ ಆ್ಯಂಡ್ರ್ಯೂ ಟೈ (7), ರೆಹಮಾನ್ (0) ಔಟ್ ಆಗುವುದರೊಂದಿಗೆ ಇನ್ನು 4 ಬಾಲ್ ಇರುವಂತೆ ಪಂಜಾಬ್ ಆಲೌಟ್ ಆಯಿತು.

    ಆರ್ ಸಿಬಿ ಪರ ಉಮೇಶ್ ಯಾದವ್ 3, ಖೆಜ್ರೊಲಿಯಾ, ಸುಂದರ್, ವೋಕ್ಸ್ ತಲಾ 2 ವಿಕೆಟ್ ಹಾಗೂ ಚಹಾಲ್ 1 ವಿಕೆಟ್ ಪಡೆದು ಮಿಂಚಿದರು. ಒಟ್ಟಾರೆ 19.2 ಓವರ್ ಗಳಲ್ಲಿ ಪಂಜಾಬ್ 155 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

  • ತನ್ನ ನೆಚ್ಚಿನ ಹೀರೋ ಜೊತೆ ಮತ್ತೆ ನಟಿಸುವ ಆಶಯ ವ್ಯಕ್ತಪಡಿಸಿದ ಕ್ರೇಜಿಕ್ವೀನ್

    ತನ್ನ ನೆಚ್ಚಿನ ಹೀರೋ ಜೊತೆ ಮತ್ತೆ ನಟಿಸುವ ಆಶಯ ವ್ಯಕ್ತಪಡಿಸಿದ ಕ್ರೇಜಿಕ್ವೀನ್

    ಬೆಂಗಳೂರು: ಕನ್ನಡದ ಬೆಸ್ಟ್ ಜೋಡಿಗಳಲ್ಲಿ ನಟ ದರ್ಶನ್ ಮತ್ತು ರಕ್ಷಿತಾ ಜೋಡಿ ಕೂಡ ಒಂದಾಗಿತ್ತು. ಒಂದು ಕಾಲದಲ್ಲಿ ಈ ಇಬ್ಬರು ಒಟ್ಟಿಗೆ ತೆರೆ ಮೇಲೆ ಬಂದರೆ ಪ್ರೇಕ್ಷಕರಿಗೆ ಮೋಡಿ ಮಾಡಿದಂತೆ ಇರುತ್ತಿತ್ತು.

    ದರ್ಶನ್ ಮತ್ತು ರಕ್ಷಿತಾ ಒಟ್ಟಿಗೆ `ಕಲಾಸಿಪಾಳ್ಯ’, `ಅಯ್ಯ’, `ಮಂಡ್ಯ’ ಮತ್ತು `ಸುಂಟರಗಾಳಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಹಿಟ್ ಆಗಿತ್ತು. ರಕ್ಷಿತಾ ಸದ್ಯ ತೀರ್ಪುಗಾರ್ತಿಯಾಗಿ ಬ್ಯುಸಿಯಾಗಿದ್ದಾರೆ.

    ಅಷ್ಟೇ ಅಲ್ಲದೇ ರಕ್ಷಿತಾ ಅವರು ತೆರೆ ಮೇಲೆ ಬಂದು ಅನೇಕ ವರ್ಷಗಳೇ ಉರುಳಿವೆ. ಆದರೆ ಈಗ ಮತ್ತೆ ದರ್ಶನ್ ಸಿನಿಮಾದಲ್ಲಿ ನಟಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಟ ಶಿವರಾಜ್ ಕುಮಾರ್ ನಡೆಸಿಕೊಡುವ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಯಕ್ಕೆ ನಟಿ ರಕ್ಷಿತಾ ಮತ್ತು ರಾಗಿಣಿ ಆಗಮಿಸಿದ್ದಾರೆ. ಈ ಸಂಚಿಕೆಯ ಪ್ರೋಮೋ ಇದೀಗ ಬಿಡುಗಡೆಯಾಗಿದೆ.

    ಶಿವಣ್ಣ ಕಾರ್ಯಕ್ರಮದಲ್ಲಿ ಈಗಿನ ಹೀರೋಗಳಲ್ಲಿ ನೀವು ಯಾರ ಜೊತೆಗೆ ಮತ್ತೆ ನಟನೆ ಮಾಡಲು ಇಷ್ಟ ಪಡುತ್ತೀರಾ? ಎಂದು ಪ್ರಶ್ನೆ ಕೇಳಿದ್ದಾರೆ. ಆಗ ರಕ್ಷಿತಾ ನನಗೆ ದರ್ಶನ್ ಜೊತೆಗೆ ಮತ್ತೆ ನಟಿಸುವ ಇಷ್ಟ ಇದೆ ಎಂದು ಉತ್ತರಿಸಿದ್ದಾರೆ.

    ನಟಿ ರಕ್ಷಿತಾ ಮತ್ತು ರಾಗಿಣಿ ದ್ವಿವೇದಿ ಅವರ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಸಂಚಿಕೆ ಇದೇ ಭಾನುವಾರ ರಾತ್ರಿ 8 ಗಂಟೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಸದ್ಯಕ್ಕೆ ರಕ್ಷಿತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಕಾಮಿಡಿ ಕಿಲಾಡಿಗಳು’ ಶೋನಲ್ಲಿ ತೀರ್ಪುಗಾರ್ತಿಯಾಗಿದ್ದಾರೆ.

  • ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಬೆಂಗಳೂರು: ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಕ್ಯಾಬ್ ಓಡಿಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು.

    ಒಬ್ಬ ದೊಡ್ಡ ನಟನ ಮಗನ ಇಂದಿನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು. ಆಗ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದರು.

    ಈ ಹಿಂದೆ ಶಂಕರ್ ಅಶ್ವಥ್ ಅವರ ಪರಿಸ್ಥಿತಿ ಕಂಡು ಬೇಸರಗೊಂಡಿದ್ದ ದರ್ಶನ್ ಅವರಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಈಗ ದರ್ಶನ್ ತಮ್ಮ ಮಾತಿನಂತೆ ನಡೆದುಕೊಂಡಿದ್ದು, ಶಂಕರ್ ಅಶ್ವಥ್ ಮುಖದಲ್ಲಿ ನಗುವನ್ನು ಮೂಡಿಸಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ದರ್ಶನ್ ತಾವು ನಟಿಸುತ್ತಿರುವ `ಯಜಮಾನ’ ಸಿನಿಮಾದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡಿದ್ದಾರೆ. ಈ ಸಿನಿಮಾದ ಒಂದು ಪಾತ್ರದಲ್ಲಿ ಶಂಕರ್ ಅಶ್ವಥ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಶೂಟಿಂಗ್ ನಲ್ಲಿ ಇದೀಗ ಶಂಕರ್ ಅಶ್ವಥ್ ಭಾಗಿಯಾಗಿದ್ದು, ಈ ವೇಳೆ ದರ್ಶನ್ ಜತೆಗೆ ಫೋಟೋ ತೆಗೆದುಕೊಂಡಿದ್ದಾರೆ.

    `ಯಜಮಾನ’ ಸಿನಿಮಾ ಬಿ. ಸುರೇಶ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. `ವಿಷ್ಣುವರ್ಧನ’ ಸಿನಿಮಾದ ಖ್ಯಾತಿಯ ಪಿ.ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. `ಕುರುಕ್ಷೇತ್ರ’ ನಂತರ `ಯಜಮಾನ’ ಚಿತ್ರ ಬಿಡುಗಡೆಯಾಗಲಿದೆ.

  • ಮತ್ತೆ ಒಂದಾದ ಚಂದನ್ ಶೆಟ್ಟಿ-ಶೃತಿ ಪ್ರಕಾಶ್

    ಮತ್ತೆ ಒಂದಾದ ಚಂದನ್ ಶೆಟ್ಟಿ-ಶೃತಿ ಪ್ರಕಾಶ್

    ಬೆಂಗಳೂರು: `ಬಿಗ್ ಬಾಸ್’ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    `ಬಿಗ್ ಬಾಸ್’ ಮನೆಯೊಳಗಿದ್ದ ಸಂದರ್ಭದಲ್ಲಿ ಇಬ್ಬರೂ ಆತ್ಮೀಯರಾಗಿದ್ದರು. ಅಲ್ಲಿಂದ ಹೊರ ಬಂದ ಬಳಿಕ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಚಂದನ್ ಶೆಟ್ಟಿ ರಿಯಾಲಿಟಿ ಶೋ ತೀರ್ಪುಗಾರ, ಸಂಗೀತ ನಿರ್ದೇಶನ, ಗಾಯನ ಹೀಗೆ ಹಲವು ರೀತಿಯಲ್ಲಿ ಚಂದನ್ ಬ್ಯುಸಿಯಾಗಿದ್ದಾರೆ. ಶ್ರುತಿ ಅವರು ಗಾಯನ, ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ.

    ಇದೀಗ ಚಂದನ್ ಹಾಗೂ ಶ್ರುತಿ ಪ್ರಕಾಶ್ ಒಂದೇ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸ ಸಾಂಗ್ ಮೂಡಿ ಬರುತ್ತಿದೆ. ಇದರ ಬಗ್ಗೆ ಖುಷಿಯಾಗಿರುವ ಶ್ರುತಿ ಪ್ರಕಾಶ್ ತಮ್ಮಿಬ್ಬರ ಫೋಟೋ ಹಾಕಿ ಹೊಸ ಸಾಂಗ್ ಗಾಗಿ ಕಾಯುತ್ತಿದ್ದೇನೆ ಎಂದು ತಮ್ಮ ಸಂತಸವನ್ನು ಇನ್ಸ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.

    https://www.instagram.com/p/BhYiHw0gTxM/?hl=en&taken-by=shrutiprakash

     

  • 1 ಕೋಟಿ ರೂ.ಗಾಗಿ ಸ್ನೇಹಿತರಿಂದಲ್ಲೇ ಖ್ಯಾತ ಖಳನಟನ ಬಾಮೈದನ ಅಪಹರಣ – ಸಿನಿಮಾ ಶೈಲಿಯಲ್ಲಿ ಆರೋಪಿಗಳ ಅರೆಸ್ಟ್

    1 ಕೋಟಿ ರೂ.ಗಾಗಿ ಸ್ನೇಹಿತರಿಂದಲ್ಲೇ ಖ್ಯಾತ ಖಳನಟನ ಬಾಮೈದನ ಅಪಹರಣ – ಸಿನಿಮಾ ಶೈಲಿಯಲ್ಲಿ ಆರೋಪಿಗಳ ಅರೆಸ್ಟ್

    ಬೆಂಗಳೂರು: ಹಣಕ್ಕಾಗಿ ಖಳನಟ ದಿವಂಗತ ವಜ್ರಮುನಿ ಅವರ ಬಾಮೈದನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಅಪಹರಣಕಾರರನ್ನು ಪೊಲೀಸರು ಸಿನಿಮಾ ಶೈಲಿಯಲ್ಲಿ ಬಂಧಿಸಿದ್ದಾರೆ.

    ವಜ್ರಮುನಿಯವರ ಬಾಮೈದ ಶಿವಕುಮಾರ್ ಬಾಷ್ ಕಂಪನಿಯಲ್ಲಿ ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದರು. ಇವರನ್ನು ಒಂದು ಕೋಟಿ ಹಣಕ್ಕಾಗಿ ಸ್ನೇಹಿತರೇ ಅಪಹರಣ ಮಾಡಿದ್ದರು. ಆದರೆ ಇಂದು ಪೊಲೀಸರ ಕಾರ್ಯಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.

    ಘಟನೆಯ ವಿವರ?:
    ಶಿವಕುಮಾರ್ ಸ್ನೇಹಿತ ಸತ್ಯ ಹೊಸ ಕಾರನ್ನು ತೆಗೆದುಕೊಂಡು ಸಾಲ ತೀರಿಸಲು ಆಗದೇ ಪರದಾಡುತ್ತಿದ್ದನು. ಈ ವೇಳೆ ಶಿವಕುಮಾರ್ ಗೆ ಸಾಲ ಕೊಡುವಂತೆ ಬೇಡಿಕೆ ಇಟ್ಟಿದ್ದನು. ಒಂದು ತಿಂಗಳ ಹಿಂದೆ ಶಿವಕುಮಾರ್ ತಮ್ಮ ಹಳೆ ಮನೆಯನ್ನು ಒಂದು ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸತ್ಯ ಸಾಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದನು. ಶಿವಕುಮಾರ್ ಯಾವಾಗ ಸಾಲವನ್ನು ಕೊಡುವುದಿಲ್ಲ ಎಂದು ತಿಳಿಯಿತೋ ಆಗ ಸತ್ಯ ತನ್ನ ಸ್ನೇಹಿತರ ಜೊತೆ ಸೇರಿ ಅಪಹರಣದ ಪ್ಲಾನ್ ಮಾಡಿದ್ದಾನೆ.

    ಭಾನುವಾರ ಸತ್ಯ ಮತ್ತು ಆತನ ಸ್ನೇಹಿತರು ಸೇರಿ ಶಿವಕುಮಾರ್ ನನ್ನು ಅಪಹರಿಸಿದ್ದಾರೆ. ನಂತರ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆಪರೇಷನ್ ಶಿವ ಎಂಬ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಮಾಡಿದ್ದಾರೆ. ನಂತರ ಆರೋಪಿಗಳ ಬಗ್ಗೆ ತಿಳಿದು ಡಿಸಿಪಿ ಹಾಗೂ ಎಸಿಪಿ ಸೇರಿದಂತೆ ಸಿಬ್ಬಂದಿಗಳಾದ ಗಿರಿರಾಜ್, ಭೋಳತ್ತಿನ್, ಮಂಜುನಾಥ್, ಇನ್ಸ್ ಪೆಕ್ಟರ್ ಚೇತನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪೊಲೀಸರು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದ್ದಾರೆ. ಬಳಿಕ ಕೋಲಾರದ ಶ್ರೀನಿವಾಸಪುರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಗೆಳೆಯ ಸತ್ಯ, ಯಶವಂತ, ವಿನೋದ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಬಂಧಿತ ಆರೋಪಿಗಳ ಬಳಿ ಇದ್ದ ಒಂದು ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.