Tag: Bangalore

  • ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕ ಎಸ್ಕೇಪ್!

    ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕ ಎಸ್ಕೇಪ್!

    ಬೆಂಗಳೂರು: ಯುವತಿಗೆ ಅಂಗೈಯಲ್ಲಿ ಚಂದ್ರನನ್ನ ತೋರಿಸಿ ಗರ್ಭಿಣಿ ಮಾಡಿ ಯುವಕನೊಬ್ಬ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ನಡೆದಿದೆ.

    ಇಂಜಾಮಮ್ ಉಲ್ ಹಕ್ ಎಂಬ ಯುವಕ ಮುಂಬೈ ಮೂಲದ ಯುವತಿಗೆ ಪ್ರೀತಿಸಿ ವಂಚನೆ ಮಾಡಿದ್ದಾನೆ. ಈತ ಬೆಂಗಳೂರಿನ ಕೆ.ಜಿ. ಹಳ್ಳಿಯವನಾಗಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ.

    ಇಂಜಾಮಾಮ್ ಉಲ್ ಹಕ್ ಗೆ ಸ್ನೇಹಿತರಿಂದಾಗಿ ಮುಂಬೈ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಪರಿಚಯವಾಗುತ್ತದೆ. ಪರಿಚಯ ಇಬ್ಬರ ನಡುವೆ ಪ್ರೀತಿ ಆಗುತ್ತದೆ. ಬಳಿಕ ಒಂದು ವರ್ಷಗಳ ಕಾಲ ಇಬ್ಬರು ಸಿನಿಮಾ, ಪಾರ್ಕ್ ಮತ್ತು ಪಬ್ ಅಂತೆಲ್ಲ ಸುತ್ತಾಡಿದ್ದಾರೆ. ಅಷ್ಟೇ ಅಲ್ಲದೇ ಇಂಜಾಮಾಮ್ ಉಲ್ ಹಕ್ ಯುವತಿಯನ್ನ ಮದುವೆ ಆಗುವುದಾಗಿ ನಂಬಿಸಿ ಒಂದು ವರ್ಷಗಳ ಕಾಲ ಆಕೆಯೊಂದಿಗೆ ಜೆಪಿ ನಗರದಲ್ಲಿ ಲಿವಿಂಗ್ ಟುಗೇದರ್ ನಲ್ಲಿ ಇದ್ದನು.

    ಯುವತಿ ತಾನು ಗರ್ಭಿಣಿ ಆಗಿರುವ ವಿಷಯವನ್ನು ಇಂಜಾಮಾಮ್ ಉಲ್ ಹಕ್‍ಗೆ ತಿಳಿಸಿದ್ದಾರೆ. ನಂತರ ಯುವತಿಯನ್ನ ಕೆ.ಜಿ. ಹಳ್ಳಿಯಲ್ಲಿರುವ ಯುವಕನ ಮನೆಗೆ ಕರಿಸಿ ಆರೋಪಿ ಇಂಜಾಮಾಮ್ ಕುಟುಂಬದವರು ಯುವತಿಯ ಹಲ್ಲೆ ಮಾಡಿ ಬೆದರಿಸಿದ್ದಾರೆ. ನಂತರ ಈ ಘಟನೆ ಬಗ್ಗೆ ನೊಂದ ಯುವತಿ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚನೆ ಮಾಡಿದ್ದ ಪ್ರೀಯಕರ ಹಾಗೂ ಕುಟುಂಬದವರು ಕೆ.ಜಿ ಹಳ್ಳಿಯಲ್ಲಿರುವ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ.

    ಕೆ.ಜಿ. ಹಳ್ಳಿ ಪೊಲೀಸರು ಒಂದು ತಿಂಗಳ ಹಿಂದೆ ದೂರು ದಾಖಲಿಸಿಕೊಂಡಿದ್ದರೂ ಯುವಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪೊಲೀಸರ ಬಳಿ ಕೇಳಲು ಹೋದರೆ ಸರಿಯಾಗಿ ಸಹಕರಿಸುತ್ತಿಲ್ಲ ಅಂತ ನೊಂದ ಯುವತಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಹುಡುಗಿ ವಿಚಾರಕ್ಕೆ ಹರಿಯಿತು ರಕ್ತ – ಗೆಳೆಯನಿಂದಲೇ ಪಕ್ಕೆಲುಬು, ಎದೆಗೆ ಚಾಕು ಇರಿತ

    ಹುಡುಗಿ ವಿಚಾರಕ್ಕೆ ಹರಿಯಿತು ರಕ್ತ – ಗೆಳೆಯನಿಂದಲೇ ಪಕ್ಕೆಲುಬು, ಎದೆಗೆ ಚಾಕು ಇರಿತ

    ಬೆಂಗಳೂರು: ಚಿಕ್ಕಂದಿನಿಂದಲೂ ಒಳ್ಳೇಯ ಸ್ನೇಹಿತರಾಗಿದ್ದು, ಅಲ್ಲದೇ ಮೂರು ವರ್ಷಗಳ ಹಿಂದೆ ಜೀವನವನ್ನರಸಿ ದೂರದ ಊರಿಂದ ಬೆಂಗಳೂರಿಗೂ ಬಂದಿದ್ದರು. ಆದರೆ ಹುಡುಗಿ ವಿಚಾರಕ್ಕೆ ಇದೀಗ ಈ ಕುಚುಕು ಗೆಳೆಯರ ನಡುವೆ ಗಲಾಟೆಯಾಗಿ ಅದು ರಕ್ತಪಾತದಲ್ಲಿ ಅಂತ್ಯವಾಗಿದೆ.

    ಗೆಳೆಯನಿಂದಲೇ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ಬೆಡ್ ಮೇಲೆ ಕೊನೆಯುಸಿರೆಳೆದ ಈತನ ಹೆಸರು ಅಬ್ಬು ಅಲಿಯಾಸ್ ನಜ್ಮಲ್ ಹುಸೇನ್. ಮಂಗಳವಾರ ಸುಮಾರು 9.30ರ ವೇಳೆಗೆ ಕೆ.ಆರ್ ಮಾರ್ಕೆಟ್ ಬಳಿಯ ಖುರೇಷಿ ಮಸೀದಿ ಹಿಂಭಾಗ ಈತನ ಪಕ್ಕೆಲುಬು, ಎದೆ ಭಾಗಕ್ಕೆ ಗೆಳೆಯರೇ ಚಾಕು ಹಾಕಿದ್ದರು. ನಂತರ ರಕ್ತದ ಮಡುವಿನಲ್ಲಿದ್ದ ಅಬ್ಬುವನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಬ್ಬು ಕೊನೆಯುಸಿರೆಳೆದಿದ್ದಾನೆ ಎಂದು ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಅವರು ಹೇಳಿದ್ದಾರೆ.

    ಮೃತ ಅಬ್ಬು ಮೂಲತಃ ಮಣಿಪುರದ ಖಲೀಂಗಂಜ್ ಜಿಲ್ಲೆಯವನು. ಶಿವಾಜಿನಗರದ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಹುಡುಗಿ ವಿಚಾರಕ್ಕೆ ಊರಿನ ಗೆಳೆಯ ಜುಮ್ಮಾಖಾನ್ ಜೊತೆ ಗಲಾಟೆ ಮಾಡಿಕೊಂಡಿದ್ದನು. ಇದೇ ವಿಚಾರವಾಗಿ ಮಾತನಾಡಲು ಕರೆಯಿಸಿ ಅಬ್ಬುಗೆ ಚಾಕು ಹಾಕಿ ಪರಾರಿಯಾಗಿದ್ದಾನೆ.

    ಸದ್ಯಕ್ಕೆ ಈ ಘಟನೆ ಸಂಬಂಧ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಚಿಕ್ಕಪೇಟೆ ಎಸಿಪಿ ನಿರಂಜನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ರವಿ.ಡಿ.ಚೆನ್ನಣ್ಣನವರ್ ಅವರು ತಿಳಿಸಿದ್ದಾರೆ.

  • ಅಬ್ಬರಿಸಿದ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ – ನೆಲಕ್ಕುರುಳಿದ ಮರಗಳು, ನೀರು ತುಂಬಿದ ಬಸ್ ಸ್ಟ್ಯಾಂಡ್

    ಅಬ್ಬರಿಸಿದ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ – ನೆಲಕ್ಕುರುಳಿದ ಮರಗಳು, ನೀರು ತುಂಬಿದ ಬಸ್ ಸ್ಟ್ಯಾಂಡ್

    ಬೆಂಗಳೂರು: ಬೆಂಗಳೂರಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರು ಪರದಾಡಿದ್ದಾರೆ.

    ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ಸರ್ಕಲ್ ಮಾರಮ್ಮ ಮತ್ತು ಟಾಟಾ ಇನ್ಸ್ ಸ್ಟಿಟ್ಯೂಟ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ಅಷ್ಟೇ ಅಲ್ಲದೇ ರಾಮಯ್ಯ ಕಾಲೇಜು ಮುಂಭಾಗ ಕಾರಿನ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಲ್ಲೇಶ್ವರಂ 10ನೇ ಕ್ರಾಸ್, ಮಹಾಲಕ್ಷ್ಮಿ ಲೇಔಟ್, ಸದಾಶಿವ ನಗರ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ಮರಗಳು ಬಿದ್ದಿವೆ. ಮೇಖ್ರಿ ಸರ್ಕಲ್, ಮತ್ತು ಎಸ್‍ಎಸ್‍ಎಲ್‍ಸಿ ಬೋರ್ಡ್ ಮುಂಭಾಗ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದೆ. ಪರಿಣಾಮ ಪ್ಯಾಲೆಸ್ ಗ್ರೌಂಡ್ ರಸ್ತೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಯಶವಂತಪುರ ಬಸ್ ಸ್ಟ್ಯಾಂಡ್ ತುಂಬಾ ನೀರು ತುಂಬಿ ಪ್ರಯಾಣಿಕರು ಪರದಾಡುವಂತಾಗಿತ್ತು.

    ಇನ್ನೂ ರಾಮಯ್ಯ ಆಸ್ಪತ್ರೆ ಮುಂದೆ ಪಾರ್ಕಿಂಗ್ ಲಾಟ್ ನಲ್ಲಿದ್ದ ಕಾರು, ಬೈಕ್ ಗಳ ಮೇಲೆ ಮರ ಉರುಳಿದೆ. ಕೂಡಲೇ ಸಾರ್ವಜನಿಕರು ಕಾರಿನಲ್ಲಿದ್ದ ಚಾಲಕನನ್ನ ರಕ್ಷಣೆ ಮಾಡಿದ್ದಾರೆ. ಮರ ಬಿದ್ದ ರಭಸಕ್ಕೆ ಒಲಾ ಕಾರು ಮತ್ತು ಟಿವಿಎಸ್ ಬೈಕ್ ಜಖಂ ಆಗಿದೆ. ಆದರೆ ಮರ ಬಿದ್ದು ಅರ್ಧ ಗಂಟೆ ಆಗಿದ್ದರೂ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಬಂದಿರಲಿಲ್ಲ.

    ಪೂರ್ವ ಮುಂಗಾರಿನಲ್ಲಿ ಸಮಯದಲ್ಲಿ ರಾಜ್ಯಾದ್ಯಂತ ಭಾರೀ ಗುಡುಗು ಗಾಳಿ ಸಹಿತ ಆಗಾಗ ಮಳೆಯಾಗುವುದು ಸಹಜ. ಮೇ ತಿಂಗಳಲ್ಲಿ ಗುಡುಗು, ಗಾಳಿ ಸಹಿತ ಮಳೆ ಮುಂದುವರೆಯಲಿದೆ. ಮೋಡಗಳ ಸಾಲು ನಿರ್ಮಾಣವಾಗಿರುವ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಮಳೆಯಾಗುತ್ತಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಇಂದು ನಟ  ಸಾರ್ವಭೌಮ ರಾಜ್‍ಕುಮಾರ್ ಜಯಂತಿ – ರಾಜ್ ಪುತ್ಥಳಿ ಬಳಿ ಅಭಿಮಾನಿಯ ಮದುವೆ

    ಇಂದು ನಟ ಸಾರ್ವಭೌಮ ರಾಜ್‍ಕುಮಾರ್ ಜಯಂತಿ – ರಾಜ್ ಪುತ್ಥಳಿ ಬಳಿ ಅಭಿಮಾನಿಯ ಮದುವೆ

    -ಪಬ್ಲಿಕ್ ಮ್ಯೂಸಿಕ್‍ನಲ್ಲಿ ದಿನವಿಡೀ ರಾಜ್ ಹಬ್ಬ

    ಬೆಂಗಳೂರು: ಇಂದು ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಮತ್ತು ವರನಟ ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ.

    ಡಾ. ರಾಜ್ ಕುಮಾರ್ ಅವರು ಗಾಜನೂರಲ್ಲಿ 1929ರ ಏಪ್ರಿಲ್ 24ರಂದು ಜನಿಸಿದ್ದರು. ರಾಜಣ್ಣ, ಬೇಡರ ಕಣ್ಣಪ್ಪನಾಗಿ, ಗಂಧದ ಗುಡಿಯಲ್ಲಿ ಅವತರಿಸಿ ಶಬ್ಧವೇದಿವರೆಗೂ 206 ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಅಪರೂಪದ ಪಾತ್ರಗಳಲ್ಲಿ ಮಾಡಿ ಕನ್ನಡ ನಾಡಿನ ಮನೆ-ಮನಗಳನ್ನು ಗೆದಿದ್ದಾರೆ.

    ಪ್ರತಿ ಬಾರಿಯಂತೆ ರಾಜ್ ಸ್ಮಾರಕಕ್ಕೆ ಅಭಿಮಾನಿಗಳು ಹರಿದು ಬರುತ್ತಿದ್ದಾರೆ. ಕಟ್ಟಾ ಅಭಿಮಾನಿ ರುಧ್ರ ಎಂಬವರು ಕುರುಬರಹಳ್ಳಿಯ ರಾಜ್ ಪುತ್ಥಳಿ ಮುಂಭಾಗದಲ್ಲಿ ಮದುವೆಯಾಗಲಿದ್ದಾರೆ. ರುಧ್ರ ಮತ್ತು ಶಿಲ್ಪಾರೊಂದಿಗೆ ಇಂದು 11.30ರ ಶುಭ ಮೂಹುರ್ತದಲ್ಲಿ ಸಾಂಸರಿಕ ಜೀವನಕ್ಕೆ ಕಾಲಿರಿಸಲಿದ್ದಾರೆ .

    ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ ಪ್ರಯುಕ್ತ ಇಂದು ಅವರ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಹೋಗಿ ಅವರ ಸಮಾಧಿಗೆ ಪೂಜೆ ಸಲ್ಲಿಸದ್ದಾರೆ. ಡಾ.ರಾಜ್ ಕುಮಾರ್ ಜಯಂತಿ ಅಂಗವಾಗಿ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಾಹಸ ನಿರ್ದೆಶಕ ರವಿವರ್ಮ ನಿರ್ದೆಶಿಸಿದ್ದು, ಚಿತ್ರದಲ್ಲಿ ಶಿವಣ್ಣ ಮತ್ತೆ ಖಾಕಿ ಧರಿಸಲಿದ್ದು, ಮೀಸೆ ಬಿಟ್ಟ ರೂಪದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ.

    ಇನ್ನು ರಾಜ್ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ, ಹಾಸನ, ಬೆಂಗಳೂರು ಮತ್ತು ಮೈಸೂರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಟಗರು ಸಿನಿಮಾ ಟಿಕೆಟ್ ಮೇಲೆ 50% ರಿಯಾಯಿತಿ ನೀಡಲಾಗಿದೆ. ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ ಪ್ರಯುಕ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿ ಡಾ. ರಾಜ್ ಅವರನ್ನು ಸ್ಮರಿಸಿದ್ದಾರೆ.

    ಪಬ್ಲಿಕ್ ಟಿವಿ ಸಹ ಚಾನೆಲ್ ಪಬ್ಲಿಕ್ ಮ್ಯೂಸಿಕ್ ಇವತ್ತು ಇಡೀ ದಿನ ರಾಜ್‍ಕುಮಾರ್ ಮಯವಾಗಿರುತ್ತೆ.

  • ಪತಿಯ ನಾಮಪತ್ರದ ವೇಳೆ ಪತ್ನಿಗೆ ಗೇಟ್ ಪಾಸ್!

    ಪತಿಯ ನಾಮಪತ್ರದ ವೇಳೆ ಪತ್ನಿಗೆ ಗೇಟ್ ಪಾಸ್!

    – ಕೊರಳಿಗೆ ಹಾರ ಬೀಳುವ ಮುಂಚೆಯೇ ಜಿಗಿದು ಜಿಗಿದು ಸೇಬು ಕಿತ್ಕೊಂಡ ಕಾರ್ಯಕರ್ತರು

    ಬೆಂಗಳೂರು: ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಸಪ್ತಗಿರಿ ಅವರು ನಾಮಿನೇಷನ್ ಸಲ್ಲಿಸುವಾಗ ಪತ್ನಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ.

    ನಾನು ನಾಮಿನೇಷನ್ ಸಲ್ಲಿಕೆಗೆ ಬಂದಿದ್ದೆ. ನನ್ನ ಜೊತೆ ಪಿ.ಸಿ ಮೋಹನ್, ತಂದೆ ರಾಮಚಂದ್ರೇಗೌಡ ಸೇರಿದಂತೆ ಇಬ್ಬರು ಬೆಂಬಲಿಗರು ಕೇಂದ್ರದೊಳಗೆ ಬಂದಿದ್ದರು. ಆದರೆ ನನ್ನ ಪತ್ನಿ ಕೊಂಚ ತಡವಾಗಿ ಬಂದು ಒಳಹೋಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರು ಗೇಟ್‍ನಲ್ಲೆ ತಡೆದಿದ್ದಾರೆ. ನಾನವರ ಪತ್ನಿ ಕಣ್ರೀ ಅಂತಾ ದುಂಬಾಲು ಬಿದ್ದರೂ `ರೂಲ್ಸ್ ಈಸ್ ರೂಲ್ಸ್’ ಅಂತಾ ಹೊರಕಳಿಸಿದ್ದಾರೆ ಎಂದು ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಹೇಳಿದ್ದಾರೆ.

    ವಿಜಯನಗರದಲ್ಲಿ ಎಂ.ಕೃಷ್ಣಪ್ಪ ನಾಮಪತ್ರ ಸಲ್ಲಿಕೆ ವೇಳೆ ಬೆಂಬಲಿಗರು, ಕೃಷ್ಣಪ್ಪರಿಗೂ ಹಾಗೂ ಮಗ ಪ್ರಿಯಾಕೃಷ್ಣಗೂ ಸೇಬಿನ ಹಾರ ಹಾಕಿದ್ದರು. ಆದರೆ ಸೇಬಿನ ಹಾರ ಅವರ ಕೊರಳಿಗೆ ಬೀಳುವ ಮುಂಚೆ ಕಾರ್ಯಕರ್ತರು ಆಪಲ್ ಕಿತ್ತುಕೊಳ್ಳುವುದಕ್ಕೆ ಸೆಣಸಾಡಿದ್ದಾರೆ. ಅಷ್ಟೇ ಅಲ್ಲದೆ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಕೊರಳಿಗೆ ಎಗರಿ ಎಗರಿ ಸೇಬು ಕಿತ್ತುಕೊಂಡಿದ್ದಾರೆ.

    ಚಾಮರಾಜಪೇಟೆಯ ಅಲ್ತಾಫ್ ಖಾನ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಬೆಂಬಲಿಗರು ಕೇಂದ್ರದೊಳಗೆ ನುಗ್ಗಲು ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ. ಹೆಬ್ಬಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ನಾಮಪತ್ರ ಸಲ್ಲಿಕೆಯಲ್ಲಿ ಮಹಿಳಾಮಣಿಗಳು ಗ್ರೌಂಡ್‍ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಯ ನಯನಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಯ ನಯನಾ

    ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕವೇ ಖ್ಯಾತಿ ಪಡೆದಿರುವ ಕಲಾವಿದೆ ನಯನಾ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕಿರುತೆರೆಯ ಅಭಿನಯದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಗಳಿಸಿದ್ದ ನಯನಾ ಈಗ ಮದುವೆಯಾಗಿದ್ದಾರೆ. ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಗೂ ಈಗ ತಾನೇ ಪಾದಾರ್ಪಣೆ ಮಾಡಿದ್ದಾರೆ. ಈಗ ನಯನಾ ಶರತ್ ಜೊತೆ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ.

    ಶರತ್ ಬೆಂಗಳೂರಿನಲ್ಲಿ ಉದ್ಯಮಿ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಯನಾ ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಈಗ ಈ ಜೋಡಿ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ನಯನಾ ಕೈ ಹಿಡಿದಿರುವ ಶರತ್ ಅವರ ಸಂಬಂಧಿಕರೇ ಆಗಿದ್ದು, ಇಬ್ಬರು ಮನೆಯಲ್ಲಿ ಮಾತಕತೆ ನಡೆಸಿ ವಿವಾಹ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ಗುರು ಹಿರಿಯರ ಒಪ್ಪಿಗೆ ಮೇರೆಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಆರತಕ್ಷತೆಗೆ ಸಂಬಂಧಿಕರು ಮತ್ತು ಸ್ನೇಹಿತರು ಬಂದು ನವ ಜೋಡಿಗೆ ಶುಭಾಕೋರಿದ್ದಾರೆ. ನಯನ ತಂದೆಯ ವಿರೋಧದ ನಡುವೆಯೂ ಅಭಿನಯ ಮಾಡಬೇಕೆಂದು ಕನಸು ಇಟ್ಟುಕೊಂಡು ಕಾಮಿಡಿ ಕಿಲಾಡಿಗಳು ತಂಡಕ್ಕೆ ಸೇರಿಕೊಂಡಿದ್ದರು. ಇಂದು ಆ ಕಾರ್ಯಕ್ರಮದ ಮೂಲಕವೇ ಖ್ಯಾತಿ ಪಡೆದಿದ್ದಾರೆ.

  • ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಬೆಂಗಳೂರು: ನಟ ಶ್ರೀಮುರಳಿ `ಮಫ್ತಿ’ ಸಿನಿಮಾದ ಯಶಸ್ವಿಯ ಖುಷಿಯಲ್ಲಿದ್ದು, ಇತ್ತೀಚೆಗೆ ಕಾರ್ಯಕ್ರಯವೊಂದರಲ್ಲಿ ಶಿವಣ್ಣ ಹೇಳಿದ್ದಕ್ಕೆ ಸ್ಯಾಂಡಲ್ ವುಡ್ ನಟಿಯೊಬ್ಬರಿಗೆ ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ ಎಂದು ಮೆಸೇಜ್ ಕಳುಹಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾನುವಾರ ನಟ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ (ಸತ್ಯನಾ.. ಧೈರ್ಯನಾ..) ಎಂಬ ಆಯ್ಕೆ ಇತ್ತು. ಅದರಲ್ಲಿ ಶ್ರೀಮುರಳಿ `ಧೈರ್ಯ’ ವನ್ನ ಆಯ್ಕೆ ಮಾಡಿಕೊಂಡಿದ್ದರು. ನಂತರ ಶಿವಣ್ಣ ನಿಮ್ಮ ಜೊತೆ ಅಭಿನಯಿಸಿದ ನಟಿಯರಲ್ಲಿ ಯಾವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ.? ಆ ಹೀರೋಯಿನ್ ಫೋನ್ ಗೆ `ಐ ಲವ್ ಯುವರ್ ಐಸ್’ ಎಂದು ಸಂದೇಶ ಕಳುಹಿಸಬೇಕು ಎಂದು ಹೇಳಿದ್ದಾರೆ.


    ಶಿವಣ್ಣ ಹೇಳಿದಂತೆ ಮುರಳಿ ಅವರು ಧೈರ್ಯವಾಗಿ “ಐ ಲವ್ ಯುವರ್ ಐಸ್” (ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ) ಎಂದು ನಟಿ ಮಾನ್ಯ ಅವರ ಫೋನ್ ನಂಬರ್ ಗೆ ಮೆಸೇಜ್ ಕಳುಹಿಸಿದ್ದು, ಕಾರ್ಯಕ್ರಮದಲ್ಲಿ ಶಿವಣ್ಣ ಕೊಟ್ಟ ಟಾಸ್ಕ್ ನ ಪೂರ್ಣಗೊಳಿಸಿದ್ದಾರೆ.

    ನಟಿ ಮಾನ್ಯ ಅವರು ಕನ್ನಡದಲ್ಲಿ ದರ್ಶನ್, ಶ್ರೀಮುರಳಿ ಮತ್ತು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಅಭಿಯಿಸಿದ್ದಾರೆ. 2005 ರಲ್ಲಿ ತೆರೆಕಂಡ ದಿವಂಗತ ಡಾ.ವಿಷ್ಣುವರ್ಧನ್ ನಟನೆಯ `ವರ್ಷ’, ದರ್ಶನ್ ಅಭಿನಯದ `ಶಾಸ್ತ್ರಿ’ ಮತ್ತು ಶ್ರೀಮುರಳಿ ಅಭಿನಯದ `ಶಂಭು’ ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಮಾನ್ಯ ಅವರು ಸ್ಯಾಂಡಲ್ ವುಡ್ ಮಾತ್ರವಲ್ಲದೇ ಮಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಅಭಿನಯಿಸಿದ್ದಾರೆ.

    ಸದ್ಯಕ್ಕೆ ನಟಿ ಮಾನ್ಯ ಮದುವೆಯಾಗಿ ಮಗುವಿನ ತಾಯಿಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಮಾನ್ಯ ಮತ್ತು ಶ್ರೀಮುರಳಿ ಇಬ್ಬರು ಮಾನ್ಯ ಒಳ್ಳೆಯ ಸ್ನೇಹಿತರು. ಅಷ್ಟೇ ಅಲ್ಲದೇ ಶ್ರೀಮುರಳಿ ಅವರ ಪತ್ನಿ ವಿದ್ಯಾ ಹಾಗೂ ಮಾನ್ಯ ಕೂಡ ಸ್ನೇಹಿತರಾಗಿದ್ದಾರೆ. ಇತ್ತೀಚೆಗಷ್ಟೇ ಶ್ರೀಮುರಳಿ ಪತ್ನಿ ವಿದ್ಯಾ ಅವರು ನ್ಯೂಯಾರ್ಕ್ ಗೆ ಹೋಗಿದ್ದಾಗ ಮಾನ್ಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

  • ಅಭಿಮಾನಿಗಳಿಗೆ ಲೈವ್ ಬಂದು Important Message ಹೇಳಿದ ಭರ್ಜರಿ ಗಂಡು

    ಅಭಿಮಾನಿಗಳಿಗೆ ಲೈವ್ ಬಂದು Important Message ಹೇಳಿದ ಭರ್ಜರಿ ಗಂಡು

    ಬೆಂಗಳೂರು: `ಭರ್ಜರಿ’ ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಅವರು ತಮ್ಮ ಮುಂದಿನ `ಪೊಗರು’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    ನಟ ಧ್ರುವ `ಪೊಗರು’ ಸಿನಿಮಾಗಾಗಿ ಹೊಸ ಲುಕ್ ಟ್ರೈ ಮಾಡುತ್ತಿದ್ದಾರೆ. ಆದ್ದರಿಂದ ಅವರ ಹೊಸ ಸ್ಟೈಲಿಶ್ ಲುಕ್ ರಿವೀಲ್ ಆಗಬಾರದು ಎಂದು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಅಂತಾ ಹೇಳಲಾಗುತ್ತಿದೆ. ಆದರೆ ಈಗ ತುಂಬಾ ದಿನಗಳ ನಂತರ ಧ್ರುವ ಸರ್ಜಾ ತಮ್ಮ ಟ್ವಿಟ್ಟರ್ ಮೂಲಕ ವಿಡಿಯೋ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮುಖ್ಯವಾದ ಸಂದೇಶವನ್ನು ತಿಳಿಸಿದ್ದಾರೆ.

    ಇತ್ತೀಚೆಗೆ ಧ್ರುವ ಸರ್ಜಾ ಹೆಸರಿನಲ್ಲಿ ಯಾರೋ ಇನ್‍ಸ್ಟಾಗ್ರಾಂ ಅಕೌಂಟ್ ಕ್ರಿಯೇಟ್ ಮಾಡಿದ್ದು, ಅವರ ಹೆಸರಿನಲ್ಲೇ ಹೆಣ್ಣುಮಕ್ಕಳಿಗೆ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಅವರೇ ಈಗ ಸ್ವತಃ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋ: “ಮೊದಲಿನಿಂದನೂ ನಾನು ಫೇಸ್ ಬುಕ್ ಮತ್ತು ಇನ್‍ಸ್ಟಾಗ್ರಾಂ ನಲ್ಲಿ ಇಲ್ಲ. ಆದರೆ ಇನ್‍ಸ್ಟಾಗ್ರಾಂ ನಲ್ಲಿ ತುಂಬಾ ಚೀಪಾಗಿ ಮೆಸೇಜ್ ಮಾಡುತ್ತಿದ್ದರಂತೆ. ಹಾಗಾಗಿ ಅದು ನನ್ನ ಅಕೌಂಟ್ ಅಲ್ಲ. ಆದರೆ ಈಗ ಇನ್‍ಸ್ಟಾಗ್ರಾಂ ನಲ್ಲಿ ಯಾರೆಲ್ಲಾ ಆ ಅಕೌಂಟ್ ಫಾಲೋ ಮಾಡುತ್ತಿದ್ದೀರೋ ಅವರೆಲ್ಲರೂ ಅನ್ ಫಾಲೋ ಮಾಡಿ. ಒಂದು ವೇಳೆ ನಿಮಗೆ ನನ್ನ ಹೆಸರಿನ ಅಕೌಂಟ್ ನಿಂದ ಮೆಸೇಜ್ ಬಂದರೆ ಸೈಬರ್ ಕ್ರೈಂ ಅವರಿಗೆ ದೂರು ನೀಡಿ” ಎಂದು ಮನವಿ ಮಾಡಿದ್ದಾರೆ.

  • ಎಸ್‍ಐಟಿಗೆ ಶಾಕ್ ನೀಡಿದ ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿ ಹೊಟ್ಟೆ ಮಂಜ

    ಎಸ್‍ಐಟಿಗೆ ಶಾಕ್ ನೀಡಿದ ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿ ಹೊಟ್ಟೆ ಮಂಜ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ನ ಶಂಕಿತ ಆರೋಪಿಯಾಗಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜ, ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದಾನೆ. ಹಾಗಾಗಿ ಅಹಮದಬಾದ್‍ಗೆ ಹೋಗಿದ್ದ ಪೊಲೀಸರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಆಗಿದ್ದಾರೆ.

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಈಗ ಯೂಟರ್ನ್ ಹೊಡೆದಿದ್ದಾನೆ. ವಿಚಾರಣೆ ವೇಳೆ ನವೀನ್, ನಾನು ಯಾವುದೇ ಮಂಪರು ಪರೀಕ್ಷೆಗೂ ಸಿದ್ಧ ಅಂತಾ ಕೋರ್ಟ್ ಮುಂದೆ ಒಪ್ಪಿಗೆ ನೀಡಿದ್ದನು. ಈ ಹಿನ್ನೆಲೆ ಎಸ್‍ಐಟಿ ಪೊಲೀಸರು ಮಂಪರು ಪರೀಕ್ಷೆಗೆ ಎಲ್ಲ ಸಿದ್ಧತೆ ಕೂಡ ನಡೆಸಿ, ಕಳೆದ 16 ರಂದು ಗುಜರಾತ್‍ನ ಅಹಮದಬಾದ್‍ಗೆ ಕರೆದುಕೊಂಡು ಹೋಗಿದ್ದರು.

    ಅಹಮದಬಾದ್ ತಲುಪಿದ ಹೊಟ್ಟೆ ಮಂಜ, ಎಸ್‍ಐಟಿ ಪೊಲೀಸರ ಮುಂದೆ ಮತ್ತೆ ಹೈಡ್ರಾಮಾ ಶುರುಮಾಡಿದ್ದು, ಪೊಲೀಸರ ಒತ್ತಾಯಕ್ಕೆ ಮಣಿದು ನಾನು ಮಂಪರು ಪರೀಕ್ಷೆಗೆ ಒಪ್ಪಿದೆ ಹೊರತು ಸ್ವಇಚ್ಛೆಯಿಂದ ಒಪ್ಪಿಗೆ ನೀಡಿರಲಿಲ್ಲ ಅಂತಾ ಕ್ಯಾತೆ ತೆಗೆದಿದ್ದಾನೆ. ಬಳಿಕ ನವೀನ್‍ನನ್ನು ಒಪ್ಪಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜವಾಗದ ಹಿನ್ನೆಲೆ ಬಂದ ದಾರಿಗೆ ಸುಂಕವಿಲ್ಲ ಅಂತಾ ಆತನನ್ನು ಬೆಂಗಳೂರಿಗೆ ವಾಪಸ್ಸು ಕರೆದುಕೊಂಡು ಬಂದಿದ್ದಾರೆ.

    ಪ್ರಕರಣ ಇನ್ನೇನು ಒಂದು ಹಂತಕ್ಕೆ ಬಂದು ತಲುಪಿದೆ ಅಂತಾ ನಿಟ್ಟಿಸಿರು ಬಿಟ್ಟಿದ್ದ ಎಸ್‍ಐಟಿ ಪೊಲೀಸರು ಮತ್ತೆ ತಲೆಬಿಸಿ ಮಾಡಿಕೊಂಡಿದ್ದಾರೆ.

  • ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ – `ಮುಖ್ಯಮಂತ್ರಿ ಮಾತು ಆ್ಯಪ್’ ಬಿಡುಗಡೆ

    ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ – `ಮುಖ್ಯಮಂತ್ರಿ ಮಾತು ಆ್ಯಪ್’ ಬಿಡುಗಡೆ

    ಬೆಂಗಳೂರು: ಕಾಂಗ್ರೆಸ್ ನಾಯಕರು `ಮುಖ್ಯಮಂತ್ರಿ ಮಾತು ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಈ ಆ್ಯಪ್ ಬಿಡುಗಡೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಚುನಾವಣೆ ಉಸ್ತುವಾರಿ ವೇಣುಗೋಪಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿಕೆಶಿವಕುಮಾರ್, ಜಾರ್ಜ್ ರಿಂದ ಆ್ಯಪ್ ಬಿಡುಗಡೆ ಮಾಡಿಸಲಾಗಿದೆ.

    ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಅನ್ನೊ ಟ್ಯಾಗ್ ಲೈನ್ ಕೂಡ ಇದೆ. ಈ ಆ್ಯಪ್ ನಲ್ಲಿ ಮುಖ್ಯಮಂತ್ರಿಗಳ ಮಾತು, ಸಿದ್ದರಾಮಯ್ಯ ಭಾಷಣದ ವಿಡಿಯೋ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಮುಂದಿನ ದಿನಗಳ ವಿಷನ್ ಕುರಿತಾತ ವಿಡಿಯೋ ಲಭ್ಯವಾಗುತ್ತದೆ. ಈ ಆ್ಯಪ್‍ನಲ್ಲಿ ಸಿಎಂ ಫೋಟೋ ಸ್ಕ್ಯಾನ್ ಮಾಡಿದರೆ ಸಿದ್ದರಾಮಯ್ಯ ಅವರ ಭಾಷಣ ಲಭ್ಯವಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಆ್ಯಪ್ ನಿರ್ಮಾಣ ಮಾಡಲಾಗಿದ್ದು, ಆಗ್ನೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಆ್ಯಪ್ ಆಗಿದೆ.

    ಈ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿ, ತಂತ್ರಜ್ಞಾನ ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣ. ಪ್ರಜಾಪ್ರಭುತ್ವದಲ್ಲಿ 5 ವರ್ಷಕ್ಕೆ ಚುನಾವಣೆ ನಡೆಯುತ್ತದೆ. ಮತದಾರರ ನಿರೀಕ್ಷೆಗೆ ತಕ್ಕಂತೆ ಸರ್ಕಾರಗಳು ಕೆಲಸ ಮಾಡಬೇಕು. ಆಡಳಿತದಲ್ಲಿ ಪಾರದರ್ಶಕತೆ, ಅಭಿವೃದ್ಧಿ ಕೆಲಸವನ್ನು ಸರ್ಕಾರ ಮಾಡಬೇಕು. 2013ರಲ್ಲಿ ನಮ್ಮ ಸರ್ಕಾರ ನೀಡಿದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ವಿನೂತನ ತಂತ್ರಜ್ಞಾನ ಬಳಸಿಕೊಂಡು ಚುನಾವಣೆ ಪ್ರಚಾರ ಮಾಡುತ್ತೀವಿ. ಮತ್ತೆ ರಾಜ್ಯದ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಅಂತ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

    ರಾಜ್ಯದ ಜನ ಅನ್ನ, ನೀರು ಕೊಟ್ಟವರನ್ನ ಕೈ ಬಿಡೊಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅಮಿತ್ ಶಾ, ಮೋದಿ, ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಾರೆ. ಕೇಂದ್ರದಲ್ಲಿ ಅವರ ಸಾಧನೆ ಇಲ್ಲ, ರಾಜ್ಯದಲ್ಲೂ ಸಾಧನೆ ಇಲ್ಲ. ಜೈಲಿಗೆ ಹೋಗಿದ್ದೇವೆ ಅಂತ ಹೇಳಲು ಆಗೊಲ್ಲ. ಅದಕ್ಕಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್ ಗೆ ರಾಜ್ಯದಲ್ಲಿ ಶಕ್ತಿ ಇಲ್ಲ. ಕೆಲ ಜಿಲ್ಲೆಯಲ್ಲಿ ಮಾತ್ರ ಜೆಡಿಎಸ್ ಇದೆ. ಅತಂತ್ರ ವಿಧಾನಸಭೆ ಆಗಲಿ ಅಂತ ಜೆಡಿಎಸ್ ಕಾಯುತ್ತಿದೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತ ಕನಸ್ಸು ಕಾಣುತ್ತಿದ್ದಾರೆ. ಅದು ಕನಸಾಗೇ ಇರುತ್ತದೆ. ಅವರು ಅಧಿಕಾರಕ್ಕೆ ಬರೊಲ್ಲ. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದ್ರು.