Tag: Bangalore

  • ಫೈನಾನ್ಶಿಯರ್ ನನ್ನು ಬಂಧಿಸಿ ಇಬ್ಬರು ಮಕ್ಕಳು, ವಯೋವೃದ್ಧೆಯನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಪೊಲೀಸರು!

    ಫೈನಾನ್ಶಿಯರ್ ನನ್ನು ಬಂಧಿಸಿ ಇಬ್ಬರು ಮಕ್ಕಳು, ವಯೋವೃದ್ಧೆಯನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಪೊಲೀಸರು!

    ಬೆಂಗಳೂರು: ಫೈನಾನ್ಶಿಯರ್ ನನ್ನು ಬಂಧಿಸುವ ವೇಳೆ ಇಬ್ಬರು ಮಕ್ಕಳು ಹಾಗೂ ವಯೋವೃದ್ಧೆಯೊಬ್ಬರನ್ನು ಹೆದ್ದಾರಿಯಲ್ಲಿಯೇ ಪೊಲೀಸರು ಬಿಟ್ಟು ಹೋಗಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಂಚೀಪುರ ಗೇಟ್‍ ನಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದ ಚಿಕ್ಕರಂಗೇಗೌಡನನ್ನು ಬಂಧಿಸುವ ವೇಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಅಮಾನವೀಯತೆ ಮೆರೆದಿದ್ದಾರೆ.

    ಚಿಕ್ಕರಂಗೇಗೌಡ ಗ್ಲೋಬಲ್ ಫೈನಾನ್ಸ್ ಎನ್ನುವ ವೆಹಿಕಲ್ ಸೀಜಿಂಗ್ ಏಜೆನ್ಸಿ ನಡೆಸುತ್ತಿದ್ದು, ಎರಡು ದಿನದ ಹಿಂದೆ ಒಂದು ಬಸ್ಸನ್ನು ಸೀಝ್ ಪಡೆದಿದ್ದಾರೆ. ಈ ವೇಳೆ ಬಸ್ ಚಾಲಕನ ಅಜಾಗರೂಕತೆಯಿಂದ ಪ್ರಯಾಣಿಕರನ್ನು ಒಳಗೊಂಡಂತೆ ಬಸ್ಸನ್ನು ಗೋಡೌನ್‍ ಗೆ ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ ಗಾಬರಿಗೊಂಡ ಪ್ರಯಾಣಿಕರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:  ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 42 ಪ್ರಯಾಣಿಕರಿದ್ದ ಬಸ್ ಹೈಜಾಕ್!

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕರಂಗೇಗೌಡ ಎಂಬವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಚಿಕ್ಕರಂಗೇಗೌಡ ಬೆಂಗಳೂರಿನಿಂದ ಕುಣಿಗಲ್ ಮಾರ್ಗವಾಗಿ ತುಮಕೂರಿಗೆ ಹೋಗುತ್ತಿದ್ದರು. ಆಗ ನೆಲಮಂಗಲ ಕುಣಿಗಲ್ ರಸ್ತೆಯ ಹಂಚೀಪುರ ಗೇಟ್ ಬಳಿ ತಮ್ಮ ಟಾಟಾ ಸುಮೋ ಕಾರಿಗೆ ಡೀಸೆಲ್ ತುಂಬಿಸಲು ಕಾರ್ ನಿಲ್ಲಿಸಿದ್ದಾರೆ. ಈ ವೇಳೆ ಚಿಕ್ಕರಂಗೇಗೌಡ ಅವರನ್ನು ಹಿಂಬಾಲಿಸುತ್ತಿದ್ದ ಪೊಲೀಸರು ಬಂಧಿಸಿದ್ದಾರೆ.

    ಕಾರಿನಲ್ಲಿ ಚಿಕ್ಕರಂಗೇಗೌಡರ ಮಕ್ಕಳಾದ ಅಕ್ಷಯ, ದೀಪಕ್ ಹಾಗೂ ಅತ್ತೆ ಸರೋಜಮ್ಮ ಎಷ್ಟೇ ಮನವಿ ಮಾಡಿದ್ರೂ ಬಿಡದೆ, ಅವರೆಲ್ಲರನ್ನು ಹೆದ್ದಾರಿಯಲ್ಲೇ ಬಿಟ್ಟು ಹೋಗುವ ಮೂಲಕ ಮಾನವೀಯತೆ ಮರೆತ್ರು. ಬಸ್ ಸೀಝ್ ಮಾಡಿದ್ದನ್ನ ಹೈಜಾಕ್ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಿಕ್ಕರಂಗೇಗೌಡರನ್ನು ಬಂಧಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  • ಬೆಂಗ್ಳೂರಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಶೂ ಬಾಣ- ವಿಡಿಯೋ ವೈರಲ್

    ಬೆಂಗ್ಳೂರಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಶೂ ಬಾಣ- ವಿಡಿಯೋ ವೈರಲ್

    ಬೆಂಗಳೂರು: ವಾಹನ ಸವಾರರು ತಪ್ಪು ಮಾಡಿದರೆ ದಂಡ ಹಾಕೋದನ್ನು ಹಾಗೂ ಡಿಎಲ್ ರದ್ದು ಮಾಡೋದನ್ನ ನೋಡಿದ್ದೀವಿ. ಆದರೆ ಇದೀಗ ಟ್ರಾಫಿಕ್ ಪೊಲೀಸರು ಬೂಟಿನೇಟು ಕೊಟ್ಟಿದ್ದಾರೆ.

    ಈ ಘಟನೆ ನಗರದ ಎಂ.ಎಸ್ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ. ಹೆಲ್ಮೆಟ್ ಧರಿಸದೇ ಬೈಕಿನಲ್ಲಿ ಇಬ್ಬರು ಯುವಕರು ಗೊರಗುಂಟೆಪಾಳ್ಯದ ಕಡೆಯಿಂದ ಹೆಬ್ಬಾಳದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಪೆಟ್ರೋಲ್ ಬಂಕ್ ಸಮೀಪ ನಿಂತಿದ್ದ ಟ್ರಾಫಿಕ್ ಪೇದೆಯೊಬ್ಬರು ಇದನ್ನು ಗಮನಿಸಿದ್ದಾರೆ.

    ಟ್ರಾಫಿಕ್ ಪೊಲೀಸ್ ಇಬ್ಬರು ಯುವಕರು ಹೆಲ್ಮೆಟ್ ಧರಿಸಿಲ್ಲ ಎಂದು ಕೋಪಗೊಂಡು ಕಾಲಿನಿಂದ ಶೂ ತೆಗೆದು ಅವರಿಗೆ ಎಸೆದಿದ್ದಾರೆ. ಈ ದೃಶ್ಯ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾರಿನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.youtube.com/watch?v=zKafHFQwvi8&feature=youtu.be

  • ಕೊನೆಗೂ ಹುಚ್ಚ ವೆಂಕಟ್ ಗೆ `ಎಕ್ಕಡ’ ದಯಪಾಲಿಸಿದ ಚುನಾವಣಾ ಆಯೋಗ!

    ಕೊನೆಗೂ ಹುಚ್ಚ ವೆಂಕಟ್ ಗೆ `ಎಕ್ಕಡ’ ದಯಪಾಲಿಸಿದ ಚುನಾವಣಾ ಆಯೋಗ!

    ಬೆಂಗಳೂರು: ನನ್ ಮಗಂದ್ ನನ್ ಎಕ್ಕಡ ಅಂತಾ ತಲೆ ತುಂಬಾ ಇರುವ ಕೂದಲನ್ನು ಕೆದರಿಸಿ ಕೆದರಿಸಿ ಹೇಳುವ ಹುಚ್ಚಾ ವೆಂಕಟ್ ಗೆ ಕೊನೆಗೂ ಚುನಾವಣಾ ಆಯೋಗ ಎಕ್ಕಡವನ್ನು ದಯಪಾಲಿಸಿದೆ.

    ನಟ, ನಿರ್ದೇಶಕ ಹುಚ್ಚ ವೆಂಕಟ್ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ ಪಕ್ಷದವರು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಚುನಾವಣೆ ಪ್ರಚಾರವನ್ನು ಶುರು ಮಾಡಿದ್ದಾರೆ.

    ಹುಚ್ಚ ವೆಂಕಟ್ ಆರ್ ಆರ್ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಚುನಾವಣೆ ಆಯೋಗವು ಅಭ್ಯರ್ಥಿಗಳ ಗುರುತನ್ನ, ಚಿಹ್ನೆಯನ್ನು ಘೋಷಣೆ ಮಾಡಿದೆ. ಆದರೆ ನಿಮ್ಮಪ್ಪನ ಚಪ್ಪಲಿ ಸೈಜ್ ಗೊತ್ತಾ, ಅಪ್ಪಂಗೆ ಯಾವತ್ತಾದ್ದರೂ ಚಪ್ಪಲಿ ಕೊಡಿಸಿದ್ದೀರಾ ಅಂತಾ ಪದೇ ಪದೇ ಟಿವಿಯೆದುರು ಕುಂತಾಗ ಸೆಂಟಿಮೆಂಟ್ ಡೈಲಾಗ್ ಹೇಳುವ ವೆಂಕಟ್ ಗೆ ಚಿಹ್ನೆಯಾಗಿ ಎಕ್ಕಡವೆ ತನ್ನ ಗುರುತಾಗಿ ಸಿಕ್ಕಿದೆ.

    ಎಕ್ಕಡನಾ ಕಾಡಿಬೇಡಿ ವೆಂಕಟ್ ಪಡೆದುಕೊಂಡರೋ ಅಥವಾ ಚುನಾವಣಾಧಿಕಾರಿಗಳೇ ವೆಂಕಟ್ ಎಕ್ಕಡಾ ಡೈಲಾಗ್ ಗೆ ಫಿದಾ ಆಗಿ ಇದೇ ಚಿಹ್ನೆ ಕೊಟ್ಟರೋ ಗೊತ್ತಿಲ್ಲ. ಆದರೆ ಎಕ್ಕಡದೊಂದಿಗೆ ಕಣಕ್ಕಿಳಿದಿರುವ ವೆಂಕಟ್ ಆರ್ ಆರ್ ನಗರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.

  • ಯುಪಿಎಸ್‍ಸಿ ಪರೀಕ್ಷೆಯಲ್ಲಿ 26 ಮಂದಿ ಕನ್ನಡಿಗರು ಪಾಸ್

    ಯುಪಿಎಸ್‍ಸಿ ಪರೀಕ್ಷೆಯಲ್ಲಿ 26 ಮಂದಿ ಕನ್ನಡಿಗರು ಪಾಸ್

    ಬೆಂಗಳೂರು: ಪ್ರತಿಷ್ಠಿತ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‍ಸಿ) ನಡೆಸುವ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ 26 ಮಂದಿ ಆಯ್ಕೆಯಾಗಿದ್ದಾರೆ.

    ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2017ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಇದರಲ್ಲಿ ತೆಲಂಗಾಣದ ಅನುದೀಪ್ ದುರಿಶೆಟ್ಟಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ರಾಜ್ಯದ 25 ಅಭ್ಯರ್ಥಿಗಳು ವಿವಿಧ ಹಂತದ ರ‍್ಯಾಂಕ್ ಗಳಿಸಿದ್ದು, ಬೀದರ್ ನ ಶಿಂಧೆ 95ನೇ ಸ್ಥಾನ ಪಡೆದಿದ್ದಾರೆ.

    ಕನ್ನಡಿಗರ ಪಟ್ಟಿ:
    ಕೀರ್ತಿ ಕಿರಣ್ ಪೂಜಾರ್ (115 ರ್ಯಾಂಕ್), ಎಂ.ಶ್ವೇತಾ (119), ಟಿ.ಶುಭಮಂಗಳಾ(147), ಸಿ. ವಿಂಧ್ಯಾ (160), ಕೃತಿಕಾ (194), ಪೃಥ್ವಿಕ್ ಶಂಕರ್ (211), ಬಿ.ಗೋಪಾಲಕೃಷ್ಣ (265), ಎಚ್.ವಿನೋದ್ ಪಾಟೀಲ್ (294), ಎಂ.ಪುನೀತ್ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346), ಸುದರ್ಶನ ಭಟ್ (434), ಎನ್.ವೈ. ವೃಶಾಂಕ್ (478), ಅಭಿಲಾಷ್ ಶಶಿಕಾಂತ್ ಬದ್ದೂರ್ (531), ನಿಖಿಲ್ ನಿಪ್ಪಾಣಿಕರ್ (563), ಟಿ.ಎನ್. ನಿಥನ್‍ರಾಜ್ (575), ಎಸ್. ಪ್ರೀತಮ್ (654), ಬಿ.ಸಿ. ಹರೀಶ (657), ಆರ್.ವಿಜಯೇಂದ್ರ (666), ಶಿವರಾಜ್ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್ (930), ಪಿ.ಪವನ್ (933), ಮಹೇಶ ವದ್ದೆ (958) ರ‍್ಯಾಂಕ್ ಪಡೆದಿದ್ದಾರೆ.

  • ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 42 ಪ್ರಯಾಣಿಕರಿದ್ದ ಬಸ್ ಹೈಜಾಕ್!

    ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 42 ಪ್ರಯಾಣಿಕರಿದ್ದ ಬಸ್ ಹೈಜಾಕ್!

    ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಪ್ರಯಾಣಿಕರು ತುಂಬಿದ್ದ ಖಾಸಗಿ ಬಸ್‍ನ್ನು ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ.

    ಕೆಎ 01 ಎಜಿ ನಂಬರ್ ನ ಲಾಮಾ ಟ್ರಾವೆಲ್ಸ್ ಗೆ ಸೇರಿದ ಬಸ್ ಸುಮಾರು 42 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟಿತ್ತು. ಈ ವೇಳೆ ಮೈಸೂರು ರಸ್ತೆಯ ಆರ್‍ವಿ ಕಾಲೇಜ್ ಬಳಿ ತಡೆದ ನಾಲ್ವರು ವ್ಯಕ್ತಿಗಳು ನಾವು ಪೊಲೀಸರು ಅಂತಾ ಹೇಳಿ ಬಸ್ ಡ್ರೈವರ್ ನ ಕೆಳಗಿಳಿಸಿ ಬಸ್‍ನ್ನು ಅಪಹರಿಸಿದ್ದರು.

    ಅಪಹರಿಸಿ ಆರ್ ಆರ್ ನಗರದ ಪಟ್ಟಣಗೆರೆಯ ಗೋಡಾನ್‍ವೊಂದರಲ್ಲಿ ಸುಮಾರು ಒಂದು ಗಂಟೆಗಳ ಕಾಲ ಬಂಧನದಲ್ಲಿ ಇಟ್ಟಿದ್ದರು. ಇದರಿಂದ ಗಾಬರಿಗೊಂಡ ಪ್ರಯಾಣಿಕರು, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದ ಸುಮಾರು 30 ಕ್ಕೂ ಹೆಚ್ಚು ಜನರ ತಂಡ ಗೋಡಾನ್‍ ನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

    ಪ್ರಾಥಮಿಕ ಮಾಹಿತಿ ಪ್ರಕಾರ ಫೈನಾನ್ಸ್ ವಿಚಾರವಾಗಿ ಈ ಕಿಡ್ನಾಪ್ ನಡೆದಿದೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆರ್ ಆರ್ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಐದು ಕಾರು, ಕ್ಯಾಂಟರ್ ನಡುವೆ ಸರಣಿ ಅಪಘಾತ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

    ಐದು ಕಾರು, ಕ್ಯಾಂಟರ್ ನಡುವೆ ಸರಣಿ ಅಪಘಾತ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

    ಬೆಂಗಳೂರು: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿ, ಪವಾಡ ರೀತಿಯಲ್ಲಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.

    ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಬಳಿ ಐದು ಕಾರು ಹಾಗೂ ಒಂದು ಕ್ಯಾಂಟರ್ ವಾಹನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ರಸ್ತೆ ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಹೆದ್ದಾರಿಯಲ್ಲಿ ಕಾರುಗಳು ಉರುಳಿ ಬಿದ್ದಿದೆ.

    ಘಟನೆಯಲ್ಲಿ ಕಾರಿನಲ್ಲಿದ ಕೆಲ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಣಿ ಅಪಘಾತ ದಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಕೆಲ ಸಮಯ ವಾಹನ ಸವಾರರು ಪರದಾಡಿದರು. ಘಟನಾ ಸ್ಥಳಕ್ಕೆ ಡಾಬಸ್ ಪೇಟೆ ಹಾಗೂ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಟ್ಟರು.

  • ರೇವಾ ಪ್ರೊಜೆಕ್ಟ್ ಎಕ್ಸ್ ಪೋಗೆ ಚಾಲನೆ

    ರೇವಾ ಪ್ರೊಜೆಕ್ಟ್ ಎಕ್ಸ್ ಪೋಗೆ ಚಾಲನೆ

    ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರೊಜೆಕ್ಟ್ ಅನಾವರಣಕ್ಕೆ ಅವಕಾಶ ಇರುವ ರೇವಾ ಪ್ರೊಜೆಕ್ಟ್ ಎಕ್ಸ್ ಪೋ 2018ಕ್ಕೆ ಚಾಲನೆ ಸಿಕ್ಕಿದೆ.

    ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಡಿಆರ್ ಡಿಓ ದ ನಿವೃತ್ತ ಜನರಲ್ ನಿರ್ದೇಶಕ ಡಾ.ಕೆ.ಡಿ.ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ. ಶ್ಯಾಮ ರಾಜು ಅಧ್ಯಕ್ಷತೆಯನ್ನು ವಹಿಸಿದ್ದರೆ, ರೇವಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವೈ ಕುಲಕರ್ಣಿ ಉಪಸ್ಥಿತರಿದ್ದರು.

    ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಿದ್ದು, ವಿವಿಧ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರೊಜೆಕ್ಟ್ ಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಕಾರ್ಯಕ್ರಮ ನಡೆಯುವ ಸ್ಥಳ: ರೇವಾ ವಿಶ್ವವಿದ್ಯಾಲಯ, ರುಕ್ಮಿಣಿ ನಾಲೆಡ್ಜ್ ಪಾರ್ಕ್, ಕಟ್ಟಿಗೆನಹಳ್ಳಿ, ಯಲಹಂಕ, ಬೆಂಗಳೂರು.

  • ರಕ್ತ ನಿಧಿಗಳಿಗೂ ತಟ್ಟಿದೆ ವಿಧಾನಸಭಾ ಚುನಾವಣೆಯ ಎಫೆಕ್ಟ್

    ರಕ್ತ ನಿಧಿಗಳಿಗೂ ತಟ್ಟಿದೆ ವಿಧಾನಸಭಾ ಚುನಾವಣೆಯ ಎಫೆಕ್ಟ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಕಡೆ ಅದರ ಬಿಸಿ ತಟ್ಟಿದೆ. ಈಗ ಈ ಚುನಾವಣೆಯ ಪರಿಣಾಮ ರಕ್ತ ನಿಧಿಗಳಿಗೂ ತಟ್ಟಿದೆ.

    ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಪರಿಣಾಮದಿಂದಾಗಿ ರಕ್ತದ ಕೊರತೆ ಉಂಟಾಗಿದ್ದು, ರಾಜ್ಯದಲ್ಲಿ ರಕ್ತ ನಿಧಿಗಳಲ್ಲಿ ರಕ್ತವೇ ಸಿಗುತ್ತಿಲ್ಲ. ಇದರಿಂದ ರಾಜ್ಯಾದ್ಯಂತ ಶೇಕಡಾ 80% ಜನ ರಕ್ತದ ಸಿಗದೇ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಚುನಾವಣೆಯಿಂದ ರಾಜಕೀಯ ನಾಯಕರು, ಗಣ್ಯರು, ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಗಣ್ಯರು ತಮ್ಮ ಹುಟ್ಟುಹಬ್ಬದ ಹೆಸರಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿದ್ದರು. ಈಗ ಈ ನೀತಿ ಸಂಹಿತೆಯಿಂದ ಗಣ್ಯರ ಹುಟ್ಟು ಹಬ್ಬಕ್ಕೂ ತಡೆಬಿದ್ದಿದ್ದು, ರಕ್ತದಾನ ಶಿಬಿರ ಆಯೋಜನೆಗೆ ನೀತಿ ಸಂಹಿತೆ ಅಡ್ಡಿ ಪಡಿಸಿದೆ. ಇದರಿಂದ ರೋಗಿಗಳು ರಕ್ತ ಸಿಗದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಇನ್ನು ಸಿನಿಮಾ ನಟ-ನಟಿಯರು ಕೂಡ ಚುನಾವಣಾ ಪ್ರಚಾರಕ್ಕಾಗಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಸಂಘ ಸಂಸ್ಥೆಗಳು ಹಾಗೂ ಕಾರ್ಯಕರ್ತರು ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ರಕ್ತದಾನ ಶಿಬಿರ ಆಯೋಜನೆಯಾಗುತ್ತಿಲ್ಲ. ರಾಷ್ಟ್ರೋತ್ಥಾನ ರಕ್ತ ನಿಧಿಯಲ್ಲಿ ತಿಂಗಳಿಗೆ ಸರಾಸರಿ 7 ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ ಏಪ್ರಿಲ್‍ನಲ್ಲಿ ಕೇವಲ 2 ಸಾವಿರ ಯೂನಿಟ್ ರಕ್ತ ಸಂಗ್ರಹವಾಗಿದೆ.

  • ಪ್ರಧಾನಿ ಮೋದಿ ಫೋಟೋದಿಂದಾಗಿ ಗೂಗಲ್ ವಿರುದ್ಧ ರಮ್ಯಾ ಕಿಡಿ

    ಪ್ರಧಾನಿ ಮೋದಿ ಫೋಟೋದಿಂದಾಗಿ ಗೂಗಲ್ ವಿರುದ್ಧ ರಮ್ಯಾ ಕಿಡಿ

    ಬೆಂಗಳೂರು: ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ ಗೂಗಲ್ ವಿರುದ್ಧ ಹರಿಹಾಯ್ದಿದ್ದಾರೆ.

    ರಮ್ಯಾ ಗೂಗಲ್ ಸರ್ಚ್ ಇಂಜಿನ್‍ನಲ್ಲಿ`India first pm’ (ಭಾರತದ ಮೊದಲ ಪ್ರಧಾನಿ) ಎಂದು ಟೈಪ್ ಮಾಡಿ ಹುಡುಕಿದ್ದಾರೆ. ಆಗ ಅವರಿಗೆ ಜವಾಹರಲಾಲ್ ನೆಹರೂ ಹೆಸರು ಬಂದಿದೆ. ಆದರೆ ಅದರಲ್ಲಿ ಫೋಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರದ್ದು ಕಾಣಿಸಿಕೊಂಡಿದೆ. ಇದರಿಂದ ರಮ್ಯಾ ಗೂಗಲ್ ವಿರುದ್ಧ ಕಿಡಿ ಕಾರಿದ್ದಾರೆ.

    ರಮ್ಯಾ ಫೋಟೋ ನೋಡಿದ ನಂತರ ಅದರ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ಮತ್ತು ಗೂಗಲ್ ಇಂಡಿಯಾಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ, “ನಿಮ್ಮ ಕ್ರಮಾವಳಿಯಿಂದಾಗಿ ಹೀಗಾಗಿದೆ? ನಿಮ್ಮ ಸಂಗ್ರಹದಲ್ಲಿ ಬರೀ ಕಸಕಡ್ಡಿ ತುಂಬಿದೆ” ಎಂದು ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: 8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ

    ರಮ್ಯಾ ಈ ರೀತಿ ಫೋಟೋ ಹಾಕಿ ಟ್ವೀಟ್ ಮಾಡಿದ ಕೂಡಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟಿಗರು ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ.

    ನಿನ್ನೆಯಷ್ಟೇ ರಮ್ಯಾ ದೇಶದ ಪ್ರಧಾನಿ ಬಗ್ಗೆ ಟ್ವೀಟ್ ಮಾಡುವ ಮೂಲಕ ಮತ್ತೆ ಮೋದಿ ಕಾಲೆಳೆದಿದ್ದರು. ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳಲು ಧೈರ್ಯವಿದೆಯಾ ಅನ್ನೋ ಪ್ರಶ್ನೋತ್ತರವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಪ್ರಧಾನಿ ಮೋದಿ ಅವರು ಹೇಳುವಂತೆ 56 ಇಂಚು ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ ಅಂತ ಹೇಳುವ ಮೂಲಕ ಲೇವಡಿ ಮಾಡಿದ್ದರು.

  • ರಿಯಲ್ ಸ್ಟಾರ್ ಉಪೇಂದ್ರರಿಂದ ಹೊಸ ಪಕ್ಷ ಸ್ಥಾಪನೆ

    ರಿಯಲ್ ಸ್ಟಾರ್ ಉಪೇಂದ್ರರಿಂದ ಹೊಸ ಪಕ್ಷ ಸ್ಥಾಪನೆ

    ಬೆಂಗಳೂರು: ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಕೆಪಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈಗ ತಾವೇ ಹೊಸ ಪಕ್ಷವನ್ನು ಸ್ಥಾಪಿಸಿ ನೋಂದಣಿ ಮಾಡಿಸುತ್ತಿದ್ದಾರೆ.

    ದೆಹಲಿಯ ಚುನಾವಣಾ ಕಚೇರಿಗೆ ಹೋಗಿ ತನ್ನ ಉತ್ತಮ ಪ್ರಜಾಕೀಯ ಪಕ್ಷವನ್ನು ನೋಂದಣಿ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ದೆಹಲಿಯ ಚುನಾವಣಾ ಕಚೇರಿಯ ಮುಂಭಾಗ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಟ್ವೀಟ್ ಮಾಡಿ ಉತ್ತಮ ಪ್ರಜಾಕೀಯ ಪಕ್ಷ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

    ಕೆಪಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೂ ಕೆಪಿಜೆಪಿಗೂ ಇನ್ಮುಂದೆ ಸಂಬಂಧ ಇರಲ್ಲ. ಪ್ರಜಾಕೀಯ ಹೆಸರಲ್ಲಿ ಹೊಸ ಪಕ್ಷ ಕಟ್ಟಲು ತೀರ್ಮಾನ ಮಾಡಿದ್ದೇವೆ. ಇಂದಿನಿಂದಲೇ ಹೊಸ ಪಕ್ಷ ಸ್ಥಾಪನೆ ಕಾರ್ಯ ಆರಂಭಿಸುತ್ತೇವೆ. ಪ್ರಜಾಕೀಯದ ಸಿದ್ಧಾಂತ ಇಟ್ಟುಕೊಂಡೇ ಹೊಸ ಪಕ್ಷ ಕಟ್ಟುತ್ತೇವೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಎಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬಂದ್ದಿದ್ದೇವೆ. ನಾನು ಹಾಗೂ ನನ್ನ ಜೊತೆ ನಾಲ್ಕೈದು ಜನ ಸೇರಿ ಎಲ್ಲರೂ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ದರು.

    ಪ್ರಜಾಕೀಯ ವಿಷಯವನ್ನು ಜನರಿಗೆ ತಿಳಿಸುತ್ತೇವೆ. ಅದಷ್ಟು ಬೇಗ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡುತ್ತೇವೆ. ಇದೇ ವಿಧಾನಸಭೆ ಚುನಾವಣೆಗೆ ಸ್ಫರ್ಧೆ ಮಾಡುತ್ತೇವೆ. ಇಲ್ಲವಾದ್ರೆ ಪಾಲಿಕೆ ಚುನಾವಣೆ ಅಥವಾ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಪ್ರಜಾಕೀಯ ಬಿಟ್ಟು ರಾಜಕೀಯ ಮಾಡಲ್ಲ ಎಂದು ಅಂದು ತಿಳಿಸಿದ್ದರು.