Tag: Bangalore

  • ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಬೆಂಗಳೂರು: ಚುನಾವಣಾ ಸನ್ಯಾಸ ಘೋಷಿಸಿರುವ ಹಿರಿಯ ನಟ ಮತ್ತು ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್‍ರನ್ನು ಶನಿವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.

    ಬೆಂಗಳೂರಿನ ಗಾಲ್ಫ್ ಕ್ಲಬ್‍ನಲ್ಲಿರುವ ಅಂಬಿ ಮನೆಗೆ ಕುಮಾರಸ್ವಾಮಿ ತೆರಳಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ ಅಂತ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

    ಈ ವೇಳೆ ಅಂಬಿ ಕಾಂಗ್ರೆಸ್‍ನಲ್ಲಿ ನನಗೆ ಅವಮಾನ ಮಾಡಿದ್ದಾರೆ. ಹೇಳದೇ ಕೇಳದೇ ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಅದೇ ಕಾರಣಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್ ಬಗ್ಗೆ ಅಂಬಿ ಹೊಗಳಿದ್ದರು. ಆದರೆ ಈಗ ಜೆಡಿಎಸ್ ಸೇರ್ಪಡೆ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೀನಿ ಎಂದು ಹೇಳಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಾಲನೆ- ಸಾರ್ವಜನಿಕರಿಂದ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

    ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಾಲನೆ- ಸಾರ್ವಜನಿಕರಿಂದ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

    ಹನುಮಂತನಗರ 50 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹಾಸನಾಂಭ ಟ್ರಾವೆಲ್ಸ್ ಗೆ ಸೇರಿದ ಇನ್ನೋವಾ ಕಾರನ್ನು ಚಾಲಕ ಅಭಿಷೇಕ್ ಓಡಿಸುತ್ತಿದ್ದ. ಮದ್ಯಪಾನ ಸೇವಿಸಿದ್ದ ಅಭಿಷೇಕ್ ಅಮಲಿನಲ್ಲಿ ಕಾರನ್ನು ಅಡ್ಡಾದಿಡ್ಡಿ ಓಡಿಸಿ ಸರಣಿ ಅಪಘಾತ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಸದ್ಯ ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಚಾಲನೆಯಡಿ ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ. ಪೊಲೀಸರು ಆರೋಪಿ ಡ್ರೈವರ್ ಅಭಿಷೇಕ್ ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ಈ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಡ್ರೈವರ್ ಪಾರಾಗಿದ್ದಾನೆ.

  • ಮದ್ವೆ ನಂತ್ರ ಪತಿಯ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮೇಘನಾ ರಾಜ್ ಸರ್ಜಾ

    ಮದ್ವೆ ನಂತ್ರ ಪತಿಯ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಮೇಘನಾ ರಾಜ್ ಸರ್ಜಾ

    ಬೆಂಗಳೂರು: ಕಳೆದ ಒಂದು ವಾರದಿಂದ ಚಿರು ಹಾಗೂ ಮೇಘನಾ ಮನೆಯಲ್ಲಿ ಮದುವೆ ಸಂಭ್ರಮ-ಸಡಗರ ಜೋರಾಗಿ ನಡೆದಿದೆ. ಆದರೆ ಮದುವೆ ಮುಗಿದರೂ ಅವರ ಮನೆಯಲ್ಲಿ ಸಂಭ್ರಮ ಮಾತ್ರ ಮುಗಿದಿಲ್ಲ.

    ನಟಿ ಮೇಘನಾ ರಾಜ್ ತಮ್ಮ 28ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ. ಮೇ 2 ಬುಧವಾರ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಮೇಘನಾ ತನ್ನ ಪತಿಯ ಜೊತೆ ಮೊದಲ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ.

    ಪ್ರತಿ ವರ್ಷ ಮೇಘನಾ ರಾಜ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಮದುವೆ ನಂತರ ಮೊದಲ ಬಾರಿಗೆ ಸರ್ಜಾ ಕುಟುಂಬ ಮತ್ತು ತಮ್ಮ ಕುಟುಂಬದ ಜೊತೆ ಆಚರಣೆ ಮಾಡಿಕೊಂಡಿದ್ದಾರೆ. ನಂತರ ಹುಟ್ಟುಹಬ್ಬದ ಪ್ರಯುಕ್ತ ನವಜೋಡಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

    ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ, ಭಾನುವಾರ ಸೇಂಟ್ ಆಂಟೋನಿ ಫ್ರೈಯರಿ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಬುಧವಾರ ಬೆಳಗ್ಗೆ 10:30ರ ಮಿಥುನ ಲಗ್ನದಲ್ಲಿ ಚಿರು-ಮೇಘನಾ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಸಿನಿಮಾ ಗಣ್ಯರು, ನಟ-ನಟಿಯರು ನವಜೋಡಿಗೆ ಬಂದು ಶುಭಾ ಹಾರೈಸಿದ್ದರು.

    ಮದುವೆ, ಹುಟ್ಟುಹಬ್ಬ ಎಲ್ಲಾ ಕಾರ್ಯಕ್ರಮವನ್ನು ಮುಗಿಸಿದ ಕೆಲವು ದಿನಗಳಲ್ಲಿಯೇ ಇಬ್ಬರ ಸಿನಿಮಾಗಳು ಸೆಟ್ಟೇರಲಿದೆ.

  • ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆಗೈದು ರುಂಡ, ಮುಂಡ ಬೇರ್ಪಡಿಸಿದ ದುಷ್ಕರ್ಮಿಗಳು!

    ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆಗೈದು ರುಂಡ, ಮುಂಡ ಬೇರ್ಪಡಿಸಿದ ದುಷ್ಕರ್ಮಿಗಳು!

    ಬೆಂಗಳೂರು: ವ್ಯಕ್ತಿಯೊಬ್ಬರ ರುಂಡ ಹಾಗೂ ಮುಂಡ ಬೇರ್ಪಡಿಸಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಡೇವಿಡ್ (42)ಹತ್ಯೆಯಾದ ವ್ಯಕ್ತಿ. ಗುರುವಾರ ರಾತ್ರಿ ಗಂಗಮ್ಮನಗುಡಿಯ ರಾಮಚಂದ್ರಾಪುರ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರಾತ್ರಿ ಕೊಲೆ ಮಾಡಿದ್ದು, ಇಂದು ಮುಂಜಾನೆ ಮೃತ ಡೇವಿಡ್ ನ ರುಂಡ ಪತ್ತೆಯಾಗಿದೆ.

    ಜೋರಾಗಿ ಬರುತ್ತಿದ್ದ ಮಳೆಯಲ್ಲೇ ದುಷ್ಕರ್ಮಿಗಳು ಡೇವಿಡ್ ನ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹೊಡೆದು ಕೊಂದಿದ್ದಾರೆ. ಬಳಿಕ ಡೇವಿಡ್ ನ ರುಂಡ ಒಂದು ಕಡೆ, ಮುಂಡ ಒಂದು ಕಡೆ ಬೀಸಾಕಿ ತಮ್ಮ ವಿಕೃತ ಮೆರೆದಿದ್ದಾರೆ ಎನ್ನಲಾಗಿದೆ.

    ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಡೇವಿಡ್ ನ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • ರಕ್ಷಿತ್ ಶೆಟ್ಟಿ ಸಿನಿಮಾಗೆ ನೀವೂ ನಾಯಕಿ ಆಗಬಹುದು!

    ರಕ್ಷಿತ್ ಶೆಟ್ಟಿ ಸಿನಿಮಾಗೆ ನೀವೂ ನಾಯಕಿ ಆಗಬಹುದು!

    ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ಚಿತ್ರಕ್ಕೆ ಚಿತ್ರತಂಡ ನಾಯಕಿ ಹುಡುಕಾಟದಲ್ಲಿದ್ದು, ನಿರ್ಮಾಪಕರು ಹೊಸ ನಾಯಕಿಗಾಗಿ ಒಂದು ಆಫರ್ ಕೊಟ್ಟಿದ್ದಾರೆ.

    ನಟ ರಕ್ಷಿತ್ ಶೆಟ್ಟಿ `ಚಾರ್ಲಿ 777′ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈಗ ಅವರೇ ತಮ್ಮ ಫೇಸ್ ಬುಕ್ ನಲ್ಲಿ ನಾಯಕಿಗಾಗಿ ಒಂದು ಪೋಸ್ಟ್ ಹಾಕಿದ್ದಾರೆ.

    “ನಟ ರಕ್ಷಿತ್ ಶೆಟ್ಟಿ ನಾಯಕನಾಗಿ `ಚಾರ್ಲಿ 777′ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗಾಗಿ ಹೊಸ ನಟಿಯಯನ್ನ ಹುಡುಕುತ್ತಿದ್ದೇವೆ. ಆಸಕ್ತಿ ಇದ್ದವರು contact@777charlie.com ಸಂಪರ್ಕಿಸಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    `777 ಚಾರ್ಲಿ’ ಸಿನಿಮಾ ಶ್ವಾನ ಮತ್ತು ವ್ಯಕ್ತಿ ನಡುವಿನ ಬಾಂಧವ್ಯವನ್ನು ಹೇಳುವಂತಹ ಕಥೆಯಾಗಿದೆ. ಈ ಸಿನಿಮಾದಲ್ಲಿ ಶ್ವಾನದ ಹೆಸರು ಚಾರ್ಲಿ. ಶ್ವಾನದ ಲೈಸನ್ಸ್ ನಂಬರ್ 777 ಎಂದು ತಿಳಿದು ಬಂದಿದೆ. ಆದ್ದರಿಂದ ಈ ಸಿನಿಮಾಗಾಗಿ `777 ಚಾರ್ಲಿ’ ಎಂಬ ಹೆಸರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

    ಈ ಮೊದಲು ಈ ಚಿತ್ರದಲ್ಲಿ `ಕಿರಿಕ್ ಪಾರ್ಟಿ’ ಖ್ಯಾತಿಯ ಅರವಿಂದ್ ಅಯ್ಯರ್ ನಾಯಕನಾಗಿದ್ದರು. ಆದರೆ ಈಗ ಆ ಜಾಗಕ್ಕೆ ರಕ್ಷಿತ್ ಶೆಟ್ಟಿ ಬಂದಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿರುವ ಕಿರಣ್ ರಾಜ್ ಎಂಬುವವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್‍ಗೆ ಪರಿಚಯವಾಗುತ್ತಿದ್ದಾರೆ.

    ಈ ಹಿಂದೆ ತಯರಾಗಿದ್ದ ಕಿರಿಕ್ ಪಾರ್ಟಿಗೆ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತ ಹೆಗ್ಡೆ ಆಡಿಷನ್ ಮೂಲಕ ಆಯ್ಕೆಯಾಗಿದ್ದರು. ಈಗ 777 ಚಾರ್ಲಿ ಸಿನಿಮಕ್ಕೂ ಆಡಿಷನ್ ಮೂಲಕ ನಾಯಕಿಯರನ್ನು ಸೆಲೆಕ್ಟ್ ಮಾಡಲು ಮುಂದಾಗಿದ್ದಾರೆ.

  • ಮಲೇಷಿಯಾದಲ್ಲಿ ಕಿಚ್ಚ ಫ್ಯಾಮಿಲಿ

    ಮಲೇಷಿಯಾದಲ್ಲಿ ಕಿಚ್ಚ ಫ್ಯಾಮಿಲಿ

    ಬೆಂಗಳೂರು: ಇತ್ತೀಚೆಗೆ ನಟ ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯಾ ಸುದೀಪ್ ಮತ್ತು ಮಗಳು ಸಾನ್ವಿ ಜೊತೆ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

    ಸುದೀಪ್ ಮಗಳು ಸಾನ್ವಿಗೆ ಬೇಸಿಗೆ ರಜೆ ಶುರುವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ರಜಾ ಸಿಕ್ಕಿರೆ ಸಾಕು ಮಜಾ ಮಾಡುವ, ಸುತ್ತಾಡುವ ಮೂಡನಲ್ಲಿರುತ್ತಾರೆ. ಆದ್ದರಿಂದ ಸುದೀಪ್ ದಂಪತಿ ಮತ್ತು ಮಗಳು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

    ಸಾಲು ಸಾಲು ಸಿನಿಮಾಗಳ ಶೂಟಿಂಗ್ ನಲ್ಲೂ ಬಿಡುವು ಇದ್ದಾಗ ತಮ್ಮ ಪ್ರೀತಿಯ ಮಗಳು ಮತ್ತು ಪತ್ನಿಯ ಜೊತೆ ಆರು ದಿನಗಳ ಕಾಲ ಮಲೇಷಿಯಾ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಪ್ರವಾಸ ಮುಗಿಸಿ ಬಂದ ನಂತರ ಪ್ರಿಯಾ ಸುದೀಪ್ ಅಲ್ಲಿ ತೆಗೆದ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ನನಗೆ ಇಷ್ಟವಾದ ವ್ಯಕ್ತಿಗಳ ಜೊತೆ ಮರೆಯಲಾಗದ ಮಧುರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.

    ಸುದೀಪ್ ಮೊದಲು ಮಗಳನ್ನ ಜಪಾನ್ ಗೆ ಕರೆದುಕೊಂಡು ಹೋಗಬೇಕೆಂದು ಅಂದುಕೊಂಡಿದ್ದರು. ಆದರೆ ಶೂಟಿಂಗ್ ಇದ್ದುದ್ದರಿಂದ ಆರು ದಿನಗಳ ಕಾಲ ಮಾತ್ರ ರಜೆ ಇತ್ತು. ಆದ್ದರಿಂದ ಮಲೇಷಿಯಾಕ್ಕೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸುದೀಪ್ `ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.

  • ಗ್ರಾಹಕರಿಗೆ ಅಂಗೈಯಲ್ಲಿ ಚಂದ್ರ ತೋರಿಸಿ 200 ಕೋಟಿ ರೂ.ಗೂ ಅಧಿಕ ಉಂಡೆನಾಮ ಹಾಕಿದ ಕಂಪನಿ

    ಗ್ರಾಹಕರಿಗೆ ಅಂಗೈಯಲ್ಲಿ ಚಂದ್ರ ತೋರಿಸಿ 200 ಕೋಟಿ ರೂ.ಗೂ ಅಧಿಕ ಉಂಡೆನಾಮ ಹಾಕಿದ ಕಂಪನಿ

    ಬೆಂಗಳೂರು: ಅಂಗೈಯಲ್ಲಿ ಚಂದ್ರ ತೋರಿಸಿ ಚಿಟ್‍ಫಂಡ್ ಕಂಪನಿಯೊಂದು ನೂರಾರು ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ಉಂಡೆನಾಮ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಗ್ರಾಹಕರಿಗೆ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿ ನಂಬಿಸಿದ ತಮಿಳುನಾಡು ಮೂಲದ ತ್ರಿಪುತ ಚಿಟ್‍ಫಂಡ್ ಕಂಪನಿ ಸಾಕಷ್ಟು ಜನರಿಗೆ ವಂಚಿಸಿದೆ. ಬೆಂಗಳೂರಿನಲ್ಲಿಯೇ ಸುಮಾರು 200 ಕೋಟಿ ರೂ. ಗೂ ಅಧಿಕ ಹಣ ಹಾಕಿಸಿಕೊಂಡು ನುಂಗಿ ಹಾಕಿದೆ ಎಂದು ವಂಚನೆಗೊಳಗಾದ ಗ್ರಾಹಕರು ಆರೋಪಿಸುತ್ತಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರಂ, ಬಾಣಸವಾಡಿ, ದಾಸರಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದಲ್ಲಿ ಕಂಪನಿಯ ಒಟ್ಟು 13 ಶಾಖೆಗಳಿದ್ದವು. ಆರು ತಿಂಗಳಲ್ಲಿ ನೀವು ಹಾಕುವ ಹಣಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಮೊಸ ಮಾಡಿದೆ.

    ಪ್ರತಿ ತಿಂಗಳು ಗ್ರಾಹಕರ ಮನೆಗೆ ಹೋಗಿ ಚಿಟ್‍ಫಂಡ್ ಸಿಬ್ಬಂದಿ ಹಣ ಪಡೆಯುತ್ತಿದ್ದರು. ಹಣ ಕಟ್ಟಿದ ಜನರಿಗೆ ಕಟ್ಟಿದ ಹಣಕ್ಕೆ ಮೂರು-ನಾಲ್ಕು ಬಾರಿ ಹಣ ಮರು ಪಾವತಿಸಿ ಗ್ರಾಹಕರ ನಂಬಿಕೆಗೆ ಪಾತ್ರರಾಗಿದ್ದರೆ. ಆಗ ಜನರು ನಂಬಿ ದುಪ್ಪಟ್ಟು ಹಣ ಇನ್ವೆಸ್ಟ್ ಮಾಡಲು ಮುಂದಾಗಿದ್ದಾರೆ. ಬಳಿಕ ಜನರು ಹಣ ಇನ್ವೆಸ್ಟ್ ಮಾಡಿದ ನಂತರ ಕಂಪನಿಯವರು ಇದ್ದಕ್ಕಿದಂತೆ ರಾತ್ರೋರಾತ್ರಿ ಅಷ್ಟೂ ಬ್ರಾಂಚ್‍ಗಳಿಗೆ ಬೀಗ ಜಡಿಯಲಾಗಿದೆ.

    ಚಿಟ್‍ಫಂಡ್ ಕಂಪನಿ ಮುಚ್ಚಿಕೊಂಡಿದ್ದರಿಂದ ದುಪ್ಪಟ್ಟು ಹಣದಾಸೆಗೆ ಲಕ್ಷಾಂತರ ರೂಪಾಯಿ ಹಾಕಿದ್ದ ಜನರು ಈಗ ಕಂಗಾಲಾಗಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಲು ಹೋದರೆ ನನ್ನ ವ್ಯಾಪ್ತಿಗೆ ಬರಲ್ಲ ಅಂತಾ ಪೊಲೀಸಲು ಹೇಳಿ ಕಳುಹಿಸುತ್ತಿದ್ದು, ಏನು ಪ್ರಯೋಜನವಾಗಲಿಲ್ಲ. ಆದ್ದರಿಂದ ವಂಚಿತರು ದಿಕ್ಕು ತೋಚದೆ ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.

  • ಎಲೆಕ್ಷನ್ ಎಫೆಕ್ಟ್ – ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್

    ಎಲೆಕ್ಷನ್ ಎಫೆಕ್ಟ್ – ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್

    ಬೆಂಗಳೂರು: ಪ್ರತಿ ವರ್ಷ ವೋಟ್ ಮಾಡುವವರ ಸಂಖ್ಯೆಯನ್ನ ಅಧಿಕ ಮಾಡಲು ಚುನಾವಣಾ ಆಯೋಗ ನಾನಾ ರೀತಿಯ ಕಸರತ್ತು ಮಾಡುತ್ತಾ ಇದೆ. ಆದರೆ ಸಂಖ್ಯೆ ಮಾತ್ರ ವೃದ್ದಿಸುತ್ತಿಲ್ಲ. ಅದಕ್ಕಾಗಿ ಇಲ್ಲೊಬ್ಬರು ಸಮಾಜ ಸೇವಕ ಜೆರಾಕ್ಸ್ ಅಂಗಡಿ ಇಟ್ಟು ಮೊದಲ ಬಾರಿ ವೋಟ್ ಮಾಡುವ ಕಾಲೇಜು ವಿಧ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಿದ್ದಾರೆ.

    ಈ ಬಾರಿಯ ಚುನಾವಾಣೆ ನಾನಾ ಕಾರಣಗಳಿಗೆ ತೀವ್ರ ಕುತೂಹಲ ಕೆರಳಿಸಿದೆ. ಹಾಗಾಗಿ ಪ್ರತಿಯೊಬ್ಬರು ವೋಟ್ ಮಾಡಿ ನಮಗೆ ಸೂಕ್ತವೆನಿಸುವ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಿ ಅನ್ನೋ ಘೋಷಣೆಗಳು ಎಲ್ಲೆಡೆ ಕೇಳಿ ಬರುತ್ತಿದೆ. ಈ ಘೋಷಣೆಗಳ ಮಧ್ಯೆ ವಿಶ್ವೇಶ್ವರ ಅವರು ತುಂಬ ವಿಭಿನ್ನವಾಗಿಯೇ ಚುನಾವಣೆ ಪ್ರಚಾರ ಮಾಡಿದ್ದಾರೆ.

    ನಾನು ವೋಟ್ ಮಾಡಿ ಅಂತ ಜನಜಾಗೃತಿ ಮೂಡಿಸುವ ಜೊತೆಗೆ ಮೊದಲ ಬಾರಿಗೆ ವೋಟ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ 25 ಪೈಸೆಗೆ ಜೆರಾಕ್ಸ್ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದೇನೆ. ಅಷ್ಟೇ ಅಲ್ಲದೇ ತನ್ನ ಅಂಗಡಿ ಮುಂದೆ ದೊಡ್ಡ ಬೋರ್ಡ್ ಹಾಕಿದ್ದು, ನನ್ನ ಶಾಪಿಗೆ ಬರುವ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಮಾಡುತ್ತಿದ್ದೇನೆ ಎಂದು ಸಮಾಜ ಸೇವಕ ವಿಶ್ವೇಶ್ವರ ಹೇಳಿದ್ದಾರೆ. ಇದನ್ನೂ ಓದಿ: ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಈ ಆಫರ್ 1 ತಿಂಗಳ ಕಾಲ ಜಾರಿಯಲ್ಲಿರಲಿದ್ದು, ವೋಟ್ ಹಾಕಿದವರು ಕಾಲೇಜು ಐಡಿ ಮತ್ತು ಮತದಾನದ ಗುರುತಿನೊಂದಿಗೆ ಅಂಗಡಿಗೆ ಬಂದರೆ ಸಾಕು ಈ ಆಫರ್ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪ್ರಾಜೆಕ್ಟ್ ವರ್ಕ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ಸೌಲಭ್ಯವನ್ನು ಸಹ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.

  • ರಾಯಲ್ ಎನ್‍ಫೀಲ್ಡ್ ನಲ್ಲಿ ದರ್ಶನ್ ಜಾಲಿ ರೈಡ್

    ರಾಯಲ್ ಎನ್‍ಫೀಲ್ಡ್ ನಲ್ಲಿ ದರ್ಶನ್ ಜಾಲಿ ರೈಡ್

    ಬೆಂಗಳೂರು: ಇತ್ತೀಚೆಗೆ ನಟರೆಲ್ಲರೂ ತನ್ನ ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದರೂ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಹಾಗೆಯೇ ಬಿಡುವು ಮಾಡಿಕೊಂಡು ಕಾರು ಮತ್ತು ಬೈಕ್ ರೈಡ್ ಮಾಡುತ್ತಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ನೈಟ್ ಜಾಲಿ ರೈಡ್ ಮಾಡಿದ್ದಾರೆ. ಅಸಲಿಗೆ ಆ ಬೈಕ್ ದರ್ಶನ್ ಖರೀದಿಸಿಲ್ಲ. ಹಿರಿಯ ಖಳನಟ ಕೀರ್ತಿ ರಾಜ್ ಅವರ ಮಗ ನಟ ಧರ್ಮ ಕೀರ್ತಿರಾಜ್ ಖರೀದಿಸಿದ್ದ ರಾಯಲ್ ಎನ್‍ಫೀಲ್ಡ್ ಬುಲೆಟ್‍ನಲ್ಲಿ ದರ್ಶನ್ ಸವಾರಿ ಮಾಡಿದ್ದಾರೆ. ಇದನ್ನೂ ಓದಿ:   ಹೊಸ ಬೈಕ್ ನಲ್ಲಿ ರಾತ್ರಿ ವೇಳೆ ಕಿಚ್ಚನ ಜಾಲಿರೈಡ್! – ವಿಡಿಯೋ ನೋಡಿ

    ಸೋಮವಾರ ರಾತ್ರಿ ದರ್ಶನ್ ಮೊದಲು ಆ ಬೈಕ್ ಓಡಿಸಿದ್ದಾರೆ. ನಂತರ ಅವರ ಜೊತೆ ಧರ್ಮ ಕೀರ್ತಿರಾಜ್ ಕೂಡ ಒಂದು ಜಾಲಿ ರೈಡ್ ಹೋಗಿದ್ದಾರೆ. ದರ್ಶನ್ ಕೂಡ ನೈಟ್ ಡ್ರೆಸ್ ಹಾಕಿಕೊಂಡು ರಾಯಲ್ ಎನ್‍ಫೀಲ್ದ್ ಬೈಕ್ ರೈಡ್ ಮಾಡಿದ್ದಾರೆ.

    ದರ್ಶನ್ ರಾಯಲ್ ಬೈಕಿನಲ್ಲಿ ಒಂದು ರೌಂಡ್ ಓಡಾಡಿದ  ಅಪರೂಪದ ಕ್ಷಣಗಳಲ್ಲಿ ಕೀರ್ತಿರಾಜ್ ದರ್ಶನ್ ಜೊತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಆ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆ ಫಿಲ್ಮ್ ಮಾಡಲು ನಾನು ರೆಡಿ: ಸುದೀಪ್

    ದರ್ಶನ್ ಮತ್ತು ಕೀರ್ತಿರಾಜ್ ತುಂಬಾ ವರ್ಷಗಳಿಂದ ಸ್ನೇಹಿತರಾಗಿದ್ದು, ಧರ್ಮರಾಜ್ ದರ್ಶನ್ ಜೊತೆ ನವಗ್ರಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.

  • 86ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ

    86ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು 86ನೇ ವಂಸತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಕೃಷ್ಣ ಮತ್ತು ಅವರು ಕುಟುಂಬಸ್ಥರು ಮುಂಬೈನಲ್ಲಿದ್ದು ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಮೇ 3 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ ಆಯೋಜನೆಗೊಂಡಿದೆ. ಈ ಸಮಾವೇಶದಲ್ಲಿ ಎಸ್.ಎಂ.ಕೃಷ್ಣ ಅವರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಬುಧವಾರ ಸಂಜೆ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ.

    ಎಸ್.ಎಂ. ಕೃಷ್ಣ ಅವರಿಗೆ ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ಭಾಗಿಯಾಗುವಂತೆ ಬಿಜೆಪಿಯಿಂದ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಿ ಭಾಷಣವನ್ನು ಕೂಡ ಕೃಷ್ಣ ಅವರು ಮಾಡಲಿದ್ದಾರೆ ಎನ್ನಲಾಗಿದೆ.

    ಇತ್ತೀಚೆಗೆ ಎಸ್‍.ಎಂ.ಕೆ ಪಾತ್ರ ಕಡೆಗಣನೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಎಸ್.ಎಂ.ಕೃಷ್ಣ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡುವಂತೆ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಆದರೆ ಬಿಜೆಪಿ ನಾಯಕರು ಅವರು ಹೇಳಿದ್ದ 6 ಮಂದಿಯ ಪೈಕಿ ಮೂವರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ. ಆದ್ದರಿಂದ ಬಿಜೆಪಿ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಿಗಿಸಿಕೊಳ್ಳುವಂತೆ ಕೃಷ್ಣ ಅವರಿಗೆ ಬಿಜೆಪಿ ನಾಯಕರು ಮನವಿ ಮಾಡಿಕೊಂಡಿದ್ದರು. ಬಿಜೆಪಿ ರಾಜ್ಯ ನಾಯಕರು ನೀಡಿರುವ ಆಹ್ವಾನವನ್ನು ಮನ್ನಿಸಿ ಎಸ್.ಎಂ.ಕೃಷ್ಣ ಪ್ರಚಾರಕ್ಕೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.