Tag: Bangalore

  • ಒಟ್ಟಾಗಿ ಸಂಭ್ರಮಿಸಿದ ದರ್ಶನ್, ಆದಿತ್ಯ, ರಾಗಿಣಿ

    ಒಟ್ಟಾಗಿ ಸಂಭ್ರಮಿಸಿದ ದರ್ಶನ್, ಆದಿತ್ಯ, ರಾಗಿಣಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಗಿಣಿ ದ್ವಿವೇದಿ ಇತರೆ ಸ್ಯಾಂಡಲ್ ವುಡ್ ನಟರು ಒಟ್ಟಾಗಿ ಸೇರಿ ನಟ ಆದಿತ್ಯ ಸಿಂಗ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

    ಇತ್ತೀಚೆಗಷ್ಟೆ ಆದಿತ್ಯ ಅವರು ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದಿತ್ಯ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾರಂಗದ ಸ್ನೇಹಿತರಿಗೆಲ್ಲಾ ಒಂದು ವಿಶೇಷ ಪಾರ್ಟಿಯನ್ನು ಆಯೋಜನೆ ಮಾಡಿದ್ದರು.

    ಬರ್ತ್ ಡೇ ಪಾರ್ಟಿಗೆ ಹಿರಿಯ ನಟ ಅಂಬರೀಶ್, ಸೃಜನ್ ಲೋಕೇಶ್, ನಟಿ ರಾಗಿಣಿ ದ್ವಿವೇದಿ, ಅರ್ಜುನ್ ಸರ್ಜಾ, ದರ್ಶನ್ ಮತ್ತು ರಿಷಿಕಾ ಸಿಂಗ್ ಪಾಲ್ಗೊಂಡಿದ್ದರು. ಎಲ್ಲರೂ ಒಂದೆಡೆ ಸೇರಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದ್ದಾರೆ.

    ಸಿನಿಮಾರಂಗದ ಸ್ನೇಹಿತರೆಲ್ಲಾ ಪಾರ್ಟಿಯಲ್ಲಿ ಸೇರಿ ಸಂಭ್ರಮಿಸಿದ ಅಪರೂಪದ ಕ್ಷಣಗಳನ್ನು ಫೋಟೋಗಳಲ್ಲಿ ಸೆರೆಹಿಡಿದಿದ್ದು, ಆ ಫೋಟೋಗಳನ್ನು ಆದಿತ್ಯ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದ ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ.

    ದರ್ಶನ್ ಗೆ ಆದಿತ್ಯ ತುಂಬಾ ಹತ್ತಿರದ ಸ್ನೇಹಿತರಾಗಿದ್ದು, ಇವರಿಬ್ಬರು ಜೊತೆಯಾಗಿ ಕೆಲವು ಸಿನಿಮಾಗಳನ್ನು ಸಹ ಮಾಡಿದ್ದಾರೆ. ಸದ್ಯಕ್ಕೆ ಆದಿತ್ಯ ಕೈನಲ್ಲಿ ನಾಲ್ಕೈದು ಸಿನಿಮಾಗಳಿದ್ದು, ರಾಗಿಣಿ ಮತ್ತು ಆದಿತ್ಯ ಕಾಂಬಿನೇಶನ್ ನಲ್ಲಿ ಕೂಡ ಒಂದು ಸಿನಿಮಾ ಮೂಡಿಬರುತ್ತಿದೆ.

    https://www.instagram.com/p/Bijej61Atuj/?utm_source=ig_embed

  • ಅಭಿಮಾನಿಗಳಿಗೆ ಹೊಸ ಆಫರ್ ಕೊಟ್ಟ ರ‍್ಯಾಪರ್ ಚಂದನ್ ಶೆಟ್ಟಿ- ಶೃತಿ!

    ಅಭಿಮಾನಿಗಳಿಗೆ ಹೊಸ ಆಫರ್ ಕೊಟ್ಟ ರ‍್ಯಾಪರ್ ಚಂದನ್ ಶೆಟ್ಟಿ- ಶೃತಿ!

    ಬೆಂಗಳೂರು: ಬಿಗ್ ಬಾಸ್ ಸೀಸನ್ 5 ಕಾರ್ಯಕ್ರಮದ ಸ್ಪರ್ಧಿಗಳಾದ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ಶೃತಿ ಪ್ರಕಾಶ್ ಈಗ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

    `ಬಿಗ್ ಬಾಸ್’ ಮನೆಯೊಳಗಿದ್ದ ಸಂದರ್ಭದಲ್ಲಿ ಇಬ್ಬರೂ ಆತ್ಮೀಯರಾಗಿದ್ದರು. ಅಲ್ಲಿಂದ ಹೊರ ಬಂದ ಬಳಿಕ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ರಿಯಾಲಿಟಿ ಶೋ ತೀರ್ಪುಗಾರ, ಸಂಗೀತ ನಿರ್ದೇಶನ, ಗಾಯನ ಹೀಗೆ ಹಲವು ರೀತಿಯಲ್ಲಿ ಚಂದನ್ ಬ್ಯುಸಿಯಾಗಿದ್ದಾರೆ. ಶ್ರುತಿ ಅವರು ಗಾಯನ, ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ.

    ಇದೀಗ ಚಂದನ್ ಹಾಗೂ ಶ್ರುತಿ ಪ್ರಕಾಶ್ ಒಂದೇ ಹಾಡಿನಲ್ಲಿ ನಟಿಸುತ್ತಿದ್ದಾರೆ. ಚಂದನ್ ಬಿಗ್ ಬಾಸ್ ಶೋ ಮುಗಿಸಿ ಬಂದ ಮೇಲೆ ಅವರ ಯಾವುದೇ ಹಾಡು ಬಿಡುಗಡೆಯಾಗಿಲ್ಲ. ಈಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸ ಸಾಂಗ್ ಮೂಡಿ ಬರುತ್ತಿದೆ. ಇದನ್ನು ಓದಿ: ಮತ್ತೆ ಒಂದಾದ ಚಂದನ್ ಶೆಟ್ಟಿ-ಶೃತಿ ಪ್ರಕಾಶ್

    ಚಂದನ್ ಸದ್ಯಕ್ಕೆ ಹೊಸ ಹಾಡಿನ ತಯಾರಿಯಲ್ಲಿದ್ದು, ಚಂದನ್ ಮತ್ತು ಶೃತಿ ಕಾಂಬೀನೇಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಹಾಡಿಗೆ ಟೈಟಲ್ ಹುಡುಕುತ್ತಿದ್ದಾರೆ. ಆದರೆ ಈಗ ಅವರೇ ಹೊಸ ಸಾಂಗ್ ಟೈಟಲ್ ಹುಡುಕುವ ಆಫರ್ ಅನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ. ಚಂದನ್ ತಮ್ಮ ಇನ್ಸ್ ಸ್ಟಾಗ್ರಾಮ್ ನಲ್ಲಿ ಶೃತಿ ಪ್ರಕಾಶ್ ಜೊತೆಗಿರುವ ಫೋಟೋವನ್ನು ಹಾಕಿ ಹೊಸ ಹಾಡಿಗೆ ಒಂದು ಟೈಟಲ್ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಚುನಾವಣಾಧಿಕಾರಿಗಳ ಭರ್ಜರಿ ಬೇಟೆ – 32 ಲಕ್ಷಕ್ಕೂ ಹೆಚ್ಚಿನ ಹಣ ವಶ

    ಚುನಾವಣಾಧಿಕಾರಿಗಳ ಭರ್ಜರಿ ಬೇಟೆ – 32 ಲಕ್ಷಕ್ಕೂ ಹೆಚ್ಚಿನ ಹಣ ವಶ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಆಮಿಷಗಳು ಜೋರಾಗುತ್ತಿದ್ದು, ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಚುನಾವಣೆಗಾಗಿ ಸಂಗ್ರಹಿಸಿರೋ ಹಣವನ್ನು ವಶಪಡಿಸಿಕೊಂಡು ರಾಜಕೀಯ ಪಕ್ಷಗಳಿಗೆ ಸರಿಯಾದ ಏಟನ್ನು ನೀಡಿದ್ದಾರೆ.

    ರಾಜ್ಯದಲ್ಲಿ ಚುನಾವಣೆಗೆ ಕೆಲವೇ ದಿನಗಳು ಇರುವಂತೆ ರಾಜಕೀಯ ಪಕ್ಷಗಳ ಹಣದ ಸಂಗ್ರಹವನ್ನ ಹೆಚ್ಚು ಮಾಡುತ್ತಿವೆ. ಮಂಗಳವಾರ ಚುನಾವಣಾ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಅಮೃತಹಳ್ಳಿಯಲ್ಲಿರುವ ಕೃಷ್ಣ ಜ್ಯುವೆಲ್ಲರಿ ಅಂಗಡಿ ಮೇಲೆ ದಾಳಿ ಮಾಡಿ ಒಟ್ಟು 32 ಲಕ್ಷ 50 ಸಾವಿರ ಹಣವನ್ನ ವಶಪಡಿಸಿಕೊಂಡಿದ್ದಾರೆ.

    ಚುನಾವಣೆಗಾಗಿ ಮೂಗುತಿ ಮತ್ತು ಇತರೆ ಆಭರಣಗಳನ್ನು ಖರೀದಿ ಮಾಡಲು ತಂದಿದ್ದ ಹಣ ಅಂತ ಚುನಾವಣಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಹಣದ ಮಾಲೀಕ ಚೆನ್ನಕೇಶವ್ ನನ್ನ ಕೆಲ ವ್ಯವಹಾರಗಳಿಗೆ ಸಂಬಂಧಿಸಿದ ಹಣ ಇದಾಗಿದ್ದು, ಸೂಕ್ತ ದಾಖಲೆಗಳನ್ನು ನೀಡುತ್ತೇನೆ ಅಂತ ಹೇಳಿದ್ದಾರೆ.

    ಇದು ಕಾಂಗ್ರೆಸ್ ಏಜೆಂಟರಿಗೆ ಸೇರಿದ ಹಣ, ಆತನು ಸಹ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಮತದಾನದ ಸಮಯದಲ್ಲಿ ಹಣ ಹಂಚಲು ಕೆಲ ಅಂಗಡಿಗಳಲ್ಲಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಮೇರೆಗೆ ನಾನು ಚುನಾವಣಾ ಅಧಿಕಾರಿಗಳಿಗೆ ಫೋನ್ ಮುಖಾಂತರ ದೂರು ನೀಡಿದ್ದೆ. ಅಧಿಕಾರಿಗಳು ಬಂದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿರುವ ಹರೀಶ್ ಹೇಳಿದ್ದಾರೆ.

    ಮತದಾರರಿಗೆ ನಾನಾ ಆಮಿಷಗಳನ್ನು ತೋರಿಸಿ ಹಣವನ್ನ ಹಂಚಿ ಅಧಿಕಾರಿದ ಗದ್ದುಗೆ ಏರಲು ರಾಜಕೀಯ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದಕ್ಕೆ ಚುನಾವಣೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

  • ಬೆಂಗ್ಳೂರಲ್ಲಿ ಭೀಕರ ರಸ್ತೆ ಅಪಘಾತ – ಲಾರಿ, ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

    ಬೆಂಗ್ಳೂರಲ್ಲಿ ಭೀಕರ ರಸ್ತೆ ಅಪಘಾತ – ಲಾರಿ, ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

    ಈ ಅಪಘಾತ ಎಲೆಕ್ಟ್ರಾನಿಕ್ ಸಿಟಿ ಬೇಗೂರು ನೈಸ್ ರಸ್ತೆ ಬಳಿ ಸಂಭವಿಸಿದ್ದು, ರಾಜಸ್ಥಾನ ಮೂಲದ ಗೂಡ್ಸ್ ಲಾರಿ ಹಾಗೂ ಸ್ಯಾಂಟ್ರೋ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.

    ಲಾರಿ ಗುದ್ದಿರುವ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಪಘಾತದ ಮಾಹಿತಿ ತಿಳಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನ ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ.

    ಈ ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ.

  • ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕ ಪತ್ತೆ

    ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕ ಪತ್ತೆ

    ಬೆಂಗಳೂರು: ನಾಪತ್ತೆಯಾಗಿದ್ದ ನಗರದ ಬಾಲಕ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾನೆ.

    ಮೇ 4 ರಂದು ಮಹಾಲಕ್ಷಿಪುರ ನಿವಾಸಿ 15 ವರ್ಷದ ಎಸ್. ಕಾರ್ತಿಕ್ ನಾಪತ್ತೆಯಾಗಿದ್ದನು. ನಂತರ ಆತನ ಪೋಷಕರು ಈ ಬಗ್ಗೆ ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ಮಾಹಿತಿ ತಿಳಿಸಿ ಹುಡುಕಾಡುತ್ತಿದ್ದರು. ಮೂರು ದಿನಗಳಾದರೂ ಕಾರ್ತಿಕ್ ಪತ್ತೆಯಾಗಿರಲಿಲ್ಲ. ಆದರೆ ಇಂದು ತಮಿಳುನಾಡಿನಲ್ಲಿ ಬಾಲಕ ಪತ್ತೆಯಾಗಿದ್ದಾನೆ.

    ಏನಿದು ಪ್ರಕರಣ?: ಶುಕ್ರವಾರ ಕಾರ್ತಿಕ್ ಮನೆಯಿಂದ ಸುಮಾರು 10.15 ಕ್ಕೆ ಆಟವಾಡಿಕೊಂಡು ಬರುವುದಾಗಿ ಮನೆಯಲ್ಲಿ ತಿಳಿಸಿ, ಹೊರಗೆ ಹೋದವನು ಹಿಂದಿರುಗಿ ಬಂದಿರಲಿಲ್ಲ. ಆದ್ದರಿಂದ ಕಾಣೆಯಾಗಿರುವ ನಮ್ಮ ಮಗನನ್ನ ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳೂತ್ತಿದ್ದೇವೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದರು.

    ಈ ಕುರಿತು ಬಾಲಕ ಅಪ್ರಾಪ್ತನಾಗಿರುವುದರಿಂದ ಐಪಿಸಿ 363 ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಂತರ ಬಾಲಕನ ಬಗ್ಗೆ ಏನಾದರೂ ಮಾಹಿತಿ ತಿಳಿದರೆ ಮಹಾಲಕ್ಷಿಪುರ ಪೊಲೀಸ್ ಠಾಣೆಗೆ ಅಥವಾ ನಮಗೆ ಮಾಹಿತಿ ನೀಡಬೇಕೆಂದು ಪೋಷಕರು ಜನರಲ್ಲಿ ಮನವಿ ಮಾಡಿಕೊಂಡಿದ್ದರು.

  • ಕಾಸ್ಟಿಂಗ್ ಕೌಚ್ ಸಿನಿಮಾರಂಗ ಮಾತ್ರವಲ್ಲ, ಉದ್ಯಮದಲ್ಲೂ ಒಂದು ಪಾರ್ಟ್ ಆಗಿದೆ: ಸಮಂತಾ

    ಕಾಸ್ಟಿಂಗ್ ಕೌಚ್ ಸಿನಿಮಾರಂಗ ಮಾತ್ರವಲ್ಲ, ಉದ್ಯಮದಲ್ಲೂ ಒಂದು ಪಾರ್ಟ್ ಆಗಿದೆ: ಸಮಂತಾ

    ಹೈದರಾಬಾದ್: ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಕೆಲವು ನಟಿಯರು ತಮ್ಮ ತಮ್ಮ ಅಭಿಪ್ರಾಯ, ಅನುಭವವನ್ನು ಹೇಳಿದ್ದಾರೆ. ಈಗ ಸೌತ್ ಸಿನಿಮಾರಂಗದ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ಸಮಂತಾ ಅಕ್ಕಿನೇನಿ ಸೌತ್ ಸಿನಿಮಾರಂಗದ ಮಿನುಗುತಾರೆ. ನೋಡುವುದಕ್ಕೆ ತುಂಬಾ ಸೈಲೆಂಟ್. ಆದರೆ ಸಿಕ್ಕಾಪಟ್ಟೆ ಬೋಲ್ಡ್. ಅಭಿನಯ ಹಾಗೂ ಸೌಂದರ್ಯ ಎರಡರಲ್ಲೂ ಕಮ್ಮಿಯಿಲ್ಲದ ಸಮಂತಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ರನ್ನನ ಜತೆ ತೆಲುಗಿನ ಈಗ ಸಿನಿಮಾದಲ್ಲಿ ಮಿಂಚಿದ್ದರು. 8 ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿ ಇದ್ದಾರೆ. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

    ಈ ಹಿಂದೆ ಸಾಮಾಜಿಕ ಜಾಲತಾಣಗಳಲಿ ಟ್ರೋಲ್ ಆಗಿದ್ದು, `ಊಟ ಇಲ್ಲದಿದ್ದರೂ ಪರವಾಗಿಲ್ಲ ದಿನಕ್ಕೊಮ್ಮೆ ಸೆಕ್ಸ್ ಬೇಕೆ ಬೇಕು ಅಂತ ಖಾಸಗಿ ಸಂದರ್ಶನವೊಂದರಲ್ಲಿ, ಜಸ್ಟ್ ಫನ್ ರೌಂಡ್‍ನಲ್ಲಿ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು. ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ಕಾಸ್ಟಿಂಗ್ ಕೌಚ್ ಅನ್ನೋದು ಸಿನಿಮಾರಂಗ ಮಾತ್ರವಲ್ಲಾ ಉದ್ಯಮದಲ್ಲೂ ಒಂದು ಪಾರ್ಟ್ ಆಗಿ ಬಿಟ್ಟಿದೆ. ನಾನು ಎಂಟು ವರ್ಷಗಳಿಂದ ತೆಲುಗು, ತಮಿಳು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದೇನೆ. ಆದರೆ ಯಾವುದೇ ರೀತಿಯಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ. ಚಿತ್ರರಂಗದಲ್ಲಿ ಒಳ್ಳೆಯ ಮನಸ್ಸಿರುವ ಸಾಕಷ್ಟು ಜನರು ಇದ್ದಾರೆ. ಅವರನ್ನ ಭೇಟಿ ಕೂಡ ಮಾಡಿದ್ದೇನೆ. ಇಂಟ್ರೆಸ್ಟಿಂಗ್ ಅಂದರೆ ನಾನು ಮಗುವಿಗೆ ಜನ್ಮ ನೀಡಿದ ನಂತರವೂ ಕೂಡ ಸಿನಿಮಾರಂಗದಲ್ಲಿ ಮುಂದುವರೆಯಲು ಆಸೆ ಪಡುತ್ತೇನೆ ಎಂದು ಸಮಂತಾ ಹೇಳಿದ್ದಾರೆ.

    ಸದ್ಯಕ್ಕೆ ಸಮಂತಾ ರಂಗಸ್ಥಳಂ ಯಶಸ್ಸಿನಲ್ಲಿದ್ದು, ಮಹಾನಟಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

  • ಟೆಂಪೋ  ಟ್ರಾವೆಲರ್ ಗೆ ಲಾರಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

    ಟೆಂಪೋ ಟ್ರಾವೆಲರ್ ಗೆ ಲಾರಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

    ಬೆಂಗಳೂರು: ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಸಾವನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

    ಲಕ್ಷ್ಮಣ್(35) ಮೃತ ದುರ್ದೈವಿ. ಇವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅತ್ತಿಬೆಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಬೆಳಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.

    ಹೊಸೂರಿನತ್ತ ಹೊರಟಿದ್ದ ಖಾಸಗಿ ಕಂಪೆನಿಯ ಉದ್ಯೋಗಿಗಳಿದ್ದ ಟೆಂಪೋ  ಟ್ರಾವೆಲರ್ ಹೋಗುತ್ತಿತ್ತು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಲಾರಿ ವೇಗವಾಗಿ ಬಂದು ಟೆಂಪೋ ಟ್ರಾವೆಲರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಕ್ಷ್ಮಣ್ ಸ್ಥಳದಲ್ಲೇ ಸಾವನಪ್ಪಿದ್ದು, ಓರ್ವ ಮಹಿಳೆ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಡಿಕ್ಕಿಯ ರಭಸಕ್ಕೆ ಟೆಂಪೋ ಟ್ರಾವೆಲರ್ ನುಜ್ಜುಗುಜ್ಜಾಗಿದ್ದು, ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

  • ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!

    ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!

    ಬೆಂಗಳೂರು: ವೋಟ್ ಹಾಕಿ ಅಂತ ವಿಧ ವಿಧವಾಗಿ ಪ್ರಚಾರ ಮಾಡಿದರೂ ಜನ ವೋಟ್ ಹಾಕೋದೆ ಇಲ್ಲ. ಮತದಾನಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನೋ ರೀತಿ ಜನ ವರ್ತನೆ ಮಾಡುತ್ತಾರೆ. ಆದರೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಹೋಟೆಲ್ ಮತದಾನದ ದಿನ ಕಾಫಿ ಫ್ರೀ ಅಂತ ಬೋರ್ಡ್ ಹಾಕಿದೆ.

    ಬೆಂಗಳೂರಿನ ಹೃದಯ ಭಾಗ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್ ಚುನಾವಣೆಯಲ್ಲಿ ಎಲ್ಲರೂ ತಮ್ಮ ಹಕ್ಕನ್ನ ಚಲಾಯಿಸಲಿ ಅನ್ನೊ ದೃಷ್ಟಿಯಿಂದ ಮತದಾನದ ದಿನ ಫ್ರೀ ಕಾಫಿ ನೀಡಲು ನಿರ್ಧರಿಸಿದೆ.

    ವೋಟ್ ಹಾಕಿ ಬಂದು ಶಾಯಿಯನ್ನ ತೊರಿಸಿ ಫ್ರೀ ಕಾಫಿ ಕುಡಿಬಹುದು. ಹೋಟೆಲ್ ಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಚರ್ಚೆ ಮಾಡುತ್ತಾರೆ. ಆದರೆ ವೋಟ್ ಹಾಕುವ ವಿಚಾರ ಬಂದ್ರೆ ಯಾರ್ ಹಾಕುತ್ತಾರೆ ಹೋಗಿ ಅಂತಾರೆ. ಅದಕ್ಕೆ ಮತದಾನದ ಜಾಗೃತಿ ಮೂಡಿಸಲು ಈ ರೀತಿ ಕಾಫಿ ಫ್ರೀ ಅಂತ ಅರಿವು ಮೂಡಿಸುತ್ತಿದ್ದೇವೆ ಎಂದು ಹೋಟೆಲ್ ಮಾಲೀಕರಾದ ಕೃಷ್ಣ ಕುಮಾರ್ ಹೇಳಿದ್ದಾರೆ.

    ಈ ಬಗ್ಗೆ ಗ್ರಾಹಕರು ಖುಷಿ ವ್ಯಕ್ತಪಡಿಸಿದ್ದು, ಹೋಟೆಲ್ ನಲ್ಲಿ ಈ ರೀತಿ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು, ಈ ಹೋಟೆಲಿಗೆ ನಾನು ರೆಗ್ಯುಲರ್ ಆಗಿ ಬರುತ್ತಿದ್ದೆ. ಈಗ ವೋಟ್ ಹಾಕಿ ಫ್ಯಾಮಿಲಿ ಸಮೇತ ಬಂದು ಫ್ರೀ ಕಾಫಿ ಕುಡಿರಿ ಅಂತ ಮಾಲೀಕರು ಹೇಳುತ್ತಿದ್ದಾರೆ ಎಂದು ಗ್ರಾಹಕರು ಹೇಳಿದ್ದಾರೆ.

  • ಬಯಲಾಯ್ತು `ಯಜಮಾನ’ದಲ್ಲಿ ದರ್ಶನ್ ಪಾತ್ರದ ಮಹಾರಹಸ್ಯ !

    ಬಯಲಾಯ್ತು `ಯಜಮಾನ’ದಲ್ಲಿ ದರ್ಶನ್ ಪಾತ್ರದ ಮಹಾರಹಸ್ಯ !

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಮಹಾರಹಸ್ಯ ರಿವೀಲ್ ಆಗಿದ್ದು, ಯಜಮಾನ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ಗಾಂಧಿನಗರದಲ್ಲೊಂದು ಸುದ್ದಿ ಹರಿದಾಡುತ್ತಿದೆ.

    ಕುರುಕ್ಷೇತ್ರ ಮುಗಿಸಿಕೊಂಡು ದರ್ಶನ್ ನೇರವಾಗಿ ಯಜಮಾನನ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಅದ್ದೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾದ ಶೂಟಿಂಗ್ ಕೊನೆಯ ಹಂತ ತಲುಪುತ್ತಿದೆ. ಸದ್ಯಕ್ಕೆ ದರ್ಶನ್ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

    ನಿರ್ದೇಶಕ ಪೋನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಗೆ ಇಬ್ಬರು ನಾಯಕಿಯರು ಸಾಥ್ ನೀಡುತ್ತಿದ್ದಾರೆ. ಆದರೆ ಚಿತ್ರತಂಡ ಇದುವರೆಗೂ ದರ್ಶನ್ ಪಾತ್ರದ ಬಗ್ಗೆ ಮಾತ್ರ ರಿವೀಲ್ ಮಾಡಿರಲಿಲ್ಲ. ಇದೀಗ ಯಜಮಾನ ಸಿನಿಮಾದಲ್ಲಿ ದರ್ಶನ್ ಪಾತ್ರದ ಕುರಿತಾಗಿ ಸುಳಿವು ಸಿಕ್ಕಿದೆ.

    ದರ್ಶನ್ ಬೃಂದಾವನ ಸಿನಿಮಾದಲ್ಲಿ ಮಾಡ್ರನ್ ಶ್ರೀಕೃಷ್ಣನಾಗಿ ಕಮಾಲ್ ಮಾಡಿದ್ದರು. ಈಗ ಯಜಮಾನ ಸಿನಿಮಾದಲ್ಲಿ ಮುರಾರಿ ಅವತಾರವೆತ್ತಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಕ್ಲೀನ್ ಶೇವ್ ಲುಕ್‍ನಲ್ಲಿ ಯಜಮಾನ ಸೆಟ್‍ ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಶ್ರೀಕೃಷ್ಣನಾಗಿರಬಹುದು ಎಂಬ ಅನುಮಾನ ಮೂಡಿಸಿದೆ.

    ಸಂಗೊಳ್ಳಿ ರಾಯಣ್ಣ ಸಿನಿಮಾ ನಂತರ ದಚ್ಚು ದುರ್ಯೋಧನನ ಪಾತ್ರ ನಿರ್ವಹಿಸುತ್ತಾರೆ ಅನ್ನೋ ಸುದ್ದಿ ಕೇಳಿದ ಕೂಡಲೇ ಗಂಡೆದೆಯ ಗಂಡು ಜಗ್ಗುದಾದನಿಗೆ ಜೈಕಾರ ಹಾಕಿದ್ದರು. ಟೀಸರ್ ರಿಲೀಸ್ ಆದ ಮೇಲೆ ದುಯೋರ್ಧನನ ದೃಶ್ಯ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಇದೀಗ ಯಜಮಾನ ಶ್ರೀಕೃಷ್ಣನಾಗಿದ್ದಾರೆ ಎಂಬ ಸುದ್ದಿ ತಿಳಿದ ಮೇಲೆ ಸಿನಿಮಾ ಹೇಗಿರಬಹುದು? ಯಾವ್ ಆ್ಯಂಗಲ್‍ನಲ್ಲಿ ಯಜಮಾನ ಸಿನಿಮಾದ ಚಿತ್ರಕತೆ ಹೆಣೆದಿರಬಹುದು ಅಂತ ಅಭಿಮಾನಿಗಳು ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರೆ.

  • ಬೆಂಗ್ಳೂರಲ್ಲಿ ಪತಿಯ ಮುಂದೆಯೇ ಪತ್ನಿಯ ಟೀ ಶರ್ಟ್ ಎಳೆದು ಲೈಂಗಿಕ ಕಿರುಕುಳ

    ಬೆಂಗ್ಳೂರಲ್ಲಿ ಪತಿಯ ಮುಂದೆಯೇ ಪತ್ನಿಯ ಟೀ ಶರ್ಟ್ ಎಳೆದು ಲೈಂಗಿಕ ಕಿರುಕುಳ

    ಬೆಂಗಳೂರು: ರಾಜಧಾನಿಯಲ್ಲಿ ಕಾಮುಕರ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಿದ್ದು, ಪತಿಯ ಮುಂದೆಯೇ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

    ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಹಾರಾಷ್ಟ ಮೂಲದ ಯುವಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ದಂಪತಿ ಭಾನುವಾರ ರಾತ್ರಿ ಹೋಟೆಲ್ ನಲ್ಲಿ ಊಟ ಮುಗಿಸಿ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಇದನ್ನೂ ಓದಿ: ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ

    ಈ ವೇಳೆ ಬೈಕಿನಲ್ಲಿ ಬಂದ ಯುವಕನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಪತಿಯ ಎದುರಲ್ಲೇ ಮಹಿಳೆಯ ಟೀ ಶರ್ಟ್ ಎಳೆದು ಅಸಭ್ಯವಾಗಿ ವರ್ತಿಸಿದ್ದಾನೆ. ಯುವಕನ ವರ್ತನೆಯಿಂದ ಬೆದರಿದ ಮಹಿಳೆ ಕಿರುಚಿಕೊಂಡಿದ್ದಾರೆ.

    ಮಹಿಳೆಯ ಚಿರಾಟ ಕೇಳಿದ ಸಾರ್ವಜನಿಕರು ಬಂದು ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಥಳಿಸಿ ಜೆ.ಪಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.