ಬೆಂಗಳೂರು: ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ ಓಡಾಡಿರುವುದು ಚಿರತೆ (Leopard) ಅಲ್ಲ, ಅದು ಕಾಡು ಬೆಕ್ಕು (Jungle Cat) ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಆವರಣದಲ್ಲಿ ಚಿರತೆ ಓಡಾಡಿದೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ (Bangalore University) ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿತ್ತು. ಈಗ ಇಲ್ಲಿ ಓಡಾಡಿರುವುದು ಚಿರತೆಯಲ್ಲಇದು ಕಾಡುಬೆಕ್ಕು ಎಂದು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದಾರೆ.
ಎಂಟು ವರ್ಷದ ಹಿಂದೆ ಜ್ಞಾನಭಾರತಿ ಅವರಣದಲ್ಲಿ ಚಿರತೆ ಪತ್ತೆಯಾಗಿತ್ತು. ಆದರೆ ಆದಾದ ಬಳಿಕ ಚಿರತೆ ಓಡಾಟದ ಯಾವ ಕುರುಹು ಕೂಡ ಇಲ್ಲ. ಈಗಾಗಲೇ ಅಧಿಕಾರಿಗಳ ತಂಡ ನಿಗಾ ವಹಿಸಿದೆ. ಆದರೆ ಇಲ್ಲಿಯವರೆಗೆ ಚಿರತೆ ಹೆಜ್ಜೆ ಗುರುತು ಕುರುಹು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಾರದ ಹಿಂದೆಯಷ್ಟೇ ಪುನೀತ್ ರಾಜಕುಮಾರ್ (Puneeth Rajkumar) ಬಯೋಗ್ರಫಿ ‘ನೀನೇ ರಾಜಕುಮಾರ’ ನಾಲ್ಕನೇ ಆವೃತ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಅಭಿಮಾನಿಗಳು ಕೂಡ ಸಂಭ್ರಮಿಸಿದ್ದರು. ಈ ಸಂಭ್ರಮದ ಬೆನ್ನಲ್ಲೇ ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯವ (Bangalore University) ಪುನೀತ್ ಅವರ ಬದುಕನ್ನು ಹಿಡಿದಿಟ್ಟ ಕೃತಿ ‘ನೀನೇ ರಾಜಕುಮಾರ’ ಪುಸ್ತಕದ ಒಂದು ಅಧ್ಯಾಯವನ್ನು ಪಠ್ಯವಾಗಿಸಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅಪ್ಪು ಅಭಿಮಾನಿ ಸಂಘಗಳು ಸರಕಾರಕ್ಕೂ ಪತ್ರ ಬರೆದಿದ್ದವು. ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದವು. ಅಭಿಮಾನಿಗಳಿಗೆ ಸಿಹಿ ಸುದ್ದಿ ಅಂದರೆ, ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ ನಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ
ಪತ್ರಕರ್ತ ಡಾ.ಶರಣು ಹುಲ್ಲೂರು (Sharanu Hullur) ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರುವ ‘ನೀನೇ ರಾಜಕುಮಾರ್’ (Neene Rajkumar) ಕೃತಿಯ ಒಂದು ಅಧ್ಯಾಯವಾದ ‘ಲೋಹಿತ್ ಎಂಬ ಮರಿಮುದ್ದ’ ಭಾಗವನ್ನು ಪಠ್ಯದಲ್ಲಿ ಬಳಸಿಕೊಂಡಿದೆ ಬೆಂಗಳೂರು ವಿಶ್ವವಿದ್ಯಾಲಯ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ (Textbook) ಪ್ರಧಾನ ಸಂಪಾದಕರಾಗಿದ್ದು, ಡಾ.ಅಮರೇಂದ್ರ ಶೆಟ್ಟಿ ಆರ್, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ ಹಾಗೂ ಡಾ.ರಘುನಂದನ್ ಬಿ.ಆರ್ ಅವರು ಪಠ್ಯದ ಸಂಪಾದಕರಾಗಿದ್ದಾರೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ.
ಮೊನ್ನೆಯಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಈ ವರ್ಷದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಬಯೋಗ್ರಫಿ ಎನ್ನುವ ದಾಖಲೆಗೂ ಈ ಪುಸ್ತಕ ಪಾತ್ರವಾಗಿತ್ತು. ಸತತವಾಗಿ ಹಲವು ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ಟಾಪ್ ಪಟ್ಟಿಯಲ್ಲಿತ್ತು. ಇದೀಗ ಪಠ್ಯಕ್ಕೂ ಕೃತಿಯ ಭಾಗವನ್ನು ಅಳವಡಿಸಿಕೊಳ್ಳಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕುಲಪತಿ ಪ್ರೊ.ವೇಣುಗೋಪಾಲ್ ಅವಧಿ ಮುಕ್ತಾಯ ಹಿನ್ನೆಲೆ ರಾಜ್ಯಪಾಲರು ನೂತನ ಕುಲಪತಿಗಳ ನೇಮಕ ಮಾಡಿದರು.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳಾಗಿ(ಪ್ರಭಾರ) ಪ್ರೊ.ಸಿಂಥಿಯಾ ಮೆನಜಸ್(Dr. Cynthia Menezes) ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 500ರ ಗಡಿದಾಟಿದ ಕೋವಿಡ್ ಕೇಸ್ – ಶೂನ್ಯ ಮರಣ ಪ್ರಮಾಣ
ಪ್ರೊ.ಸಿಂಥಿಯಾ ಅವರು ಬೆಂಗಳೂರು ವಿವಿಯ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಡೀನ್ ಆಗಿದ್ದರು.
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಭಾಗವಾಗಿ ಬೆಂಗಳೂರು ವಿಶ್ವವಿದ್ಯಾಲಯ 30 ಹೊಸ ಕೋರ್ಸ್‍ಗಳನ್ನು ಆರಂಭಿಸಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾಖಲಾತಿಗೂ ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ಹೊಸ ಕೋರ್ಸ್‍ಗಳಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ ಹಾಗೂ ಬಿ.ಎ ಆನರ್ಸ್ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳು, ಪ್ರೊಫೆಷನ್ ಡಿಪ್ಲೊಮಾ ಕೋರ್ಸ್‍ಗಳು, ಪ್ರಮಾಣ ಪತ್ರ ಕೋರ್ಸ್‍ಗಳು, ನಾಲ್ಕು ವರ್ಷದ ಬಿ.ಇಡಿ ಹಾಗೂ ಕೆಲವೊಂದು ತಾಂತ್ರಿಕ ಕೋರ್ಸ್‍ಗಳು ಸೇರಿಕೊಂಡಿವೆ. ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ವಿಕೃತಿ ಮೆರೆದಿದ್ದ ಪುಂಡರು ಅರೆಸ್ಟ್
ಕುಲಪತಿ ಕೆ.ಆರ್.ವೇಣುಗೋಪಾಲ್ ಈ ಕುರಿತು ಮಾತನಾಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಂಡ ನಂತರ ಉದ್ಯೋಗಾವಕಾಶಕ್ಕೆ ಪೂರಕವಾಗುವಂತೆ ಹಾಗೂ ಪದವಿಯ ಮಧ್ಯದಲ್ಲೇ ಎಕ್ಸಿಟ್, ಎಂಟ್ರಿಗೆ ಅನುಕೂಲ ಆಗುವಂತೆ ಕೋರ್ಸ್‍ಗಳ ಪಠ್ಯಕ್ರಮ ಸಿದ್ಧಪಡಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸ ಕೋರ್ಸ್‍ಗಳ ವಿವರ: ನಾಲ್ಕು ವರ್ಷದ ಬಿ.ಎಸ್ಸಿ ಹಾಗೂ ಬಿ.ಎ ಆನರ್ಸ್ ಅಡಿಯಲ್ಲಿ ಬಯೋ ಇನ್ಫರ್ಮೇಷನ್ ಮತ್ತು ಬಯೋಟೆಕ್ನಾಲಜಿ, ಹ್ಯೂಮನ್ ಡಿಸೀಸ್ ಜೆನೆಟಿಕ್ಸ್, ಆಹಾರ ಮತ್ತು ಪೌಷ್ಠಿಕಾಂಶ, ಅರ್ಥಶಾಸ್ತ್ರ, ಘನತಾಜ್ಯ ನಿರ್ವಹಣೆ, ಫಿಲ್ಮ್ ಮೇಕಿಂಗ್, ಗ್ರಾಫಿಕ್ಸ್ ಮತ್ತು ಆ್ಯನಿಮೇಷನ್, ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್, ವಿಪತ್ತು ನಿರ್ವಹಣೆ ಮತ್ತು ಮೆಡಿಸಿನಲ್ ಬಾಟನಿ ಪ್ರಾರಂಭಿಸಲಾಗುವುದು.
ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅಡಿಯಲ್ಲಿ ಮ್ಯಾನುಸ್ಕ್ರಿಪ್ಟಾಲಜಿ ಮತ್ತು ಪಾಲಿಯೋಗ್ರಫಿ, ಇಂಟರ್‍ಡಿಸಿಪ್ಲಿನರಿ ಸ್ಟಡೀಸ್ ಇನ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್, ಆಡಿಟರಿ ವರ್ಬಲ್ ಥೆರಪಿ ಕೋರ್ಸ್, ಫಿಲ್ಮ್ ಆಕ್ಟಿಂಗ್, ಥಿಯೇಟರ್ ಆಟ್ರ್ಸ್, ಫಿಲ್ಮ್ ಮೇಕಿಂಗ್, ಕೃಷಿ ನಿರ್ವಹಣೆ, ಪ್ರೊಫೆಷನ್ ಡಿಪ್ಲೊಮಾ ವಿಭಾಗದಲ್ಲಿ ಭರತನಾಟ್ಯಂ, ಒಡಿಸ್ಸಿ, ಪ್ರಮಾಣಪತ್ರ ಕೋರ್ಸ್‍ನಲ್ಲಿ ರಿಸರ್ಚ್ ಮೆಥಡ್ ಇನ್ ಮ್ಯಾನುಸ್ಕ್ರಿಪ್ಟಾಲಜಿ ಮತ್ತು ಪಾಲಿಯೋಗ್ರಫಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಟೆಕ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಸುಸ್ಥಿರ ಆರ್ಕಿಟೆಕ್ಚರ್, ಇಂಟರ್‍ನೆಟ್ ಆಫ್ ಥಿಂಗ್ಸ್ ಕೋರ್ಸ್‍ಗಳು ಶುರುವಾಗಲಿದೆ.
ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಶುಕ್ರವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಜೊತೆಗೆ ಆಗಸ್ಟ್ 16 ರಿಂದ 22ರವರೆಗೆ ರಾಜ್ಯದಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದೆ.
ಗುರುವಾರದಿಂದ 7 ದಿನಗಳ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಬೇಕು ಎಂದು ಸರ್ಕಾರ ಪ್ರಕಟಿಸಿದೆ.
ರಾಜ್ಯದ ಹಲವೆಡೆ ಪ್ರವಾಹ ಎದುರಾಗಿದ್ದು, ತುರ್ತು ಪರಿಸ್ಥಿತಿ ನಿಭಾಯಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಹೊರತು ಪಡಿಸಿ, ಉಳಿದವರಿಗೆ ಅನ್ವಯಿಸುವಂತೆ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಸ್ಟ್ 17ರಂದು ಒಂದು ದಿನ ರಜೆ ಘೋಷಿಸಲಾಗಿದೆ.
ಕೌನ್ಸೆಲಿಂಗ್ ಮುಂದೂಡಿಕೆ:
ಆ.17 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ನಿಕಾಯದ ಕೌನ್ಸೆಲಿಂಗ್ ಮುಂದೂಡಲಾಗಿದೆ. ಮುಂದೂಡಿದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.
ಬೆಂಗಳೂರು: ಈ ಬಾರಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ಕಂಡ ಚಿನ್ನದ ಕನಸಿಗೆ ನೀರು ಎರಚಲಾಗಿದೆ. ಬಡ್ಡಿ ಹಣ ಕಡಿಮೆ ಬರ್ತಿದೆ ಅಂತಾ ಗೋಲ್ಡ್ ಮೆಡಲ್ ನೀಡೋದನ್ನೇ ಬಂದ್ ಮಾಡಲಾಗುತ್ತಿದೆ.
ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ, ನೀವು ಹಗಲಿರುಳು ಓದಿ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ಚಿನ್ನದ ಪದಕಕ್ಕೆ ಅರ್ಹರಾಗಿದ್ದರೂ ಅದು ನಿಮಗೆ ದಕ್ಕುವುದಿಲ್ಲ. ಯಾಕಂದ್ರೆ ಗೋಲ್ಡ್ ಮೆಡಲ್ ಖರೀದಿಸುವ ಶಕ್ತಿ ವಿವಿಗೆ ಇಲ್ಲವಾದ ಕಾರಣ ಈ ಬಾರಿ ಸ್ಟೂಡೆಂಟ್ಸ್ ಗೆ ಗೋಲ್ಡ್ ಮೆಡಲ್ ಬದಲಿ 500 ರೂ. ಚೆಕ್ ನೀಡಲು ವಿವಿ ತೀರ್ಮಾನಿಸಿದೆ.
ಪ್ರತಿ ವರ್ಷ ಬೆಂಗಳೂರು ವಿಶ್ವವಿದ್ಯಾಲಯದ ನಡೆಸುವ ಘಟಿಕೋತ್ಸವದಲ್ಲಿ ಸಾಧನೆ ಮಾಡಿದ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿವಿ ಗೋಲ್ಡ್ ಮೆಡಲ್ ನೀಡಿ ಗೌರವಿಸುತ್ತದೆ. ಈ ಗೋಲ್ಡ್ ಮೆಡಲ್ ಪಡೆಯೋಕ್ಕೆ ಅಂತಾನೇ ಅದೆಷ್ಟೋ ಜನ ವಿದ್ಯಾರ್ಥಿಗಳು ಹಗಲು ರಾತ್ರಿ ಅಂತಾ ಓದುತ್ತಾರೆ. ಇದು ವಿದ್ಯಾರ್ಥಿ ಜೀವನ ಮಟ್ಟದಲ್ಲಿ ಕಾಣುವ ದೊಡ್ಡ ಕನಸು ಆಗಿರುತ್ತದೆ. ವಿವಿ ವಿದ್ಯಾರ್ಥಿಗಳಿಗೆ ಕೆ.ಜಿ ಲೆಕ್ಕದಲ್ಲಿ ಗೋಲ್ಡ್ ಕೊಡಲ್ಲ. ಕೊಡುವುದು 1.3 ಗ್ರಾಂ ಚಿನ್ನ ಲೇಪಿತ ಮೆಡಲ್. ಆದರೆ ಈ ಬಾರಿ ಈ ಚಿನ್ನದ ಲೇಪಿತ ಮೆಡಲ್ ಖರೀದಿಸುವ ಶಕ್ತಿ ವಿವಿ ಬಳಿ ಇಲ್ಲವಾಗಿದೆ.
ಪ್ರತಿ ವರ್ಷ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ನೀಡೋಕ್ಕೆ ಅಂತಾನೇ ದಾನಿಗಳು ಹಣ ಠೇವಣಿ ಇಟ್ಟಿರುತ್ತಾರೆ. ಅದರಿಂದ ಬರುವ ಬಡ್ಡಿ ಹಣವನ್ನು ವಿದ್ಯಾರ್ಥಿಗಳ ಏಳಿಗೆಗೆ ಬಳಸಬಹುದಾಗಿದೆ. ಅದೇ ಠೇವಣಿ ಇಟ್ಟ ಹಣದಿಂದ ಬರುವ ಬಡ್ಡಿ ಹಣದಿಂದಲ್ಲೇ ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಠೇವಣಿಯಿಂದ ಬರುವ ಬಡ್ಡಿ ಹಣ ಕಡಿಮೆ ಆಗ್ತಿದ್ದು, ಗೋಲ್ಡ್ ಮೆಡಲ್ ಖರೀದಿಸುವ ಮೊತ್ತ ಹೆಚ್ಚಾಗುತ್ತಿದೆ. ಆದರಿಂದ ಈ ಬಾರಿಯ 53 ನೇ ಘಟಿಕೋತ್ಸವದ ದಿನ ಗೋಲ್ಡ್ ಮೆಡಲ್ ಗೆ ಆಯ್ಕೆಯಾಗಿರುವ 179 ಜನರ ಪೈಕಿ 79 ಜನ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ಬದಲು 500 ರೂ ಚೆಕ್ ನೀಡಲು ವಿವಿ ನೀಡುತ್ತಿದೆ.
ವಿವಿಯಲ್ಲಿ ಚಿನ್ನದ ಪದಕ ಪಡೆಯಬೇಕು ಎಂಬ ಕನಸಿಗೆ ವಿವಿ ತಣ್ಣೀರು ಹಾಕಿದೆ. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಉತ್ಸಾಹ ಮೂಡಿಸುವ ಮಾರ್ಗ ಅಂದ್ರೆ ಅದು ಗೋಲ್ಡ್ ಮೆಡಲ್ ಪುರಸ್ಕಾರ ಈಗ ಅದು ಕೂಡಾ ಬಂದ್ ಆಗುತ್ತಿದೆ.
-ಶ್ರೀನಿವಾಸ್ ರಾವ್ ದಳವೆ ಬೆಂಗಳೂರು: ವಿಶ್ವ ವಿದ್ಯಾಲಯದ ಕುಲಪತಿ ಪೋಸ್ಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿಸಿ ಪೋಸ್ಟ್ ಗೆ ಯಾವ ಸಿಎಂ ಪೋಸ್ಟ್ ಗಿಂತಲೂ ಕಡಿಮೆ ಇಲ್ಲ ಅನ್ನುವಷ್ಟು ಮಟ್ಟಿಗೆ ಡಿಮ್ಯಾಂಡ್.
ಕುಲಪತಿಯಾಗಿದ್ದ ಪ್ರೊ.ತಿಮ್ಮೇಗೌಡರ ಅವಧಿ ಫೆಬ್ರವರಿ ಮೊದಲ ವಾರದಲ್ಲಿ ಮುಗಿದಿದೆ. ಈ ಹುದ್ದೆಗೆ ಈಗ ಹತ್ತಲ್ಲ ಇಪ್ಪತ್ತಲ್ಲ, ಬರೋಬ್ಬರಿ 150 ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.
ಯಾಕಿಷ್ಟು ಅರ್ಜಿ ಸಲ್ಲಿಕೆ?: ಕಳೆದ ಜನವರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ, ಖಾಲಿಯಾಗಲಿರುವ ಬೆಂಗಳೂರು ಹಾಗೂ ಮೈಸೂರು ವಿವಿಗಳ ಕುಲಪತಿ ಹುದ್ದೆಗಾಗಿ ಜಾಹೀರಾತು ನೀಡಿತ್ತು. ಹೀಗಾಗಿ ಇಷ್ಟೊಂದು ಅರ್ಜಿಗಳು ಸಲ್ಲಿಕೆಯಾಗಿವೆ.
ಯಾಕಿಷ್ಟು ಡಿಮ್ಯಾಂಡ್!: ಬೆಂಗಳೂರು ಹೇಳಿ ಕೇಳಿ ಹೈಟೆಕ್ ಸಿಟಿ, ಯಾವುದಕ್ಕೂ ಕೊರತೆ ಇಲ್ಲ. ಹೀಗಾಗಿ ಹೆಚ್ಚು ಜನ ಇಲ್ಲೆ ಕುಲಪತಿ ಆಗಬೇಕು ಅಂತ ಇಚ್ಛಿಸುತ್ತಾರೆ. ಇದಲ್ಲದೆ ಅತೀ ಹೆಚ್ಚು ಕಾಲೇಜುಗಳು ಬೆಂಗಳೂರು ವಿವಿ ಕೆಳಗೆ ಬರುತ್ತವೆ. ಮಾತ್ರವಲ್ಲ ಸರ್ಕಾರದಿಂದ ಹೆಚ್ಚು ಅನುದಾನ ಬರುತ್ತೆ. ಇಷ್ಟೆಲ್ಲದರ ಜೊತೆ ನೆಮ್ಮದಿಯ ಜೀವನ ಸಿಗುತ್ತೆ. ಹೀಗಾಗಿ ಎಲ್ರಿಗೂ ಬೆಂಗಳೂರು ವಿವಿನೇ ಬೇಕು.
ಆಯ್ಕೆ ಹೇಗೆ?: ಸದ್ಯ ಆಕಾಂಕ್ಷಿಗಳು ಏನೋ ಅರ್ಜಿ ಸಲ್ಲಿಸಿದ್ದಾರೆ. ವಿಸಿ ನೇಮಕ ಸಂಬಂಧ ಸರ್ಚ್ ಕಮಿಟಿಯನ್ನು ರಚಿಸಲಾಗಿದೆ. ಈ ಕಮಿಟಿ ಸದಸ್ಯರು 150 ಆಕಾಂಕ್ಷಿಗಳ ವಿವರ ನೋಡಿ ಅಂತಿಮವಾಗಿ ಮೂವರ ಹೆಸರು ಫೈನಲ್ ಮಾಡಬೇಕು.