Tag: Bangalore. Twitter

  • ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ

    ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ

    ಬೆಂಗಳೂರು: ಟ್ವಿಟ್ಟರ್ ಚಾಲೆಂಜ್‍ನಲ್ಲಿ ಧ್ರುವ ಸರ್ಜಾ, ಚಿರುನನ್ನು ನೆನೆದು ನನ್ನ ಗುರು ನನ್ನ ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ.

    ಯುವರತ್ನ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಚಿತ್ರದ ಪ್ರೋಮೋಷನ್ ಶುರುವಾಗಿದೆ. ಚಿತ್ರತಂಡ ಟ್ವಿಟ್ಟರ್‍ನಲ್ಲಿ ಒಂದು ಚಾಲೆಂಜ್ ಕಂಟೆಸ್ಟ್ ಆರಂಭಿಸಿದ್ದಾರೆ. ನಿಮ್ಮ ಜೀವನದಲ್ಲಿ ನಿಮ್ಮನ್ನು ಸರಿ ದಾರಿಗೆ ನಡೆಸಿದ ಗುರುವಿನ ಫೋಟೋ ಹಾಕುವ ಮೂಲಕವಾಗಿ ಪರಿಚಯಿಸಬೇಕು ಎಂದು ಹೇಳಿದ್ದರು. ತಮ್ಮ ನೆಚ್ಚಿನ ಗುರುವನ್ನು ಧ್ರುವ ಸರ್ಜಾ ಪರಿಚಯಿಸಿ ಧನ್ಯವಾದ ತಿಳಿಸಿದ್ದಾರೆ.

    ಧ್ರುವ ಸರ್ಜಾ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯನಾದೆ, ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದೆ, ನನ್ನ ಅಣ್ಣ ನನ್ನ ಗುರು ಎಂದು ಬರೆದುಕೊಂಡಿದ್ದಾರೆ.

    ಚಿರುವನ್ನು ಕಳೆದುಕೊಂಡ ಧ್ರುವ ಸರ್ಜಾ ತಮ್ಮ ಅಣ್ಣನನ್ನ ನೆನೆದು ಕಣ್ಣಿರು ಹಾಕುತ್ತಾ ಬೇಸರವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕೆಆರ್‍ಜಿ ಸ್ಟೂಡಿಯೋ ಸಂಸ್ಥೆ ಮಾಲೀಕನಾದ ಕಾರ್ತಿಕ್ ಗೌಡ ಅವರು ಹಾಕಿರುವ ಚಾಲೆಂಜ್ ಸ್ವೀಕರಿಸಿದ ಧ್ರುವ ಸರ್ಜಾ ಅಣ್ಣನನ್ನು ತನ್ನ ಗುರು ಎಂದು ಹೇಳಿದ್ದಾರೆ.

    ಯುವರತ್ನ ಸಿನಿಮಾ ತಂಡ ಹಾಕಿರುವ ಚಾಲೆಂಜ್‍ಅನ್ನು ಹಲವು ನಟ ನಟಿಯರು, ನಿರ್ದೇಶಕರು ತಮ್ಮ ನೆಚ್ಚಿನ ಗುರುವನ್ನು ಪರಿಚಯಿಸುವ ಮೂಲಕವಾಗಿ ಜೀವನದಲ್ಲಿ ಹೊಸ ದಾರಿ ತೋರಿಸಿಕೊಟ್ಟ ಗುರುವಿಗೆ ಧನ್ಯವಾದವನ್ನು ಈ ಮೂಲಕವಾಗಿ ಹೇಳುತ್ತಿದ್ದಾರೆ.