Tag: Bangalore Royal Challengers

  • ಆರ್‌ಸಿಬಿ ಗೆಲುವು: ಡ್ರೆಸ್ಸಿಂಗ್ ರೂಮ್‍ನಲ್ಲಿ ಸಂಭ್ರಮಾಚರಣೆ

    ಆರ್‌ಸಿಬಿ ಗೆಲುವು: ಡ್ರೆಸ್ಸಿಂಗ್ ರೂಮ್‍ನಲ್ಲಿ ಸಂಭ್ರಮಾಚರಣೆ

    ಮುಂಬೈ: ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಡ್ರೇಸಿಂಗ್ ರೂಮ್‍ನಲ್ಲಿ ಜಯವನ್ನು ಸಂಭ್ರಮಿಸಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ಖಾತೆ ವೀಡಿಯೋವನ್ನು ಶೇರ್ ಮಾಡಿಕೊಂಡಿದೆ.

    ಟ್ವೀಟ್‍ನಲ್ಲಿ ಏನಿದೆ?:
    RR VS RCB: ಡ್ರೆಸ್ಸಿಂಗ್ ರೂಮ್ ಆಚರಣೆಗಳು. ವಿಶೇಷ ವಿಜಯದ ಹಾಡನ್ನು ಹಾಡಿದ್ದಾರೆ. ದಿನೇಶ್‌ ಕಾರ್ತಿಕ್‌ ಮತ್ತು ಶಹಬಾಜ್‍ಗೆ ಮೆಚ್ಚುಗೆ ಹಾಗೂ ತಂಡದ ನಾಯಕ ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಗೆಲುವಿನಿಂದ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿದೆ. ಆಟದ ದಿನದಂದು ಆರ್‌ಆರ್ ವಿರುದ್ಧ ಆರ್‌ಸಿಬಿ ಗೆಲುವಿನ ನಂತರ ಡ್ರೆಸ್ಸಿಂಗ್ ರೂಮ್‍ನಿಂದ ಎಲ್ಲಾ ಪ್ರತಿಕ್ರಿಯೆಗಳನ್ನು ನಾವು ನಿಮಗೆ ತರುತ್ತೇವೆ ಎಂದು ತಿಳಿಸಿದೆ.

    ಮಂಗಳವಾರ ನಡೆದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ನೀಡಿತ್ತು. ಬೃಹತ್ ಮೊತ್ತವನ್ನು ಬೆನ್ನೆತ್ತಿದ ಆರ್‌ಸಿಬಿ ರೋಚಕ ಗೆಲುವು ಸಾಧಿಸಿತ್ತು. ಶಹಬಾಜ್‌ ಅಹ್ಮದ್‌ 45 ಹಾಗೂ ದಿನೇಶ್‌ ಕಾರ್ತಿಕ್‌ 44 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.  ರಾಜಸ್ಥಾನ ರಾಯಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಆಡಿದ 3 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

  • ಚೆನ್ನೈ ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?

    ಚೆನ್ನೈ ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?

    ಅಬುಧಾಬಿ: ಪ್ರತಿ ಬಾರಿ ಐಪಿಎಲ್ ಟೂರ್ನಿಯಲ್ಲಿ ವಿಶೇಷ ಬಣ್ಣದ ಜರ್ಸಿಯೊಂದಿಗೆ ಕಣಕ್ಕಿಳಿಯುವ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡ ಈ ಬಾರಿ ಹಸಿರು ಬಣ್ಣದ ಜರ್ಸಿಯೊಂದಿಗೆ ಚೆನ್ನೈ ವಿರುದ್ಧ ಆಡಲಿದೆ.

    ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡದ ಆಟಗಾರರು ಹಸಿರು ಬಣ್ಣದ ಜರ್ಸಿ ಧರಿಸಲಿದ್ದಾರೆ. ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿರುವ ಆರ್ ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದರನ್ನು ಪೋಸ್ಟ್ ಮಾಡಿದೆ.

    ವಿಶ್ವದಲ್ಲಿ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ತಂಡದ ಹಸಿರು ಬಣ್ಣದ ಜರ್ಸಿ ಧರಿಸುತ್ತಿದೆ. ವಿಡಿಯೋದಲ್ಲಿ ಈ ಕುರಿತು ಮನವಿ ಮಾಡಿರುವ ಆರ್ ಸಿಬಿ ಆಟಗಾರರು, ಪರಿಸರವನ್ನು ರಕ್ಷಣೆ ಮಾಡಲು ಪ್ರತಿಯೊಬ್ಬರು ತಮ್ಮ ಕೈಲಾದ ಕಾರ್ಯವನ್ನು ಮಾಡಬೇಕಿದೆ. ಮುಖ್ಯವಾಗಿ ಪ್ಲಾಸ್ಟಿಕ್ ವ್ಯರ್ಥಗಳನ್ನು ಮರುಬಳಕೆ ಮಾಡಿ. ಮಕ್ಕಳಿಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಎಬಿ ಡಿವಿಲಿಯರ್ಸ್ ಮನವಿ ಮಾಡಿದ್ದಾರೆ.

    ಚಿಕ್ಕ ಚಿಕ್ಕ ಕೆಲಸಗಳನ್ನು ತಪ್ಪದೇ ಮಾಡುವುದರಿಂದ ಪರಿಸರವನ್ನು ನಾವು ಕಾಪಾಡಬಹುದಾಗಿದೆ. ಭೂಮಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ, ಮರಗಳನ್ನು ಬೆಳಸಿ ಹಸಿರು ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದು ಫಿಂಚ್, ಡೇಲ್ ಸ್ಟೇಯ್ನ್ ಕರೆ ನೀಡಿದ್ದಾರೆ.

    2011 ರಿಂದಲೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೋ ಗ್ರೀನ್ ಕಾರ್ಯಕ್ರಮವನ್ನು ನಡೆಸಿಕೊಳ್ಳುತ್ತಾ ಬರುತ್ತಿದೆ. ಪರಿಸರವನ್ನು ಕಾಪಾಡಿಕೊಂಡರೇ ಮಾತ್ರ ಎಲ್ಲರೂ ಉತ್ತಮ ಆರೋಗ್ಯಕಾರ ಜೀವನ ನಡೆಸುತ್ತೇವೆ. ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಿಂದ ಧೋನಿ ನಿವೃತ್ತಿ?- ಮುನ್ಸೂಚನೆಗಳಿವೆ ಎಂದ ಫ್ಯಾನ್ಸ್

  • ಮಂಗಳೂರಿನಲ್ಲಿ ಕ್ರಿಸ್ ಗೇಲ್ ಜೊತೆ ಸೆಲ್ಫೀಗೆ ಮುಗಿಬಿದ್ದ ಜನ!

    ಮಂಗಳೂರು: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಭಾನುವಾರ ಮಂಗಳೂರಿಗೆ ಆಗಮಿಸಿದ್ರು. ಸ್ಮಿರ್ನ್ ಆಫ್ ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆಗಾಗಿ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿಯ ಬಲ್ಮಠದಲ್ಲಿರುವ ವೈನ್ ಗೇಟ್‍ಗೆ ಆಗಮಿಸಿದ ಸ್ಟಾರ್ ಆಟಗಾರ ಗೇಲ್‍ರನ್ನು ಮಂಗಳಾರತಿ ಎತ್ತಿ ತಿಲಕವಿಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ತದನಂತರ ಹೊಡಿಬಡಿ ಆಟಗಾರನಿಗೆ ಎಳನೀರು ನೀಡಿ ಸತ್ಕರಿಸಲಾಯಿತು. ವೈನ್ ಗೇಟ್ ಮುಖ್ಯಸ್ಥ ರಮೇಶ್ ನಾಯಕ್ ಹೂಗುಚ್ಛ ನೀಡಿ ಸ್ವಾಗತಿಸಿದರು.

    ಸ್ಮಿರ್ನ್ ಆಫ್ ಸಂಸ್ಥೆಯ ಕೆಂಪು ಬಣ್ಣದ ಟೀ ಶರ್ಟ್ ತೊಟ್ಟು ಆಗಮಿಸಿದ ಗೇಲ್, ಸ್ಮಿರ್ನ್ ಆಫ್ ಸಂಸ್ಥೆಯ ನೂತನ ಉತ್ಪನ್ನವೊಂದನ್ನು ಬಿಡುಗಡೆಗೊಳಿಸಿದ್ರು. ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಐಪಿಎಲ್ ಆಟಗಾರ ಗೇಲ್‍ರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಮುಗಿಬಿದ್ದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಲು ಹರಸಾಹಸ ಪಟ್ಟುಕೊಂಡರು. ಅಭಿಮಾನಿಗಳು ಗೇಲ್ ಅವರಿಂದ ಬ್ಯಾಟ್‍ಗಳ ಮೇಲೆ ಆಟೋಗ್ರಾಫ್ ಪಡೆದರು. ಈ ವೇಳೆ ಖಾಸಗಿ ಹಾಗೂ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಯಿತು.