Tag: Bangalore Police

  • ಮಹಿಳೆಯರ ನಗ್ನ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್

    ಮಹಿಳೆಯರ ನಗ್ನ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್

    ಬೆಂಗಳೂರು: ಮಹಿಳೆಯರ (Womens) ನಗ್ನ ವೀಡಿಯೋ (Video) ಮತ್ತು ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ ಸೈಬರ್ ಆರೋಪಿ ಈಗ ಬೆಂಗಳೂರು ಪೊಲೀಸರ (Bengaluru Police) ಅತಿಥಿಯಾಗಿದ್ದಾನೆ.

    ಮಹಾಂತೇಶ್ ಬಂಧಿತ ಆರೋಪಿ. ಮಹಿಳೆಯರಿಗೆ ಕರೆ ಮಾಡಿ ನಗ್ನ ವಿಡಿಯೋ, ಫೋಟೋ ಇದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸಿ ಹಣಕ್ಕೆ ಡಿಮಾಂಡ್ ಮಾಡುತ್ತಿದ್ದ. ಬಳಿಕ ಮಹಿಳೆಯೊಬ್ಬರಿಗೆ ಕರೆ ಮಾಡಿ, 30 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಬಳಿಕ ನಾರ್ಥ್ ಈಸ್ಟ್ ಸೈಬರ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಪ್ರವಾಸಿಗರ ಕಣ್ಮನ ಸೆಳೆಯುತ್ತಿರೋ ಅತ್ಯಾಧುನಿಕ ರೈಲ್ವೆ ರೆಸ್ಟೋರೆಂಟ್ – ಎಲ್ಲಿದೆ ಗೊತ್ತಾ?

    ಪ್ರಕರಣ (FIR) ದಾಖಲಿಸಿಕೊಂಡ ಪೊಲೀಸರು (Police) ಆರೋಪಿ ಬಂಧಿಸಿ ತನಿಖೆಗೆ ಒಳಪಡಿಸಿದ್ದಾಗ, ಹಲವು ಮಹಿಳೆಯರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಆಪರೇಷನ್ ದೀಪಾವಳಿ ವಸೂಲಿ- ಬಡವರ ರಕ್ತ ಹೀರುತ್ತಿದ್ದಾರೆ ವಸೂಲಿಕೋರರು

    ಆಪರೇಷನ್ ದೀಪಾವಳಿ ವಸೂಲಿ- ಬಡವರ ರಕ್ತ ಹೀರುತ್ತಿದ್ದಾರೆ ವಸೂಲಿಕೋರರು

    ಬೆಂಗಳೂರು: ನಗರದಲ್ಲಿ ಭರ್ಜರಿ ವಸೂಲಿ ಮಾಫಿಯಾ ನಡೆಯುತ್ತಿದೆ. ಪೊಲೀಸರ ಹೆಸರು ಹೇಳಿಕೊಂಡು ನಗರದ ಕೆಆರ್ ಮಾರುಕಟ್ಟೆಯಲ್ಲಿ ಬಡ ವ್ಯಾಪಾರಿಗಳ ರಕ್ತ ಹೀರುತ್ತಿರುವ ದಂಧೆಯನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲು ಮಾಡಿದೆ.

    ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಭರ್ಜರಿ ವಸೂಲಿ ದಂಧೆ ಎಕ್ಸ್‍ಕ್ಲೂಸೀವ್ ದೃಶ್ಯವಾಗಳಿಗಳ ಸಮೇತ ಪಬ್ಲಿಕ್ ಟಿವಿ ದಂಧೆಯ ಕರಾಳ ಮುಖವನ್ನು ಬಯಲು ಮಾಡಿದೆ. ಪೊಲೀಸರ ಹೆಸರು ಹೇಳಿಕೊಂಡು ಮಾರುಕಟ್ಟೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ನಿತ್ಯ 8 ರಿಂದ 10 ಮಂದಿಗೆ ದೂಡಿದ ಹಣದಲ್ಲಿ ಪಾಲು ಹೋಗುತ್ತಿದೆ. ಬಿಬಿಎಂಪಿ ಕೆಳ ದರ್ಜೆಯ ನೌಕರರು ಹಾಗೂ ಧಂದೆಕೋರರರಿಂದ ಹಣ ವಸೂಲಿ ಮಾಡಲಾಗುತ್ತಿದೆ.

    ಕೆ.ಆರ್ ಮಾರ್ಕೆಟ್ ನಲ್ಲಿ ಪ್ರತಿನಿತ್ಯಲೂ ಸಾವಿರಾರು ರೂಪಾಯಿ ದಂಧೆ ವಸೂಲಿ ಮಾಡಲಾಗುತ್ತಿದೆ. ಫುಟ್ ಪಾಥ್ ವ್ಯಾಪಾರಿಗಳು ಹಣ ಕೊಡದಿದ್ದರೆ ಅಂಗಡಿ ತೆರವು ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಯಿಂದ 100-150 ರೂಪಾಯಿ ಹಣ ವಸೂಲಿ ಮಾಡಲಾಗುತ್ತಿದೆ. ಕೊರೊನಾ ಹೊಡೆತದಿಂದ ಜರ್ಜರಿತಗೊಂಡಿದ್ದ ಬಡ ವ್ಯಾಪಾರಿಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ವಸೂಲಿಕೋರರ ಕಿರುಕುಳಕ್ಕೆ ನರಕಯಾತನೆ ಅನುಭವಿಸ್ತಿದ್ದಾರೆ.

    ಪಬ್ಲಿಕ್ ಟಿವಿ: ದುಡ್ಡು ಕಲೆಕ್ಟ್ ಮಾಡ್ತಿದ್ರಲ್ಲ
    ವಸೂಲಿಕೋರರು : ದುಡ್ಡಲ್ಲ ಸಾರ್. ನಾವೇನೋ ಟಿಕೆಟ್ ಹಾಕಿದ್ವಿ. ಕೇಳಿ.
    ಪಬ್ಲಿಕ್ ಟಿವಿ: ಏನು ಟಿಕೆಟ್..?
    ವಸೂಲಿಕೋರರು : ಏನಿಲ್ಲ ಸಾರ್.
    ಪಬ್ಲಿಕ್ ಟಿವಿ: ಮತ್ತೆ ದುಡ್ಡು ಯಾಕೆ ತೊಗೊಂಡ್ರಿ.
    ವಸೂಲಿಕೋರರು : ಯಾರೋ ಪಾಪ ಮಾಡೋಕೆ ಕಳಿಸ್ತಾರೆ. ಏನೋ ಇಸ್ಕೊಳ್ತೀವಿ ಹೊಟ್ಟೆಪಾಡು.
    ಪಬ್ಲಿಕ್ ಟಿವಿ: ಯಾರು ಕಳಿಸ್ತಾರೆ..?
    ವಸೂಲಿಕೋರರು : ಯಾರೋ ಪೊಲೀಸರು
    ಪಬ್ಲಿಕ್ ಟಿವಿ: ಯಾರು ಆ ಪೊಲೀಸರು..?
    ವಸೂಲಿಕೋರರು : ಅಲ್ಲಿ ಟ್ರಾಫಿಕ್ ಅವ್ರು.
    ಪಬ್ಲಿಕ್ ಟಿವಿ: ಏನಂತಾರೆ. ದಿನಕ್ಕೆ ಎಷ್ಟು ಕೊಡ್ತೀರಿ ಅವ್ರಿಗೆ
    ವಸೂಲಿಕೋರರು : ನಾವು ಮಾಡಲ್ಲ ಸಾರ್. ದೇವ್ರಾಣೆಗೂ.
    ಪಬ್ಲಿಕ್ ಟಿವಿ: ನಿಮ್ಮನ್ನ ಯಾರು ಕಳಿಸ್ತಾರೆ ಅಂತ
    ವಸೂಲಿಕೋರರು : ಅವ್ರು ಬಂದಿಲ್ಲ ಸಾರ್ ಇವತ್ತು. ಅದೇ ಆಯಪ್ಪ ಬಂದಿಲ್ವಾಲ್ಲ.
    ಪಬ್ಲಿಕ್ ಟಿವಿ: ಯಾರು..?
    ವಸೂಲಿಕೋರರು : ಅವ್ರ ಹೆಸರು ಸುರೇಶ್ ಅಂತ
    ಪಬ್ಲಿಕ್ ಟಿವಿ :ಟ್ರಾಫಿಕ್ ಆ..!
    ವಸೂಲಿಕೋರರು : ಹಾ ಸರ್.

    ಪಬ್ಲಿಕ್ ಟಿವಿ : ವಿಡಿಯೋಸ್ ಇದೆ ನಮ್ಮತ್ರ
    ವಸೂಲಿಕೋರರು : ಏನಂತಾ..?
    ಪಬ್ಲಿಕ್ ಟಿವಿ : ದುಡ್ಡು ತೊಗೊಳ್ಳೋದು
    ವಸೂಲಿ ಮಾಡುವ ಮಹಿಳೆ : ತೋರ್ಸು ವಿಡಿಯೋ. ಯಾರತ್ರ ತೊಗೊಂಡಿದೇನೆ ಅಂತ
    ಪಬ್ಲಿಕ್ ಟಿವಿ : ಸತ್ಯ ಹೇಳಿ ಸುಮ್ನೆ ಬೇಡ.. ಯಾರಿಗೆ ಕೊಡ್ತಿರಿ. ಎಲ್ಲಿ ಕೊಡ್ತಿರಿ. ದಿನಕ್ಕೆ ಎಷ್ಟು ಕೊಡ್ತಿರಿ..?
    ವಸೂಲಿ ಮಾಡುವ ಮಹಿಳೆ : ನಮ್ಮನ್ನ ಕರಿತಾರೆ. ನಾವು ಹೋಗಲ್ಲಣ್ಣ.. ನಾವು ವ್ಯಾಪಾರ ಮಾಡೋದಾ.? ಕಲೆಕ್ಷನ್ ಮಾಡೋದಾ..?

    ವಸೂಲಿ ಮಾಡೋದನ್ನು ಮಾಡಿ ನಮಗೆ ಏನು ಗೊತ್ತೆ ಇಲ್ಲ ಅನ್ನೋ ಹಾಗೆ ಹೇಗೆ ನಾಟಕ ಆಡುತ್ತಾರೆ. ನಿತ್ಯ ಅಕ್ರಮವಾಗಿ ಪೊಲೀಸರ ಹೆಸರು ಹೇಳಿಕೊಂಡು ಹಣ ಪೀಕಲಾಗುತ್ತಿದೆ. ಇದನ್ನ ಪ್ರಶ್ನಿಸಿದರೆ ಕೂಡಲೇ ಅಲ್ಲಿಂದ ಬಡ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸುತ್ತಾರೆ. ಇದರಲ್ಲಿ ಕೆಲ ಬಿಬಿಎಂಪಿಯ ನೌಕರರು ಕೂಡ ಶಾಮೀಲಾಗಿದ್ದಾರೆ.

    ಪ್ರತಿನಿತ್ಯ ಕೆ.ಆರ್ ಮಾರ್ಕೆಟ್‍ನಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಂಜೆ ಆರು ಘಂಟೆಯ ತನಕ ಈ ವಸೂಲಿ ದಂಧೆ ನಡೆಯುತ್ತೆ. ಕನಿಷ್ಟ ಒಬ್ಬರಿಂದ 150 ರೂಪಾಯಿ ಆದರೂ ದಿನಕ್ಕೆ 200 ಜನರಿಂದ ಹಣ ಪೀಕುತ್ತಾರೆ. 200 ಜನರಿಂದ ಪೀಕಿದ ಹಣ ತಿಂಗಳಿಗೆ ಬರೋಬ್ಬರಿ 9 ಲಕ್ಷ ರೂಪಾಯಿ ಹಣ ಆಗುತ್ತೆ. ಈ ಹಣ ಎಲ್ಲಿಗೆ? ಯಾರ ಕಿಸೆಗೆ ಸೇರುತ್ತೆ ಅನ್ನೋದೇ ನಿಗೂಢ. ಕೆ.ಆರ್ ಮಾರ್ಕೆಟ್ ನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರೂ ಇದ್ಯಾವುದು ಇವರ ಕಣ್ಣಿಗೆ ಬೀಳೋದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಈ ವಸೂಲಿ ದಂಧೆಗೆ ಬ್ರೇಕ್ ಹಾಕಬೇಕಿದೆ.