Tag: Bangalore Palace

  • ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ

    ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ

    ಬೆಂಗಳೂರು: ಸಚಿವರಾಗಿ ಒಂದು ವರ್ಷ ಪೂರೈಸಿದ ಹಿನ್ನಲೆ ಆಂಜನೇಯ ಸ್ವಾಮೀಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ಸನ್ನಿಧಾನಕ್ಕೆ ಅರಗ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇಂದಿಗೆ ಆರಗ ಅವರು ಪ್ರಮಾಣ ವಚನ ಸ್ವೀಕಾರ ಮಾಡಿ 1 ವರ್ಷ ಪೂರೈಕೆಯಾಗಿದೆ. ಈ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದ ಮೊಬೈಲ್, ಖಾಲಿ ಹಾಳೆ ಕೈಗಿತ್ತು ಹೆತ್ತಮ್ಮನನ್ನೇ ಬಿಟ್ಟು ಹೋದ 

    ನಂತರ ಮಾಧ್ಯಮಗಳೊಂದಿಗೆ ಪಿಎಸ್‍ಐ ನೇಮಕಾತಿ ಪ್ರಕರಣ ಕುರಿತು ಮಾತನಾಡಿದ ಅವರು, ಸಿಐಡಿ ತನಿಖೆ ಮುಗಿದ ಕೂಡಲೇ ಪರೀಕ್ಷೆ ದಿನಾಂಕ ಪ್ರಕಟ ಮಾಡ್ತೀವಿ. ಪ್ರಕರಣದಲ್ಲಿ ಯಾರು ಇದ್ದಾರೋ ಅವ್ರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡೋದಿಲ್ಲ. 545 ಪೋಸ್ಟ್ ನೇಮಕಾತಿ ಅಧಿಸೂಚನೆ ರದ್ದು ಆಗೋದಿಲ್ಲ. ಆದ್ರೆ ಹೊಸದಾಗಿ ಪರೀಕ್ಷೆ ಮಾಡ್ತೀವಿ. ಅಭ್ಯರ್ಥಿಗಳು ವಯಸ್ಸಿನ ಬಗ್ಗೆ ಭಯ ಬೀಳೋ ಅವಕಾಶ ಇಲ್ಲ ಎಂದು ಭರವಸೆ ಕೊಟ್ಟರು.

    545 ಪೋಸ್ಟ್ ನೇಮಕಾತಿ ಅಧಿಸೂಚನೆ ಅವ್ರಿಗೆ ವಯಸ್ಸಿನ ಸಡಿಲಿಕೆ ಕೊಡಲಾಗುತ್ತದೆ. ಹೀಗಾಗಿ ಯಾರು ಆತಂಕ ಪಡುವ ಅವಶ್ಯತೆ ಇರೋದಿಲ್ಲ. ಹೊಸದಾಗಿ ಮತ್ತೆ 5 ಸಾವಿರ ಪೋಸ್ಟ್ ಕಾನ್ಸ್‍ಸ್ಟೇಬಲ್ ಹುದ್ದೆ ನೇಮಕಾತಿ ಮಾಡಿಕೊಳ್ತೀವಿ. 545 ಹುದ್ದೆ ಬಿಟ್ಟು 450 PSI ಗಳ ನೇಮಕಾತಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭ ಮಾಡ್ತೀವಿ. ನಮ್ಮ ಅವಧಿಯಲ್ಲಿ ಹೇಗೆ ಎಕ್ಸಾಂ ಮಾಡೋದು ಅಂತ ತೋರಿಸಿಕೊಡ್ತೀವಿ ಎಂದು ಸವಾಲು ಹಾಕಿದರು. ಇದನ್ನೂ ಓದಿ:  ಪಾಕ್‍ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ 

    ಹರ್ಷ ಕೊಲೆ ಆರೋಪಿಗಳು ವೀಡಿಯೋ ನೋಡಿ ನನಗೆ ತುಂಬಾ ನೋವಾಯ್ತು. ಕೂಡಲೇ ಕ್ರಮ ತೆಗೆದುಕೊಂಡು ಜೈಲಿನ 15 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 30 ಸಿಬ್ಬಂದಿ ಎತ್ತಂಗಡಿ ಮಾಡಲಾಗಿದೆ. ಈಗ ಜೈಲಿನಲ್ಲಿ ಹೊಸ ಸಿಬ್ಬಂದಿ ಇದ್ದಾರೆ. ಜೈಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡ್ತಿದ್ದೇವೆ. ಪರಪ್ಪನ ಅಗ್ರಹಾರ ಜೈಲಿಗೆ ಜಾಮರ್ ಅಳವಡಿಕೆ ಮಾಡೇ ಮಾಡ್ತೀವಿ. 2-3 ತಿಂಗಳ ಒಳಗೆ ಜಾಮರ್ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಯಾರಿಗೂ ಕಾಲ್ ಮಾಡೊದಕ್ಕೂ ಆಗಬಾರದು. ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹಾಕೋ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ತಿದ್ದೇವೆ ಎಂದು ಶಪತ ಮಾಡಿದರು.

    Live Tv
    [brid partner=56869869 player=32851 video=960834 autoplay=true]