Tag: Bangalore Explosion

  • ರೀಲ್ ಪಟಾಕಿಯಿಂದ ಬೆಂಗಳೂರಿನಲ್ಲಿ ಸ್ಫೋಟ – ಅನುಮಾನ ಏನು?

    ರೀಲ್ ಪಟಾಕಿಯಿಂದ ಬೆಂಗಳೂರಿನಲ್ಲಿ ಸ್ಫೋಟ – ಅನುಮಾನ ಏನು?

    ಬೆಂಗಳೂರು: ವಿವಿಪುರಂನ ನ್ಯೂ ತರಗುಪೇಟೆಯ ಗೊಡೌನ್‍ನಲ್ಲಿ ನಡೆದ ಭಯಾನಕ ಸ್ಫೋಟಕ್ಕೆ ಪಟಾಕಿ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಪತ್ರಕಾಳಿ ಲಾರಿ ಟ್ರಾನ್ಸ್‍ಪೋರ್ಟ್ ಸರ್ವೀಸ್ ಗೋದಾಮು ಮತ್ತು ಅದಕ್ಕೆ ಹೊಂದಿಕೊಂಡಿರುವ ಪಂಕ್ಚರ್ ಶಾಪ್‍ನಲ್ಲಿ ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಸ್ಫೋಟ ಸಂಭವಿಸಿದೆ. ಘಟನೆ ನಡೆದ ಬಳಿಕ ವಿವಿಪುರಂ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಪ್ರಾಥಮಿಕ ತನಿಖೆ ನಡೆಸಿದ ಬಳಿಕ ರೀಲ್ ಪಟಾಕಿಯ ದೊಡ್ಡ ಡ್ರಮ್ ಕೆಳಕ್ಕೆ ಬಿದ್ದು ಸ್ಫೋಟ ಉಂಟಾಗಿರಬಹುದು ಎಫ್‍ಎಸ್‍ಎಲ್ ಹೇಳಿದೆ.

    ಬಾಬು ಅವರಿಗೆ ಸೇರಿದ ಈ ಗೋದಾಮಿನಲ್ಲಿ ಲಾರಿ ಸರ್ವಿಸ್ ಬೋರ್ಡ್ ಹಾಕಿ, ಪಟಾಕಿ ಸಂಗ್ರಹಿಸಿಡಲಾಗಿತ್ತು. ಅಯ್ಯನ್ ಹಂಟರ್ ರಿಂಗ್ ಕ್ಯಾಪ್ ಹೆಸರಿನ ಪಟಾಕಿ ಕಂಪನಿಗೆ ಸಂಬಂಧಿಸಿದ ಅವಶೇಷಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದು ಪಟಾಕಿ ಸ್ಫೋಟಕದ ಶಂಕೆಗೆ ಪುಷ್ಠಿ ನೀಡುತ್ತಿವೆ. ಇದನ್ನೂ ಓದಿ:  ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ಲಸಿಕೆ: ಪ್ರಭು ಚವ್ಹಾಣ್

    ಗೋದಾಮಿನಲ್ಲಿ 15 ರಿಂದ 20 ಕೆಜಿ ತೂಕದ ಒಟ್ಟು 80 ಬಾಕ್ಸ್ ಗಳನ್ನು ಪಟಾಕಿಯನ್ನು ಸಂಗ್ರಹಿಸಿ ಇಡಲಾಗಿತ್ತು. ಈ ಪೈಕಿ 78 ಪತ್ತೆಯಾಗಿದ್ದು, ಉಳಿದ ಎರಡು ಸ್ಫೋಟಗೊಂಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಇದರ ಜೊತೆ ಮೆಕ್ಯಾನಿಕಲ್ ಹಾಗೂ ಕೆಮಿಕಲ್ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ.

    ಸ್ಫೋಟಕ್ಕೆ ಸಂಬಂಧಿಸಿದಂತೆ ವಿವಿಪುರಂ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಮಾಲೀಕ ಗಣೇಶ್ ಬಾಬುವನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

    ಅನುಮಾನ ಏನು?
    ಪಟಾಕಿ ಸ್ಫೋಟ ಎಂಬ ಅನುಮಾನ ಇದ್ದರೂ ಕೇವಲ 2 ಬಾಕ್ಸ್ ಮಾತ್ರ ಸ್ಫೋಟಗೊಂಡಿವೆ. ಜೊತೆಗೆ ಪಟಾಕಿ ಸ್ಫೋಟ ಆಗಿದ್ದರೆ ಪಟಪಟ ಎಂದು ಶಬ್ಧ ಆಗಬೇಕಿತ್ತು. ಆದರೆ ಇಲ್ಲಿ ಒಂದೇ ಬಾರಿಗೆ ಸ್ಫೋಟ ಸಂಭವಿಸಿದೆ. ಇದನ್ನೂ ಓದಿ:  ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಬರಮಾಡಿಕೊಳ್ಳಲಿದ್ದಾರೆ ಹೆಚ್‍ಡಿಕೆ

    ಪಂಕ್ಚರ್ ಅಂಗಡಿಯಲ್ಲಿ ಇರುವ ನೈಟ್ರೋಜನ್ ಸಿಲಿಂಡರ್ ಸ್ಫೋಟ ಆಗಿರಬಹುದು ಎಂಬ ಅನುಮಾನವೂ ಇದೆ. ಆದರೆ ನೈಟ್ರೋಜನ್ ಸಿಲಿಂಡರ್ ಸ್ಫೋಟ ಆಗಿದ್ದರೆ ಪಂಕ್ಚರ್ ಅಂಗಡಿ ಇರುವ ಕಟ್ಟಡಕ್ಕೆ ಹಾನಿ ಆಗಬೇಕಿತ್ತು. ಆದರೆ ಮೇಲ್ಛಾವಣಿ ಕಿತ್ತು ಹೋಗುವ ರೀತಿಯಲ್ಲಿ ಹೆಚ್ಚು ಹಾನಿ ಆಗಿರುವುದು ಪಂಕ್ಚರ್ ಅಂಗಡಿ ಪಕ್ಕದ ಲಾರಿ ಟ್ರಾನ್ಸ್‍ಪೋರ್ಟ್ ಗೋದಾಮಿನಲ್ಲಿ

    ನಿಗೂಢ ಸ್ಫೋಟಕ್ಕೆ ಇಬ್ಬರು ಬಲಿ ಆಗಿದ್ದಾರೆ. ಏಳುಮಂದಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ತೀವ್ರತೆಗೆ ಇಡೀ ನ್ಯೂ ತರಗುಪೇಟೆಯಲ್ಲಿ ಕಂಪನದ ಅನುಭವ ಉಂಟಾಗಿದೆ. ಇಬ್ಬರ ಮೃತದೇಹಗಳು ಛಿದ್ರ ಛಿದ್ರವಾಗಿವೆ. ಇದನ್ನೂ ಓದಿ:  ಅರ್ಚಕರಿಗೆ ಹಾಗೂ ದೇವಾಲಯ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಶೀಘ್ರ ಕ್ರಮ: ಜೊಲ್ಲೆ

    ಮೃತರ ಅಂಗಾಂಗಗಳು ಸುಮಾರು 10 ಮೀಟರ್‍ವರೆಗೂ ಹಾರಿ ಬಿದ್ದಿವೆ. ಟ್ರಾನ್ಸ್‍ಪೋರ್ಟ್ ಮತ್ತು ಪಂಕ್ಚರ್ ಅಂಗಡಿ ಮುಂದಿನ ಟೆಂಪೋ ಜಖಂ ಆಗಿದ್ರೆ. ದ್ವಿಚಕ್ರ ವಾಹನಗಳು ಚಿಂದಿ ಚಿಂದಿ ಆಗಿವೆ. ದುರಂತದಲ್ಲಿ ಮೃತಪಟ್ಟವರನ್ನು ಪಂಕ್ಚರ್ ಅಂಗಡಿ ಮಾಲಿಕ ಅಸ್ಲಾಂ, ಟೆಂಪೋ ಚಾಲಕ ತಮಿಳುನಾಡು ಮೂಲದ ಮನೋಹರ್ ಎಂದು ಗುರುತಿಸಲಾಗಿದೆ. ಗಾಯಾಳು 70 ವರ್ಷದ ಅನ್ಬು ಸ್ವಾಮಿ ಮತ್ತು ಮಂಜುನಾಥ್ ಸ್ಥಿತಿ ಗಂಭೀರವಾಗಿದೆ.