Tag: Bangalore

  • ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

    ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

    – ಇದು ಚಾಲಕರ ಮಾನ, ಮರ್ಯಾದೆ ಪ್ರಶ್ನೆ
    – ನಮ್ಮ ಮೆಟ್ರೋ, ಮಾಲ್‌ಗಳೂ ಬಂದ್‌ ಆಗ್ಬೇಕು; ಆಗ್ರಹ

    ಬೆಂಗಳೂರು: ಎಂಇಎಸ್‌ ಪುಂಡಾಟಿಕೆಗೆ ಕಡಿವಾಣ ಹಾಕಬೇಕು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ಇದೇ ಮಾ.22ರಂದು ಕರ್ನಾಟಕ ಬಂದ್‌ (Karnataka Bandh) ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಘೋಷಿಸಿದರು.

    ಕರ್ನಾಟಕ ಬಂದ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿಂದು ಸಭೆ ನಡೆಸಲಾಯಿತು. ಹಲವು ಕನ್ನಡಪರ ಸಂಘಟನೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್‌ ನಾಗರಾಜ್‌, ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಕರ್ನಾಟಕ ಬಂದ್‌ ನಡೆಸಲಾಗುವುದು. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

    ನೈತಿಕ ಬೆಂಬಲ ಅನ್ನೋರು ಮನೆಯಲ್ಲಿರಿ:
    ಯಾವುದೇ ಕಾರಣಕ್ಕೂ ಬಂದ್‌ ಹಿಂಪಡೆಯುವುದಿಲ್ಲ. ಮಹಾರಾಷ್ಟ್ರದಲ್ಲಿ (Maharashtra) ಕನ್ನಡಿಗರ ಮೇಲೆ ಪದೇ ಹಲ್ಲೆ ನಡೆಯುತ್ತಿದೆ. ಈ ಬಂದ್‌ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಬಹುತೇಕ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಆಟೋ ಚಾಲಕರ ಸಂಘಟನೆಗಳು, ಕ್ಯಾಬ್, ಒಲಾ, ಉಬರ್‌, ಹೋಟೆಲ್ ಮಾಲೀಕರು ಸೇರಿ ಎಲ್ಲರೂ ಬಂದ್‌ಗೆ ಬೆಂಬಲ ನೀಡಬೇಕು. ನಮ್ಮ ಮೆಟ್ರೋ, ಮಾಲ್‌ಗಳೂ ಬಂದ್‌ ಆಗಬೇಕು. ಇಲ್ಲದಿದ್ದರೇ ನಾವೇ ಬಂದ್‌ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರಲ್ಲದೇ ಕರ್ನಾಟಕ ಬಂದ್‌ಗೆ ನಮ್ಮದು ನೈತಿಕ ಬೆಂಬಲ ಅನ್ನುವವರು ಮನೆಯಲ್ಲೇ ಕುಳಿತುಕೊಳ್ಳಿ ಎಂದು ಹೇಳಿದರು.  ಇದನ್ನೂ ಓದಿ: ಒತ್ತುವರಿ ಆಗಿದ್ರೆ ತೆರವು ಮಾಡಿಕೊಳ್ಳಿ, ನಮ್ಮ ಜಮೀನು ಹುಡುಕಿಕೊಡಿ – ಭೂ ದಾಖಲೆಗಳ ಇಲಾಖೆಗೆ ಹೆಚ್‌ಡಿಕೆ ಪತ್ರ

    ರಾಜ್ಯದಲ್ಲಿ ದಿನೇ ದಿನೇ ಕನ್ನಡಿಗರ ಮೇಲೆ ಪರಭಾಷಿಗರ ದಾಳಿ ಹೆಚ್ಚಾಗುತ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುತ್ತಿದೆ. ಬಿಹಾರ, ಬಂಗಾಳ, ತಮಿಳು, ತೆಲುಗು, ಮಾರ್ವಾಡಿಯವರು ರಾಜ್ಯದಲ್ಲಿ ಸುಮಾರು 2 ಕೋಟಿ ಜನ ಇದ್ದಾರೆ. ತಲೆಬೋಳಿಸೋದ್ರಿಂದ ಹಿಡಿದು ಪಾನಿಪುರಿ ಮಾರೋನು ಕೂಡ ಅನ್ಯರಾಜ್ಯದವರಿದ್ದಾರೆ. ಇದನ್ನೆಲ್ಲ ಯಾರು ಕೇಳೋದು? ಇದೆಲ್ಲದರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಅಲ್ಲದೇ ಎಂಇಎಸ್, ಶಿವಸೇನೆಯನ್ನು ನಿಷೇಧ ಮಾಡಬೇಕು. ಬೆಳಗಾವಿ ನಮ್ಮದು. ಬೆಳಗಾವಿಯಲ್ಲಿ ಶಿವಾಜಿ, ಸಂಭಾಜಿ ಪ್ರತಿಮೆ ಬೇಕಾ? ಪರಭಾಷಿಗರು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದನ್ನು ನಿಲ್ಲಿಸಬೇಕು. ಕರ್ನಾಟಕದಲ್ಲಿದ್ದು ಕನ್ನಡಿಗರ ಮೇಲೆ ಹಲ್ಲೆ ನಡೆಸುವವರು ರಾಜ್ಯ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ – ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ್ ನಡುವೆ ದಾಖಲೆ ಜಟಾಪಟಿ

    ಮಾ.22ರಂದು ಯಾರೂ ನಮ್ಮ ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ಅಂದು ಬಸ್ ಓಡಿಸಬಾರದು ಅಂತ ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ, ಅವತ್ತು ಬಸ್ ಓಡಿಸಬಾರದು. ಮಂತ್ರಿ, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ, ಮರ್ಯಾದೆ, ಗೌರವ, ಕನ್ನಡ ಅಭಿಮಾನ, ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ.‌ ಚಾಲಕರು ಯಾರೇ ಇರಲಿ ಬಸ್, ಆಟೋ, ಕಾರು ಚಾಲಕರಿಗೂ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ನುಡಿದರು.

    ರಿಷಬ್‌ ಶೆಟ್ಟಿಗೆ ಪರೋಕ್ಷ ವಾರ್ನಿಂಗ್‌:
    ಮುಂದುವರಿದು… ಶಿವಾಜಿ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ವಾಟಾಳ್‌ ನಾಗರಾಜ್‌ ಪರೋಕ್ಷ ಎಚ್ಚರಿಕೆ ನೀಡಿದರು. ಕಾಂತಾರ ಚಿತ್ರದ ನಟ ‘ಛತ್ರಪತಿ ಶಿವಾಜಿ’ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ. ಅವರು ಸಿನಿಮಾ ಮಾಡಕೂಡದು, ಶಿವಾಜಿ ಚಿತ್ರ ಬಂದರೆ ಬಹಿಷ್ಕಾರ ಹಾಕ್ತೇವೆ ಎಂದು ರಿಷಬ್‌ ಶೆಟ್ಟಿ ಹೆಸರು ಹೇಳದೇ ಎಚ್ಚರಿಕೆ ಕೊಟ್ಟರು.

  • ತರುಣ್ –ಸೋನಲ್ ಮದುವೆ:  ಲವ್‍ ಸ್ಟೋರಿಗೆ ದರ್ಶನ್ ಕಾರಣ

    ತರುಣ್ –ಸೋನಲ್ ಮದುವೆ: ಲವ್‍ ಸ್ಟೋರಿಗೆ ದರ್ಶನ್ ಕಾರಣ

    ಗಸ್ಟ್ 10 ಮತ್ತು 11ನೇ ತಾರೀಖು ಬೆಂಗಳೂರಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ  ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tarun Sudhir) ಮತ್ತು ನಟಿ ಸೋನಲ್‍ (Sonal). 10ನೇ ತಾರೀಖು ಆರತಕ್ಷತೆ ಕಾರ್ಯಕ್ರಮವಿದ್ದರೆ 11ನೇ ತಾರೀಖು ಈ ಜೋಡಿ ಸಪ್ತಪದಿ ತುಳಿಯಲಿದೆ. ಮದುವೆ (Marriage) ಕುರಿತಾಗಿ ಮಾಧ್ಯಮಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಂಡಿದೆ ಈ ಜೋಡಿ.

    ಲವ್‍ ಸ್ಟೋರಿಗೆ ದರ್ಶನ್ ಕಾರಣ

    ಈ ಜೋಡಿಯ ಲವ್ ಸ್ಟೋರಿಗೆ ದರ್ಶನ್ ಕಾರಣವಂತೆ. ಈ ಕುರಿತಂತೆ ಮಾತನಾಡಿದ್ದಾರೆ ತರುಣ್. ‘ರಾಬರ್ಟ್‌ ಸೆಟ್ ನಲ್ಲಿ ದರ್ಶನ್ ಸರ್ ತಮಾಷೆಯಾಗಿ ರೇಗಿಸ್ತಿದ್ರು. ಸೋನಾಲ್ ಮದುವೆ ಮಾಡಿಕೊಳ್ತಿಯಾ ಅಂತ ರೇಗಿಸ್ತಿದ್ರು.  ಸೋನಾಲ್ ಯಾವ ಸೆಟ್ ಗೆ ಹೋದ್ರೂ ಮದ್ವೆ ಬಗ್ಗೆ ಕೇಳ್ತಿದ್ರಂತೆ. ಸೋನಾಲ್ ಫೋನ್ ಮಾಡಿ ಅವತ್ತು ರೂಮರ್ಸ್ ಬಗ್ಗೆ ಹೇಳಿದ್ರು. 2023 ಜನವರಿಯಲ್ಲಿ ಮತ್ತಷ್ಟು ಕ್ಲೋಸ್ ಆಗ್ತಾ ಹೋದ್ವಿ. ಅವ್ರ ಪ್ರೂಚರ್, ಫ್ಯಾಮಿಲಿ ಬಗ್ಗೆ ನೋಡ್ತಾ ಬಂದ್ವಿ. ಕಾಟೇರ ರಿಲೀಸ್ ಆಗೋವರೆಗೂ ಮದುವೆಗೆ ಟೈಂ ಕೇಳಿದ್ದೆ. ಕಾಟೇರ ಸಿನಿಮಾ ರೆಸ್ಪಾನ್ಸ್ ಮೇಲೆ ನನ್ ಮದ್ವೆಗೆ ಡಿಸೈಡ್ ಮಾಡಿದ್ದು. ದರ್ಶನ್ ಸರ್ ಕೂಡಾ ಸೋನಲ್ ಮನೇಲಿ ಮಾತಾಡಿದ್ರು. ಫೈನಲಿ ಈಗ ಫ್ಯಾಮಿಲಿಯಲ್ಲಿ ಮಾತುಕತೆ ಮಾಡಿ ಮದುವೆಗೆ ನಿರ್ಧಾರ ಮಾಡಿದ್ವಿ’ ಅಂತಾರೆ.

    ತಮಾಷೆನೇ ನಿಜಾ ಆಯ್ತು..

    ಲವ್ ಮತ್ತು ಮದುವೆ ಕುರಿತಂತೆ ಮಾತಾಡಿದ ಸೋನಲ್ ಮಂಥೆರೋ ‘ನಾವು ಟಚ್ ಅಲ್ಲಿ ಇರ್ತಿರಲಿಲ್ಲ. ರಾಬರ್ಟ್ ಸಿನಿಮಾ ಟೈಮ್ ನಲ್ಲಿ  ದರ್ಶನ್ ಸರ್ ತಮಾಷೆ ಮಾಡ್ತಿದ್ರು. ರೀಸೆಂಟ್ ಆಗಿ ಎಲ್ರು ಹೇಳೋದನ್ನ ಒಮ್ಮೆ ಥಿಂಕ್ ಮಾಡೋಣ ಅಂತ ಟ್ರೈ ಮಾಡಿದ್ವಿ. ನಾವು ನಮ್ಮ ಲವ್ ನ ಸೀಕ್ರೆಟ್ ಆಗಿ ಇಡೋದು ನನ್ನ ಡಿಸಿಷನ್ ಆಗಿತ್ತು. ಮದ್ವೆ ಆದ್ಮೇಲೂ ಸಿನಿಮಾ ನಿಲ್ಲಸಲ್ಲ ಮಾಡ್ತೀನಿ. ದರ್ಶನ್ ಸರ್ ನ ತರುಣ್ ಮೀಟ್ ಆಗಿದ್ದಾರೆ. ನನಗೆ ಅಲ್ಲಿ‌ಹೋಗೋಕೆ ಅವ್ರನ್ನ ಆತರ ನೋಡೋಕೆ ಇಷ್ಟ ಇಲ್ಲ. ಅವ್ರು ಅಷ್ಟರಲ್ಲಿ ಬರ್ತಾರೆ ಅನ್ನಿಸುತ್ತೆ ನೋಡೋಣ’ ಅಂತಾರೆ.

     

    ದರ್ಶನ್ ಸರ್ ನ ಮಿಸ್ ಮಾಡ್ಕೋತೀವಿ ಅಂತಾರೆ ತರುಣ್ ಮತ್ತು ಸೋನಲ್.  ದರ್ಶನ್ ಸರ್ ಎಲ್ಲಿದ್ರೂ ಅವ್ರ ವಿಶಸ್ ಇರುತ್ತೆ.  ದರ್ಶನ್ ಸರ್ ಆಶೀರ್ವಾದ ಯಾವಾಗ್ಲೂ ಇರುತ್ತೆ. ನಮ್ ತಂದೆಯಷ್ಟೇ ದರ್ಶನ್ ಸರ್ ನ ಗೌರವಿಸ್ತೀನಿ. ಬಾಬಿಗೆ (ವಿಜಯಲಕ್ಷ್ಮಿ) ಇನ್ವಿಟೇಷನ್ ಕೊಟ್ಟಿದ್ದೀನಿ. ಅವ್ರು ಬರ್ತೀನಿ ಅಂದಿದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗ್ತೀವಿ. ಬೆಂಗಳೂರಿನಲ್ಲಿ ಮದುವೆ ನಂತರ ಮಂಗಳೂರಿನಲ್ಲೂ ಒಂದು ಫಂಕ್ಷನ್ ಮಾಡ್ತಾರಂತೆ ತರುಣ್ ಮತ್ತು ಸೋನಲ್.

  • ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್

    ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್

    ಬೆಂಗಳೂರಿನ (Bangalore) ಒಂದೊಂದೇ ಚಿತ್ರಮಂದಿರಗಳ ಬಾಗಿಲು ಹಾಕುತ್ತಿವೆ. ಒಟಿಟಿ, ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕೆಂಪೇಗೌಡ ರಸ್ತೆ ಅನೇಕ ಚಿತ್ರಮಂದಿಗಳು (Theatre) ಬಂದ್ ಆಗಿವೆ. ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳು ತಲೆಯೆತ್ತಿವೆ. ಈಗ ಕಾವೇರಿ (Cauvery) ಚಿತ್ರಮಂದಿರದ ಸರದಿ.

    ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದಾಗಿರುವ ಸ್ಯಾಂಕಿ ರಸ್ತೆಯ, ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ಕಾವೇರಿ ಚಿತ್ರಮಂದಿರ ತನ್ನ ಶಾಶ್ವತ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಕಳೆದ ಜನವರಿ 11ಕ್ಕೆ ಕಾವೇರಿಗೆ ಭರ್ತಿ 50 ವರ್ಷ ತುಂಬಿತ್ತು. ಗೋಲ್ಡನ್ ಜ್ಯುಬಿಲಿ ಆಚರಣೆಯನ್ನೂ ಮಾಡಲಾಗಿತ್ತು.

    ನಾನಾ ಕಾರಣಗಳಿಂದಾಗಿ ಕಾವೇರಿ ಥಿಯೇಟರ್ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಮೆಜೆಸ್ಟಿಕ್ ಏರಿಯಾದಲ್ಲಿದ್ದ ಕಪಾಲಿ ಚಿತ್ರಮಂದಿರ ಹೊರತು ಪಡಿಸಿದರೆ, ಅತೀ ಹೆಚ್ಚು ಹಾಸನಗಳುಳ್ಳ ಚಿತ್ರಮಂದಿರ ಇದಾಗಿತ್ತು. 1300ರಷ್ಟು ಸೀಟುಗಳು ಈ ಚಿತ್ರಮಂದಿರದಲ್ಲಿದ್ದವು. ಜೊತೆಗೆ ಸಾಕಷ್ಟು ಚಿತ್ರಗಳು ಇಲ್ಲಿ ಶತದಿನ ಪ್ರದರ್ಶನ ಕೂಡ ಕಂಡಿವೆ.

    ಕಾವೇರಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು 1974 ಜನವರಿ 11ರಂದು. ಮೊದಲ ಚಿತ್ರ ಪ್ರದರ್ಶನವಾಗಿದ್ದ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಪಂಜರ. ಕಮಲ್ ಹಾಸನ್ ನಟನೆಯ ಶಂಕರಾಭರಣಂ ಸಿನಿಮಾ ದಾಖಲೆ ರೀತಿಯಲ್ಲಿ ಪ್ರದರ್ಶನವಾಗಿತ್ತು. ಕನ್ನಡ, ತಮಿಳು, ಹಿಂದೆ, ಮಲಯಾಳಂ ಜೊತೆಗೆ ಹಾಲಿವುಡ್ ನ ಅನೇಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.

    ಜನರು ಥಿಯೇಟರ್ ಬರುತ್ತಿಲ್ಲ. ಇಂತಹ ದೊಡ್ಡ ಕಟ್ಟಡವನ್ನು ನಿಭಾಯಿಸೋದು ಕಷ್ಟ. ಹಾಗಾಗಿ ಥಿಯೇಟರ್ ಬಂದು ಮಾಡಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಚಿತ್ರಮಂದಿರದ ಮಾಲೀಕರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.

  • ಬೆಂಗಳೂರಿನಲ್ಲಿ ‘ಉತ್ತರಕಾಂಡ’ ಚಿತ್ರೀಕರಣ ಶುರು

    ಬೆಂಗಳೂರಿನಲ್ಲಿ ‘ಉತ್ತರಕಾಂಡ’ ಚಿತ್ರೀಕರಣ ಶುರು

    ತ್ತರ ಕರ್ನಾಟಕದಲ್ಲಿ (North Karnataka)  ಶೂಟಿಂಗ್ ಶುರು ಮಾಡಿ, ಹಲವು ದಿನಗಳ ಕಾಲ ಅಲ್ಲಿಯೇ ಬೀಡು ಬಿಟ್ಟಿದ್ದ ಉತ್ತರಕಾಂಡ ಸಿನಿಮಾ ಟೀಮ್ ವಾಪಸ್ಸು ಬೆಂಗಳೂರಿಗೆ ಬಂದಿದೆ. ಚುನಾವಣೆ ಕಾರಣದಿಂದಾಗಿ ಉತ್ತರ ಕರ್ನಾಟಕ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟಿರುವ ನಿರ್ಮಾಪಕರು, ಈಗ ಬೆಂಗಳೂರಿನಲ್ಲಿ (Bangalore) ಶೂಟಿಂಗ್ ಶುರು ಮಾಡಿದ್ದಾರೆ. ಎಚ್.ಎಂ.ಟಿ ಫ್ಯಾಕ್ಟರಿ ಆವರಣದಲ್ಲಿ ಶೂಟಿಂಗ್ ನಡೆಯುತ್ತಿದೆ.

    ಈ ನಡುವೆ ಸಿನಿಮಾ ಟೀಮ್ ಕರ್ನಾಟಕ ಕಿಂಗ್ ಯಾರಲೇ? ಎಂದು ಪ್ರಶ್ನೆಯನ್ನು ಮಾಡಿದೆ. ಈ ಪೋಸ್ಟರ್ ಕುತೂಹಲಕ್ಕೂ ಕಾರಣವಾಗಿದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿಯೇನೂ ಗುಟ್ಟಾಗಿ ಉಳಿದಿಲ್ಲ. ಶಿವಣ್ಣನನ್ನು (Shivaraj Kumar) ಅಭಿಮಾನಿಗಳು ಕಿಂಗ್ (King) ಅಂತಾನೇ ಕರೆಯುತ್ತಾರೆ. ಶಿವಣ್ಣನ ಪೋಸ್ಟರ್ ರಿಲೀಸ್ ಮಾಡುವುದಕ್ಕಾಗಿ ಈ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

    ಡಾಲಿ (Daali Dhananjay) ನಟನೆಯ ‘ಉತ್ತರಕಾಂಡ’ (Uttarakanda Film) ಸಿನಿಮಾ ತಂಡಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಡಾಲಿಗೆ ಜೋಡಿಯಾಗೋ ಆ ನಾಯಕಿ ಯಾರು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಾಲಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ (Aishwarya Rajesh) ಎಂಟ್ರಿ ಕೊಟ್ಟಿದ್ದಾರೆ.

    ಚೈತ್ರಾ ಆಚಾರ್, ದಿಗಂತ್ ಪಾತ್ರದ ಬಗ್ಗೆ ರಿವೀಲ್ ಆದ ಬೆನ್ನಲ್ಲೇ ಐಶ್ವರ್ಯಾ ರಾಜೇಶ್ ಕೂಡ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಡಾಲಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನಟಿ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಬಾಲನಟಿ, ನಾಯಕಿಯಾಗಿ ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಾಗೆ ‘ಉತ್ತರಕಾಂಡ’ ಚಿತ್ರದಲ್ಲಿ ಮುಖ್ಯ ಪಾತ್ರವೇ ಸಿಕ್ಕಿದೆ.

     

    ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ಉಮಾಶ್ರೀ (Umashree) ಉತ್ತರಕಾಂಡ ಟೀಮ್ ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪಂಢರಿಬಾಯಿ (Pandharibai) ಪಾತ್ರವನ್ನು ನಿರ್ವಹಿಸಲಿದ್ದಾರೆ. ಉಮಾಶ್ರೀಯ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಸಾಕಷ್ಟು ಅನುಭವಿ ಕಲಾವಿದರು ನಟಿಸುತ್ತಿರುವುದು ವಿಶೇಷ.

  • ಬೆಂಗಳೂರುTo ನಂಜನಗೂಡು: ಕಾಲ್ನಡಿಗೆಯಲ್ಲಿ ನಟ ವಿಜಯ್ ಪಯಣ

    ಬೆಂಗಳೂರುTo ನಂಜನಗೂಡು: ಕಾಲ್ನಡಿಗೆಯಲ್ಲಿ ನಟ ವಿಜಯ್ ಪಯಣ

    ಟ ದುನಿಯಾ ವಿಜಯ್ ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆದಿದ್ದಾರೆ. ಸತತ ಐದು ದಿನಗಳ ಕಾಲ ತಮ್ಮ ಸಂಗಡಿಗರ ಜೊತೆ ನಡೆದುಕೊಂಡೇ ನಂಜನಗೂಡು ತಲುಪಿದ್ದಾರೆ. ಹಗಲು ರಾತ್ರಿ ಲೆಕ್ಕಿಸದೇ ಪಾದಯಾತ್ರೆ ಮಾಡಿದ್ದಾರೆ ವಿಜಯ್.

    ಸದ್ಯ ಭೀಮ ಸಿನಿಮಾದ ಶೂಟಿಂಗ್ ಮುಗಿಸಿರುವ ವಿಜಯ್, ಹೊಸ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದ ಕೆಲಸದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.  ಈ ಹೊಸ ಚಿತ್ರಕ್ಕೆ ಮೊನ್ನೆಯಷ್ಟೇ ರಾಜ್ ಬಿ ಶೆಟ್ರಿ (Raj B Shetty) ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಲಿದ್ದಾರೆ. ಆ ಪಾತ್ರ ಏನು ಅನ್ನುವುದನ್ನು ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಲಿದೆ.

    ದುನಿಯಾ ವಿಜಯ್ ಮತ್ತು ರಚಿತಾ ರಾಮ್ (Rachita Ram) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಬೆಂಗಳೂರಿನ ದೇವಸ್ಥಾನದಲ್ಲಿ ಮೊನ್ನೆಯಷ್ಟೇ ಮುಹೂರ್ತವಾಗಿದೆ (Muhurta). ಇನ್ನೂ ಚಿತ್ರಕ್ಕೆ ಹೆಸರು ಇಟ್ಟಿಲ್ಲವಾದರೂ, ಈ ಕಾಂಬಿನೇಷನ್ ನ 2ನೇ ಚಿತ್ರ ಇದಾಗಿದೆ. ಹಾಗಾಗಿ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.

    ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ದುನಿಯಾ ವಿಜಯ್ (Duniya Vijay) ಪುತ್ರಿ ಮೋನಿಕಾ (Monica Vijay) ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೋನಿಕಾ ಚಿತ್ರೋದ್ಯಮಕ್ಕೆ ಬರುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಇದೀಗ ಅಂತೆ ಕಂತೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಅಪ್ಪನ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ಕೂಡ ನಟಿಸಲಿದ್ದಾರೆ.

     

    ಈ ಸಿನಿಮಾವನ್ನು ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದರೆ,  ಜಡೇಶ್ ಕೆ.ಹಂಪಿ  ಅವರ ನಿರ್ದೇಶನವಿದೆ. ಈ ಹಿಂದೆ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಟಿಸಿದ್ದರು. ಈಗ ಹಲವು ವರ್ಷಗಳ ನಂತರ ಈ ಜೋಡಿ ಒಂದಾಗುತ್ತಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

  • ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ತೆಲುಗಿನ ಸ್ಟಾರ್ ನಟ

    ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ತೆಲುಗಿನ ಸ್ಟಾರ್ ನಟ

    ತೆಲುಗಿನ ಬಹುತೇಕ ಖ್ಯಾತ ನಟರು ತಾವು ದುಡಿದು ಬಂದ ಹಣವನ್ನು ಸಿನಿಮಾ ರಂಗದಲ್ಲೇ ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ. ಕೇವಲ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದ್ದವರು, ಇದೀಗ ಗಡಿ ದಾಟಿ ಕರ್ನಾಟಕಕ್ಕೂ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಕನ್ನಡ ಚಿತ್ರೋದ್ಯಮದಲ್ಲಿ ಹಣ ಹೂಡಿದ್ದಾರೆ.

    ಬೆಂಗಳೂರಿನ ಸಿನಿಮಾದ ಏರಿಯಾ ಎಂದೇ ಖ್ಯಾತವಾಗಿರುವ ಗಾಂಧಿನಗರದ ಪ್ರಮುಖ ರಸ್ತೆಯಲ್ಲಿ ಮಾಲ್ ವೊಂದನ್ನು ನಿರ್ಮಾಣ ಮಾಡಿದ್ದು, ಅಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲಿ ಮಹೇಶ್ ಬಾಬು ಹಣ ಹೂಡಿದ್ದಾರೆ. ಈಗಾಗಲೇ ಮಹೇಶ್ ಬಾಬು ಹೈದರಾಬಾದ್ ನಲ್ಲೂ ಈ ಬ್ಯುಸಿನೆಸ್ ಆರಂಭಿಸಿದ್ದಾರೆ.

     

    ನಿನ್ನೆಯಷ್ಟೇ ಥಿಯೇಟರ್ ಪೂಜೆಯನ್ನು ಮಾಡಿದ್ದು, ಕನ್ನಡದ ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಹಿಂದೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲೇ ಈ ಕಟ್ಟಡ ತಲೆಯೆತ್ತಿದೆ. ಇನ್ನೂ ಕೆಲವೇ ತಿಂಗಳಲ್ಲಿ ಮಲ್ಟಿಪ್ಲೆಕ್ಸ್ ತನ್ನ ಕಾರ್ಯಾರಂಭ ಮಾಡಲಿದೆ.

  • ‘ಟಾಕ್ಸಿಕ್’ ಚಿತ್ರಕ್ಕಾಗಿ ರೆಡಿ ಆಗ್ತಿದೆ ಬೃಹತ್ ಸೆಟ್

    ‘ಟಾಕ್ಸಿಕ್’ ಚಿತ್ರಕ್ಕಾಗಿ ರೆಡಿ ಆಗ್ತಿದೆ ಬೃಹತ್ ಸೆಟ್

    ಶ್ ಸದ್ದಿಲ್ಲದೇ ಸಿನಿಮಾ ಕೆಲಸಗಳನ್ನು ಶುರು ಮಾಡಿಕೊಂಡಿದ್ದಾರೆ. ಸಿನಿಮಾವನ್ನು ಬಹುತೇಕ ಬೆಂಗಳೂರಿನಲ್ಲೇ ಚಿತ್ರೀಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಬೃಹತ್ ಸೆಟ್ ಗಳ ನಿರ್ಮಾಣ ಮಾಡಲಾಗುತ್ತಿದೆ ಎನ್ನುತ್ತವೆ ಆಪ್ತ ಮೂಲಗಳು.

    ಗೋವಾ, ಶ್ರೀಲಂಕಾ, ಲಂಡನ್ ಹೀಗೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬಗ್ಗೆ ಸಾಕಷ್ಟು ಹೆಸರುಗಳು ಕೇಳಿ ಬಂದವು. ಈಗಾಗಲೇ ಗೋವಾದಲ್ಲಿ ಯಶ್ ಶೂಟಿಂಗ್ ಶೂರು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಶ್ ಆಪ್ತರ ಪ್ರಕಾರ ಇನ್ನೂ ಸಿನಿಮಾದ ಶೂಟಿಂಗ್ ನಡೆದಿಲ್ಲವಂತೆ. ಏಪ್ರಿಲ್ 15ರಿಂದ ಬೆಂಗಳೂರಿನಿಂದಲೇ (Bangalore) ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆಯಂತೆ.

    ಈ ನಡುವೆ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ನಟಿಸ್ತಾರಾ? ಇಂಥದ್ದೊಂದು ಪ್ರಶ್ನೆ ಹಲವು ತಿಂಗಳ ಹಿಂದೆಯೇ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರಂತೆ. ಅದೂ ಯಶ್ ಅವರ ಸಹೋರಿಯ ಪಾತ್ರ ಎಂದು ಹೇಳಲಾಗುತ್ತಿದೆ.

    ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕರೀನಾ ಅವರು, ಯಶ್ ಜೊತೆ ಮಾತ್ರ ನಟಿಸುತ್ತೇನೆ. ಪ್ರಭಾಸ್, ಅಲ್ಲು ನಕೋ ಬಾಬಾ ಎಂದಿದ್ದರು. ಯಶ್ ಜೊತೆ ನಟಿಸೋದು ಹೆವ್ವಿ ಇಷ್ಟ. ಅದೇ ಲೈಫ್ ಟೈಮ್ ಅಚೀವ್‌ಮೆಂಟು ಎಂದಿದ್ದರು. ಈ ಮೂಲಕ ತಾವು ಯಶ್ ಜೊತೆ ನಟಿಸುವ ಉತ್ಸಾಹವನ್ನೂ ತೋರಿಸಿದ್ದರು. ಆ ಕನಸು ನನಸಾದಂತೆ ಕಾಣುತ್ತಿದೆ.

     

    ಈ ನಡುವೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಟಾಕ್ಸಿಕ್ (Toxic) ಸಿನಿಮಾವನ್ನು ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ.

  • ಏಪ್ರಿಲ್ 15ರಿಂದ ಬೆಂಗಳೂರಿನಲ್ಲೇ ‘ಟಾಕ್ಸಿಕ್’ ಶೂಟಿಂಗ್

    ಏಪ್ರಿಲ್ 15ರಿಂದ ಬೆಂಗಳೂರಿನಲ್ಲೇ ‘ಟಾಕ್ಸಿಕ್’ ಶೂಟಿಂಗ್

    ಗೋವಾ, ಶ್ರೀಲಂಕಾ, ಲಂಡನ್ ಹೀಗೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬಗ್ಗೆ ಸಾಕಷ್ಟು ಹೆಸರುಗಳು ಕೇಳಿ ಬಂದವು. ಈಗಾಗಲೇ ಗೋವಾದಲ್ಲಿ ಯಶ್ ಶೂಟಿಂಗ್ ಶೂರು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಶ್ ಆಪ್ತರ ಪ್ರಕಾರ ಇನ್ನೂ ಸಿನಿಮಾದ ಶೂಟಿಂಗ್ ನಡೆದಿಲ್ಲವಂತೆ. ಏಪ್ರಿಲ್ 15ರಿಂದ ಬೆಂಗಳೂರಿನಿಂದಲೇ (Bangalore) ಮೊದಲ ಹಂತದ ಚಿತ್ರೀಕರಣ ಶುರುವಾಗಲಿದೆಯಂತೆ. ಅದಕ್ಕಾಗಿ ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಬೃಹತ್ ಸೆಟ್ ಹಾಕಲಾಗಿದೆಯಂತೆ.

    ಈ ನಡುವೆ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ನಟಿಸ್ತಾರಾ? ಇಂಥದ್ದೊಂದು ಪ್ರಶ್ನೆ ಹಲವು ತಿಂಗಳ ಹಿಂದೆಯೇ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರಂತೆ. ಅದೂ ಯಶ್ ಅವರ ಸಹೋರಿಯ ಪಾತ್ರ ಎಂದು ಹೇಳಲಾಗುತ್ತಿದೆ.

    ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕರೀನಾ ಅವರು, ಯಶ್ ಜೊತೆ ಮಾತ್ರ ನಟಿಸುತ್ತೇನೆ. ಪ್ರಭಾಸ್, ಅಲ್ಲು ನಕೋ ಬಾಬಾ ಎಂದಿದ್ದರು. ಯಶ್ ಜೊತೆ ನಟಿಸೋದು ಹೆವ್ವಿ ಇಷ್ಟ. ಅದೇ ಲೈಫ್ ಟೈಮ್ ಅಚೀವ್‌ಮೆಂಟು ಎಂದಿದ್ದರು. ಈ ಮೂಲಕ ತಾವು ಯಶ್ ಜೊತೆ ನಟಿಸುವ ಉತ್ಸಾಹವನ್ನೂ ತೋರಿಸಿದ್ದರು. ಆ ಕನಸು ನನಸಾದಂತೆ ಕಾಣುತ್ತಿದೆ.

     

    ಈ ನಡುವೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಟಾಕ್ಸಿಕ್ (Toxic) ಸಿನಿಮಾವನ್ನು ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ.

  • ಬೆಂಗಳೂರಿಗೆ ನೀರಿನ ಕೊರತೆ: ಕನ್ನಡದಲ್ಲೇ ಪರಿಹಾರ ಸೂಚಿಸಿದ ಚಿರಂಜೀವಿ

    ಬೆಂಗಳೂರಿಗೆ ನೀರಿನ ಕೊರತೆ: ಕನ್ನಡದಲ್ಲೇ ಪರಿಹಾರ ಸೂಚಿಸಿದ ಚಿರಂಜೀವಿ

    ತೆಲುಗಿನ ಖ್ಯಾತ ನಟ ಚಿರಂಜೀವಿ (Chiranjeevi) ಬೆಂಗಳೂರಿನಲ್ಲಿ (Bangalore) ಅತ್ಯಂತ ಸುಸಜ್ಜಿತ ಮನೆ ಹೊಂದಿದ್ದಾರೆ ಎನ್ನುವ ವಿಚಾರ ತುಂಬಾ ಜನರಿಗೆ ಗೊತ್ತಿಲ್ಲ. ಹೌದು, ಬೆಂಗಳೂರಿನಲ್ಲಿ ಚಿರಂಜೀವಿ ಫಾರ್ಮ್ ಹೌಸ್ (Farm House) ಹೊಂದಿದ್ದಾರೆ. ಅಲ್ಲಿ ನಿತ್ಯವೂ ನೀರು (Water) ಜಿನುಗುವಂತೆ ಮಾಡಿದ್ದಾರೆ. ಬೆಂಗಳೂರು ಸದ್ಯ ನೀರಿನ ಹಾಹಾಕಾರವನ್ನು ಅನುಭವಿಸುತ್ತಿದ್ದರೆ, ಚಿರಂಜೀವಿ ಮನೆಯಲ್ಲಿ ಯಾವುದೇ ನೀರಿನ ಕೊರತೆ ಇಲ್ಲವಂತೆ.

    ಅದು ಹೇಗೆ ಎಂದು ಹುಬ್ಬೇರಿಸಬಹುದು. ನೀರು ಸದಾ ಜಿನುಗುವಂತೆ ಮಾಡಲು ಅವರು ಮನೆಯಲ್ಲಿ ಅದಕ್ಕೊಂದು ವ್ಯವಸ್ಥೆ ಮಾಡಿದ್ದಾರೆ. ಅದನ್ನು ಕನ್ನಡದಲ್ಲೇ ಚಿರಂಜೀವಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ. ಜೊತೆಗೆ ನೀರಿನ ಮಹತ್ವವನ್ನು ತಿಳಿಸಿದ್ದಾರೆ.

    ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ… ಬಹಳ ಮುಖ್ಯ. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ.

    ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ ನಾನು ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 20-36 ಅಡಿ ಆಳದ ರೀಚಾರ್ಜ್ ಬಾವಿಗಳನ್ನು ಸೈಟ್‌ನಾದ್ಯಂತ ಆಯಕಟ್ಟಿನ ಬಿಂದುಗಳಲ್ಲಿ ಸ್ಥಾಪಿಸಲಾಗಿದ್ದು, ರೀಚಾರ್ಜ್ ಬಾವಿಗಳಿಗೆ ಮೇಲ್ಮೈ ನೀರಿನ ಹರಿವನ್ನು ನಿರ್ದೇಶಿಸಲು ಸಾಕಷ್ಟು ಇಳಿಜಾರುಗಳಿವೆ. ಪ್ರತಿಯೊಂದು ಬಾವಿಯು ಫಿಲ್ಟರ್ ವ್ಯವಸ್ಥೆಯನ್ನು ಹೊಂದಿದೆ, ವಿವಿಧ ಸಮುಚ್ಚಯಗಳೊಂದಿಗೆ ಒಂದು ಹೂಳು ಬಲೆ, ಅಂದರೆ ಕಲ್ಲಿನ ಗಾತ್ರಗಳು ಮತ್ತು ಮರಳು, ಪದರಗಳ ಮೂಲಕ ನೀರಿನ ಅಂಗೀಕಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.

     

    ರೀಚಾರ್ಜ್ ಬಾವಿ – ರೀಚಾರ್ಜ್ ಪಿಟ್‌ಗೆ ಹೋಲಿಸಿದರೆ – ಹೆಚ್ಚು ನೀರನ್ನು ಸಂಗ್ರಹಿಸಬಹುದು ಮತ್ತು ಹೆಚ್ಚು ಆಳವಾದ ಜಲಚರಗಳನ್ನು ತಲುಪಲು ತಲಾಧಾರದಲ್ಲಿನ ಸರಂಧ್ರ ಪದರಗಳ ಮೂಲಕ ನೀರನ್ನು ನಿಧಾನವಾಗಿ ಹರಿಯುವಂತೆ ಮಾಡುತ್ತದೆ. ನಾನು ಪರ್ಮಾಕಲ್ಚರ್ ತತ್ವಗಳನ್ನು ಸಹ ಜಾರಿಗೆ ತಂದಿದ್ದೇನೆ. ಪರ್ಮಾಕಲ್ಚರ್ ಪರಿಸರವನ್ನು ಪುನರುಜ್ಜೀವನಗೊಳಿಸುವ ವೃತ್ತಾಕಾರದ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ, ಅದನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಪರ್ಮಾಕಲ್ಚರ್‌ನ ಪ್ರಮುಖ ಫಲಿತಾಂಶವೆಂದರೆ ನೀರಿನ ಬೇಡಿಕೆಯಲ್ಲಿನ ಕಡಿತ. ಮಣ್ಣಿನಿಂದ ಬಾಷ್ಪೀಕರಣದ ನಷ್ಟವನ್ನು ಕಡಿಮೆ ಮಾಡುವ ತೋಟವನ್ನು ಬಳಸಿಕೊಂಡು ಸೂಕ್ತವಾದ ನೆಲದ ಹೊದಿಕೆಯೊಂದಿಗೆ ಸತ್ತ ಎಲೆಗಳು ಮತ್ತು ಮರದ ಚಿಪ್ಸ್ ಬಳಸಿ ಮಲ್ಚಿಂಗ್ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ನೀರನ್ನು ಸಂರಕ್ಷಿಸಬಹುದು ಮತ್ತು ಮಳೆ ನೀರು ಕೊಯ್ಲು ಉತ್ತಮಗೊಳಿಸಬಹುದು ಮತ್ತು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಬಹುದು. ಆ ದೃಶ್ಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  • RCB ಅನ್ ಬಾಕ್ಸ್ ಪ್ರೊಮೋದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್

    RCB ಅನ್ ಬಾಕ್ಸ್ ಪ್ರೊಮೋದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್

    17ನೇ ಐಪಿಎಲ್ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಆರ್.ಸಿ.ಬಿ ಅನ್ ಬಾಕ್ಸ್ ಇವೆಂಟ್ ವೊಂದನ್ನು ಆಯೋಜನೆ ಮಾಡಲಾಗುತ್ತಿದೆ. ಅದರ ಪ್ರೊಮೋಗಳು ಸಖತ್ ಕ್ರೇಜ್ ಕ್ರಿಯೇಟ್ ಮಾಡುತ್ತಿವೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಈ ಇವೆಂಟ್ ನಡೆಯುತ್ತಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರ ಪ್ರೊಮೋ ಸದ್ಯ ರಿಲೀಸ್ ಆಗಿದೆ. ಅದು ಹೆಸರನ್ನು ಬದಲಿಸುವ ಕುರಿತು ಒಂದಷ್ಟು ಮಾಹಿತಿಯನ್ನು ನೀಡುತ್ತದೆ.

    ಮೊನ್ನೆಯಷ್ಟೇ ಆರ್‌ಸಿಬಿ (RCB) ಕೋಣಗಳ ಜೊತೆ ‘ಕಾಂತಾರ’ (Kantara) ಶಿವ ಎಂಟ್ರಿ ಕೊಟ್ಟಿದ್ದ ಪ್ರೊಮೋ ರಿಲೀಸ್ ಆಗಿತ್ತು. ಅದುಯ ಕೂಡ ಆರ್‌ಸಿಬಿ ಹೆಸರು ಬದಲಾವಣೆ ಸಾಧ್ಯತೆ ಬಗ್ಗೆ ಸುಳಿವು ನೀಡಿತ್ತು. ಆರ್‌ಸಿಬಿ ತಂಡದ ಜೊತೆ ಈ ಬಾರಿ ಕಾಂತಾರ ರಿಷಬ್ ಶೆಟ್ಟಿ (Rishab Shetty) ಕೈಜೋಡಿಸಿದ್ದಾರೆ. ಆರ್‌ಸಿಬಿ ಐಪಿಎಲ್ ಕ್ರಿಕೆಟ್ ತಂಡದ ಜೊತೆ ಹೊಂಬಾಳೆ ಸಂಸ್ಥೆ ಕೂಡ ಸಾಥ್ ನೀಡಿದೆ. ಆರ್‌ಸಿಬಿಗೆ ಡಿಜಿಟಲ್ ಪಾರ್ಟ್ನರ್ ಆಗಿ ಹೊಂಬಾಳೆ ಫಿಲ್ಮ್ ಕೈಜೋಡಿಸಿದ್ದಾರೆ.

    ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಈ ಬಾರಿ ಆದರೂ ಆರ್‌ಸಿಬಿ ತಂಡ ಕಪ್ ಎತ್ತಿ ಹಿಡಿಯುತ್ತಾ ಎಂದು ಕ್ರಿಕೆಟ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಮತ್ತೊಂದು ಕಡೆ ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಆರ್‌ಸಿಬಿ ಅಭಿಮಾನಿಗಳ ಬಹಳ ದಿನಗಳ ಬೇಡಿಕೆಯನ್ನು ಆರ್‌ಸಿಬಿ ತಂಡದ ಮಾಲೀಕರು ಈ ಬಾರಿ ಈಡೇರಿಸುತ್ತಿದ್ದಾರೆ. ಆ ಬಗ್ಗೆ ರಿಷಬ್ ಸುಳಿವು ಕೊಟ್ಟಿದ್ದಾರೆ.

    ರಿಷಬ್ ಶೆಟ್ಟಿ ಏನು ಹೇಳ್ತಿದ್ದಾರೆ ಅರ್ಥ ಆಯ್ತಾ? ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವೀಡಿಯೋ ರಿಲೀಸ್ ಆಗಿದೆ. ಇದರಲ್ಲಿ Bangalore ಎಂದು ಕೋಣದ ಮೇಲೆ ಬರೆದ ಕೋಣವನ್ನು ನೋಡಿ, ಭಟ್ರೆ ತಗೊಂಡೋಗಿ ಎಂದು ರಿಷಬ್‌ ಹೇಳುತ್ತಾರೆ. ಇದು ಅರ್ಥ ಆಯ್ತಾ? ಎಂದು ಕೇಳಿದ್ದಾರೆ. 8 ವರ್ಷಗಳ ಹಿಂದೆ ಬೆಂಗಳೂರು ಎನ್ನುವುದನ್ನು ಇಂಗ್ಲೀಷ್‌ನಲ್ಲಿ ಬರೆಯುವಾಗ ಮತ್ತು ಉಚ್ಛರಿಸುವಾಗ ಸಣ್ಣ ಬದಲಾವಣೆ ಮಾಡಲಾಗಿತ್ತು.

     

    Bangalore ಎನ್ನುವುದನ್ನು Bengaluru ಎಂದು ಬದಲಾಯಿಸಿದ್ದರು. ಆರ್‌ಸಿಬಿ ತಂಡದ ಬಗ್ಗೆ ಮಾತನಾಡುವಾಗ ಮಾತ್ರ ಅದು Bangalore ಎಂದೇ ಇತ್ತು. ಅಭಿಮಾನಿಗಳು ಇದನ್ನು ಬದಲಿಸಿ Bengaluru ಎಂದು ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ಇದೀಗ ರಿಷಬ್ ಶೆಟ್ಟಿ ಸ್ಪೆಷಲ್ ವಿಡಿಯೋದಲ್ಲಿ ಆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮಾರ್ಚ್ 19ರಂದು ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆ ದಿನ ಅಧಿಕೃತವಾಗಿ ಇದು ಗೊತ್ತಾಗಲಿದೆ.