Tag: Bandra-Lucknow

  • ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    ಲಕ್ನೋ: ಬಾಂದ್ರಾ ಟರ್ಮಿನಸ್ – ಲಕ್ನೋ (Bandra Terminus – Lucknow) ಜಂಕ್ಷನ್ ವೀಕ್ಲಿ ಎಸ್‍ಎಫ್ ಎಕ್ಸ್‌ಪ್ರೆಸ್‍ನಲ್ಲಿ (Junction Weekly SF Express) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಐಆರ್‌ಸಿಟಿಸಿ ಕ್ಯಾಂಟಿನ್‍ನಿಂದ ನೀಡಲಾದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ ಕಂಡುಬಂದಿದೆ.

    ಈ ಸಮೋಸಾ ಫೋಟೋವನ್ನು ಅಜಿತ್ ಕುಮಾರ್ ಎಂಬ ಪ್ರಯಾಣಿಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಜೊತೆಗೆ ನಾನು ಭಾನುವಾರ ಲಕ್ನೋಗೆ ಪ್ರಯಾಣಿಸುವಾಗ ತಿನ್ನಲು ಒಂದು ಸಮೋಸಾ (Samosa) ಖರೀದಿಸಿದೆ. ಕೆಲವು ಭಾಗಗಳನ್ನು ತಿಂದ ಬಳಿಕ ಕೊನೆಯಲ್ಲಿ ಸಣ್ಣದೊಂದು ಯೆಲ್ಲೋ ಕಲರ್ ಪೇಪರ್ ತುಂಡನ್ನು ನೋಡಿದೆ. ಇದನ್ನು ರೈಲು ಸಂಖ್ಯೆ 20921 ಬಾಂದ್ರಾ-ಲಕ್ನೋ ರೈಲಿನಲ್ಲಿ ಐಆರ್‌ಸಿಟಿಸಿ ಸಿಬ್ಬಂದಿಯಿಂದ ಖರೀದಿಸಿದ್ದೆ. ಶನಿವಾರ ನಾನು ಈ ರೈಲನ್ನು ಹತ್ತಿದ್ದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC), ಸರ್ ನಿಮಗೆ ಈ ರೀತಿ ಆಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ದಯವಿಟ್ಟು ಪಿಎನ್‍ಆರ್ ಮತ್ತು ಮೊಬೈಲ್ ಸಂಖ್ಯೆಯನ್ನು ಡಿಎಂನಲ್ಲಿ ಹಂಚಿಕೊಳ್ಳಿ ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಬಸ್ ಹತ್ತುವಾಗ ಬಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ- ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ

    ಈ ವಿಚಾರವಾಗಿ ಅನೇಕ ಮಂದಿ ಟ್ವೀಟ್ ಮಾಡಿದ್ದು, ಟಿಕೆಟ್ ದೃಢೀಕರಣ ಸೇರಿದಂತೆ ರೈಲ್ವೆ ವ್ಯವಸ್ಥೆಯಲ್ಲಿನ ಎಲ್ಲವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಪ್ರಮುಖವಾಗಿ ಎಲ್ಲದ್ದಕ್ಕೂ ಅವರು ಶುಲ್ಕ ವಿಧಿಸುತ್ತಾರೆ. ಇದರಿಂದ ಬಡವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ, ಅಭಿವೃದ್ಧಿಶೀಲ ಭಾರತವು ಹಣವನ್ನು ಕಸಿದುಕೊಳ್ಳುತ್ತಿದೆ ಎಂದು ಕಾಮೆಂಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್ ಆಗಿ ಬಸ್ ಪಲ್ಟಿ- ಚಾಲಕ ಸಾವು, 25 ಪ್ರಯಾಣಿಕರಿಗೆ ಗಾಯ

    Live Tv
    [brid partner=56869869 player=32851 video=960834 autoplay=true]