Tag: bandra

  • ಜನಪ್ರಿಯ ಬಾಲಿವುಡ್ ನಟ ದಲೀಪ್ ಗೆ ಜೈಲು ಶಿಕ್ಷೆ

    ಜನಪ್ರಿಯ ಬಾಲಿವುಡ್ ನಟ ದಲೀಪ್ ಗೆ ಜೈಲು ಶಿಕ್ಷೆ

    ಬಾಗ್ ಮಿಲ್ಕಾ ಬಾಗ್, ಬಾಜಿಗರ್, ರಾ.ಒನ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ (Bollywood) ನಟ ದಲೀಪ್ ತಾಹೀಲ್‍ (Dalip Taheel) ಗೆ ಮಹಾರಾಷ್ಟ್ರದ ಬಾಂದ್ರಾದ ಅಡಿಷನಲ್ ಚೀಫ್‍ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ಪ್ರಕಟಿಸಿದೆ. ಈ ಕುರಿತಂತೆ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡುವುದಾಗಿ ನಟ ತಿಳಿಸಿದ್ದಾರೆ.

    2018ರಲ್ಲಿ ನಡೆದ ಡ್ರಂಕ್ ಅಂಡ್ ಟ್ರೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಲೀಪ್ ಅವರಿಗೆ ಎರಡು ತಿಂಗಳು ಜೈಲು ಮತ್ತು ಐದು ನೂರು ರೂಪಾಯಿ ದಂಡ ವಿಧಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.

     

    ದಲೀಪ್ ವಿರುದ್ಧ 2018ರಲ್ಲಿ ಹಿಟ್ ಅಂಡ್ ರನ್ ಕೇಸು ದಾಖಲಾಗಿತ್ತು. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದ ನಟ ಆಟೋವೊಂದಕ್ಕೆ ಗುದ್ದಿದ್ದಾರೆ ಎಂದು ದೂರು ದಾಖಲಾಗಿತ್ತು. ನಟ ಮದ್ಯ ಸೇವೆ ಮಾಡಿರೋದು ಸಾಬೀತಾಗಿತ್ತು. ಇದೆಲ್ಲವನ್ನೂ ಪರಿಶೀಲಿಸಿದ ಮಾನ್ಯ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಖರೀದಿಸಿದ 100 ಕೋಟಿ ಬೆಲೆಬಾಳುವ ಬಂಗಲೆಗಳು

    ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಖರೀದಿಸಿದ 100 ಕೋಟಿ ಬೆಲೆಬಾಳುವ ಬಂಗಲೆಗಳು

    ಬಾಲಿವುಡ್ ನಟಿ, ದಿವಂಗತ ಶ್ರೀದೇವಿ (Sridevi) ಪುತ್ರಿ ಜಾಹ್ನವಿ ಕಪೂರ್ ಇದೀಗ ಬಂಗಲೆ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದಾರೆ. ಜಾಹ್ನವಿ ಈಗೀಗ ಬಾಲಿವುಡ್ ಗೆ ಕಾಲಿಟ್ಟ ನಟಿ. ಮಾಡಿದ್ದು ಕೇವಲ ನಾಲ್ಕೇ ನಾಲ್ಕು ಸಿನಿಮಾ. ಆದರೂ, ನೂರು ಕೋಟಿಗೆ ಬೆಲೆಬಾಳುವ ಬಂಗಲೆ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ. ಈಕೆ ಪಡೆಯುತ್ತಿರುವ ಸಂಭಾವನೆಯನ್ನು ಲೆಕ್ಕ ಹಾಕಿದರೆ, ದುಬಾರಿ ಕಾರು ಖರೀದಿಸುವುದು ಕಷ್ಟ. ಆದರೆ, ನೂರು ಕೋಟಿಯ ಐಷಾರಾಮಿ ಬಂಗಲೆ ಹೇಗೆ ಖರೀದಿಸಿದರು ಎನ್ನುವ ಕುರಿತು ಬಿಟೌನ್ ನಲ್ಲಿ ಸದ್ದು ಮಾಡುತ್ತಿದೆ.

    ಜಾಹ್ನವಿ (Jahnavi Kapoor) ಖರೀದಿಸಿರುವ ಮನೆ ಮುಂಬೈನ ಬಾದ್ರಾ ಪ್ರದೇಶದಲ್ಲಿದೆ. ಪಾಲಿ ಹಿಲ್ ನಲ್ಲಿರುವ ಕುಬೆಲೆಸ್ಕ್ ಬಿಲ್ಡಿಂಗನ್ ನ ಮೊದಲ ಮತ್ತು ಎರಡನೇ ಮಹಡಿಯಲ್ಲಿರುವ ಫ್ಲಾಟ್ ಅನ್ನು ಜಾಹ್ನವಿ ಖರೀದಿಸಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಅದೇ ಪ್ರದೇಶದಲ್ಲೇ ಜಾಹ್ನವಿ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆರು ತಿಂಗಳ ಹಿಂದೆಯಷ್ಟೇ 40 ಕೋಟಿ ಕೊಟ್ಟು ಮನೆಯೊಂದನ್ನು ಖರೀದಿಸಿದ್ದರು. ಇದೀಗ ಬಂದ್ರಾದಲ್ಲಿ 65 ಕೋಟಿ ರೂಪಾಯಿ ಕೊಟ್ಟು ಮತ್ತೊಂದು ಬಂಗಲೆ ಖರೀದಿಸಿದ್ದಾರೆ. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    ನಟಿ ಜಾಹ್ನವಿಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂದು ಕೇಳುವವರಿಗೆ ತಂದೆಯತ್ತ ಬೊಟ್ಟು ಮಾಡಿ ತೋರಿಸುತ್ತಾರೆ ನಟಿ. ತಂದೆ ಬೋನಿ ಕಪೂರ್ (Boney Kapoor) ಇಂಡಸ್ಟ್ರಿ ನಡೆಸುತ್ತಾರೆ. ಅದರಿಂದ ಭಾರಿ ಲಾಭ ಕೂಡ ಬರುತ್ತದೆ. ಜಾಹ್ನವಿ ಹಲವು ಉತ್ಪನ್ನಗಳ ರಾಯಭಾರಿ ಕೂಡ. ಈ ಎಲ್ಲದರಿಂದ ಬರುವ ಹಣದಿಂದ ಅವರು ಮನೆಯನ್ನು ಖರೀದಿಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಕೆಫೆ ಮುಂದೆ ಕ್ಯಾಮೆರಾಗೆ ಹಾಟ್ ಪೋಸ್ ನೀಡಿದ ಮೌನಿ ರಾಯ್

    ಮುಂಬೈ: ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಗೆಳತಿ ಜೊತೆ ಮುಂಬೈ ಬಾಂದ್ರಾದಲ್ಲಿರುವ ಕೆಫೆಯೊಂದರ ಬಳಿ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ಬಂದ ಮೌನಿ ರಾಯ್ ವೈಟ್ ಕಲರ್ ಶಾರ್ಟ್ ಸ್ಲೀವ್ಸ್ ಲೆಸ್ ಟಾಪ್, ಕ್ರೀಮ್ ಕಲರ್ ಪ್ಯಾಂಟ್, ಸಿಂಪಲ್ ಚೈನ್, ಹಾಗೂ ಬ್ಲಾಕ್ ಕಲರ್ ಗೋಗಾಲ್ ಧರಿಸಿದ್ದರು.

    Mouni Roy

    ಕಾರಿನಿಂದ ಕೆಳಗಿಳಿದು ಕೂಡಲೇ ಡೋರ್ ಹಾಕಿ ಮುಂಗುರುಳು ಸರಿಪಡಿಸಿಕೊಳ್ಳುತ್ತಾ ಹೇರ್ ಫ್ರೀ ಹೇರ್ ಬಿಟ್ಟಿದ್ದ ಮೌನಿ ರಾಯ್ ಬಹಳ ಮುದ್ದು ಮುದ್ದಾಗಿ ಕಾಣುತ್ತಿದ್ದರು. ಇದನ್ನೂ ಓದಿ: ಇಷ್ಟಾರ್ಥ ನೆರವೇರಿಸಿದ ಕೊರಗಜ್ಜನಿಗೆ ಹರಕೆ ಸಲ್ಲಿಸಿದ ಕ್ರೇಜಿ ಕ್ವೀನ್ ದಂಪತಿ

    Mouni Roy

    ಈ ಎಲ್ಲದರ ಮಧ್ಯೆ ಮೌನಿ ರಾಯ್ ಬ್ಲಾಕ್ ಕಲರ್ ಮಾಸ್ಕ್ ತೊಟ್ಟು ಕೊರೊನಾ ನಿಯಮವನ್ನು ಕೂಡ ಪಾಲಿಸಿದರು. ಇದನ್ನೂ ಓದಿ: ಸಲ್ವಾರ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಜಿಎಫ್ ಬೆಡಗಿ ಮೌನಿ ರಾಯ್

    Mouni Roy

    ನಂತರ ಗೆಳತಿ ಕೈ ಹಿಡಿದುಕೊಂಡು ಮುಂದೆ ಸಾಗಿದ ಮೌನಿ ರಾಯ್ ಕೆಫೆ ಮುಂಭಾಗ ಕ್ಯಾಮೆರಾಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದೇ ವೇಳೆ ಕೆಫೆ ಒಳಗೆ ಸಂಕೋಚದಿಂದ ಹೋಗುತ್ತಿದ್ದ ಗೆಳತಿಯನ್ನು ತಡೆದು ಪ್ರೀತಿಯ ಸ್ನೇಹಿತೆ ಜೊತೆ ಕ್ಯಾಮೆರಾಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬೆಡಗಿ ಮೌನಿರಾಯ್‍ಗೆ ಮದುವೆ

    Mouni Roy

    ಸ್ಯಾಂಡಲ್‍ವುಡ್ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಹಿಂದಿ ವರ್ಶನ್‍ನಲ್ಲಿ ಗಲಿ ಗಲಿ ಎಂಬ ಐಟಂ ಸಾಂಗ್‍ಗೆ ಮೌನಿ ರಾಯ್ ನಟ ರಾಕಿಂಗ್ ಸ್ಡಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಇನ್ನೂ ಈ ಹಾಡು ಹಿಂದಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದನ್ನೂ ಓದಿ: ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

    Mouni Roy

    ಇತ್ತೀಚೆಗಷ್ಟೇ ಮೌನಿ ರಾಯ್ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅವರು ಹೇಳಿಕೊಂಡಿಲ್ಲ. ಆದರೆ ಅವರ ಪ್ರೇಮ ವಿಚಾರ ಬಿಟೌನ್‍ನಲ್ಲಿ ಹರಿದಾಡುತ್ತಿದ್ದು, ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.

    https://www.youtube.com/watch?v=i2abGi7yQBw

  • ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು

    ‘ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯ್ತಿದ್ದೇವೆ’- ಮುಂಬೈನಲ್ಲಿ ಸಿಡಿದೆದ್ದ ವಲಸೆ ಕಾರ್ಮಿಕರು

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರಗೆ ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ಮುಂಬೈನಲ್ಲಿ ವಲಸೆ ಕಾರ್ಮಿಕರ ಆಕ್ರೋಶ ಕಟ್ಟೆ ಒಡೆದಿದೆ. ನಮ್ಮನ್ನು ಊರಿಗೆ ಕಳಿಸಿ, ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಸಾವಿರಾರು ದಿನಗೂಲಿ ನೌಕರರು ಬಾಂದ್ರಾ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

    ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಆದಾಗಿನಿಂದ ಕಟ್ಟಡ ನಿರ್ಮಾಣ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಮೆ ಇಲ್ಲದೆ ಹೊತ್ತಿನ ಊಟಕ್ಕೂ ಅವರು ಪರದಾಡುವಂತಾಗಿದೆ. ಹೀಗಾಗಿ ಇಂದು ಮಧ್ಯಾಹ್ನದ ವೇಳೆ ಸಾವಿರಾರು ಕೂಲಿ ಕಾರ್ಮಿಕರು ಬಾಂದ್ರಾ ನಿಲ್ದಾಣದ ಬಳಿ ಜಮಾಯಿಸಿ, ನಮ್ಮ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಿ. ನಾವು ನಿತ್ಯವೂ ಹಸಿವಿನಿಂದ ಸಾಯುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಲಾಕ್‍ಡೌನ್ ಉಲ್ಲಂಘಿಸಿ ಸಾವಿರಾರು ಜನರು ಜಮಾಯಿಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅವರನ್ನು ಚದುರಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಮುಂಬೈನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಮುಂಬೈನ ಧಾರಾವಿಯಲ್ಲಿ ಇಂದು ಕೂಡ ಇಬ್ಬರು ಸಾವನ್ನಪ್ಪಿದ್ದಾರೆ.

    ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11 ಸಾವಿರ ದಾಟಿದೆ. ಕಳೆದ 24 ಗಂಟೆಯಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 31 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 365 ಆಗಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಎರಡು ರಾಜ್ಯಗಳಲ್ಲಿ ಸೋಮವಾರ ಒಂದೇ ದಿನ 350ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಕೂಡ ಮಹಾರಾಷ್ಟ್ರದಲ್ಲಿ 121 ಮಂದಿಗೆ ಸೋಂಕು ವ್ಯಾಪಿಸಿದೆ.

    ದೇಶದಲ್ಲಿ ಕೊರೊನಾ ಅಟ್ಟಹಾಸ:
    ರಾಜ್ಯ                ಸೋಂಕಿತರು        ಸಾವು
    ಮಹಾರಾಷ್ಟ್ರ        2,455               160
    ದೆಹಲಿ                1,510                 28
    ತಮಿಳುನಾಡು     1,173                 11
    ರಾಜಸ್ಥಾನ         945                    11
    ಗುಜರಾತ್         617                     26
    ಮಧ್ಯಪ್ರದೇಶ     614                     50

  • ಫೇಸ್ಬುಕ್ ಲೈವ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದು ಹೇಗೆ ತೋರಿಸ್ತೀನೆಂದು 19ನೇ ಮಹಡಿಯಿಂದ ಜಿಗಿದ!

    ಫೇಸ್ಬುಕ್ ಲೈವ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದು ಹೇಗೆ ತೋರಿಸ್ತೀನೆಂದು 19ನೇ ಮಹಡಿಯಿಂದ ಜಿಗಿದ!

    – ಮುಂಬೈ ಖಾಸಗಿ ಹೋಟೆಲ್‍ನಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

    ಮುಂಬೈ: ಇಲ್ಲಿನ ಬಾಂದ್ರಾದಲ್ಲಿರೋ ತಾಜ್ ಹೋಟೆಲ್‍ನ 19 ನೇ ಮಹಡಿಯ ಕಿಟಿಕಿಯಿಂದ ಹಾರಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಸಂಜೆ ನಡೆದಿದೆ.

    ಆತ್ಮಹತ್ಯೆಗೈದಾತನನ್ನು 24 ವರ್ಷದ ಅರ್ಜುನ್ ಭಾರದ್ವಾಜ್ ಎನ್ನಲಾಗಿದ್ದು, ಈತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಭಾರದ್ವಾಜ್ ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣ ಫೇಸ್ಬುಕ್‍ನಲ್ಲಿ ಲೈವ್ ವೀಡಿಯೋ ಅಪ್‍ಲೋಡ್ ಮಾಡಿದ್ದಾನೆ. ವೀಡಿಯೋದಲ್ಲಿ `ಇದು ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಟ್ಯುಟೋರಿಯಲ್’ ಅಂತಾ ಹೇಳಿದ್ದಾನೆ.

    ಹೋಟೆಲ್‍ನ 1925 ರೂಮ್ ನಂಬರಿನಲ್ಲಿ 9 ಸಣ್ಣ ಚೀಟಿಗಳಲ್ಲಿ ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ಗಳು ದೊರಕಿವೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ. ಅಪ್ಪ-ಅಮ್ಮ ನನ್ನ ಕ್ಷಮಿಸಿಬಿಡಿ ಎಂದು ಬರೆದಿದ್ದಾನೆ.

    ಅರ್ಜುನ್ ಭಾರದ್ವಾಜ್ ಖಿನ್ನತೆಗೆ ಒಳಗಾಗಿದ್ದು, ಮಾದಕ ವ್ಯಸನಿಯಾಗಿದ್ದ. ಆದ್ದರಿಂದ ಈ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಾರದ್ವಾಜ್ ಸೋಮವಾರ ಮುಂಜನೆ 3 ಗಂಟೆ ಸುಮಾರಿಗೆ ಹೋಟೆಲ್‍ಗೆ ಆಗಮಿಸಿ ರೂಮ್ ಕಾದಿರಿಸಿದ್ದಾನೆ. ಇಡೀ ದಿನ ರೂಂನಲ್ಲೇ ಇದ್ದ ಭಾರದ್ವಾಜ್ ವೀಡಿಯೋದಲ್ಲಿ ತೋರಿಸಿದಂತೆ ಆತ್ಮಹತ್ಯೆಗೆ ಮುನ್ನ ಮದ್ಯಪಾನ ಹಾಗೂ ಧೂಮಪಾನ ಮಾಡಿದ್ದಾನೆ. ಬಳಿಕ ಕಿಟಕಿಯ ಗಾಜು ಒಡೆದು ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದಾನೆ ಅಂತಾ ಬಾಂದ್ರಾದ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಭಾರದ್ವಾಜ್ ಮಹಡಿಯಿಂದ ಜಿಗಿದಾಗ ಆದ ಭಾರೀ ಶಬ್ದ ಹೊಟೇಲ್‍ನ ಭದ್ರತಾ ಸಿಬ್ಬಂದಿಗೆ ಕೇಳಿಸಿದೆ. ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿದಾಗ ಭಾರದ್ವಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಅದಾಗಲೇ ಆತ ಸಾವನಪ್ಪಿದ್ದಾನೆ ಅಂತಾ ವೈದ್ಯರು ಘೋಷಿಸಿದ್ದಾರೆ.

    https://www.youtube.com/watch?v=Rx6u2MtFT4w