ಚಾಮರಾಜನಗರ: ಶುಕ್ರವಾರ ಬೆಳ್ಳಂಬೆಳಗ್ಗೆ ದಂಪತಿಗೆ ಹುಲಿ (Tiger) ರಾಯನ ದರ್ಶನವಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವಲಯದ ಮೂಳೆಹೊಳೆ ಬಳಿ ಹುಲಿ ಪ್ರತ್ಯಕ್ಷವಾಗಿದೆ. ದಂಪತಿ ಕೇರಳ (Kerala) ದಿಂದ ಕರ್ನಾಟಕಕ್ಕೆ ಕಾರಿನಲ್ಲಿ ಬರುವಾಗ ದಾರಿ ಮಧ್ಯೆ ಹುಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆರಿಸಿ – ಗುಜರಾತ್‍ನಲ್ಲಿ ಕೇಜ್ರಿವಾಲ್ ಅಭಿಯಾನ
ಹುಲಿಯನ್ನು ಕಂಡು ದಂಪತಿ ಗಾಬರಿಗೊಂಡಿದ್ದಾರೆ. ಅಲ್ಲದೆ ಕೂಡಲೇ ತಮ್ಮ ಮೊಬೈಲ್ ನಲ್ಲಿ ಹುಲಿಯ ಫೋಟೋ ಹಾಗೂ ವೀಡಿಯೋ ಸೆರೆಹಿಡಿದಿದ್ದಾರೆ. ಹುಲಿ ರಸ್ತೆ ದಾಟಿ ಕಾಡಿನೊಳಗೆ ಸಾಗುವ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ರಾಷ್ಟ್ರೀಯ ಉದ್ಯಾನವನ ಬಂಡೀಪುರದಲ್ಲಿ ವನ್ಯ ಪ್ರಾಣಿಗಳಿಗೆ ಸಂಚಕಾರವುಂಟಾಗುತ್ತೆ ಅಂತಾ ಈಗಾಗಲೇ ರಾತ್ರಿ ಸಂಚಾರ ನಿರ್ಬಂಧ ಮಾಡಲಾಗಿದೆ. ಇದೀಗ ಗುಂಡ್ಲುಪೇಟೆ ಶಾಸಕರು ಪ್ರಧಾನಿ ಮೋದಿಗೆ ಪತ್ರ ಬರೆದು ಚತುಷ್ಪಥ ರಸ್ತೆ ನಿರ್ಮಿಸಿ, ಸುಗಮ ಸಂಚಾರಕ್ಕೆ ಡಿವೈಡರ್ ಅಳವಡಿಸಲು ಪತ್ರ ನೀಡಿದ್ದಾರೆ. ಇದರಿಂದ ವನ್ಯ ಸಂಕುಲಕ್ಕೆ ಸಂಕಷ್ಟ ಎದುರಾಗುತ್ತೆ. ಅಲ್ಲದೆ ಈ ಪತ್ರ ಎಲ್ಲೆಡೆ ವೈರಲ್ ಆಗಿದ್ದು ಶಾಸಕರ ನಡೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹೌದು. ರಾಷ್ಟ್ರೀಯ ಹೆದ್ದಾರಿ 766. ಮೈಸೂರಿನಿಂದ ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸದ್ಯ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ನಂಜನಗೂಡಿನಿಂದ ಗುಂಡ್ಲುಪೇಟೆವರೆಗಿನ ಹೆದ್ದಾರಿಯಲ್ಲಿ ತಿಂಗಳಿಗೆ ಸರಾಸರಿ 15ಕ್ಕೂ ಹೆಚ್ಚು ಅಪಘಾತಗಳು ನಡೆದು 5ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ರಸ್ತೆಯನ್ನ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿರುವುದೇ ಅಪಘಾತಕ್ಕೆ ಕಾರಣ ಅಂತಾ ಪೊಲೀಸರು ವರದಿ ಕೊಟ್ಟಿದ್ರು. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್ – ಇಂದಿನಿಂದ ವಿದ್ಯುತ್ ದರ ಏರಿಕೆ
ಅಲ್ಲದೇ ಸಂಸದ ಶ್ರೀನಿವಾಸ್ ಪ್ರಸಾದ್ ಕೂಡ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದು ನಂಜನಗೂಡು ಅರಣ್ಯ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡಬಾರದು, ವಿಭಜಕ ಅಳವಡಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ರಸ್ತೆ ಅಗಲೀಕರಣ ಮಾಡುವುದರಿಂದ ವಾಹನಗಳು ಅತಿವೇಗದಿಂದ ಚಲಿಸುತ್ತವೆ. ಇದರಿಂದ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಬರುತ್ತೆ. ಹೀಗಾಗಿ ಅರಣ್ಯಪ್ರದೇಶ ಪ್ರಾರಂಭವಾಗುವವರೆಗೂ ಮಾತ್ರ ರಸ್ತೆ ಅಗಲೀಕರಣ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಈ ನಡುವೆ ಬಂಡೀಪುರ ಅರಣ್ಯದ ನಡುವೆ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಂಜನಗೂಡಿನಿಂದ ಗುಂಡ್ಲುಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಕೃಷಿ ಉತ್ಪನ್ನ ಸಾಗಾಣೆಗೆ ರೈತರಿಗೂ ತೊಂದರೆಯಾಗುತ್ತಿದೆ. ಹಾಗಾಗಿ ಕೇರಳ ಹಾಗು ತಮಿಳುನಾಡು ಗಡಿಯವರೆಗು ಡಬಲ್ ರೋಡ್ ಮಾಡಿ ರಸ್ತೆ ವಿಭಜಕ ಅಳವಡಿಸಬೇಕೆಂದು ಶಾಸಕ ನಿರಂಜನ್ ಕುಮಾರ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾಗೆ ವಜ್ರದ ಕಿರೀಟ
ಶಾಸಕರ ಪತ್ರದ ವಿಚಾರಕ್ಕೆ ಪರಿಸರವಾದಿಗಳೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವವೈವಿಧ್ಯತೆಗೆ ಇದರಿಂದ ಧಕ್ಕೆಯಾಗಲಿದೆ. ವನ್ಯಜೀವಿಗಳಿಗೆ ಕಂಟಕವಾಗಲಿದೆ, ಬೇಕಿದ್ದರೆ ಕಾಡಿನ ಹೊರಗೆ ರಸ್ತೆ ಅಗಲೀಕರಣ, ರಸ್ತೆವಿಭಜಕ ಅಳವಡಿಸಲಿ ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಒಂದೆಡೆ ರಸ್ತೆ ಅಗಲೀಕರಣ ಮಾಡಿ ಎಂದು ಶಾಸಕರು ಪತ್ರ ಬರೆದಿದ್ರೆ ಮತ್ತೊಂದೆಡೆ ಪರಿಸರವಾದಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಂಡೀಪುರದಲ್ಲಿ ರಸ್ತೆ ಆಗಲೀಕರಣ, ವಿಭಜಕ ಮಾಡಲೂ ಮುಂದಾದ್ರೆ ಪ್ರಾಣಿಗಳಿಗೆ ಕುತ್ತು ಗ್ಯಾರಂಟಿ.
ಚಾಮರಾಜನಗರ: ಬಂಡೀಪುರ ಹುಲಿಸಂರರಕ್ಷಿತ ಪ್ರದೇಶದಲ್ಲಿ 5ನೇ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಹುಲಿ ಅಂದಾಜು ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಎಂ ಸ್ಟ್ರೈಪ್ಸ್ ಎಂಬ ಎಕೋಲಾಜಿಕಲ್ ಆ್ಯಪ್‍ನ್ನು ಬಳಸಲಾಗುತ್ತಿದೆ.
ದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಆರಂಭವಾಗಿದೆ. ಇಂದಿನಿಂದ ಫೆಬ್ರವರಿ 8 ರವರಗೆ ಗಣತಿ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ ಮಾಂಸಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಓಡಾಟಗಳ ಕುರಿತಾದ ಗುರುತುಗಳು, ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು, ಪರಚಿದ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ. ಬಂಡೀಪುರವನ್ನು ಮೂರು ಬ್ಲಾಕ್‍ಗಳನ್ನಾಗಿ ವಿಂಗಡಿಸಿ 112 ಗಸ್ತುಗಳಲ್ಲಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತಿದೆ.
ಕೊರೊನಾ ಸಂದರ್ಭದಲ್ಲಿ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊರಗಿನಿಂದ ಬಂದವರಿಂದ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಗಣತಿ ಕಾರ್ಯದಲ್ಲಿ ಸ್ವಯಂಸೇವಕರ ಸೇವೆ ಬಳಸಿಕೊಳ್ಳುತ್ತಿಲ್ಲ. ಗಣತಿ ಕಾರ್ಯದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಅರಣ್ಯ ವೀಕ್ಷಕರು ಸೇರಿದಂತೆ 300 ಹೆಚ್ಚು ಮಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಹುಲಿಗಳ ಗಣತಿಗೆ ಇದೇ ಮೊದಲ ಬಾರಿಗೆ ಎಂ ಸ್ಟ್ರೈಪ್ಸ್ ಎಂಬ ಎಕಾಲಾಜಿಕಲ್ ಆ್ಯಪ್‍ನ್ನು ಬಳಸಲಾಗುತ್ತಿದೆ. ಎಂ ಸ್ಟ್ರೈಪ್ಸ್ ಆ್ಯಪ್‍ನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿವ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಬಂಡೀಪುರದಲ್ಲಿ 40 ಮೊಬೈಲ್‍ಗಳಿಗೆ ಈ ತಂತ್ರಾಂಶ ಅಳವಡಿಸಲಾಗಿದೆ.
ಅಂದಾಜು ಪ್ರಕ್ರಿಯೆಗೆ ನಿಯೋಜಿಸಲಾಗಿರುವ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಭ್ಯವಾಗುವ ಮಾಹಿತಿಗಳನ್ನು ಈ ಆ್ಯಪ್‍ನಲ್ಲಿ ದಾಖಲಿಸಲಿದ್ದು, ಹೆಚ್ಚಿನ ನಿಖರತೆ ಇರಲಿದೆ. ಇದನ್ನೂ ಓದಿ: ಉಡುಪಿಯ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ
ಈಗಾಗಲೇ ಕ್ಯಾಮೆರಾ ಟ್ರಾಪ್ ಮೂಲಕ ಹುಲಿ ಅಂದಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಅಂತಿಮ ಹಂತದ ಅಂದಾಜು ಪ್ರಕ್ರಿಯೆ ಇದೀಗ ಆರಂಭಗೊಂಡಿದೆ. 2018ರಲ್ಲಿ ಕೈಗೊಂಡಿದ್ದ ನಾಲ್ಕನೇ ಅಖಿಲ ಭಾರತ ಮಟ್ಟದ ಗಣತಿ ಕಾರ್ಯ ಬಂಡಿಪುರ ಸಂರಕ್ಷಿತ ಪ್ರದೇಶದಲ್ಲಿ 173 ಹುಲಿಗಳನ್ನು ಗುರುತಿಸಲಾಗಿತ್ತು. ಈ ಬಾರಿ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಮೃತ ವ್ಯಕ್ತಿಯ ದೇಹದ ಪಕ್ಕ ಸಿಕ್ತು 124 ಹಾವುಗಳು!
ಚಾಮರಾಜನಗರ: ಹೊಸ ವರ್ಷದ ಮುನ್ನಾ ದಿನ ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡೇ ಆಗಮಿಸಿತ್ತು. ಕ್ರಿಸ್‍ಮಸ್ ದಿನದಿಂದಲೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ಸಾವಿರ ಜನರು ಸಫಾರಿ ಮಾಡಿದ್ದು, ಅರಣ್ಯ ಇಲಾಖೆಗೆ 22 ಲಕ್ಷ ರೂ. ಆದಾಯ ಬಂದಿದೆ.
ಬಂಡೀಪುರದಲ್ಲಿ ಇಂದು ಮತ್ತು ನಾಳೆ ಅರಣ್ಯ ಇಲಾಖೆಯ ಕಾಟೇಜ್, ಡಾರ್ಮೆಟರಿಗಳಲ್ಲಿ ವಾಸ್ತವ್ಯ ಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಂದಿನಂತೆ ಬೆಳಗ್ಗೆ, ಸಂಜೆ ಸಫಾರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿವಿಧೆಡೆಯಿಂದ ಪ್ರವಾಸಿಗರ ದಂಡು ಲಗ್ಗೆ ಇಟ್ಟಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಮಾಸ್ಕ್ ಧರಿಸಿ ಬಂದಿದ್ದರೂ ಸಹ ಸಾಮಾಜಿಕ ಅಂತರ ಮಾಯವಾಗಿತ್ತು. ಇದನ್ನೂ ಓದಿ: ಮುಂಬೈಯಲ್ಲಿ ಜ.15ರವರೆಗೆ 144 ಸೆಕ್ಷನ್ ಜಾರಿ – ಸಂಜೆ 5 ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ
ಅದಲ್ಲದೇ ಚಾಮರಾಜನಗರ ಜಿಲ್ಲಾದ್ಯಂತ ರೆಸಾರ್ಟ್ ಗಳು ಹೌಸ್ ಪುಲ್ ಆಗಿವೆ. ರೆಸಾರ್ಟ್ ನಲ್ಲಿ ಡಿಜೆ, ಪಾರ್ಟಿ, ಪೈರ್ ಕ್ಯಾಂಪ್ ಗೆ ಬ್ರೇಕ್ ಹಾಕಲಾಗಿದೆ. ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲೂ ಕೋವಿಡ್ ನೆಗೆಟಿವ್ ರಿಪೋರ್ಟ್, ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡಿದ್ದಾರೆ. ಆದರೂ ಹೊಸ ವರ್ಷದ ಆಚರಣೆ ಹಿನ್ನೆಲೆ ರೆಸಾರ್ಟ್ ಗಳೆಲ್ಲ ತುಂಬಿ ತುಳುಕುತ್ತಿವೆ.
ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ಭೀತಿ ಹೆಚ್ಚಾಗಿದೆ. ಪರಿಣಾಮವಾಗಿ ಈ ವರ್ಷ ಬಂಡೀಪುರ ಅರಣ್ಯ ಧಾಮದಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸಲಾಗಿದೆ.
ಡಿಸೆಂಬರ್ 31 ಹಾಗೂ ಜನವರಿ 1ರಂದು ಬಂಡೀಪುರದಲ್ಲಿ ಹೊಸವರ್ಷಾಚರಣೆಯನ್ನು ಪ್ರತಿ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತದೆ. ಆದರೆ ಸದ್ಯ ಕೊರೊನಾ ಸೋಂಕಿನ ಭೀತಿ ಹೆಚ್ಚಿರುವುದರಿಂದ ಹೊಸ ವರ್ಷ ಸಂಭ್ರಮಾಚರಣೆಗೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ. ಇದನ್ನೂ ಓದಿ: 5 ದಿನಗಳ ಕಾಲ ದುಬೈ ಪ್ರವಾಸ ಹೊರಟ ಬಿಎಸ್‍ವೈ
ಡಿಸೆಂಬರ್ 31 ಹಾಗೂ ಜನವರಿ 1 ರಂದು ಅರಣ್ಯ ಇಲಾಖೆಯ ಡಾರ್ಮೆಟರಿಗಳು, ಕಾಟೇಜ್ ಹಾಗೂ ಗೆಸ್ಟ್ ಹೌಸ್‌ಗಳಲ್ಲಿ ವಾಸ್ತವ್ಯ ನಿರ್ಬಂಧಿಸಿದ್ದು, ಆನ್‌ಲೈನ್ ಬುಕಿಂಗ್ ಕೂಡಾ ಬ್ಲಾಕ್ ಮಾಡಲಾಗಿದೆ.
ಚಾಮರಾಜನಗರ: ರೈತರಿಗೆ ಉಪಟಳ ಕೊಡುತ್ತಿದ್ದ ಕೊಡಗಿನ 8 ಸಾಕಾನೆಗಳನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ವನ್ಯಜೀವಿ ತಜ್ಞೆ, ಆನೆಗಳ ಸಂಶೋಧಕಿ ಪ್ರಜ್ಞಾ ಚೌಟ ಅವರು ಆನೆಮನೆ ಫೌಂಡೇಷನ್ ಸ್ಥಾಪಿಸಿ ಕಾಡಿನ ಮಧ್ಯೆ ಆನೆಗಳನ್ನು ಸಾಕುತ್ತಿದ್ದರು. ಆದರೆ ಆನೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗದೆ ಜೊತೆಗೆ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ನಾಶಪಡಿಸುತ್ತಿದ್ದರಿಂದ ಅರಣ್ಯ ಇಲಾಖೆ ಆನೆಗಳನ್ನು ಇಲಾಖಾ ಶಿಬಿರಕ್ಕೆ ಸ್ಥಳಾಂತರಿಸಲು ಆದೇಶಿಸಿತ್ತು.
ಅದರಂತೆ ಹೆಣ್ಣಾನೆಗಳಾದ ಹೀರಣ್ಯ(8), ಮಾಲಾದೇವಿ(34), ಪೂಜಾ(8), ಕಮಲಿ(4), ಕನ್ನಿಕಾ(2), ಹೀರಣ್ಯಾ(2 ತಿಂಗಳು) ಹಾಗೂ ಗಂಡಾನೆಗಳಾದ ಧರ್ಮ(12), ಜಗ(7) ಎಂಬವುಗಳನ್ನು ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಬಂಡೀಪುರದ ಸಿಎಫ್ ನಟೇಶ್ ಕೂಡ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಕ್ರಿಸ್ತನಿಗೆ ಪರಿವರ್ತನೆಯಾದ್ರೆ ಸಿದ್ದರಾಮಯ್ಯಗೆ ಜಾಗ ಎಲ್ಲಿದೆ: ಸಿ.ಟಿ ರವಿ
ವನ್ಯಜೀವಿ ತಜ್ಞೆಯಾಗಿರುವ ಪ್ರಜ್ಞಾ ಚೌಟ ಕನ್ನಡದ ಹೆಸರಾಂತ ರಂಗಕರ್ಮಿ ಡಿ.ಕೆ.ಚೌಟ ಅವರ ಪುತ್ರಿಯಾಗಿದ್ದು ಆನೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಜೊತೆಗೆ ಆನೆ ಎಂಬ ಆಕರ್ಷಕ ಶಿಬಿರವನ್ನು ರೂಪಿಸಿದ್ದರು.
ಚಾಮರಾಜನಗರ: ತನ್ನ ಎರಡು ಮರಿಗಳನ್ನು ಕೂಗಿ ಅರಸುತ್ತಾ ಹುಲಿಯೊಂದು ಗಾಂಭೀರ್ಯದಿಂದ ನಡೆದು ಬಂದು ಸಫಾರಿಗರನ್ನು ರೋಮಾಂಚನಗೊಳಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕಂಡುಬಂದಿದೆ. ಎರಡು ದಿನಗಳ ಹಿಂದೆ ನಡೆದಿರುವ ಈ ಘಟನೆಯ ವೀಡಿಯೋ ಸದ್ಯ ವೈರಲಾಗಿದೆ.
ಬಂಡೀಪುರದ ಬಸವನಕಟ್ಟೆ ಎಂಬಲ್ಲಿ ಪ್ರವಾಸಿಗರಿಗೆ ಸಿಕ್ಕ ‘ಸುಂದರಿ’ ಎಂಬ ಹುಲಿಯು ಘರ್ಜಿಸುತ್ತಾ ಮರಿಗಳನ್ನು ಕೂಗಿ ಕರೆಯುತ್ತಿರುವ ವೀಡಿಯೋವನ್ನು ಸಫಾರಿಯಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದು, 10 ನಿಮಿಷಕ್ಕೂ ಹೆಚ್ಚು ಸಮಯ ಹುಲಿ ದರ್ಶನ ನೀಡಿದೆ ಎಂದು ತಿಳಿದುಬಂದಿದೆ.
ಸುಂದರಿಗೆ ಎರಡು ಮರಿಗಳಿದ್ದು, ಅವುಗಳನ್ನು ಕೂಗಿ ಕರೆಯುತ್ತಿತ್ತು. 10-15 ನಿಮಿಷಗಳ ಬಳಿಕ ತಾಯಿಯನ್ನು ಅವು ಸೇರಿಕೊಂಡವು. ಪ್ರವಾಸಿಗರು ವ್ಯಾಘ್ರನನ್ನು ಕಂಡು ಬಲು ರೋಮಾಂಚನಗೊಂಡರು ಎಂದು ಸ್ಥಳೀಯ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಇಲಿ ವಿಷದಿಂದ ಹಲ್ಲುಜ್ಜಿ ಪ್ರಾಣ ಬಿಟ್ಟ 18ರ ಯವತಿ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ನಡೆದ ಪಕ್ಷಿ ಗಣತಿ ಮುಕ್ತಾಯವಾಗಿದ್ದು 289 ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದೆ. ಎರಡು ಬಗೆಯ ಅಪರೂಪದ ಪಕ್ಷಿಗಳು ಪತ್ತೆಯಾಗಿವೆ. ಅಲ್ಲದೆ ಇದೇ ಮೊದಲ ಬಾರಿಗೆ ಈ ಅರಣ್ಯದಲ್ಲಿ ಗ್ರೇಟ್ ಹಾರ್ನ್‌ಬಿಲ್ ಪಕ್ಷಿ ಸಹ ಕಾಣಿಸಿಕೊಂಡಿದೆ.
ಕರ್ನಾಟಕ ಪಕ್ಷಿ ಗಣತಿಯಡಿ ಸೇರಿಲ್ಲದ ಲೆಸ್ಸರ್ ಫಿಶ್ ಈಗಲ್ ಹಾಗೂ ಟಾನಿ ಬೆಲ್ಲೀಡ್ ಬ್ಯಾಬ್ಲರ್ ಎಂಬ ಪಕ್ಷಿಗಳು ಸಹ ಕಂಡುಬಂದಿವೆ. 1998 ರಲ್ಲಿ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ 123 ಪ್ರಬೇಧದ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿತ್ತು. ಆದರೆ 22 ವರ್ಷಗಳ ನಂತರ ನಡೆದ ಪಕ್ಷಿ ಗಣತಿಯಲ್ಲಿ 289 ಪ್ರಬೇಧದ ಪಕ್ಷಿಗಳು ಕಂಡು ಬಂದಿವೆ.
ಕಳೆದ ಮೂರು ದಿನಗಳಿಂದ ಪಕ್ಷಿತಜ್ಞರು, ಪಕ್ಷಿಪ್ರಿಯರು ಸ್ವಯಂಸೇವಕರು ಹಾಗು ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಪಕ್ಷಿ ಗಣತಿಯಲ್ಲಿ ಕೆಲವು ಅಪರೂಪದ ಹಾಗು ಅಳಿವಿನಂಚಿನಲ್ಲಿರುವ ಪ್ರಬೇಧದ ಪಕ್ಷಿಗಳು ಪತ್ತೆಯಾಗಿದೆ.
ಚಾಮರಾಜನಗರ: ನಾನು ರಾತ್ರಿ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಅಂತ ಪೋಸ್ಟ್ ಮಾಡಿದ್ದೆ ಎಂದು ನಟ ಧನ್ವೀರ್ ಸ್ಪಷ್ಟನೆ ನೀಡಿದ್ದಾರೆ.
ಕಾನೂನು ಬಾಹಿರವಾಗಿ ರಾತ್ರಿ ಸಫಾರಿ ಮಾಡಿದ ಆರೋಪ ಹೊತ್ತಿರುವ ಧನ್ವೀರ್ ಇಂದು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ವಿಚಾರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿ ನವೀನ್ ಕುಮಾರ್ ಕೇಳಿದ ರಾತ್ರಿ ಸಫಾರಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಧನ್ವೀರ್, ನಾನು ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ. ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ಟಿಕೆಟ್ ಪಡೆದು ತೆರಳಿದ್ದು, ನೈಟ್ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಎಂದು ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.
ನಟ ತೆಗೆದ ಫೋಟೋ, ವಿಡಿಯೋಗಳ ಸಮಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ವೈರಲ್ ಆಗಿದ್ದ ವಿಡಿಯೋ, ಸ್ಕ್ರೀನ್ ಶಾಟ್ ಗಳನ್ನು ಅರಣ್ಯ ಇಲಾಖೆಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ವಿಚಾರಣೆಯ ವರದಿಯನ್ನು ಸಲ್ಲಿಸಿದ ಬಳಿಕ ಅರಣ್ಯ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ
ಶುಕ್ರವಾರ ನಟ ಧನ್ವೀರ್ ನೈಟ್ ಸಫಾರಿ ಮಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಂಡೀಪುರ ಸಿಎಫ್‍ಒ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವಿಚಾರಣೆಯ ನಂತರ ಧನ್ವೀರ್ ಬಂಡೀಪುರದಲ್ಲಿ ನೈಟ್ ಸಫಾರಿ ಮಾಡಿಲ್ಲ ಅಂತ ಹೇಳಿದ್ದಾರೆ ಎಂದು ಆರ್ ಎಫ್‍ಒ ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲ್ಲ ಅಂತ ತಿಳಿಸಿದ್ದಾರೆ.
ಮೈಸೂರು: ಸಾರ್ವಜನಿಕರಿಗೆ ನಿಷೇಧ ಹೇರಿದ್ದ ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು. ನಟ ಧನ್ವೀರ್ ರಾತ್ರಿ ವೇಳೆ ಸಫಾರಿ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಮೂಲಕ ಸಾಮಾನ್ಯರಿಗೊಂದು ನ್ಯಾಯ ಸೆಲೆಬ್ರಿಟಿಗಳಿಗೊಂದು ನ್ಯಾಯನಾ ಎಂದು ಪ್ರವಾಸಿಗರು ಕಿಡಿಕಾರುತ್ತಿದ್ದಾರೆ.
ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ರಾತ್ರಿ ವೇಳೆ ಸಫಾರಿ ಮಾಡುವುದು ಕಾನೂನು ಬಾಹಿರವಾಗಿದೆ. ಸಾಮಾನ್ಯರು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಹಾಕುತ್ತಾರೆ. ಆದರೆ ಸೆಲೆಬ್ರಿಟಿಗಳಿಗೆ ಮಾತ್ರ ರೆಡ್ ಕಾರ್ಪೆಟ್ ಹಾಕಿ ಸಫಾರಿ ಮಾಡಲು ಅವಕಾಶ ನೀಡಲಾಗಿದೆ.
ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂದು ಸಫಾರಿಗೆ ಸಮಯ ನಿಗದಿ ಮಾಡಲಾಗಿದೆ. ಆದರೆ ಸೆಲೆಬ್ರಿಟಿಗಳಾದರೆ ಇಷ್ಟ ಬಂದಂತೆ ರಾತ್ರಿ ವೇಳೆ ಸಫಾರಿ ಮಾಡಿದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿ ನಂತರ ಎಡಿಟ್ ಮಾಡಿ ಮತ್ತೆ ಪೋಸ್ಟ್ ಮಾಡಿಕೊಂಡಿದ್ದಾರೆ.