Tag: bandipura forest

  • ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ – ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ – ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    – ಹಸು ಹೋದ್ರೆ ನಮ್ಮ ಮೇಲೆ  ಕೇಸ್ ಹಾಕ್ತಾರೆ, ಶೂಟಿಂಗ್‌ಗೆ ಅನುಮತಿ ನೀಡಿದ್ದು ಹೇಗೆ?
    – 9 ವರ್ಷದ ಹಿಂದೆ ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ

    ಚಾಮರಾಜನಗರ: ಇಲ್ಲಿನ ಬಂಡೀಪುರ ಅಭಯಾರಣ್ಯದ (Bandipur Sanctuary) ಹಿಮವದ್ ಗೋಪಾಲಸ್ವಾಮಿ ಬೆಟ್ಟ (Himavad Gopalaswamy Betta) ಪರಿಸರ ಸೂಕ್ಷ್ಮ ವಲಯದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವ ಮೂಲಕ ರೈತರ ಹಾಗೂ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಬಂಡೀಪುರವು ರಾಜ್ಯದ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯವಾಗಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಸಿನಿಮಾ ಶೂಟಿಂಗ್‌ಗೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅನುಮತಿ ನೀಡಿದ್ದು ಮಲಯಾಳಂ ಸಿನಿಮಾದ ಚಿತ್ರೀಕರಣ ನಡೆದಿದೆ. ಇದೀಗ ಪರಿಸರ ಸೂಕ್ಷ್ಮ ವಲಯದಲ್ಲಿ ಹೇಗೆ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದಾರೆ? ರಾಜ್ಯ ಸರ್ಕಾರ, ಬಂಡೀಪುರವನ್ನು ಕೇರಳ ಸರ್ಕಾರಕ್ಕೆ ಒತ್ತೆ ಇಡ್ತಿದ್ಯಾ ಎಂದು ಪ್ರಶ್ನಿಸುವ ಮೂಲಕ ಸ್ಥಳೀಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: Exclusive |  ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

    ಇಡೀ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಹಲಿ ಸಂರಕ್ಷಿತ ಅರಣ್ಯಗಳಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಕೂಡ ಒಂದು. ಈಗ ಕರ್ನಾಟಕ ಸರ್ಕಾರ ಹಾಗೂ ಪಿಸಿಸಿಎಫ್ ಕೇರಳದ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಬಂಡೀಪುರದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅವಕಾಶ ನೀಡುವ ಮೂಲಕ ಹುಬ್ಬೇರುವಂತೆ ಮಾಡಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

    ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುವ ಹಿನ್ನಲೆ ಕಾಡು ಪ್ರಾಣಿಗಳಿಗೆ ತೊಂದರೆಯಾಗುವ ನಿಟ್ಟಿನಲ್ಲಿ 2016ರಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಯಾವುದೇ ಶೂಟಿಂಗ್‌ಗಳು ಸಹ ಬೆಟ್ಟದಲ್ಲಿ ನಡೆದಿಲ್ಲ. ಆದರೆ ಇದೀಗ ಶೂಟಿಂಗ್‌ಗೆ ಅವಕಾಶ ಕೊಟ್ಟಿರುವುದು ಏಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಒಂದು ದಿನದ ಮಟ್ಟಿಗೆ ಸರ್ಕಾರ ಮಲಯಾಳಂ ಸಿನಿಮಾ ಶೂಟಿಂಗ್‌ಗೆ ಅವಕಾಶ ಕೊಟ್ಟಿತ್ತು. ಸ್ಥಳೀಯ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಕೂಡ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿದ್ದಾರೆ. ಸರ್ಕಾರ, ಸಚಿವರಿಗೆ ಪರಿಸರ ಸೂಕ್ಷ್ಮ ವಲಯದ ಅರಿವಿಲ್ಲದಿದ್ದರೂ ಪರವಾಗಿಲ್ಲ, ಸ್ಥಳೀಯ ಶಾಸಕರಿಗಿಲ್ವಾ ಎನ್ನುವ ಪ್ರಶ್ನೆ ಮಾಡುತ್ತಾರೆ. ಅರಣ್ಯದಲ್ಲಿ ನಮ್ಮ ಹಸು ಮೇಯಲು ಹೋದರೆ ಅವಕಾಶ ಕೊಡುವುದಿಲ್ಲ. ನಮ್ಮ ಮೇಲೆ ಕೇಸ್ ಹಾಕಿದ ನಿದರ್ಶನ ಕೂಡ ಇದೆ. ಹೀಗಿರುವಾಗ ಶೂಟಿಂಗ್‌ಗೆ ಸರ್ಕಾರ ಪರ್ಮಿಷನ್ ಕೊಟ್ಟು ಅದರಿಂದ ಬಂಡೀಪುರದ ಆದಾಯ ಹೆಚ್ಚಿಸುವ ಅಗತ್ಯವಿಲ್ಲ ಸ್ಥಳೀಯರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿದ ಆರೋಪ

    ಈ ಬಗ್ಗೆ ಆರಣ್ಯ ಇಲಾಖೆ ಡಿಸಿಎಫ್ ಪ್ರಭಾಕರನ್ ಮಾತ್ರ ರಾಜ್ಯ ಸರ್ಕಾರದಿಂದಲೇ ಮಲಯಾಳಂ ಸಿನಿಮಾ ಚಿತ್ರಿಕರಣಕ್ಕೆ ಅನುಮತಿ ನೀಡಲಾಗಿದೆ. ಅನುಮತಿಯ ಅದೇಶ ಪ್ರತಿ ನಮಗೂ ಬಂದಿದೆ. ಅಗ್ರಿಮೆಂಟ್ ಮಾಡ್ಕೊಂಡಿದ್ದೇವೆಂದು ಪಬ್ಲಿಕ್ ಟಿವಿಗೆ ಡಿಸಿಎಫ್ ಪ್ರಭಾಕರ್ ದೂರವಾಣಿಯಲ್ಲಿ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್‌ ಅನ್ನು 104% ಹೆಚ್ಚಿಸಿದ ಅಮೆರಿಕ

    ಈಗಾಗ್ಲೇ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಬೇಡ ಎಂಬ ಕಾವು ಹೊತ್ತಿದೆ. ಈ ಸಮಯದಲ್ಲಿ ಮಲಯಾಳಂ ಸಿನಿಮಾಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ರೈತರು ಹಾಗೂ ಪರಿಸರವಾದಿಗಳ ಕಣ್ಣು ಕೆಂಪಾಗಿಸಿದೆ.

  • ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ಅರಣ್ಯಗಳಲ್ಲಿ ಆನೆ ಗಣತಿ ಶುರು!

    ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರದ ಅರಣ್ಯಗಳಲ್ಲಿ ಆನೆ ಗಣತಿ ಶುರು!

    ಚಾಮರಾಜನಗರ: ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ (South States) ಆನೆ-ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೈಜ್ಞಾಕವಾಗಿ ಪರಿಹಾರೋಪಾಯಗಳನ್ನು ರೂಪಿಸಲು ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಗಡಿ ಅರಣ್ಯ ಪ್ರದೇಶಗಳಲ್ಲಿ (Forest) ಏಕಕಾಲದಲ್ಲಿ 3 ದಿನಗಳ ಕಾಲ ಆನೆ ಗಣತಿ ನಡೆಸಲು ಅರಣ್ಯ ಇಲಾಖೆ (Forest Department) ಮುಂದಾಗಿದೆ.

    ಹೌದು. ನೀಲಗಿರಿ ಶ್ರೇಣಿಯ ಸಂರಕ್ಷಿತ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಮಾನವ ಆನೆ ಸಂಘರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾನವ ಸಂಘರ್ಷ ತಡೆಗಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಗಳು ಅಂತರರಾಜ್ಯ ಸಮನ್ವಯ ಸಮಿತಿ ರಚಿಸಿಕೊಂಡಿವೆ. ಸೂಕ್ತ ಯೋಜನೆ ರೂಪಿಸಲು ಹಾಗೂ ವೈಜ್ಞಾನಿಕ ಪರಿಹಾರೋಪಾಯ ಕಂಡುಕೊಳ್ಳಲು ಮುಂದಾಗಿವೆ. ಹಾಗಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಜೊತೆಗೆ ಆಂಧ್ರಪ್ರದೇಶ ಗಡಿ ಭಾಗಗಳಲ್ಲಿನ ಆನೆಗಳ ಸಂಖ್ಯೆ ಪತ್ತೆ ಮಾಡುವ (Elephant Census) ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

    ಪ್ರಮುಖವಾಗಿ ರಾಜ್ಯದ ಬಂಡೀಪುರ, ನಾಗರಹೊಳೆ, ಕಾವೇರಿ ವನ್ಯಧಾಮ, ಮಲೆಮಹದೇಶ್ವರ ವನ್ಯಧಾಮದಲ್ಲಿ ಆನೆ ಗಣತಿ ನಡೆಯಲಿದೆ. ಅಲ್ಲದೇ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮಡಿಕೇರಿ ವನ್ಯಜೀವಿಧಾಮ ಹಾಗೂ ವಿರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಆನೆಗಣತಿ ನಡೆಸಲಾಗುತ್ತದೆ. ಜೊತೆಗೆ ನೆರೆಯ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಸಂಯೋಜಿತ ಆನೆಗಳ ಸಂಖ್ಯೆ ಪತ್ತೆಗೆ ಗಣತಿ ನಡೆಸಲಾಗುತ್ತದೆ.

    ಆನೆ ಗಣತಿ ನಡೆಸುವುದು ಹೇಗೆ?
    ಆನೆ ಗಣತಿಗೆ ವಿವಿಧ ವಿಧಾನಗಳನ್ನು ಅನುಸರಿಲಾಗುತ್ತದೆ. ಆನೆಯ ಲದ್ದಿಯ ಮಾದರಿ ಸಂಗ್ರಹ ಮಾಡೋದು. ಅರಣ್ಯ ಪ್ರದೇಶವನ್ನು ಬ್ಲಾಕ್‌ಗಳನ್ನಾಗಿ ವಿಂಗಡಿಸಿ ಸಿಬ್ಬಂದಿ ನಿಯೋಜಿಸಿ ಗಣತಿ ಮಾಡೋದು. ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ಆನೆಗಣತಿ ಮಾಡೋದು ಹೀಗೆ ನಾನಾ ಮಾರ್ಗಗಳಲ್ಲಿ ಆನೆ ಗಣತಿ ನಡೆಸಲಾಗುತ್ತದೆ.

    ಆನೆ ಗಣತಿ ಕಾರ್ಯದಲ್ಲಿ ಈ ಬಾರಿ ಸ್ವಯಂ ಸೇವಕರಿಗೆ ಅವಕಾಶ ಇಲ್ಲವಾಗಿದ್ದು, ಅರಣ್ಯ ಸಿಬ್ಬಂದಿಗೆ ಮಾತ್ರ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆನೆಗಳ ಅಂಕಿ-ಅಂಶಗಳ ಪತ್ತೆ ಜೊತೆಗೆ ಆನೆ ಕಾರಿಡಾರ್‌ಗಳನ್ನು ಪುನರ್ ಸ್ಥಾಪಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹವಾಗಿದೆ.

  • ಬಂಡೀಪುರಕ್ಕೆ ಮೋದಿ ಬಂದು ಹೋದ ನಂತ್ರ ಹೆಚ್ಚಾಯ್ತು ಪ್ರವಾಸಿಗರ ಸಂಖ್ಯೆ, ಹರಿದು ಬಂತು ಆದಾಯ

    ಬಂಡೀಪುರಕ್ಕೆ ಮೋದಿ ಬಂದು ಹೋದ ನಂತ್ರ ಹೆಚ್ಚಾಯ್ತು ಪ್ರವಾಸಿಗರ ಸಂಖ್ಯೆ, ಹರಿದು ಬಂತು ಆದಾಯ

    ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ (Bandipur TigerReserve Forest) ಬಂದು ಹೋದ ಬಳಿಕ ಹೊರರಾಜ್ಯಗಳಿಂದಲೂ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ. ಪ್ರವಾಸಿಗರ (Tourists) ಆಗಮನದಿಂದ ಅರಣ್ಯ ಇಲಾಖೆಗೆ ಆದಾಯವೂ ಹರಿದುಬರುತ್ತಿದೆ.

    ಹೌದು. ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವಾಗಿ ಇತ್ತೀಚೆಗಷ್ಟೇ 50 ವರ್ಷ ಪೂರೈಸಿತು. 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ 9 ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ ನೀಡಿ ಎರಡು ತಾಸುಗಳ ಕಾಲ ಸಫಾರಿ ನಡೆಸಿದ್ದರು. ಇದನ್ನೂ ಓದಿ: ಮಾದಪ್ಪನ ಕ್ಷೇತ್ರದ ಆನೆ ಉಮಾಮಹೇಶ್ವರಿಗೆ 5 ಲಕ್ಷ ರೂ. ಆರೋಗ್ಯ ವಿಮೆ

    ಪ್ರಧಾನಿ ಮೋದಿ ಅವರು ಬಂದು ಹೋದ ದಿನದಿಂದ ಬಂಡೀಪುರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ 2 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಸಫಾರಿಗಾಗಿ ಬರುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಇದರಿಂದ ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಆದಾಯ ಅರಣ್ಯ ಇಲಾಖೆಗೆ ಹರಿದು ಬರುತ್ತಿದೆ. ಬಂಡೀಪುರದಲ್ಲಿ 31 ಸಫಾರಿ (Safari) ಜೀಪ್‌ ಓಡಿಸಲು ಅವಕಾಶವಿದೆ. ಆದ್ರೆ ಇದುವರೆಗೆ ಅರಣ್ಯ ಇಲಾಖೆ 26 ಜೀಪ್​ಗಳನ್ನಷ್ಟೇ ಬಳಸುತ್ತಿತ್ತು. ಇದರೊಂದಿಗೆ 2‌ ಜೀಪ್‌ ಮತ್ತು 2 ಹೆಚ್ಚುವರಿ ಸಫಾರಿ ಬಸ್‌ಗಳನ್ನ ಹೊಸದಾಗಿ ತರಿಸಲಾಗಿದ್ದು, ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಿದೆ. ಇದನ್ನೂ ಓದಿ: ಅನ್ನಭಾಗ್ಯಕ್ಕೆ ಮತ್ತಷ್ಟು ಸಂಕಷ್ಟ- ರಾಜ್ಯಗಳು ಹೇಳಿದ್ದೇನು?

    ಇನ್ನೂ ಮೋದಿ ಭೇಟಿ ಬಳಿಕ ಆದಾಯ ಕೂಡ ಡಬಲ್ ಆಗ್ತಿದೆ. ಪ್ರಧಾನಿ ಮೋದಿ 50 ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗುವ ಜೊತೆಗೆ ದೇಶದ ವಿವಿಧ ರಾಜ್ಯದ ಗಣ್ಯರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನ ಪರಿಚಯಿಸಿದ್ದರು. ಪ್ರಧಾನಿ ಮೋದಿ ಅವರು ಪ್ರವಾಸ ಮಾಡಿದ್ದನ್ನ ಟಿವಿಯಲ್ಲಿ ನೋಡಿದ್ವಿ, ಆದ್ದರಿಂದ ನಾವೂ ಸಫಾರಿ ಹೋಗೋಣ ಅಂತಾ ಬಂದಿದ್ದೇವೆ ಎಂದು ಪುಣೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಬಂದು ಹೋದ ನಂತರ ವಿವಿಧ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.

    ಅಲ್ಲದೇ, ಹುಲಿ ವಾಸಕ್ಕೆ ದೇಶದ 2ನೇ ಅತ್ಯುತ್ತಮ ಅರಣ್ಯ ಪ್ರದೇಶವೆಂಬ ಹೆಮ್ಮೆಯೂ ಬಂಡೀಪುರಕ್ಕೆ ಇದ್ದು, ಈ ಹಿನ್ನೆಲೆಯಲ್ಲೂ ಪ್ರವಾಸಿಗರು‌ ಲಗ್ಗೆಯಿಡುತ್ತಿದ್ದಾರೆ.

  • ಹುಲಿಗಳ ಸಂಖ್ಯೆ ಹೆಚ್ಚಳ – ಚೆಲುವ ಚಾಮರಾಜನಗರ ಈಗ ಹುಲಿಗಳ ನಾಡು

    ಹುಲಿಗಳ ಸಂಖ್ಯೆ ಹೆಚ್ಚಳ – ಚೆಲುವ ಚಾಮರಾಜನಗರ ಈಗ ಹುಲಿಗಳ ನಾಡು

    ಚಾಮರಾಜನಗರ: ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೇ ಕಳೆದ 10 ವರ್ಷದಲ್ಲಿ 100ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಅತಿಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಪ್ರತಿ ವರ್ಷವೂ ಜುಲೈ 29ರ ದಿನವನ್ನು `ವಿಶ್ವಹುಲಿ’ ದಿನವನ್ನಾಗಿ ಆಚರಿಸಲಾಗುತ್ತದೆ. ಹಿಂದೆ ಹುಲಿಗಳ ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಆದರೀಗ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಗಡಿಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೇ ಹೆಸರು ಗಳಿಸಿದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ NIA ಹೆಗಲಿಗೆ

    ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಮಲೈ ಮಹದೇಶ್ವರ ವನ್ಯಜೀವಿಧಾಮವೂ ಕೆಲವೇ ದಿನಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶ ಆಗುವ ನಿರೀಕ್ಷೆಯಿದೆ. ಬಂಡೀಪುರ ಅರಣ್ಯ ಪ್ರದೇಶವು 1973ರಲ್ಲಿ ಮೊದಲಿಗೆ ಹುಲಿ ಸಂರಕ್ಷಿತ ಅರಣ್ಯಪ್ರದೇಶವಾಗಿ ಘೋಷಣೆಯಾಯ್ತು. ಆಗ ಸಂದರ್ಭದಲ್ಲಿ 12 ಹುಲಿಗಳಷ್ಟೇ ಇತ್ತು ಎಂದು ಅಂದಾಜು ಮಾಡಲಾಗಿತ್ತು. ಕ್ರಮೇಣ ಹುಲಿಗಳ ಸಂರಕ್ಷಣೆ ಹೆಚ್ಚಾಯ್ತು.

    ಇದಿಗ ಕಳೆದ ಹುಲಿ ಗಣತಿಯ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಹುಲಿಗಳಿರೋದು ಗೊತ್ತಾಗಿದೆ. ಅದೇ ರೀತಿ ಬಿಳಿಗಿರಿ ರಕ್ಷಿತಾರಣ್ಯದಲ್ಲೂ ಕಳೆದ ಗಣತಿಯಲ್ಲಿ 86 ಹುಲಿಗಳಿರೋದು ಕಂಡು ಬಂದಿದೆ. ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ 15ಕ್ಕೂ ಹೆಚ್ಚು ಹುಲಿಗಳಿದ್ದು, ಇದೀಗ ಅದರ ಸಂಖ್ಯೆ 25 ರಿಂದ 30ಕ್ಕೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ 10 ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೆ, ಗಡಿ ಅರಣ್ಯದಲ್ಲಿ 250ಕ್ಕೂ ಹುಲಿಗಳಿವೆ ಎಂದು ಪ್ರಸ್ತುತ ಗಣತಿಯು ಮಾಹಿತಿ ನೀಡಿದೆ. ಅರಣ್ಯ ಇಲಾಖೆಯ ಸರಂಕ್ಷಣಾ ಕ್ರಮಗಳೂ ಹುಲಿಗಳ ಸಂಖ್ಯೆ ಹೆಚ್ಚಾಗಲೂ ಕಾರಣವಾಗಿದೆ.

    ಈ ಹಿಂದೆ ಹುಲಿಗಳ ಹಾಗೂ ವನ್ಯಜೀವಿ ಕಳ್ಳಭೇಟೆಗಾರರ ಮೇಲೆ ಇಲಾಖೆ ಸಾಕಷ್ಟು ನಿಗಾ ಇಟ್ಟಿತು. ಇದರಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸೋದ್ಯಮ ಚಟುವಟಿಕೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಅದೇ ರೀತಿ ಕಾಡಿನ ಸಂರಕ್ಷಣೆಯಲ್ಲೂ ಹುಲಿಗಳು ಮಹತ್ವದ ಪಾತ್ರ ವಹಿಸಿದೆ. ಇದನ್ನೂ ಓದಿ: ಇಡೀ ಬಿಜೆಪಿ ಪಕ್ಷ ಹಾಳಾಗಿ ಹೋಗುತ್ತೆ, ಅಣ್ಣಪ್ಪನ ಶಾಪ ಇದೆ: ಮಹೇಶ್ ಶೆಟ್ಟಿ ತಿಮರೋಡಿ ಕಿಡಿ

    ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರೂ ಫುಲ್‌ಖುಷ್ ಆಗಿದ್ದಾರೆ. ಹುಲಿಗಳ ದರ್ಶನದಿಂದ ಪುಳಕಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಪೋಷಣೆ ಆಗುತ್ತಿರುವುದರಿಂದ `ಹುಲಿಗಳ ನಾಡು’ ಎಂದೇ ಕರೆಸಿಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಂಡೀಪುರದಲ್ಲಿ‌ ಒಂಟಿ ಸಲಗದ ಮುಂದೆ ಪೋಸ್ ಕೊಟ್ಟು ಮಹಿಳೆಯಿಂದ ದುಸ್ಸಾಹಸ!

    ಬಂಡೀಪುರದಲ್ಲಿ‌ ಒಂಟಿ ಸಲಗದ ಮುಂದೆ ಪೋಸ್ ಕೊಟ್ಟು ಮಹಿಳೆಯಿಂದ ದುಸ್ಸಾಹಸ!

    ಚಾಮರಾಜನಗರ: ಮಹಿಳೆಯೊಬ್ಬರು ಕಾಡಿನಲ್ಲಿರುವ ಒಂಟಿ ಸಲಗದ ಮುಂದೆ ನಿಂತು ಪೋಸ್ ಕೊಡುವ ದುಸ್ಸಾಹ ಮಾಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

    ಆನೆಯ ಮುಂದೆ ನಿಂತಿರುವ ಮಹಿಳೆ, “ಇದು ಬಂಡೀಪುರ. ನಾನು ಕಾಡಾನೆ ಮುಂದೆ ನಿಂತಿದ್ದೇನೆ. ಈ ಕಾಡಾನೆ ಏನೂ ಮಾಡಲ್ಲ” ಎಂದು ಮಹಿಳೆ ಪೋಸ್ ಕೊಟ್ಟಿದ್ದಾರೆ. ಈ ದೃಶ್ಯಾವಳಿಯ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಂಡೀಪುರ ಅರಣ್ಯಾಧಿಕಾರಿಗಳ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯೋಧರಿಗೆ ಇಡೀ ದೇಶವೇ ಋಣಿಯಾಗಿರಬೇಕು: ಲಕ್ಷ್ಮಿ ಹೆಬ್ಬಾಳ್ಕರ್

    ಅರಣ್ಯ ಸಿಬ್ಬಂದಿ ಗಸ್ತು ತಿರುಗದೆ ಏನು ಮಾಡುತ್ತಿದ್ದಾರೆ. ಹೆದ್ದಾರಿಯಲ್ಲಿ ತೆರಳುತ್ತಿದ್ದ ಮಹಿಳೆ ಹೀಗೆ ಆನೆ ಮುಂದೆ ಪೋಸ್ ನೀಡಿದ್ದಾರೆ. ಏನಾದರೂ ಅವಘಡ ಸಂಭವಿಸಿದ್ದರೆ ಹೊಣೆ ಯಾರು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 384ನೇ ರ‍್ಯಾಂಕ್ ಪಡೆದ RLS ವಿದ್ಯಾರ್ಥಿ

    ಕಾಡಾನೆ ಮುಂದೆ ಮಹಿಳೆ ಪೋಸ್ ಕೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.