Tag: bandipura

  • ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಚಾಮರಾಜನಗರ: ಸಫಾರಿ ವಾಹನದ ಮೇಲೆ ಕಾಡಾನೆಯೊಂದು (Wild Elephant) ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಸಫಾರಿಯಲ್ಲಿ ನಡೆದಿದೆ.

    ಸಫಾರಿ (Safari) ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾಡಾನೆಯೊಂದು ಸಫಾರಿ ಜೀಪ್ ಕಂಡ ಕೂಡಲೇ ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಚಾಲಕ ಎಚ್ಚೆತ್ತುಕೊಂಡು ಜೀಪ್ ಅನ್ನು ರಿವರ್ಸ್ ಚಲಾಯಿಸಿ ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದಾಗ ಪಾಕ್‌ ಸ್ಟೇಡಿಯಂನಲ್ಲಿ ಸ್ಫೋಟ – ಓರ್ವ ಸಾವು, ಹಲವರಿಗೆ ಗಾಯ

     ಈ ವೇಳೆ ಕೋಪಗೊಂಡ ಕಾಡಾನೆ ನೆಲಕ್ಕೆ ಕಾಲು ಕೆರೆದು ವಾರ್ನಿಂಗ್ ಕೊಟ್ಟಿದೆ. ಸಫಾರಿ ಜೀಪ್ ಅನ್ನು ಕಾಡಾನೆ ಅಟ್ಟಾಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದ ವ್ಯಕ್ತಿಗೆ 25 ಸಾವಿರ ದಂಡ!

    ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದ ವ್ಯಕ್ತಿಗೆ 25 ಸಾವಿರ ದಂಡ!

    ಚಾಮರಾಜನಗರ: ಬಂಡೀಪುರದಲ್ಲಿ  (Bandipura) ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ದಾಳಿಯಿಂದ ಪಾರಾದವನಿಗೆ ಅರಣ್ಯ ಇಲಾಖೆ (Forest Department) ಶಾಕ್‌ ಕೊಟ್ಟಿದೆ. ದಾಳಿಯಿಂದ ಬಚಾವ್‌ ಆದ ನಂಜನಗೂಡಿನ ವ್ಯಕ್ತಿಗೆ ಇಲಾಖೆ 25,000 ರೂ. ದಂಡ ವಿಧಿಸಿದೆ.

    ಇಲ್ಲಿಯವರೆಗೂ ಕೂಡ ಕೇರಳ (Kerala) ಮೂಲದ ವ್ಯಕ್ತಿ ಎಂದು ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದರು. ಆದರೆ ಫೋಟೋ ತೆಗೆಯಲು ಹೋಗಿದ್ದ ವ್ಯಕ್ತಿ ನಂಜನಗೂಡಿನ (Nanjanagudu) ಬಸವರಾಜು ಎಂದು ಈಗ ಗೊತ್ತಾಗಿದೆ. ಈತ ಘಟನೆ ಬಳಿಕ ಅರಣ್ಯ ಇಲಾಖೆ ಕಣ್ತಪ್ಪಿಸಿ ಕೇರಳಕ್ಕೆ ಹೋಗಿ ಕರ್ನಾಟಕಕ್ಕೆ ಬಂದಿದ್ದ‌. ಘಟನೆ ಬಳಿಕ ಮೊಬೈಲ್ ಸ್ವೀಚ್ ಆಫ್ ಮಾಡಿದ್ದ. ಕೊನೆಗೂ ಬಸವರಾಜುನನ್ನು ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಚಾ.ನಗರ| ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ

    ಸೆಲ್ಫಿ ಬೇಡ – ಜಾಗೃತಿ ಮೂಡಿಸಿದ ಬಸವರಾಜು!
    ಇದೀಗಾ ಬಂಡೀಪುರದ ಅರಣ್ಯ ಇಲಾಖೆ ಅಧಿಕಾರಿಗಳು ಬಸವರಾಜು ಅವರಿಂದ ವಿಡಿಯೋ ಮಾಡಿಸಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಬಸವರಾಜು, ನಾನು ಬಂಕಾಪುರದ ದೇವಾಸ್ಥಾನಕ್ಕೆ ಹೋಗಿದ್ದೆ. ಅಲ್ಲಿಂದ ಬರುವಾಗ ಮೋಜು ಮಸ್ತಿಗಾಗಿ ಸೆಲ್ಫಿ, ಫೋಟೋ ತೆಗೆಯಲು ಮುಂದಾಗಿದ್ದೆ. ಈ ವೇಳೆ ಕಾಡಾನೆ ನನ್ನ ಮೇಲೆ ದಾಳಿ ನಡೆಸಿತು. ಇನ್ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಫೋಟೋ, ಸೆಲ್ಫಿ ತೆಗೆಯುವ ಕೆಲಸ ಬೇಡ ಎಂದು ಜಾಗೃತಿ ಮೂಡಿಸುವ ಮಾತಾಡಿದ್ದಾನೆ. ಇದನ್ನೂ ಓದಿ: ಮೂಡಿಗೆರೆ | ಹೆಚ್ಚಿದ ಕಾಡಾನೆ ಉಪಟಳ – ಓಡಿಸಲು ಅನುಮತಿ ಇಲ್ಲ ಎಂದ ಅಧಿಕಾರಿಗಳು!

  • ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಹೆಚ್ಚಿದ ಆಗ್ರಹ – ರಸ್ತೆ ತಡೆ, ಟೈರ್ ಸುಟ್ಟು ಪ್ರತಿಭಟನೆ

    ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಹೆಚ್ಚಿದ ಆಗ್ರಹ – ರಸ್ತೆ ತಡೆ, ಟೈರ್ ಸುಟ್ಟು ಪ್ರತಿಭಟನೆ

    ಚಾಮರಾಜನಗರ: ಬಂಡೀಪುರದಲ್ಲಿ(Bandipura) ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಡೀಪುರ ಉಳಿಸಿ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ನಡೆದ ನಮ್ಮ ನಡಿಗೆ ಬಂಡೀಪುರದ ಕಡೆಗೆ ಪಾದಯಾತ್ರೆ ಸಾಕ್ಷಿಯಾಯಿತು.

    ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು(TamilNadu, ಕೇರಳ(Kerala) ರಾಜ್ಯಗಳಿಗೆ 2 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಇಲ್ಲಿ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವನ್ನಪ್ಪುತ್ತಿದ್ದ ಹಿನ್ನೆಲೆಯಲ್ಲಿ 2009ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೆಲವು ಮಾಫಿಯಾಗಳಿಗೆ ಇದರಿಂದ ಭಾರೀ ಹೊಡೆತ ಬಿದ್ದಿದೆ. ಕೇರಳ ಸರ್ಕಾರವಂತೂ ಇಲ್ಲಿ ವಾಹನ ಸಂಚಾರ ನಿಷೇಧ ತೆರವುಗೊಳಿಸಲು ರಾಜ್ಯ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಲೇ ಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿ | ಭೀಕರ ರಸ್ತೆ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು

    ಇದೀಗ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ರಾತ್ರಿ ವಾಹನ ಸಂಚಾರ ನಿಷೇಧ ತೆರವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ವಯನಾಡ್‌ನಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಸಹ ರಾತ್ರಿ ಸಂಚಾರ ನಿಷೇಧ ತೆರವು ಮಾಡುವ ಬಗ್ಗೆ ಭರವಸೆ ನೀಡಿದ್ದರು.

    ಇತ್ತೀಚಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಡನೆ ಸಭೆಯನ್ನು ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕೀಯ ಹಿತಾಸಕ್ತಿಗೋಸ್ಕರ ನಿಷೇಧ ತೆರವುಗೊಳಿಸುವ ಆತಂಕ ಎದುರಾಗಿರುವುದರಿಂದ ಬೀದಿಗಿಳಿದು ಬಂಡೀಪುರ ಉಳಿಸಿ ಅಭಿಯಾನ ನಡೆಸುತ್ತಿದ್ದಾರೆ. ಇದನ್ನೂ ಓದಿ: Bhovi Corporation Scam – ಜನರಲ್ ಮ್ಯಾನೇಜರ್ ನಾಗರಾಜಪ್ಪ 14 ದಿನ ಇಡಿ ಕಸ್ಟಡಿಗೆ

    ಇಂದು ನಮ್ಮ ನಡಿಗೆ ಬಂಡೀಪುರದ ಕಡೆಗೆ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಯಿತು. ಗುಂಡ್ಲುಪೇಟೆ ತಾಲೂಕು ಕಗ್ಗಳದ ಹುಂಡಿಯಿಂದ ಮದ್ದೂರು ಚೆಕ್‌ಪೋಸ್ಟ್‌ವರೆಗೆ ನಡೆದ ಪಾದಯಾತ್ರೆಯಲ್ಲಿ ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳು, ರೈತರು, ಐಟಿ-ಬಿಟಿ ನೌಕರರು, ನಿವೃತ್ತ ಅರಣ್ಯಾಧಿಕಾರಿಗಳು ಹೀಗೆ ಎಲ್ಲಾ ವರ್ಗದ ನೂರಾರು ಮಂದಿ ಭಾಗವಹಿಸಿದ್ದರು. ಕೇರಳದ ಪರಿಸರವಾದಿಗಳು ಸಹ ಈ ಅಭಿಯಾನದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

    ಪಾದಯಾತ್ರೆ ಬಳಿಕ ಮದ್ದೂರು ಚೆಕ್‌ಪೋಸ್ಟ್ ಬಳಿ ನಡೆದ ಸಮಾವೇಶದ ಸ್ಥಳಕ್ಕೆ ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಭೇಟಿ ನೀಡಿದ್ದರು. ರಾತ್ರಿ ವಾಹನ ಸಂಚಾರ ನಿಷೇಧ ತೆರವು ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಯಾರು ಸಹ ಆತಂಕಪಡುವ ಅಗತ್ಯ ಇಲ್ಲ ಎಂಬ ಭರವಸೆಯ ಮಾತುಗಳನ್ನಾಡಿದರು.

    ಕೇರಳದವರು ರಾತ್ರಿ ವೇಳೆ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕೇಳಿದ್ದಾರೆ ಅಷ್ಟೇ. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರಿಂದ ಯಾವುದೇ ಒತ್ತಡ ಇಲ್ಲ. ಅವರು ಯಾವುದೇ ಪತ್ರವನ್ನು ಬರೆದಿಲ್ಲ. ಯಥಾಸ್ಥಿತಿ ಮುಂದುವರಿಯಲಿ ಎಂಬುದೇ ನನ್ನ ಅಭಿಪ್ರಾಯ ಎನ್ನುವ ಮೂಲಕ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಕೆಗೆ ಸಹಮತ ವ್ಯಕ್ತಪಡಿಸಿದರು. ಇದನ್ನೂ ಓದಿ: ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ: ಯತ್ನಾಳ್ ನಿಗಿನಿಗಿ ಕೆಂಡ

    ಪರಿಸರವಾದಿಗಳ ಹೋರಾಟ ತೀವ್ರ
    ಸ್ವಯಂಪ್ರೇರಿತರಾಗಿ ನೂರಾರು ಜನರು ಪಾಲ್ಗೊಳ್ಳುವ ಮೂಲಕ ಬಂಡೀಪುರ ಉಳಿಸಿ ಅಭಿಯಾನ ಸಾರ್ವಜನಿಕ ಚಳವಳಿಯಾಗಿ ರೂಪುಗೊಂಡಿದೆ. ರಾತ್ರಿ ವಾಹನ ಸಂಚಾರ ನಿಷೇಧದ ತೆರವೊಗೊಳಿಸುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡುವವರೆಗೂ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲು ಪರಿಸರವಾದಿಗಳು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

    ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಕೂಡ ರಾತ್ರಿ ಸಂಚಾರಕ್ಕೆ ಅವಕಾಶ ಕೊಡದಂತೆ ಮನವಿ ಮಾಡಿದರು. ರಸ್ತೆ ತಡೆದು, ಟೈರ್ ಸುಟ್ಟು ಹಾಕಿ ಪ್ರತಿಭಟನೆ ಮಾಡಿದರು. ಕೇರಳ ಸರ್ಕಾರ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಒಂದು ವೇಳೆ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದರು.

  • ಬಂಡೀಪುರದಲ್ಲಿ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿದ್ದಕ್ಕೆ 25 ಸಾವಿರ ದಂಡ!

    ಬಂಡೀಪುರದಲ್ಲಿ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿದ್ದಕ್ಕೆ 25 ಸಾವಿರ ದಂಡ!

    ಚಾಮರಾಜನಗರ: ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚೆಲ್ಲಾಟ ಆಡಿದ್ದ ವ್ಯಕ್ತಿಗೆ ಅರಣ್ಯ ಇಲಾಖೆಯು 25 ಸಾವಿರ ರೂ. ದಂಡ ವಿಧಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಮುಚ್ಚಳಿಕೆ ಬರೆಸಿಕೊಂಡಿದೆ.

    ಗುಂಡ್ಲುಪೇಟೆಯ ಶಾಹುಲ್ ಹಮೀದ್, ಇತ್ತೀಚಿಗಷ್ಟೇ ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಮುಂದೆ ಫೋಟೋಗಾಗಿ ಹುಚ್ಚಾಟ ಮೆರೆದು, ಕಾಡಾನೆ ಮುಂದೆ ಕಿರುಚಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ

    ವೀಡಿಯೋದಲ್ಲಿ ರಸ್ತೆಗೆ ಬಂದ ಕಾಡಾನೆ ಕಂಡು ಪೋಟೋ ತೆಗೆಸಿಕೊಂಡು ಹಾ, ಹೂ ಎಂದು ಕಿರುಚಾಡಿ ಕೀಟಲೆ ಮಾಡಿದ್ದರು. ಕಾಡಾನೆ ಎದುರು ಹುಚ್ಚಾಟ ಮೆರೆದ ಯುವಕನನ್ನು ಬಂಧಿಸಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದರು.

    ವೀಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆಯು 25 ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಮತ್ತೆ ಇಂತಹ ಘಟನೆ ಪುನರಾವರ್ತನೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಬಿಜೆಪಿ ಸಂಸದರಿಗೆ ಧಮ್ ಇದ್ರೆ ಮೆಟ್ರೋ ದರ ಕಡಿಮೆ ಮಾಡಿಸಲಿ: ಕೇಂದ್ರದ ವಿರುದ್ಧ ಪ್ರಿಯಾಂಕ್ ಕಿಡಿ

     

  • ನಿತ್ರಾಣಗೊಂಡಿದ್ದ ಹುಲಿ ಸಾವು- ಕತ್ತು, ಮೈಮೇಲೆ ಗಾಯ

    ನಿತ್ರಾಣಗೊಂಡಿದ್ದ ಹುಲಿ ಸಾವು- ಕತ್ತು, ಮೈಮೇಲೆ ಗಾಯ

    ಚಾಮರಾಜನಗರ: ವನ್ಯ ಪ್ರಾಣಿಗಳ ಜೊತೆಗೆ ಕಾದಾಟದಲ್ಲಿ ನಿತ್ರಾಣಗೊಂಡಿದ್ದ 3 ವರ್ಷದ ಹುಲಿ (Tiger) ಸಾವನ್ನಪ್ಪಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಮದ್ದೂರು ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರಣ್ಯದ ಡಿ ಲೈನ್ ದೊಡ್ಡ ಕರಿಯಯ್ಯ ಎಂಬವರ ಜಮೀನಿನಲ್ಲಿ ಹುಲಿ ಪತ್ತೆಯಾಗಿತ್ತು.

    ಬಂಡೀಪುರ ಹುಲಿ ಸಂರಕ್ಷಿತಾರಣ್ಯದಿಂದ ಬಂದಿದ್ದ ಹುಲಿ ನಿತ್ರಾಣಗೊಂಡಿದ್ದ ಬಗ್ಗೆ ಬೆಳಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು, ನಡೆಯಲು ಆಗದ ಪರಿಸ್ಥಿತಿಯಲ್ಲಿದ್ದ ಹುಲಿಗೆ ಚಿಕಿತ್ಸೆ ಕೊಡಲೆಂದು ಸೆರೆಗೆ ಮುಂದಾಗಿದ್ದರು. ಆದರೆ ಸಂಜೆ ವೇಳೆ ಹುಲಿ ಸಾವನ್ನಪ್ಪಿದೆ. ಇದನ್ನೂ ಓದಿ: ಮಗುವಿಗೆ ಕುಕ್ಕಿದ ಕೋಳಿ- ಶಾಲೆಗೆ ಬೀಗ ಜಡಿದು ಪ್ರತಿಭಟನೆ

    ವನ್ಯ ಪ್ರಾಣಿ ಜೊತೆಗೆ ಕಾದಾಟದಲ್ಲಿ ಕತ್ತು, ಮೈ ಮೇಲೆ ಗಾಯಗಳಾಗಿದೆ. ಅಧಿಕಾರಿಗಳು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಬಳಿಕ ನಿಖರ ಕಾರಣ ತಿಳಿಯಲಿದೆ. NTCA ನಿಯಮಾನುಸಾರ ಹುಲಿಯ ಅಂತ್ಯಕ್ರಿಯೆ ನಡೆಸಲು ಬಂಡೀಪುರದ ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.

  • ಇಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ ಬಂದ್

    ಇಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿ ಬಂದ್

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹುಲಿಸಂರಕ್ಷಿತಾರಣ್ಯ ಬಂಡೀಪುರದಲ್ಲಿ (Bandipura) ಇಂದು (ಬುಧವಾರ) ಒಂದು ದಿನದ ಮಟ್ಟಿಗೆ ಸಫಾರಿ ಬಂದ್ ಮಾಡಲಾಗಿದೆ.

    ಇಂದು (ಸೆ.20) ಸಫಾರಿ ಪಾಯಿಂಟ್ ಮೇಲುಕಾಮನಹಳ್ಳಿಯಲ್ಲಿ ಬಂಡೀಪುರದ ಅರಣ್ಯ ಮುಂಚೂಣಿ ಸಿಬ್ಬಂದಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಆ ಹಿನ್ನೆಲೆ ಬಂಡೀಪುರದ ಅರಣ್ಯ ಸಿಬ್ಬಂದಿ ಸೇವೆ, ಸಾಧನೆ ಸ್ಮರಿಸಿ ಗೌರವ ಸಲ್ಲಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

    ಈ ವೇಳೆ ಬಂಡೀಪುರದ ಬಹುತೇಕ ಎಲ್ಲಾ ಸಿಬ್ಬಂದಿ ಕೂಡ ಪಾಲ್ಗೊಳ್ಳುತ್ತಾರೆ. ಅರಣ್ಯ ಸಿಬ್ಬಂದಿಗಳಿಗೆ ಮೊದಲ ಬಾರಿಗೆ ಗೌರವ ಕೊಡಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರಿಗೆ ಸಫಾರಿ ಬಂದ್ ಮಾಡಿರುವ ಕುರಿತು ಬಂಡೀಪುರ ಹುಲಿಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ಕೊಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿ ಮೋದಿ ಬಂಡೀಪುರ ವೀಕೆಂಡ್‌ ಸಫಾರಿ – ಇಲ್ಲಿವೆ ನೋಡಿ Photos

    ಪ್ರಧಾನಿ ಮೋದಿ ಬಂಡೀಪುರ ವೀಕೆಂಡ್‌ ಸಫಾರಿ – ಇಲ್ಲಿವೆ ನೋಡಿ Photos

    ಚಾಮರಾಜನಗರ: ಹುಲಿ ಯೋಜನೆಯ (Project Tiger) ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ‌ ಮೋದಿ (PM Narendra Modi) ಅವರು ಬಂಡೀಪುರ ಹುಲಿ‌ ಸಂರಕ್ಷಿತ ಪ್ರದೇಶದಲ್ಲಿ (Bandipur Tiger Reserve) ಸಫಾರಿ ನಡೆಸಿದರು. ಅರಣ್ಯದಲ್ಲಿ ಸಂಚರಿಸಿ ಪ್ರಕೃತಿ ಸೌಂದರ್ಯ ಸವಿದರು. ಈ ವೇಳೆ ಅನೇಕ ಪ್ರಾಣಿ, ಪಕ್ಷಿಗಳು ಕಣ್ತುಂಬಿಕೊಂಡು ಖುಷಿ ಪಟ್ಟರು. ಮೋದಿ ಸಫಾರಿಯ ಫೋಟೋಗಳು ಇಲ್ಲಿವೆ ನೋಡಿ.

    ತೆರೆದ ಜೀಪ್‌ನಲ್ಲಿ (ಬೊಲೆರೊ ಕ್ಯಾಂಪರ್‌) ಮೋದಿ ಸಫಾರಿ.

    ಮೋದಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವನ್ಯಜೀವಿ.

    ಬಂಡೀಪುರದಲ್ಲಿ ಜಿಂಕೆಗಳ ನೋಟ.

    ಮೋದಿ ಸಫಾರಿ ವೇಳೆ ಕಾಣಿಸಿಕೊಂಡ ಕಾಟಿಗಳು.

    ಬೈನಾಕುಲರ್‌ನಲ್ಲಿ ಬಂಡೀಪುರ ಕಾಡು, ಪ್ರಾಣಿ-ಪಕ್ಷಿ ವೀಕ್ಷಿಸಿದ ಪ್ರಧಾನಿ.

  • ದೇಶದಲ್ಲಿ ಇದೆ 3167 ಹುಲಿಗಳು – ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗ: ಮೋದಿ

    ದೇಶದಲ್ಲಿ ಇದೆ 3167 ಹುಲಿಗಳು – ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗ: ಮೋದಿ

    ಮೈಸೂರು: ಭಾರತದಲ್ಲಿ (India) ಈಗ 3,167 ಹುಲಿಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಮೈಸೂರಿನ (Mysuru) ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜನೆಗೊಂಡ ಹುಲಿ ಯೋಜನೆಯ (Tiger Project) ಸುವರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ನರೇಂದ್ರ ಮೋದಿ (Narendra Modi) 2022ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ

    ಈ ವೇಳೆ ಮಾತನಾಡಿದ ಅವರು, ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಪ್ರಾಜೆಕ್ಟ್ ಟೈಗರ್‌ನ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ. ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸಿದೆ ಮತ್ತು ಮತ್ತು ಅದೇ ಸಮಯದಲ್ಲಿ, ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ.75 ರಷ್ಟು ಭಾರತದಲ್ಲಿದೆ ಎಂದು ಹೇಳಿದರು.

    ವಿಶ್ವದ ಭೂ ಪ್ರದೇಶದ ಕೇವಲ ಶೇ.2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತವು ಜಾಗತಿಕ ವೈವಿಧ್ಯತೆಗೆ ಶೇ.8 ರಷ್ಟು ಕೊಡುಗೆ ನೀಡುತ್ತದೆ. ದಶಕಗಳ ಹಿಂದೆಯೇ ಭಾರತದಲ್ಲಿ ಚಿತಾಗಳು ಅಳಿದು ಹೋಗಿದ್ದವು. ನಾವು ಈಗ ಚೀತಾವನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

    ವರದಿಯಲ್ಲಿ ಏನಿದೆ?
    ಭಾರತದಲ್ಲಿ ಒಟ್ಟು ಈಗ 3167 ಹುಲಿಗಳಿವೆ. 2006ರಲ್ಲಿ 1,411 ಇದ್ದರೆ 2018ರಲ್ಲಿ ಈ ಸಂಖ್ಯೆ 2,967ಕ್ಕೆ ಏರಿಕೆಯಾಗಿತ್ತು. 30 ಸಾವಿರಕ್ಕೂ ಹೆಚ್ಚು ಏಷ್ಯಾಟಿಕ್ ಆನೆಗಳಿದ್ದರೆ ಒಂದು ಕೊಂಬಿನ ಘೇಂಡಾಮೃಗ 3000 ಇದೆ. 675 ಸಿಂಹಗಳು ಇದೆ.

    ಯಾವುದು ಎಷ್ಟಿದೆ?
    2014ರಲ್ಲಿ 2,226 ಹುಲಿಗಳಿದ್ದರೆ 2022ರಲ್ಲಿ ಇದು 3,167ಕ್ಕೆ ಏರಿಕೆಯಾಗಿದೆ. 2014ರಲ್ಲಿ 523 ಸಿಂಹಳಿದ್ದರೆ 2020ರಲ್ಲಿ 674ಕ್ಕೆ ಏರಿಕೆಯಾಗಿದೆ. 2014ರಲ್ಲಿ 7,910 ಚಿರತೆಗಳಿದ್ದರೆ 2018ರಲ್ಲಿ 12,852ಕ್ಕೆ ಏರಿಕೆಯಾಗಿದೆ.

  • ಪ್ರಧಾನಿ ಮೋದಿ ಭೇಟಿ – ಏ.8, 9 ರಂದು ಸಾರ್ವಜನಿಕರಿಗೆ ಬಂಡೀಪುರ ಸಫಾರಿ ಬಂದ್

    ಪ್ರಧಾನಿ ಮೋದಿ ಭೇಟಿ – ಏ.8, 9 ರಂದು ಸಾರ್ವಜನಿಕರಿಗೆ ಬಂಡೀಪುರ ಸಫಾರಿ ಬಂದ್

    ಚಾಮರಾಜನಗರ: ಏಪ್ರಿಲ್ 9 ರಂದು ಬಂಡೀಪುರಕ್ಕೆ (Bandipura) ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಭದ್ರತಾ ಕಾರಣಗಳಿಂದ ಏಪ್ರಿಲ್ 8 ಮತ್ತು 9 ರಂದು ಪ್ರವಾಸಿಗರಿಗೆ ಸಫಾರಿ ಬಂದ್ ಮಾಡಲಾಗಿದೆ.

    ಏಪ್ರಿಲ್ 4 ರಿಂದ 9 ರ ವರೆಗೂ ಬಂಡೀಪುರದಲ್ಲಿ ಅರಣ್ಯ ಇಲಾಖೆಗೆ ಸೇರಿದ ಅತಿಥಿಗೃಹ, ಕಾಟೇಜ್‌‌ಗಳ ಬುಕಿಂಗ್ ಸಹ ಬಂದ್ ಮಾಡಲಾಗಿದೆ ಎಂದು ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏಪ್ರಿಲ್‌ 11ರ ವರೆಗೆ ಮಾಡಾಳ್‌ಗೆ ಜೈಲು – ಜೈಲಿನ ಪ್ರಕಾರವೇ ಊಟ

    ದೇಶದಲ್ಲಿ ಹುಲಿ ಯೋಜನೆಗೆ 50 ವರ್ಷ ಹಿನ್ನಲೆ ಮೈಸೂರಿನಲ್ಲಿ 3 ದಿನಗಳ ಮೆಗಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇತ್ತೀಚಿನ ಹುಲಿಗಣತಿ ವರದಿ, ಹುಲಿಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ವರದಿ ಹಾಗೂ ನಾಣ್ಯ ಸ್ಮರಣಿಕೆಯನ್ನು ಅವರು ಮೈಸೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ.

    ಅಂದೇ ಬಂಡೀಪುರಕ್ಕೂ ಭೇಟಿ ನೀಡಲಿರುವ ಮೋದಿ ಸಫಾರಿ ನಡೆಸಲಿದ್ದಾರೆ. ಹೀಗಾಗಿ ಸಫಾರಿ ಮಾರ್ಗಗಳನ್ನು ಅರಣ್ಯ ಇಲಾಖೆ ದುರಸ್ತಿ ಮಾಡಲು ಮುಂದಾಗಿದೆ. ಇದನ್ನೂ ಓದಿ: ಹಾಸನ ಟಿಕೆಟ್‌ಗೆ ಒತ್ತಡ ತರಬೇಡಿ, ನಾವು ಕೊಡುವ ಅಭ್ಯರ್ಥಿ ಪರ ಕೆಲಸ ಮಾಡಿ: ದೇವೇಗೌಡ ಕಿವಿಮಾತು

  • ಬಂಡೀಪುರದಲ್ಲಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಸಾವು

    ಬಂಡೀಪುರದಲ್ಲಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಸಾವು

    ಚಾಮರಾಜನಗರ: ಲಾರಿ (Lorry) ಡಿಕ್ಕಿ ಹೊಡೆದು ಹೆಣ್ಣಾನೆ (Elephant) ಸಾವನ್ನಪ್ಪಿದ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಬಂಡೀಪುರದಲ್ಲಿ (Bandipur) ನಡೆದಿದೆ.

    ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮದ್ದೂರು ವಲಯದ ಬಳಿ ಈ ಘಟನೆ ನಡೆದಿದೆ. ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ನಡೆದಿರುವ ರಾತ್ರಿ ಸಂಚಾರ ನಿಷೇಧವಿದೆ. ಆದರೂ ಲಾರಿಯೊಂದು ರಭಸವಾಗಿ ಚಲಿಸುತ್ತಿತ್ತು. ಈ ವೇಳೆ ರಸ್ತೆಯ ಮಧ್ಯದಲ್ಲಿ‌ ಇದ್ದ ಆನೆಗೆ ಲಾರಿ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಶಾರೀಕ್ ಆರೋಗ್ಯದಲ್ಲಿ ಶೇ.80ರಷ್ಟು ಚೇತರಿಕೆ – ನಡೆದಾಡುವ ಸ್ಥಿತಿಗೆ ಬಂದ ಉಗ್ರ

    ಲಾರಿ ಡಿಕ್ಕಿಯಿಂದ ರಸ್ತೆಯಲ್ಲೇ ಆನೆ ಮೃತಪಟ್ಟಿದೆ‌. ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಲಾರಿ ಹಾಗೂ ಚಾಲಕನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಲಾರಿಯು ಕೇರಳದಿಂದ ಗುಂಡ್ಲುಪೇಟೆ ಆಗಮಿಸುತ್ತಿತ್ತು ಎಂದು‌ ತಿಳಿದುಬಂದಿದೆ. ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ – ಅಪ್ರಾಪ್ತ ಬಾಲಕ ಸೇರಿ ನಾಲ್ವರ ಬಂಧನ

    Live Tv
    [brid partner=56869869 player=32851 video=960834 autoplay=true]